ಜನರಲ್ ಪೋಸ್ಟ್ ಆಫೀಸ್, ಮುಂಬೈ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಜನರಲ್ ಪೋಸ್ಟ್ ಆಫೀಸ್ ದೃಷ್ಯ'

ಮುಂಬೈ ನ 'ಜನರಲ್ ಪೋಸ್ಟ್ ಆಫೀಸ್,' ಕಟ್ಟಡ[ಬದಲಾಯಿಸಿ]

'ಜನರಲ್ ಪೋಸ್ಟ್ ಆಫೀಸ್ ಕಟ್ಟಡ', 'ಛತ್ರಪತಿ ಶಿವಾಜಿ ಮಹಾರಾಜ್ ರೈಲ್ವೆ ಟರ್ಮಿನಸ್' (ಹಿಂದೆ, ಇದರ ಹೆಸರು, 'ವಿ. ಟಿ' ಎಂದಿತ್ತು) ನ ಹಿಂಭಾಗದಲ್ಲಿದೆ. ಈದರ ಕಾರ್ಯ ೧೯೦೯ ರಲ್ಲಿ ಮುಗಿಯಿತು. 'ಇಂಡೊ ಸರೆಸೆನಿಕ್'ಶೈಲಿಯಲ್ಲಿ ಮೇಲ್ಭಾಗದ ವರ್ತುಲ, ಕರ್ನಾಟಕದ ಬಿಜಾಪುರದ 'ಗೋಲ್ ಗುಂಬಝ್' ಮಾದರಿಯಲ್ಲಿದೆ.

'ಜಾನ್ ಬೇಗ್,' ರವರು ನಿರ್ಮಿಸಿದ ಸುಂದರ ಭವನಗಳಲ್ಲೊಂದು[ಬದಲಾಯಿಸಿ]

ಬೊಂಬಾಯಿನ ಕೋಟೆ-ವಲಯದಲ್ಲಿ ನಿರ್ಮಿಸಿರುವ ಅಂಚೆ-ಕಚೇರಿ'

ಅಂದಿನ ಸುಪ್ರಸಿದ್ಧ ಬ್ರಿಟಿಷ್ ಕಟ್ಟಡ ನಿರ್ಮಾತ, 'ಜಾನ್ ಬೇಗ್ 'ರವರು ಇದನ್ನು ನಿರ್ಮಿಸಿದರು. ಕಟ್ಟಡದ ಒಳಭಾಗದಲ್ಲಿ ಅಮೃತಶಿಲೆಯನ್ನು ಎಲ್ಲೆಡೆ ವಿಶೇಷವಾಗಿ ಬಳಸಿದ್ದಾರೆ ; ಹಾಗೂ ತಲೆಯೆತ್ತಿ ಹಲವುಬಾರಿ ನೋಡುವಷ್ಟು ಅತಿ ಎತ್ತರದ ಭವ್ಯವಾದ ಸೂರು, ಅನೇಕ ಕುಶಲ ಕೆತ್ತನೆಗಳಿಂದ ಕಂಗೊಳಿಸುತ್ತಿದೆ. ಭವ್ಯವಾದ ಸುರುಳಿಸುತ್ತಿದಂತೆ ರಚಿಸಿದ ಮಹಡಿ ಮೆಟ್ಟಲುಗಳು, ಮತ್ತು ಅದನ್ನು ಚಿತ್ತಾಕರ್ಷಕ ಕಬ್ಬಿಣದ ಕಂಬಿಗಳಲ್ಲಿ ನಿರ್ಮಿಸಿದ್ದು,ಇಂತಹ ಕುಸರಿಕೆಲಸಗಳು ಪ್ರತಿಬ್ರಿಟಿಷ್ ನಿರ್ಮಿತ ಭವನಗಳಲ್ಲೆಲ್ಲಾ ಕಂಡುಬರುತ್ತಿತ್ತು. ಇವೆಲ್ಲಾ ಆಗಿನ 'ಬ್ರಿಟಿಷ್ ಸರ್ಕಾರ' ದ ಹೆಮ್ಮೆಯ ಪ್ರತೀಕಗಳಾಗಿವೆ. ಭಾರತದಂತಹ ವಿಶಾಲ ಸಂಪದ್ಭರಿತ ದೇಶವನ್ನು ಅನಾಯಾಸವಾಗಿ, ಯಾವ ಮಿಲಿಟರಿ-ಬಲ ಪ್ರಯೋಗವಿಲ್ಲದೆ ಹಾಸಲುಮಾಡಿಕೊಂಡ ಪ್ರಸಂಗ, ಅವರ ಆತ್ಮವಿಶ್ವಾಸವನ್ನು ನೂರ್ಮಡಿಸಿದ್ದವು. ಬ್ರಿಟಿಷ್ ಜನರ ಸಂಪತ್ತು, ಪ್ರತಿಷ್ಠೆಗಳು ಕೆಲವೇ ದಶಕಗಳಲ್ಲಿ ಗಾಳಿಯಲ್ಲಿ ಹಾರಿಹೋದಾಗ, ಎಲ್ಲವೂ ಕನಸಿನಂತೆ ತೋರಿದಾಗ, ಅವರ ಮಾನಸಿಕ ಸ್ಥಿತಿಯನ್ನು ಊಹಿಸುವುದು ಕಷ್ಟ. ಭಾರತ, 'ಮಹಾತ್ಮಾಗಾಂಧಿ' ಯವರ, ಸಮರ್ಥ ನೇತೃತ್ವದಲ್ಲಿ ತನ್ನ ಸ್ವತಂತ್ರಕ್ಕಾಗಿ ಹೋರಾಡಿ, ಅದನ್ನು 'ಅಹಿಂಸೆ', ಹಾಗೂ 'ಶಾಂತಿ-ಮಂತ್ರಗಳಬಲ' ದಿಂದ ದಕ್ಕಿಸಿಕೊಂಡಿತು.