ಗದಗ

ವಿಕಿಪೀಡಿಯ ಇಂದ
(ಗದಗ್ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಗದಗ
ಗದಗ ನಗರದ ಪಕ್ಷಿನೋಟ
ಜಿಲ್ಲಾ ಆಡಳಿತ ಭವನ, ಗದಗ
India-locator-map-blank.svg
Red pog.svg
ಗದಗ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಗದಗ
ನಿರ್ದೇಶಾಂಕಗಳು 15.4167° N 75.6167° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೧೫೪೮೪೯
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೮೨ ೧೦೧/೧೦೨/೧೦೩
 - +೯೧ (೦) ೮೩೭೨
 - ಕೆಎ-೨೬
ಅಂತರ್ಜಾಲ ತಾಣ: ಗದಗ-ಬೆಟಗೇರಿಸಿಟಿ.ಗೊವ್.ಇನ್ http://www.gadag-betagericity.gov.in/ ಗದಗ-ಬೆಟಗೇರಿಸಿಟಿ.ಗೊವ್.ಇನ್

ಗದಗ (Gadag) (गदग) ಉತ್ತರ ಕರ್ನಾಟಕದ ಒಂದು ಜಿಲ್ಲೆ. ಗದಗ ಪಟ್ಟಣ ಈ ಜಿಲ್ಲೆಯ ಕೇಂದ್ರ. ಕೆಲವು ವರ್ಷಗಳ ಹಿಂದಿನವರೆಗೂ ಗದಗ, ಧಾರವಾಡ ಜಿಲ್ಲೆಯ ಭಾಗವಾಗಿದ್ದಿತು. ಈ ಜಿಲ್ಲೆಯ ಜನಸಂಖ್ಯೆ ಸುಮಾರು ೧೦ ಲಕ್ಷ. ಗದಗ ಜಿಲ್ಲೆಯವರಾದ ಇಬ್ಬರು ಪ್ರಸಿದ್ಧ ವ್ಯಕ್ತಿಗಳೆಂದರೆ ಕನ್ನಡದ ಮಹಾಕವಿ ಕುಮಾರವ್ಯಾಸ ಮತ್ತು ಪ್ರಸಿದ್ಧ ಗಾಯಕರಾದ ಗಾನಯೋಗಿ ಪಂಚಾಕ್ಷರಿ ಗವಾಯಿ.

ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ರಾಗಿ, ಬೇಳೆಗಳು, ನೆಲಗಡಲೆ, ಸೂರ್ಯಕಾಂತಿ, ಹತ್ತಿ, ಈರುಳ್ಳಿ ಮತ್ತು ಮೆಣಸಿನಕಾಯಿ.

ಧಾರ್ಮಿಕ ಪ್ರಾಮುಖ್ಯತೆಯುಳ್ಳ ಇಲ್ಲಿನ ಎರಡು ಮುಖ್ಯ ದೇವಸ್ಥಾನಗಳೆ೦ದರೆ ತ್ರಿಕೂಟೇಶ್ವರ ದೇವಾಲಯ ಮತ್ತು ವೀರನಾರಾಯಣನ ದೇವಸ್ಥಾನ. ಗದಗ ಪಟ್ಟಣದಲ್ಲಿ ಎರಡು ಮುಖ್ಯ ಜೈನ ದೇವಾಲಯಗಳು ಸಹ ಇದ್ದು ಪಾರ್ಶ್ವನಾಥ ತೀರ್ಥಂಕರ ಮತ್ತು ಮಹಾವೀರನಿಗೆ ಅರ್ಪಿತವಾಗಿವೆ.

ಗದಗ ಪಟ್ಟಣ ಬದನೇಕಾಯಿ ಬಜಿ,ಒಗ್ಗರಣೆ ಗಿರ್ಮಿಟ್ ಮತ್ತು ಮೆಣಸಿನಕಾಯಿ ಮಿರ್ಚಿಗೆ ತುಂಬ ಪ್ರಸಿದ್ದ. ಒಂದು ಕಾಲದಲ್ಲಿ ಗದಗ ಶಹರದಲ್ಲಿ ಎಲ್ಲೇ ನಿಂತು ಕಲ್ಲು ತೂರಿದರೂ ಅದು ಯಾವದಾದರೊಂದು ಪ್ರಿಂಟಿಂಗ್ ಪ್ರೆಸ್ ಗೆ ಹೋಗಿ ಬೀಳುತ್ತದೆಂಬ ಪ್ರತೀತಿ ಇತ್ತು. ಅಷ್ಟೊಂದು ಮುದ್ರಣಾಲಯಗಳು ಗದಗನಲ್ಲಿದ್ದವು. ಮುದ್ರಣ ಕ್ಷೇತ್ರದಲ್ಲಿ ಕರ್ನಾಟಕದಲ್ಲೇ ಗದಗನ್ನು ಮೀರಿಸಿದವರಿರಲಿಲ್ಲ. ಭೀಷ್ಮ ಕೆರೆ ಇಲ್ಲಿನ ಅತ್ಯಂತ ದೊಡ್ಡದಾದ ಮತ್ತು ಪುರಾತನ ಕೆರೆಯಾಗಿದೆ. ಗದಗ ಪುರಾತನ ಕಾಲದಲ್ಲಿ "ಕೃತಪುರ" ಎಂದು ಖ್ಯಾತಿಗಳಿಸಿತ್ತು. ಭಾರತ ರತ್ನ ಭೀಮಸೇನ ಜೋಶಿ ಇಲ್ಲಿಯವರೇ. ಗದುಗಿನ ಅನೇಕ ಜನ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.

ಗದಗ ಮತ್ತು ಬೆಟಗೇರಿ ಅವಳಿ ನಗರಗಳು.

ಗದಗನ ಮೂಲ ಹೆಸರುಗಳು ಕೃತುಕ, ಕೃತುಪುರ, ಕರಡುಗು ನಂತರ ಗಲದುಗು , ಗದುಗು ಮತ್ತು ಈಗ ಗದಗ ಎಂದು ಕರೆಯಲಾಗುತ್ತದೆ. ಕಪ್ಪತ ಗುಡ್ಡ ಸಹ ಇದರ ಸುತ್ತಮುತ್ತಲಲ್ಲೇ ಇವೆ.


