ಚೀನಾ-ವಿಯೆಟ್ನಾಮ್ ಯುದ್ಧ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮೂರನೇ ಇಂಡೋಚೀನಾ ಯುದ್ಧ ಎಂದೂ ಪರಿಚಿತವಾಗಿರುವ ಚೀನಾ-ವಿಯೆಟ್ನಾಮ್ ಯುದ್ಧವು ೧೯೭೯ರಲ್ಲಿ ಚೀನಿ ಜನರ ಗಣರಾಜ್ಯ ಮತ್ತು ವಿಯೆಟ್ನಾಮ್‌ನ ಸಮಾಜವಾದಿ ಗಣರಾಜ್ಯಗಳ ಮಧ್ಯೆ ನಡೆದ ಒಂದು ಅಲ್ಪಾವಧಿಯ ಆದರೆ ರಕ್ತಸಿಕ್ತವಾದ ಗಡಿ ಯುದ್ಧವಾಗಿತ್ತು. ಚೀನಾ-ಬೆಂಬಲಿತ ಕಮೇರ್ ರೂಝ್‌ನ ಆಳ್ವಿಕೆಯನ್ನು ಕೊನೆಗೊಳಿಸಿದ ವಿಯೆಟ್ನಾಮ್‌ನ ಕಂಬೋಡಿಯಾಮುತ್ತಿಗೆ ಹಾಗೂ ಸ್ವಾಧೀನ ಮತ್ತು ಗಡಿಯ ಹತ್ತಿರದ ಚೀನಾದ ಪ್ರಾಂತಗಳಲ್ಲಿ ವಿಯೆಟ್ನಾಮ್‌ನ ದಾಳಿಗಳಿಗೆ ಪ್ರತ್ಯುತ್ತರವಾಗಿ ಚೀನಾ ಆಕ್ರಮಣವನ್ನು ಪ್ರಾರಂಭಿಸಿತು. ಉತ್ತರ ವಿಯೆಟ್ನಾಮ್‌ನ ಒಳಗೆ ಅಲ್ಪಕಾಲದ ಒಳನುಗ್ಗುವಿಕೆಯ ನಂತರ, ಸುಮಾರು ಒಂದು ತಿಂಗಳ ತರುವಾಯ ಚೀನಾದ ಸೇನೆಗಳು ಹಿಂದಕ್ಕೆ ಸರಿದವು.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು