ವಿಷಯಕ್ಕೆ ಹೋಗು

ಕುಟ್ಟವಲಕ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನ್ನದಂತೆ ಅವಲಕ್ಕಿಯೂ ಒಂದು ಜನಪ್ರಿಯ ಆಹಾರ. ಅವಲಕ್ಕಿಯನ್ನು ಮೊಸರಿನೊಂದಿಗೆ, ಉಪ್ಪಿನಕಾಯಿಯೊಂದಿಗೆ ಅಥವಾ ಒಗ್ಗರಣೆ ಹಾಕಿಯೂ ತಿನ್ನಬಹುದು.ಇಂಥ ಅವಲಕ್ಕಿ ಹೆಚ್ಚು ಸಮಯ ಉಪಯೋಗಿಸಲಾಗುವುದಿಲ್ಲ.ಆದ್ದರಿಂದ ಇಂಥ ಅವಲಕ್ಕಿಗೆ ಬದಲಾಗಿ ನಾವು ಕುಟ್ಟವಲಕ್ಕಿಯನ್ನು ಬಳಸಬಹದು.

ಮಾರುಕಟ್ಟೆಯಲ್ಲಿ ಸಿಗುವ ದಪ್ಪ ಅಥವಾ ತೆಳು ಅವಲಕ್ಕಿಯನ್ನು ಮಿಕ್ಸರ್ ನಲ್ಲಿ ಪುಡಿಮಾಡಿದರೆ ಅದು ಕುಟ್ಟವಲಕ್ಕಿಯಾಗುತ್ತದೆ. ಯಾವುದು ಕುಟ್ಟಲ್ಪಟ್ಟ ಅವಲಕ್ಕಿಯೋ ಅದು ಕುಟ್ಟವಲಕ್ಕಿ.ಇದನ್ನು ಹಾಗೆಯೇ ತಿನ್ನದೆ ಒಗ್ಗರಣೆ ಹಾಕಿ ತಿನ್ನಬೇಕು. ಅಥವಾ ಹಸಿಯಾಗಿಯೂ ಅಂದರೆ ಕಚ್ಚಾ ಆಗಿಯೂ ತಿನ್ನಬಹುದು. ಇದಕ್ಕೆ ಮೊಸರು ಅಥವಾ ಮಜ್ಜಿಗೆ ಬೆರಸಿಕೊಂಡು ತಿನ್ನಬಹುದು.ಬಿಸಿಮಾಡದೆ ಹಸಿಯಾಗಿ ಬಳಸಬಹದಾದ ಅತಿ ಸುಲಭ " ಸಿದ್ಧಪಡಿಸಿದ" ಆಹಾರವಿದು.

ಭಾರತದ ಕರ್ನಾಟಕದ ಮಲೆನಾಡು ಹಾಗೂ ಸಮುದ್ರ ತೀರದ ಜಿಲ್ಲೆಗಳಲ್ಲಿ ಪ್ರಮುಖವಾಗಿ ಕಾಣಸಿಗುವ 'ಹವ್ಯಕ' ಎಂಬ ಬ್ರಾಹ್ಮಣರ ಉಪಪಂಗಡದಲ್ಲಿ ಈ ಪದಾರ್ಥವನ್ನು ಹೆಚ್ಚಿಗೆ ತಯಾರಿಸುತ್ತಾರೆ.

ಈ ಅವಲಕ್ಕಿಯ ಪ್ರಸ್ತಾಪ " ಭಾಗವತ" ದಲ್ಲಿಯೂ ಬರುತ್ತದೆ. ಕುಚೇಲ ಕೃಷ್ಣನನ್ನು ಭೇಟಿಯಾಗುವಾಗ ಅವಲಕ್ಕಿಯನ್ನು ತೆಗೆದುಕೊಂಡು ಹೋಗುತ್ತಾನೆ. ನಾವೂ ಹೀಗೆ- ಊರಿಂದೂರಿಗೆ ಹೋಗುವಾಗ ಕುಟ್ಟವಲಕ್ಕಿಯನ್ನು ತೆಗೆದುಕೊಂಡು ಹೋಗಬಹುದು. ಇದರ ಮತ್ತೊಂದು ಧನಾತ್ಮಕ ಅಂಶವೆಂದರೆ ಇದು ಬೇಗ ಕೆಡುವುದಿಲ್ಲ. ಪ್ರಯಾಣದ ನಡುವೆ ಬಸ್ಸು, ರೈಲುಗಳಲ್ಲಿ ಪ್ರಯಾಣಿಸುವಾಗಲೂ ತಿನ್ನಬಹುದು. ತಟ್ಟೆಯ ಬದಲಾಗಿ ಕಾಗದವನ್ನು ಬಳಸಿಯೂ ತಿನ್ನಬಹುದು.