ಪರಿವಿಡಿ

[ಬದಲಾಯಿಸಿ] ಭೂಗೋಳ

ನಕಾಶೆ
ಗದಗ ಜಿಲ್ಲೆ

ಗದಗ ಜಿಲ್ಲೆಯಲ್ಲಿ ಹರಿಯುವ ಎರಡು ಮುಖ್ಯ ನದಿಗಳೆಂದರೆ ಮಲಪ್ರಭಾ ಮತ್ತು ತುಂಗಭದ್ರಾ. ಗದಗ ಪಟ್ಟಣ ಬೆಂಗಳೂರಿನಿಂದ ೪೩೧ ಕಿಮೀ ದೂರದಲ್ಲಿದ್ದು ಧಾರವಾಡದಿಂದ ೮೦ ಕಿಮೀ ದೂರದಲ್ಲಿದೆ.

ಗದಗ ಕರ್ನಾಟಕದ ೨೯ ನೇ ಜಿಲ್ಲೆ ಆಗಿರುತ್ತದೆ.

[ಬದಲಾಯಿಸಿ] ತಾಲೂಕುಗಳು

ಗದಗ ಜಿಲ್ಲೆಯಲ್ಲಿರುವ ತಾಲೂಕುಗಳು

ಗದಗ ಜಿಲ್ಲೆಯಲ್ಲಿರುವ ತಾಲೂಕುಗಳು

[ಬದಲಾಯಿಸಿ] ಪ್ರಮುಖ ವ್ಯಕ್ತಿಗಳು

ಪಂಚಾಕ್ಷರಿ ಗವಾಯಿಗಳು

[ಬದಲಾಯಿಸಿ] ಚಾರಿತ್ರಿಕ ಘಟನೆಗಳು

ಪಂಚಾಕ್ಷರಿ ಗವಾಯಿಗಳು

ಗದಗ ಪಟ್ಟಣದ ಕೆಲವು ಸಾಂಸ್ಕೃತಿಕ ಹಾಗು ಸಾಮಾಜಿಕ ಚಾರಿತ್ರಿಕ ಘಟನೆಗಳು ಇಂತಿವೆ:

  • ೧೮೮೪ --- ಗದಗ - ಹೊಟಗಿ ರೈಲು ಹಳಿ
  • ೧೯೧೪ --- ಶ್ರೀ ವೀರೇಶ್ವರ ಪುಣ್ಯಾಶ್ರಮ (ಸಂಚಾರಿ ಪಾಠ ಶಾಲೆ)
  • ೧೯೧೪ --- ಶ್ರೀ ಕುಮಾರೇಶ್ವರ ಕೃಪಾ ಕಟಾಕ್ಷ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘ
  • ೧೯೪೩ --- ಕೃಷಿ ಮಾರುಕಟ್ಟೆ
  • ೧೯೪೭ --- ಶ್ರೀ ವಸಂತ ನಾಟ್ಯಕಲಾ ಸಂಘ
  • ೧೯೫೮ --- ಜೆ.ಟಿ.ಕಾಲೇಜ- ಮಸಾರಿ ಆರಂಭ
  • ೧೯೭೯ --- ಶ್ರೀ. ಡಿ. ಜಿ ಎಮ್. ಆಯುರ್ವೇದ ಕಾಲೇಜ ಆರಂಭ
  • ೧೯೯೭ --- ಗದಗ ಜಿಲ್ಲೆಯ ರಚನೆ (ಪ್ರಕಟಣೆ ಆರ್‌ಡಿ ೪೨ ಎಲ್ಆರ್‌ಡಿ ೮೭ ಭಾಗ ೩ ಕರ್ನಾಟಕ ಸರ್ಕಾರ ಆಗಸ್ಟ್ ೨ ೧೯೯೭ರಂದು ಬೆಂಗಳೂರಿನಲ್ಲಿ ಹೊರಡಿಸಿದ ಒಂದು ಪ್ರಕಟಣೆಯ ಭಾಗವಾಗಿತ್ತು ಮತ್ತು ಇದು ಕರ್ನಾಟಕದಲ್ಲಿ ಏಳು ಹೊಸ ಜಿಲ್ಲೆಗಳ ರಚನೆಯಾಗುವಲ್ಲಿ ಪರಿಣಮಿಸಿತು. ಗದಗ ಜಿಲ್ಲೆ ರಚನೆ ರಚನೆಯಾದ ಹೊಸ ಜಿಲ್ಲೆ).
  • ೧೯೯೭ --- ತೊಂಟದಾರ್ಯ ತಾಂತ್ರಿಕ ವಿದ್ಯಾಲಯ ಆರಂಭ
  • ೨೦೦೦ ವಾ.ಶಿವಪ್ಪ.ಮರಿಬಸಪ್ಪ.ಕುರಿ ಇವರಿಗೆ "ಎಚ್.ಎನ್.ಹೂಗಾರ-ಬದಕು-ಬರಹ :ಒಂದು ಅಡ್ಯಯನ ಮಹಾಪ್ರಬಂಡಕ್ಕೆ ಕನಾ೯ಱಕ ವಿಶ್ವವಿದ್ಯಾಲಯ ಪಿ.ಎಚ್.ವಿ ಪದವಿ ಪ್ರದಾನ

೨೦೦೦- ಸಿದ್ದಲಿಂಗನಗರ ಬಡಾವಣೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾರಂಭ

  • ೨೦೦೧ --- ಭು ದಾಕಲೆಗಳ ಗಣಕೀಕರಣ ವ್ಯವಸ್ಠೆ (೨೯-೦೯-೨೦೦೯ ಪೂರ್ಣ)

೨೦೦೩ ಮುಂವರಗಿಯಲ್ಲಿ ಸರ್ಕಾರಿ ಪ್ರಟಮ ದಜೆ೯ ಕಾಲೇಜು ಪ್ರಾರಂಭ.ವಾ.ಶಿವಪ್ಪ.ಮರಿಬಸಪ್ಪ.ಕುರಿ ಪ್ರಾರಂಭದ ಪ್ರಾಂಶುಪಾಲರಾಗಿ ೧೮-೦೯-೨೦೦೩ ಅಡಿಕಾರ ಸ್ವೀಕಾರ.

  • ೨೦೦೫ --- ಮಕ್ಕಳಿಗಾಗಿ ‘ಸಂಗೀತ ಮತ್ತು ನೃತ್ಯ ಸಮ್ಮೇಳನ ( ಜನವರಿ 8 )
  • ೨೦೦೫ --- ಗದಗ ಹೊಸ ಬಸ್ ನಿಲ್ದಾಣ (ಅಕ್ಟೋಬರ್ ೩೦- ೨೦೦೫)
  • ೨೦೦೨ --- ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ

೨೦೦೭ ಹುಲಕೋಟಿಯಲ್ಲಿ ಸರ್ಕಾರಿ ಪ್ರಟಮ ದಜೆ೯ ಕಾಲೇಜು ಪ್ರಾರಂಭ.ವಾ.ಶಿವಪ್ಪ.ಮರಿಬಸಪ್ಪ.ಕುರಿ ಪ್ರಾರಂಭದ ಪ್ರಾಂಶುಪಾಲರಾಗಿ ೨೫-೦೫-೨೦೦೭ ಅಡಿಕಾರ ಸ್ವೀಕಾರ.

