ಕಿರುಬಂಡವಾಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಂಬೋಡಿಯಾದಲ್ಲಿನ ಸಮುದಾಯ ಆಧಾರಿತ ಉಳಿತಾಯ ಬ್ಯಾಂಕ್‌.ಬಡವರಿಗೆ ಸೇವೆ ನೀಡುವ ಬಹಳಷ್ಟು ಮಾದರಿಯ ಹಣಕಾಸು ಸಂಸ್ಥೆಗಳಿವೆ.

ಕಿರುಬಂಡವಾಳ ವು ಸಾಂಪ್ರದಾಯಿಕವಾಗಿ ಬ್ಯಾಂಕಿಂಗ್‌ ಹಾಗೂ ಸಂಬಂಧಿತ ಸೇವೆಗಳ ಲಭ್ಯತೆ ಇಲ್ಲದಿರುವ ಬಳಕೆದಾರರು ಮತ್ತು ಸ್ವಯಂಉದ್ಯೋಗಿಗಳೂ ಸೇರಿದಂತೆ ಅಲ್ಪಾದಾಯದ ಗ್ರಾಹಕರಿಗೆ ಹಣಕಾಸು ಸೇವೆಗಳನ್ನು ನೀಡುವ ಸೌಲಭ್ಯ.

ಹೆಚ್ಚು ವಿಷದವಾಗಿ ಹೇಳಬೇಕೆಂದರೆ "ಸಾಧ್ಯವಾದಷ್ಟು ಬಡ ಹಾಗೂ ಬಡತನಕ್ಕೆ ಸಮೀಪ ವರ್ಗದ ಜನರಿಗೆ ಸೂಕ್ತವಾದ ಪ್ರಮಾಣದ ಉತ್ತಮ ಹಣಕಾಸು ಸೇವಾ ಸೌಲಭ್ಯಗಳ ಎಂದರೆ ಕೇವಲ ಸಾಲ ಸೌಲಭ್ಯವಲ್ಲದೇ ಉಳಿತಾಯ, ವಿಮೆ ಮತ್ತು ಹಣ ವರ್ಗಾವಣೆ ಸೌಲಭ್ಯಗಳ ಶಾಶ್ವತ ಲಭ್ಯತೆ ಇರುವ ಪ್ರಪಂಚಕ್ಕೆಂದು ಇದೊಂದು ಚಳುವಳಿ."[೧] ಕಿರುಬಂಡವಾಳವನ್ನು ಪ್ರೋತ್ಸಾಹಿಸುವವರ ಪ್ರಕಾರ ಈ ತರಹದ ಸೌಲಭ್ಯ ಬಡ ಜನರಿಗೆ ಬಡತನದಿಂದ ಹೊರಬರಲು ಸಹಾಯ ಮಾಡುತ್ತದೆ.

ಸವಾಲುಗಳು[ಬದಲಾಯಿಸಿ]

ಸಾಂಪ್ರದಾಯಿಕವಾಗಿ ಬ್ಯಾಂಕುಗಳು ಕನಿಷ್ಟ ಇಲ್ಲವೇ ಯಾವುದೇ ನಗದು ಆದಾಯವಿರದ ಗ್ರಾಹಕರಿಗೆ ಹಣಕಾಸು ಸೇವೆ ಕೊಡುವುದಿಲ್ಲ. ಬ್ಯಾಂಕ್‌ಗಳು ಖಾತೆಯಲ್ಲಿನ ಹಣದ ಪ್ರಮಾಣ ಎಷ್ಟೇ ಕಡಿಮೆಯಿದ್ದರೂ ಗಮನಾರ್ಹ ಪ್ರಮಾಣದ ವೆಚ್ಚವನ್ನು ಭರಿಸಬೇಕಾಗಿರುತ್ತದೆ. ಉದಾಹರಣೆಗೆ $೧೦೦,೦೦೦ ಮೌಲ್ಯದ ಸಾಲವನ್ನು ನೀಡುವುದರಿಂದ ಹುಟ್ಟುವ ಆದಾಯ $೧,೦೦೦ ಮೌಲ್ಯದ ಒಟ್ಟು ನೂರು ಸಾಲಗಳಿಂದ ಹುಟ್ಟುವ ಆದಾಯಕ್ಕಿಂತ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಆದರೆ ಯಾವುದೇ ಪ್ರಮಾಣದ ಸಾಲಗಳನ್ನು ನಿರ್ವಹಿಸುವ ಸ್ಥಿರ ವೆಚ್ಚವು ಗಮನಾರ್ಹ; ಸಂಭಾವ್ಯ ಸಾಲಗಾರರ ಸಾಮರ್ಥ್ಯದ ಅಂದಾಜು, ಅವರ ಮರುಪಾವತಿ ಸಾಮರ್ಥ್ಯ ಮತ್ತು ಸುರಕ್ಷತೆ; ಬಾಕಿಮೊತ್ತದ ನಿರ್ವಹಣೆ, ಬಾಕಿದಾರರಿಂದ ಮರುಪಾವತಿ ಇತ್ಯಾದಿ ಕೆಲಸಗಳಿಗೆ ತಗಲುವ ವೆಚ್ಚಗಳು ಇದರಲ್ಲಿ ಸೇರಿರುತ್ತದೆ. ಸಾಲ ನೀಡುವಿಕೆ ಅಥವಾ ಠೇವಣಿ ಇಡುವುದರಲ್ಲಿ ಒಂದು ಗರಿಷ್ಠ ಮಿತಿಯೂ ಇದೆ, ಈ ಮಿತಿಯನ್ನು ಮೀರಿದಲ್ಲಿ ಬ್ಯಾಂಕ್‌ಗಳು ತಾವು ಮಾಡುವ ಪ್ರತಿ ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತವೆ. ಬಡವರ ವ್ಯವಹಾರವು ಈ ಮಿತಿಯ ನಂತರವೇ ಬರುವುದಾಗಿರುತ್ತದೆ.

