ಜಾನ್ ಅಬ್ರಾಹಂ(ನಟ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
John Abraham
೨೦೦೯ ರಲ್ಲಿ ಜಾನ್ ಅಬ್ರಾಹಂ
ಜನನ (1972-12-17) ೧೭ ಡಿಸೆಂಬರ್ ೧೯೭೨ (ವಯಸ್ಸು ೫೧)
ಉದ್ಯೋಗನಟ, ನಿರ್ಮಾಪಕ ಮತ್ತು ಮಾಡೆಲ್
ಸಕ್ರಿಯ ವರ್ಷಗಳು೨೦೦೩ -
partnerಬಿಪಾಶ ಬಸು (೨೦೦೨)
ಜಾಲತಾಣhttp://www.johnabraham.com johnabraham.com,

ಜಾನ್ ಅಬ್ರಾಹಂ (ಹಿಂದಿ:जॉन अब्राहम); ೧೯೭೨ರ ಡಿಸೆಂಬರ್ರಂ೧೭ದು ಜನಿಸಿದರು) ಒಬ್ಬ ಭಾರತೀಯ ನಟ ಮತ್ತು ರೂಪದರ್ಶಿ.

ಹಲವಾರು ಜಾಹೀರಾತುಗಳು ಮತ್ತು ಕಂಪನಿಗಳಿಗೆ ಮಾಡೆಲಿಂಗ್ ಮಾಡಿದ ಅಬ್ರಾಹಂ ಜಿಸ್ಮ್‌ (2003)[೧] ಚಿತ್ರದೊಂದಿಗೆ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದರು. ಈ ಚಿತ್ರದಿಂದಾಗಿ ಅವರು ಫಿಲ್ಮ್‌ಫೇರ್ ಅತ್ಯುತ್ತಮ ಪ್ರಥಮ ಪ್ರವೇಶ(ಡಿಬಟ್) ಪ್ರಶಸ್ತಿಗೆ ನಾಮನಿರ್ದೇಶಗೊಂಡರು. ಇದರ ನಂತರ ಆತನ ಮೊದಲು ವಾಣಿಜ್ಯವಾಗಿ ಯಶಸ್ಸು ಗಳಿಸಿದ ಚಿತ್ರವೆಂದರೆ ಧೂಮ್‌ (2004). ಧೂಮ್‌ ಚಿತ್ರದಲ್ಲಿ ನಕಾರಾತ್ಮಕ ಪಾತ್ರಕ್ಕಾಗಿ ಮತ್ತು ನಂತರ ಜಿಂದಾ (2006) ಚಿತ್ರಕ್ಕಾಗಿ ಆತ ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡರು. ಆತ ನಂತರ ಪ್ರಮುಖ ವಿಮರ್ಶಾತ್ಮಕ ಯಶಸ್ಸು ಗಳಿಸಿದ ವಾಟರ್ (2005) ಚಿತ್ರದಲ್ಲಿ ಕಾಣಿಸಿಕೊಂಡರು.[೨] 2007ರಲ್ಲಿ ಆತ ಬಬೂಲ್ (2006) ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ಅಬ್ರಾಹಂ ಮುಂಬಯಿಯಲ್ಲಿ ಮಲಯಾಳಿ ತಂದೆ ಮತ್ತು ಪರ್ಶಿ ತಾಯಿಗೆ ಜನಿಸಿದರು. ಆತನ ತಂದೆ ಕೇರಳಾದ ಅಲ್ವಾಯೆಯ ಒಬ್ಬ ವಾಸ್ತುಶಿಲ್ಪಿ; ತಾಯಿಯ ಹೆಸರು ಫಿರೋಜ ಇರಾನಿ. ಅಬ್ರಾಹಂನ ಪರ್ಶಿ ಹೆಸರು "ಫರಾನ್". ಆದರೆ ಆತನ ತಂದೆ ಸಿರಿಯನ್ ಕ್ರಿಶ್ಚಿಯನ್ (ಸಿರಿಯನ್ ಮಲಬಾರ್ ನಸ್ರಾನ್) ಆದ್ದರಿಂದ ಆತನಿಗೆ "ಜಾನ್" ಎಂಬ ಹೆಸರಿಟ್ಟರು. ಆತನಿಗೆ ಒಬ್ಬ ತಮ್ಮನಿದ್ದಾನೆ, ಹೆಸರು ಅಲನ್.

ಆತ ಮುಂಬಯಿಯ ಮಹಿಮ್‌ನ ಬಾಂಬೆ ಸ್ಕಾಟಿಶ್ ಸ್ಕೂಲ್‌ನಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು ಹಾಗೂ ಮುಂಬಯಿ ಎಜುಕೇಶನಲ್ ಟ್ರಸ್ಟ್‌ನಲ್ಲಿ (MET) MBA ಮುಗಿಸಿದರು.

ವೃತ್ತಿಜೀವನ[ಬದಲಾಯಿಸಿ]

ಮಾಡೆಲಿಂಗ್[ಬದಲಾಯಿಸಿ]

ಅಬ್ರಾಹಂ ಪಂಜಾಬಿ ಗಾಯಕ ಜ್ಯಾಜಿ Bಯ "ಸುರ್ಮಾ" ಹಾಡಿನ ಸಂಗೀತ-ವೀಡಿಯೊದಲ್ಲಿ ಕಾಣಿಸಿಕೊಳ್ಳುವ ಮೂಲಕ ತನ್ನ ಮಾಡೆಲಿಂಗ್ ವೃತ್ತಿಜೀವನವನ್ನು ಆರಂಭಿಸಿದರು. ಆತ ನಂತರ ಮಾಧ್ಯಮ ಸಂಸ್ಥೆ ಟೈಮ್ ಆಂಡ್ ಸ್ಪೇಸ್ ಮೀಡಿಯಾ ಎಂಟರ್ಟೈನ್ಮೆಂಟ್ ಪ್ರೊಮೋಶನ್ಸ್ ಲಿಮಿಟೆಡ್ಅನ್ನು ಸೇರಿಕೊಂಡರು, ಇದು ನಂತರ ಹಣಕಾಸಿನ ಸಮಸ್ಯೆಯಿಂದಾಗಿ ಮುಚ್ಚಲ್ಪಟ್ಟಿತು. ನಂತರ ಆತ ಎಂಟರ್‌ಪ್ರೈಸಸ್-ನೆಕ್ಸಸ್‌ನಲ್ಲಿ ಮಾಧ್ಯಮ-ಯೋಜಕನಾಗಿ ಕೆಲಸ ಮಾಡಿದರು.

1999ರಲ್ಲಿ ಆತ ಗ್ಲ್ಯಾಡ್ರ್ಯಾಗ್ಸ್ ಮ್ಯಾನ್‌ಹಂಟ್ ಸ್ಪರ್ಧೆಯನ್ನು ಗೆದ್ದುಕೊಂಡರು ಹಾಗೂ ಮ್ಯಾನ್‌ಹಂಟ್ ಇಂಟರ್‌ನ್ಯಾಷನಲ್‌ಗಾಗಿ ಫಿಲಿಪೈನ್ಸ್‌ಗೆ ಹೋದರು, ಅಲ್ಲಿ ಎರಡನೇ ಸ್ಥಾನವನ್ನು ಗಳಿಸಿದರು. ಇದಾದ ನಂತರ ಆತ ಸಿಂಗಾಪುರದಲ್ಲಿ ಕ್ಯಾರೀ ಮಾಡೆಲ್ಸ್‌ಗೆ ಸಹಿಹಾಕಿದರು ಮತ್ತು ಅಲ್ಲಿ ಸ್ವಲ್ಪ ಕಾಲ ಮಾಡೆಲಿಂಗ್ ಮಾಡಿದರು; ನಂತರ ಹಾಂಗ್ ಕಾಂಗ್, ಲಂಡನ್ ಮತ್ತು ನ್ಯೂಯಾರ್ಕ್ ಸಿಟಿ ಮೊದಲಾದೆಡೆಗಳಲ್ಲಿ ರೂಪದರ್ಶಿಯಾಗಿ ಕಾರ್ಯನಿರ್ವಹಿಸಿದರು. ಆತ ಅನೇಕ ವಾಣಿಜ್ಯ ಜಾಹೀರಾತುಗಳಲ್ಲಿ ಮತ್ತು ಪಂಕಜ್ ಉದಾಸ್, ಹಂಸ್ ರಾಜ್ ಹಂಸ್ ಮತ್ತು ಬಬುಲ್ ಸುಪ್ರಿಯೊ ಮೊದಲಾದ ಗಾಯಕರ ಸಂಗೀತ-ವೀಡಿಯೊಗಳಲ್ಲೂ ಕಾಣಿಸಿಕೊಂಡಿದ್ದಾರೆ. ನಟನೆಯ ಕೌಶಲಗಳನ್ನು ಸುಧಾರಿಸಲು ಅಬ್ರಾಹಂ ಕಿಶೋರ್ ನಮಿತ್ ಕಪೂರ್‌ರ ನಟನಾ ಪ್ರಯೋಗಶಾಲೆಯನ್ನು ಸೇರಿಕೊಂಡರು ಮತ್ತು ರೂಪದರ್ಶಿಯಾಗಿ ಕಾರ್ಯನಿರ್ವಹಿಸುತ್ತಲೇ ನಟನಾ ಕೋರ್ಸನ್ನು ಪೂರ್ಣಗೊಳಿಸಿದರು.

