ಚರ್ಚೆಪುಟ:ರಾಮಾಯಣ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ರಾಮಾಯಣ : ಲೇಖನದಲ್ಲಿ ಮಾಡಬೇಕಾದ ಕೆಲಸಗಳು

ಈ ಪಟ್ಟಿಯನ್ನು ಬದಲಿಸಿ
  • ಲೇಖನದ ವಿವಿಧ ವಿಭಾಗಗಳನ್ನು ಅನುವಾದ ಮಾಡಬೇಕಿದೆ.
  • ಆಂಗ್ಲ ವಿಕಿಪೀಡಿಯದಲ್ಲಿನ Template:Hindu_Culture_and_Epics ಅನ್ನು ಕನ್ನಡದಲ್ಲಿ ರೂಪಿಸಬೇಕಿದೆ.

"ರಾಮಾಯಣ" - ರಾಮನ ಆಯಣ[ಬದಲಾಯಿಸಿ]

ಮೂಲ ಇಂಗ್ಲಿಷ್ ವಿಕಿಪೀಡಿಯಾ ಲೇಖನದಲ್ಲಿ ರಾಮಾಯಣವನ್ನು ರಾಮ+ಆಯಣ ಎಂದರೆ "travels of rama" ಎಂದು ಅರ್ಥೈಸಲಾಗಿದೆ. ಆಯಣ ಎಂದರೆ ಕಥೆ ಎಂದು ನನ್ನ ತಿಳುವಳಿಕೆ. ಹೀಗೆಯೇ ಅನುವಾದಿಸಬಹುದೇ? --Srinidhi ೨೧:೧೬, ೨೩ July ೨೦೦೬ (UTC)


ರಾಮನ ಯಾತ್ರೆ - ರಾಮ ನಡೆದ ಹಾದಿ - ರಾಮ ನಡೆದು ಬಂದ ಹಾದಿಯ ಕಥೆ - ರಾಮನ ಕಥೆ ಎಂದೇ ಅನುವಾದಿಸಿದರೆ ಸರಿ ಎಂದು ನನ್ನ ಅಭಿಪ್ರಾಯ. Sritri ೨೧:೨೬, ೨೩ July ೨೦೦೬ (UTC)
ನೋಡಿ, ಅನುವಾದ ಆಂಗ್ಲ ಭಾಷೆಯ ಲೇಖನಕ್ಕೆ ತುಂಬಾ ನಿಷ್ಠವಾಗಿರಬೇಕೆಂದೇನಿಲ್ಲ. ಅಲ್ಲಿಂದ ಒಂದಷ್ಟು ಮಾಹಿತಿ ಸಂಗ್ರಹಿಸಿದರೆ ಸಾಕು. ಅಲ್ಲಿರುವ ಮಾಹಿತಿ ಎಲ್ಲ ಸರಿ ಇರಲೇಬೇಕೆಂದೇನೂ ಇಲ್ಲ. :-) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೧೯, ೪ ಆಗಸ್ಟ್ ೨೦೦೬ (UTC)
"raamacharite"endumaadabahudallave. kittyajjahalli@oneindia.in


ಧನ್ಯವಾದಗಳು ನಾಡಿಗರೇ. ನಾನು ಈ ವಿಷಯದ ಬಗ್ಗೆಯೇ ಕೇಳಬೇಕೆಂದಿದ್ದೆ. ಅನುವಾದದ ಬಗ್ಗೆ ಇದ್ದ ನನ್ನ ಅನುಮಾನಕ್ಕೆ ಉತ್ತರ ಸಿಕ್ಕಿತು.  :) - ತ್ರಿವೇಣಿ ಚರ್ಚೆ - ಕಾಣಿಕೆಗಳು ೧೬:೪೫, ೪ ಆಗಸ್ಟ್ ೨೦೦೬ (UTC)


ರಾವಣನ ತಪಸ್ಸು ಮತ್ತು ವರ[ಬದಲಾಯಿಸಿ]

ರಾವಣನು ಬ್ರಹ್ಮನನ್ನು ಕುರಿತು ಹತ್ತು ಸಾವಿರ ವರ್ಷಗಳು ತಪಸ್ಸು ಮಾಡಿ, ಒಂದು ವಿಶಿಷ್ಟವಾದ ವರವನ್ನು ಪಡೆದಿರುತ್ತಾನೆ. "ದೇವತೆಗಳಿಂದಲೂ,ಮನುಷ್ಯರಿಂದಲೂ,ಬೇರಾವ ಶಕ್ತಿಗಳಿಂದಲೂ ಸಾಯಬಾರದು" ಎಂಬುದೇ ಆ ವರ.

