ಗೌರೀಶ ಕಾಯ್ಕಿಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ. ಗೌರೀಶ ಕಾಯ್ಕಿಣಿ
ಜನನ(೧೯೧೨-೦೯-೧೨)೧೨ ಸೆಪ್ಟೆಂಬರ್ ೧೯೧೨
ಗೋಕರ್ಣ, ಉತ್ತರ ಕನ್ನಡ ಜಿಲ್ಲೆ
ಮರಣError: Need valid death date (first date): year, month, day
ಗೋಕರ್ಣ, ಉತ್ತರ ಕನ್ನಡ ಜಿಲ್ಲೆ
ಕಾವ್ಯನಾಮ
  • ವೈಶ್ವಾನರ
  • ಗೌರೀಶಂಕರ
  • ಅಡುಗೆ ಭಟ್ಟ
  • ಜಿವಿಕೆ
ವೃತ್ತಿ
  • ವಿಚಾರವಾದಿ
  • ಬರಹಗಾರ
  • ಶಿಕ್ಷಕ (೧೯೩೭-೧೭೬)
  • ಪತ್ರಿಕಾ ಪ್ರಧಾನ ಸಂಪಾದಕ
ಭಾಷೆ
  • ಕನ್ನಡ
  • ಕೊಂಕಣಿ
  • ಮರಾಠಿ
  • ಇಂಗ್ಲಿಷ್
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ
  • ೧ನೇ ನಂಬರ್ ಶಾಲೆ, ಗೋಕರ್ಣ
  • ಗಿಬ್ಬ ಹೈಸ್ಕೂಲ್, ಕುಮಟಾ
  • ಕರ್ನಾಟಕ ಕಾಲೇಜು,ಧಾರವಾಡ
ಪ್ರಕಾರ/ಶೈಲಿ
  • ನಾಟಕ
  • ವಿಮರ್ಶೆ
  • ಕಾವ್ಯ
  • ಗದ್ಯ
  • ಅನುವಾದ
ಪ್ರಮುಖ ಕೆಲಸ(ಗಳು)
  • ನವಮಾನವತಾವಾದ
  • ನಾಸ್ತಿಕ ಮತ್ತು ದೇವರು
  • ಸತ್ಯಾರ್ಥಿ
ಪ್ರಮುಖ ಪ್ರಶಸ್ತಿ(ಗಳು)
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ
  • ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಬಾಳ ಸಂಗಾತಿಶಾಂತಾಬಾಯಿ ರಾಮಚಂದ್ರ ವೆಂಟೇಕರ್, ತದಡಿ, ಗೋಕರ್ಣ (ಮದುವೆ: ೧೯೫೩)
ಮಕ್ಕಳುಜಯಂತ್ ಕಾಯ್ಕಿಣಿ

ಪ್ರಭಾವಗಳು
  • ಶ್ರೀರಂಗ (ಆರ್. ವಿ. ಜಹಗೀರದಾರ), ಕಾರ್ಲ್‌ಮಾರ್ಕ್ಸ್
ತಂದೆವಿಠಲರಾವ್ ವೆಂಕಟರಾವ್ ಕಾಯ್ಕಿಣಿ (ಮರಣ: ೧೯೧೨)
ತಾಯಿಸೀತಾಬಾಯಿ ಕುಲಕರ್ಣಿ(ಬಂಕಿಕೊಡ್ಲು, ಗೋಕರ್ಣ) (ಮರಣ: ೧೯೧೯)

ಡಾ. ಗೌರೀಶ ಕಾಯ್ಕಿಣಿಯವರು ೧೯೧೨ ಸಪ್ಟಂಬರ ೧೨ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು.[೧][೨]

ಶಿಕ್ಷಣ[ಬದಲಾಯಿಸಿ]