ನಟನೆ[ಬದಲಾಯಿಸಿ]

ಅಬ್ರಾಹಂ ತನ್ನ ನಟನೆಯನ್ನು ಭಯಾನಕ ಚಿತ್ರ ಜಿಸ್ಮ್‌ ‌ನಿಂದ (2003) ಆರಂಭಿಸಿದರು. ಈ ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯ ಪ್ರಕಾರ ಸುಮಾರು 13,25,00,000ನಷ್ಟು ಗಳಿಸುವುದರೊಂದಿಗೆ "ಸಾಧಾರಣಕ್ಕಿಂತ ಮೇಲಿನ" ಸ್ಥಾನವನ್ನು ಪಡೆಯಿತು.[೩] ಚಿತ್ರೀಕರಣದ ಸಂದರ್ಭದಲ್ಲಿ ಅಬ್ರಾಹಂ ಮತ್ತು ಸಹ-ನಟಿ ಬಿಪಾಶ ಬಸು ಪರಸ್ಪರ ಡೇಟಿಂಗ್ ಮಾಡಲು ಆರಂಭಿಸಿದರು.[ಸೂಕ್ತ ಉಲ್ಲೇಖನ ಬೇಕು]

ಆತನ ನಂತರದ ಚಲನಚಿತ್ರಗಳೆಂದರೆ ಪರಸಾಮಾನ್ಯ ಭಯಾನಕ ಚಿತ್ರ ಸಾಯ (2003), ಪೂಜ ಭಟ್‌ರ ಪ್ರಥಮ ನಿರ್ದೇಶನದ ಚಿತ್ರ ಪಾಪ್ (2004) ಮತ್ತು ಅಹ್ಮದ್ ಖಾನ್‌ನ ಲಕೀರ್– ಫಾರ್ಬಿಡನ್ ಲೈನ್ಸ್ (2004).

ಆತ 2004ರಲ್ಲಿ ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಒಂದು ಸಾಹಸಮಯ ಚಿತ್ರ ಧೂಮ್‌ ‌ನಲ್ಲಿ ಕಬಿರ್ ಎಂಬ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರು. ಆ ಚಿತ್ರವು ಆ ವರ್ಷದ ಅತ್ಯಂತ ಹೆಚ್ಚು ಲಾಭ ಗಳಿಸಿದ ಚಿತ್ರವಾಯಿತು.[೪]

2005ರಲ್ಲಿ ಆತ ಅಪ್ರಾಕೃತ ಭಯಾನಕ ಚಿತ್ರ ಕಾಲ್ ಮತ್ತು ಹಾಸ್ಯ ಚಿತ್ರ ಗರಂ ಮಸಾಲ ದಲ್ಲಿ ನಟಿಸಿದರು, ಇದು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆಯನ್ನು ಪಡೆಯಿತು.[೫] ಅನಂತರ ಆತ ವಿಮರ್ಶಾತ್ಮಕವಾಗಿ ಪ್ರಶಂಸೆಯನ್ನು ಗಳಿಸಿದ ವಾಟರ್ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದರು. ಇದು 1930ರ ಬ್ರಿಟಿಷ್ ಇಂಡಿಯಾದಲ್ಲಿ ಹಿಂದು ವಿಧವೆಯರಿಗೆ ಒದಗಿದ ದುರಂತ ಗತಿಯನ್ನು ಚಿತ್ರಿಸುತ್ತದೆ. ಈ ಚಿತ್ರವನ್ನು ಕೆನಡಾದ ಸ್ವತಂತ್ರ ಚಿತ್ರ-ನಿರ್ಮಾಪಕಿ ದೀಪಾ ಮೆಹ್ತಾ ಬರೆದು ನಿರ್ದೇಶಿಸಿದರು. ಇದು ಅಂತಾರಾಷ್ಟ್ರೀಯವಾಗಿ ಜನಪ್ರಿಯವಾಯಿತು ಮತ್ತು 79ತ್ ಅಕಾಡೆಮಿ ಅವಾರ್ಡ್ಸ್‌ನಲ್ಲಿ 2006ರ ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತು.

