ಜಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಯ:ಮಹಾಭಾರತ ಗ್ರಂಥ[ಬದಲಾಯಿಸಿ]

  • ಜಯ ಎ೦ಬುದು ಪ್ರಾಚೀನ ಭಾರತದಲ್ಲಿ ರಚಿತವಾದ ಒಂದು ಗ್ರ೦ಥ, ಮತ್ತು ಇ೦ದಿನ ಮಹಾಭಾರತ ಗ್ರ೦ಥದ ಪೂರ್ವರೂಪ ಎಂದು ಹಲವು ಚರಿತ್ರಜ್ಞರ ಹೇಳಿಕೆ. ಮಹಾಭಾರತದ ಮೊದಲ ಶ್ಲೋಕ ಹೀಗೆ ಸಾಗುತ್ತದೆ:
"ನಾರಾಯಣ೦ ನಮಸ್ಕೃತ್ಯ ನರ೦ ಚೈವ ನರೋತ್ತಮಮ್ |
.........................ತತೋ ಜಯಮುದೀರಯೇತ್ ||"
ದೇವ-ದೇವತೆಯರನ್ನು ನಮಿಸಿ 'ಜಯ'ವನ್ನು ಓದಲು ಪ್ರಾರ೦ಭಿಸಿ ಎ೦ಬ ಅರ್ಥ ಬರುವ ಶ್ಲೋಕ ಇದು. ಇದನ್ನು ಗಮನಿಸಿ ಮಹಾಭಾರತದ ಹಿ೦ದಿನ ಹೆಸರು 'ಜಯ' ಎಂದು ಇದ್ದೀತೆ೦ದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
  • ಇ೦ದಿನ ಮಹಾಭಾರತದಲ್ಲಿ ಒಂದು ಲಕ್ಷಕ್ಕೂ ಮಿಕ್ಕಿ ಶ್ಲೋಕಗಳಿವೆ. ಮಹಾಭಾರತದ ಲೇಖಕರು ವೇದವ್ಯಾಸರು ಎಂದು ಸಾ೦ಪ್ರದಾಯಿಕ ನ೦ಬಿಕೆ. ಆದರೆ ಚರಿತ್ರಜ್ಞರ ಅಭಿಪ್ರಾಯದ೦ತೆ, ಮಹಾಭಾರತಕ್ಕೆ ಒಬ್ಬರೇ ಲೇಖಕರನ್ನು ಆರೋಪಿಸುವುದು ಅಷ್ಟು ಸರಿಯಲ್ಲ. ಬಾಯಿ೦ದ ಬಾಯಿಗೆ ಹರಡುತ್ತಾ, ಶತಮಾನಗಳ ಮೂಲಕ ಮಹಾಭಾರತ ಬೆಳೆಯುತ್ತಾ ಬ೦ದಿದೆ ಎ೦ಬುದು ಆಧುನಿಕ ಅಭಿಪ್ರಾಯ. ಸುಮಾರು ಕ್ರಿ.ಶ. ನಾಲ್ಕನೆ ಶತಮಾನದ ಹೊತ್ತಿಗೆ ಮಹಾಭಾರತ ಇ೦ದಿರುವ ರೂಪಕ್ಕೆ ಬ೦ದಿತ್ತು. ಅಲ್ಲಿನ ವರೆಗೆ ವಿಕಾಸಗೊಳ್ಳುತ್ತ ಬ೦ದ ಗ್ರ೦ಥದ ಅತಿ ಪ್ರಾಚೀನ ರೂಪ "ಜಯ" ಎಂದು ಹೇಳಲಾಗುತ್ತದೆ. ಈ "ಜಯ" ಗ್ರ೦ಥದ ಮೂಲ ಕಥೆ ಇ೦ದಿನ ಮಹಾಭಾರತದ ಕಥೆಯೇ ಆಗಿದ್ದು, ಅದು ಸುಮಾರು ೧೦,೦೦೦ ಶ್ಲೋಕಗಳನ್ನು ಒಳಗೊ೦ಡಿತ್ತು ಎ೦ದೂ ಹೇಳಲಾಗುತ್ತದೆ.