- ಈ ಸಾಲುಗಳು ಸರಿಯಿವೆಯೇ? "ಹತ್ತು ಸಾವಿರ ವರ್ಷಗಳು" ಮತ್ತು ವರದ ಸಾಲಿನ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದೇನೆ. ತಿಳಿದವರು ಮತ್ತಷ್ಟು ಬೆಳಕು ಚೆಲ್ಲಿ. - ಮನ|Mana Talk - Contribs ೧೮:೪೧, ೮ ಆಗಸ್ಟ್ ೨೦೦೬ (UTC)


ರಾವಣನ ಪರಿಚಯ[ಬದಲಾಯಿಸಿ]

ಈ ಸಾಲುಗಳು ವ್ಯತಿರಿಕ್ತವಾಗಿವೆ.

ಒಂದು ಕಡೆ ಹೀಗಿದೆ: ರಾವಣನು ಲಂಕೆಯಲ್ಲಿದ್ದ ರಾಕ್ಷಸ ರಾಜ.

ಇನ್ನೊಂದು ಕಡೆ ಹೀಗಿದೆ: ಬ್ರಾಹ್ಮಣನ ಮಗನಾಗಿದ್ದ ರಾವಣನನ್ನು ಕೊಂದಿರುವುದರಿಂದ ತನಗೆ(ರಾಮನಿಗೆ) ಬಂದಿರಬಹುದಾದ ಬ್ರಹ್ಮಹತ್ಯೆ ಎಂಬ ಪಾಪವನ್ನು ಕಳೆದುಕೊಳ್ಳಲು ನಿಶ್ಚಯಿಸಿದನು.

ಮೊದಲ ಸಾಲನ್ನು ರಾವಣನು ಲಂಕೆಯ ರಾಜ ಎಂದು ಮಾರ್ಪಾಡಿಸುವ ಪ್ರಸ್ತಾಪವನ್ನಿಡುತ್ತಿದ್ದೇನೆ. ಇದಕ್ಕೆ ನಿಮ್ಮ ವಿರೋಧವಿದ್ದರೆ ತಿಳಿಸಿ. - ಮನ|Mana Talk - Contribs ೧೯:೦೨, ೮ ಆಗಸ್ಟ್ ೨೦೦೬ (UTC)


ರಾವಣನ ತಂದೆ ಬ್ರಾಹ್ಮಣ, ತಾಯಿ ರಾಕ್ಷಸಿ. (ಕೆಲವು ಕಡೆ ಕ್ಷತ್ರಿಯಳು ಎಂದಿದೆ), ಹಾಗಾಗಿ ಆ ಸಾಲುಗಳು ವ್ಯತಿರಿಕ್ತವಾಗಿಯೇನೂ ಇಲ್ಲ.

ಈಗಿನ ಲೇಖನದ ಯಾವುದೇ ಭಾಗ ಸರಿ ಇಲ್ಲವೆನ್ನಿಸಿ, ನಿಮಗೆ ಸರಿಯಾದ ಮಾಹಿತಿ ತಿಳಿದಿದ್ದಲ್ಲಿ ಅದನ್ನು ಬದಲಿಸುವುದಲ್ಲಿ ಯಾರ ಅಭ್ಯಂತರವೂ ಇರಲಾರದು ತ್ರಿವೇಣಿ ಚರ್ಚೆ - ಕಾಣಿಕೆಗಳು ೨೧:೩೭, ೮ ಆಗಸ್ಟ್ ೨೦೦೬ (UTC)

ಲಂಕಾಧಿಪತಿ ಎಂದು ಮಾಡಿಬಿಡಿ ;) ಅಲ್ಲಿಗೆ ಸರಿಹೋಗತ್ತೆ.
ಲೇಖನ ಸಂಪೂರ್ಣವಾಗಿ ಭಾಷಾಂತರವಾದಂತಿದೆ. ವಾರದ ಸಹಯೋಗದಲ್ಲಿ ಹೊಸತೊಂದು ಲೇಖನಕ್ಕೆ ಈಗ ಜಾಗ ಮಾಡಿಕೊಡಬಹುದಲ್ಲವೆ? -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೪೦, ೧೧ ಆಗಸ್ಟ್ ೨೦೦೬ (UTC)

ತಿದ್ದುಪಡಿ[ಬದಲಾಯಿಸಿ]

  • ರಾಮಾಯಣ - ಸರಿ ಪಡಿಸಿ
  • ೧. ದಶರಥ - ದಶರಥ ಅಯೋಧ್ಯೆಯ ರಾಜ. ಶ್ರೀರಾಮನ ತಂದೆ. ದಶರಥನಿಗೆ ಕೌಸಲ್ಯೆ, ಸುಮಿತ್ರೆ, ಕೈಕೇಯಿ ಎಂಬ ಮೂರು ಜನ ಪತ್ನಿಯರು. ರಾಮನು ಕೌಸಲ್ಯೆಯ ಮಗ. ಲಕ್ಷ್ನಣನು ಸುಮಿತ್ರೆಯ ಮಗ. ಭರತ ಮತ್ತು ಶತ್ರುಘ್ನರು ಕಿರಿಯ ರಾಣಿಯಾದ ಕೈಕೇಯಿಯ ಮಕ್ಕಳು.

ತಿದ್ದುಪಡಿ ಮಾಡಿ :-ಲಕ್ಷ್ನಣ ಶತ್ರುಘ್ನರು ಸುಮಿತ್ರೆಯ ಮಕ್ಕಳು.ಭರತ ಕಿರಿಯ ರಾಣಿಯಾದ ಕೈಕೇಯಿಯ ಮಗ

  • ೨. ಸೀತೆ ಆ ಜಿಂಕೆಯನ್ನು ನೋಡಿ ಆಸೆ ಪಡುತ್ತಾಳೆ. ಲಕ್ಷ್ಮಣ ಅದನ್ನು ಹಿಡಿದು ತರಲೆಂದು ಹೋದಾಗ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಾನೆ.(ಇದನ್ನು ಸರಿಪಡಿಸಿದೆ)ಸದಸ್ಯ:Bschandrasgr/ಪರಿಚಯ

ತಿದ್ದುಪಡಿ :-ಅದನ್ನು ಹಿಡಿದು ತರಲೆಂದು ಹೋದ ರಾಮನ ಸಹಾಯಕ್ಕೆ ಸೀತೆಯ ಆಜ್ಞೆಯಂತೆ ಹೋದಾಗ

  • ೩.೩.ಶೂರ್ಪನಖಿ ಎಂಬ ರಾಕ್ಷಸಿ ಚಿತ್ರಕೂಟದಲ್ಲಿ ರಾಮನನ್ನು ಕಂಡು
  • ತಿದ್ದುಪಡಿ : ಪಂಚವಟಿ
  • ೪. ರಾಮನ ಪ್ರತಿಯೊಂದು ಬಾಣವೂ ರಾವಣನ ಒಂದು ತಲೆ ಕತ್ತರಿಸಿದರೂ ಅದು ಮತ್ತೆ ಬೆಳೆಯುತ್ತಿತ್ತು. ಏನು ಮಾಡಬೇಕೆಂದು ತೋಚದೆ ಇದ್ದ ರಾಮನಿಗೆ ರಾವಣನ ದೇಹದತ್ತ ಗುರಿಯಿಡುವಂತೆ ವಿಭೀಷಣ ತಿಳಿಸಿಕೊಟ್ಟ..
  • ೧.ಹೃದಯಕ್ಕೆ
  • ೨ ಸಾರಥಿ ಯಾದ ಮಾತಲಿ

೫.ಲವ,ಕುಶರು ಇಬ್ಬರು ಬೆಳೆದು ಇಪ್ಪತ್ತು ವರ್ಷದ ಯುವಕರಾಗಿದ್ದರು.

  • ಎಂಟು ವರ್ಷ ಎಂದು ಓದಿದ ನೆನಪು.
  • Bschandrasgr ೦೯:೩೮, ೨೨ ಅಕ್ಟೋಬರ್ ೨೦೧೩ (UTC)