ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Jamsetji Nasarwanji Tata

ಜಮ್ಶೇಟ್‍ಜಿ ಟಾಟಾ
ಜನನ (1839-03-03)3 ಮಾರ್ಚ್ 1839
ನವಸಾರಿ, ಗುಜರಾತ್
ನಿಧನ 19 ಮೇ 1904 (ತೀರಿದಾಗ ವಯಸ್ಸು ೬೫)
Bad Nauheim, German Empire
ರಾಷ್ಟ್ರೀಯತೆ Indian
ಜನಾಂಗ Gujarati, Parsi
ವೃತ್ತಿ Founder of Tata Group
ಧಾರ್ಮಿಕತೆ Zoroastrianism
ಸಂಗಾತಿ(ಗಳು) Hirabai Daboo
ಪೋಷಕರು Nusserwanji and Jeevanbai Tata


(ಮಾರ್ಚ್, ೩, ೧೮೩೯-ಮೇ, ೧೯, ೧೯೦೪)

'ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ'

ಭಾರತದ ಯಂತ್ರೋದ್ಯಮದ ಪಿತಾಮಹ, ಎಂದು ಹೆಸರುವಾಸಿಯಾಗಿರುವ ಜಮ್ ಶೆಟ್ ಜಿ ಟಾಟಾರವರು,(ಜೆ. ಎನ್. ಟಿ) ಭಾರತದ ಔದ್ಯೋಗಿಕ ಪ್ರಗತಿಗೆ ಭದ್ರವಾದ ಅಡಿಪಾಯ ಹಾಕಿ ಅದನ್ನು ಅತ್ಯಂತ ದಕ್ಷರೀತಿಯಲ್ಲಿ ಬೆಳೆಸುವುದರಲ್ಲಿ ಅಗ್ರೇಸರರೆಂದು ಹೆಸರುವಾಸಿಯಾದವರು. ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವುದು ಅವರಿಗೆ ಅತ್ಯಂತ ಪ್ರಿಯವಾದ ಪ್ರವೃತ್ತಿಗಳಲ್ಲೊಂದು.

ಜನನ ಮತ್ತು ಬಾಲ್ಯ[ಬದಲಾಯಿಸಿ]

ಅವರ ತಂದೆಯವರಾದ ನುಝರ್ ವಾನ್ ಜಿಯವರು, ಪಾರ್ಸಿ ದೇವಾಲಯದ ಅರ್ಚಕರು. ಜೆ.ಎನ್.ಟಿ ಯವರು ಜೀವನ್ ಬಾಯಿ ಹಾಗೂ ನಝುರ್ವಾನ್ ಜಿ ಟಾಟಾ ಅವರ ಮಗನಾಗಿ, ೧೮೩೯ ರಲ್ಲಿ, ಗುಜರಾತ್ ರಾಜ್ಯದ 'ನವಸಾರಿ'ಎಂಬ ಚಿಕ್ಕ ಊರಿನಲ್ಲಿ ಜನ್ಮತಾಳಿದರು. ತಂದೆಯವರು ಪೌರೋಹಿತ್ಯದ ಜೊತೆಗೆ, ಒಂದು ಚಿಕ್ಕ ಉದ್ಯೋಗವನ್ನು ನಡೆಸುತ್ತಿದ್ದರು. ಜಮ್ ಶೆಟ್ ರವರು, ೧೪ ನೆ ವಯಸ್ಸಿನಲ್ಲೇ ಅವರ ತಂದೆಯವರಿಗೆ ಬಿಜಿನೆಸ್ ನಲ್ಲಿ ಸಹಾಯಮಾಡುತ್ತಿದ್ದರು. 'ನುಝರ್ವಾನ್ ಜಿ' ಯವರು ನವಸಾರಿಯಿಂದ ತಮ್ಮ ಉದ್ಯೋಗವನ್ನು ಹೆಚ್ಚಿಸಲು ಬೊಂಬಾಯಿಗೆ ಬಂದರು. ಬೊಂಬಾಯಿಗೆ ಬಂದು ಎಲ್ಫಿನ್ ಸ್ಟನ್ ಕಾಲೇಜ್ ನಲ್ಲಿ ಭರ್ತಿಯಾದರು. ವಿದ್ಯಾರ್ಥಿಯಾಗಿದ್ದಾಗಲೆ ಅವರು 'ಹೀರಾಬಾಯಿ ಡಾಬೂ,' ಎಂಬ ಹುಡುಗಿಯೊಡನೆ ಲಗ್ನವಾದರು. ೧೮೫೮ ರಲ್ಲಿ ಅವರ ಓದು ಮುಗಿದಾಗ, ದೇಶದ ಪರಿಸ್ಥಿತಿ ಬಹಳ ಭಯಾನಕವಾಗಿತ್ತು. ದೇಶದಾದ್ಯಂತ ಸ್ವಾತಂತ್ರ್ಯಸಂಗ್ರಾಮ ಬಿರುಸಿನಿಂದ ಸಾಗಿತ್ತು. ಅನೇಕರು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ದಂಗೆಯೆದ್ದು ಪ್ರತಿಭಟನೆಯನ್ನು ಪ್ರದರ್ಶಿಸುತ್ತಿದ್ದರು. ಬ್ರಿಟಿಷ್ ಸರಕಾರ ಅಂತಹವರನ್ನು ಹಿಡಿದು ಜೈಲಿನಲ್ಲಿ ಹಾಕುತ್ತಿದ್ದರು.

