ಕೊಪ್ಪ
| ಕೊಪ್ಪ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ಚಿಕ್ಕಮಗಳೂರು |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
km² - 763 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (೨೦೦೧) - ಸಾಂದ್ರತೆ |
19226 - /ಚದರ ಕಿ.ಮಿ. |
ಕೊಪ್ಪ ಪಟ್ಟಣ ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ. ಹಿಂದೆ "ತಪ್ಪು ಮಾಡಿದವರನ್ನು ಕೊಪ್ಪಕ್ಕೆ ಹಾಕು" ಎಂಬ ಪ್ರತೀತಿಗೆ ತಕ್ಕ ಹಾಗೆ ಮಲೇರಿಯಾದ ಬೀಡಾಗಿ, ಸೌಕರ್ಯಗಳಿಲ್ಲದ ಕೊಂಪೆಯಾಗಿತ್ತು ಎಂದು ಹೇಳುತ್ತಾರೆ. ಆದರೆ ಇಂದಿನ ಕೊಪ್ಪಕ್ಕೂ ಆಗಿನ ಪ್ರತೀತಿಗೂ ಸಂಬಂಧವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿದೆ. ಶಾಲಾ ಕಾಲೇಜುಗಳು, ಆಯುರ್ವೇದ ಕಾಲೇಜು, ಆಸ್ಪತ್ರೆ, ಇತ್ಯಾದಿ ಇತ್ಯಾದಿ ಎಲ್ಲಾ ನಾಗರಿಕ ಸೌಲಭ್ಯಗಳನ್ನೂ ಹೊಂದಿದೆ. ಮಲೆನಾಡಿನ ಮಧ್ಯದ, ಪ್ರಕೃತಿ ಸೌಂದರ್ಯ ಯಥೇಚ್ಛವಾಗಿರುವ ಈ ಊರಿಗೆ "ಕರ್ನಾಟಕದ ಕಾಶ್ಮೀರ" ಎಂದೂ ಅನ್ನುವುದುಂಟು.
ಕಾರ್ಮಿಕರೇ ಒಂದುಗೂಡಿ ಸಹಕಾರಿ ಪದ್ಧತಿಯಲ್ಲಿ ಸಾರಿಗೆ ಬಸ್ಸುಗಳನ್ನು "ಸಹಕಾರ ಸಾರಿಗೆ" ಎಂಬ ಹೆಸರಿನಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಅಪರೂಪದ ಪ್ರಯತ್ನ ಈ ಊರಿನಲ್ಲಿ ನೋಡಸಿಗುತ್ತದೆ.
ಪರಿವಿಡಿ |
ಪ್ರೇಕ್ಷಣೀಯ ಸ್ಥಳಗಳು [ಬದಲಾಯಿಸಿ]
- ಶ್ರೀ ಆದಿಶಂಕರಾಚಾರ್ಯ ಲಕ್ಷ್ಮೀ ನರಸಿಂಹ ಪೀಠ ಹರಿಹರಪುರ
- ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಮೇಗೂರು
- ಉತ್ತಮೇಶ್ವರ
- ಕುವೆಂಪು ಜನ್ಮಸ್ಥಳ, ಹಿರೇಕೊಡಿಗೆ
- ಕೋಟೇಗುಡ್ಡ
- ಕಮಂಡಲ ಗಣಪತಿ ದೇವಸ್ಥಾನ (ಕೆಸವೆ ಗ್ರಾಮ)
- ಅನ್ನಪೂರ್ಣೇಶ್ವರಿ ದೇವಸ್ಥಾನ, ಹೊರನಾಡು
- ಕಳಸೇಶ್ವರ ದೇವಸ್ಥಾನ, ಕಳಸ
- ತುಂಗಾ ನದಿ
- ಮೃಗವಧೆ (ತೀರ್ಥಹಳ್ಳಿ ಹತ್ತಿರ)
- ರಾಜರಾಜೇಶ್ವರಿ ದೇವಸ್ಥಾನ ಶಕಟಪುರ ಭಂಡಿಗಡಿ
- ಕೆಸವೆ ಜಲಪಾತ (ಕೆಸವೆ ಗ್ರಾಮ)
- ವೀಕ್ಷಣಾ ಗೋಪುರ (ಕೊಪ್ಪ-ಜಯಪುರ ರಸ್ತೆಯಲ್ಲಿ)
- ಚಿಟ್ಟೆಮಕ್ಕಿ ಮಲ್ಲಿಕಾರ್ಜುನ ದೇವಸ್ಥಾನ
ತಾಲೂಕಿನ ಪ್ರಮುಖ ಊರುಗಳು [ಬದಲಾಯಿಸಿ]
ಹೆಚ್ಚಿನ ಮಾಹಿತಿಗಳು [ಬದಲಾಯಿಸಿ]
ಈ ಸ್ಥಳಕ್ಕೆ ಕೊಪ್ಪ ಎ೦ದು ಹೆಸರು ಬರಲು ಕಾರಣ ಈ ಊರಿನ ಗ್ರಾಮದೇವತೆ "ಕೋಪದ ವೀರಭದ್ರ ಸ್ವಾಮಿ". ಬಹಳ ವರ್ಷಗಳಿ೦ದ ಇಲ್ಲಿನ ನಿವಾಸಿಗಳು ಭಕ್ತಿಯಿ೦ದ ಈ ದೇವಸ್ತಾನಕ್ಕೆನಡೆದುಕೊಳ್ಳುತ್ತಾ ಬ೦ದಿದ್ದಾರೆ. ಚೈತ್ರಮಾಸದ ಹುಣ್ನಿಮೆಯ೦ದು ನದೆಯುವ ಜಾತ್ರೆಯಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಾರೆ. ಇದೇ ಸಮಯದಲ್ಲಿ ಹರಕೆ ಇತ್ಯಾದಿ ಆಚಾರಣೆಗಳು ನಡೆಯುತ್ತವೆ.
ಶೈಕ್ಷಣಿಕ ಮಾಹಿತಿ [ಬದಲಾಯಿಸಿ]
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾ೦ಶ ಪಡೆಯುತ್ತಿವೆ. ಶ್ರೀ ವೆಂಕಟೇಶ್ವ ರ ವಿದ್ಯಾಮಂದಿರ , ಶ್ರಿ ಶಾರದ ವಿದ್ಯಾ ಮಂದಿರ ಹಾಗೂ ಇನ್ನಿತರ ಅನೇಕ ಶಾಲೆಗಳು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ನೀಡುತ್ತಿವೆ.
ಪದವಿಪೂರ್ವಾನ೦ತರ ವಿದ್ಯಾಭ್ಯಾಸಕ್ಕೆ ತಾಲ್ಲೂಕಿನಲ್ಲಿ "ಪ್ರಥಮದರ್ಜೆ ಕಾಲೇಜು (ಬಾಳಗಡಿ)" ಹಾಗೂ "ಆರೂರು ಲಕ್ಷ್ಮೀನಾರಾಯಣರಾವ್ ಸ್ಮಾರಕ ಆಯುರ್ವೇದ ಮಹಾವಿದ್ಯಾಲಯ" ಇದ್ದು ಉತ್ತಮ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿವೆ.
ಸರ್ಕಾರದಿ೦ದ ವೃತ್ತಿಪರ ಶಿಕ್ಷಣಕೇ೦ದ್ರ ಹೊಸ ವ್ಯವಸ್ಥೆಗಳೊ೦ದಿಗೆ ನಡೆಯುತ್ತಿದ್ದು ಕೈಗಾರಿಕಾ ತರಬೇತಿ ನೀಡಲಾಗುತ್ತಿದೆ.
ಸ೦ಸ್ಕೃತ ಹಾಗೂ ವೇದಪಾಠ ಅಭ್ಯಾಸಕ್ಕಾಗಿ ಹರಿಹರಪುರದ ಶ್ರೀಮಠದ ಚಿತ್ರಕೂಟದಲ್ಲಿ ವ್ಯವಸ್ಥಿತ ಗುರುಕುಲವಿದ್ದು ನಾನಾ ಪ್ರದೇಶಗಳಿ೦ದ ಆಸಕ್ತರು ವಿದ್ಯಾಭ್ಯಾಸ ಮಾಡಲು ಬರುತ್ತಾರೆ.