ಘಾಟಿ ಸುಬ್ರಮಣ್ಯ
| ಘಾಟಿ ಸುಬ್ರಮಣ್ಯ | |
| ಘಾಟಿ ಸುಬ್ರಮಣ್ಯ ದೇವಾಲಯ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ಬೆಂಗಳೂರು ಗ್ರಾಮೀಣ ಜಿಲ್ಲೆ |
| ನಿರ್ದೇಶಾಂಕಗಳು | |
| ವಿಸ್ತಾರ | km² |
| ಸಮಯ ವಲಯ | IST (UTC+5:30) |
| ಜನಸಂಖ್ಯೆ - ಸಾಂದ್ರತೆ |
- /ಚದರ ಕಿ.ಮಿ. |
ದೊಡ್ಡಬಳ್ಳಾಪುರದಿಂದ ೧೪ ಕಿ.ಮೀ, ಬೆಂಗಳೂರಿನಿಂದ ೫೧ ಕಿ.ಮೀ ದೂರದಲ್ಲಿರುವ ಘಾಟಿ ಸುಬ್ರಮಣ್ಯ ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರ. ಇಲ್ಲಿ ಸುಬ್ರಹ್ಮಣ್ಯ ದೇವರನ್ನು ನಾಗ ರೂಪದಲ್ಲಿ ಆರಾಧಿಸಲಾಗುತ್ತದೆ.
ಪರಿವಿಡಿ |
ಇತಿಹಾಸ [ಬದಲಾಯಿಸಿ]
ಘಾಟಿ ಸುಬ್ರಮಣ್ಯ ಕ್ಷೇತ್ರವನ್ನು ಸುಮಾರು ೬೦೦ ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯ ಸೊಂಡೂರು ಸಂಸ್ಥಾನದ ಘೋರ್ಪಡೆ ವಂಶಸ್ಥರು ಅಭಿವೃದ್ಧಿಪಡಿಸಿದರು ಎಂದು ಹೇಳಲಾಗಿದೆ.
ಈ ಕ್ಷೇತ್ರದ ಪ್ರಧಾನ ದೇವರುಗಳಾದ ಸುಬ್ರಹ್ಮಣ್ಯಸ್ವಾಮಿ ಹಾಗೂ ಲಕ್ಷ್ಮೀನರಸಿಂಹಸ್ವಾಮಿ. ಕುಮಾರಸ್ವಾಮಿಯು ಏಳು ಹೆಡೆಯಿಂದ ಕೂಡಿ ಪೂರ್ವಾಭಿಮುಖವಾಗಿರುವ ಏಕಾಶಿಲಾಮೂರ್ತಿ. ಪೂರ್ವಾಭಿಮುಖನಾದ ಏಳುಹೆಡೆಗಳ ಸುಬ್ರಹ್ಮಣ್ಯ ಸ್ವಾಮಿಯ ಎದುರು, ಪಶ್ಚಿಮಾಭಿಮುಖವಾಗಿರುವ ಲಕ್ಷ್ಮೀನರಸಿಂಹ ಸ್ವಾಮಿ ಮೂರ್ತಿಯಿದೆ. ಈ ಮೂರ್ತಿಯನ್ನು ದೊಡ್ಡ ಕನ್ನಡಿಯ ನೆರವಿನಿಂದ ದರ್ಶಿಸಬಹುದಾಗಿದೆ.
ಕೈಂಕರ್ಯಗಳು [ಬದಲಾಯಿಸಿ]
ಪ್ರತಿನಿತ್ಯ ಮೂರು ಕಾಲ ದೀಪಾರಾಧನೆ ಮೊದಲಾದ ಕೈಂಕರ್ಯಗಳು ನಡೆಯುತ್ತವೆ. ಮೊದಲ ಮಂಗಳಾರತಿ ಬೆಳಗಿನ ೬.೩೦ಕ್ಕೆ ನಡೆಯುತ್ತದೆ. ದೇವಸ್ಥಾನದಲ್ಲಿ ನಿತ್ಯ ಮಧ್ಯಾಹ್ನ ೧೨.೩೦ಕ್ಕೆ ಸುಬ್ರಹ್ಮಣ್ಯಸ್ವಾಮಿ ಹಾಗೂ ಲಕ್ಷ್ಮೀನರಸಿಂಹಸ್ವಾಮಿಗೆ ಮಹಾ ಮಂಗಳಾರತಿ ನಡೆದ ಮೇಲೆ ಮಧ್ಯಾಹ್ನ೧ರಿಂದ ೩ ಗಂಟೆವರೆಗೆ. ನಾಗರ ಪಂಚಮಿಯಂದು ಇಲ್ಲಿನ ನಾಗರಕಲ್ಲುಗಳಿಗೆ ವಿಶೇಷ ಪೂಜೆಗಳು ನಡೆಯುತ್ತವೆ.
