ಕ್ಯಾಂಗರೂ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Kangaroo and joey03.jpg

ಕ್ಯಾಂಗರೂ ಮ್ಯಾಕ್ರೊಪಾಡಡಿ ಕುಟುಂಬದ (ಮ್ಯಾಕ್ರೊಪಾಡ್ ಎಂದರೆ ದೊಡ್ಡ ಪಾದ) ಒಂದು ಹೊಟ್ಟೆಚೀಲದ ಪ್ರಾಣಿ. ಸಾಮಾನ್ಯ ಬಳಕೆಯಲ್ಲಿ ಈ ಪದವನ್ನು ಈ ಕುಟುಂಬದ ಅತಿ ದೊಡ್ಡ ಪ್ರಜಾತಿಗಳನ್ನು, ವಿಶೇಷವಾಗಿ ಮ್ಯಾಕ್ರೊಪಸ್ ಜಾತಿಯವುಗಳನ್ನು, ಅಂದರೆ ಕೆಂಪು ಕ್ಯಾಂಗರೂ, ಆಂಟಿಲೋಪಿನ್ ಕ್ಯಾಂಗರೂ, ಪೌರ್ವಾತ್ಯ ಬೂದು ಕ್ಯಾಂಗರೂ ಮತ್ತು ಪಾಶ್ಚಾತ್ಯ ಬೂದು ಕ್ಯಾಂಗರೂವನ್ನು, ವಿವರಿಸಲು ಬಳಸಲಾಗುತ್ತದೆ. ಈ ಕುಟುಂಬವು ವಾಲಬಿಗಳು, ವೃಕ್ಷ ಕ್ಯಾಂಗರೂಗಳು, ವಾಲರೂಗಳು, ಪ್ಯಾಡಿಮೆಲನ್‍ಗಳು ಮತ್ತು ಕ್ವಾಕಾ, ಎಲ್ಲ ಸೇರಿ ಕೆಲವು ೬೩ ಜೀವಂತ ಪ್ರಜಾತಿಗಳನ್ನು ಒಳಗೊಂಡಂತೆ, ಅನೇಕ ಚಿಕ್ಕದಾದ ಪ್ರಜಾತಿಗಳನ್ನು ಕೂಡ ಒಳಗೊಳ್ಳುತ್ತದೆ.

"http://kn.wikipedia.org/w/index.php?title=ಕ್ಯಾಂಗರೂ&oldid=368426" ಇಂದ ಪಡೆಯಲ್ಪಟ್ಟಿದೆ