2006ರ ಬೇಸಿಗೆಯಲ್ಲಿ ಅಬ್ರಾಹಂ ಸಲ್ಮಾನ್ ಖಾನ್, ಜಾಯೆದ್ ಖಾನ್, ಕರೀನಾ ಕಪೂರ್, ಇಶಾ ಡಿಯೋಲ್, ಶಾಹಿದ್ ಕಪೂರ್ ಮತ್ತು ಮಲ್ಲಿಕಾ ಶೆರಾವತ್ ಮೊದಲಾದ ಬಾಲಿವುಡ್ ನಟರೊಂದಿಗೆ "ರಾಕ್‌ಸ್ಟಾರ್ಸ್ ಕನ್ಸರ್ಟ್"‌ನಲ್ಲಿ ಭಾಗವಹಿಸಿದರು.[೬] ಅದೇ ವರ್ಷದಲ್ಲಿ ಆತ ಜಿಂದಾ , ಟ್ಯಾಕ್ಸಿ ನಂಬರ್ 9211 , ಬಬೂಲ್ ಮತ್ತು ಕಾಬುಲ್ ಎಕ್ಸ್‌ಪ್ರೆಸ್ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದರು.[೭] ಅವುಗಳಲ್ಲಿ ಟ್ಯಾಕ್ಸಿ ನಂಬರ್ 9211 ಮತ್ತು ಕಾಬುಲ್ ಎಕ್ಸ್‌ಪ್ರೆಸ್ ಚಿತ್ರಗಳು ಗಮನಾರ್ಹ ಯಶಸ್ಸು ಕಂಡವು.

ನಿಖಿಲ್ ಅಡ್ವಾಣಿಯ ಬಹು-ನಟರ ಚಿತ್ರ Salaam-e-Ishq: A Tribute to Love ಅಬ್ರಾಹಂನ 2007ರ ಮೊದಲ ಚಿತ್ರವಾಗಿದೆ. ಈ ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಲು ವಿಫಲವಾಯಿತು.[೮] ಆದರೂ ವಿದೇಶಿ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನ ಕಂಡಿತು.[೯] 2007ರ ಆತನ ಕೊನೆಯ ಎರಡು ಚಿತ್ರಗಳೆಂದರೆ - ಒಂದು ಭಯಾನಕ ಚಿತ್ರ ನೊ ಸ್ಮೋಕಿಂಗ್ ಮತ್ತು ಇನ್ನೊಂದು ಕ್ರೀಡಾ ಚಿತ್ರ ಧನ್ ಧನಾ ಧನ್ ಗೋಲ್ .

2008ರಲ್ಲಿ ಅಬ್ರಾಹಂ ದೋಸ್ತಾನ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಪ್ರಿಯಾಂಕ ಚೋಪ್ರ ಒಂದಿಗೆ ನಟಿಸಿದರು, ಇದು ಆ ವರ್ಷದ ಆತನ ಏಕೈಕ ಚಿತ್ರ. ಕರಣ್ ಜೋಹಾರ್ ನಿರ್ದೇಶಿಸಿದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸು ಗಳಿಸಿತು.

2009ರ ಆತನ ಮೊದಲನೇ ಚಿತ್ರ ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಮತ್ತೊಂದು ಬಹುನಿರೀಕ್ಷಿತ ನ್ಯೂಯಾರ್ಕ್ . ಈ ಚಿತ್ರವು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯವಾಗಿ ಬಹು ಜನಪ್ರಿಯವಾಯಿತು. ಇದು ಮೂವರು ಪ್ರಾಣ ಸ್ನೇಹಿತರ ನ್ಯೂಯಾರ್ಕ್ ನಗರದ ಸೆಪ್ಟೆಂಬರ್ 11ರ ದಾಳಿಯ ನಂತರದ ಜೀವನ ಕಥೆಯನ್ನು ಒಳಗೊಂಡಿದೆ.

ಆತ JA ಕ್ಲೋತ್ಸ್ ಬ್ರ್ಯಾಂಡ್‌ನ ಒಂದು ಫ್ಯಾಷನ್ ಸಂಸ್ಥೆಯನ್ನು ಹೊಂದಿದ್ದಾರೆ, ಇದು ಮೂಲಭೂತವಾಗಿ ಆತನ ಅಚ್ಚುಮೆಚ್ಚಿನ ಜೀನ್ಸ್ ಬಟ್ಟೆಯನ್ನು ಒಳಗೊಂಡಿದೆ.[೧೦]

ವೈಯಕ್ತಿಕ ಜೀವನ[ಬದಲಾಯಿಸಿ]

ಫಿಲ್ಮ್‌ಫೇರ್ ನಿಯತಕಾಲಿಕೆಯ (2007) ಬಿಡುಗಡೆಯ ಸಂದರ್ಭದಲ್ಲಿ ಸ್ನೇಹಿತೆ ಬಿಪಾಶ ಬಸು ಒಂದಿಗೆ ಅಬ್ರಾಹಂ.

