ಗೋಕರ್ಣದ ಇತಿಹಾಸ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Merge-arrows.svg
ಈ ಲೇಖನವನ್ನು ಗೋಕರ್ಣ ಹೆಸರಿನ ಲೇಖನದೊಂದಿಗೆ ಸೇರಿಸಬೇಕೆಂದು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪನೆಯನ್ನು ಇಲ್ಲಿ ಚರ್ಚಿಸಿ

[[ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯದ ಇತಿಹಾಸ ]

೨]ಐತಿಹಾಸಿಕವಾಗಿ ಗೋಕರ್ಣ[ಬದಲಾಯಿಸಿ]

ಈ ಕ್ಷೇತ್ರದ ದೇವಾಲಯಗಳು ಕಟ್ಟಲ್ಪತ್ತಿದ್ದು ಪೂಜಾ ವಿನಿಯೋಗಗಳ ವ್ಯವಸ್ಥೆ ಎಂದಿನಿಂದಾಯಿತು ಎಂಬುದರ ಕಾಲನಿರ್ಣಯವು ಸಾದ್ಯಂತವಾಗಿ ದೊರೆಯಲಾರದು. 1983_Gazetteer Vol2_Chapter9,Kanara 1904 Gazetteer, Kanara 1883 Gazetteer ವೀಕ್ಷಿಸಿದಾಗ ಬಹು ಮುಖ್ಯವಾದ ಅಂಶಗಳು ತಿಳಿಯುತ್ತವೆ.ಹಾಗೆಯೇ ಗೋಕರ್ಣದಲ್ಲಿಯ ಶಿಲಾಶಾಸನಗಳು, ದೇವಾಲಯಗಳಲ್ಲಿಯ ಬರಹಗಳು, ಮದ್ರಾಸನಲ್ಲಿರುವ ಪುರಾತತ್ವ ಇಲಾಖೆಯ ದಾಖಲೆಗಳು ಅನೇಕ ಐತಿಹಾಸಿಕ ಸಂಗತಿಗಳನ್ನು ಹೊರಹಾಕುತ್ತವೆ. ಶ್ರೀ ಮಹಾಬಲೇಶ್ವರ ದೇವಾಲಯದ ನಂದೀಮಂಟಪದ ಪಶ್ಚಿಮ ದ್ವಾರದ ಮೇಲೆ ``ಪಾರುಪತ್ಯಗಾರ ಹಲಸುನಾಡು ವಿಶ್ವೇಶ್ವರಯ್ಯನ ಮುಖಾಂತರ ಶರ್ವರೀ ಸಂವತ್ಸರದ ಕಾರ್ತಿಕ ಶುದ್ಧ ೧ ರಲ್ಲೂ ರಂಗ ಮಂಟಪದ ಕೆಲಸ ಮುಗಿದಿದೆ``, ಎಂದು ಶಿಲಾಲೇಖವಿದೆ. ಆದರೆ ಇದರಲ್ಲಿ ಶಕೆ ಬರೆದಿಲ್ಲ. ಆದಾಗ್ಯೂ ಇದನ್ನು ಕಟ್ಟಿ ಬಹುಕಾಲವಾಗಿರಬೇಕೆಂದು