ಗಂಗೈಕೊಂಡಚೋಳಪುರಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರಮನೆ ಸುತ್ತಾ ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿದ್ದು , ಇದರ ತಾರನೆಗೆ ಚಪ್ಪಟೆಯ ಸಣ್ಣ "ಟೈಲ್ಸ್" ಗಳನ್ನು ಉತ್ತಮ ಸುಣ್ಣದ ಗಾರೆಯನ್ನು ಉಪಯೋಗಿಸಿ ಮಾಡಲಾಗಿದೆ. ಕಂಬಗಳು ಬಹುಶಃ ಪಾಲಿಷ್ ಮಾಡಿದ ಮರದಿಂದ ಮಾಡಲಾಗಿದೆ, ಹಾಗೂ ಈ ಕಂಬಗಳು "ಗ್ರಾನೈಟ್" ಕಲ್ಲುಗಳ ಸಹಾಯದಿಂದ ಹಿಡಿಬಿಡಲಾಗಿದೆ. ಇಂದಿಗೂ ಇಲ್ಲಿನ ಸ್ಥಂಭಗಳು, ಬುಡಗಳು ಚೆನ್ನಗಿವೆ. ಅರಮನೆಯ ಸುತ್ತು-ಮುತ್ತುಲಿನಿಂದ ಕಬ್ಬಿಣದ ಮೊಳೆಗಳು ಮತ್ತು ಇತರ ಕಟ್ಟಡದ ಸಾಮಾನುಗಳು ದೊರೆತಿವೆ. ವೀರ ರಾಜೀಂದ್ರ ಚೋಳನ ಆಳ್ವಿಕೆಯಲ್ಲಿ, ಅವನ ಮುರನೇ ಮಗನ ಕಾಲದಲ್ಲಿ, ಗಂಗೈಕೊಂಡಚೋಳಪುರಂ ಅರಮನೆಯನ್ನು ಚೋಳ ಕೇರಳನ "ತಿರುಮಲಿಗೈ" ಅಥವ ಚೋಳ ಕೇರಳನ ಅರಮನೆ ಎಂದು ಕರೆಯುತಿದ್ದರು. ಇದು ರಾಜೇಂದ್ರ ಚೋಳ ಇದ್ದ ಕೆಲವು ಬಿರುದ್ದುಗಳಲೊಂದು.

ಅರಮನೆಯ ಕೆಲವು ಭಾಗಗಳನ್ನು ಈ ಕೆಳಕಂಡಂತೆ ಕರೆಯಲಾಗುತಿತ್ತು. ಇದು ರಾಸನದಲ್ಲಿಯೂ ಕೆತ್ತಲಾಗಿದೆ .

೧. ಆದಿಭೂಮಿ - ನೆಲ ಅಂತಸ್ಥು.

೨. ಕಿಲೈಸೋಪಾನ - ಪೂರ್ವಪಾಲನ್ನು.

೩. ಮಾವಳ್ಳಿ ವನಧಿರಾಜ - ಆಸನದ ಹೆಸರು.

ಈ ಅರಮನೆಯು ಬಹು ಅಂಥಸ್ಥಿನದ್ದಾಗಿದ್ದು, ಒಂದನೇ ಕುಲತುಂಗನ ಕಾಲಮಾನದ ಶಾಸನವೊಂದರಲ್ಲಿ ಈ ಅರಮನೆ ಉಲ್ಲೇಖವಿದ್ದು , ಗಂಗೈಕೊಂಡಚೋಳ ಮಾಳ್ಳಿಗೈ ಬಗ್ಗೆ ಪ್ರಸ್ಥಾಪವಿದೆ. ಇದುಪ್ರತಿ ಒಂದು ರಾಜಕುಟುಂಬಕ್ಕೂ ತನ್ನದೇ ಆದ ಅರಮನೆ ಇತ್ತೆಂದು ಉಲ್ಲೇಖಿಸಿದೆ.

