ಚಂದ್ರಯಾನ-೨

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Chandrayaan-2
Operator Indian Space Research Organisation, Russian Federal Space Agency
Mission type Orbiter, lander and one rover
Launch date 2013 (expected)[೧]
Launch vehicle GSLV
Mission duration One year (orbiter and rover)
Satellite of Moon
Homepage ISRO
Mass ೨,೬೫೦ Kg (orbiter, lander and rover)

ಚಂದ್ರಯಾನ-೨ (ಸಂಸ್ಕೃತ:चंद्रयान-२, lit: Moon-vehicle[೨][೩] About this sound pronunciation ), ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್(ISRO)(ಭಾರತೀಯ ಅಂತರಿಕ್ಷ[ಬಾಹ್ಯಾಕಾಶ] ಸಂಶೋಧನಾ ಸಂಸ್ಥೆ ಹಾಗು ರಷ್ಯನ್ ಫೆಡರಲ್ ಸ್ಪೇಸ್ ಏಜೆನ್ಸಿ(RKA) ಜಂಟಿಯಾಗಿ ಉದ್ದೇಶಿಸಿರುವ ಚಾಂದ್ರ ಪರಿಶೋಧನಾ ಅಭಿಯಾನವಾಗಿದ್ದು, ಇದಕ್ಕೆ ತಗಲುವ ವೆಚ್ಚ ಸುಮಾರು ಭಾರತೀಯ ರೂಪಾಯಿ₹೪೨೫ crore (US$೯೦ million)ರಷ್ಟೆಂದು ಅಂದಾಜಿಸಲಾಗಿದೆ.[೪] ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮೂಲಕ ೨೦೧೩ರಲ್ಲಿ ಈ ಅಭಿಯಾನವನ್ನು ಉಡಾವಣೆ ಮುಖಾಂತರ ಯಶಸ್ಸು ಮಾಡಲು ಉದ್ದೇಶಿಸಲಾಗಿದೆ. [೧](GSLV) ಉಡಾವಣಾ ವಾಹನವು, ಭಾರತದಲ್ಲಿ ನಿರ್ಮಾಣಗೊಂಡ ಒಂದು ಚಾಂದ್ರ ಕಕ್ಷೆಗಾಮಿ ಹಾಗು ರೋವರ್ ಹಾಗು ರಷ್ಯಾ ನಿರ್ಮಿಸಿದ ಒಂದು ಗಗನನೌಕೆಯನ್ನು ಒಳಗೊಂಡಿದೆ. ISROದ ಪ್ರಕಾರ, ಈ ಅಭಿಯಾನವು ವಿವಿಧ ಹೊಸ ತಂತ್ರಜ್ಞಾನಗಳನ್ನು ಪರೀಕ್ಷಿಸಿ ಬಳಕೆಮಾಡುವುದರ ಜೊತೆಗೆ 'ಹೊಸ' ಪ್ರಯೋಗಗಳನ್ನು ನಡೆಸುತ್ತದೆ.[೫][೬] ಗಾಲಿಗಳಿರುವ ರೋವರ್ ಚಂದ್ರನ ಮೇಲ್ಮೈ ತಲುಪಿ, ಆ ಸ್ಥಳದ ರಾಸಾಯನಿಕ ವಿಶ್ಲೇಷಣೆ ನಡೆಸಲು ಮಣ್ಣು ಅಥವಾ ಶಿಲೆಯ ಮಾದರಿಯನ್ನು ಸಂಗ್ರಹಿಸುತ್ತದೆ. ಅಲ್ಲಿನ ಅಗತ್ಯ ಅಂಕಿಅಂಶದ ದತ್ತಾಂಶವನ್ನು ಭೂಮಿಗೆ ಚಂದ್ರಯಾನ-೨ ಕಕ್ಷೆಗಾಮಿಯ ಮೂಲಕ ತಲುಪಿಸಲಾಗುತ್ತದೆ.[೭] ಚಂದ್ರಯಾನ-1 ಅಭಿಯಾನದ ಯಶಸ್ಸಿಗೆ ಕಾರಣರಾದ ಮೈಲ್ಸ್ವಾಮಿ ಅಣ್ಣಾದೊರೈ ನೇತೃತ್ವದ ತಂಡವು ಚಂದ್ರಯಾನ-೨ ಅಭಿಯಾನದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಇತಿಹಾಸ[ಬದಲಾಯಿಸಿ]

