ಕೃಷ್ಣ ಜನ್ಮಾಷ್ಟಮಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕೃಷ್ಣ ಜನ್ಮಾಷ್ಟಮಿ

ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ.

ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ.

ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.[೧] ಮಥುರಾ ಕೃಷ್ಣನ ಜನ್ಮಸ್ಥಳ. ಕೃಷ್ಣನು ಹುಟ್ಟಿದೊಡನೆ ಅವನನ್ನು ಸೋದರಮಾವನಾದ ಕಂಸನಿಗೆ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯಲಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿ.

ಕೃಷ್ಣಾಷ್ಟಮಿಯ ದಿನದಂದು, ಮನೆ ಮತ್ತು ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ವಿಧವಿಧವಾಗಿ ಅಲಂಕರಿಸಿ,ಬಗೆಬಗೆಯ ತಿಂಡಿಗಳನ್ನು ಮಾಡಿ ಬಾಲಕೃಷ್ಣನನ್ನುಪೂಜಿಸಲಾಗುತ್ತದೆ. ಕೆಲವು ಕಡೆ, ಮಧ್ಯರಾತ್ರಿಯವರೆಗೆ ಉಪವಾಸವಿದ್ದು, ನಂತರ ಆಹಾರ ಸ್ವೀಕರಿಸುವ ಸಂಪ್ರದಾಯವಿದೆ. ಉಡುಪಿಯಲ್ಲಿ ಈ ದಿನದಂದು ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.

ಜನ್ಯ[ಬದಲಾಯಿಸಿ]

Painting of Krishna being carried across the river.
ಯಮುನಾ ದಾಟಿ ಕೃಷ್ಣನನ್ನು ಗೋಕುಲಕ್ಕೆ ಬಿಡುವುದು

ಕೃಷ್ಣನು ಭಾದ್ರಪದ ಕೃಷ್ಣ ಅಷ್ಟಮಿಯಂದು ಮಥುರಾ ಊರಿನಲ್ಲಿ ದೇವಕಿ ಮತ್ತು ವಸುದೇವರಿಗೆ ೮ನೇ ಮಗನಾಗಿ ಜನಿಸಿದನು.[೨]

ಮಥುರ (ಈಗಿನ ಉತ್ತರಪ್ರದೇಶದ ಮಥುರ ಜಿಲ್ಲೆ]]) ಯಾದವ ಕುಲದ ರಾಜಧಾನಿಯಾಗಿತ್ತು.ತಂದೆ ಉಗ್ರಸೇನರನ್ನು ಬಂಧಿಸಿ ಅಣ್ಣಕಂಸನು ದೇವಕಿ-ವಸುದೇವರ ಮದುವೆಯಾದ ಮೇಲೆ ಅವರನ್ನು ಗಂಡನ ಮನೆಗೆ ಕರೆದೊಯ್ಯುತ್ತಿದ್ದಾಗ ಅವನಿಗೆ ಒಂದು ಅಶರೀರವಾಣಿ ಕೇಳಿಸಿತು.[೩]ಅದರ ಪ್ರಕಾರ ದೇವಕಿಯ ಎಂಟನೇ ಮಗುವೂ ಕಂಸನ ವಧನವನ್ನು ಮಾಡುತ್ತದೆ ಎಂದು.ಇದನ್ನು ಕೇಳಿದ ಕಂಸನು ದೇವಕಿಯನ್ನು ಆ ತಕ್ಷಣವೇ ಕೊಲ್ಲಲು ಹೊರಟನು.ಆಗ ವಸುದೇವನು ಅವನನ್ನು ತಡೆದು ಪ್ರತಿ ಮಗುವನ್ನು ಹುಟ್ಟಿದ ತಕ್ಷಣ ಕಂಸನ ಮಡಿಯಲ್ಲಿ ಅರ್ಪಿಸುವುದು ಎಂದು ಹೇಳಿದನು.ಅವರನ್ನು ಬಂಧಿಸಿ ಅವರಿಗೆ ಹುಟ್ಟಿದ ೭ ಮಕ್ಕಳನ್ನು ಕೊಂದನು.೮ನೇ ಕೃಷ್ಣನನ್ನು ಅವನಿಗೆ ತಿಳಿಯದ ಹಾಗೆ ಯಮುನಾ ದಾಟಿ ಗೋಕುಲಕ್ಕೆ ಕರೆದುಹೋದನು.ಅಲ್ಲಿಯ ಯಶೋದೆ ಮಗಳನ್ನು ಇಲ್ಲಿಗೆ ತಂದನು.ಆದರೆ ಕಂಸ ಅವಳನ್ನು ಕೊಲ್ಲಲುಬಂದಾಗ ಅವಳು ವಿಷ್ಣುವಿನ ಸಹಾಯಕಿ ಯೋಗಮಾಯಾ ರೂಪಕ್ಕೆ ಬದಲಾಗಿ ಅವನ ಸಾವಿನ ಬಗ್ಗೆ ಅರಿಯಬೇಕೆಂದು ಹೇಳಿ ಮಾಯವಾದಳು. ಕೃಷ್ಣ ಗೋಕುಲ ಹಾಗು ವೃಂದಾವನದಲ್ಲಿ ಬಲರಾಮನ ಜತೆ ಬೆಳೆದು, ಕೊನೇಗೆ ಮತುಹ್ರಾಗೆ ಬಂದು ಕಂಸನನ್ನು ಕೊಂದನು.

ಬಾಹ್ಯಪುಟಗಳು[ಬದಲಾಯಿಸಿ]

  1. ಕೃಷ್ಣಾಷ್ಟಮಿ


ಉಲ್ಲೇಖಗಳು[ಬದಲಾಯಿಸಿ]

  1. http://www.hindu.com/2008/08/24/stories/2008082458410200.htm
  2. Knott, Kim (2000). Hinduism: A Very Short Introduction. Oxford University Press, USA. p. 160. ISBN 0-19-285387-2. 
  3. ಭಾಗವತ-ವಿಷ್ಣು ಪುರಾಣಗಳ ಪ್ರಕಾರ.ವಿಷ್ಣು ಪುರಾಣ ಅಧ್ಯಾಯ-೧ (ಎಚ್.ಎಚ್.ವಿಲ್ಸನ್), ಶ್ರೀಮದ್ ಭಾಗವತಮ್ (ಸ್ವಾಮಿ ಪ್ರಭುಪಾದ-೧೯೮೮)