ಗಾಯತ್ರೀ ಪುಟ೨

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಯತ್ರೀ ಮಂತ್ರ[ಬದಲಾಯಿಸಿ]

ಗಾಯತ್ರಿ ಮಂತ್ರವು, ಸರಳವಾಗಿ ಹೇಳುವುದಾದರೆ, ಸೂರ್ಯನ ಉಪಾಸನಾ ಮಂತ್ರ.

೧. ಗಾಯತ್ರೀ ಮಂತ್ರದ ಅರ್ಥ[ಬದಲಾಯಿಸಿ]


  • * (ಆಧಾರ: ಶ್ರೀ ರಾಮಾಯಣದ ಅಂತರಾರ್ಥ - ಶ್ರೀ ಯ. ಸುಬ್ರಾಯ ಶರ್ಮಾ) ಈಮೂರೂ ಬಗೆಯ ಪಾಠಗಳಿವೆ
  • ಓಂ ತತ್ಸವಿತುರ್ ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್
  • .ಓಂ ತತ್ಸವಿತುರ್ವರೇಣಿಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್
  • ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್
  • * ಜಪ ಮಂತ್ರ : ಓಂ (ಭೂಃ) ಭೂರ್ ಭುವಃ ಸ್ವಃ (ಓಂ ಭೂರ್ಭುವಸ್ವಃ ) ತತ್ಸವಿತುರ್ ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್
  • * ವ್ಯಾಹೃತಿಗಳು: ಓಂ ಭೂಃ (ಭೂರ್) ಭುವಃ ಸ್ವಃ ಇವಕ್ಕೆ ಅನೇಕ ಬಗೆಯ ಅರ್ಥಗಳಿವೆ. ಅವುಗಳಲ್ಲಿ ಮುಖ್ಯವಾದುದನ್ನು ಕೆಳಗೆ ಕೊಟ್ಟಿದೆ.
  • ಓಂ : ಪರಬ್ರಹ್ಮ ,
  • ಭೂರ್,: ಭೂಃ : ಭೂಮಿ , ಅಗ್ನಿ  ;
  • ಭುವಃ : ವಾಯು ;
  • ಸ್ವಃ  : ಸೂರ್ಯ;
  • ೧. ಓಂ ,
  • ೨. ತತ್ : ವೇದದಲ್ಲಿ ಪರಬ್ರಹ್ಮ ಪ್ರತಿಪಾದಕ ಪದ ;
  • ಓಂ ತತ್ ಸತ್ - ಅದು ಸದ್ರೂಪ, ಸೃಷ್ಟಿಗೆ ಪೂರ್ವದಲ್ಲಿ ಪರಬ್ರಹ್ಮ ಒಂದೇ ಇರುವುದು.
  • ೩. ಸವಿತುಃ : ಜಗತ್ ಸ್ರಷ್ಟೃವಾಗಿಯೂ, ಸರ್ವಾಂತರ್ಯಾಮಿಯಾಗಿಯೂ, ಸರ್ವ ಪ್ರೇರಕವಾಗಿಯೂ, ಇರುವುದು.
  • ಈಶ್ವರ ಸೋಪಾನ ಪ್ರತಿಪಾದಕ. (ಪದ)
  • ೪. ವರೇಣಿಯಂ  ; ಸರ್ವಪ್ರಾಣಿಗಳಿಗೂ ಅಪೇಕ್ಷನಾದ , ಸೇವಿಸಲು ಯೋಗ್ಯನಾದ, ಶ್ರೇಷ್ಠನಾದವನು.
  • (ಇಂದ್ರಿಯ ಪ್ರಾಣ ಶಕ್ತಿಗಳು ಪ್ರತಿಬಿಂಬ ಚೈತನ್ಯವನ್ನು ಅಪೇಕ್ಷಿಸುವು.) ಪ್ರಾಣ ಇಂದ್ರಿಯ ಶಕ್ತಿಗಳಿಗಿಂತಲೂ ಸೇವಿಸಲು ಯೋಗ್ಯನು.
  • ೫. ಭರ್ಗಃ : ಅವಿದ್ಯಾ ತತ್ಕಾರ್ಯ ನಾಶಕನಾದ ಅಥವಾ ಪಾಪ ನಿವರ್ತಕನಾಗುವ ತೇಜೋರೂಪನಾದ ,
  • ಭ ಕಾರ -ಅವಿದ್ಯಾ ಸ್ವರೂಪ;
  • ರ್ಗಃ - ಅವಿದ್ಯಾ ನಾಶಕವಾಗಿಯೂ :
  • ೬. ದೇವಸ್ಯ : ಪ್ರಕಾಶಮಾನವಾದ ;
  • ೭. ಧೀಮಹಿ : ಎಂದರೆ ಧ್ಯಾನಮಾಡುತ್ತೇವೆ ಎಂದರ್ಥ ;
  • ೮. ಧಿಯೋಯೋನಃ : ಇದರಲ್ಲಿ ಧಿಯಃ ಯಃ ನಃ ಎಂಬುದಾಗಿ ಮೂರು ಪ್ರತ್ಯೇಕ ಪದಗಳಿವೆ.