ಗೌರೀಶ ಕಾಯ್ಕಿಣಿಯವರ ಪ್ರಾಥಮಿಕ ಶಿಕ್ಷಣ ಗೋಕರ್ಣದಲ್ಲಿಯೇ ನಡೆಯಿತು. ಮೆಟ್ರಿಕ್ಯುಲೇಶನ್ ಪರಿಕ್ಷೆಯನ್ನು ಕುಮಟಾದ ಗಿಬ್ಬ ಹಾಯ್‍ಸ್ಕೂಲಿನಿಂದ ಉತ್ತೀರ್ಣರಾಗಿ , ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕಲಾವಿಭಾಗದಲ್ಲಿ ಪ್ರಥಮ ವರ್ಷವನ್ನು ಅಭ್ಯಸಿಸಿದರು. ಆಬಳಿಕ ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತಕ್ಕೆ ಸರ್ವಪ್ರಥಮರಾಗಿ ತೇರ್ಗಡೆಯಾದರು. ಗೌರೀಶ ಕಾಯ್ಕಿಣಿಯವರು ಹಿಂದಿಯಲ್ಲಿ ವಿಶಾರದರೂ ಆಗಿದ್ದಾರೆ. ವಿಜ್ಞಾನದ ಮತ್ತು ವಿಜ್ಞಾನಿಗಳ ಬಗ್ಗೆ ಅಪಾರ ಗೌರವವಿದ್ದ ಇವರು ಮುಂದಿನ ತತ್ವಜ್ಞಾನವೆಂದರೆ ವಿಜ್ಞಾನ ಎಂದು ಹೇಳುತ್ತಿದ್ದರು. ಪರಮ ನಾಸ್ತಿಕರಾದ ಇವರು ವಿಜ್ಞಾನಕ್ಕೆ ನಿಲುಕದ್ದನ್ನೆಲ್ಲ ಖಂಡ - ತುಂಡವಾಗಿ ನಿರಾಕರಿಸುತ್ತಿದ್ದರು.[೩]

ವೃತ್ತಿ[ಬದಲಾಯಿಸಿ]

ಗೌರೀಶ ಕಾಯ್ಕಿಣಿಯವರು ೧೯೩೭ರಲ್ಲಿ ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿ ೧೯೭೬ರಲ್ಲಿ ನಿವೃತ್ತರಾದರು.[೧] ಇದೇ ಕಾರಣದಿಂದ, 'ಗೌರೀಶ್ ಮಾಸ್ತರರು' ಎಂದೇ ಕರೆಯಲ್ಪಡುತ್ತಿದ್ದರು.

ಕೌಟಂಬಿಕ ಜೀವನ[ಬದಲಾಯಿಸಿ]

ಗೌರೀಶ ಕಾಯ್ಕಿಣಿಯವರ ವಿವಾಹ ೧೯೫೩ರಲ್ಲಿ ಶಾಂತಾ ಅವರ ಜೊತೆಗೆ ನೆರವೇರಿತು.[೧] ಇವರದು ಅಂತರ್ಜಾತೀಯ ವಿವಾಹ. ೧೯೫೪ರಲ್ಲಿ ಇವರ ಮಗ, ಈಗ ಪ್ರಸಿದ್ಧ ಸಾಹಿತಿಯಾಗಿರುವ ಜಯಂತ ಜನಿಸಿದರು.

ಸಾಹಿತ್ಯ[ಬದಲಾಯಿಸಿ]

ಗೌರೀಶ ಕಾಯ್ಕಿಣಿಯವರ ಲೇಖನ ವ್ಯವಸಾಯ ೧೯೩೦ರಿಂದಲೇ ಪ್ರಾರಂಭವಾಯಿತು. ಕನ್ನಡ ಹಾಗು ಮರಾಠಿ ಭಕ್ತಿಗೀತೆಗಳ ಸಂಕಲನವಾದ "ಶಾಂಡಿಲ್ಯ ಪ್ರೇಮಸುಧಾ" ಇವರ ಮೊದಲ ಕವನಸಂಕಲನ.