  • ೨೦೦೭ --- ಮೀಟರ್ ಗೇಜ್ ರೈಲು ಸಂಚಾರದ ಕೊನೆಯ ಕೊಂಡಿಯಾಗಿ ಉಳಿದುಕೊಂಡಿದ್ದ ಬಾಗಲಕೋಟೆ- ಗದಗ ಪ್ಯಾಸೆಂಜರ್ ರೈಲು ಈದಿನ ತನ್ನ ಕೊನೆಯ ಸಂಚಾರದೊಂದಿಗೆ ಇತಿಹಾಸದ ಪುಟ ಸೇರಿತು.ಸಂಜೆ ೫.೪೫ ಕ್ಕೆ ಗದುಗಿಗೆ ಹೋಗುವ ರೈಲಿಗೆ ಪೂಜೆ ನೆರವೇರಿಸಿದ ರೈಲ್ವೆ ಸಿಬ್ಬಂದಿ ಆರತಿ ಮಾಡುವ ಮೂಲಕ ಕೊನೆಯ ಗಾಡಿಗೆ ಹೃದಯಸ್ಪರ್ಶಿ ವಿದಾಯ ಹೇಳಿದರು.
  • ೨೦೦೭ --- ಶ್ರೀ ಕುಮಾರೇಶ್ವರ ಕೃಪಾ ಕಟಾಕ್ಷ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘಕ್ಕೆ - ಕೆ. ಹಿರಣ್ಣಯ್ಯ ನಾಟಕ ಅಕಾಡೆಮಿ ಪ್ರಶಸ್ತಿ
  • ೨೦೦೯ --- ಅಖಿಲ ಭಾರತ ೭೬ನೇ ಕನ್ನಡ ಸಾಹಿತ್ಯ ಸಮ್ಮೇಳ (ಡಿಸೆಂಬರ್ ೧೮-೨೦)*ಮುಂದುಡಲಾಯಿತು
  • ೨೦೦೯ --- ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ)ಯು ಮಾಡುತ್ತಿರುವ ವೈದ್ಯಕೀಯ, ಸಾಮಾಜಿಕ, ಸಾಂಸ್ಕೃತಿಕ, ಮಾನವೀಯ ಕಾರ್ಯಗಳನ್ನು ರಾಜ್ಯ ಐಎಂಎ ಗುರುತಿಸಿ ರಾಜ್ಯದ ಅತ್ಯುತ್ತಮ ಶಾಖೆ
  • ೨೦೦೯ --- ಜಿಲ್ಲೆಯಾದ್ಯಂತ ಆರು ದಿನಗಳಿಂದ ಸುರಿಯುತ್ತಿರುವ ಮಳೆ
  • ೨೦೦೯ --- ಪ್ರವಾಹವೆಂಬ ದುಃಸ್ವಪ್ನ ಶಾಶ್ವತ ಬರ ಪೀಡಿತ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡ ಗದಗ ಜಿಲ್ಲೆ ಮಳೆಯ ಆರ್ಭಟಕ್ಕೆ ಸಿಕ್ಕಿ ನಲುಗಿದೆ.
  • ೨೦೧೦ --- ಅಖಿಲ ಭಾರತ ೭೬ನೇ ಕನ್ನಡ ಸಾಹಿತ್ಯ ಸಮ್ಮೇಳನ (ಜನೆವರಿ)* ಮುಂದುಡಲಾಯಿತು
  • ೨೦೧೦- ಅಖಿಲ ಭಾರತ ೭೬ನೇ ಕನ್ನಡ ಸಾಹಿತ್ಯ ಸಮ್ಮೇಳನ (ಫೆಬ್ರುವರಿ ೧೯ರಿಂದ ೨೧ರವರೆಗೆ)
  • ೨೦೧೦- ೭೬ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೀತಾ ನಾಗಭೂಷಣ
  • ೨೦೧೦- ಪಂಡಿತ ಪುಟ್ಟರಾಜ ಗವಾಯಿಗಳು ನಿಧನ (೧೭ ಸೆಪ್ಟೆಂಬರ್ )
  • ೧೯೮೯-- ಶ್ರೀ.ಮ.ನಿ.ಪ್ರ.ಪ್ರಭುಮಹಾಸ್ವಾಮಿಗಳವರು ಬೂದೀಶ್ವರ ಮಟ್ಟ್ ಹೊಸಹಳ್ಳಿ ಲಿಂಗೈಕ್ಯ (ನವ್ಹಂಬರ್-೩೦)
ಸಂಪಾದಿಸಿ

[ಬದಲಾಯಿಸಿ] ಕೈಗಾರಿಕೆ

ಗದಗಿನ ಬಹಳ ಮುಖ್ಯವಾದ ಕೈಗಾರಿಕೆ ಗದಗ ಪ್ರಿಂಟಿಂಗ್ ಪ್ರೆಸ್ ಹಾಗು ಸುಮಾರು ೧೦೦ಕ್ಕೂ ಹೆಚ್ಚು ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳಿವೆ. ಕೈಮಗ್ಗ ಹಾಗೂ ಬಣ್ಣ ಬಣ್ಣದ ಆಕರ್ಷಕ ಸೀರೆಗಳನ್ನು ನೇಯುವ ಹತ್ತಾರು ಮಂದಿ ನೇಕಾರರು ಇಲ್ಲಿದ್ದಾರೆ ಇದು ಗದಗ ಮತ್ತು ಬೆಟಗೇರಿಯ ಇನ್ನೊಂದು ಆಕರ್ಷಣೆ.

ಪವನ ವಿದ್ಯುತ್

ಗದಗ ಜಿಲ್ಲೆಯ ೪೦&೫೦ ಕಿಮೀ ಉದ್ದಗಲದ ಕೃಷಿಭೂಮಿಯು ಹೆಚ್ಚು ಗಾಳಿ ಬೀಸುವ ಪ್ರದೇಶವೆಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆ.ಆರ್ ಇ.ಡಿ.ಎಲ್) ಗುರುತಿಸಿದೆ. ಪವನ ವಿದ್ಯುತ್ ಶಕ್ತಿ ಉತ್ಪಾದನೆಗೆ ಯೋಗ್ಯ ಸ್ಥಳಗಳೆಂದೂ ಈ ಸಂಸ್ಥೆ ಪಟ್ಟಿ ಮಾಡಿದೆ.