'ಜಮ್‍ಸೆಟ್‍ಜಿ ನುಝರ್ ವಾನ್ ಜಿ ಟಾಟ,' ರವರ ದೂರದೃಷ್ಟಿ, ಹಾಗೂ ಎದೆಗಾರಿಕೆ ಮತ್ತು ಕನಸುಗಳು ಭಾರತೀಯರಿಗೆ ಸದಾ ಪ್ರೇರಕವಾಗಿವೆ[ಬದಲಾಯಿಸಿ]

ಭಾರತೀಯರು, ವ್ಯಾಪಾರ ವಹಿವಾಟುಗಳನ್ನು ನಡೆಸುವುದು ಬ್ರಿಟಿಷರಿಗೆ ಇಷ್ಟವಿರಲಿಲ್ಲ. ಬಿಜಿನೆಸ್ ನಡೆಸಲು ಯಾವ ಅನುಕೂಲತೆಗಳೂ ಇರಲಿಲ್ಲ. ಹೀಗಿರುವಾಗಲೇ ೧೮೬೮ ರಲ್ಲಿ ಯುವ ಜಮ್ ಶೆಟ್ ಜಿ, ತಾವೇ ೨೧,೦೦೦/-ರೂಪಾಯಿಗಳ ಬಂಡವಾಳವನ್ನು ಸಂಗ್ರಹಿಸಿ, ಚಿಕ್ಕದಾಗಿ ಒಂದು ಉದ್ಯೋಗವನ್ನು ಪ್ರಾರಂಭಿಸಿಯೇಬಿಟ್ಟರು. ಬೊಂಬಾಯಿನ ಉಪನಗರ, 'ಚಿಂಚಪೋಕಳಿಯ ಟೆಕ್ಸ್ಟಾಲ್ ಮಿಲ್ ,' ಒಂದನ್ನು ಖರೀದಿಸಿದರು. ಇದು ಅತ್ಯಂತ ನಷ್ಟದಲ್ಲಿ ನಡೆಯುತ್ತಿತ್ತು. ಸೋವಿಯಾಗಿ ಸಿಕ್ಕಿತೆಂದು ಸೆಟ್ ಜಿ ಯವರಿಗೆ ಸಮಾಧಾನವಾಗಿತ್ತು. ದಕ್ಷಕೆಲಸಗಾರರಾದ ಅವರು, ಅದನ್ನು ಚೆನ್ನಾಗಿ ಪ್ರವರ್ಧಮಾನಮಾಡಿ ಲಾಭವನ್ನು ಪಡೆದರು. ಸೆಟ್ ಜಿ ಅದಕ್ಕೆ ಇಟ್ಟ ಹೆಸರು, 'ಅಲೆಕ್ಸಾಂಡ್ರಿಯ ಮಿಲ್', ಎಂದು. ೨ ವರ್ಷಗಳ ನಂತರ ಅದನ್ನು ಮಾರಿದಾಗ ಅವರಿಗೆ ಹೆಚ್ಚು ಲಾಭಸಿಕ್ಕಿತು. ಈಗ, ೧೮೭೪ ರಲ್ಲಿ ಸೆಟ್ ಜಿ ಯವರು, ನಾಗಪುರದಲ್ಲಿ, 'ಸೆಂಟ್ರೆಲ್ ಇಂಡಿಯ ಸ್ಪಿನ್ನಿಂಗ್ ಮಿಲ್ಸ್', ಎಂಬ ಕಾರ್ಖಾನೆಯನ್ನು ತೆರೆದರು. ಆ ವರ್ಷ 'ಬ್ರಿಟಿಷ್ ರಾಣಿ ವಿಕ್ಟೋರಿಯರವರ, ಗೋಲ್ಡನ್ ಜುಬಿಲಿ' ಹಬ್ಬವನ್ನು ವಿಶ್ವದಾದ್ಯಂತ ಅದ್ಧೂರಿಯಾಗಿ ಬ್ರಿಟಿಷ್ ಅಧಿಕಾರವಿರುವೆಡೆಗಳಲ್ಲಿ ಅಚರಿಸಲಾಯಿತು. ಭಾರತದಲ್ಲಿ ಭಾರಿ ಸಮಾರಂಭಗಳು ನಡೆದವು. ಜಮ್ ಶೆಡ್ ಜಿ ಟಾಟಾ ರವರು, ಆ ಮಿಲ್ ಗೆ 'ಎಂಪ್ರೆಸ್ ಮಿಲ್ಸ್', ಎಂದು ಮರುನಾಮಕರಣ ಮಾಡಿದರು. ಅವರ ಜೀವನದಲ್ಲಿ ಒಂದು ಸಂಧಿಕಾಲ. ಮುಂದಿನ ೩೦ ವರ್ಷಗಳು ಅಂದರೆ, ಅವರು ೧೯೦೪ ರಲ್ಲಿ ಮೃತರಾಗುವ ತನಕ, Tata sons Ltd, ಸಾಮ್ರಾಜ್ಯವನ್ನು ಕಟ್ಟುವ ಕೆಲಸವನ್ನು ಭರದಿಂದ ನಿರ್ವಹಿಸಿದರು. ಮುಖ್ಯವಾಗಿ ಅವರೊಬ್ಬ ಕನಸುಗಾರರು. ದುರದೃಷ್ಟವಶಾತ್ ಅವು ನನಸಾಗಲು ಅಡ್ಡಬಂದದ್ದು ಅವರ ವಯಸ್ಸು. ಜಮ್‍ಸೆಟ್‍ಜಿ ಯವರ ಆಸೆಗಳನ್ನು ಸಮರ್ಥವಾಗಿ ಅನುಷ್ಥಾನಕ್ಕೆ ತಂದವರು, ಅವರ ಜೇಷ್ಠ ಸುಪುತ್ರ, 'ದೊರಾಬ್ ಟಾಟ', ಹತ್ತಿರದ ಸಂಬಂಧಿ, 'ರತನ್ ಜಿ ಟಾಟ', ಹಾಗೂ ಟಾಟ ಕಂಪೆನಿಯ ವರಿಷ್ಠ ಅಧಿಕಾರಿಗಳು.