ಅಭಿಯಾನಕ್ಕೆ, ಭಾರತ ಸರ್ಕಾರವು ೧೮ ಸೆಪ್ಟೆಂಬರ್ ೨೦೦೮ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ರ ಅಧ್ಯಕ್ಷತೆಯಲ್ಲಿ ನಡೆದ ಯೂನಿಯನ್ ಕ್ಯಾಬಿನೆಟ್(ಕೇಂದ್ರ ಸಚಿವ ಸಂಪುಟ ಸಭೆ) ಸಭೆಯಲ್ಲಿ ಅನುಮೋದನೆ ನೀಡಲಾಯಿತು.[೮]

ನವೆಂಬರ್ ೧೨, ೨೦೦೭ರಲ್ಲಿ, ರಷ್ಯನ್ ಫೆಡರಲ್ ಸ್ಪೇಸ್ ಏಜೆನ್ಸಿ(ರೋಸ್ಕೊಸ್ಮೊಸ್) ಹಾಗು ISROನ ಪ್ರತಿನಿಧಿಗಳು, ಎರಡೂ ಏಜೆನ್ಸಿಗಳೂ ಚಂದ್ರಯಾನ-೨ ಯೋಜನೆಯಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸಲು ಒಪ್ಪಂದಕ್ಕೆ ಸಹಿ ಹಾಕಿದವು.[೯] ಕಕ್ಷೆಗಾಮಿ ಹಾಗು ರೋವರ್ ನ ತಯಾರಿಕೆಗೆ ISRO ಪ್ರಮುಖ ಜವಾಬ್ದಾರಿ ವಹಿಸಿಕೊಂಡರೆ, ರೋಸ್ಕೊಸ್ಮೊಸ್ ಗಗನನೌಕೆ ತಯಾರಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತು. ಬಾಹ್ಯಾಕಾಶ ನೌಕೆಯ ವಿನ್ಯಾಸವು ಆಗಸ್ಟ್ ೨೦೦೯ರ ಹೊತ್ತಿಗೆ ಪೂರ್ಣಗೊಂಡಿತು, ಜೊತೆಗೆ ಎರಡೂ ರಾಷ್ಟ್ರಗಳ ವಿಜ್ಞಾನಿಗಳು ಇದರ ಬಗ್ಗೆ ಜಂಟಿಯಾಗಿ ವಿಧ್ಯುಕ್ತ ಪರಿಶೀಲನೆ ನಡೆಸಿದರು.[೧೦][೧೧][೧೨][೧]

ವಿನ್ಯಾಸ[ಬದಲಾಯಿಸಿ]

ಬಾಹ್ಯಾಕಾಶ ನೌಕೆ

ಅಭಿಯಾನವು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ Mk-II(GSLV)ನ ಮೂಲಕ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ, ಜೊತೆಗೆ ಶ್ರೀಹರಿಕೋಟ ದ್ವೀಪದ ಮೇಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್ ನಿಂದ ಉಡಾವಣೆ ಮಾಡಲು ಉದ್ದೇಶಿಸಲಾಗಿರುವ ಇದರ ಸರಾಸರಿ ಉಡಾವಣೆ ತೂಕ ೨,೬೫೦ ಕೆಜಿ.[೧೩]

ಕಕ್ಷೆಗಾಮಿ

ISRO, ಕಕ್ಷೆಗಾಮಿಯನ್ನು ವಿನ್ಯಾಸಗೊಳಿಸುತ್ತದೆ, ಇದು ೨೦೦ ಕಿಮೀ ಎತ್ತರದಲ್ಲಿ ಚಂದ್ರನನ್ನು ಪರಿಭ್ರಮಿಸುತ್ತದೆ.[೧೪] ಅಭಿಯಾನವು ಕಕ್ಷೆಗಾಮಿಗೆ ಐದು ಉಪಕರಣಗಳನ್ನು ಕೊಂಡೊಯ್ಯಬೇಕೆಂದು ನಿರ್ಧರಿಸಲಾಗಿದೆ. ಇದರಲ್ಲಿ ಮೂರು ಉಪಕರಣಗಳು ಹೊಸತಾಗಿದ್ದು, ಮತ್ತೆರಡು ಉಪಕರಣಗಳು ಚಂದ್ರಯಾನ-1ರಲ್ಲಿ ಕಕ್ಷೆಗಾಮಿಗೆ ಹೊತ್ತೊಯ್ಯಲಾದ ಸುಧಾರಿತ ರೂಪಾಂತರಗಳಾಗಿದೆ. ಸರಾಸರಿ ಉಡಾವಣಾ ಮಾಸ್ (ದ್ರವ್ಯರಾಶಿ-ತೂಕ) ೧,೪೦೦ ಕೆಜಿಯಷ್ಟಿರುತ್ತದೆ.[೧೫][೧೬]

ಗಗನನೌಕೆ

ಚಂದ್ರನ ಮೇಲ್ಮೈನ ಮೇಲೆ ಪರಿಣಾಮ ಬೀರಿದ ಚಂದ್ರಯಾನ-೧ರ ಚಾಂದ್ರ ಶೋಧಕಕ್ಕಿಂತ ಭಿನ್ನವಾಗಿ, ಗಗನನೌಕೆಯು ಹಗುರವಾಗಿ ನಿಲುಗಡೆ ಮಾಡುತ್ತದೆ.[೧೭] ರಷ್ಯನ್ ಫೆಡರಲ್ ಸ್ಪೇಸ್ ಏಜೆನ್ಸಿ ಗಗನನೌಕೆಯನ್ನು ಒದಗಿಸುತ್ತದೆ. ಗಗನನೌಕೆ ಹಾಗು ರೋವರ್ ನ ಸರಾಸರಿ ತೂಕ ೧,೨೫೦ ಕೆಜಿ. ರಷ್ಯನ್ ಸ್ಪೇಸ್ ಏಜೆನ್ಸಿ ರೋಸ್ಕೊಸ್ಮೊಸ್ ಗಗನನೌಕೆಯನ್ನು ೨೦೧೧ರಲ್ಲಿ ಪರೀಕ್ಷಿಸಲು ಉದ್ದೇಶಿಸಿದೆ.[೧೮][೧೯][೨೦]

ರೋವರ್

ರೋವರ್ ೩೦-೧೦೦ ಕೆಜಿ ತೂಕ ಹೊಂದಿದ್ದು ಸೌರಶಕ್ತಿಯ ಮೇಲೆ ಕಾರ್ಯನಿರ್ವಹಿಸುತ್ತದೆ. ರೋವರ್ ಗಾಲಿಗಳ ಮೇಲೆ ಚಂದ್ರನ ಮೇಲ್ಮೈಯನ್ನು ತಲುಪಿ, ಮಣ್ಣು ಅಥವಾ ಶಿಲೆಯ ಮಾದರಿಯನ್ನು ಸಂಗ್ರಹಿಸಿ, ರಾಸಾಯನಿಕ ವಿಶ್ಲೇಷಣೆಯನ್ನು ನಡೆಸುತ್ತದೆ, ಹಾಗು ಮೇಲಿರುವ ಕಕ್ಷೆಗಾಮಿಗೆ ಶೋಧಿತ,ದೊರೆತ ದತ್ತಾಂಶವನ್ನು ಕಳುಹಿಸುತ್ತದೆ, ಇದು ಭೂಮಿಯ ಸ್ಟೇಶನ್ ಗೆ ತನ್ನ ಪರಿಧಿ ಕೇಂದ್ರದ ಮುಖಾಂತರ ಮಾಹಿತಿ ಪ್ರಸಾರ ಮಾಡುತ್ತದೆ.[೨೧][೨೨]