ದರ್ಶನ ಸಮಯ [ಬದಲಾಯಿಸಿ]
ದೇವಸ್ಥಾನ ಬೆಳಿಗ್ಗೆ ೬ ಗಂಟೆಯಿಂದ ರಾತ್ರಿ ೦೮:೩೦ ವಗೆರೆ ದರ್ಶನಕ್ಕೆ ಅವಕಾಶವಿರುತ್ತದೆ
ಸಂಪ್ರದಾಯ [ಬದಲಾಯಿಸಿ]
ಸಂತಾನ ಪ್ರಾಪ್ತಿಗಾಗಿ ಜನರು ಸುಬ್ರಹ್ಮಣ್ಯಸ್ವಾಮಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ಇಲ್ಲಿನ ಅಶ್ವತ್ಥ ಕಟ್ಟೆಗಳಲ್ಲಿ ನಾಗರ ಪ್ರತಿಷ್ಠಾಪಿಸಿ ಪೂಜಿಸುವ ಹರಕೆ ಬಹಳ ಹಿಂದಿನಿಂದ ನಡೆದುಕೊಂಡು ಬರುತ್ತಿದೆ. ಇಲ್ಲಿನ ಅಶ್ವತ್ಥ ಕಟ್ಟೆಯ ಮೇಲೆ ಸಾವಿರಾರು ನಾಗರ ಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಸೌಲಭ್ಯ [ಬದಲಾಯಿಸಿ]
ಘಾಟಿ ಕ್ಷೇತ್ರದಲ್ಲಿ ೪ ಕೋಟಿ ರೂ ವೆಚ್ಚದಲ್ಲಿ ಆಧುನಿಕ ಸೌಲಭ್ಯವಿರುವ ವಸತಿ ಗೃಹಗಳ ನಿರ್ಮಾಣ ಪ್ರಗತಿಯಲ್ಲಿದೆ. ಸದ್ಯಕ್ಕೆ ಘಾಟಿ ಕ್ಷೇತ್ರದಲ್ಲಿ ರಾತ್ರಿ ಉಳಿದುಕೊಳ್ಳಲು ಬಯಸುವವರಿಗೆ ನಾಲ್ಕು ಧರ್ಮ ಛತ್ರಗಳಿವೆ. ನಾಲ್ಕು ಕೊಠಡಿಗಳ ಸೌಲಭ್ಯವಿರುವ ಪ್ರವಾಸಿ ಮಂದಿರವಿದೆ. ದೇವಸ್ಥಾನಕ್ಕೆ ೧ ಕಿ.ಮೀ ದೂರದಲ್ಲಿ ಉತ್ತಮ ಸೌಲಭ್ಯಗಳಿರುವ ಹಲವು ಖಾಸಗಿ ಹೋಟೆಲ್‌ಗಳಿವೆ.
ಅಶ್ವತ್ಥ ಕಟ್ಟೆ [ಬದಲಾಯಿಸಿ]
ದೇಗುಲದ ಬಳಿ ಇರುವ ಅಶ್ವತ್ಥ ಕಟ್ಟೆಯಲ್ಲಿ ಹರಕೆಹೊತ್ತವರು ಬಂದು ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸುತ್ತಾರೆ.
ಕುಮಾರತೀರ್ಥ [ಬದಲಾಯಿಸಿ]
ಇಲ್ಲಿರುವ ಕುಮಾರತೀರ್ಥದಲ್ಲಿ ಸ್ವಾಮಿಯು ಪ್ರತಿದಿನ ಸ್ನಾನ ಮಾಡುತ್ತಿದ್ದನೆಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ.
ವಿಶ್ವೇಶ್ವರಯ್ಯ ಅಣೆಕಟ್ಟು [ಬದಲಾಯಿಸಿ]
ನೀರಿನ ಸಂಗ್ರಹಕ್ಕಾಗಿ ದೇವಾಲಯದ ಹಿಂಭಾಗದ ಅನತಿ ದೂರದಲ್ಲಿ ಎರಡು ಬೆಟ್ಟಗಳ ನಡುವೆ ವಿಶ್ವೇಶ್ವರಯ್ಯ ಅಣೆಕಟ್ಟು ನಿರ್ಮಿಸಲಾಗಿದೆ.
ಸಾರಿಗೆ [ಬದಲಾಯಿಸಿ]
ಘಾಟಿ ಕ್ಷೇತ್ರಕ್ಕೆ ದೊಡ್ಡಬಳ್ಳಾಪುರ, ಬೆಂಗಳೂರಿನಿಂದ ನೇರ ಬಸ್‌ಗಳಿವೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ, ಗೌರಿಬಿದನೂರು, ಆಂಧ್ರಪ್ರದೇಶದ ಹಿಂದೂಪುರದ ಕಡೆಗಳಿಂದ ಬೆಳಿಗ್ಗೆ ೬ ಗಂಟೆಯಿಂದಲೇ ಘಾಟಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಿವೆ.
ದನಗಳ ಜಾತ್ರೆ [ಬದಲಾಯಿಸಿ]
ಡಿಸೆಂಬರ್ ತಿಂಗಳಲ್ಲಿ ಇಲ್ಲಿ ನಡೆಯುವ ದನಗಳ ಜಾತ್ರೆಗೆ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಕರ್ನಾಟಕ ರಾಜ್ಯದ ನಾನಾ ಭಾಗಗಳ ರೈತರು ಎತ್ತುಗಳನ್ನು ಮಾರಾಟ ಮಾಡಲು ಹಾಗೂ ಕೊಳ್ಳಲು ಬರುತ್ತಾರೆ. ಇದೇ ಸಂದರ್ಭದಲ್ಲಿ (ಪುಷ್ಯಶುದ್ಧ ಷಷ್ಠಿಯಂದು) ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ ನಡೆಯುತ್ತದೆ.