ಕೆ.ಮಂಜುನಾಥಯ್ಯ
'ಕೆ.ಮಂಜುನಾಥಯ್ಯನವರು', ಈಗ ತಮ್ಮ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಪ್ರವೃತ್ತಿಯಿಂದಲ್ಲ. ಅವರದೇ ಸ್ವಂತ ಉದ್ಯೋಗವನ್ನು ಸ್ಥಾಪಿಸಿಕೊಂಡು ಬೆಂಗಳೂರಿನಲ್ಲಿ ಕೆಲಸಮಾಡುತ್ತಿದ್ದಾರೆ. ಸ್ವತಃ ಇಂಜಿನಿಯರ್ ಆಗಿರುವ ಮಂಜುನಾಥಯ್ಯನವರು, ಮುಂಬೈನ, 'ಬಿ.ಎ.ಆರ್.ಸಿ'(BARC) ಯಲ್ಲಿ ವಿಜ್ಞಾನಿಯಾಗಿ, ಹಲವು ವರ್ಷ ದುಡಿದು ಸ್ವಇಚ್ಛೆಯಿಂದ ನಿವೃತ್ತರಾದರು. ಮಂಜುನಾಥರಿಗೆ, ಭಾರತೀಯ ಸಾಹಿತ್ಯ,ಕಲೆ, ಸಂಸ್ಕೃತಿ, ನೃತ್ಯ ಮುಂತಾದವುಗಳಲ್ಲಿ ಅತೀವ ಆಸಕ್ತಿ. ಅದರಲ್ಲೂ ತಮ್ಮ ಮಾತೃಭಾಷೆ ಕನ್ನಡವನ್ನು ಪ್ರಾಣದಂತೆ ಪ್ರೀತಿಸುವವರು ಅವರು. ಕನ್ನಡ ರಂಗಭೂಮಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅತ್ಯುತ್ತಮ ಹಾಗೂ ಅತಿ ಮಹತ್ವದ ಯೋಗದಾನಮಾಡಿದ್ದಾರೆ. (ಅವರೊಬ್ಬ ಸಮರ್ಥ ನಟರು ಸಹಿತ).
'ಮುಂಬೈ ನಾಟಕಗಳು, ಬೆಂಗಳೂರಿನಲ್ಲಿ ಪ್ರದರ್ಶನ ಕಂಡವು' [ಬದಲಾಯಿಸಿ]
'ಮೈಸೂರ್ ಅಸೋಸಿಯೇಷನ್, ಮುಂಬೈ'ನ 'ಹಿರಿಯ ಅಜೀವ ಸದಸ್ಯ'ರಾದ ಅವರು, ತಮ್ಮಂತೆ ಆಸಕ್ತರ ಗುಂಪೊಂದನ್ನು ಕಟ್ಟಿಕೊಂಡು ಕನ್ನಡ ರಂಗಮಂಚವನ್ನು ಸಂಮೃದ್ಧಿಗೊಳಿಸಲು ಇಂದಿಗೂ ಶ್ರಮಿಸುತ್ತಿದ್ದಾರೆ. ಹಲವು ಬಾರಿ,'ಮುಂಬೈನ ನಾಟಕ ತಂಡಗಳನ್ನು ಬೆಂಗಳೂರಿಗೆ ಕರೆದೊಯ್ದು, ಅಲ್ಲಿ ನಾಟಕವಾಡಿಸಿದರು.' ಮುಂಬೈನಗರದಲ್ಲಿ ಜರುಗುವ ಮಹತ್ವದ ಕನ್ನಡ ಕಾರ್ಯಕ್ರಮಗಳಿಗೆ ಸಮಯ ಹೊಂದಿಸಿಕೊಂಡು ಬೆಂಗಳೂರಿನಿಂದ ಹೊರಟುಬರುವ, ಹಾಗೂ ಸಮಯಕ್ಕೆ ಮೊದಲೇ ಹಾಜರಿರುವ ಅಪರೂಪದ ಕನ್ನಡಪ್ರೇಮಿ, ನಿಷ್ಠಾವಂತ, ಸದಾ ಹಸನ್ಮುಖಿ, ಮಂಜುನಾಧರು.'ಮೈಸೂರ್ ಅಸೋಸಿಯೇಷನ್' ಇದುವರೆವಿಗೆ ನಡೆದುಬಂದ ಹಾದಿಯಲ್ಲಿನ ಸೂಕ್ಷಾತಿಸೂಕ್ಷ್ಮ ವಿವರಗಳನ್ನು ಅಧಿಕೃತವಾಗಿಯೂ ಹಾಗೂ ಅಧಿಕಾರಯುತವಾಗಿಯೂ ಮಾಹಿತಿ ಒದಗಿಸಬಲ್ಲ ಕೆಲವೇ ವ್ಯಕ್ತಿಗಳಲ್ಲಿ ಅತಿ ಪ್ರಮುಖರು.