ಉಪಕರಣಗಳು[ಬದಲಾಯಿಸಿ]

ತಜ್ಞ ಸಮಿತಿಯು, ಕಕ್ಷೆಗಾಮಿ ಐದು ಉಪಕರಣಗಳನ್ನು, ಹಾಗು ರೋವರ್ ಎರಡು ಉಪಕರಣಗಳನ್ನು ಕೊಂಡೊಯ್ಯಬೇಕೆಂದು ಸಲಹೆ ನೀಡಿದೆಯೆಂದು ISRO ಪ್ರಕಟಿಸಿತು.[೨೩] [೨೪]ಕಕ್ಷೆಗಾಮಿಗೆ ಕೆಲವು ವೈಜ್ಞಾನಿಕ ಉಪಕರಣಗಳನ್ನು ಒದಗಿಸುವ ಮೂಲಕ NASA ಹಾಗು ESA ಅಭಿಯಾನದಲ್ಲಿ ಪಾಲ್ಗೊಳ್ಳುತ್ತದೆಂದು ಆರಂಭದಲ್ಲಿ ವರದಿ ಮಾಡಲಾಗಿತ್ತು,[೨೫] ತೂಕ ನಿರ್ಬಂಧದಿಂದಾಗಿ ಬಾಹ್ಯ ಉಪಕರಣಗಳನ್ನು ಅಭಿಯಾನವು ಕೊಂಡೊಯ್ಯುವುದಿಲ್ಲವೆಂದು ISRO ನಂತರದಲ್ಲಿ ಸ್ಪಷ್ಟಪಡಿಸಿತು.[೧೪]