ಮಲ್ಲಿಗೈ ಮೆದು

ಪ್ರಮುಖ ದೇವಾಲಯ[ಬದಲಾಯಿಸಿ]

ಗಂಗೈ ಕೊಂಡಚೋಳಪುರಂ

ಮುಖ್ಯ ದೇವಾಲಯದಲ್ಲಿ ಗರ್ಭ ಗೋಪುರವಿದ್ದು. ಅದನ್ನು "ಶ್ರೀ ವೀಮಾನ" ಅಥವ "ಶ್ರೀ ಕೊವಿಲ್" ಎಂದು ಕರೆಯುತ್ತಾರೆ. ಇಲ್ಲಿ ಒಂದು ದೊಡ್ಡ ಆಯತಾಕಾರದ ಮಂಟಪವಿದ್ದು, ಅದನ್ನು ಮಹದ್‌ಮಂಟಪ ಎನ್ನುವರು ಹಾಗೂ ಅದರ ಮಧ್ಯ ಭಾಗದ ಆಕೃತಿಯನ್ನು ಮೂಖಮಂಟಪ ಎನ್ನುವರು.[೧] ಮುಖಮಂಟಪವು ತನ್ನ ಪಾಯದಿಂದ ಹಿಡಿದು ಒಟ್ಟು ಒಂಭತ್ತು ಭಾಗಗಳನ್ನು ಒಳಗೊಂಡಿದೆ. ಅವುಗಳೆಂದರೆ,

೧. ನೆಲಮಾಳಿಗೆ (ಉಪ ಪೀಠ)

೨. ತಳಮಾಳಿಗೆ (ಆದಿಸ್ಥಾನ)

೩. ಗೋಡೆ (ಬಿತ್ತಿ)

೪. ಮಾಳಿಗೆ (ತಾರಸಿ)

೫. ಹಾರ

೬. ತಳಭೂಮಿ

೭. ಕುತ್ತಿಗೆ (ಗ್ರೀವ)

೮. ಶಿಖರ

೯. ಕೂನೆ (ಸ್ಥೂಪ)

ವಾಸ್ತು ಗ್ರಂಥಗಳ ಪ್ರಕಾರ, ಉಪ ಪೀಠಗಳನ್ನು ದೇವಸ್ಥಾನದ ಎತ್ತರವನ್ನು ಹೆಚ್ಚಿಸಲು ಮಾಡುತ್ತಿದ್ದರೆಂದು ತಿಳಿದುಬಂದಿದೆ. ಇದು ಇಡೀ ದೇವಸ್ತಾನಕ್ಕೆ ಸ್ಥಿರ ರಚನೆ ಹಾಗೂ ಗೋಪುರಕ್ಕೆ ಭವ್ಯತೆ ನೀಡುತ್ತದೆ. ಈ ಉದ್ದೇಶಗಳು ತಂಜಾಊರಿನ ದೇವಾಲಯ ಹಾಗೂ ಗಂಗೈಕೊಂಡಚೋಳಪುರದ ದೇವಾಲಯಗಳು ಸೊಗಸಾಗಿ ಅನುಸರಿಸಿವೆ. ಇದು ಸಾಮಾನ್ಯನಿಗೂ ಗೋಚರಿಸುವಂತಿರುವ ಭವ್ಯತೆಗಳು (ಆದರೆ ವಾಸ್ತು ಶಾಸ್ತ್ರ ಕೊಂಡವಾದರೂ ತಿಳಿದಿರುವ ಅಗತ್ಯವಿದೆ). ಈ ನೆಲಮಾಳಿಗೆಯ ಗೋಪುರದ ಸುತ್ತು ಓಡಾಡಲು ಜಾಗವನ್ನೂ ಮಾಡಿಕೊಟ್ಟಿದೆ. ಈ ದೇವಾಲಯವನ್ನು ಸಿಂಹಗಳು ಮುಂದಿನ ಎರಡು ಕಾಲ್‌ಗಳನ್ನು ಎತ್ತಿರುತ್ತವೆ.[೨]