ಇದರೊಂದಿಗೆ ಬಹಳಷ್ಟು ಮಂದಿ ಬಡವರ ಬಳಿ ಬ್ಯಾಂಕಿನಲ್ಲಿ ಆಧಾರವಾಗಿಡಲು ಆಸ್ತಿ ಇರುವ ಸಾಧ್ಯತೆ ಕಡಿಮೆ ಇರುತ್ತದೆ. ಹರ್ನ್ಯಾಂಡೋ ಡೆ ಸೊಟೊ ಹಾಗೂ ಇನ್ನಿತರರು ವಿಷದವಾಗಿ ದಾಖಲಿಸಿರುವ ಪ್ರಕಾರ ಅಭಿವೃದ್ಧಿಹೊಂದುತ್ತಿರುವ ದೇಶಗಳಲ್ಲಿ ಅವರ ಬಳಿ ಜಮೀನಿದ್ದರೂ ಕೂಡ ಅದರ ಅಧಿಕೃತ ದಾಖಲೆ ಪತ್ರಗಳಿರುವ ಸಾಧ್ಯತೆ ಕಡಿಮೆ.[೨] ಇದರರ್ಥವೇನೆಂದರೆ ಬ್ಯಾಂಕ್‌ನ ಬಳಿ ಬಾಕಿ ಉಳಿಸಿಕೊಳ್ಳುವ ಸಾಲಗಾರರ ವಿಷಯದಲ್ಲಿ ಕ್ರಮ ಕೈಗೊಳ್ಳಲು ಯಾವುದೇ ಆಧಾರಗಳಿರುವುದಿಲ್ಲ.

ವಿಶಾಲವಾದ ದೃಷ್ಟಿಕೋನದಲ್ಲಿ ನೋಡುವುದಾದರೆ ಉತ್ತಮ ಸ್ಥಿತಿಯಲ್ಲಿರುವ ಹಣಕಾಸಿನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಒಂದು ಪ್ರಮುಖ ಗುರಿ ಹಾಗೂ ರಾಷ್ಟ್ರೀಯ ಆರ್ಥಿಕ ಅಭಿವೃದ್ಧಿಯ ವಿಶಾಲ ಗುರಿಯನ್ನು ಸಾಧಿಸಲು ವೇಗವರ್ಧಕವಾಗಿರುತ್ತದೆ (ಉದಾಹರಣೆಗೆ ಅಲೆಕ್ಸಾಂಡರ್‌ ಗೆರ್‌ಷೆನ್‌ಕ್ರಾನ್‌, ಪಾಲ್‌ ರೊಸೆನ್‌ಸ್ಟೀನ್‌-ರೊಡನ್‌, ಜೋಸೆಫ್‌ ಷುಂಪೀಟರ್‌, ಆನ್ನೆ ಕ್ರೂಗರ್‌ ಇತ್ಯಾದಿರವರನ್ನು ನೋಡಿ.‌). ಆದಾಗ್ಯೂ ಆಡಮ್ಸ್‌, ಗ್ರಹಾಂ & ವಾನ್‌ ಪಿಷ್ಕೆರವರು 'ಗ್ರಾಮೀಣ ಅಭಿವೃದ್ಧಿಯನ್ನು ಅಗ್ಗದ ಸಾಲದ ಮೂಲಕ ಶಿಥಿಲಗೊಳಿಸುವುದು' ಎಂಬ ತಮ್ಮ ಆಧಾರಭೂತ ವಿಶ್ಲೇಷಣೆಯಲ್ಲಿ ವಿವರವಾಗಿ ನೀಡಿದ ಕಾರಣಗಳಿಂದಾಗಿ ತಮ್ಮ ದೇಶದ ಬಹುಸಂಖ್ಯಾತ ನಾಗರೀಕರಿಗೆ ಹಣಕಾಸಿನ ಸೇವೆಗಳನ್ನು ನೀಡಲು ಮಾಡಿದ ರಾಷ್ಟ್ರೀಯ ಯೋಜನಾಕಾರರು ಹಾಗೂ ತಜ್ಞರ ಪ್ರಯತ್ನಗಳು ವಿಶ್ವ ಸಮರ IIರ ಸಮಯದಿಂದ ವಿಫಲವಾಗುತ್ತಿವೆ.[೩]

