ವಿಷಯಕ್ಕೆ ಹೋಗು

ಮುದ್ರಾಮಂಜೂಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕೆಂಪು ನಾರಾಯಣ ಇಂದ ಪುನರ್ನಿರ್ದೇಶಿತ)
ಚಿತ್ರ:ಚಿತ್ರ:ಮುದ್ರಾಮಾಂಜೂಷ-Mudramanjusha.jpg

-->

ಮುದ್ರಾಮಂಜೂಷ ಕೆಂಪುನಾರಾಯಣನು ಬರೆದ ಕೃತಿ.ಇದು ನಡುಗನ್ನಡದಲ್ಲಿದೆ. ಮುದ್ರಾರಾಕ್ಷಸ, ಮುದ್ರಾಮಂಜೂಷ, ಚಂದ್ರಗುಪ್ತಚಾಣಕ್ಯರಚರಿತ್ರೆ-ಎಂದು ಬೇರೆ ಬೇರೆ ಹೆಸರುಗಳುಳ್ಳ ವಿಶಾಕದತ್ತ ರಚಿಸಿದ ಮುದ್ರಾರಾಕ್ಷಸ ಸಂಸ್ಕೃತ ನಾಟಕದ ಅನುವಾದವೇ ಈ ಗ್ರಂಥ. ಚಂದ್ರಗುಪ್ತ ಮೌರ್ಯನಿಗೆ ಮಗಧ ರಾಜ್ಯವನ್ನು ಗುಪ್ತಸಂಧಾನದಿಂದ ಚಾಣಕ್ಯನು ಸಂಪಾದಿಸಿಕೊಟ್ಟದ್ದು ಇದರ ಕಥಾವಸ್ತು. ಚಾಣಕ್ಯನು ನವನಂದರನ್ನು ಸೋಲಿಸಿ,ಅವರ ಮಂತ್ರಿಯಾಗಿದ್ದ ರಾಕ್ಷಸನು ಹೂಡಿದ ತಂತ್ರಗಳೆಲ್ಲವನ್ನೂ ಭಂಗಗೊಳಿಸಿ, ಕಡೆಗೆ ಆ ರಾಕ್ಷಸನನ್ನೇ ಚಂದ್ರಗುಪ್ತನ ಮಂತ್ರಿಯಾಗಿ ನೇಮಕ ಮಾಡಿ ತಪಸ್ಸಿಗೆ ತೆರಳುವುದನ್ನು ಸೊಗಸಾಗಿ ಚಿತ್ರಿಸಲಾಗಿದೆ.

ಈ ಗ್ರಂಥದ ಕರ್ತೃ ಕೆಂಪುನಾರಾಯಣ ಮುಮ್ಮಡಿ ಕೃಷ್ಣರಾಜಾ ಒಡೆಯರ್ ಆಸ್ಥಾನದಲ್ಲಿದ್ದರು. ಅವರು ಈ ಗ್ರಂಥವವನ್ನು ೧೮೨೩ರಲ್ಲಿ ಈದನ್ನು ಆಧುನಿಕ ಕನ್ನಡ ಸಾಹಿತ್ಯದ ಮೊತ್ತ ಮೊದಲ ಕೃತಿ ಎಂದರು ತಪ್ಪಾಗಲಾರದು . ಈ ಕೃತಿಯನ್ನು ಸಂಪಾದಿಸಿ, ತಿದ್ದಿ ೧೮೭೩ರಲ್ಲಿ ರೆವರೆಂಡ್ ಜೆ. ಸ್ಟೀವನ್‌ಸನ್‌ರವರು ಮುದ್ರಿಸಿದ್ದಾರೆ. ಇದನ್ನು ಮೈಸೂರಿನ ವೆಸ್ಲೆ ಪ್ರೆಸ್ ಮುದ್ರಿಸಿತ್ತು.