ಜಿ.ಅಬ್ದುಲ್ ಬಷೀರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಿ.ಅಬ್ದುಲ್ ಬಷೀರ್ ಅವರು ಬೆಂಗಳೂರಿನಲ್ಲಿರುವ ಆಚಾರ್ಯ ಪಾಠಶಾಲಾ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರೂ, ಕನ್ನಡದ ಪ್ರಾಧ್ಯಾಪಕರೂ ಆಗಿದ್ದಾರೆ.

ಕಾರ್ಯಕ್ಷೇತ್ರ[ಬದಲಾಯಿಸಿ]

ಬಷೀರ್ ಅವರು ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯರಾಗಿದ್ದರು; ದೂರದರ್ಶನ ಅಯ್ಕೆ ಸಮಿತಿ ಸದಸ್ಯರೂ ಆಗಿದ್ದರು. ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರು.ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಕಟಣೆ, ಪರೀಕ್ಷೆ, ಪರಿಷತ್ಪತ್ರಿಕೆ, ಪಠ್ಯಪುಸ್ತಕ ರಚನೆ ಮತ್ತು ಪರಿಷ್ಕರಣ ಮುಂತಾದ ಸಮಿತಿಗಳ ಗೌರವ ಸದಸ್ಯರಾಗಿದ್ದರು.

ಸಾಹಿತ್ಯ[ಬದಲಾಯಿಸಿ]

ಬಷೀರ್ ಅವರ ಕೃತಿಗಳು ಇಂತಿವೆ:

  • ದರ್ಪಣದೀಪಿಕೆ (ಭಾಗ-೧)
  • ಕರುನಾಡ ಗೀತೆ
  • ವಿವೇಕ
  • ಶರಣ ಸಾಹಿತ್ಯ ಚಿಂತನ
  • ವಾಙ್ಮಯ ವಿಹಾರ
  • ಮೌಲಾನಾ ಅಬುಲ್ ಕಲಾಮ್ ಆಜಾದ್
  • ಹೊಸ ಅಲೆಗಳು (ಸಂ)
  • ವಾಣಿಜ್ಯ ಕನ್ನಡ ಪರಿಚಯ (ಪ್ರೊ.ಎಂ.ಆರ್.ಲಕ್ಷ್ಮೀದೇವಿಯವರೊಡನೆ)
  • ಬಂಧ-ಪ್ರಬಂಧ (ಸಂ; ಪ್ರೊ. ಎಸ್.ಶ್ರೀನಿವಾಸನ್ ಅವರೊಡನೆ)
  • ಭಾಷೆ: ಕೆಲವು ವಿಚಾರಗಳು
  • ಕನ್ನಡ ಪ್ರವೇಷ ಭಾರತಿ ( ಭಾಗ- ೧, ಭಾಗ-೨; ಡಾ| ಸಾ.ಮರುಳಯ್ಯ ಮತ್ತು ಜಿ.ಚೆನ್ನಸ್ವಾಮಿಯವರೊಡನೆ)
  • ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ
  • ಹರಿದಾಸ ಬಡೇಸಾಹೇಬರು
  • ಹರಿದಾಸ ಸಾಹಿತ್ಯ
  • ಸೆರಗು ಕಣ್ಣೊತ್ತಿ ಅಳುತಾಳೆ
  • ವಿಮರ್ಶೆ
  • ಕಡ್ಡಾಯ ಕನ್ನಡ
  • ಶಬ್ದಮಣಿ ದರ್ಪಣ ದೀಪಿಕೆ
  • ಚಿಂತನ
  • ಕನಕ ಸಿರಿ (ಸಂ; ಡಾ| ಎಚ್.ಎಸ್.ಗೋಪಾಲರಾವ್ ಜತೆಗೆ)
  • ಹೊಸಗನ್ನಡ ಕಾವ್ಯ (ಡಾ| ಎಚ್.ಎಸ್.ವೆಂಕಟೇಶಮೂರ್ತಿಯವರೊಡನೆ)
  • ಶಿಕ್ಷಣ ಶಿಲ್ಪಿ ಪ್ರೊ.ಎನ್.ಅನಂತಾಚಾರ್
  • ಭಾಷಣಗಳು ಮತ್ತು ಲೇಖನಗಳು

ಪುರಸ್ಕಾರ[ಬದಲಾಯಿಸಿ]

ಪ್ರೊ.ಜಿ.ಅಬ್ದುಲ್ ಬಷೀರ್ ಕರ್ನಾಟಕ ಸರಕಾರದ ಕಾಲೇಜು ಶಿಕ್ಷಣ ಇಲಾಖೆಯಿಂದ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಶ್ರಯದಲ್ಲಿ ಕನಕಪುರದಲ್ಲಿ ನಡೆದ ಮೂರನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಬಷೀರ್ ಅವರಿಗೆ ಸಾಹಿತ್ಯ ಸೇವೆಗಾಗಿ ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಪ್ರಶಸ್ತಿ ಲಭಿಸಿದೆ.