ಈ ಎಲ್ಲಾ ಕಷ್ಟಗಳಿಂದಾಗಿ ಬಡವರು ಸಾಲ ಪಡೆಯುವಾಗ ಸಾಮಾನ್ಯವಾಗಿ ತಮ್ಮ ಸಂಬಂಧಿಕರು ಅಥವಾ ಸ್ಥಳೀಯ ಸಾಲದಾತರಲ್ಲಿ ಸಾಲ ಪಡೆಯಬೇಕಾಗಿರುತ್ತಿದ್ದು ಅಲ್ಲಿ ಬಡ್ಡಿಯ ದರ ಬಹಳಷ್ಟು ಮಟ್ಟಿಗೆ ಹೆಚ್ಚಾಗಿರುತ್ತದೆ. ಏಷ್ಯಾ, ಲ್ಯಾಟಿನ್‌ ಅಮೇರಿಕಾ ಮತ್ತು ಆಫ್ರಿಕಾ ಖಂಡಗಳ ಹದಿನಾಲ್ಕು ದೇಶಗಳಲ್ಲಿ ನಡೆಸಿದ ೨೮ ಅಧ್ಯಯನಗಳ ವಿಶ್ಲೇಷಣೆಯ ಸಾರಾಂಶದ ಪ್ರಕಾರ ಸಾಲದಾತರಲ್ಲಿ ೭೬% ಜನರ ಬಡ್ಡಿ ದರವು ತಿಂಗಳಿಗೆ ೧೦%ನ್ನೂ ಮೀರಿರುತ್ತಿದ್ದು, ಇದರಲ್ಲಿ ತಿಂಗಳಿಗೆ ೧೦೦%ಕ್ಕೂ ಮೀರಿದ ಬಡ್ಡಿದರವನ್ನು ವಿಧಿಸುತ್ತಿರುವ ೨೨% ಜನ ಸಾಲದಾತರೂ ಸೇರಿದ್ದಾರೆ. ಸಾಲದಾತರು ಸ್ವಲ್ಪ ಉತ್ತಮ ಮಟ್ಟದವರಿಗಿಂತ ತೀರ ಬಡವರಿಗೇ ಹೆಚ್ಚು ಬಡ್ಡಿದರವನ್ನು ವಿಧಿಸುತ್ತಿದ್ದಾರೆ.[೪] ಸಾಲದಾತರನ್ನು ಸಾಮಾನ್ಯವಾಗಿ ದುಷ್ಟರೆಂದು ಹಾಗೂ ದುಬಾರಿ ಬಡ್ಡಿಯನ್ನು ಕೀಳುವವರೆಂದು ದೂರುತ್ತಿದ್ದರೂ ಅವರ ಸೇವೆಗಳು ಅನುಕೂಲಕರವಾಗಿದ್ದು ಹಾಗೂ ವೇಗವಾಗಿದ್ದು, ಅವರು ಸಾಲಗಾರರು ತೊಂದರೆಗೊಳಗಾಗಿದ್ದಾಗ ಹೊಂದಿಕೊಳ್ಳುವುದಕ್ಕೂ ಸಿದ್ಧವಿರುತ್ತಾರೆ. ಅವರನ್ನು ಆದಷ್ಟು ಬೇಗ ತಮ್ಮ ವ್ಯವಹಾರದಿಂದ ಹೊರಹಾಕುವ ಸಾಧ್ಯತೆಗಳು ಕಿರುಬಂಡವಾಳ ಸಂಸ್ಥೆಗಳ ಹೆಚ್ಚು ಸಕ್ರಿಯರಾಗಿರುವ ಸ್ಥಳಗಳಲ್ಲೂ ಕೂಡಾ ಕಾರ್ಯಸಾಧುವಲ್ಲ ಎಂಬುದು ಸ್ಪಷ್ಟವಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಕಳೆದ ಶತಮಾನಗಳಲ್ಲಿ ಯೋಜಿಸಿದ್ದ ಸಕ್ರಿಯ ಕಲ್ಪನಾಯೋಜನೆಗಳು ಹದಿನೈದನೇ ಶತಮಾನದ ಸಮುದಾಯಮುಖಿ ಗಿರವಿಅಂಗಡಿಗಳನ್ನು ಸ್ಥಾಪಿಸಿದ್ದ ಫ್ರಾನ್ಸಿಸ್‌ ಪಂಥದ ಸನ್ಯಾಸಿಗಳಿಂದ ಹಿಡಿದು ಹತ್ತೊಂಭತ್ತನೇ ಶತಮಾನದ ಐರೋಪ್ಯ ಸಾಲದಾತರ ಒಕ್ಕೂಟಗಳ ಸ್ಥಾಪಕರು (ಫ್ರೀಡ್‌ರಿಚ್‌ ವಿಲ್‌ಹೆಲ್ಮ್‌ ರೈಫೀಸನ್‌ರಂತಹ ) ಮತ್ತು ೧೯೭೦ರ ದಶಕದ ಕಿರುಸಾಲ ಚಳುವಳಿಯನ್ನು ಸ್ಥಾಪಕರು (ಮೊಹಮ್ಮದ್‌ ಯೂನಸ್‌ರಂತಹಾ) ಅನೇಕ ಪದ್ಧತಿಗಳನ್ನು ಪರೀಕ್ಷಿಸಿ ಸಂಸ್ಥೆಗಳನ್ನು ಕಟ್ಟಿದರು. ಈ ಸಂಸ್ಥೆಗಳನ್ನು ಹಣಕಾಸು ಸಂಸ್ಥೆಗಳು ನೀಡಬಹುದಾದ ಅನೇಕ ವಿಧದ ಜೀವನೋಪಾಯದ ಅವಕಾಶಗಳನ್ನು ಹಾಗೂ ನಷ್ಟ ನಿವಾರಣಾ ಸಾಧನಗಳನ್ನು ಬಡವರ ಮನೆಬಾಗಿಲಲ್ಲಿ ನೀಡುವಂತಹಾ ಉದ್ದೇಶದಿಂದ ರೂಪಿಸಿದ್ದಾಗಿತ್ತು.[೫] ಗ್ರಾಮೀಣ ಬ್ಯಾಂಕ್‌ನ ಯಶಸ್ಸು ವಿಶ್ವವನ್ನೇ ಉತ್ತೇಜಿಸಿದ್ದರೂ, ಈ ಯಶಸ್ಸನ್ನು ಕಾರ್ಯಸಾಧುವಾಗಿ ಮರುಕಳಿಸುವಂತೆ ಮಾಡಲು ಕಷ್ಟಸಾಧ್ಯವಾಗಿದೆ (ಇದು ಈಗ ಏಳು ದಶಲಕ್ಷ ಬಡ ಬಾಂಗ್ಲಾದೇಶೀ ಮಹಿಳೆಯರಿಗೆ ಸೇವೆ ನೀಡುತ್ತಿದೆ). ಕಡಿಮೆ ಜನಸಾಂದ್ರತೆಯ ರಾಷ್ಟ್ರಗಳಲ್ಲಿ ಸಮೀಪದ ಗ್ರಾಹಕರಿಗೆ ಸೇವೆ ನೀಡುವಲ್ಲಿ ತಗಲುವ ಕ್ರಿಯಾವೆಚ್ಚವನ್ನು ಹೊಂದಿಸುವ ಕೆಲಸ ಗಮನಾರ್ಹ ಸವಾಲಿನದಾಗಿದೆ.