[ಬದಲಾಯಿಸಿ] ಧಾರ್ಮಿಕ

ಸರಸ್ವತಿ ದೇವಾಲಯ

ಧಾರ್ಮಿಕ ಪ್ರಾಮುಖ್ಯತೆಯುಳ್ಳ ಇಲ್ಲಿನ ಎರಡು ಮುಖ್ಯ ದೇವಸ್ಥಾನಗಳೆ೦ದರೆ ತ್ರಿಕೂಟೇಶ್ವರ ದೇವಾಲಯ ಮತ್ತು ವೀರನಾರಾಯಣನ ದೇವಸ್ಥಾನ. ಗದಗ ಪಟ್ಟಣದಲ್ಲಿ ಎರಡು ಮುಖ್ಯ ಜೈನ ದೇವಾಲಯಗಳು ಸಹ ಇದ್ದು ಪಾರ್ಶ್ವನಾಥ ತೀರ್ಥಂಕರ ಮತ್ತು ಮಹಾವೀರನಿಗೆ ಅರ್ಪಿತವಾಗಿವೆ.ಶ್ರೀ ತೊಂಟದಾರ್ಯ ಮಠ ಕೂಡ ಇಲ್ಲಿನ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಲಿದೆ.

[ಬದಲಾಯಿಸಿ] ಶೈಕ್ಷಣಿಕ

ಗದಗ ಪಟ್ಟಣ ಅನೇಕ ಒಳ್ಳೆಯ ವಿದ್ಯಾಲಯ, ಮಹಾವಿದ್ಯಾಲಯಗಳಿವೆ. ಒಂದು ಆಯುರ್ವೇದ ಮತ್ತು ತಾಂತ್ರಿಕ ವಿದ್ಯಾಲಯಗಳಿವೆ.

ಪ್ರಮುಖ ವಿದ್ಯಾಸಂಸ್ಥೆಗಳು

{{ಗದಗ ಪ್ರಮುಖ ವಿದ್ಯಾಸಂಸ್ಥೆಗಳು}

  • ಸರಕಾರಿ ಪ್ರಥಮ ದಜೆ೯ ಕಾಲೇಜು, ಮುಂಡರಗಿ.
  • ಸರಕಾರಿ ಪ್ರಥಮ ದಜೆ೯ ಕಾಲೇಜು, ಗದಗ.
  • ಸರಕಾರಿ ಪ್ರಥಮ ದಜೆ೯ ಕಾಲೇಜು, ಹುಲಕೋಟಿ.
  • ಸರಕಾರಿ ಪ್ರಥಮ ದಜೆ೯ ಕಾಲೇಜು,ರೋಣ.
  • ಸರಕಾರಿ ಪ್ರಥಮ ದಜೆ೯ ಕಾಲೇಜು, ಗಜೇಂದ್ರಗಡ.
  • ಸರಕಾರಿ ಪ್ರಥಮ ದಜೆ೯ ಕಾಲೇಜು, ನರಗುಂದ.
  • ಸರಕಾರಿ ಪ್ರಥಮ ದಜೆ೯ ಕಾಲೇಜು, ಶಿರಹಟ್ಟಿ.
  • ಸರಕಾರಿ ಪ್ರಥಮ ದಜೆ೯ ಕಾಲೇಜು, ನರೇಗಲ್ಲ.
  • ಸರಕಾರಿ ಪ್ರಥಮ ದಜೆ೯ ಕಾಲೇಜು, ಮುಳಗುಂದ.

[ಬದಲಾಯಿಸಿ] ದಿನ ಪತ್ರಿಕೆ

  • 'ನವೋದಯ' ದಿನಪತ್ರಿಕೆ
  • 'ನಾಗರಿಕ' ದಿನಪತ್ರಿಕೆ
  • 'ಕೌರವ' ದಿನಪತ್ರಿಕೆ

[ಬದಲಾಯಿಸಿ] ಶಿಲ್ಪಕಲೆ

ಗದಗ ಜಿಲ್ಲೆ ಶಿಲ್ಪಕಲೆಯ ಬೀಡೂ ಹೌದು. ಗದುಗಿನ ವೀರನಾರಾಯಣ, ತ್ರಿಕುಟೇಶ್ವರ ಹಾಗೂ ಸೋಮನಾಥ, ಸರಸ್ವತಿ ದೇವಾಲಯ ಪ್ರಸಿದ್ಧಿ ಪಡೆದಿವೆ. ಲಕ್ಕುಂಡಿ ನೂರೊಂದು ಗುಡಿಗಳು ಆಕರ್ಷಣೀಯ. ಇಲ್ಲಿನ ಸೂರ್ಯ ದೇವಾಲಯ, ಬ್ರಹ್ಮ ಜೀನಾಲಯ ಗಮನ ಸೆಳೆಯುತ್ತವೆ. ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯ ರಾಷ್ಟ್ರೀಯ ಸಂರಕ್ಷಣಾ ಸ್ಮಾರಕವಾಗಿ ರೂಪುಗೊಂಡಿದೆ. ಜಿಲ್ಲೆಯಲ್ಲಿ ಶಿಲ್ಪಕಲೆಗೆ ಜೀವ ತುಂಬಿದವರು ರಾಜವಂಶಸ್ಥರು. ಅನೇಕ ರಾಜಮಹಾರಾಜರು ಈ ಭಾಗದಲ್ಲಿ ಆಳಿದ್ದರೆಂಬುದು ಗಮನಾರ್ಹ. ಇನ್ನು ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಶಾಸನಗಳಿವೆ.

[ಬದಲಾಯಿಸಿ] ಸಾಂಸ್ಕೃತಿಕ

ಶ್ರೀ ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು

ಪರಂಪರೆ

  • ನಮ್ಮೂರ ಜಾತ್ರೆ

ಇಲ್ಲಿ ನಡೆಯುವ ವಾರ್ಷಿಕ ಶ್ರೀ ತೊಂಟದಾರ್ಯ ಮಠದ ಜಾತ್ರೆ ಸಾಕಷ್ಟು ಭಕ್ತರನ್ನು ಆಕರ್ಷಿಸುತ್ತದೆ.

ಮುಖ್ಯ ಭಾಷೆ ಕನ್ನಡ

ಸಂಗೀತ ಮತ್ತು ಕಲೆ

ವೃತ್ತಿರಂಗಭೂಮಿ ಕಂಪನಿಗಳು

ಸಾಧನೆ:

ಸಂಗೀತ:

ವಾಯಲಿನ್:

  • ಶ್ರೀ ನಾರಾಯನ ಹಿರೆಕೊಲಚೆ

ವೊಕಲ್ :

  • ಶ್ರೀ ರವೀಂದ್ರ ಜಕಾತಿ

ಜಾನಪದ ಕಲೆ:

'ಸ್ವತಂತ್ರ ಹೋರಾಟಗಾರರು ಮತ್ತು ಗಾಂಧೀವಾದಿಗಳು

[ಬದಲಾಯಿಸಿ] ಪ್ರಮುಖ ಬೆಳೆಗಳು

ಜೋಳ, ಸಜ್ಜೆ, ಸೇಂಗಾ, ಸೂರ್ಯಪಾನ, ಉಳ್ಳಾಗಡ್ಡಿ(ಈರುಳ್ಳೆ). ಪ್ರಮುಖ ಆಹಾರ ಧಾನ್ಯ ಜೋಳ.ಜೊತೆಗೆ ಗೋಧಿ, ಬೇಳೆಕಾಳುಗಳು.

ಸೇವಂತಿಗೆ ಮತ್ತಿತರ ಹೂ ಬೆಳೆ

ಹೂವಿನ ಕಣಜ : ಜಮೀನಿನಲ್ಲಿ ಸೇವಂತಿಗೆ, ಮಲ್ಲಿಗೆ, ಸುಗಂಧರಾಜ, ಗುಲಾಬಿ, ಚೆಂಡು ಹೂ ಬೆಳೆದಿದ್ದಾರೆ. ವಿಶೇಷವಾಗಿ ಸೇವಂತಿಗೆ ಹೂವನ್ನೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. (ವಿಶೇಷವಾಗಿ ದಸರಾ, ದೀಪಾವಳಿಗೆ ಹೂವಿಗೆ ಬೇಡಿಕೆ)

[ಬದಲಾಯಿಸಿ] ಹವಾಮಾನ

  • ಬೆಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ౪೧.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿವರೆಗೆ (ಡಿಸೆಂಬರನಲ್ಲಿ) ಉಷ್ಣತೆ ಇರುತ್ತದೆ. ಬೆಸಿಗೆ - ೩೦°C-೩೯°C , ಚಳಿಗಾಲ - ೧೮°C-೨೮°C
  • ಮಳೆ - ಪ್ರತಿ ವರ್ಷ ಮಳೆ ಸರಾಸರಿ ೧೬.೬ ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ) ಇರುತ್ತದೆ.
ಗದಗ ಹವಾಮಾನ ಮಾಹಿತಿ
ತಿಂಗಳು ಜನವರಿ ಫೆಬ್ರುವರಿ ಮಾರ್ಚ್ ಏಪ್ರಿಲ್ ಏಪ್ರಿಲ್ ಜೂನ್ ಜುಲೈ ಆಗಸ್ಟ್ ಸೆಪ್ಟೆಂಬರ್ ಅಕ್ಟೋಬರ್ ನವೆಂಬರ್ ಡಿಸೆಂಬರ್ Year
Source: [೧]

[ಬದಲಾಯಿಸಿ] ಸಮೀಪದ ಸ್ಥಳಗಳು

‍* ಲಕ್ಕುಂಡಿ

[ಬದಲಾಯಿಸಿ] ರಾಜಕೀಯ

ಶಾಸಕರು

ಇಂದಿನ ೨೦೦೮ ಶಾಸಕರು ಭಾರತೀಯ ಜನತಾ ಪಕ್ಷ (BJP)BJP-flag.svg - ಶ್ರೀ ಶ್ರೀಶೈಲಪ್ಪ ವಿ. ಬಿದರೂರ, ಶಿವನೇಂದ್ರ ನಗರ, ಕಳಸಪುರ ರಸ್ತೆ, ಗದಗ -೫೮೨ ೧೦೧

ಒಟ್ಟು ಫಲಿತಾಂಶ.'

ಮೈಸೂರು ವಿಧಾನಸಭೆ ಚುನಾವಣೆ- ೧೯೫೭- ೧೯೭೨ ಕರ್ನಾಟಕ ವಿಧಾನಸಭೆ ಚುನಾವಣೆ- ೧೯೭೮- ೨೦೦೮


INC-flag.svg ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC)| BJP-flag.svgಭಾರತೀಯ ಜನತಾ ಪಕ್ಷ (BJP)| Janata Dal (secular).jpgಜನತಾ ದಳ(ಎಸ್)JD(S) | JanataDalUnitedFlag.PNGಜನತಾ ದಳ(ಯು)JD(U)| BLANK.jpg ಪಕ್ಷೇತರ(IND)|

ಹಿಂದಿನ ಶಾಸಕರು

ವರ್ಷ್ ಹೆಸರು ಪಕ್ಷ
೨೦೦೪ ಡಿ. ಆರ್. ಪಾಟೀಲ INC-flag.svg
೧೯೯೯ ಡಿ. ಆರ್. ಪಾಟೀಲ INC-flag.svg
೧೯೯೪ ಡಿ. ಆರ್. ಪಾಟೀಲ INC-flag.svg
೧೯೮೯ ಕೆ. ಹೆಚ್. ಪಾಟೀಲ INC-flag.svg
೧೯೮೫ ಕೆ. ಹೆಚ್. ಪಾಟೀಲ INC-flag.svg
೧೯೮೩ ಸಿ. ಎಸ್. ಮುತ್ತಿನಪೆಂಡಿಮಠ INC-flag.svg
೧೯೭೮ ಸಿ. ಎಸ್. ಮುತ್ತಿನಪೆಂಡಿಮಠ (JP)
೧೯೭೨ ಪಿ. ಕೆ. ಹನುಮಂತಪ್ಪ INC-flag.svg
೧೯೬೭ ಪಿ. ಕೆ. ಹನುಮಂತಗೌಡ (IND)
೧೯೬೨ ಕೆ. ಪಿ. ಗದಗ INC-flag.svg
೧೯೫೭ ಕೆ. ಪಿ. ಗದಗ INC-flag.svg

ಪ್ರಮುಖ ರಾಜಕಾರಣಿಗಳು ಕೆ. ಹೆಚ್. ಪಾಟೀಲ , ಡಿ. ಆರ್. ಪಾಟೀಲ, ಹೆಚ್.ಕೆ.ಪಾಟೀಲ-ಮಾಜಿ ಸಚಿವರು, ಶ್ರೀಶೈಲಪ್ಪ ವಿ. ಬಿದರೂರ