ಸ್ಪಷ್ಟವಾಗುತ್ತದೆ. ಇದನ್ನು ನಗರ ಸಂಸ್ಥಾನಿಕರು ಈ ಪಾರುಪತ್ಯಗಾರನ ಮುಖಾಂತರ ಕಟ್ಟಿಸಿದರೆಂಬ ಐತಿಹ್ಯವಿದೆ. ಇತರ ದೇವಾಲಯಗಳನ್ನು ಬೇರೆ ಬೇರೆ ಭಜಕರು ಕಟ್ಟಿಸಿ ಪೂಜಾ ವಿನಿಯೋಗಗಳ ಬಗ್ಗೆ ಉಂಬಳಿ ಹಾಕಿಸಿಕೊತ್ತಿರಬೇಕೆಂದು ಕೆಲವು ದಾಖಲೆಗಳಿಂದ ತಿಳಿದುಬರುತ್ತದೆ. ಈ ಕ್ಷೇತ್ರವು ಈ ಪ್ರಾಂತದ ಉಳಿದ ಸ್ಥಳಗಳಂತೆ ಮೊದಲು ಅಬ್ರಾಹ್ಮಣ್ಯವಾಗಿತ್ತೆಂತು ಇಲ್ಲಿಯ ಬ್ರಾಹ್ಮಣರಲ್ಲಿರುವ ಒಂದು ಶಿಲಾಲೇಖನದ ನಕಲಿನಿಂದ ತಿಳಿದು ಬರುತ್ತದೆ. ಈ ನಕಲು ಸಂಸ್ಕೃತ ಗದ್ಯ ರೂಪದಲ್ಲಿದೆ. ಇದಕ್ಕೂ ಉತ್ತರ ಸಹ್ಯಾದ್ರಿ ಎಂಬ ಪುರಾಣದ ೪೮ ಮತ್ತು ೮೬ ನೇ ಅಧ್ಯಾಯಗಳ ಹವ್ಯಕರ ಉತ್ಪತ್ತಿ ಎಂಬ ಭಾಗಕ್ಕೂ ಪೂರ್ಣ ಸಾಮ್ಯವಿರುತ್ತದೆ.
ವರದಾನದೀ ತೀರದ ಜಯಂತಿ ಎಂಬ ರಾಜಧಾನಿಯಲ್ಲಿ ಮಯೂರವರ್ಮನೆಂಬ ರಾಜನು ಆಳುತ್ತಿದ್ದನು. ಅವನು ಯಾತ್ರಾರ್ಥವಾಗಿ ಗೋಕರ್ಣಕ್ಕೆ ಬಂದಾಗ ಇಲ್ಲಿ ಬೇಡರು ವಾಸವಾಗಿದ್ದು ಅಬ್ರಾಹ್ಮಣ್ಯವಾಗಿರುವುದನ್ನು ಕಂಡು ವ್ಯಸನಪಟ್ಟು ಅಹಿಚ್ಛತ್ರ ದಕ್ಷಿಣಪಾಂಚಾಲಕ್ಕೆ ಹೋಗಿ ದ್ರವ್ಯದಿಂದಲೂ ವಿನಯದಿಂದಲೂ ಬ್ರಾಹ್ಮಣರನ್ನು ಸಂತೋಷಪಡಿಸಿ ಕರೆತಂದು ಈ ಪ್ರಾಂತದಲ್ಲಿ ಉಂಬಳಿಗಳನ್ನು ಹಾಕಿಕೊಟ್ಟು ಬ್ರಾಹ್ಮಣರನ್ನು ಸಂಸ್ಥಾಪಿಸಿದನು. ಈ ಕಾಲಕ್ಕೆ ಈ ಕ್ಷೇತ್ರದಲ್ಲಿ ಬ್ರಾಹ್ಮಣರ ವಸತಿಗಾಗಿ ಪೂಜಾ ವಿನಿಯೋಗಗಳು ನದೆಯುತ್ತಿರಬೇಕು. ಆದರೆ ಮುಂದೆ ಮಯೂರವರ್ಮನ ಮರಣಾನಂತರ ಕಳ್ಳರ ಬಾಧೆಯಿಂದ ಬ್ರಾಹ್ಮಣರು ಈ ಪ್ರಾಂತವನ್ನೇ ಬಿಟ್ಟು ಸ್ವದೇಶಕ್ಕೆ ಹೋದರು.