ಮೀಟರ್
ವಿಕಿಪೀಡಿಯ ಇಂದ
(ಕಿಲೋಮೀಟರ್ ಇಂದ ಪುನರ್ನಿರ್ದೇಶಿತ)
ಮೀಟರ್ ಎಂಬುದು ಅಂತರರಾಷ್ಟ್ರೀಯ ಮಾಪನ ಪ್ರಮಾಣ ಪದ್ಧತಿಯಲ್ಲಿ (en:SI units) ಉದ್ದದ ಅಳತೆಯ ಮೂಲ ಪ್ರಮಾಣ. ಐತಿಹಾಸಿಕವಾಗಿ ಇದು ಭೂಮಿಯ ಸಮಭಾಜಕ ವೃತ್ತದಿಂದ ಉತ್ತರ ಧ್ರುವದ ವರೆಗಿನ ದೂರದ ೧೦ ಮಿಲಿಯನ್ರ ಒಂದು ಭಾಗವಾಗಿ ನಿರ್ಧಾರಿತವಾಯಿತು. ಈ ಅಳತೆಯನ್ನು ಫ್ರಾನ್ಸ್ನ ವಿಜ್ಞಾನ ಪರಿಷತ್ತಿನಲ್ಲಿ ಒಂದು ಪ್ಲಾಟಿನಮ್-ಇರಿಡಿಯಮ್ ಲೋಹದ ಪಟ್ಟಿಯ ಮೇಲೆ ಎರಡು ಗೆರೆಗಳಿಂದ ಸೂಚಿತವಾಗಿತ್ತು. ಈಗ ತೂಕ ಮತ್ತು ಅಳತೆಗಳ ಅಂತರರಾಷ್ಟ್ರೀಯ ಪ್ರಾಧಿಕಾರವು ಈ ಅಳತೆಯನ್ನು ಬೆಳಕು ಒಂದು ಕ್ಷಣದ ೨೯೯,೭೯೨,೪೫೮ನೇ ಭಾಗದಲ್ಲಿ ಚಲಿಸುವ ದೂರವಾಗಿ ನಿರ್ದಿಷ್ಟ ಮಾಡಿದೆ.
SI ಪದ್ಧತಿಯಲ್ಲಿ ಮೀಟರ್ ಆಧಾರಿತ ಇತರ ಮಾಪನಗಳು [ಬದಲಾಯಿಸಿ]
SI ಪದ್ಧತಿಯ ಪ್ರಕಾರ ಮೂಲ ಮಾಪನಗಳ ದಶಕಾಂಶಗಳನ್ನು ಇತರ ಮಾಪನಗಳಾಗಿ ಉಪಯೋಗಿಸಲ್ಪಡುತ್ತವೆ. ಈ ರೀತಿಯ ಮಾಪನಗಳ ಪಟ್ಟಿ ಕೆಳಗಿದೆ. ಪ್ರಮುಖ ಮಾಪನಗಳನ್ನು ದಪ್ಪ ಅಕ್ಷರಗಳಲ್ಲಿ ನಮೂದಿಸಲಾಗಿದೆ.[೧]
| ದಶಕಾಂಶ | ಹೆಸರು | ಚಿಹ್ನೆ | ದಶಕಾಂಶ | ಹೆಸರು | ಚಿಹ್ನೆ | |
| 10−1 | ಡೆಸಿಮೀಟರ್ | dm | 101 | ಡೆಸಿಮೀಟರ್ | dam | |
| 10−2 | ಸೆಂಟಿಮೀಟರ್ | cm | 102 | ಹೆಕ್ಟೋಮೀಟರ್ | hm | |
| 10−3 | ಮಿಲಿಮೀಟರ್' | mm | 103 | ಕಿಲೋಮೀಟರ್ | km | |
| 10−6 | ಮೈಕ್ರೋಮೀಟರ್ | µm | 106 | ಮೆಗಾಮೀಟರ್ | Mm | |
| 10−9 | ನ್ಯಾನೋಮೀಟರ್ | nm | 109 | ಗಿಗಾಮೀಟರ್ | Gm | |
| 10−12 | ಪಿಕೋಮೀಟರ್ | pm | 1012 | ಟೆರಾಮೀಟರ್ | Tm | |
| 10−15 | ಫೆಮ್ಟೋಮೀಟರ್ (fermi) | fm | 1015 | ಪೇಟಾಮೀಟರ್ | Pm | |
| 10−18 | ಅಟ್ಟೋಮೀಟರ್ | am | 1018 | ಎಕ್ಸಾಮೀಟರ್ | Em | |
| 10−21 | ಝೆಪ್ಟೋಮೀಟರ್ | zm | 1021 | ಜೆಟ್ಟಾಮೀಟರ್ | Zm | |
| 10−24 | ಯೊಕ್ಟೋಮೀಟರ್ | ym | 1024 | ಯೊಟ್ಟಾ ಮೀಟರ್ | Ym |
Cite error: <ref> tags exist, but no <references/> tag was found
