ಕೆರೂರು ವಾಸುದೇವಾಚಾರ್ಯ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕೆರೂರು ವಾಸುದೇವಾಚಾರ್ಯರು ೧೮೬೬ರಲ್ಲಿ ಬಿಜಾಪುರ ಜಿಲ್ಲೆಯ ಬಾಗಲಕೋಟೆಯಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸಾಚಾರ್ಯ. ತಾಯಿ ಪದ್ಮಾವತಿ.

ಕನ್ನಡದ ನವೋದಯದ ಮೊದಮೊದಲ ಸಾಹಿತಿಗಳಲ್ಲಿ ಇವರೊಬ್ಬರು. ಕಾದಂಬರಿ ಅಲ್ಲದೆ ನಾಟಕಗಳನ್ನೂ ಸಹ ಅನುವಾದಿಸಿ, ಬರೆದು, ರಂಗದ ಮೇಲೆ ಆಡಿಸಿದ್ದಾರೆ.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಾದಂಬರಿಗಳು

  • ಇಂದಿರೆ - (೧೯೦೮) - ಈ ಕಾದಂಬರಿಯು ಬಾಲ್ಯ ವಿವಾಹ, ವಿಧವಾ ವಿವಾಹದ ಕಥಾವಸ್ತುವನ್ನು ಹೊಂದಿದೆ.
  • ಯದುಮಹಾರಾಜ
  • ಭ್ರಾತೃಘಾತಕ ಔರಂಗಜೇಬ
  • ವಾಲ್ಮೀಕಿ ವಿಜಯ
  • ಯವನ ಸೈರಂಧ್ರಿ

[ಬದಲಾಯಿಸಿ] ನಾಟಕಗಳು

  • ನಳದಮಯಂತಿ
  • ರುಕ್ಮಿಣಿ ಹರಣ
  • ಸುರತನಗರದ ಶ್ರೇಷ್ಠಿ (ಮೂಲ : ಶೇಕ್ಸ್ಪಿಯರನ “ಮರ್ಚಂಟ್ ಆಫ್ ವೆನಿಸ್)
  • ವಸಂತಯಾಮಿನಿ ಸ್ವಪ್ನಚಮತ್ಕಾರ (ಮೂಲ : ಶೇಕ್ಸ್ಪಿಯರನ “ ಮಿಡ್ಸಮರ್ನೈಟ್ಸ್ ಡ್ರೀಮ್)
  • ವಶೀಕರಣ (ಆಲಿವರ್ ಗೋಲ್ಡ್ಸ್ ಸ್ಮಿತ್‍ನ ನಾಟಕವೊಂದರ ಅನುವಾದ)

[ಬದಲಾಯಿಸಿ] ಕಥಾ ಸಂಕಲನ

  • ತೊಳೆದ ಮುತ್ತು
  • ಪ್ರೇಮ ವಿಜಯ
  • ಬೆಳಗಿದ ದೀಪಗಳು

[ಬದಲಾಯಿಸಿ] ಪತ್ರಿಕೋದ್ಯಮ

ಕೆರೂರು ವಾಸುದೇವಾಚಾರ್ಯರು “ಶುಭೋದಯ” ಹಾಗು “ಸಚಿತ್ರ ಭಾರತ” ಎನ್ನುವ ಎರಡು ಪತ್ರಿಕೆಗಳನ್ನು ನಡೆಯಿಸುತ್ತಿದ್ದರು.

[ಬದಲಾಯಿಸಿ] ಇತರ ವಿಷಯಗಳು

ಬಾಗಲಕೋಟೆಯ ವಾಸುದೇವ ವಿನೋದಿನಿ ನಾಟ್ಯ ಸಂಘವು ೧೯೬೪ ರಲ್ಲಿ ವಾಸುದೇವ ಪ್ರಶಸ್ತಿ ಎಂಬ ಸ್ಮಾರಕ ಸಂಪುಟವನ್ನು ಪ್ರಕಟಿಸಿತು.

[ಬದಲಾಯಿಸಿ] ನಿಧನ

ಕೆರೂರು ವಾಸುದೇವಾಚಾರ್ಯರು ೧೯೨೧ರಲ್ಲಿ ನಿಧನರಾದರು.

ವೈಯಕ್ತಿಕ ಉಪಕರಣಗಳು