ಈ ಬಗ್ಗೆ ಸಾಕಷ್ಟು ಪ್ರಗತಿಯಾಗಿದ್ದರೂ, ಸಮಸ್ಯೆಯನ್ನು ಇನ್ನೂ ಪರಿಹರಿಸಲಾಗಿಲ್ಲ. ಪ್ರತಿದಿನಕ್ಕೆ $೧ಕ್ಕೂ ಕಡಿಮೆ ದುಡಿಮೆಯ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿನ ಅಗಾಧ ಸಂಖ್ಯೆಯ ಜನರ ಪ್ರಮಾಣ ಈಗಲೂ ಯಾವುದೇ ಕಾರ್ಯಸಾಧು ಅಧಿಕೃತ ಹಣಕಾಸು ಸೇವಾ ಸಂಸ್ಥೆಗಳ ಸೌಲಭ್ಯಗಳನ್ನು ಹೊಂದಿಲ್ಲ. ಕಿರುಬಂಡವಾಳ ವ್ಯವಸ್ಥೆಯು ಕಿರುಬಂಡವಾಳ ಸಾಲಗಳಲ್ಲಿ $೨೫Bರಷ್ಟು ಹೂಡಿಕೆಯೊಂದಿಗೆ ಪ್ರಸಕ್ತ ಕ್ಷಿಪ್ರ ಬೆಳವಣಿಗೆ ಹೊಂದುತ್ತಿದೆ.[೬] ಒಂದು ಅಂದಾಜಿನ ಪ್ರಕಾರ ಉದ್ಯಮಕ್ಕೆ ಎಲ್ಲಾ ಅಗತ್ಯವಿರುವ ಬಡಜನರಿಗೆ ಸೇವೆಗಳನ್ನು ನೀಡಲು $೨೫೦ ಶತಕೋಟಿಯಷ್ಟು ಬಂಡವಾಳ ಅಗತ್ಯವಿದೆ.[೬] ಉದ್ಯಮವು ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತಲಿದ್ದು ಕಿರುಬಂಡವಾಳಕ್ಕೆ ಹರಿಯುತ್ತಿರುವ ಬಂಡವಾಳ ದರವು ಹೆಚ್ಚಿದ್ದು ಸರಿಯಾದ ನಿರ್ವಹಣೆ ಇಲ್ಲದೇ ಹೋದರೆ ಆಗುವ ಅಪಾಯದ ಸಂಭವದ ಬಗ್ಗೆ ಆತಂಕ ಹೆಚ್ಚಿದೆ.[೭]

ಮಿತಿಗಳು ಹಾಗೂ ನಿಯಮಗಳು[ಬದಲಾಯಿಸಿ]

ಸೈದ್ಧಾಂತಿಕವಾಗಿ, ಕಿರುಬಂಡವಾಳವೆಂದರೆ ಬಡಜನರು ಪ್ರಸಕ್ತ ಬಳಸುತ್ತಿರುವ ಇಲ್ಲವೇ ಬಳಸುವುದರಿಂದ ಅನುಕೂಲ ಪಡೆಯಬಹುದಾದ ಹಣಕಾಸು ಸೇವೆಗಳ ಗುಣಮಟ್ಟ ಏರಿಕೆ ಅಥವಾ ಸೌಲಭ್ಯಗಳನ್ನು ಹೆಚ್ಚಿಸಲು ಮಾಡುವ ಯಾವುದೇ ಪ್ರಯತ್ನವಾಗಿರುತ್ತದೆ. ಉದಾಹರಣೆಗೆ ಬಡಜನರು ಅನೌಪಚಾರಿಕ ಸಾಲಗಾರರಿಂದಲೇ ಸಾಲ ಪಡೆಯುವುದು ಹಾಗೂ ಅನೌಪಚಾರಿಕ ಸಂಗ್ರಹಕಾರರ ಬಳಿಯೇ ತಮ್ಮ ಉಳಿಕೆಯನ್ನು ಪಾವತಿಸುತ್ತಾರೆ. ಅವರು ಸಾಲಗಳನ್ನು ಹಾಗೂ ಅನುದಾನಗಳನ್ನು ಧರ್ಮಾರ್ಥ ಸಂಸ್ಥೆಗಳಿಂದ ಪಡೆಯುತ್ತಾರೆ. ಅವರು ವಿಮೆಯನ್ನು ಸರ್ಕಾರೀ ಸ್ವಾಮ್ಯದ ಕಂಪೆನಿಗಳಿಂದ ಪಡೆಯುತ್ತಾರೆ. ಅವರು ನಿಧಿ ಹಸ್ತಾಂತರಗಳನ್ನು (ಹವಾಲಾ ತರಹದ) ಹಣ ರವಾನೆ ಜಾಲಗಳ ಮೂಲಕ ಪಡೆಯುತ್ತಾರೆ.

ಕಿರುಬಂಡವಾಳವನ್ನು ಇನ್ನಿತರ ಚಟುವಟಿಕೆಗಳಿಂದ ಪ್ರತ್ಯೇಕಗೊಳಿಸುವಂತೆ ಹೆಚ್ಚೇನೂ ಅನುಕೂಲಗಳಿಲ್ಲ. ಹೊಸಬರ ಧನಸಂಚಯ ನಿಧಿಯನ್ನು ನಡೆಸುವ ಧರ್ಮಾರ್ಥ ಸಂಸ್ಥೆ, ಹೆಚ್ಚಿನ ಬಡ್ಡಿಗೆ ಸಾಲ ನೀಡುವ ಸಾಲದಾತ ಅಥವಾ ಸರ್ಕಾರೀ ಬ್ಯಾಂಕುಗಳಲ್ಲಿ ಬಡವರ ಠೇವಣಿ ಖಾತೆಗಳನ್ನು ತೆರೆಯಲು ಆದೇಶ ನೀಡುವ ಸರಕಾರ, ಇವುಗಳಲ್ಲಿ ಯಾರು ಬೇಕಾದರೂ ಕಿರುಬಂಡವಾಳದಲ್ಲಿ ಹಣ ತೊಡಗಿಸಿದ್ದೇವೆ ಎಂದು ಹೇಳಬಹುದಾಗಿದೆ. ಇಷ್ಟೇ ಅಲ್ಲದೇ, ಲಭ್ಯತೆಯ ಸಮಸ್ಯೆಯನ್ನು ಹಣಕಾಸು ಸಂಸ್ಥೆಗಳ ಸಂಖ್ಯೆಯನ್ನು ಹೆಚ್ಚಿಸುವುದರಿಂದ, ಹಾಗೂ ಅವುಗಳ ಸಾಮರ್ಥ್ಯವನ್ನು ಹೆಚ್ಚಿಸುವುದರಿಂದಲೂ ಪರಿಹರಿಸಬಹುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಿವಿಧ ರೀತಿಯ ಸಂಸ್ಥೆಗಳು ವಿವಿಧ ರೀತಿಯ ಅಗತ್ಯಗಳನ್ನು ಪೂರೈಸುವುದರಿಂದ ಆ ತರಹದ ಸಂಸ್ಥೆಗಳ ವೈವಿಧ್ಯತೆಗಳನ್ನು ವಿಸ್ತರಿಸುವ ಬಗ್ಗೆ ಹೆಚ್ಚು ಒತ್ತಾಯ ಕೇಳಿಬರತೊಡಗಿದೆ.

ಒಂದೂವರೆ ಶತಮಾನದ ಅಭಿವೃದ್ಧಿ ಪದ್ಧತಿಗಳ ಸಾರಾಂಶ ನೀಡುವ ಕನ್ಸಲ್ಟೇಟಿವ್‌ ಗ್ರೂಪ್‌ ಟು ಅಸಿಸ್ಟ್‌ ದ ಪೂರ್‌ (CGAP) ಸಂಸ್ಥೆಯ ೨೦೦೪ರಲ್ಲಿ ನಡೆದ G೮ ಸಮ್ಮೇಳನದ ಎಂಟು ನಾಯಕರ ಗುಂಪಿನಿಂದ ಮತ್ತು ಜೂನ್‌ ೧೦,೨೦೦೪ರಂದು ಅನುಮೋದನೆ ಪಡೆದ ಕೆಲ ಮೂಲಭೂತ ತತ್ವಗಳು ಕೆಳಗಿವೆ :[೫]

