ಕೊಟ್ಟೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೊಟ್ಟೂರು
ಕೊಟ್ಟೂರು
town
Population
 (2001)
 • Total೨೨,೭೦೧

ಕೊಟ್ಟೂರು ಬಳ್ಳಾರಿ ಜಿಲ್ಲೆಯ ಒಂದು ಐತಿಹಾಸಿಕ ಹಿನ್ನಲೆ ಇರುವ ೨೦೧೮ನೇ ಇಸವಿಯಲ್ಲಿ ಹೊಸದಾಗಿ ಘೋಷಣೆಯಾದ ತಾಲೂಕು ಕೇಂದ್ರ.

ಇತಿಹಾಸ[ಬದಲಾಯಿಸಿ]

ಇದು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ನೆಲೆವೀಡು. ಶ್ರೀಗುರು ಕೊಟ್ಟೂರೇಶ್ವರನಿಗೆ ಕೊಟ್ಟೂರು ಬಸವೇಶ್ವರ ಎಂತಲು ಕರೆಯುತ್ತಾರೆ. ಪ್ರತಿ ವಷ೯ ಫೆಬ್ರುವರಿ ಅಥವಾ ಮಾಚ್೯ ತಿಂಗಳಲ್ಲಿ ರಥೋತ್ಸವ ಜರುಗುವುದು ಡಿಸೆ೦ಬರ್ ತಿ೦ಗಳಲ್ಲಿ ಲಕ್ಷ ದೀಪೊತ್ಸ್ತ್ವವ ಜರುಗುವುದು. ಈ ಸ್ವಾಮಿಯ ಹಿರೇಮಠಕ್ಕೆ ಅನೇಕ ಭಕ್ತರಿದ್ದಾರೆ. ಈ ದೇವರ ಗುಡಿಯು ಮೂರು ಸ್ಥಳಗಳಲ್ಲಿ ಇದೆ. ಒಂದು ಹಿರೇಮಠ ಅಥವಾ ದೊಡ್ಡಮಠ, ತೊಟ್ಟಿಲು ಮಠ ಮತ್ತು ಗಚ್ಚಿನ ಮಠ.ಗಚ್ಚಿನಮಠದಲ್ಲಿ ಅಕ್ಬರ್ ಚಕ್ರವತಿ೯ ಕೊಟ್ಟಿದ್ದಾನೆ ಎಂಬ ಪ್ರತೀತಿಯಿರುವ ಒಂದು ಮಂಚವೂ ಕೂಡ ಇದೆ.ಗಚ್ಚಿನ ಮಠದಲ್ಲಿ ಶ್ರೀ ಸ್ವಾಮಿಯ ಜೀವಂತ ಸಮಾಧಿಯೂ ಇದೆ.

ಕೊಟ್ಟೂರಿಗೆ ಮೊದಲಿದ್ದ ಹೆಸರು ಶಿಖಾಪುರ. ಶ್ರೀ ಗುರು ಕೊಟ್ಟೂರೇಶ್ವರರು ಆಗಮಿಸಿದ ನಂತರ ಪವಾಡಗಳನ್ನು ಮಾಡುತ್ತಾ, ಇಲ್ಲದವರಿಗೆ ಪವಾಡ ಮಾಡಿ ಕೊಡುತ್ತಾ , ಕೊಡುವ ಊರು ಕೊಟ್ಟೂರು ಎಂದಾಯ್ತು ನೋಡ ಎನ್ನುತ್ತಾರೆ ಹಿರಿಯರು.