ಬೃಹದೇಶ್ವರ ದೇವಸ್ಥಾನ

ಮುಖ್ಯ ಆದಿಸ್ಥಾನವು ವೈವಿದ್ಯತೆಯಿಂದ ವ್ಯಾಖ್ಯನಿಸಿದ್ದು, ಕುಮುದಗಳಿಂದ ಸೂರನ್ನು ಅಲಂಕರಿಸಲಾಗಿದೆ. ಇದರಲ್ಲಿ "ಲೀಯೊಗ್ರಿಫ಼್"ಗಳು ಹಾಗೂ ಸವಾರರೂ ಸೇರಿದ್ದಾರೆ. ಇವು ಶಿಖರಭಾಗದಲ್ಲಿ ಕೆತ್ತಲ್ಪಟ್ಟಿವೆ. ಇವೆಲ್ಲವು ಗರ್ಭ ಅಂದವನ್ನು ಇಮ್ಮಡಿಗೊಳಿಸಲು ಪೂರಕವಾಗಿವೆ. ಮುಖ್ಯ ನೆಲಮಾಳಿಗೆಯ ಮೇಲೆ ಹೋಗುವ ಕಾರ್ನಿಸ್‌ನನ್ನು ಗೋಡೆ ಅಥವಾ ಬಿತ್ತಿ ಎನ್ನುವರು. ಇದರ ಮೇಲೆ ಅಸಂಖ್ಯ ದೇವತೆಗಳನ್ನು ಕೆತ್ತಲಾಗಿದ್ದು, ಮನಮೋಹಕವಾಗಿದೆ. ಈ ದೇವಾಲಯದ ಗೋಡೆಗಳು ಎರಡು ಸಮತಲ ಭಾಗಗಳನ್ನು ಹೊಂದಿದೆ. ಕೆಳಗಿನ ಹಾಗು ಮೇಲಿನ ಭಾಗಗಳು ಗೋಡೆಗಳನ್ನು ಒಳಗೊಂಡಿವೆ. ಇದು ಮುಂದಿನಭಾಗ ದೊರತು ಪಡಿಸಿ ಇನ್ನೆಲ್ಲಾ ಮೂರು ಭಾಗಗಳಲ್ಲೂ ಇದೆ.

ಅರ್ಧನಾರೀಶ್ವರ

ಲಂಬವಾದ ಗೋಡೆಯಲ್ಲಿನ ಮೇಲ್ಮೈನಲ್ಲಿ ಆಯತಕಾರದ ಹಾಗು ಚೌಕಾಕಾರದ ಕಾರ್ನಿಸ್‌ಗಳಿವೆ. ಪ್ರತಿಯೊಂದಕ್ಕೂ ಮಧ್ಯದ ಗೊಡೆಗಳಿವೆ. ಅದರಲ್ಲಿ ಒಂದು ದೇವರು ಹಗೂ ಕೆಲವು ರಮಣೀಯ ಕೆತ್ತನೆಗಳಿವೆ. ಈ ಒಂದೊಂದು ಗೋಡೆ ತಮ್ಮ-ತಮ್ಮ ದೇವರುಗಳ ಕೆತ್ತನೆಗಳೊಂದಿಗೆ ಸಣ್ಣ-ಸಣ್ಣ ಗರ್ಭಗುಡಿಗಳಂತೆ ಕಾಣುತ್ತವೆ. ಮುಂದೆ ಕೆಳಭಾಗವು ಹೂದಾನಿ ಹಾಗೂ ಚೌಕಸ್ಥಂಭಗಳಿಂದ ಅಲಂಕರಿಸಲಾಗಿದೆ. ಮೇಲಿನ ಭಾಗದಲ್ಲಿ ದೇವರುಗಳ ಗೊಡುಗಳಿದ್ದು. ಕೆಳಗೆ ಪ್ರಮುಖ ಐದು ದೇವತೆಗಳಿದ್ದು ಹಾಗೂ ಒಂಭತ್ತು ದೇವತೆಗಳು ಮೇಲಿನ ಭಾಗದಲ್ಲಿವೆ.

ಶಿವನ ದೇವಾಲಯ

ಇವುಗಳನ್ನು ನೋಡಿ[ಬದಲಾಯಿಸಿ]

ಬಾಹ್ಯ ಸಂಪರ್ಕ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2016-05-28. Retrieved 2015-02-10.
  2. http://www.iloveindia.com/indian-monuments/gangaikondacholapuram.html