ಚೋಮನ ದುಡಿ
ವಿಕಿಪೀಡಿಯ ಇಂದ
ಸ್ವಾತಂತ್ರ್ಯಪೂರ್ವ ಕಾಲದ ದಲಿತ ವರ್ಗದ ಬವಣೆಯ ಬಾಳಿನ ಚಿತ್ರಣ ಈ ಕಾದಂಬರಿಯ ಕಥಾವಸ್ತು. ಬದಲಾಗುತ್ತಿರುವ ದೇಶಕಾಲಗಳಲ್ಲಿ ಬದಲಾಗದೆ ಇರುವದೆಂದರೆ ಕಥಾನಾಯಕ ಚೋಮನ ಕಷ್ಟಜೀವನ.ಈತನ ಪ್ರೀತಿಯ ವಸ್ತು ಎಂದರೆ ದುಡಿ, ಅದೂಂದೆ ಅವನ ಸಂಪತ್ತು. ಸಮಾಜದ ಕಟ್ಟು ಕಟ್ಟಳೆಗಳಿಂದಾಗಿ ಈತ ಜೀವನದಲ್ಲಿ ಬಾರಿ ನೋವನ್ನು ಅನುಭವಿಸುತ್ತಾನೆ ಕೊನೆಗೊಮ್ಮೆ ತನ್ನ ಧರ್ಮವನ್ನು ತೊರೆಯುವ ನಿರ್ಧಾರಕ್ಕೆ ಬರುತ್ತಾನೆ. ಆದರೆ ತನ್ನ ಮನಸ್ಸು ಅದಕ್ಕೆ ಒಪ್ಪುವುದಿಲ್ಲ. ಕಡು ಬಡತನದಲ್ಲಿ ಜೀವನ ಸಾಗಿಸುತಿದ್ದ ಈತ ದಣಿಗಳ ಸಾಲ ತೀರಿಸಲು ತನ್ನ ಮಗನನ್ನು ಮುಂದೆ ಮಗಳನ್ನು ದೂರದ ಊರಿಗೆ ಕಾಫಿ ತೋಟದ ಕೆಲಸಕ್ಕೆ ಕಳುಹಿಸುತ್ತಾನೆ. ಕೊನೆಗೆ ಸಾಲವೂ ತೀರದೆ ಮಕ್ಕಳೂ ಕಾಣದೆ ದುಡಿ ಬಾರಿಸುತ್ತಾ ಮರಣವನ್ನು ಹೊಂದುತ್ತಾನೆ. ಇದನ್ನು ಚಲನಚಿತ್ರವಾಗಿಯು ಕೂಡ ತೆಗೆಯಲಾಗಿದೆ