ಕೊಟ್ಟೂರೇಶ್ವರ ಸ್ವಾಮಿ ಉತ್ಸವಕ್ಕೆ ಭಕ್ತರು ತಮ್ಮ ತಮ್ಮ ಊರುಗಳಿಂದ ಕಾಲ್ನಡಿಗೆಯಲ್ಲಿ ನಡೆದುಕೊಂಡು ಬರುವುದು ರೂಢಿಯಲ್ಲಿದೆ. ೨೦೧೦ ರಲ್ಲಿ ಸುಮಾರು ೫೫೦೦ಕ್ಕೂ ಹೆಚ್ಚು ಭಕ್ತರು ದಾವಣಗೆರೆ ಜಿಲ್ಲೆ ಮತ್ತು ಹರಿಹರ ತಾಲೂಕಿನಿಂದ ಬಂದಿದ್ದರು.

ಪೌರಾಣಿಕ ಹಿನ್ನಲೆಯಲ್ಲಿ ಶ್ರೀ ಕೊಟ್ಟೂರಶ್ವರ ಸ್ವಾಮಿ ನೆಲೆ ನಿಲ್ಲುವ ಮುಂಚೆ ಈ ಕ್ಷೇತ್ರದಲ್ಲಿ ಶ್ರೀ ವೀರಭದ್ರಶ್ವೇರ ಸ್ವಾಮಿ ನೆಲೆಯ ಕ್ಷೇತ್ರವಾಗಿತ್ತು, ಒಮ್ಮೆ ಕೊಟ್ಟೂರೇಶ್ವರ ಸ್ವಾಮಿಯು ಊರುರು ಸುತ್ತುತ್ತಾ ಶಿಖಾಪುರಕ್ಕೆ ಬಂದಾಗ ರಾತ್ರಿ ಆಯಿತು ಆ ಸಮಯದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಬಳಿ ಬಂದು ಕೊಟ್ಟುರೇಶ್ವರರು ತಮಗೆ ತಂಗಲು ಸ್ಥಳವನ್ನು ನೀಡುವಂತೆ ಕೋರಲು ಒಪ್ಪಿದ ವೀರಭದ್ರೇಶ್ವರರರು ತಮ್ಮ ಆಸ್ತಾನದಲ್ಲಿ ಮಲಗಲು ಸ್ಥಳವನ್ನು ನೀಡಿದರು ಬೆಳಗಾಗುವ ಹೊತ್ತಿಗೆ ಸಂಪೂರ್ಣಾವಾಗಿ ಇಡಿ ಆಸ್ತಾನವನ್ನು ಆವರಿಸಿದ ಕೊಟ್ಟೂರೇಶ್ವರರು ಶ್ರೀ ವೀರಭದ್ರನಿಗೆ ಸ್ಥಳವೇ ಇಲ್ಲದಂತೆ ಮಾಡಿದರು ಈ ಕುರಿತು ವೀರಭದ್ರನು ಕೊಟ್ಟೂರೇಶ್ವರರನ್ನಲ್ಲಿ ಕೇಳಲಾಗಿ ನೀವು ನಿಮ್ಮ ಸ್ಥಳವನ್ನು ನನಗೆ ನೀಡಿ ನೀವು ಕೊಡದಗುಡ್ಡಕ್ಕೆ ಹೋಗಿ ನೆಲೆಸಿರಿ ಎಂದು ಹೇಳಿದರು ಅದರಂತೆ ವೀರಭದ್ರ ದೇವರು ಇನ್ನು ಮುಂದೆ ಆ ನಿಮ್ಮ ಸ್ಥಳವನ್ನು ನೀವು ಯಾರಿಗೂ ಕೊಡಬಾರದು ಆ ಕ್ಷೇತ್ರವು "ಕೊಡದಗುಡ್ಡ" ಎಂದು ಪ್ರಖ್ಯಾತವಾಗಲಿ ಅಂತಯೇ ನೀವು ನನಗೆ ಕೊಟ್ಟ ಈ ಶಿಖಾಪುರ ಇನ್ನು ಮುಂದೆ "ಕೊಟ್ಟೂರು" ಎಂದು ಪ್ರಖ್ಯಾತವಾಗಲಿ ಎಂದು ಹರಸಿದರು.