ಕಕ್ಷೆಗಾಮಿ ಉಪಕರಣ
 • ಚಂದ್ರನ ಮೇಲ್ಮೈಯಲ್ಲಿರುವ ಪ್ರಮುಖ ಅಂಶಗಳನ್ನು ದ್ವಿ-ವಿಮಿತೀಯ ನಿರೂಪಣೆ ಮಾಡಲು ಬೆಂಗಳೂರಿನ ISRO ಸ್ಯಾಟಲೈಟ್ ಸೆಂಟರ್ ನ ಲಾರ್ಜ್ ಏರಿಯ ಸಾಫ್ಟ್ ಎಕ್ಸ್-ರೆ ಸ್ಪೆಕ್ಟ್ರೋಮೀಟರ್ ಹಾಗು ಅಹಮದಾಬಾದಿನ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ(PRL)ಯ ಸೋಲಾರ್ ಎಕ್ಸ್-ರೇ ಮಾನಿಟರ್ ಉಪಕರಣಗಳು.[೨೪]
 • ಚಂದ್ರನ ಮೇಲ್ಮೈನಲ್ಲಿರುವ ಮೊದಲ ಹತ್ತು ಮೀಟರುಗಳಲ್ಲಿ ನೀರ್ಗಲ್ಲುಗಳನ್ನೊಳಗೊಂಡಂತೆ ದೊರೆಯುವ ವಿವಿಧ ರಚನೆಗಳ ಬಗ್ಗೆ ಶೋಧನೆಯನ್ನು ನಡೆಸಲು, ಅಹಮದಾಬಾದಿನ ಸ್ಪೇಸ್ ಅಪ್ಲಿಕೇಶನ್ಸ್ ಸೆಂಟರ್(SAC)ನ (ಬಾಹ್ಯಾಕಾಶ ತತ್ವಗಳ ಅಳವಡಿಕೆ)ಕೇಂದ್ರ L ಹಾಗು S ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡಾರ್ ಚಂದ್ರನಿಂದ ಆವರಿಸಲ್ಪಟ್ಟಿರುವ ಪ್ರದೇಶಗಳಲ್ಲಿ ದೊರೆಯುವ (ಹಿಮ)ನೀರು ಕಲ್ಲುಗಳ ಬಗ್ಗೆ ದೃಢಪಡಿಸಲು SAR ಮತ್ತಷ್ಟು ಸಾಕ್ಷ್ಯಗಳನ್ನು ಒದಗಿಸುತ್ತದೆಂದು ನಿರೀಕ್ಷಿಸಲಾಗಿದೆ.[೨೪]
 • ಚಂದ್ರನ ಮೇಲ್ಮೈನ ಉದ್ದಕ್ಕೂ ಒಂದು ವ್ಯಾಪಕವಾದ ತರಂಗಾಂತರದ ಶ್ರೇಣಿಯನ್ನು ದ್ವಿ-ವಿಮಿತೀಯ ನಿರೂಪಣೆ ಮಾಡುವ ಮೂಲಕ ಖನಿಜಗಳು, ನೀರಿನ ಕಣಗಳು ಹಾಗು ಹೈಡ್ರಾಕ್ಸಿಲ್ ಗಳ ಉಪಸ್ಥಿತಿಯ ಬಗ್ಗೆ ಅಧ್ಯಯನ ನಡೆಸಲು ಅಹಮದಾಬಾದಿನ SAC ನಿಂದ ಪಡೆದುಕೊಂಡ ಇಮೇಜಿಂಗ್ IR ಸ್ಪೆಕ್ಟ್ರೋಮೀಟರ್ (IIRS).[೨೪]
 • ಚಾಂದ್ರ ಬಾಹ್ಯಗೋಳದ ಬಗ್ಗೆ ಸವಿಸ್ತಾರದ ಅಧ್ಯಯನ ನಡೆಸಲು ತಿರುವನಂತಪುರದ ಸ್ಪೇಸ್ ಫಿಸಿಕ್ಸ್ ಲ್ಯಾಬೋರೇಟರಿ(SPL) ನಿಂದ ಪಡೆದುಕೊಂಡ ನ್ಯೂಟ್ರಲ್ ಮಾಸ್ ಸ್ಪೆಕ್ಟ್ರೋಮೀಟರ್.[೨೪]
 • ಚಾಂದ್ರ ಖನಿಜಶಾಸ್ತ್ರ ಹಾಗು ಭೂವೈಜ್ಞಾನಿಕ ವಿವರಣೆಗಳ ಅಧ್ಯಯನಕ್ಕೆ ಅಗತ್ಯ ತ್ರಿವಿಮಿತೀಯ ನಕ್ಷೆಯ ತಯಾರಿಕೆಗೆ ಅಹಮದಾಬಾದಿನ SAC ಒದಗಿಸಿದ ಟೆರೈನ್ ಮ್ಯಾಪಿಂಗ್ ಕ್ಯಾಮೆರ-೨(TMC-೨).[೨೪]
ರೋವರ್ ಉಪಕರಣ
 • ಬೆಂಗಳೂರಿನ ಲ್ಯಾಬೋರೇಟರಿ ಫಾರ್ ಎಲೆಕ್ಟ್ರೋ ಆಪ್ಟಿಕ್ ಸಿಸ್ಟಮ್ಸ್(LEOS)ನಿಂದ ಪಡೆದುಕೊಂಡ ಲೇಸರ್ ಇಂಡ್ಯೂಸ್ಡ್ ಬ್ರೇಕ್ ಡೌನ್ ಸ್ಪೆಕ್ಟ್ರೋಸ್ಕೋಪ್(LIBS).[೨೪]
 • PRL, ಅಹಮದಾಬಾದಿನಿಂದ ಪಡೆದುಕೊಳ್ಳಲಾದ ಅಲ್ಫಾ ಪಾರ್ಟಿಕಲ್ ಇಂಡ್ಯೂಸ್ಡ್ ಎಕ್ಸ್-ರೆ ಸ್ಪೆಕ್ಟ್ರೋಸ್ಕೋಪ್(APIXS).

