ಜಯನಗರ
ವಿಕಿಪೀಡಿಯ ಇಂದ
ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿರುವ ಜಯನಗರ, ಏಷಿಯಾದಲ್ಲಿನ ಅತಿ ದೊಡ್ಡ ಬಡಾವಣೆಗಳಲ್ಲಿ ಒಂದಾಗಿದೆ. ಜಯನಗರವು ಬಸವನಗುಡಿ, ಜೆ.ಪಿ.ನಗರ, ಬನಶಂಕರಿ ಹಾಗು ಬಿ.ಟಿ.ಎಂ ಲೇಔಟ್ ಗಳಿಂದ ಸುತ್ತುವರಿದಿದೆ.
ಇತಿಹಾಸ [ಬದಲಾಯಿಸಿ]
ಜಯನಗರದ ಹೆಸರು ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ ಹೆಸರಿನಿಂದ ಬಂದಿರುವುದಾಗಿ ಒಂದು ಜನೋಕ್ತಿಯಿದೆ.
ಸಂಸ್ಕೃತಿ [ಬದಲಾಯಿಸಿ]
ಸಾಂಸ್ಕೃತಿಕವಾಗಿ ಜಯನಗರವು ಒಂದು ಪ್ರಮುಖ ಕೇಂದ್ರವಾಗಿದೆ. ಇಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿದ್ದಾರೆ.ಇಲ್ಲಿ ಬಹುಮಹಡಿಯ ಕಾಂಪ್ಲೆಕ್ಸ್ ನಾಲ್ಕನೆಯ ಬ್ಲಾಕ್ ನಲ್ಲಿ ಇರುವುದರಿಂದ ಇದು ಬಹಳ ಜನಪ್ರಿಯ ಸ್ಠಳವಾಗಿದೆ.