  1. ಬಡ ಜನರಿಗೆ ಕೇವಲ ಸಾಲವಲ್ಲದೇ, ಠೇವಣಿ, ವಿಮೆ ಮತ್ತು ಹಣ ವರ್ಗಾವಣೆ ಸೇವೆಗಳ ಅಗತ್ಯವಿದೆ.
  2. ಕಿರುಬಂಡವಾಳ ಬಡಮನೆಗಳಿಗೆ ಸಹಾ ಉಪಯುಕ್ತವಾಗಿರಬೇಕು : ಅವರ ಆದಾಯವನ್ನು ಹೆಚ್ಚಿಸಲು ಸಹಾಯವಾಗುವ ಹಾಗೆ, ಆಸ್ತಿಗಳನ್ನು ಬೆಳೆಸುವಂತೆ ಮತ್ತು/ಅಥವಾ ಬಾಹ್ಯ ಒತ್ತಡಗಳನ್ನು ತಾಳಿಕೊಳ್ಳಲು ಸಾಧ್ಯವಾಗುವ ಹಾಗೆ ತಮ್ಮನ್ನು ಬಲಪಡಿಸಿಕೊಳ್ಳುವಂತೆ ಅವರಿಗೆ ನೆರವಾಗಬೇಕು.
  3. “ಕಿರುಬಂಡವಾಳವು ತನ್ನ ವೆಚ್ಚವನ್ನು ತಾನೇ ಭರಿಸಬಲ್ಲದು.”[೮] ದಾನಿಗಳಿಂದ ಹಾಗೂ ಸರ್ಕಾರದಿಂದ ಸಿಗುವ ಅನುದಾನ ಸಾಕಾಗುವಷ್ಟಿರುವುದಿಲ್ಲ ಹಾಗೂ ಅನಿಶ್ಚಿತವಾಗಿರುವುದರಿಂದ, ಬಹುಸಂಖ್ಯಾತ ಬಡಜನರನ್ನು ತಲುಪಲು, ಕಿರುಬಂಡವಾಳ ತನ್ನ ವೆಚ್ಚವನ್ನು ತಾನೆ ಕಂಡುಕೊಳ್ಳಬೇಕು.
  4. ಕಿರುಬಂಡವಾಳ ಸ್ಥಾಪನೆಯೆಂದರೆ ಶಾಶ್ವತ ಸ್ಥಳೀಯ ಸಂಸ್ಥೆಗಳ ಸ್ಥಾಪನೆ.
  5. ಕಿರುಬಂಡವಾಳವೆಂದರೆ ಬಡಜನರ ಹಣಕಾಸು ಅಗತ್ಯಗಳನ್ನು ರಾಷ್ಟ್ರದ ಮುಖ್ಯವಾಹಿನಿಯ ಹಣಕಾಸು ವ್ಯವಸ್ಥೆಯಲ್ಲಿ ಅಂತರ್ಗತಗೊಳಿಸುವುದು ಎಂದೂ ಸಹಾ ಅರ್ಥ.
  6. “ಸರ್ಕಾರದ ಕೆಲಸವೆಂಧರೆ ಹಣಕಾಸು ಸೇವೆಗಳನ್ನು ಸದೃಢಗೊಳಿಸುವುದೇ ಹೊರತು ಅವುಗಳನ್ನು ನೀಡುವುದಲ್ಲ.”[೯]
  7. “ಅನುದಾನಗಳು ಖಾಸಗಿ ಬಂಡವಾಳಕ್ಕೆ ಪೂರಕವಾಗಿರಬೇಕೇ ಹೊರತು ಅದರ ಜೊತೆ ಸ್ಪರ್ಧೆ ನೀಡುವುದಕ್ಕಲ್ಲ.”[೯]
  8. ಇದಕ್ಕೆ ಪ್ರಮುಖ ಪ್ರತಿಬಂಧಕವೆಂದರೆ ಸದೃಢ ಸಂಸ್ಥೆಗಳ ಹಾಗೂ ನಿರ್ವಾಹಕರ ಕೊರತೆ.”[೯] ದಾತರು ಸಾಮರ್ಥ್ಯ ವೃದ್ಧಿಯ ಕಡೆಗೆ ಗಮನ ನೀಡಬೇಕು.
  9. ಬಡ್ಡಿದರದ ಗರಿಷ್ಠಮಿತಿಗಳು ಕಿರುಬಂಡವಾಳ ಸಂಸ್ಥೆಗಳಿಗೆ ತಮ್ಮ ನಿರ್ವಹಣಾ ವೆಚ್ಚವನ್ನು ಗಳಿಸಲು ಪ್ರತಿಬಂಧಿಸಿ ಸಾಲದ ವಿತರಣೆಯ ಮೇಲೆ ದುಷ್ಪರಿಣಾಮ ಬೀರಿ ಬಡಬಗ್ಗರಿಗೆ ತೊಂದರೆ ಕೊಡುತ್ತಿವೆ.
  10. ಕಿರುಬಂಡವಾಳ ಸಂಸ್ಥೆಗಳು ತಮ್ಮ ಸಾಧನೆಯನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಎರಡೂ ರೀತಿಯಲ್ಲಿ ಒರೆಗೆ ಹಚ್ಚಿ ಅದನ್ನು ಬಹಿರಂಗಪಡಿಸಬೇಕು.

ಕಿರುಬಂಡವಾಳಗಳು ದತ್ತಿನಿಧಿಗಳಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳಬಹುದು. ನಿರ್ಗತಿಕರಾಗಿರುವ ಅಥವಾ ತಮ್ಮ ಸಾಲವನ್ನು ತೀರಿಸಲು ಹಣ ಹೊಂಚಲಾಗದಿರುವಷ್ಟು ಬಡತನವಿರುವ ಕುಟುಂಬಗಳಿಗೆ ಅನುದಾನವನ್ನು ನೀಡುವುದು ಉತ್ತಮ. ಇಂತಹಾ ಸಂದರ್ಭವು ಉದಾಹರಣೆಗೆ ಯುದ್ಧಪೀಡಿತ ಪ್ರದೇಶದಲ್ಲಿ ಅಥವಾ ನೈಸರ್ಗಿಕ ವಿಕೋಪವಾದ ಪ್ರದೇಶಗಳಲ್ಲಿ ಬರಬಹುದು.

ಸಾಲದ ಮಿತಿಯ ಬಗೆಗಿನ ಚರ್ಚೆಗಳು[ಬದಲಾಯಿಸಿ]

ಕಿರುಬಂಡವಾಳ ವ್ಯವಸ್ಥೆಯ ಮಿತಿಗಳ ಬಗ್ಗೆ ಅನೇಕ ಪ್ರಮುಖ ಚರ್ಚೆಗಳಾಗಿವೆ.

