ಕೃಷ್ಣಕುಮಾರ ಕಲ್ಲೂರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ಕಟ ಕನ್ನಡಾಭಿಮಾನಿ, ಗಾಂಧಿವಾದಿ, ಸಾಹಿತಿ ಕೃಷ್ಣಕುಮಾರ ಕಲ್ಲೂರ ಇವರು ೨೧.೧೨.೧೯೦೯ ರಲ್ಲಿ ಧಾರವಾಡ ಜಿಲ್ಲೆಯ ಕಲ್ಲೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ರಾಧಾಬಾಯಿ; ತಂದೆ ಅನಂತರಾಯರು. ಒಂಬತ್ತನೆಯ ಮಗನಾದ್ದರಿಂದ ಕೃಷ್ಣನೆಂದೇ ನಾಮಕಾರಣ ಮಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ್ದರಿಂದ ಸಹಜವಾಗೇ ಬಾಲ್ಯದಿಂದಲೇ ಅಸಹಕಾರ ಚಳವಳಿ, ಏಕೀಕರಣ, ಹುಯಿಲಗೋಳ ನಾರಾಯಣ ರಾಯರ ‘ಉದಯವಾಗಲಿ ನಮ್ಮ ಚಲುವ ಕನ್ನಡನಾಡು’ ಮುಂತಾದವುಗಳ ಪ್ರಭಾವಕ್ಕೆ ಒಳಗಾಗಿದ್ದರು. ಕರ್ನಾಟಕ ಏಕೀಕರಣಕ್ಕಾಗಿ ತುಂಬಾ ಶ್ರಮಿಸಿದವರು. ಧಾರವಾಡದಲ್ಲಿದ್ದಾಗಲೇ ಬೇಂದ್ರೆಯವರು ಸ್ಥಾಪಿಸಿದ್ದ ಗೆಳೆಯರ ಗುಂಪಿನ ಸದಸ್ಯರೆನಿಸಿದ್ದರು.

ಇವರ ಕೃತಿಗಳು:

  • ಒಂದು ನೆನಪು
  • ಕಾವ್ಯ ಭಂಡಾರ
  • ಜನುಮದ ಜೋಡಿ
  • ಜಾಗೃತ ರಾಷ್ಟ್ರ
  • ಜೀವನ
  • ತಾಮ್ರದ ದುಡ್ಡು
  • ತಿರುಕನ ಪಿಡುಗು
  • ದೆವ್ವಗಳ ದೆವ್ವ
  • ಬಿಸಿಲುಗುದುರೆ
  • ಮಂಗನ ಮೆರವಣಿಗೆ
  • ಮನೆ ಹೊಕ್ಕ ಮಾರವಾಡಿ
  • ಮಿಂಚಿನ ಹುಡಿ
  • ಮಿಸ್ ಚಾರುಗಾತಿ
  • ರಾಯರ ಮದುವೆ

ಪುರಸ್ಕಾರ[ಬದಲಾಯಿಸಿ]

  • ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ಬರೆದ ಇವರ ಕೃತಿ ‘ಜಾಗೃತ ರಾಷ್ಟ್ರ’ ನಾಟಕಕ್ಕೆ ೧೯೫೫ರಲ್ಲಿ ಆಗಿನ ಮುಂಬಯಿ ಸರಕಾರ ಪ್ರಥಮ ಬಹುಮಾನ ನೀಡಿತ್ತು.


ಕೃಷ್ಣಕುಮಾರ ಕಲ್ಲೂರರು ೧೯೮೨ರಲ್ಲಿ ನಿಧನರಾದರು.