ಮಯೂರವರ್ಮನ ಮಗನಾದ ತ್ರಿನೇತ್ರ ಕದಂಬನು ಗೋಕರ್ಣ ಯಾತ್ರೆಗೆ ಬಂದಾಗ ಈ ಪ್ರಾಂತದ ರಾಜನಾದ ಚಂಡಸೇನನು ಅವನನ್ನು ಸತ್ಕರಿಸಿ ತನ್ನ ರಾಜ್ಯದಲ್ಲಿ ಬ್ರಾಹ್ಮಣ ವಸತಿಯನ್ನು ಉಂಟುಮಾದಬೇಕಾಗಿ ಕೇಳಿಕೊಂಡನು. ತ್ರಿನೇತ್ರ ಕದಂಬನು ಬ್ರಾಹ್ಮಣರನ್ನು ಕರೆತಂದು ಸ್ಥಾಪಿಸಿದ್ದಲ್ಲದೇ ತನ್ನ ತಂಗಿಯಾದ ಕನಕಾವತಿಯನ್ನು ಚಂಡಸೇನನ ಮಗಲೋಕಾದಿತ್ಯನಿಗೆ ಕೊಟ್ಟು ಆಪ್ತತ್ವ ಮಾಡಿಕೊಂದನು. ಆದರೆ ಈ ಪ್ರಾಂತದಲ್ಲಿ ಹುಬ್ಬಾಸಿಗನೆಂಬ ಚಾಂಡಾಲನ ಬಾಧೆಯಾಗಲು ಬ್ರಾಹ್ಮಣರಲ್ಲಿ ಕೆಲವರು ತಮ್ಮ ದೇಶಕ್ಕೆ ಹೊರಟುಹೋದರು. ಇನ್ನು ಕೆಲವರು ಜಾತಿಭ್ರಷ್ಠರಾಗಿ ಚಾಂಡಾಲರಾದರು.
ಲೋಕಾದಿತ್ಯನು ತನ್ನ ಮಗಳ ಸ್ವಯಂವರದ ನೆಪ ಮಾಡಿ ಹುಬ್ಬಾಸಿಗನನ್ನು ಸೇನೆ ಸಹಿತ ನಾಶ ಮಾಡಿದ ಮತ್ತು ಅಹಿಚ್ಛತ್ರಕ್ಕೆ ಹೋಗಿ ಭಟ್ಟಾಚಾರ್ಯ ಪ್ರಮುಖರಿಂದ ಬ್ರಾಹ್ಮಣರನ್ನು ಸಮಾಧಾನಪಡಿಸಿ ಏಳು ಗೋತ್ರದ ಇಪ್ಪತ್ನಾಲ್ಕು ಬ್ರಾಹ್ಮಣ ಕುಟುಂಬಗಳನ್ನು ತಂದು ಅವರಿಗೆ ಉಂಬಳಿ ಹಾಕಿ ಕೊಟ್ಟು ಈ ಪ್ರಾಂತದಲ್ಲಿ ಇಟ್ಟನು. ಇದರಲ್ಲಿ ನಾಲ್ಕು ಗೋತ್ರದ ಎಂಟು ಕುಟುಂಬಗಳನ್ನು ಗೋಕರ್ಣದಲ್ಲಿಟ್ಟನು. ಮತ್ತು ಈ ಬ್ರಾಹ್ಮಣರು ಸ್ವದೇಶಕ್ಕೆ ಹೋಗಬಾರದೆಂದು ಇವರ ವೇಷ ಭಾಷೆಗಳನ್ನು ಬದಲಾಯಿಸಿದನು. ಮುಂದೆ ಈ ಪ್ರಾಂತವು ವಿಜಯನಗರದ ಅರಸರ ವಶಕ್ಕೆ ಹೋದ ಕಾಲದಲ್ಲಿ ಮಂತ್ರಿಗಳಾಗಿದ್ದು ಸನ್ಯಾಸವನ್ನು ತೆಗೆದುಕೊಂಡ ಮಾಧವಾಚಾರ್ಯರು ಶಕೆ ೧೩೧೩ ನೇ ಪ್ರಜಾಪತಿ ಸಂವತ್ಸರದ ಉತ್ತರಾಯಣದ ವಸಂತ ಋತು ವೈಶಾಖ ಮಾಸ ಬಹುಳ ಅಮಾವಾಸ್ಯೆಯ ಸೂರ್ಯಗ್ರಹಣದಲ್ಲಿ ತಾಮ್ರಶಾಸನ ಪೂರ್ವಕವಾಗಿ ಈ ಕ್ಷೇತ್ರದ ಬ್ರಾಹ್ಮಣರಿಗೆ ಈ ಮೇಲಿನ ಪ್ರಾಂತಗಳಿಂದ ವೃತ್ತಿ(ಸರ್ಥ) ವನ್ನು ಕಲ್ಪಿಸಿದರೆಂದು ಆ ಶಾಸನದ ನಕಲಿನಿಂದ ತಿಳಿಯುತ್ತದೆ. ( ಈ ನಕಲಿನಲ್ಲಿ ಹಿಂದಿನ ಸಂಗತಿಗಳನ್ನು ಸ್ವಲ್ಪದಲ್ಲಿ ವಿವರಿಸಿದ್ದಾರೆ.) ಈ ಮಧ್ಯದಲ್ಲಿ ಶ್ರೀ ಮಹಾಬಲೇಶ್ವರ ದೇವಾಲಯದ ಅರ್ಚಕರು ಜಂಗಮರಿದ್ದರೆಂದಲೂ ಅವರು ದೇವತ್ವವನ್ನು ಅಪಹರಿಸಿದ್ದಕ್ಕಾಗಿ ನಿರ್ವಂಶರಾದರೆಂದೂ ಒಂದು ದಾಖಲೆಯಿಂದ ಅರ್ಥವಾಗುತ್ತದೆ.
ಈ ಪ್ರಾಂತವು ಮೈಸೂರು ಅರಸನಾದ ಹೈದರಲಿ(ಬಾಬಹದ್ದರಿ) ವಂಶಕ್ಕೆ ಹೋಗುವ ಮೊದಲು ಕೆಳದಿ(ಇಕ್ಕೇರಿ) ಸಂಸ್ಥಾನಿಕರ ವಶದಲ್ಲಿತ್ತೆಂದೂ ಚೆನ್ನಮ್ಮಾಜಿ ಎಂಬ ರಾಣಿಯೂ, ಸೋಮಶೇಖರನೆಂಬ ನಾಯಕನೂ ಆಳಿದರೆಂದೂ ಇವರು ಲಿಂಗಾಯತ ಮತದವರಿರಬೇಕೆಂತಲೂ ಈ ಅರಸರ ಮೊಹರುಳ್ಳ ಕೆಲ ಸನದುಗಳಿಂದ ತಿಳಿಯುತ್ತದೆ. ಇಲ್ಲಿಯ ಬ್ರಾಹ್ಮಣರು ಈ ಸಂಸ್ಥಾನಿಕರಲ್ಲಿ ಹೋಗಿ ಬೇರೆ ಬೇರೆ ಪೂಜಾ ವಿನಿಯೋಗಗಳನ್ನು ನೇಮಿಸಿಕೊಂಡು ಜಮೀನು ಊಂಬಳಿ ಹಕಿಸಿಕೊಂಡು ಬಂದರೆಂದು ಈ ಸನದುಗಳಿಂದಲೂ ಶ್ರೀ ಮಹಾಬಲೇಶ್ವರ ದೇವಸ್ಠಾನದ ಹಿಂದಿನ ಜಮಾಖರ್ಚಿನಿಂದಲೂ ಸಿದ್ಧವಾಗುತ್ತದೆ. ಈ ಪೂಜಾದಿ ವಿನಿಯೋಗಗಳಿಗೆ ಉಪಾದಿಗಳೆಂದು ಹೆಸರು. ಇದನ್ನು ಬೇರೆ ಬೇರೆಯವರು ಬೇರೆ ಬೇರೆಯವರ ಕಾಲಕ್ಕೆ ಪಡೆದುಕೊಂದರೆಂಬುದೂ ಸ್ಪಷ್ಟವಿರುತ್ತದೆ.