ವೃತ್ತಿಪರರು ಮತ್ತು ಕಿರುಬಂಡವಾಳದ ದತ್ತಿಸಂಸ್ಥೆಗಳ ದಾನಿಗಳು ಆಗ್ಗಾಗ್ಗೆ ಕಿರುಸಾಲದ ಉದ್ದೇಶಗಳನ್ನು ಕಿರುಉದ್ಯಮವನ್ನು ಆರಂಭಿಸುವ ಅಥವಾ ಅಭಿವೃದ್ಧಿಪಡಿಸುವ ಉತ್ಪಾದಕ ಉದ್ದೇಶಗಳಿಗಾಗಿ ಮಾತ್ರವೇ ಎಂದು ನಿಯಂತ್ರಿಸಬೇಕೆಂದು ಧ್ವನಿ ಎತ್ತುತ್ತಿರುತ್ತಾರೆ. ಖಾಸಗಿ-ಕ್ಷೇತ್ರದವರು ಹಣವು ತತ್‌ಸ್ಥಾನೀಯವಾದುದರಿಂದಾಗಿ, ಆ ತರಹದ ನಿಯಮವನ್ನು ಕಾರ್ಯಗತಗೊಳಿಸುವುದು ಅಸಾಧ್ಯ ಹಾಗೂ ಯಾವುದೇ ಸಂದರ್ಭದಲ್ಲಿ ಬಡವರು ತಮ್ಮ ಹಣವನ್ನು ಹೇಗೆ ಬಳಸುತ್ತಾರೆ ಎಂಬುದನ್ನು ನಿರ್ಧರಿಸಲು ಶ್ರೀಮಂತರಿಗೆ ನಿರ್ಧರಿಸಲು ಅವಕಾಶವಿರಬಾರದು ಎಂದು ಪ್ರತ್ಯುತ್ತರ ನೀಡುತ್ತಾರೆ.

ಪ್ರಾಯಶಃ ಹೆಚ್ಚಿನ ಬಡ್ಡಿಗಳ ಬಗ್ಗೆ ಸಾಂಪ್ರದಾಯಿಕ ಅಭಿಪ್ರಾಯದಿಂದ, ಸಾಂಪ್ರದಾಯಿಕ ಸಾಲದಾತರ ಬಗ್ಗೆ ವಿಪರೀತ ಟೀಕೆಗಳಿವೆ. ಇದು ಆಧುನಿಕ ಕಿರುಬಂಡವಾಳ ವ್ಯವಸ್ಥೆಯಲ್ಲಿ ವಿಶೇಷವಾಗಿ ಹೆಚ್ಚು. ಹೆಚ್ಚಿನ ಬಡವರು ಕಿರುಸಾಲ ಸಂಸ್ಥೆಗಳಿಂದ ಸಾಲ ಪಡೆಯುವ ಸೌಲಭ್ಯ ಹೊಂದಿದ ನಂತರ ಸಾಲದಾತರ ಸೇವೆಗಳಿಗೆ ಮುಂದೆಯೂ ಬೆಲೆ ಇದ್ದೇ ಇರುತ್ತದೆ ಎಂಬ ವಿಚಾರವು ಸುಸ್ಪಷ್ಟವಾಯಿತು. ಸಾಲಗಾರರು ವೇಗದ ಸಾಲ ವಿತರಣೆ, ಗೋಪ್ಯತೆ ಮತ್ತು ಮರುಪಾವತಿಯ ಸಮಯದಲ್ಲಿ ಹೊಂದಾಣಿಕೆಯಂತಹಾ ಸೇವೆಗಳಿಗಾಗಿ ಹೆಚ್ಚಿನ ಬಡ್ಡಿದರ ತೆರಲೂ ಸಿದ್ಧರಾಗಿರುತ್ತಾರೆ. ಅವರು ಕಡಿಮೆ ಬಡ್ಡಿಯನ್ನು ಸಭೆಗಳಿಗೆ ಹಾಜರಾಗಲು, ತರಬೇತಿ ತರಗತಿಗಳಿಗೆ ಸೇರಲು ಆಗುವ ವೆಚ್ಚಗಳಿಗೆ ವೇಗದ ಪಾವತಿಗಾಗಿ ಅಥವಾ ಜಾಮೀನು ಸಾಲಗಳ ಮಾಸಿಕ ಪಾವತಿಗೆ ಸಮರ್ಪಕವಾದ ವ್ಯವಸ್ಥೆ ಎಂದು ಎಲ್ಲ ಸಮಯದಲ್ಲೂ ಭಾವಿಸಿರುವುದಿಲ್ಲ. ಇತರೆ ಕಾರಣಗಳಿಗಾಗಿ (ಶಾಲಾ ಶುಲ್ಕ ಕಟ್ಟಲು ಅಥವಾ ಕುಟುಂಬದ ಚಿಕಿತ್ಸಾ ವೆಚ್ಚ ನಿರ್ವಹಿಸಲು ಇಲ್ಲವೇ ಕುಟುಂಬಕ್ಕೆ ಆಹಾರ ಸಾಮಗ್ರಿಗಳ ನಿರಂತರ ಸರಬರಾಜಿಗೆಂದು) ಸಾಲ ಪಡೆಯುವಾಗ ಹೊಸ ಉದ್ಯಮದ ಆರಂಭಕ್ಕೆಂಬ ಸುಳ್ಳು ನೆಪ ಹೇಳಿ ಸಾಲ ಪಡೆಯುವುದು ಅವರಿಗೆ ಸಾಮಾನ್ಯವಾಗಿ ಹಿಡಿಸುತ್ತಿರುವುದಿಲ್ಲ.[೧೦] ಇತ್ತೀಚೆಗೆ ಅಂತರ್ಗತ ಹಣಕಾಸು ವ್ಯವಸ್ಥೆಗಳ (ಕೆಳಗಿನ ವಿಭಾಗ ನೋಡಿ) ಮೇಲೆ ಕೇಂದ್ರೀಕರಣ ಹೆಚ್ಚಾಗಿರುವುದರಿಂದ ಸಾಲದಾತರಿಗೆ ಹೆಚ್ಚು ಯುಕ್ತತೆಯನ್ನು ನೀಡಿ ನಿಯಂತ್ರಣ ಹೇರುವುದರ ಪರವಾಗಿದ್ದು ಬಡಜನರಿಗೆ ಹೆಚ್ಚು ಅವಕಾಶಗಳನ್ನು ನೀಡುವಲ್ಲಿ ಅವುಗಳ ನಡುವೆ ಪರಸ್ಪರ ಸ್ಪರ್ಧೆಯನ್ನು ಹೆಚ್ಚಿಸುವ ಹಾಗಾಗಿದೆ.

