ಗುಲ್ಜಾರ್
ವಿಕಿಪೀಡಿಯ ಇಂದ
ಹಿಂದಿ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಮತ್ತು ಗೀತ ರಚನೆಕಾರರಲ್ಲಿ ಒಬ್ಬರಾದ ಗುಲ್ಜಾರ್ (ಜನನ : ಆಗಸ್ಟ್ ೧೮, ೧೯೩೬), ಅವರ ಪೂರ್ಣ ಹೆಸರು ಸಂಪೂರನ್ ಸಿಂಗ್ ಗುಲ್ಜಾರ್.
ಪಾಕಿಸ್ತಾನದಲ್ಲಿ ಜನಿಸಿದ ಗುಲ್ಜಾರ್ ವಿಭಜನೆಯ ನಂತರ ದೆಹಲಿಗೆ ಬಂದು ನೆಲೆಸಿದರು.
ನಿರ್ದೇಶನದ ಚಿತ್ರಗಳು[ಬದಲಾಯಿಸಿ]
- ಮೇರೆ ಅಪ್ನೆ (೧೯೭೧) ಗುಲ್ಜಾರ್ ಅವರ ನಿರ್ದೇಶನದ ಮೊದಲ ಚಿತ್ರ.
- ಪರಿಚಯ್ (೧೯೭೨)
- ಕೋಷಿಶ್ (೧೯೭೪)
- ಅಚಾನಕ್ (೧೯೭೨)
- ಮೌಸಮ್ (೧೯೭೫)
- ಖುಶ್ಬೂ (೧೯೭೫)
- ಕಿತಾಬ್ (೧೯೭೭)
- ಕಿನಾರಾ (೧೯೭೭)
- ಮೀರಾ (೧೯೭೯)
- ನಮ್ಕೀನ್ (೧೯೮೨)
- ಅಂಗೂರ್ (೧೯೮೨)
- ಇಜಾಜತ್ (೧೯೮೭)
- ಲಿಬಾಸ್ (೧೯೮೮)
- ಲೇಕಿನ್ (೧೯೯೦)
- ಹೂ ತೂ ತೂ (೧೯೯೯)
- ಆಂಧಿ (೧೯೭೫)- (ಈ ಚಿತ್ರದ ನಾಯಕಿ ಸುಚಿತ್ರಾ ಸೇನ್ ಪಾತ್ರ ಭಾರತದ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರನ್ನು ಹೋಲುತ್ತಿದ್ದುದರಿಂದ ವಿವಾದಕ್ಕೀಡಾಗಿ, ಕೆಲವು ಕಾಲ ಬಿಡುಗಡೆಗೆ ಅಡೆತಡೆ ಅನುಭವಿಸಿದರೂ, ನಂತರ ಯಶಸ್ವಿ ಚಿತ್ರಗಳಲ್ಲೊಂದಾಯಿತು.
- ಮಾಚೀಸ್ (೧೯೯೬)- ಪಂಜಾಬಿನ ಭಯೋತ್ಪಾದಕತೆಯನ್ನು ಆಧಾರಿಸಿದ ಚಿತ್ರ
- ಮಿರ್ಜಾ ಗಾಲಿಬ್, ಭೀಮಸೇನ್ ಜೋಷಿ ಮತ್ತು ನಾಸಿರುದ್ದೀನ್ ಶಾ ಕುರಿತದ ಸಾಕ್ಷ್ಯ ಚಿತ್ರಗಳು.
ಕವನ ಸಂಕಲನಗಳು[ಬದಲಾಯಿಸಿ]
- ಏಕ್ ಚಾಂದ್ ಬೂಂದ್
- ರಾತ್,ಚಾಂದ್ ಔರ್ ಮೇ
- ರಾತ್ ಪಾಶ್ಮೀನ್ ಕೀ