ಪ್ರಚಲಿತ ಸ್ಥಿತಿ[ಬದಲಾಯಿಸಿ]

ಆಗಸ್ಟ್ ೩೦, ೨೦೧೦ರ ಹೊತ್ತಿಗಿನ ಪ್ರಯೋಗಕ್ಕೆ, ಇಸ್ರೋ, ಚಂದ್ರಯಾನ-೨ರ ಅಭಿಯಾನಕ್ಕೆ ಉಪಕರಣಗಳನ್ನು ಅಂತಿಮಗೊಳಿಸಿತು.[೨೬]

ಇವನ್ನೂ ಗಮನಿಸಿ[ಬದಲಾಯಿಸಿ]

 • ಚಂದ್ರಯಾನ-1
 • ವರ್ತಮಾನದ ಹಾಗೂ ಭವಿಷ್ಯದ ಚಂದ್ರನ ಯಾತ್ರೆಗಳ ಪಟ್ಟಿ

ಉಲ್ಲೇಖಗಳು[ಬದಲಾಯಿಸಿ]

 1. ೧.೦ ೧.೧ ೧.೨ "Chandrayaan-2 launch by 2013". Chennai, India: The Hindu. 2009-07-05. ತೆರೆದುನೋಡಿದ್ದು 2009-07-06. 
 2. "candra". Spoken Sanskrit. ತೆರೆದುನೋಡಿದ್ದು 2008-11-05. 
 3. "yaana". Spoken Sanskrit. ತೆರೆದುನೋಡಿದ್ದು 2008-11-05. 
 4. "India, Russia giving final shape to Chandrayaan-2". Hindustan Times. 2008-10-30. ತೆರೆದುನೋಡಿದ್ದು 2008-11-11. 
 5. "Chandrayaan-2 to be finalised in 6 months". The Hindu. 2007-09-07. ತೆರೆದುನೋಡಿದ್ದು 2008-10-22. 
 6. "Chandrayaan-II will try out new ideas, technologies". The Week. 2010-09-07. ತೆರೆದುನೋಡಿದ್ದು 2010-09-07. 
 7. "ISRO plans Moon rover". Chennai, India: The Hindu. 2007-01-04. ತೆರೆದುನೋಡಿದ್ದು 2008-10-22. 
 8. "Cabinet clears Chandrayaan-2". Chennai, India: The Hindu. 2008-09-19. ತೆರೆದುನೋಡಿದ್ದು 2008-10-23. 
 9. "India, Russia to expand n-cooperation, defer Kudankulam deal". Earthtimes.org. 2008-11-12. ತೆರೆದುನೋಡಿದ್ದು 2008-11-11. 
 10. "ISRO completes Chandrayaan-2 design news". domain-b.com. 2009-08-17. ತೆರೆದುನೋಡಿದ್ದು 2009-08-20. 
 11. "India and Russia complete design of new lunar probe". 2009-08-17. ತೆರೆದುನೋಡಿದ್ದು 2009-08-20. 
 12. "India and Russia Sign an Agreement on Chandrayaan-2". ISRO. 2007-11-14. ತೆರೆದುನೋಡಿದ್ದು 2008-10-23. [dead link]