ಕೃತಿಗಳು[ಬದಲಾಯಿಸಿ]

ಕಾವ್ಯ[ಬದಲಾಯಿಸಿ]

  • ಶಾಂಡಿಲ್ಯ ಪ್ರೇಮಸುಧಾ
  • ಗಂಡು ಹೆಣ್ಣು
  • ಪ್ರೀತಿ

ನಾಟಕ[ಬದಲಾಯಿಸಿ]

  • ಒಲವಿನ ಒಗಟು
  • ಕ್ರೌಂಚಧ್ವನಿ (ಗೀತರೂಪಕಗಳು)

ರೇಡಿಯೊ ನಾಟಕ[ಬದಲಾಯಿಸಿ]

  • ಕರ್ಣಾಮೃತ
  • ಆಕಾಶ ನಾಟಕಗಳು
  • ಮೇನಕಾ
  • ತಾರಾ
  • ದೀಪಾವಳಿ
  • ನರಕ-ಚತುರ್ದಶಿ
  • ನೃಸಿಂಹಾವತಾರ
  • ಅಂಬಾ (ಕೊಂಕಣಿ)
  • ಶಬರಿ
  • ಗೋಪಿಕೃಷ್ಣ
  • ವಿಷಯ ಪತ್ರಲೇಖನ
  • ಧ್ರುವಕುಮಾರ (ಕೊಂಕಣಿ)

ಕಥಾಸಂಕಲನ[ಬದಲಾಯಿಸಿ]

  • ವಿಶ್ವದ ಆಖ್ಯಾಯಿಕೆಗಳು

ಪ್ರವಾಸ ಸಾಹಿತ್ಯ[ಬದಲಾಯಿಸಿ]

  • ದೇವತಾತ್ಮ (ಹಿಮಾಲಯ ಪ್ರವಾಸವರ್ಣನೆ)

ವ್ಯಕ್ತಿಚಿತ್ರಣ[ಬದಲಾಯಿಸಿ]

  • ಪಶ್ಚಿಮದ ಪ್ರತಿಭೆ -ಭಾಗ-೧
  • ಪಶ್ಚಿಮದ ಪ್ರತಿಭೆ -ಭಾಗ-೨,
  • ಸತ್ಯಾರ್ಥಿ
  • ಭಾರತೀಯ ವಿಜ್ಞಾನಿಗಳು, ಭಾಗ-೧
  • ಭಾರತೀಯ ವಿಜ್ಞಾನಿಗಳು, ಭಾಗ-೨
  • ಕೇಶವಸುತ
  • ನಾನಾಲಾಲ
  • ಶ್ಯಾಮರಾವ ವಿಠ್ಠಲ ಕಾಯ್ಕಿಣಿ
  • ಥಾಮಸ್ ಎಡಿಸನ್
  • ಪಾಂಡೇಶ್ವರ ಗಣಪತಿರಾವ
  • ಗ್ರೀಕ ದಾರ್ಶನಿಕರು

ಪರಿಚಯ ಲೇಖನ[ಬದಲಾಯಿಸಿ]

  • ಗೋಕರ್ಣದ ಕಥೆ (ಪರಿಚಯ )
  • ಕರ್ನಾಟಕದ ಸಿಂಡ್ರೆಲ್ಲಾ (ಉತ್ತರ ಕನ್ನಡದ ಜನ ಜಾತಿ ಪರಿಚಯ)

ಸಾಹಿತ್ಯ ಸಮೀಕ್ಷೆ[ಬದಲಾಯಿಸಿ]

ವೈಚಾರಿಕ[ಬದಲಾಯಿಸಿ]

  • ಮನೋವಿಜ್ಞಾನದ ರೂಪರೇಖೆಗಳು
  • ಮಾರ್ಕ್ಸವಾದ
  • ಬಾಳಿನ ಗುಟ್ಟು
  • ವಿಚಾರವಾದ
  • ಸ್ವಾತಂತ್ರ್ಯೋತ್ತರ ವಿಚಾರ ಸಾಹಿತ್ಯ
  • ಸಂಪ್ರದಾಯ ಮತ್ತು ಸಣ್ಣ ಕುಟುಂಬ
  • ಕಟಾಕ್ಷ (ವೈಚಾರಿಕ ಲೇಖನಗಳ ಸಂಕಲನ)
  • ನವಮಾನವತಾವಾದ
  • ನಾಸ್ತಿಕನು ಮತ್ತು ದೇವರು
  • ಆರ್ಕೆಸ್ಟ್ರಾ ಮತ್ತು ತಂಬೂರಿ
  • ಲೋಕಾಯತ (ಚಾರ್ವಾಕ ದರ್ಶನ)