ಇದಕ್ಕೆ ಬುದ್ಧಿಯನ್ನು ಯಾರು ನಮ್ಮ, ಎಂಬುದಾಗಿ ಅರ್ಥ. ನಮ್ಮ ಬುದ್ಧಿಗೆ ಪ್ರೇರಕವಾಗಿರುವವನೇ ಸೂರ್ಯ, ದೇವತಾ ಸ್ವರೂಪದಲ್ಲಿರುವ ಅಂತರ್ಯಾಮಿ, ಎಂದರೆ, ಈಶ್ವರನೇ ಹೊರತು ಪರಬ್ರಹ್ಮನಲ್ಲ. ಪರಬ್ರಹ್ಮನು ನಿರ್ಲಿಪ್ತನೂ ಸಾಕ್ಷಿಯಗಿರುವನೇ ಹೊರತು ಪ್ರೇರಕತ್ವವಿರುವುದಿಲ್ಲ. ಪ್ರೇರಕನಾಗಿರುವ ಆದಿತ್ಯನಲ್ಲಿ ಅಂತರ್ಗತನಾಗಿ ಪರಬ್ರಹ್ಮನಿರುವ ತತ್ವ. ಆದಿತ್ಯ ಹೃದಯ ತತ್ವ. ಯಃ ಎಂಬುದರ ತತ್ವ - ಸಮಾಧಿ ಅಭ್ಯಾಸ ಮಾಡುತ್ತಿರುವಾಗ ತನ್ನಲ್ಲಿರುವ ಪ್ರತಿಬಿಂಬ ಚೈತನ್ಯವು, ತನ್ನಲ್ಲಿರುವ ಸೂರ್ಯ ರೂಪಿನಲ್ಲಿ ಬಂದು ನಿಂತು, ಆವನೇ ಇವನಾಗಿರುವ ತತ್ವವಾಗಿರುವುದು. ನಃ ಎಂದರೆ , ಎರಡನೆಯ ಜ್ಞಾನವಿಲ್ಲದೆ ಶುದ್ಧನಾದ ನಾನು ಎಂಬ ಶೇಷಮಾತ್ರವಾಗಿ ನಿಂತು ಪ್ರತಿಬಿಂಬ ಚೈತನ್ಯನು ಇದನ್ನು ಪ್ರಕಾಶ ಮಾಡಿಕೊಂಡಿರುವ ಸ್ಥಿತಿಯೇ ನಮ್ಮ ಎನ್ನುವುದರ ನಿಶ್ಚಯವಾದ ಸ್ಥಿತಿ.

  • ೯. ಪ್ರಚೋದಯಾತ್  ; ಎಂದರೆ ಚೆನ್ನಾಗಿ ಪ್ರೇರಿಸಲಿ ಎಂದರ್ಥ.

ಇದರಲ್ಲಿ ಚುದ್ ಧಾತುವಿನ ಮೇಲೆ ಚೋದ ಎಂಬುದು ಬಂದಿದೆ. ಚುದ್ ಎಂದರೆ ಪ್ರೇರಣೆ - ಎಂದರೆ ಪ್ರತಿಬಿಂಬ ಚೈತನ್ಯನು (ಜೀವ ಚೈತನ್ಯನು) ಪರಬ್ರಹ್ಮನಾಗಲು ಪ್ರೇರಣೆಯಾಗಿದೆ. ಪ್ರತಿಬಿಂಬ ಚೈತನ್ಯನಲ್ಲಿ ಉಪಾಧಿಯಾಗಿರುವ ನಾನು ಎಂಬ ಶುದ್ಧ ಜ್ಞಾನವು ಕೂಡ ಪರಬ್ರಹ್ಮನಲ್ಲಿ ಲೀನವಾಗಬೇಕು. (ಎನ್ನುವುದು ಪ್ರಾರ್ಥನೆ) ೧*

೨. ಗಾಯತ್ರೀ ಮಂತ್ರದ ಅರ್ಥ[ಬದಲಾಯಿಸಿ]


  • ಗಾಯತ್ರಿಯಲ್ಲಿ ಬರುವ ಕೆಲವು ಶಬ್ದಗಳಿಗೆ ಆಳವಾದ ಮತ್ತು ವಿಶಾಲವಾದ ಅರ್ಥಗಳಿರುವುದರಿಂದ

ಗಾಯತ್ರೀ ಮಂತ್ರ ದ ಒಟ್ಟರ್ಥವನ್ನು ಬೇರೆ ಬೇರೆ ರೀತಿ ಮಾಡಲು ಬರುತ್ತದೆ. ಶಬ್ದಗಳ ಸಾಮಾನ್ಯ ಅರ್ಥವನ್ನು (೧) ಎಂದೂ, ಇನ್ನೂ ಆಳವಾದ ಅರ್ಥವಿದ್ದಲ್ಲಿ ಅವನ್ನು (೨), (೩), ಎಂದೂ ಸೂಚಿಸಿ ಕೆಳಗೆ ಕೊಟ್ಟಿದೆ.

  • ಓಂ : ಪರಬ್ರಹ್ಮ , ಭೂರ್, ಭೂಃ : ಭೂಮಿ , ಅಗ್ನಿ  ; ಭುವಃ : ವಾಯು ; ಸ್ವಃ  : ಸೂರ್ಯ;
  • ಓಂ ಭೂರ್ಭುವಸ್ವಃ (ವ್ಯಾಹೃತಿಗಳು)
  • ತತ್ (೧) ಅದು, (೨) ಪರಬ್ರಹ್ಮ,
  • ಸವಿತುಃ (೧) ಸೂರ್ಯ, (೨) ಜಗತ್ತಿನ ಸೃಷ್ಟಿ ಸ್ಥಿತಿ ಲಯ ಕಾರಕನಾದ ಈಶ್ವರ.
  • ವರೇಣ್ಯಂ (೧) ವರಣೀಯವಾದ ; ಶ್ರೇಷ್ಠವಾದ ;
  • ಭರ್ಗಃ (೧) ತೇಜಸ್ಸು, (೨) ಅವಿದ್ಯೆಯನ್ನು ಭರ್ಜನೆಗೊಳಿಸಿ ಜ್ಞಾನ ಕೊಡುವ ಮಹಿಮೆ,
  • ದೇವಸ್ಯ (೧) ದೇವನ, ಜ್ಞಾನರೂಪನ, ದಿವ್ಯತ್ವವಿರುವವನ.
  • ಧೀಮಹಿ (೧) ನಾವು ಧ್ಯಾನ ಮಾಡುತ್ತೇವೆ,ಧ್ಯಾನ ಮಾಡುವ.
  • ಧಿಯಃ (೧) ಬುದ್ಧಿ , (೨) ಸದ್ಬುದ್ಧಿ (೩) ದೇವರ ಕಡೆಗೆ ಮಾತ್ರಾ ಪ್ರೇರಿಸುವ ಧೀ ಶಕ್ತಿ.
  • ಯಃ (೧) ಯಾವ ಆ ತೇಜಸ್ಸು.
  • (ನಃ :೧ ನಮ್ಮನ್ನು ೨.ನಮ್ಮ ಬುದ್ಧಿಯನ್ನು)
  • ಪ್ರಚೋದಯಾತ್ (೧) ಪ್ರಚೋದಿಸಲಿ , ಪ್ರೇರಿಸಲಿ .