೩]ಗೋಕರ್ಣದ ತಾಮ್ರಶಾಸನ[ಬದಲಾಯಿಸಿ]

॥श्रीः॥
नमस्तुंग शिरस्तुंग चन्द्रचामर चारवे ।
त्रैलोक्यनगरारम्भ मूलस्तम्भाय शम्भवे ॥
स्वस्ति श्रीमज्जयाभ्युदय नृपशालीवाहनशकवर्ष १३१३ प्रवर्तमान प्रजापति नाम संवत्सरे उत्तरायणे वसन्त ऋतौ वैशाखमासे कृष्णेपक्षे अमायां सौम्य वासरे सूर्योपरागे भार्गव श्वामित्रां‍ऽगिरस :वासिष्ठेभ्यो महद्भ्यो ब्राह्मणेभ्यो श्रीमन्माधवाचार्यैर्दत्त ताम्रलेखन पत्रवर्णन पत्रिका इयम् ॥

(कीदृक्?)

इतः पूर्वं श्री मयूरवर्माख्यो राजा यात्रालुः श्री मद्गोकर्ण क्षेत्रमगात् । तत्र तावदाभीराभिः व्याप्तं महाबलं दृष्ट्वा अब्राह्मण्यं मन्वानो व्याकुल चित्तः सन् स्वविषयं प्रत्याजगाम । तदा कतिपयाहस्सु गतेषु ब्राह्मण्याधिष्ठितं पाञ्चालदेशमभिययौ । तत्र साग्निमतो विप्रानाहूय बहुशो द्रव्यवितरेण सन्तोष्य श्रीगोकर्णक्षेत्र निवासाय स्थितये च पर्यालोच्य तैः साकमागत्य तत्र स्थापयां चक्रे । ते वै शत शृंगोपत्यकासु निवसन्तः श्री महाबलेश्वरार्चनं बहुकालं निन्युः । ततश्चोरभीताः पलायनपराः सन्तो ब्रह्मदेशमेवाऽभिसेदुः । पुनस्तदब्राह्मण्यमासीत् । स एव चक्रवर्ती निशम्य छद्मना नैपथ्यान्तरं दधानो झटिति तमेव दक्षिण पांचालदेशमधिगम्य भूसुराणां वास्तुनि पृथक् पृथक् सुवर्णमेकैकं निधाय हायनं निन्ये । किमेतदिति सन्दिग्धास्तमन्वेषमाणाः स्युः । द्वित्रिदिने दृक्पथम् गतो मयूरवर्माऽपि ब्रह्मनिष्ठान् वशीकृत्य चतुर्विंशति संख्याकान् यजनशीलान् समादाय तेष्वष्टौ भार्गव प्रभृति चतुष्टय गोत्र प्रवरान् संगृह्य परिशिष्ट षोडश संस्कार युतेभ्यः महतः अग्रहार प्रवृत्ति प्रदानेन दक्षिण प्रान्तदेशे स्थापयित्वा पुनः पूर्ववत् गोकर्णे स्थापयांचक्रे । मुहुर्मुहुः क्षेत्रं हित्वा स्वदेशगतान् तान् देशीय वेष भाषाभ्यां च विनिमय्य तेभ्यो वृत्तिस्वाम्यं अदात् । वृत्तिस्तु- श्रीताम्रगौरीसमेतश्रीमन्महाबलेश्वरस्य त्रिषवणेषु महापूजोपचारं अग्रिम मान्यत्वं च भार्गव गोत्रोद्भवाय सर्वतन्त्रस्वतन्त्रत्वं,नियन्तृत्वं च, विश्वामित्र गोत्रोद्भवाय आचार्यत्वं दण्डनेतृत्वं च, अंगीरसगोत्रोद्भवाय समय निर्णेतृत्वं, वासिष्ठगोत्रोद्भवाय श्री