ಅಬ್ರಾಹಂ 2002ರಿಂದ ನಟಿ ಬಿಪಾಶ ಬಸು ಜತೆಗೆ ಡೇಟಿಂಗ್ ಮಾಡುತ್ತಿದ್ದಾರೆ. ಈ ಜೋಡಿಯನ್ನು ಹೆಚ್ಚಾಗಿ ಭಾರತದಲ್ಲಿನ ಸೂಪರ್ ಜೋಡಿ ಎಂದು ಹೇಳಲಾಗುತ್ತದೆ.[೧೧]

ಸಾಮಾಜಿಕ ಹೋರಾಟ[ಬದಲಾಯಿಸಿ]

ಅಬ್ರಾಹಂ ಸಾಮಾಜಿಕ ಹೋರಾಟ ಮತ್ತು ಪ್ರಚೋದನಾ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾರೆ ಹಾಗೂ ಇಂತಹ ಮಾನವೀಯ ಕೆಲಸಗಳಲ್ಲಿ ಯವಜನರಿಗೂ ಕೈಜೋಡಿಸುವಂತೆ ಹೇಳುತ್ತಾರೆ. ಈ ಕೆಲಸದ ಬಗ್ಗೆ ಕೇಳಿದಾಗ, ಆತ ಹೀಗೆಂದು ಹೇಳಿದರು:

"I work for social causes that I address. I love animals and I work for PETA. I have my own brigade called John's brigade for Habitat for Humanity, Habitat For Humanity is a Jimmy Carter foundation project."

.[೧೨][೧೩]

ಆತ ಮುಂಬಯಿನ ಲೀಲಾವತಿ ಹಾಸ್ಪಿಟಲ್ ಆಂಡ್ ರಿಸರ್ಚ್ ಸೆಂಟರ್‌ ಒಂದಿಗೂ ಸಂಬಂಧ ಹೊಂದಿದ್ದಾರೆ, ಆ ಆಸ್ಪತ್ರೆಗೆ ಆತ ಹತ್ತು ಲಕ್ಷಗಳ ಚೆಕ್ಅನ್ನು ದಾನವಾಗಿ ನೀಡಿದರು.[೧೪]

2009ರ ಜನವರಿಯಲ್ಲಿ ಅಬ್ರಾಹಂ ಮುಂಬಯಿಯ ಮ್ಯಾರಾಥಾನ್‌ನಲ್ಲಿ ಯುನೈಟೆಡ್ ವೇಗೆ ಪ್ರಯೋಜನಕಾರಿಯಾದ ವಾರ್ಷಿಕ ಸಮಾರಂಭದಲ್ಲಿ ಭಾರತೀಯ ಹೆಸರಾಂತ ವ್ಯಕ್ತಿಗಳ ಗುಂಪಿನ ಮುಂದಾಳತ್ವವಹಿಸಿದರು.[೧೫]

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು[ಬದಲಾಯಿಸಿ]

ವರ್ಷ ಕಾರ್ಯಕ್ರಮ ಪ್ರಶಸ್ತಿ ಫಲಿತಾಂಶ
೨೦೧೩ ವಿಕಿ ಡೋನರ್ ನ್ಯಾಷನಲ್ ಫಿಲ್ಮ್ ಅವಾರ್ಡ್ ನ್ಯಾಷನಲ್ ಫಿಲ್ಮ್ ಅವಾರ್ಡ್ ಫಾರ್ ಬೆಸ್ಟ್ ಪಾಪ್ಯುಲರ್ ಫಿಲ್ಮ್ ಪ್ರೊವೈಡಿಂಗ್ ಹೋಲ್ಸಮ್ ಎಂಟರ್ಟೈನ್ಮೆಂಟ್ ಗೆಲುವು
ಮದ್ರಾಸ್ ಕೇಫೆ ಏಷ್ಯಾ ವಿಶನ್ ಅವಾರ್ಡ್ಸ್ ಐಕಾನ್ ಆಫ್ ದಿ ಇಯರ್ ಗೆಲುವು
ವಿಕಿ ಡೋನರ್ ಫಿಲ್ಮ್‌ಫೇರ್ ಅವಾರ್ಡ್ಸ್ ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಫಿಲ್ಮ್ ನಾಮನಿರ್ದೇಶನ
೨೦೦೮ ದೋಸ್ತಾನಾ ಸ್ಟಾರ್ ಸ್ಕ್ರೀನ್ ಅವಾರ್ಡ್ಸ್ ಸ್ಟಾರ್ ಸ್ಕ್ರೀನ್ ಅವಾರ್ಡ್ ಜೋಡಿ ನಂ.1 ಗೆಲುವು
೨೦೦೭ ಬಾಬುಲ್ ಫಿಲ್ಮ್‌ಫೇರ್ ಅವಾರ್ಡ್ಸ್ ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಸಪೋರ್ಟಿಂಗ್ ಆಕ್ಟರ್ ನಾಮನಿರ್ದೇಶನ
ಝಿಂದಾ ಐಫಾ ಅವಾರ್ಡ್ಸ್ ಐಫಾ ಬೆಸ್ಟ್ ವಿಲನ್ ಅವಾರ್ಡ್
ಜೀ ಸಿನಿ ಅವಾರ್ಡ್ಸ್ ಜೀ ಸಿನಿ ಅವಾರ್ಡ್ ಫಾರ್ ಬೆಸ್ಟ್ ಆಕ್ಟರ್ ಇನ್ ನೆಗೆಟಿವ್ ರೋಲ್
ಬಾಬುಲ್ bma ಬಾಲಿವುಡ್ ಚಲನಚಿತ್ರ - ಬೆಸ್ಟ್ ಸಪೋರ್ಟಿಂಗ್ ಆಕ್ಟರ್
೨೦೦೬ ಝಿಂದಾ ಫಿಲ್ಮ್‌ಫೇರ್ ಅವಾರ್ಡ್ಸ್ ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಪರ್ಫಾರ್ಮೆನ್ಸ್ ಇನ್ ನೆಗೆಟಿವ್ ರೋಲ್
ಗರಮ್ ಮಸಾಲಾ ಐಫಾ ಅವಾರ್ಡ್ ಐಫಾ ಬೆಸ್ಟ್ ಸಪೋರ್ಟಿಂಗ್ ಆಕ್ಟರ್ ಅವಾರ್ಡ್
ಝಿಂದಾ ಗ್ಲೋಬಲ್ ಇಂಡಿಯನ್ ಫಿಲ್ಮ್ ಅವಾರ್ಡ್ಸ್ ಜಿಐಎಫ್ಎ ಬೆಸ್ಟ್ ವಿಲನ್
೨೦೦೫ ಧೂಮ್ ಫಿಲ್ಮ್‌ಫೇರ್ ಅವಾರ್ಡ್ಸ್ ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಪರ್ಫಾರ್ಮೆನ್ಸ್ ಇನ್ ನೆಗೆಟಿವ್ ರೋಲ್
ಐಫಾ ಅವಾರ್ಡ್ಸ್ ಐಫಾ ಬೆಸ್ಟ್ ವಿಲನ್ ಅವಾರ್ಡ್ ಗೆಲುವು
ಜೀ ಸಿನಿ ಅವಾರ್ಡ್ಸ್ ಜೀ ಸಿನಿ ಅವಾರ್ಡ್ ಫಾರ್ ಬೆಸ್ಟ್ ಆಕ್ಟರ್ ಇನ್ ನೆಗೆಟಿವ್ ರೋಲ್
ಪಾಪ್ ಸ್ಟಾರ್ ಡಸ್ಟ್ ಅವಾರ್ಡ್ಸ್ ಸ್ಟಾರ್ ಡಸ್ಟ್ ಸೂಪರ್ ಸ್ಟಾರ್ ಆಫ್ ಟುಮಾರೋ– ಮೇಲ್
೨೦೦೪ ಜಿಸ್ಮ್ ಫಿಲ್ಮ್‌ಫೇರ್ ಅವಾರ್ಡ್ಸ್ ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಮೇಲ್ ಡೆಬ್ಯೂಟ್ ನಾಮನಿರ್ದೇಶನ
ಬಾಲಿವುಡ್ ಮೂವಿ ಅವಾರ್ಡ್ಸ್ ಬಾಲಿವುಡ್ ಮೂವಿ ಅವಾರ್ಡ್ – ಬೆಸ್ಟ್ ಮೇಲ್ ಡೆಬ್ಯೂಟ್ ಗೆಲುವು
ಐಫಾ ಐಫಾ ಅವಾರ್ಡ್ ಫಾರ್ ಸ್ಟಾರ್ ಡೆಬ್ಯೂಟ್ ಆಫ್ ದಿ ಇಯರ್ – ಮೇಲ್ ಗೆಲುವು

Other recognitions[ಬದಲಾಯಿಸಿ]

ವರ್ಷ ಪ್ರಶಸ್ತಿ ಫಲಿತಾಂಶ ಟಿಪ್ಪಣಿ
೨೦೦೬ ಬಾಲಿವುಡ್ ನಲ್ಲಿನ ಸಾಧನೆಗಾಗಿ ರಾಜೀವ್ ಗಾಂಧಿ ಪ್ರಶಸ್ತಿ ಗೆಲುವು [೧೬]
೨೦೦೭ ಭಾರತದ ಸಿನಿಮಾ ರಂಗದಲ್ಲಿನ ಕೊಡುಗೆಗಾಗಿ ಜೈಂಟ್ ನ್ಯಾಷನಲ್ ಅವಾರ್ಡ್ [೧೭]
೨೦೦೮ ಸೆಕ್ಸಿಯೆಸ್ಟ್ ಏಷ್ಯನ್ ವಿಮೆನ್ [೧೮]
೨೦೦೯ ಲಯನ್ಸ್ ಕ್ಲಬ್ ಅವಾರ್ಡ್ [೧೯]
೨೦೧೧ ಇಂಡಿಯಾಸ್ ಸೆಕ್ಸಿಯೆಸ್ಟ್ ಬ್ಯಾಚುಲರ್ ಬೈ ಬಿಗ್ ಸಿಬಿಎಸ್ ಪ್ರೈಮ್ [೨೦]
೨೦೧೨ ಮೋಸ್ಟ್ ಸ್ಟೈಲಿಷ್ ಮ್ಯಾನ್– ಜಿಕ್ಯೂ ಅವಾರ್ಡ್ಸ್( ಭಾರತ ) [೨೧]
೨೦೧೩ ಎನ್.ಡಿ.ಟಿ.ವಿ -ಕ್ರಿಯೇಟಿವ್ ಎಂಟರ್ಪ್ರೆನ್ಯೋರ್ ಆಫ್ ದಿ ಇಯರ್ [೨೨]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ ಚಲನಚಿತ್ರ ಪಾತ್ರ ಟಿಪ್ಪಣಿಗಳು
2003 ಜಿಸ್ಮ್‌ ಕಬೀರ್ ಲಾಲ್
ಸಾಯ ಡಾ. ಆಕಾಶ್ (ಅಕ್ಕಿ) ನಾಮಾಂಕಿತ, ಫಿಲ್ಮ್‌ಫೇರ್ ಅತ್ಯುತ್ತಮ ಪ್ರಥಮ ಪ್ರವೇಶ ಪ್ರಶಸ್ತಿ
2004 ಏತ್‌ಬಾರ್ ಆರ್ಯನ್ ತ್ರಿವೇದಿ
ಪಾಪ್ ಶಿವನ್
ಲಕೀರ್ - ಫಾರ್ಬಿಡನ್ ಲೈನ್ಸ್ ಸಾಹಿಲ್
ಧೂಮ್ ಕಬೀರ್ ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ಖಳನಟ ಪ್ರಶಸ್ತಿ
ಮಧೋಶಿ ಅಮನ್‌‌
2005 ಇಲಾನ್ ಅಭಿಮನ್ಯು
ಕರಮ್ ಜಾನ್
ಕಾಲ್‌ ಕ್ರಿಶ್ ತಪರ್
ವಿರುದ್ಧ್ ಅಮರ್ ಪಟ್ವರ್ಧನ್
ವಾಟರ್ ನಾರಾಯಣ್
ಗರಂ ಮಸಾಲ ಶ್ಯಾಮ್ "ಸ್ಯಾಮ್"
ಶಿಕಾರ್ ಅತಿಥಿನಟ
2006 ಜಿಂದಾ ರೋಹಿತ್ ಚೋಪ್ರ ನಾಮಾಂಕಿತ, ಫಿಲ್ಮ್‌ಫೇರ್‌ ಅತ್ಯುತ್ತಮ ಖಳನಟ ಪ್ರಶಸ್ತಿ
ಟ್ಯಾಕ್ಸಿ ನಂಬರ್ 9211 ಜೈ ಮಿತ್ತಲ್
ಕಭೀ ಅಲ್ವಿದ ನಾ ಕೆಹ್ನಾ ಕ್ಷಣಿಕ ಪಾತ್ರ
ಬಬೂಲ್ ರಜತ್ ನಾಮಾಂಕಿತ, ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ
ಕಾಬುಲ್ ಎಕ್ಸ್‌ಪ್ರೆಸ್ ಸುಹೇಲ್ ಖಾನ್
2007 Salaam-e-Ishq: A Tribute To Love ಅಶುತೋಶ್ ರೈನ
ಹ್ಯಾಟ್ರಿಕ್ ಜಾಹೀರಾತಿನ ವೀಡಿಯೊದಲ್ಲಿ ಅತಿಥಿ ಪಾತ್ರ
ನೊ ಸ್ಮೋಕಿಂಗ್ ಕೆ
ಧನ್ ಧನಾ ಧನ್ ಗೋಲ್ ಸನ್ನಿ ಭಾಸಿನ್
2008 ದೋಸ್ತಾನಾ ಕುನಾಲ್
2009 ಲಕ್‌ ಬೈ ಚಾನ್ಸ್‌ ಸ್ವತಃ ಆತನೇ ಅಥಿತಿ ಪಾತ್ರ
ಲಿಟಲ್ ಜಿಜೌ ಅರ್ಜುನ್ ಅತಿಥಿ ಪಾತ್ರ
ನ್ಯೂಯಾರ್ಕ್ ಸಮಿರ್ (ಸ್ಯಾಮ್)
2010 ಆಶಾಯನ್ ರಾಹುಲ್ ಶರ್ಮಾ
ಜೂಟ ಹಿ ಸಹಿ ಸಿದ್
ಹುಕ್ ಯಾ ಕ್ರೂಕ್ ವಿರಾಜ್ ನಿರ್ಮಾಣ-ನಂತರ
2011 ಫಿಲಮ್ ಸಿಟಿ ನಿರ್ಮಾಣ-ನಂತರ
7 ಖೂನ್ ಮಾಫ್ ಜಿಮ್ಮಿ 2011ರ ಫೆಬ್ರವರಿ 18ರಂದು ಬಿಡುಗಡೆಯಾಗಲಿದೆ
ದೇಸಿ ಬಾಯ್ಸ್ ಚಿತ್ರೀಕರಣಗೊಳ್ಳುತ್ತಿದೆ
ಕಾಖ ಕಾಖ (ರಿಮೇಕ್) ಚಿತ್ರೀಕರಣಗೊಳ್ಳುತ್ತಿದೆ
ಅಲಿಬಾಬಾ ಔರ್ 41 ಚೋರ್ ಅಲಿ ಬಾಬ (ಧ್ವನಿ ಚಿತ್ರೀಕರಣ-ಮುಕ್ತಾಯಗೊಂಡಿದೆ) ತಡವಾಗಿದೆ

ಇವನ್ನೂ ಗಮನಿಸಿ[ಬದಲಾಯಿಸಿ]

  • ಭಾರತೀಯ ನಟರ ಪಟ್ಟಿ
  • ಜಾನ್ ಅಬ್ರಾಹಂ ಎಂಟರ್ಟೈನ್ಮೆಂಟ್

ಟಿಪ್ಪಣಿಗಳು[ಬದಲಾಯಿಸಿ]

  1. "John Abraham enters Bollywood with Jism". Times of India. 10 January 2003. Retrieved 3 September 2010.
  2. "Water (2005)". Rotten Tomatoes. Retrieved 3 September 2010.
  3. "Box Office 2003". Archived from the original on 2012-05-25.
  4. "Box Office 2004". Dhoom. Archived from the original on 2012-05-30.
  5. "Box Office". Archived from the original on 2012-06-30. Retrieved 2005-11-12.
  6. "Bollywood rocks Atlantic City". bollyvista.com. Archived from the original on 12 ಮೇ 2006. Retrieved 12 May 2006.
  7. "Box Office". Archived from the original on 2012-05-25. Retrieved 2006-11-05.
  8. "Box Office 2007". Salaam-e-Ishq. Archived from the original on 30 ಜುಲೈ 2012. Retrieved 8 May 2007.
  9. "Box Office". Archived from the original on 2012-05-25. Retrieved 2007-05-05.
  10. "John Abraham Jeans by Wrangler". Archived from the original on 2009-01-05. Retrieved 2008-02-22.
  11. Times News Network (4 April 2007). "It's London in spring time!". ದಿ ಟೈಮ್ಸ್ ಆಫ್‌ ಇಂಡಿಯಾ. Retrieved 2009-09-03. {{cite web}}: Italic or bold markup not allowed in: |publisher= (help)
  12. "Habitat for Humanity". Archived from the original on 2007-07-03. Retrieved 2007-06-29.
  13. "Habitat for Humanity". Archived from the original on 2010-03-26. Retrieved 2007-06-29.
  14. "John Donates Rs 10 Lakh to Pediatric Centre of Nanavati Hospital". Archived from the original on 2007-12-14. Retrieved 2007-12-09.
  15. "John with Soha at Mumbai Marathon". Archived from the original on 2009-06-30. Retrieved 2009-01-19.
  16. "John Abraham awarded Rajiv Gandhi Award". Nowrunning.com. 21 August 2006. Archived from the original on 16 October 2007.
  17. "John Abraham". Hindustan Times. Retrieved 7 November 2007.
  18. "John Abraham voted sexiest Asian man". Apunkachoice.com. 13 December 2008. Archived from the original on 18 December 2008. {{cite web}}: Unknown parameter |deadurl= ignored (help)
  19. "Lions Club Award". Mapsofindia.com. Retrieved 4 January 2015.
  20. "John bags the title of 'India's Sexiest Bachelor'". Glamsham Magazine. Archived from the original on 28 ಸೆಪ್ಟೆಂಬರ್ 2011. Retrieved 16 September 2011.
  21. 2012 GQ India Men of the Year. gqindia.com. 10 December 2013
  22. "11 Bollywood Actors Who Are Also Super Successful Entrepreneurs". MTV India. 2 May 2014. Archived from the original on 10 ಫೆಬ್ರವರಿ 2018. Retrieved 11 February 2018.

ಬಾಹ್ಯ ಕೊಂಡಿಗಳು[ಬದಲಾಯಿಸಿ]