[ಬದಲಾಯಿಸಿ] ಪ್ರವಾಸ

ಚಿತ್ರ:Gadag tourism circuit.JPG
ಗದಗ ಜಿಲ್ಲಾ ಪ್ರವಾಸ

ಪ್ರವಾಸ ಮಾರ್ಗ ೧: ಗದಗದಿಂದ ಪ್ರವಾಸ ಪ್ರಾರಂಭವಾಗಿ ಲಕ್ಕುಂಡಿ, ಗದುಗಿನ ತ್ರಿಕೂಟೇಶ್ವರ ,ವೀರನಾರಾಯಣ ದೇವಸ್ಥಾನ, ವೀರೇಶ್ವರ ಪುಣ್ಯಾಶ್ರಮ, ಸಾಯಿಬಾಬಾ ಮಂದಿರ , ರಾಮಕೃಷ್ಣಾಶ್ರಮ, ಜಿಲ್ಲಾ ಆಡಳಿತ ಭವನ ನಂತರ ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ, ನವಲಗುಂದ ನಾಗಲಿಂಗಮಠ, ಇಟಗಿಯ ಭೀಮಾಂಬಿಕಾ ದೇವಸ್ಥಾನ, ಸೂಡಿ ಹಾಗೂ ಕಾಲಕಾಲೇಶ್ವರ ದೇವಸ್ಥಾನ ಮತ್ತು ಕುಕನೂರ ಬಳಿಯ ಇಟಗಿ ಮಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ. ಪ್ರವಾಸಕ್ಕೆ ಅಂದಾಜು ೧೯೫ ಕಿ.ಮೀಗಳು.

ಪ್ರವಾಸ ಮಾರ್ಗ ೨: ಗದಗದಿಂದ ಪ್ರವಾಸ ಪ್ರಾರಂಭವಾಗಿ ಲಕ್ಕುಂಡಿ, ಗದುಗಿನ ತ್ರಿಕೂಟೇಶ್ವರ , ವೀರನಾರಾಯಣ ದೇವಸ್ಥಾನ , ವೀರೇಶ್ವರ ಪುಣ್ಯಾಶ್ರಮ, ಸಾಯಿಬಾಬಾ ಮಂದಿರ , ರಾಮಕೃಷ್ಟಾಶ್ರಮ, ಜಿಲ್ಲಾ ಆಡಳಿತ ಭವನ ನಂತರ ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ , ಮುಳಗುಂದ ದಾವುಲಮಲಿಕ ದರ್ಗಾ, ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ, ಜೈನ್ ಬಸದಿ, ಮಾಗಡಿ ಪಕ್ಷಿಧಾಮ(ಗದುಗಿನ ಪಕ್ಷಿಕಾಶಿ), ಶಿರಹಟ್ಟಿ ಫಕೀರೇಶ್ವರ ಮಠ, ವೆಂಕಟಾಪುರದ ವೆಂಕಟೇಶ ದೇವಸ್ಥಾನ ಹಾಗೂ ಡಂಬಳದ ದೊಡ್ಡ ಬಸಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ. ಪ್ರವಾಸಕ್ಕೆ ಅಂದಾಜು ೧೬೫ ಕಿ.ಮೀಗಳು.

[ಬದಲಾಯಿಸಿ] ರಸ್ತೆ ಸಾರಿಗೆ

ವಾಯವ್ಯ .ಕ.ರಾ.ಸಾ.ಸಂಸ್ಥೆ ವಿಭಾಗ

ಗದಗ ಪಟ್ಟಣ ಸಾರಿಗೆ ಮತ್ತು ರೈಲು ಸಂಪರ್ಕ ಹೊಂದಿದೆ. ಸರಕಾರೇತರ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಾರಿಗೆ ವಾಹನಗಳು (ಬಸ್ ಗಳು) ಜಿಲ್ಲೆಯಾದ್ಯಂತ ಸಂಚರಿಸುತ್ತವೆ. ಗದಗದಿಂದ ಮುಂಬೈ, ಪೂನಾ, ಹೈದರಾಬಾದ, ತಿರುಪತಿ,ಬೆಂಗಳೂರು, ಮೈಸೂರಗಳಿಗೆ ಐಷಾರಾಮಿ ಬಸ್ಸುಗಳಿವೆ, ಹಾಗು ಹೈದರಾಬಾದ, ತಿರುಪತಿ,ಬೆಂಗಳೂರ , ಮುಂಬೈ ರೈಲುಗಳು ಓಡುತ್ತವೆ.

[ಬದಲಾಯಿಸಿ] ವಿಮಾನ ನಿಲ್ದಾಣ ಹಾಗೂ ಬಂದರು

ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ಕಾರವಾರ ಬಂದರು ಗದಗ ಹತ್ತಿರದಲ್ಲಿವೆ.ಹುಬ್ಬಳ್ಳಿ ವಿಮಾನ ನಿಲ್ದಾಣ ಗದಗ ಪಟ್ಟಣದಿಂದ ೫೮ ಕಿ.ಮೀ ಮತ್ತು ಕಾರವಾರ ಬಂದರು ೨೩೫ ಕಿ.ಮೀ ದೂರದಲ್ಲಿವೆ.

[ಬದಲಾಯಿಸಿ] ಹೆದ್ದಾರಿ

ರಾಷ್ಟ್ರೀಯ ಹೆದ್ದಾರಿ ೬೩: ನಗರದ ಹೃದಯ ಭಾಗದಲ್ಲಿ ಹಾಯ್ದು ಹೋಗುವ ರಸ್ತೆಗೆ ಇನ್ನೂ ಹೆಸರಿಡಲಾಗಿಲ್ಲ.

[ಬದಲಾಯಿಸಿ] ಕ್ರೀಡಾಂಗಣ

ಜಿಲ್ಲಾ ಕ್ರೀಡಾಂಗಣ : ಕೆ. ಹೆಚ್. ಪಾಟೀಲ‍‍‍ ಕ್ರೀಡಾಂಗಣ

  • ೨೦೦೯-- ೨೧ನೇ ರಾಷ್ಟ್ರೀಯ ಸಬ್ ಜೂನಿಯರ್ ಕಬಡ್ಡಿ ಚಾಂಪಿ�ಯ�ನ್‌ಷಿಪ್‌ನಲ್ಲಿ ಕ್ರಮವಾಗಿ ಕರ್ನಾ�ಟಕ ಬಾಲಕ ಮತ್ತು ಬಾಲಕಿಯರ ತಂಡಗಳಲ್ಲಿ ಮಂಜುನಾಥ ಬಡಿಗೇರ, ಹಾಗು ರೇಖಾ ಹಿರೇಮಠ ವಹಿಸಲಿದ್ದಾರೆ.