सन्निधौ क्षेत्रवाशिनां चातुर्वर्ण्यानां नियोज्य योजकत्वं युष्मानेवाभिसरतु, इत्याज्ञापयित्वाऽगात् । अथ कस्मिंश्चित् समये हुब्बाइकाह्वयेन केनचित्सामन्तः चाण्डालेन बीबत्सवो भूत्वा भ्रष्टयाजनपरा निर्गत्य श्रीभट्टभास्कर पण्डित धुरीणं प्राप्य ते तु स्वोदन्तं व्यजिज्ञपुः- (तत्कथा वर्ण्यते)-
नर्मदा दक्षिणस्यां कर्नाटकदेशे तुंगभद्रानदीतीरे पंपानामसरः क्षेत्रं चास्ति अदावस्य विजयानगर इति । तत्र वैदिकमार्गप्रवर्तको बुक्क भूपालः सार्वभौमो बोभवीतिस्म । तत्कुलगुरुः मन्त्री राजकार्य दुरन्धरः माधवाचार्यः यः शास्त्रे लौकिके व्यवहारे च तस्य महती प्रतिष्ठाऽऽसीत् । तस्य जन्म, शा.शके १३००-१३१३? सूक्तकाले साक्षतोदक पूर्वकं मयूर वर्मप्रभृति लोकादित्य शास्त्रानुसारेणैव भुक्क भूपति समक्षं -वृत्तिं ताम्रशासनं च दत्तवान् । स्वयम् श्रीमत्सकल साम्राज्य दुरन्धरेण बुक्कभूपतिसूनोः हरिहरस्य मन्त्रीभूत्वा, अन्ते ऐहिक सुखनिरपेक्षेण माधवाचार्येण अपरस्मिन् वयसि चतुर्थाश्रमः स्वीकृतः । तस्मिन्नाश्रमेऽपि श्रीमद्भगवतः शंकराचार्यस्य शारदापीठे शृंगबेरपुरे तत्पट्टाधिकारमुररीकृत्य शंकराचार्यात् षड्विंशतितमो विद्यारण्यभारतिरासीत् । श्रीमच्छंकराचार्य भगवत्पादपूज्य शंकरानन्दभारति स्थिति समये भट्टभास्कर संज्ञको महापण्डितवर्यः शाक्तोऽभूत् । अथ तान् मिलित्वा श्री भास्करपण्डितवर्योऽपि श्री गॊकर्णमण्डलवासिनां-इक्केरि, बेळगि, सिद्धापुर, (बुधापुर) सोदापुर, मल्लापुरान्तवर्तिनां तद्राजाधिराजप्रभृतिभ्यः सामन्तेभ्यो दापितताम्रसाधनेन संगृहीत श्रीमन्महाबलेश्वर प्रसाद प्रसन्नानां प्रतिवर्षं वर्तमान वर्तिष्यमाण वर्षाशन भूस्वास्थ्यं सर्वकर्मसु बहुमान्यं च दत्तवान् । अद्य प्रभृति अविच्छिन्न सन्तति पारम्पर्य धर्मनिष्ठाः श्री गोकर्णक्षेत्रे आचन्द्रार्कं निवसन्तु । अलं पल्लवितैः अत्र साक्षिणः-
आदित्य चन्द्रावनिलोऽनलश्च द्यौर्भूमिरापो हृदयं यमश्च ।
अहश्च रात्रिश्च उभेच सन्ध्ये धर्मोऽपि जानाति नरस्य वृत्तम् ॥
॥ श्री रस्तु ॥
इदं- दत्तात्रेयेश्वरस्य पूर्वस्यां द्वादशधनुष्प्रमाणे शिलालेखनमस्ति ॥ शा.शके-१७९५ लब्धमेतत् ॥
॥ शुभमस्तु ॥

