ಗಳಗನಾಥ
ಗಳಗನಾಥ ಕಾವ್ಯನಾಮದ ವೆಂಕಟೇಶ ತಿರಕೊ ಕುಲಕರ್ಣಿಯವರು ಹುಟ್ಟಿದ್ದು ೧೮೬೯ ಜನೆವರಿಯಲ್ಲಿ, ಹಾವೇರಿ ತಾಲೂಕಿನ ಗಳಗನಾಥ ಎನ್ನುವ ಹಳ್ಳಿಯಲ್ಲಿ. ಮುಲ್ಕಿ ಪರೀಕ್ಷೆ ಹಾಗು ಶಿಕ್ಷಕರ ಟ್ರೇನಿಂಗ ಪರಿಕ್ಷೆ ಪಾಸು ಮಾಡಿದ ಬಳಿಕ ಇವರು ಶಿಕ್ಷಕರಾಗಿ ಕೆಲಸ ಮಾಡಿದರು. ೧೯೦೬ ರ ಸುಮಾರಿಗೆ ಗುತ್ತಲದಲ್ಲಿ ಕೆಲಸ ಮಾಡುತ್ತಿದ್ದಾಗ, ಸಮೀಪದ ಅಗಡಿಯಲ್ಲಿದ್ದ ಆನಂದವನದ ಶ್ರೀ ಶೇಷಾಚಲ ಸದ್ಗುರುಗಳಿಂದ ಪ್ರಭಾವಿತರಾದರು.ಅಲ್ಲಿಂದಲೇ ೧೯೦೮ನೆಯ ಇಸವಿಯಲ್ಲಿ “ ಸದ್ಬೋಧ ಚಂದ್ರಿಕೆ” ಎನ್ನುವ ಮಾಸಪತ್ರಿಕೆಯ ಪ್ರಾರಂಭಕ್ಕೆ ಕಾರಣರಾದರು ಹಾಗು ೧೯೧೮ ರವರೆಗೆ ಅದರ ಮುಖ್ಯ ಲೇಖಕರಾಗಿದ್ದರು.
ಕ್ರಿ.ಶ.೧೮೯೭ನೆಯ ಇಸವಿಯಲ್ಲಿ ಗಳಗನಾಥರು ಬರೆದ “ ಪದ್ಮನಯನೆ” ಎಂಬ ಕಾದಂಬರಿಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರು ಏರ್ಪಡಿಸಿದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಿಕ್ಕಿತ್ತು. ಗಳಗನಾಥರು ಐದು ಸ್ವತಂತ್ರ ಕಾದಂಬರಿಗಳನ್ನು ಹಾಗು ೧೫-೧೬ ಅನುವಾದಿತ ಕಾದಂಬರಿಗಳನ್ನು ರಚಿಸಿದ್ದಾರೆ. ೧೯೪೪ರಲ್ಲಿ ಗಳಗನಾಥರು ನಿಧನರಾದರು.
ಗಳಗನಾಥರನ್ನು ಕನ್ನಡ ಕಾದಂಬರಿಗಳ ಪಿತಾಮಹ ಎಂದು ಕರೆಯಲಾಗುತ್ತದೆ.