ಅನುವಾದ[ಬದಲಾಯಿಸಿ]

  • ಭಾರತೀಯ ತತ್ವಜ್ಞಾನದ ಇತಿಹಾಸ (ಮೂಲ:ಮರಾಠಿ)
  • ಪಂಜಾಬಿ ಕತೆಗಳು
  • ಬಿಳಿಯ ಕೊಕ್ಕರೆ
  • ಮಣ್ಣಿನ ಮನುಷ್ಯ
  • ಮಲೆನಾಡಿಗರು
  • ಬರ್ಲಿನ್ ಬಂದಿತು ಗಂಗೆಯ ತಡಿಗೆ
  • ವ್ಯಾಸಪರ್ವ (ಮೂಲ ಮರಾಠಿ:ದುರ್ಗಾ ಭಾಗವತ)

ಇಂಗ್ಲಿಷ್ ಕೃತಿಗಳು[ಬದಲಾಯಿಸಿ]

  • ಶ್ಯಾಮರಾವ ವಿಠ್ಠಲ ಕಾಯ್ಕಿಣಿ
  • ನ್ಯಾಷನಲ್ ಇಂಟಗ್ರೇಷನ್ ಇನ್ ಆಕ್ಶನ್
  • ಸರ್ ಎಂ. ವಿಶ್ವೇಶ್ವರಯ್ಯ

ಕೊಂಕಣಿ ಕೃತಿಗಳು[ಬದಲಾಯಿಸಿ]

  • ಮೀನಾಕ್ಷಿ (ಕವನ ಸಂಕಲನ)

ಮರಾಠಿ ಕೃತಿಗಳು[ಬದಲಾಯಿಸಿ]

ಸಮಗ್ರ[ಬದಲಾಯಿಸಿ]

  • ಸಮಗ್ರ ಸಂಪುಟ ಭಾಗ-೧
  • ಸಮಗ್ರ ಸಂಪುಟ ಭಾಗ-೨
  • ಸಮಗ್ರ ಸಂಪುಟ ಭಾಗ-೩
  • ಸಮಗ್ರ ಸಂಪುಟ ಭಾಗ-೪
  • ಸಮಗ್ರ ಸಂಪುಟ ಭಾಗ-೫
  • ಸಮಗ್ರ ಸಂಪುಟ ಭಾಗ-೬
  • ಸಮಗ್ರ ಸಂಪುಟ ಭಾಗ-೭
  • ಸಮಗ್ರ ಸಂಪುಟ ಭಾಗ-೮

ಇವಲ್ಲದೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಸಾವಿರಾರು ಬಿಡಿ ಬರಹಗಳು ಹಾಗು ಅಂಕಣಗಳು ಪ್ರಕಟವಾಗಿವೆ.

ಸಾಮಾಜಿಕ[ಬದಲಾಯಿಸಿ]

ಗೌರೀಶ ಕಾಯ್ಕಿಣಿಯವರು ಅನೇಕ ಸಾಮಾಜಿಕ ಹಾಗು ಸಾಂಸ್ಕೃತಿಕ ಹೊಣೆಗಾರಿಕೆಗಳನ್ನು ಹೊತ್ತುಕೊಂಡಿದ್ದರು:

  • ಪ್ರೊಗ್ರೆಸಿವ್ ಆಫ಼್ ಮೈಸೂರು ಪತ್ರಿಕಾ ಮಂಡಳಿ ಸದಸ್ಯ (೧೯೬೪)
  • ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ವಿಸ್ತರಣ ವಿಭಾಗದ ಸಲಹಾ ಸಮಿತಿ ಸದಸ್ಯರಾಗಿದ್ದರು (೧೯೬೫ - ೧೯೭೦)
  • ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ (೧೯೭೩ - ೧೯೮೩)
  • ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆ (೧೯೭೩)
  • ಧಾರವಾಡದ ಆಕಾಶವಾಣಿ ನಿಲಯದ ಸಲಹಾ ಸಮಿತಿ ಸದಸ್ಯರಾಗಿದ್ದರು (೧೯೭೪-೭೫)
  • ಉತ್ತರ ಕನ್ನಡ ಜಿಲ್ಲಾ ಲೇಖಕ, ಪ್ರಕಾಶಕ ಹಾಗು ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದರು

ಪತ್ರಿಕೋದ್ಯಮ[ಬದಲಾಯಿಸಿ]

ಗೌರೀಶ ಕಾಯ್ಕಿಣಿಯವರು ನಾಗರಿಕ (ಕಾರವಾರ) ಹಾಗು ಬೆಳಕು (ಧಾರವಾಡ) ಪತ್ರಿಕೆಗಳ ಸಂಪಾದಕ ಮಂಡಲಿಯ ಸದಸ್ಯರಾಗಿದ್ದರು

ಅಂಕಣಗಳು[ಬದಲಾಯಿಸಿ]

  • ವಾರದ ಉಪ್ಪಿನಕಾಯಿ (ಕಾವ್ಯನಾಮ: 'ಅಡಿಗೆ ಭಟ್ಟ') - ಜನಸೇವಕ ಪತ್ರಿಕೆ(ಅಂಕೋಲಾ)
  • ವಾರದ ವಿಶ್ವ (ಕಾವ್ಯನಾಮ: 'ವೈಶ್ವಾನರ') - ಜನಸೇವಕ ಪತ್ರಿಕೆ(ಅಂಕೋಲಾ)
  • ಸಾಹಿತ್ಯ ದರ್ಪಣ (ಕಾವ್ಯನಾಮ: 'ಜಿ. ವಿ. ಕೆ') - ಜನಸೇವಕ ಪತ್ರಿಕೆ(ಅಂಕೋಲಾ)
  • 'ಜನಪ್ರಗತಿ' ಸಾಪ್ತಾಹಿಕದಲ್ಲಿ 'ವೈಶ್ವಾನರ' ಹೆಸರಿನಲ್ಲಿ
  • 'ಸಮನ್ವಯ'ದಲ್ಲಿ(ಸಿರ್ಸಿ) 'ಗೌರೀಶಂಕರ' ಹೆಸರಿನಲ್ಲಿ
  • ಕಂಡದ್ದು ಆಡದ್ದು - 'ಕರಾವಳಿ ಗ್ರಾಮ ವಿಕಾಸ' (ಹೊನ್ನಾವರ)
  • ನನಗೆ ನೆನಪಾದಂತೆ - ಕಸ್ತೂರಿ ಮಾಸಿಕ
  • ಹೊಂಗಿರಣ - ಮಲ್ಲಿಗೆ ಪತ್ರಿಕೆ (೧೯೮೧-೧೯೮೩)
  • ಮಿಂಚು ಗೊಂಚಲು - ತರಂಗ ವಾರಪತ್ರಿಕೆ

ಪ್ರಶಸ್ತಿಗಳು[ಬದಲಾಯಿಸಿ]

ಗೌರೀಶ ಕಾಯ್ಕಿಣಿಯವರಿಗೆ ಸಂದ ಪ್ರಶಸ್ತಿಗಳು ಅನೇಕ:

ನಿಧನ[ಬದಲಾಯಿಸಿ]

ಗೌರೀಶ ಕಾಯ್ಕಿಣಿಯವರು, ೯೦ರ ವಯಸ್ಸಿನಲ್ಲಿ, ೧೪ ನವೆಂಬರ ೨೦೦೨ರಂದು ಗೋಕರ್ಣದಲ್ಲಿ ನಿಧನರಾದರು.[೧][೨]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ - ಸಂಪುಟ ೧೦ - ಸಂಕೀರ್ಣ
  2. ೨.೦ ೨.೧ "Litterateur Gourish Kaikini is dead". ದಿ ಟೈಮ್ಸ್ ಆಫ್‌ ಇಂಡಿಯಾ. 14 November 2002. Retrieved 21 July 2007.
  3. "Kannada litterateur Kaikini remembered". Deccan Herald. Archived from the original on 29 September 2007. Retrieved 21 July 2007.