॥शिलालेखन पत्रिका ॥

೪]ಗೋಕರ್ಣದ ತೀರ್ಥಗಳು[ಬದಲಾಯಿಸಿ]

ಸ್ಕಂದ ಪುರಾಣಾಂತರ್ಗತ ಗೋಕರ್ಣ ಖಂಡ ಹೇಳುವಂತೆ ಗೋಕರ್ಣದಲ್ಲಿ ಅನೇಕ ತೀರ್ಥಗಳು ಅನೇಕ ಲಿಂಗಗಳೂ ಪ್ರಸಿದ್ಧವಾಗಿವೆ. ಅವುಗಳಲ್ಲಿ ೩೩ ಪ್ರದಾನ ಲಿಂಗಗಳು, ೩೩ ತೀರ್ಥಗಳು ಪ್ರಧಾನವಾಗಿವೆ. ಅವುಗಳಲ್ಲಿ ಕೆಲವು ಹೀಗಿವೆ=

ಗೋಕರ್ಣ ತೀರ್ಥ[ಬದಲಾಯಿಸಿ]

  • ಗೋಕರ್ಣ ತೀರ್ಥಇದು ಗರ್ಭ ಗುದಿಯಲ್ಲಿ ಇದೆ

೫]ಗೋಕರ್ಣದ ವಿದ್ವಾಂಸರುಗಳು[ಬದಲಾಯಿಸಿ]

೧] ದೈವರಾತರು

೨] ಭಡ್ತಿ ದೇವರು ಶಾಸ್ಥ್ರಿಗಳು

೩] ಭಡ್ತಿ ಗಣಪತಿ ಮಾಸ್ತರರು

೪] ಭಡ್ತಿ ಶಿವರಾಮ ಶಾಸ್ತ್ರಿಗಳು

೫] ಚಿತ್ರಿಗೆ ಗಣಪತಿ ಭಟ್

೬] ಚಿತ್ರಿಗೆ ಗಜಾನನ ಭಟ್

೭] ರಾಮ ಭಟ್ ಪನ್ನಿ

೮] ಕೃಷ್ಣ ಭಟ್ ಪನ್ನಿ

೯] ಪರಮೇಶ್ವರ ಭಟ್ ಬೈಲ್ ಕೇರಿ

೧೦]ರಾಮಚಂದ್ರ ಭಟ್ ಕೊಡ್ಲೆಕೆರೆ

೧೧] ಗಣಪತಿ ರಾಮಚಂದ್ರ ಭಟ್ ಹಿರೇ

೧೨] ಕೃಷ್ಣ ರಾಮಚಂದ್ರ ಭಟ್ ಹಿರೇ

೧೩]ಸುಬ್ರಾಯ ಭಟ್ ಕೊಡ್ಲೆಕೆರೆ

೧೪]ಮಾರಿಗೋಳಿ ಪುಟ್ಟ ಪುರಾಣಿಕರು

೧೫]ಚಿಂತಾಮಣಿ ಗುಣಿ ಶಾಸ್ತ್ರಿಗಳು

೧೬]ಉಮಾಶಿವ ಉಪಾಧ್ಯಾಯ

೧೭]ಶಂಕರ ಭಟ್ ಷದಕ್ಷರಿ

೧೮]ಸೀತಾರಾಮ ಭಟ್ ಗಾಯತ್ರಿ

೧೯]ರಾಮಕೃಷ್ಣ ಭಟ್ ಗಾಯತ್ರಿ

೨೦]ದಾಮೋದರ ದೀಕ್ಷಿತರು=ಅಗ್ನಿಹೋತ್ರಿಗಳು

೨೧]ವಿಘ್ನೇಶ್ವರ ದಾಮೋದರ ದೀಕ್ಷಿತರು

೨೨] ರಾಮಚಂದ್ರ ಶಾಸ್ತ್ರಿ ಹೊಸ್ಮನೆ

೨೩] ವಿಘ್ನೇಶ್ವರ ಶಾಸ್ತ್ರಿ ಹೊಸ್ಮನೆ

೨೪] ಯಜ್ನನಾರಾಯಣ ಸಭಾಹಿತರು

೨೫]ಸೀತಾರಾಮ ಭಟ್ ಶಂಕರಲಿಂಗ

೨೬] ವಿಶ್ವನಾಥ ಉಪಾಧ್ಯಾಯರು

೨೭] ರಾಮ ಉಪಾಧ್ಯಾಯರು

೨೮] ಸೋನಿ ಭಟ್ ಜೋಗಳೇಕರ

೨೯] ಕೃಷ್ಣ ಭಟ್ ಮಯ್ಯರ್

೩೦] ಹರಿ ಭಟ್ ಮಯ್ಯರ್

೩೧] ಸಾಂಬಾ ಭಟ್ ಗಾಯತ್ರೀ

೩೨] ಅಣ್ಣ ಪಂಡಿತರು

೩೩] ವೆಂಕಟರಮಣ ಪಂಡಿತ್

೩೪] ರಾಮ ಪಂಡಿತ್

೩೫]ಮಹಾಬಲೇಶ್ವರ ಜೋಶಿ (ವೈದಿಕ ಜೋಶಿ)

೩೬]ದಿನಕರ ಭಟ್ ಜೋಗಳೇಕರ= ಶ್ರೌತ