  • 1. Tata Iron and Steel Co;(TISCO) Integrated steel.
  • 2. World Class Learning Institute.
  • 3. Hydro Electric Plant.

ದುರದೃಶ್ಟವಶಾತ್ ಇವ್ಯಾವೂ ಅವರ ಜೀವಿತ ಸಮಯದಲ್ಲಿ ನೆರವೇರಲಿಲ್ಲ. ಆದದ್ದು, TAj mahal hOTel ಮಾತ್ರ. ಅದೂ ಒಂದು ದಾಖಲೆಯನ್ನು ಸ್ಥಾಪಿಸಿತು. TISCO, ಏಶಿಯದ ಮೊದಲ Integrated steel Mill, ಎಂದು ಕರೆಸಿಕೊಂಡಿತು. ಈ ಖಾಸಗಿ ವಲಯದ, Steel Co; ಯು ವಾರ್ಷಿಕ, ೪ ಮಿಲಿಯನ್ ಟನ್ ಉಕ್ಕನ್ನು ಉತ್ಪಾದಿಸುತ್ತಿದೆ.

Indian Institute of Science, Bangalore (IISc)ನಲ್ಲಿ ಸ್ಥಾಪನೆ[ಬದಲಾಯಿಸಿ]

ಬೆಂಗಳೂರಿನಲ್ಲಿ ಸ್ಥಾಪನೆಯಾದ ಈ ಪ್ರತಿಶ್ಠಿತ ವಿದ್ಯಾಸಂಸ್ಥೆ, ೧೯೧೧ ರಲ್ಲಿ ಅಸ್ತಿತ್ವಕ್ಕೆ ಬಂತು. ಇಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ನಮ್ಮದೇಶದ ಹಾಗೂ ವಿಶ್ವದ ಮೇರು ಸಂಸ್ಥೆಗಳಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

TIFR, ಸ್ಥಾಪನೆ[ಬದಲಾಯಿಸಿ]

ಭಾರತದ ವಿಜ್ಞಾನಿಯಾಗಿದ್ದ ಹೋಮಿ ಭಾಭಾರವರಿಗೆ ಬೊಂಬಾಯಿನಲ್ಲಿ ಪ್ರತಿಶ್ಠಿತ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಲು ಆಸೆಯಿತ್ತು. ಅದನ್ನು ಜೆ.ಆರ್.ಡಿ ಯವರ ಮುಂದೆ ತೋಡಿಕೊಂದಾಗ ಅವರು ಒಪ್ಪಿ ೧೯೪೫ ರಲ್ಲಿ ಬೊಂಬಾಯಿನಲ್ಲಿ ಸ್ಥಾಪಿಸಿದರು.

Tata Hydro Electric Co[ಬದಲಾಯಿಸಿ]

ಇದೊಂದು ಭಾರತದ ಅತ್ಯಂತ ದೊಡ್ಡ ಖಾಸಗಿ ಕ್ಶೇತ್ರದ ವಿದ್ಯುತ್ ತಯಾರಿಸುವ ಘಟಕವಾಗಿ ತಲೆಯೆತ್ತಿತು. ಅದರ ಉತ್ಪಾದನಾ ಸಾಮರ್ಥ್ಯ, ೨,೩೦೦ ಮೆ. ವಾ. ಟಾಜ್ ಮಹಲ್ ಹೋಟೆಲ್, ಅರೇಬಿಯನ್ ಸಮುದ್ರದಮೇಲೆ ಬರುವ ಹಡಗುಗಳಿಗೆ ಲೈಟ್ ಹೌಸ್ ನಂತೆ, ಅದು ದಾರಿದೀಪವನ್ನು ತೋರಿಸುತ್ತಿತ್ತು. ಆಗ, ಅದರ ಅಕ್ಕ ಪಕ್ಕಗಳಲ್ಲಿ ಯಾವ ಕಟ್ಟಡಗಳೂ ಬಂದಿರಲಿಲ್ಲ. ಕಟ್ಟಡಕ್ಕೆಲ್ಲಾ ವಿದ್ಯುತ್ ದೀಪಗಳನ್ನು ಹಾಕಿ, ಸಿಂಗಾರಮಾಡಿದ್ದರು. ಆಗ, ಬಾಂಬೆ ನಗರದಲ್ಲಿ ವಿದ್ಯುತ್ ದೀಪಗಳನ್ನು ಹೊಂದಿದ್ದ ಒಂದೇ ಒಂದು ಕಟ್ಟಡವೆಂಬ, ಇನ್ನೊಂದು ದಾಖಲೆ, ಅದರದು. ಈ ಬೃಹತ್ ಕಟ್ಟಡ, ೧೬, ಡಿಸೆಂಬರ್, ೧೯೦೩ ರಲ್ಲಿ ಉದ್ಭಾಟನೆಯಾಯಿತು. ಕಟ್ಟಡಕ್ಕೆ ತಗುಲಿದ ಖರ್ಚು, ೪, ೨೧,೦೦,೦೦೦ ರೂಪಾಯಿಗಳು.

ಭಾರತದ ಮೂಲಭೂತ ಅಗತ್ಯಗಳಿಗೆ ಸ್ಪಂದಿಸಿದರು[ಬದಲಾಯಿಸಿ]

ಹೀಗೆ, ಜಮ್ ಶೆಟ್ ಜಿ ಟಾಟಾ ರವರು ಮಾಡಿದಕೆಲಸಗಳೆಲ್ಲಾ ರಾಷ್ಟ್ರದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿತ್ತು. ಅವರ ಮುಂದಾಳತ್ವ, ದೂರಾಲೋಚಾನೆ, ಪರಿಶ್ರಮ, ತಾವು ಮಾಡುತ್ತಿರುವ ಕಾರ್ಯದ ಸಂಪೂರ್ಣ ಮಾಹಿತಿ, ಸಫಲತೆಯ ಅಂದಾಜು, ಹಾಗೂ ಅದರ ವ್ಯಾಪ್ತಿಗಳೆಲ್ಲವೂ ಖಚಿತವಾಗಿ ತಿಳಿದಿತ್ತು. ಭವಿಷ್ಯದಲ್ಲಿ ಮಂಚೂಣಿಯಲ್ಲಿ ಬರಬಹುದಾದ ಉದ್ಯೋಗಗಳನ್ನು ಈಗಲೇ ಗುರುತಿಸುವ ಒಂದು ವಿಶೇಷಶಕ್ತಿ ಅವರಿಗಿತ್ತು. ಭಾರತದ ಪ್ರಗತಿಗೆ ಬೇಕಾದ ಮೂಲ ಉತ್ಪಾದನಾ-ಸಂಸ್ಥೆಗಳನ್ನು ಟಾಟ ಕಂಪೆನಿ,ಆಯೋಜಿಸಿತ್ತು ಜೆ. ಆರ್. ಡಿ. ಟಾಟ ಹಾಗೂ ಅವರ ವಂಶಸ್ತರು, ಭಾರತದ ಔದ್ಯೋಗಿಕ ಪ್ರಗತಿಯನ್ನು ಸಾಧಿಸುವಲ್ಲಿ ಸಫಲರಾದರು.