ವ್ಯಾಪಾರ ವಹಿವಾಟು[ಬದಲಾಯಿಸಿ]

ಈ ಊರಿನ ಮಂಡಕ್ಕಿ ಮೆಣಸಿನಕಾಯಿ ಎಂಬ ಖಾದ್ಯವು ಅತ್ಯಂತ ರುಚಿಕರವಾಗಿರುವುದು ಮತ್ತು ಜನಪ್ರಿಯವು ಆಗಿದೆ. ಚಿಕ್ಕ ಪಟ್ಟಣವಾಗಿದ್ದರೂ ವ್ಯಾಪಾರ ವಹಿವಾಟು ಸಮೃದ್ಡವಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಅನ್ನದಾತನ ಮಾರುಕಟ್ಟೆ, ೪ ಕಾಟನ್ ಪ್ರೆಸ್ ಗಳು ೯ ಹತ್ತಿ ಜಿನಿಂಗ್, ಮತ್ತು ೮ ಶೇಂಗಾ ಡಿಕಾಟಿಕೆಟಿಂಗ್ ಮಿಲ್ ಗಳು ವ್ಯಾಪರದ ಅವಶ್ಯಕತೆ ಪೂರೈಸುವುದು. ಈ ಊರಿನ ಪ್ರಮುಖ ಬೆಳೆಗಳಂದರೆ ಜೋಳ,ರಾಗಿ ,ಹತ್ತಿ, ಶೇಂಗಾ, ಸೂಯ೯ಕಾಂತಿ ಇನ್ನಿತರವು.ತೂಕ ಮಾಡಲಿಕ್ಕೆ ದೇವರಮನಿ ವೇ ಬ್ರಿಡ್ಜ್ ಇದ್ದು ಮತ್ತು ಈ ಊರಿನಲ್ಲಿ ಎರಡು ಚಲನಚಿತ್ರ ಮಂದಿರಗಳು (ರೇಣುಕ ಮತ್ತು ಕೊಟ್ಟೂರೇಶ್ವರ) ಸಾವ೯ಜನಿಕರ ಮನರಂಜನೆಯ ಅವಶ್ಯಕತೆ ಪೂಣ೯ಗೊಳಿಸುತ್ತವೆ. ಅಂತಯೇ ಇತ್ತಿಚ್ಚೀಗೆ ಹೊಸದಾಗಿ ರೈಲು ಓಡಾಟ ಪ್ರಾರಂಭವಾಗಿದ್ದು, ಹರಿಹರ -ಕೊಟ್ಟೂರು ಮಾರ್ಗಾದಲ್ಲಿ ಸಂಚರಿಸುತ್ತದೆ. ಇದರಿಂದಾಗಿ ಕೊಟ್ಟೂರು ಪಟ್ಟಣವು ಮುಖ್ಯ ವಾಣಿಜ್ಯ ಕೇಂದ್ರವಾಗಿ ಬೆಳೆಯಲು ಸಾಕಷ್ಟು ಸಹಾಯಕವಾಗಿದೆ. ನೂತನ ತಾಲೂಕು ಪಟ್ಟಿಯಲ್ಲಿ ಈ ಪಟ್ಟಣದ ಹೆಸರು ಇದ್ದು ಅದಷ್ಟು ಬೇಗನೆ ತಾಲೂಕು ರಚನೆಯಾಗಿ ಇನ್ನುಷ್ಟು ಇನ್ನುಷ್ಟು ಬೆಳವಣಿಗೆ ಸಾದಿಸಲು ಸಹಾಯಕವಾಗಲಿ.

ಕೊಟ್ಟೂ ರೇಶ್ವ ರ ಕಾಲೇಜು :- ಈ ಊರಿನಲ್ಲಿ ರುವ ಪ್ರಮುಖವಾದ ಕಾಲೇಜು. ಈ ಮೂಲಕ ಗ್ರಾಮೀಣ ಬಾಗದ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ.

ಪ್ರಮುಖ ವ್ಯಕ್ತಿಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]