 13. ದಿ ಇಕನಾಮಿಕ್ ಟೈಮ್ಸ್-ಚಂದ್ರಯಾನ-2 ಚಂದ್ರನಿಗೆ ಇನ್ನಷ್ಟು ಹತ್ತಿರವಾಗುವುದು.
 14. ೧೪.೦ ೧೪.೧ 'ಚಂದ್ರನ ಸಂಪೂರ್ಣ ಕವರೇಜ್ ಗಾಗಿ ಚಂದ್ರಯಾನ-2ನ್ನು ನಾವು ಉಡಾವಣೆ ಮಾಡುತ್ತಿದ್ದೇವೆ.'
 15. ದಿ ಇಕನಾಮಿಕ್ ಟೈಮ್ಸ್-ಚಂದ್ರಯಾನ-2 ಚಂದ್ರನಿಗೆ ಇನ್ನಷ್ಟು ಹತ್ತಿರವಾಗುವುದು.
 16. ಚಂದ್ರಯಾನ-2 ಅಭಿಯಾನಕ್ಕಾಗಿ ISRO-ಉಪಕರಣಗಳನ್ನು ಅಂತಿಮಗೊಳಿಸಿದೆ.
 17. ದಿ ಇಕನಾಮಿಕ್ ಟೈಮ್ಸ್-ಚಂದ್ರಯಾನ-2 ಚಂದ್ರನಿಗೆ ಇನ್ನಷ್ಟು ಹತ್ತಿರವಾಗುವುದು
 18. ದಿ ಇಕನಾಮಿಕ್ ಟೈಮ್ಸ್-ಚಂದ್ರಯಾನ-2 ಚಂದ್ರನಿಗೆ ಇನ್ನಷ್ಟು ಹತ್ತಿರವಾಗುವುದು
 19. ಏವಿಯೇಶನ್ ವೀಕ್-ಚಂದ್ರಯಾನ-2 ಗಗನನೌಕೆಯನ್ನು ರಷ್ಯಾ ಮುಂದಿನ ವರ್ಷ(2011) ಪರೀಕ್ಷಿಸುತ್ತದೆ.
 20. ISRO-ಉಪಕರಣ ಚಂದ್ರಯಾನ-2 ಅಭಿಯಾನಕ್ಕಾಗಿ ISRO-ಉಪಕರಣಗಳನ್ನು ಅಂತಿಮಗೊಳಿಸಿದೆ
 21. ದಿ ಇಕನಾಮಿಕ್ ಟೈಮ್ಸ್-ಚಂದ್ರಯಾನ-2 ಚಂದ್ರನಿಗೆ ಇನ್ನಷ್ಟು ಹತ್ತಿರವಾಗುವುದು.
 22. ಚಂದ್ರಯಾನ-2 ಅಭಿಯಾನಕ್ಕಾಗಿ ISRO-ಉಪಕರಣಗಳನ್ನು ಅಂತಿಮಗೊಳಿಸಿದೆ.
 23. Johnson (August 31, 2010). "Three new Indian payloads for Chandrayaan 2, decides ISRO". Indian Express. ತೆರೆದುನೋಡಿದ್ದು 2010-08-31. 
 24. ೨೪.೦ ೨೪.೧ ೨೪.೨ ೨೪.೩ ೨೪.೪ ೨೪.೫ ೨೪.೬ "Payloads for Chandrayaan-2 Mission Finalised". Indian Space Research Organisation (ISRO) (ISRO). August 30, 2010. ತೆರೆದುನೋಡಿದ್ದು 2010-09-02. 
 25. "NASA and ESA to partner for chandrayaan-2". Skaal Times. February 04, 2010. ತೆರೆದುನೋಡಿದ್ದು 2010-02-22.  |first1= missing |last1= in Authors list (help); Check date values in: |date= (help)
 26. ಚಂದ್ರಯಾನ-2 ಅಭಿಯಾನಕ್ಕಾಗಿ ISRO-ಉಪಕರಣಗಳನ್ನು ಅಂತಿಮಗೊಳಿಸಿದೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಚಂದ್ರಯಾನ-2 ಅಭಿಯಾನದ ಸ್ಥಿತಿಗತಿ