[ಬದಲಾಯಿಸಿ] ಪುರಸ್ಕಾರ

ಕರ್ನಾಟಕ ರತ್ನ

  • ಕರ್ನಾಟಕ ರತ್ನ : ೨೦೦೫ ಪದ್ಮಶ್ರೀ ಗೋವಿಂದ ಭೀಮಾಚಾರ್ಯ ಜೋಶಿ

ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ ವಿಜೇತರು

ಕರ್ನಾಟಕ ಸರಕಾರ ಏಕೀಕರಣ ಪ್ರಶಸ್ತಿ : ೨೦೦೮ವಿರೂಪಾಕ್ಷಪ್ಪ ಸೂಡಿ

ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೆತರು :[[]]ಅಮೃತೇಶ್ವರ ತಂಡರ

ರಾಜ್ಯ ಸಂಗೀತ ನೃತ್ಯ ಅಕಾಡೆಮೆ ಪ್ರಶಸ್ತಿ 2008-09

  • ಹಿಂದೂಸ್ತಾನಿ ಸಂಗೀತ : ಶೋಭಾ ಹುಯಿಲ (ಗಾಯನ)
  • ನೃತ್ಯ: ಕೆ. ಹರಿದಾಸ್

ಕೇಂದ್ರ ಸಮಾಜ ಕಲ್ಯಾಣ ಇಲಾಖೆ ಶ್ರೇಷ್ಠ ಸಾಧಕ ಪ್ರಶಸ್ತಿ : ೨೦೦೯ ಪುಟ್ಟರಾಜ ಗವಾಯಿಗೆ ವಿಶೇಷ ಸಾಧಕ ಪ್ರಶಸ್ತಿ

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಸಕ್ತ ೨೦೦೭ ಸಾಲಿನ ಗೌವರ ಪ್ರಶಸ್ತಿ ಹಾಗೂ ಕಲಾವಿದರ ವಾರ್ಷಿಕ ಪ್ರಶಸ್ತಿ :೨೦೦೭ ಮಾರುತೆಪ್ಪ ಬಲವಂತಪ್ಪ ಭಜಂತ್ರಿ (ಕರಡಿಮಜಲು)

[ಬದಲಾಯಿಸಿ] ಪ್ರಮುಖ ದಿನಗಳು ಗದಗ ೨೦೦೯

  • ಪೆಬ್ರವರಿ ೨೫- ಶಿವಾನಂದ ರಥ
  • ಮಾರ್ಚ್ ೦೩ - ಪುಟ್ಟರಾಜ ಗವಾಯಿಗಳ ಹುಟ್ಟುಹಬ್ಬ
  • ಎಪ್ರಿಲ್ ೯- ಜಗದ್ಗುರು ತೊಂಟದಾರ್ಯ ರಥ
  • ಎಪ್ರಿಲ್ ೨೭- ಗಂಜಿ ಬಸವೇಶ್ವರ ರಥ
  • ಜೂನ್ ೭ - ಕಾರ ಹುಣ್ಣಿಮೆ
  • ಜೂನ್ ೧೩ - ಗಾನಯೋಗಿ ಪಂಚಾಕ್ಷರಿ ಗವಯಿಗಳ ಪುಣ್ಯದಿನ
  • ಜೂನ್ ೨೨ - ಮಣ್ಣೆತ್ತಿನ ಅಮವಾಸ್ಯೆ
  • ಅಗಸ್ಟ ೧೦ - ಬಸವೇಶ್ವರ ನಗರ ವೀರಭದ್ರ ಜಾತ್ರೆ
  • ವೈಶಾಖ ಬಹುಳ ತ್ರೈಯೋದಶಿ - ಜಗದ್ಗುರು ಬೂದೀಶ್ವರರ ಜಾತ್ರೆ ಹೊಸಹಳ್ಳಿ

[ಬದಲಾಯಿಸಿ] ಜಿಲ್ಲಾಧಿಕಾರಿ

ಪ್ರಸ್ತುತ ಜಿಲ್ಲಾಧಿಕಾರಿ ಶ್ರೀ.ಎಸ್.ಶ೦ಕರನಾರಾಯಣ.ಭಾ.ಆ.ಸೇ

'ಹಿಂದಿನ ಜಿಲ್ಲಾಧಿಕಾರಿಗಳು

  • ಡಾ. ಎನ್. ವ್ಹಿ. ಪ್ರಸಾದ
  • ಸಿ. ಸಿಖಾ -೨೦೦೯
  • ಡಾ. ಎನ್. ವ್ಹಿ. ಪ್ರಸಾದ (ಐ.ಎ.ಸ್)
  • ಶ್ರೀ. ಶುಭೋದ ಯಾದವ
  • ಶ್ರೀ.ಎನ್. ಶ್ರೀರಾಮನ
  • ಶ್ರೀ. ಮೊಹಮ್ಮದ ಮೊಹಸಿನ್
  • ಶ್ರೀ. ಜಿ. ಎಮ್. ಧನಂಜಯ
  • ಶ್ರೀ .ರಾಜಕುಮಾರ ಖತ್ರಿ

[ಬದಲಾಯಿಸಿ] ನಗರ ಆಡಳಿತ

ಚಿತ್ರ:Gagad city.gif
ಗದಗ ನಗರ

ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಪದ್ಧತಿ ವಾರ್ಡ್ ಗಳು ನಗರದಲ್ಲಿ ಒಟ್ಟು ೩೫ ವಾರ್ಡ್ ಗಳು ಇರುತ್ತವೆ.

ಗದಗನ ಪ್ರಮುಖ ಬಡಾವಣೆಗಳು

ಹೊಸ ಬಡಾವಣೆಗಳು, ಮಸಾರಿ ,ಸಿದ್ದಲಿಂಗ ನಗರ , ವಿರೇಶ್ವರ ನಗರ ಊರಿನ ಸರ್ವತೋಮುಖ ಬೆಳವಣಿಗೆಯಾಗಿದೆ.

ಸಿನಿಮಾ ಚಿತ್ರ ಮಂದಿರಗಳು

ನಗರದಲ್ಲಿ ೬ ಸುಂದರ ಚಿತ್ರ ಮಂದಿರಗಳು ಇರುತ್ತವೆ, ಅವುಗಳು ಮಹಾಲಕ್ಷ್ಮಿ, ಶ್ರೀ ಕೃಷ್ಣ, ಚಿತ್ರಾ, ಕರ್ನಾಟಕ, ವೆಂಕಟೇಶ, ಮತ್ತು ಶಾಂತಿ ಚಿತ್ರ ಮಂದಿರಗಳು.

