ಚರ್ಚೆಪುಟ:ಬಸವೇಶ್ವರ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚರ್ಚೆ[ಬದಲಾಯಿಸಿ]

basavanna's mother and father name ? .where he lived and when was he born . finally his history ? His life history is written after 100or 200 years later with many assumptions by Harihar. there is no clear history . But his father and mother is said to be Shaiva Brahmins. Bschandrasgr ೧೧:೫೯, ೧೭ ಜನವರಿ ೨೦೧೪ (UTC)

Basava, (flourished 12th century, South India), Hindu religious reformer, teacher, theologian, and administrator of the royal treasury of the Kalachuri-dynasty king Bijjala I (reigned 1156–67). Basava is the subject of the Basava-purana, one of the sacred texts of the Hindu Lingayat sect.
According to South Indian oral tradition, he was the actual founder of the Lingayats, but study of Kalachuri inscriptions indicates that, rather than founding a new sect, he in fact revived an existing one. His life and doctrines were recorded in the Basava-purana, written by Bhima Kavi (14th century) in the Kannada language and based on an earlier Telugu version by Palkuriki Somanatha. (ಎನ್ ಸೈಕ್ಲೊಪೀಡಿಯಾ ಬ್ರಿಟಾನಿಕಾ ೧೧-೮-೨೦೧೩ರಲ್ಲಿ ಪುನರವಿಮರ್ಶಿತ -Bschandrasgr ೧೯:೦೮, ೨೯ ಜನವರಿ ೨೦೧೪ (UTC)

ವಿವಾದ[ಬದಲಾಯಿಸಿ]

ವೀರಶೈವ ಧರ್ಮ ಅಥವಾ ಲಿಂಗಾಯತ ಧರ್ಮವೆಂದೂ ಇದನ್ನು ಕರೆವರು (ಧರ್ಮ). ಇದೊಂದು ಜಾತಿಯಲ್ಲ. ಇದರ ಸಂಸ್ಥಾಪಕರು ಬಸವಣ್ಣನವರು. ಅವರ ಕಾಲದ ಮೊದಲು ಈ ಧರ್ಮ ಇರಲಿಲ್ಲವೆಂದರ್ಥವಲ್ಲ, ಆದರೆ ಈ ಧರ್ಮಕ್ಕೆ ವಿಶಾಲವಾದ ದೃಷ್ಟಿಯನ್ನು ಕೊಟ್ಟ ಇವರು ವಿಶ್ವಗುರು ಎಂದು ಕರೆಸಿಕೊಂಡರು. ಈಗ ಕೆಲವು ವರ್ಷಗಳ ಹಿಂದೆ ವೀರ­ಶೈವ / ಲಿಂಗಾಯತ ಮಹಾ­ಸಭೆ­ಯವರು ತಾವು ಹಿಂದೂ ಧರ್ಮದ ಭಾಗವಲ್ಲ, ತಮ್ಮದು ಒಂದು ಸ್ವತಂತ್ರ ಧರ್ಮ­ವಾಗಿ­ರುವುದರಿಂದ ತಮಗೆ ಪ್ರತ್ಯೇಕ ಧರ್ಮದ ಸ್ಥಾನ ನೀಡ­ಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ನೀಡಿದ್ಧರು . ಆದರೆ ಅದನ್ನು ಕೇಂದ್ರ ಸರ್ಕಾರ ಈ ಮನವಿಯನ್ನು ನಿರಾಕರಿಸಿದೆ. ಮಹಾ­­ಸಭೆಯ ವಿಚಾರವನ್ನು ಅನು­ಮೋದಿಸದ (ಒಪ್ಪದ) ಪ್ರೊ.ಚಿದಾನಂದ ಮೂರ್ತಿ­ಯವರಂಥ ಹಿರಿ­ಯರೂ ಕೆಲವು ಗೌರವಾನ್ವಿತ ಸಂಪ್ರದಾಯ ಪರಾ­ಯಣ ಮಠಾಧಿಪತಿಗಳೂ ವೀರಶೈವ ಧರ್ಮದ ಪ್ರತ್ಯೇಕ ಅಸ್ತಿತ್ವ­ವನ್ನೊಪ್ಪದೆ ಅದು ಹಿಂದೂ ಧರ್ಮದ ಒಂದು ಭಾಗವೆಂದು ಘಂಟಾ­ಘೋಷವಾಗಿ ಸಾರಿದ್ದಾರೆ. (ಆಧಾರ : ಪ್ರಜಾವಾಣಿ ೧೭-೧-೨೦೧೪ ಪ್ರತಿಸ್ಪಂದನ , ಎಚ್.ಎನ.ಶಿವಕುಮಾರ್ ಪ್ರಜಾವಾಣಿ ಸಹ ಸಂಪಾದಕ.)Bschandrasgr ೧೧:೫೯, ೧೭ ಜನವರಿ ೨೦೧೪ (UTC)ಸದಸ್ಯ:Bschandrasgr/ಪರಿಚಯ-ಬಿ.ಎಸ್ ಚಂದ್ರಶೇಖರ -ಸಾಗರ

ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂ.ಆರ್.ದುಬಲಗುಂಡೆ (ಚರ್ಚೆ) ೦೯:೧೧, ೪ ಡಿಸೆಂಬರ್ ೨೦೧೯ (UTC)

ಬಸವಣ್ಣ ಗುರುವಲ್ಲ, ಅನುಯಾಯಿ > ಕೇದಾರ ಪೀಠದ ಭೀಮಾಶಂಕರ ಶಿವಾಚಾರ್ಯ ಸ್ವಾಮೀಜಿ[ಬದಲಾಯಿಸಿ]

‘ವಚನಗಳು ವೀರಶೈವರ ಮೂಲ ಗ್ರಂಥ ‘ಸಿದ್ಧಾಂತ ಶಿಖಾಮಣಿ’ಯ ನಕಲು. ಬಸವಣ್ಣ ಧರ್ಮ­ಗುರುವಲ್ಲ, ಅನುಯಾಯಿ. ಲಿಂಗಾಯತರು ವೀರಶೈವ ಧರ್ಮದ ಒಂದು ಭಾಗ’ ಎಂದು ಕೇದಾರ ಪೀಠದ ಭೀಮಾಶಂಕರ ಶಿವಾಚಾರ್ಯ ಸ್ವಾಮೀಜಿ ಭಾನುವಾರ ಇಲ್ಲಿ ಪ್ರತಿಪಾದಿಸಿದರು.
‘ವೀರಶೈವ ಧರ್ಮವು ಸುಮಾರು ಐದು ಸಾವಿರ ವರ್ಷಗಳಿಂದಲೂ ಆಚರಣೆಯಲ್ಲಿದೆ. ಇದರಲ್ಲಿ ಹಲವು ಉಪ ಪಂಗಡಗಳು ಇವೆ. ಅದರಲ್ಲಿ ಲಿಂಗಾಯತವೂ ಒಂದು ಉಪಪಂಗಡ. ಬಸವಣ್ಣ ಬ್ರಾಹ್ಮಣರಾಗಿ ಹುಟ್ಟಿ ವೀರಶೈವ ದೀಕ್ಷೆ ಪಡೆದು ಧರ್ಮ ಪ್ರಸಾರ ಮಾಡಿದ್ದಾರೆ. ಮೂಲತಃ ಸಿದ್ಧಾಂತ ಶಿಖಾಮಣಿಯಲ್ಲಿರುವುದನ್ನೇ ಸರಳವಾಗಿ ಹೇಳಿದ್ದಾರೆ ಅಷ್ಟೇ.
ಅವರನ್ನು ಗುರು ಎಂದು ಒಪ್ಪಿಕೊಳ್ಳಲು ಆಗದು. ಪಂಚಪೀಠಗಳ ಮೂಲ ಮಠಾಧೀಶರೇ ವೀರಶೈವ ಧರ್ಮದ ಗುರುಗಳು. ಲಿಂಗಾಯತರು ಪ್ರತ್ಯೇಕ ಧರ್ಮ ಕೇಳುವು­ದರಲ್ಲಿ ಅರ್ಥವಿಲ್ಲ ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ಪ್ರತ್ಯೇಕ ವೀರಶೈವ ಧರ್ಮ ಘೋಷಣೆಗೆ ಆಗ್ರಹಿಸಿ ಹೋರಾಟ ಮುಂದುವರಿದಿದ್ದು, ಸರ್ಕಾರ ಇದಕ್ಕೆ ಸ್ವತಂತ್ರ ಧರ್ಮದ ಸ್ಥಾನ ಘೋಷಣೆ ಮಾಡಬೇಕು.
ಸಮಾಜದ ಜನರು ಈ ಬಾರಿಯ ಜಾತಿ ಜನಗಣತಿ ಸಂದರ್ಭ­ದಲ್ಲಿ ಧರ್ಮ ಕಾಲಂನಲ್ಲಿ ವೀರಶೈವ, ಜಾತಿ ಕಾಲಂನಲ್ಲಿ ಲಿಂಗಾಯತ ಹಾಗೂ ಉಪ ಜಾತಿಯಲ್ಲಿ ಒಳಪಂಗಡಗಳನ್ನು ಮಾತ್ರ ತುಂಬಬೇಕು’ ಎಂದು ಹೇಳಿದರು. ‘ವೀರಶೈವ ಧರ್ಮವು ಸ್ವತಂತ್ರ ಸ್ಥಾನಮಾನ ಪಡೆದರೂ ಹಿಂದೂ ಧರ್ಮದ ನೆರಳಾಗಿಯೇ ಮುಂದುವರೆಯಲಿದೆ’ ಎಂದರು.
‘ದೇಶದ ಪರಂಪರೆ ಉಳಿಸುವಲ್ಲಿ ಮಠಾಧೀಶರ ಪಾತ್ರ ಪ್ರಮುಖ. ಎಲ್ಲವೂ ಸೂತ್ರಬದ್ಧವಾಗಿಯೇ ನಡೆಯಬೇಕು. ಒಂದು ಮಠದ ಶ್ರೀಗಳಾಗಿ ಪಟ್ಟಾಭಿಷೇಕ ಮಾಡಿಸಿಕೊಂಡವರು ಮತ್ತೊಂದು ಮಠದ ಉತ್ತರಾಧಿಕಾರಿ ಆಗಬಾರದು. ಸಣ್ಣ ಮಠದಿಂದ ದೊಡ್ಡ ಮಠಕ್ಕೆ ವಲಸೆ ಹೋಗುವ ಪ್ರವೃತ್ತಿ ನಿಲ್ಲಬೇಕು. ಕೇದಾರನಾಥದಲ್ಲಿ ದಕ್ಷಿಣ ಭಾರತದ ವೀರಶೈವ ಜಂಗಮರೇ ಪೂಜೆ ಮಾಡಲು ಅಲ್ಲಿನ ಸರ್ಕಾರ ಅನುಮತಿ ನೀಡಿದೆ’ ಎಂದರು.(Mon, 19/01/2015- .prajavani)