೩. ಗಾಯತ್ರೀ ಮಂತ್ರದ ಅರ್ಥ :[ಬದಲಾಯಿಸಿ]

  • *ಧರ್ಮ ಶಾಸ್ತ್ರಗಳ ಚರಿತ್ರೆ ಎಂಬ ಬೃಹತ್ ಆಧಾರ ಗ್ರಂಥವನ್ನು ರಚಿಸಿರುವ ಶ್ರೀ ಪಿ ವಿ ಕಾಣೆಯವರು ಗಾಯತ್ರಿಗೆ ಒಂದು ಸುಲಭ ಅರ್ಥವನ್ನು ಕೊಟ್ಟಿದ್ದಾರೆ. ನಮ್ಮ ಬುದ್ಧಿಯನ್ನು (ಕಾರ್ಯಗಳನ್ನು) ಪ್ರೇರಿಸಲಿಕ್ಕಿರುವ ಸವಿತೃದೇವನ ಮಹತ್ತಾದ ತೇಜಸ್ಸನ್ನು (ಮಹಿಮೆಯನ್ನು) ನಾವು ಧ್ಯಾನಿಸುತ್ತೇವೆ.

೪. ಗಾಯತ್ರೀ ಮಂತ್ರದ ಅರ್ಥ :[ಬದಲಾಯಿಸಿ]


  • ವ್ಯಾಸರು ಕೊಟ್ಟ ಅರ್ಥ : ಯಾವ ಸವಿತೃ ದೇವನು ನಮ್ಮ ಬುದ್ಧಿಯನ್ನು ತತ್ವಜ್ಞಾನದ ಕಡೆಗೆ ಪ್ರವರ್ತಿಸುವಂತೆ
  • ಪ್ರೇರಿಸುತ್ತಾನೋ ಆ ಪರಮಾತ್ಮನ ಶ್ರೇಷ್ಠವಾದ ಅಜ್ಞಾನ ನಾಶಕ ತೇಜಸ್ಸನ್ನು ನಾವು ಧ್ಯಾನ ಮಾಡುತ್ತೇವೆ.
  • ಯೋ ದೇವಃ ಸವಿತಾಸ್ಮಾಕಂ ಧಿಯೋ ಧರ್ಮಾದಿ ಗೋಚರಾಃ |
  • ಪ್ರೇರಯೇತ್ತಸ್ಯ ಭರ್ಗಸ್ಯ ತದ್ವರೇಣ್ಯಮುಪಾಸ್ಮಹೇ ||

[೧][೨][೩]

೫. ಗಾಯತ್ರೀ ಮಂತ್ರದ ಅರ್ಥ :[ಬದಲಾಯಿಸಿ]


  • ಹೊಳೆನರಸಿಪುರದ (ಅದ್ಯಾತ್ಮ ಪ್ರಕಾಶನದ) ಆದಿ ಶಂಕರರ ಭಾ‌ಷ್ಯಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ಸಚ್ಚಿದಾನಂದ ಸರಸ್ವತಿಯವರು ಕೊಟ್ಟ ಅರ್ಥ
  • ಜಗತ್ಕಾರಣನಾದ ಪರಮಾತ್ಮನ ತೇಜಸ್ಸನ್ನು ನಾವು ಧ್ಯಾನ ಮಾಡುತ್ತೇವೆ. ಅವನು ನಮ್ಮ ಬುದ್ಧಿಯನ್ನು ಪ್ರೇರಣೆ ಮಾಡಲಿ.[೪]

ನೋಡಿ[ಬದಲಾಯಿಸಿ]


ಉಲ್ಲೇಖ[ಬದಲಾಯಿಸಿ]

  1. ಗಾಯತ್ರೀ ಜಪ - ಲೇ. ಮತ್ತು ಪ್ರಕಾಶಕ: ಕೋಟ ವಾಸುದೇವ ಕಾರಂತ, ನಿ. ಛೀಫ್ ಇಲೆಕ್ತ್ರಿಕಲ್ ಇಂಜನೀರ್, ಮಂಗಳೂರು
  2. ರಾಮಾಯಣದ ಅಂತರಾರ್ಥ : ಯ. ಸುಬ್ರಾಯ ಶರ್ಮಾ.
  3. ಋಗ್ವೇದ
  4. (ಭಗವದ್ಗೀತಾ ಉಪನ್ಯಾಸಗಳು- ಸಚ್ಚಿದಾನಂದ ಸರಸ್ವತಿ)