ಕೊಂದೆ
|
ಕೊಂದೆಮರ NE
|
|||||||||||||||||||||||||
|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
| ವೈಜ್ಞಾನಿಕ ವಿಂಗಡಣೆ | |||||||||||||||||||||||||
|
|||||||||||||||||||||||||
|
|
|||||||||||||||||||||||||
| ಕಾಸಿಯ ಫಿಸ್ಟುಲ L. |
|||||||||||||||||||||||||
|
|
|||||||||||||||||||||||||
| Synonyms | |||||||||||||||||||||||||
| Many, see text |
ಕೊಂದೆ (ಕಕ್ಕೆ,ಸ್ವರ್ಣಪುಷ್ಪ) ಎಂಬ ಹೆಸರಿನಿಂದ ಕರೆಯಲ್ಪಡುವ ಮರವು ಮದ್ಯಮ ಪ್ರಮಾಣದ ಪರ್ಣಪಾತಿ ಮರ.ಮಾರ್ಚ್-ಮೇ ತಿಂಗಳಲ್ಲಿ ಇದು ಹಳದಿ ಬಣ್ಣದ ಹೂವನ್ನು ಗೊಂಚಲು ಗೊಂಚಲಾಗಿ ಮರ ತುಂಬಾ ಬಿಟ್ಟು ಅತ್ಯಂತ ಸುಂದರವಾಗಿ ಕಾಣುವುದರಿಂದ ಇದನ್ನು ಇಂಗ್ಲೀಷ್ ಭಾಷೆಯಲ್ಲಿ Golden Shower Treeಎಂದು ಕರೆಯುತ್ತಾರೆ.ಇದು ಥೈಲ್ಯಾಂಡ್ ದೇಶದ ರಾಷ್ಟ್ರೀಯಪುಷ್ಪ.ಅಂತೆಯೇ ಕೇರಳರಾಜ್ಯದ ರಾಜ್ಯಪುಷ್ಪವಾಗಿದೆ
ಪರಿವಿಡಿ |
ಸಸ್ಯಶಾಸ್ತ್ರೀಯ ವರ್ಗೀಕರಣ [ಬದಲಾಯಿಸಿ]
ಇದು ಫಬಸಿಯೆ ಕುಟುಂಬದಲ್ಲಿaesalpinieaeಉಪ ಕುಟುಂಬಕ್ಕೆ ಸೇರಿದ್ದು,ಕಾಸಿಯ ಫಿಸ್ಟುಲ (Cassia fistula)ಎಂದು ಸಸ್ಯಶಾಸ್ತ್ರೀಯ ಹೆಸರು.ಸಂಸ್ಕೃತಬಾಷೆಯಲ್ಲಿ 'ಸುವರ್ಣಕ'ಮಲೆಯಾಳಮ್ಭಾಷೆಯಲ್ಲಿ 'ಕೊನ್ನೆ' ಮುಂತಾಗಿ ಹೆಸರು ಇದೆ.
ಸಸ್ಯದ ಗುಣಲಕ್ಷಣಗಳು [ಬದಲಾಯಿಸಿ]
ಮಧ್ಯಮ ಪ್ರಮಾಣದ ಪರ್ಣಪಾತಿ ಮರ.ಸಂಯುಕ್ತಪರ್ಣಿ ಎಲೆಗಳು.ಚಿಗುರಿದಾಗ ಉಜ್ವಲ ಹಸಿರು ಬಣ್ಣದ ಎಲೆಗಳು ಮತ್ತು ತೂಗಾಡುವ ಹಳದಿ ಬಣ್ಣದ ಹೂಗಳು ಅಂದವಾಗಿ ಕಾಣುತ್ತದೆ.ಉದ್ದವಾದ ಬೀಜಕೋಶಗಾಯಿ(Pods)ಜೋಲಾಡುತ್ತಿರುತ್ತದೆ.ಇದರ ದಾರುವು ಗಡುಸಾಗಿದ್ದು,ಬಾಳಿಕೆಯುತವಾಗಿದೆ.
ಉಪಯೋಗಗಳು [ಬದಲಾಯಿಸಿ]
ಅಲಂಕಾರಕ್ಕೆ ಬೆಳೆಸುತ್ತಾರೆ.ದಾರುವು ಮನೆ ಕಂಬಗಳು,ಕೃಷಿ ಉಪಕರಣಗಳ ತಯಾರಿಯಲ್ಲಿ ಬಳಸಲ್ಪಡುತ್ತದೆ.ಕಾಯಿ ಹಾಗೂ ಹೂ ಆಯುರ್ವೇದಔಷಧಗಳಲ್ಲಿ ಬಳಕೆಯಲ್ಲಿದೆ.ಮುಖ್ಯವಾಗಿ ವಿರೇಚಕವಾಗಿ,ವಾತ ಸಂಬಂಧಿ ಔಷಧಗಳಲ್ಲಿ ಉಪಯೋಗದಲ್ಲಿದೆ.
ಆಧಾರ ಗ್ರಂಥಗಳು [ಬದಲಾಯಿಸಿ]
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ
