ಕೆ.ಎಸ್.ನಿಸಾರ್ ಅಹಮದ್
ಪ್ರೊಫೆಸರ್ ಕೆ.ಎಸ್.ನಿಸಾರ್ ಅಹಮದ್ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು.
ಪರಿವಿಡಿ |
ಜೀವನ [ಬದಲಾಯಿಸಿ]
ನಿಸಾರ್ ಅಹಮದ್ ಅವರು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ ೫,೧೯೩೬ರಲ್ಲಿ ಜನಿಸಿದರು. ೧೯೫೯ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೯೪ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು.
ಸಾಹಿತ್ಯ [ಬದಲಾಯಿಸಿ]
ನಿಸಾರ್ ಅಹಮದ್ ಅವರ ಸಾಹಿತ್ಯಾಸಕ್ತಿ ೧೦ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ ಸುಮಾರು ೫ ದಶಕಗಳಿಂದ ೨೫ ಕೃತಿಗಳನ್ನು ರಚಿಸಿದ್ದಾರೆ.
- ಅವುಗಳಲ್ಲಿ ಮನಸು ಗಾಂಧಿಬಜಾರು ಹಾಗು ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ.
- ೧೯೭೮ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು,ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು.
- ಕುರಿಗಳು ಸಾರ್ ಕುರಿಗಳು, ರಾಜಕೀಯ ವಿಡಂಬನೆ ಕವನ
- ಭಾರತವು ನಮ್ಮ ದೇಶ (ಸರ್ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಕವನದ ಕನ್ನಡ ಭಾಷಾಂತರ)
- ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.
ಶ್ರೀ ಅಹಮದ್ ರವರ ಪೂರ್ಣ ಹೆಸರು ಕೊಕ್ಕರೆಹೊಸಳ್ಳಿ ಶೇಖಹೈದರ ನಿಸಾರ್ ಅಹಮದ್
ಕೃತಿಗಳು [ಬದಲಾಯಿಸಿ]
ಕವನ ಸಂಕಲನಗಳು [ಬದಲಾಯಿಸಿ]
- ಮನಸು ಗಾಂಧಿ ಬಜಾರು (೧೯೬೦)
- ನೆನೆದವರ ಮನದಲ್ಲಿ (೧೯೬೪)
- ಸುಮಹೂರ್ತ (೧೯೬೭)
- ಸಂಜೆ ಐದರ ಮಳೆ (೧೯೭೦)
- ನಾನೆಂಬ ಪರಕೀಯ (೧೯೭೨)
- ಆಯ್ದ ಕವಿತೆಗಳು (೧೯೭೪)
- ನಿತ್ಯೋತ್ಸವ (೧೯೭೬)
- ಸ್ವಯಂ ಸೇವೆಯ ಗಿಳಿಗಳು (೧೯೭೭)
- ಅನಾಮಿಕ ಆಂಗ್ಲರು(೧೯೮೨),
- ಬರಿರಂತರ (೧೯೯೦)
- ಸಮಗ್ರ ಕವಿತೆಗಳು (೧೯೯೧)
- ನವೋಲ್ಲಾಸ (೧೯೯೪)
- ಆಕಾಶಕ್ಕೆ ಸರಹದ್ದುಗಳಿಲ್ಲ (೧೯೯೮)
- ಅರವತ್ತೆೈದರ ಐಸಿರಿ(೨೦೦೧)
- ಸಮಗ್ರ ಭಾವಗೀತೆಗಳು(೨೦೦೧)
- ಪ್ರಾತಿನಿಧಿಕ ಕವನಗಳು(೨೦೦೨)
ಗದ್ಯ ಸಾಹಿತ್ಯ [ಬದಲಾಯಿಸಿ]
- 'ಅಚ್ಚುಮೆಚ್ಚು'
- 'ಇದು ಬರಿ ಬೆಡಗಲ್ಲೊ ಅಣ್ಣ'
- 'ಷೇಕ್ಸ್ ಪಿಯರ್‍ನ 'ಒಥೆಲ್ಲೊ' ಹಾಗೂ 'ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್' ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
ಮುಂಬೈನಲ್ಲಿ ಆಹ್ವಾನಿತ ಭಾಷಣಕಾರರಾಗಿ [ಬದಲಾಯಿಸಿ]
ಮುಂಬೈನಲ್ಲಿ ಪ್ರತಿವರ್ಷವೂ, 'ಮುಂಬೈ ವಿಶ್ವವಿದ್ಯಾಲಯ,' ಹಾಗೂ 'ಮೈಸೂರ್ ಆಸೋಸಿಯೇಷನ್' ಜಂಟಿಯಾಗಿ ಈ ಉಪನ್ಯಾಸ ಮಾಲಿಕೆಯನ್ನು ಆಯೋಜಿಸುತ್ತಾ ಬಂದಿವೆ. ಸನ್, ೨೦೧೧ ರ ಸಾಲಿನ, 'ಮೈಸೂರು ಅಸೋಸಿಯೇಷನ್ ದತ್ತಿ ಉಪನ್ಯಾಸ ಕಾರ್ಯಕ್ರಮ'ದಲ್ಲಿ ಡಾ.'ಕೆ.ಎಸ್.ನಿಸಾರ್ ಅಹಮದ್' ರವರು, ಆಹ್ವಾನಿತ ಭಾಷಣಕಾರರಾಗಿ ಆಗಮಿಸಿ, ತಮ್ಮ ಪ್ರತಿಭಾನ್ವಿತ ಮಾತುಗಳಿಂದ ಮುಂಬೈ ಕನ್ನಡಿಗರ ಮನಸ್ಸನ್ನು ಸೂರೆಗೊಂಡರು. ಈ ಕಾರ್ಯಕ್ರಮ, ಜನವರಿ, ೨೯, ಶನಿವಾರ, ಹಾಗೂ ೩೦, ರವಿವಾರ, ದಂದು, ಆಯೋಜಿಸಲ್ಪಟ್ಟಿತ್ತು.
ಪ್ರಶಸ್ತಿ ಪುರಸ್ಕಾರಗಳು [ಬದಲಾಯಿಸಿ]
- ೨೦೦೬ ರ ಮಾಸ್ತಿ ಪ್ರಶಸ್ತಿ
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಗೊರೂರು ಪ್ರಶಸ್ತಿ
- ಅನಕೃ ಪ್ರಶಸ್ತಿ
- ಕೆಂಪೇಗೌಡ ಪ್ರಶಸ್ತಿ
- ಪಂಪ ಪ್ರಶಸ್ತಿ
- ೧೯೮೧ ರ ರಾಜ್ಯೋತ್ಸವ ಪ್ರಶಸ್ತಿ
- ೨೦೦೩ ರ ನಾಡೋಜ ಪ್ರಶಸ್ತಿ
- ೨೦೦೬ ರ ಅರಸು ಪ್ರಶಸ್ತಿ
- ೨೦೦೬ ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ,'೭೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ'ರಾಗಿ ಆಯ್ಕೆಯಾಗಿದ್ದರು.