ಚಲನಚಿತ್ರ

ಗಾನಯೋಗಿ ಪಂಚಾಕ್ಷರಿ ಗವಾಯಿ (ಚಲನಚಿತ್ರ) ಗಾನಯೋಗಿ ಪಂಚಾಕ್ಷರ ಗವಾಯಿ ಪಂಚಾಕ್ಷರಿ ಗವಾಯಿ ಅವರ ಕುರಿತಾದ ಒಂದು ಕನ್ನಡ ಚಲನಚಿತ್ರ. ಇದಕ್ಕೆ ಹಂಸಲೇಖರವರು ಸಂಗೀತ ನೀಡಿದ್ದಾರೆ.

ಖಾದ್ಯ

ಗದಗ ಪಟ್ಟಣ ಬದನೇಕಾಯಿ ಬಜಿ,ಒಗ್ಗರಣೆ ಗಿರ್ಮಿಟ್ ಮತ್ತು ಮೆಣಸಿನಕಾಯಿ ಮಿರ್ಚಿಗೆ(ಮಿರ್ಚಿ ಭಜಿ) ತುಂಬ ಪ್ರಸಿದ್ದ.

[ಬದಲಾಯಿಸಿ] ಯೋಜನೆಗಳು

ಘೋಷಣೆ ೧೫/ಅಗಸ್ಟ/೨೦೦೮

  • ಗದಗ ವಿಮಾನ ನಿಲ್ದಾಣ -ಜಿಲ್ಲೆಗೆ ಅಗತ್ಯವಿರುವ ವಾಯುಸಂಪರ್ಕ ವಿಮಾನ ನಿಲ್ದಾಣ ರಚನೆಗೆ ೨೦೦ ಎಕರೆ ವಿಸ್ತೀರ್ಣದ ಸ್ಥಳ ಗುರುತಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ
  • ಸುಸಜ್ಜಿತ ಆಸ್ಪತ್ರೆ - ೨೫೦ ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೂ ಚಾಲನೆ
  • ಟ್ರಕ್ ಟರ್ಮಿನಲ್ -
  • ನಗರದ ಭೀಷ್ಮಕೆರೆ ಆವರಣದಲ್ಲಿ ೧೧೧ ಅಡಿ ಎತ್ತರದ ಬಸವೇಶ್ವರರ ಬೃಹತ್ ಪ್ರತಿಮೆ ನಿರ್ಮಾಣ
  • ಸುವರ್ಣ ರಂಗಮಂದಿರ ನಿರ್ಮಾಣ

[ಬದಲಾಯಿಸಿ] ಪ್ರಕಾಶನ

  • ವಿಜಯ ಬುಕ್ - ಡಿಪೋ ಮತ್ತು ಪ್ರಕಾಶನ
  • ಪಿ.ಸಿ.ಶಾಬಾದಿಮಠ ಬುಕ್ ಡಿಪೋ
  • ಎಮ್ ಶಾಬಾದಿಮಠ ಬುಕ್ - ಡಿಪೊ
  • ವಿಕ್ರಮ ಪ್ರಕಾಶನ -
  • ಬಿ.ಜಿ. ಸಂಕೇಶ್ವರ
  • ವೀರಶೈವ ಅಧ್ಯಯನ ಸಂಸ್ಥೆ
  • ವಿದ್ಯಾನಿಧಿ ಪ್ರಕಾಶನ
  • ಶ್ರೀ ಪಿ ಎಸ್ ಹೊಂಬಾಳ
  • ಸುರೇಶ ಪಬ್ಲಿಕೇಷನ್ಸ್
  • ಪಾರು ಪ್ರಕಾಶನ
  • ಭಾವೈಕ್ಯ ಪ್ರಕಾಶನ
  • ಮಾರುತೀ ಪ್ರಕಾಶನ
  • ಕನ್ನಡ ಸಾಹಿತ್ಯ ಪ್ರಕಾಶನ
  • ಶೈಲೇಂದ್ರ ಪ್ರಕಾಶನ
  • ಪರಿಮಳ ಪ್ರಕಾಶನ
  • ಚಿಕ್ಕಟ್ಟಿ ಪ್ರಕಾಶನ
  • ಶಿವ-ಬಸವ ಪ್ರಕಾಶನ ಹೊಸಹಳ್ಳಿ

[ಬದಲಾಯಿಸಿ] ಚಿತ್ರ ಗ್ಯಾಲರಿ

ಪುರಾತನ ದೇವಾಲಯಗಳು


ಹಿಂದು ದೇವಾಲಯಗಳು

ಜೈನ ದೇವಾಲಯಗಳು

ಮುಸ್ಲಿಮ್ ದೇವಾಲಯಗಳು

ಕ್ರೈಸ್ತ ದೇವಾಲಯಗಳು

ಗದಗ ಜಿಲ್ಲೆಯ ದೇವಾಲಯಗಳು

ಲಕ್ಕುಂಡಿ ದೇವಾಲಯಳು


ಸೂಡಿ ದೇವಾಲಯಳು


ಡಂಬಳ ದೇವಾಲಯಳು


ಪ್ರಮುಖ ವ್ಯಕ್ತಿಗಳು


ಗದಗ ಕಾಲೇಜಗಳು

ಪ್ರಮುಖ ಸ್ಥಳ


ದೇವಾಲಯಳು ಗದಗ ಜಿಲ್ಲೆ


ಲಕ್ಷ್ಮೇಶ್ವರ ದೇವಾಲಯಳು

ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ

ಮಾಗಡಿ ಪಕ್ಷಿಧಾಮ

ಸಂಪಾದಿಸಿ


Evolution-tasks.png ಗದಗ : ಲೇಖನದಲ್ಲಿ ಮಾಡಬೇಕಾದ ಕೆಲಸಗಳು

ಈ ಪಟ್ಟಿಯನ್ನು ಬದಲಿಸಿ

ಗದಗ/to do

[ಬದಲಾಯಿಸಿ] ಬಾಹ್ಯ ಸಂಪರ್ಕಗಳು

[ಬದಲಾಯಿಸಿ] ಉಲ್ಲೇಖಗಳು



GadagUser.png
ಗದಗ ಜಿಲ್ಲೆಯ- ತಾಲೂಕುಗಳು
ಗದಗ | ಶಿರಹಟ್ಟಿ | ಮುಂಡರಗಿ | ರೋಣ | ನರಗುಂದ
Karnataka-icon.jpg
ಕರ್ನಾಟಕದ ಜಿಲ್ಲೆಗಳು
ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿಕ್ಕಬಳ್ಳಾಪುರ | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ಯಾದಗಿರಿ ಜಿಲ್ಲೆ |ರಾಯಚೂರು | ರಾಮನಗರ | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ
"http://kn.wikipedia.org/w/index.php?title=ಗದಗ&oldid=245575" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು