ಗಾಳಿ ಪಳಗಿಸಿದ ಬಾಲಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಾಳಿ ಪಳಗಿಸಿದ ಬಾಲಕ
ಮೂಲ ಹೆಸರುThe Boy Who Harnessed the Wind
ಅನುವಾದಕಕರುಣಾ ಬಿ. ಎಸ್.
ದೇಶಭಾರತ
ಭಾಷೆಕನ್ನಡ
ಪ್ರಕಾರಆತ್ಮಕಥಾನಕ
ಪ್ರಕಾಶಕರುಛಂದ ಪುಸ್ತಕ
ಪ್ರಕಟವಾದ ದಿನಾಂಕ
೨೦೧೪

'ಗಾಳಿ ಪಳಗಿಸಿದ ಬಾಲಕ' ಇದು ಇಂಗ್ಲೀಷ್ ಭಾಷೆಯ The Boy Who Harnessed the Wind ಎಂಬ ಆತ್ಮಕಥಾನಕದ ಕನ್ನಡ ಅನುವಾದದ ಪುಸ್ತಕ. ಈ ಪುಸ್ತಕವನ್ನು ಕನ್ನಡಿಸಿದವರು ಕರುಣಾ ಬಿ. ಎಸ್.

ಇದು ಮಲಾವಿ ದೇಶದ ಬಾಲಕನಾದ ವಿಲಿಯಂ ಕಂಕ್ವಾಂಬಾ ಎಂಬಾತನ ಆತ್ಮಕತೆಯಾಗಿದೆ. ಅವನು ೧೫ನೇ ವಯಸ್ಸಿನಲ್ಲಿ - ೨೦೦೨ ರಲ್ಲಿ - ಸೈಕಲ್ ಮತ್ತು ಇತರ ಕೆಲವು ಬೇಡವಾದ ವಸ್ತುಗಳನ್ನು ಮರುಬಳಕೆ ಮಾಡಿ ಬಲು ಕಡಿಮೆ ವೆಚ್ಚದಲ್ಲಿ ತನ್ನ ಮನೆಯ ವಿದ್ಯುತ್ ಉಪಕರಣಗಳ ವಿದ್ಯುತ್ ಬೇಡಿಕೆಯನ್ನು ಈಡೇರಿಸುವಂತಹ ಗಾಳಿಗಿರಣಿಯೊಂದನ್ನು ಸ್ಥಾಪಿಸಿದ ಕಾರಣಕ್ಕಾಗಿ ಪ್ರಸಿದ್ಧಿಪಡೆದನು. ನಂತರ ತನ್ನ ಊರಿಗೆ ಸೌರವಿದ್ಯುತ್ತಿನಿಂದ ಕೆಲಸಮಾಡುವ ಕುಡಿಯುವ ನೀರನ್ನು ಪೂರೈಸುವ ನೀರನ್ನೆತ್ತುವ ಪಂಪ್ ಒಂದನ್ನು ತಯಾರಿಸಿದನು, ಅಷ್ಟೇ ಅಲ್ಲದೆ ಎರಡು ಗಾಳಿಗಿರಣಿಗಳನ್ನೂ ಸ್ಥಾಪಿಸಿದನು. ಅವುಗಳಲ್ಲೊಂದು ೩೯ ಅಡಿ ಎತ್ತರವಾಗಿದೆ. ಈ ಕೆಲಸಗಳಿಂದಾಗಿ ಈ ಬಾಲಕನು ಜಾಗತಿಕ ಮಟ್ಟದಲ್ಲಿ ಬಹಳ ಹೆಸರನ್ನು ಪಡೆದಿದ್ದಾನೆ. ಈತನ ಸಾಧನೆಯನ್ನು ಅನೇಕ ಸಂಸ್ಥೆಗಳು ಗುರುತಿಸಿವೆ, ಈತನ ಬಗ್ಗೆ ಒಂದು ಸಾಕ್ಷ್ಯಚಿತ್ರವೂ ತಯಾರಾಗಿದೆ. "ಜಗತ್ತನ್ನು ಬದಲಾಯಿಸುತ್ತಿರುವ ಮೂವತ್ತು ವರ್ಷಗಳೊಳಗಿನ ಮೂವತ್ತು ಜನರಲ್ಲಿ" ಒಬ್ಬನು ಎಂದು ಟೈಮ್ಸ್ ಪತ್ರಿಕೆಯು ೨೦೧೩ ರಲ್ಲಿ ಇವನನ್ನು ಹೆಸರಿಸಿದೆ.

ಈ ಪುಸ್ತಕವನ್ನು ಛಂದ ಪುಸ್ತಕ ಪ್ರಕಾಶನ ಸಂಸ್ಥೆಯು ಬೆಳಕಿಗೆ ತಂದಿದೆ.