ಗಳಗನಾಥರ ಕೃತಿಗಳು [ಬದಲಾಯಿಸಿ]
- ಪ್ರಬುದ್ಧ ಪದ್ಮನಯನೆ
- ನಿಬಂಧ ಶಿಕ್ಷಣ
- ಈಶ್ವರೀಸೂತ್ರ
- ಮರಾಟರ ಅಭ್ಯುದಯ
- ಛತ್ರಪತಿ
- ಕಮಲಕುಮಾರಿ
- ಶಿವಪ್ರಭುವಿನ ಪುಣ್ಯ
- ಗೃಹಕಲಹ
- ರಾಣಿ ಮೃಣಾಲಿನಿ
- ಧಾರ್ಮಿಕತೇಜ
- ಧರ್ಮರಹಸ್ಯ
- ಕ್ಷಾತ್ರತೇಜ
- ತಿಲೋತ್ತಮೆ
- ರಾಣಾ ರಾಜಸಿಂಹ
- ವೈಭವ
- ಸತ್ವಸಾರ
- ಕುಮುದಿನಿ
- ಸಂಸಾರಸುಖ
- ಲಕ್ಷ್ಮೀಬಾಯಿ
- ಸತಿ ಸಾಹಸ
- ಅದ್ಭುತ ಶೌರ್ಯ
- ಶುಕಸಂಜೀವನಿ
- ಭಾಗವತಾಮೃತ
- ಶೈವ ಸುಧಾರ್ಣವ
- ತುಲಸೀ ರಾಮಾಯಣ
- ಕನ್ನಡಿಗರ ಕರ್ಮಕಥೆ
- ಆನಂದರಾಮಾಯಣ
- ವೆಂಕಟೇಶಮಹಾತ್ಮ್ಯ
- ದುರ್ಗದ ಬಿಚ್ಚುಗತ್ತಿ-ಭಾಗ ೧ ಮತ್ತು ೨
- ಚಿದಂಬರ ಚರಿತ
- ಉತ್ತರರಾಮಚರಿತ
- ಗಿರಿಜಾಕಲ್ಯಾಣ
- ಸತ್ವಾದರ್ಶ
- ಭಕ್ತಿವಿಜಯ
- ಶ್ರೀಸುರೇಶ್ವರಾಚಾರ್ಯ ಚರಿತ್ರೆ
- ದತ್ತಕಥಾಮೃತಸಾರ
- ಸಾಧುಸದಾಶಿವಲೀಲೆ
- ಫಕೀರೇಶ್ವರಪುರಾಣ
- ಕುಟುಂಬ
- ದಾಂಪತ್ಯ
- ನಿರ್ಯಾಣ ಮಹೋತ್ಸವ
- ಹಿಂದೂ ಸಮಾಜವ್ಯವಸ್ಥೆ
- ವರ್ಣಾಶ್ರಮಧರ್ಮ
- ಪುನರ್ಜನ್ಮ
- ಮಾಧವಕರುಣಾವಿಲಾಸ
- ಗೀತಾವಲೋಕನೆ
- ಶ್ರೇಷ್ಠ-ಸದುಪದೇಶ
- ಬ್ರಾಹ್ಮಣ ಪ್ರಾಪ್ತಸಾಧನ
- ಕಣ್ವಸಂಹಿತೆ
- ಸುಂದರಲೇಖ ಸಮುಚ್ಚಯ
- ಭಗವತಿ ಕಾತ್ಯಾಯಿನಿ
- ಕಲಿಕುಠಾರ -ಭಾಗ ೧ ಮತ್ತು ೨
- ನಲಚರಿತ್ರೆ
- ರಹಸ್ಯಗಳು
- ಮಹಾಭಾರತ - ೧೮ ಪರ್ವಗಳು
- ನಿಬಂಧಲೇಖನ
- ಆಧ್ಯಾತ್ಮ ರಾಮಾಯಣ
ಹೊರಗಿನ ಕೊಂಡಿಗಳು [ಬದಲಾಯಿಸಿ]
- ಕಣಜ ತಾಣದಲ್ಲಿ ಬರಹ
- ಗಳಗನಾಥರ ಕುರಿತು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ನಲಚರಿತ್ರೆ-ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಕನ್ನಡಿಗರ ಕರ್ಮಕಥೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಪ್ರಬುದ್ಧ ಪದ್ಮನಯನೆ-ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಕ್ಷಾತ್ರತೇಜ-ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಮಹಾಭಾರತಾಮೃತದ ಸಭಾಪರ್ವದೊಳಗಿನ ರಹಸ್ಯಗಳು-ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಸಂಸಾರಸುಖ-ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಕ್ಷಾತ್ರತೇಜ-ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಮರಾಠರ ಅಭ್ಯುದಯ -ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ದುರ್ಗದ ಬಿಚ್ಚುಗತ್ತಿ-ಭಾಗ ೧ -ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಧಾರ್ಮಿಕ ತೇಜ ಅಥವಾ ಪರಹಿತ ದಕ್ಷತಾ -ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಮಹಾಭಾರತಾಮೃತ ಆದಿಪರ್ವ-ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಕಲಿಕುಠಾರ- ಭಾಗ ೨-ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಕುಮುದಿನಿ -ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ
- ಸ್ವರಾಜ್ಯ-ಸುಗಂಧ-ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಸಿಗುವ ಪುಸ್ತಕ