ಜಂಕೊ ತಾಬಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಂಕೊ ತಾಬಿ ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ.ಜಪಾನ್‌ನ ಫುಕುಶಿಮಾದಲ್ಲಿ ಜನಿಸಿದ ಜಂಕೊ ತಾಬಿಗೆ ಚಿಕ್ಕವಯಸ್ಸಿನಿಂದಲೇ ಪರ್ವತಾರೋಹಣದಲ್ಲಿ ಆಸಕ್ತಿಯಿತ್ತು.ಶೋವಾ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಬಳಿಕ ಇಂಗ್ಲಿಷ್ ಸಾಹಿತ್ಯವನ್ನು ಅಭ್ಯಸಿಸಿದರು.ಹಾಗೇ ಪರ್ವತಾರೋಹಿಗಳ ಕ್ಲಬ್ ಸೇರಿಕೊಂಡರು.೧೯೬೯ರಲ್ಲಿ "ಜಪಾನ್ ಲೇಡೀಸ್ ಕ್ಲೈಂಬಿಂಗ್ ಕ್ಲಬ್" ಸ್ಥಾಪನೆ ಮಾಡಿದರು.ನಂತರದಲ್ಲಿ ತಮ್ಮ ಪತಿಯೊಂದಿಗೆ ಜಪಾನಿನ ಅನೇಕ ಎತ್ತರದ ಪರ್ವತಗಳನ್ನು ಏರಿದರು.೧೯೭೨ರ ವೇಳೆಗೆ ಜಂಕೊ ಅವರು ಜಪಾನಿನ ಪ್ರಮುಖ ಪರ್ವತಾರೋಹಿಗಳಲ್ಲಿ ಒಬ್ಬರಾಗಿದ್ದರು. ೧೯೭೫ರಲ್ಲಿ ಕೆಲವು ಮಹಿಳೆಯರೊಂದಿಗೆ ಮೌಂಟ್ ಎವರೆಸ್ಟ್ ಏರಲು ಇವರನ್ನು ಕಳುಹಿಸಿಕೊಡಲಾಯಿತು.ಒಂಭತ್ತು ಸ್ಥಳೀಯ ಶೆರ್ಪಾಗಳೊಂದಿಗೆ ತೇನ್‌ಸಿಂಗ್,ಎಡ್ಮಂಡ್ ಹಿಲರಿಯವರು ಸಾಗಿದ ದಾರಿಯಲ್ಲೇ ಕ್ರಮಿಸಿ, ೧೯೭೫ ಮೇ ೧೬ರಂದು ಮೌಂಟ್ ಎವರೆಸ್ಟ್ ಏರಿದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]