ಕ್ರಿಸ್ತದೆಲ್ಫಿಯನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕ್ರಿಸ್ಟಾಡೆಲ್ಫಿಯನ್ನರು ಆಫ್ ಚಾಪೆಲ್, ಬಾತ್, ಇಂಗ್ಲೆಂಡ್.

ಕ್ರಿಸ್ಡಡೆಲ್ಫಿಯನ್ನರು' (Christadelphians) ಒಂದು ಕ್ರೈಸ್ತ ಸಮುದಾಯವಾಗಿದ್ದು ಇದು 1840ರಲ್ಲಿ ಅಮೇರಿಕ ಮತ್ತು ಬ್ರಿಟನ್ನಲ್ಲಿ ಉಗಮವಾಯಿತ್ತು. ಕ್ರಿಸ್ಡಡೆಲ್ಫಿಯನ್ನರು"ಯೆಂಬ ಪದದ ಹೆಸರು ಗ್ರೀಕ್ ಮೂಲವಾಗಿದ್ದು, ಇದರ ಅರ್ಥ 'ಕ್ರಿಸ್ತನಲ್ಲಿ ಸಹೋದರ ಮತ್ತು ಸಹೋದರಿ' ಎಂಬುದಾಗಿರುತ್ತದೆ. ಪ್ರಸ್ತುತ 120 ರಾಷ್ರಗಳಲ್ಲಿ ಸುಮಾರು 60,000 ಸದಸ್ಯರುಗಳನ್ನೂಂದಿರುತ್ತದೆ. [೧][೨]

ಈ ಸಮುದಾಯವು ಬೈಬಲ್ / ಸತ್ಯವೇಧಾರಿತಗೂಂಡ ಸಾಮಾನ್ಯ ನಂಬಿಕೆಯಾಗಿದ್ದು, ಇವರಿಗೆ ಯಾವ ಕೇಂದ್ರ ಕಛೇರಿಯಿರುವುದಿಲ್ಲ. ಕ್ರಿಸ್ಡಡೆಲ್ಫಿಯನ್ನರ ನಂಬಿಕೆಯಂತೆ ಯೇಸುವು ದೇವರಾತ್ಮ ಶಕ್ತಿಯ ಮೂಲಕ ಕನ್ಯೆಯಿಂದ ಜನಿಸಿದ್ದುದರಿಂದ ಇವರನ್ನು 'ದೇವರ ಮಗ' ಏಂಬುದಾಗಿ ಕರೆಯಲಾಗುತ್ತದೆ. ಈ ಸಮುದಾಯವು ಯೇಸು ಕ್ರಿಸ್ತನು ತನ್ನ ಜನನಕ್ಕಿಂತ ಮುನ್ನ ಅಸ್ತಿತ್ವದಲ್ಲಿರಲಿಲ್ಲ ಎಂಬುದಾಗಿ ನಂಬಿದ್ದು, ಮೇರಿಯವರಿಂದ ಜವಿಸಿದ್ದುದರಿಂದ ಇವರಿಗೆ 'ಮನುಷ್ಯ ಕಮಾರ' ನೆಂಬ ನಾಮಧೇಯವನ್ನು ನೀಡಲಾಗಿದೆ. ಮೇರಿಯವರು ದಾವೀದ, ಅಬ್ರಹಾಮ ಮತ್ತು ಆದಾಮ ರವರ ವಂಶಕ್ಕೆ ಸೇರಿದವರಾಗಿದ್ದಾರೆ.

ಯೇಸುವು ಮತ್ತೆ ಎರಡನೆಯ ಭಾರಿ ಭೂಮಿಗೆ ಆಗಮಿಸುತ್ತಾರೆ, ಮತ್ತು ಆತನಲ್ಲಿ ಮರಣ ಹೂಂದಿದವರನ್ನು ಪುನರುತ್ಥಾನಗೂಳಿಸಿ, ನ್ಯಾಯವಿಚಾರಣೆಗೆ ಒಳಪಡಿಸಿ ಆತನ ರಾಜ್ತದಲ್ಲಿ ಇವರಿಗೆ ವಾಸಿಸಲು ಅನುವುಮಾಡಿಕೂಡುತ್ತಾರೆಂಬುದಾಗಿ ಬೋಧಿಸುತ್ತಾರೆ.

'ಸೈತಾನ' ಪರಿಕಲ್ಪನೆಯು ಒಂದು ದ್ರಷ್ಟಾಂತವಾಗಿದ್ದು, ಪಾಪವನ್ನು ಮನುಷ್ಯನಂತೆ ಮೂರ್ತಿಕರಿಸಲಾಗಿದೆ. ಆದರೆ ಇದು ಪರಲೋಕದಿಂದ ಬಿದ್ದ ದೇವದೂತನಲ್ಲ. [೩]

ಲಿನಕ್ಸ್[ಬದಲಾಯಿಸಿ]

  1. ಕ್ರೈಸ್ತರ ವಿಶ್ವಕೋಶ
  2. ಬಿಬಿಸಿ, ಇಂಗ್ಲೀಷ್ ನಲ್ಲಿ ಲೇಖನ.
  3. Christadelphians.in (Kannada)