ನೋಡಿ[ಬದಲಾಯಿಸಿ]

ಅಭಿಪ್ರಾಯಗಳು[ಬದಲಾಯಿಸಿ]

  • ಪದ್ಮರಾಜ ದಂಡಾವತಿ:
  • ದೇವದತ್ತ ಪಟ್ಟನಾಯಕರ ‘ಜಯ’ ಕೃತಿಯನ್ನು ನಿನ್ನೆ ಬೆಳಿಗ್ಗೆ ಓದಿ ಮುಗಿಸಿದೆ. ಮಹಾಭಾರತದ ಸಚಿತ್ರ ಮರುಕಥನವಾದ ‘ಜಯ’ ಕೃತಿಯನ್ನು ಕನ್ನಡದ ಪ್ರಸಿದ್ಧ ವಿಮರ್ಶಕ ಗಿರಡ್ಡಿ ಗೋವಿಂದರಾಜರು ಅನುವಾದಿಸಿದ್ದಾರೆ. ಮೂಲಕೃತಿಯ ಹಾಗೆಯೇ ಕನ್ನಡದ ಕೃತಿಯನ್ನೂ ಅದೇ ಮುಖಪುಟದೊಡನೆ, ಅದೇ ಗಾತ್ರದಲ್ಲಿ ಮುದ್ರಿಸಿರುವುದು ವಿಶೇಷ. ಧಾರವಾಡದ ಮನೋಹರ ಗ್ರಂಥಮಾಲೆ ಈ ಕೃತಿಯನ್ನು ಪ್ರಕಟಿಸಿದೆ. ದೇವದತ್ತ ಪಟ್ಟನಾಯಕರ ಕೃತಿ ಎಷ್ಟು ಶ್ರೇಷ್ಠವಾಗಿದೆಯೋ ಗಿರಡ್ಡಿಯವರ ಕನ್ನಡ ಅನುವಾದ ಕೂಡ ಅಷ್ಟೇ ಉತ್ಕೃಷ್ಟವಾಗಿದೆ.
  • 350 ಪುಟಗಳಿಗೆ ಮೀರಿದ ಈ ಪುಸ್ತಕದಲ್ಲಿ 108 ಅಧ್ಯಾಯಗಳು ಇವೆ. ಪ್ರತಿಯೊಂದು ಅಧ್ಯಾಯದ ಜೊತೆಗೆ ಪಟ್ಟನಾಯಕರೇ ರಚಿಸಿದ 250ಕ್ಕೂ ಹೆಚ್ಚು ರೇಖಾ ಚಿತ್ರಗಳು ಜೊತೆಗೆ ಇವೆ. ಪ್ರತಿ ಅಧ್ಯಾಯದ ಕೊನೆಯಲ್ಲಿ ಅದನ್ನು ಅರ್ಥೈಸುವ ಪುಟ್ಟ ಪುಟ್ಟ, ಕೆಲವು ಸಾರಿ ದೀರ್ಘ ಟಿಪ್ಪಣಿಗಳು ಇವೆ. ಪಟ್ಟನಾಯಕರ ಕೃತಿ ಭಿನ್ನವಾಗುವುದು ಅಲ್ಲಿ. ಟಿಪ್ಪಣಿಗಳು ಮಹಾಭಾರತವನ್ನು ಭಿನ್ನ ದೃಷ್ಟಿಕೋನದಿಂದ ನೋಡಿವೆ. ಹೊಸ ಅರ್ಥಗಳನ್ನು ಕಟ್ಟಿ ಕೊಟ್ಟಿವೆ.[೧]

ಉಲ್ಲೇಖ[ಬದಲಾಯಿಸಿ]

  1. "ಪದ್ಮರಾಜ ದಂಡಾವತಿ:ಮತ್ತೆ ಮತ್ತೆ ಓದಬೇಕು ಅನಿಸುವ ಮಹಾಭಾರತ...:12 Mar, 2017". Archived from the original on 2017-03-11. Retrieved 2017-03-12.
"https://kn.wikipedia.org/w/index.php?title=ಜಯ&oldid=1068488" ಇಂದ ಪಡೆಯಲ್ಪಟ್ಟಿದೆ