೧೯೭೦ರ ದಶಕದಲ್ಲಿ ಖಾಸಗಿ ಕ್ಷೇತ್ರದ ವ್ಯವಸ್ಥೆಗಳ ಪರವಾದ ದೃಢವಾದ ದೃಷ್ಟಿಕೋನದೊಂದಿಗೆ ಆಧುನಿಕ ಕಿರುಬಂಡವಾಳ ವ್ಯವಸ್ಥೆಯು ಅಸ್ತಿತ್ವಕ್ಕೆ ಬಂದಿತು. ಇದಕ್ಕೆ ಮೂಲಕಾರಣ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿನ ಸರ್ಕಾರೀ ಸ್ವಾಮ್ಯದ ಕೃಷಿ ಅಭಿವೃದ್ಧಿ ಬ್ಯಾಂಕ್‌ಗಳು ಭಾರೀ ಸೋಲು ಕಂಡಿದ್ದು, ಅವುಗಳ ಮೂಲ ಉದ್ದೇಶದ ಅಭಿವೃದ್ಧಿ ಗುರಿಗಳನ್ನು ಶಿಥಿಲಗೊಳಿಸುತ್ತವೆ (ಆಡಮ್ಸ್‌, ಗ್ರಹಾಂ & ವಾನ್‌ ಪಿಷ್ಕೆ ಅವರ ಸಂಪಾದನೆಯ ಸಂಗ್ರಹದಾಖಲೆಯನ್ನು ನೋಡಿ).[೩] ಆದಾಗ್ಯೂ ಅನೇಕ ರಾಷ್ಟ್ರಗಳ ಸಾರ್ವಜನಿಕ ಅಧಿಕಾರಿಗಳು ಈ ಬಗ್ಗೆ ಪ್ರತ್ಯೇಕ ನಿಲುವನ್ನು ಹೊಂದಿದ್ದು, ಕಿರುಬಂಡವಾಳ ಮಾರುಕಟ್ಟೆಗಳಲ್ಲಿ ಹಸ್ತಕ್ಷೇಪಗಳನ್ನು ಮುಂದುವರೆಸಿದ್ದಾರೆ.

ಬಹುಕಾಲದಿಂದ 'ಪೂರೈಕೆ ಸಾಮರ್ಥ್ಯ/ಚಾಚುದೂರ' (ಬಹಳ ಬಡವರು ಹಾಗೂ ಬಹಳ ದೂರ ಪ್ರದೇಶದಲ್ಲಿರುವವರನ್ನು ತಲುಪಬಲ್ಲ ಕಿರುಬಂಡವಾಳ ಸಂಸ್ಥೆಯ ಸಾಮರ್ಥ್ಯ) ಹಾಗೂ ಅದರ 'ನಿರಂತರ ನಡೆಯಬಲ್ಲ ಸಾಮರ್ಥ್ಯ'ಗಳ (ನಿರ್ವಹಣಾ ವೆಚ್ಚಗಳನ್ನು ಭರಿಸಬಲ್ಲ ಸಾಮರ್ಥ್ಯ ಮತ್ತು ಲಭ್ಯ ಆದಾಯದಲ್ಲೇ ಹೊಸ ಗ್ರಾಹಕರನ್ನು ತಲುಪಲು ತಗಲುವ ವೆಚ್ಚವನ್ನು ಭರಿಸುವ ಸಾಮರ್ಥ್ಯ) ನಡುವಿನ ಅನುಕೂಲ-ಅನಾನುಕೂಲಗಳ ನಡುವಿನ ವ್ಯತ್ಯಾಸದ ತೀವ್ರತೆ/ಸೂಕ್ಷ್ಮತೆಯ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.[೧೧] ಕಿರುಬಂಡವಾಳ ವೃತ್ತಿಪರರು ಈ ಎರಡೂ ಗುರಿಗಳ ನಡುವೆ ಸಾಧ್ಯವಾದಷ್ಟು ಮಟ್ಟಿಗೆ ಸಮತೋಲನ ಸಾಧಿಸಬೇಕೆಂಬುದನ್ನು ಎಲ್ಲರೂ ಒಪ್ಪಿದರೂ, ಕನಿಷ್ಟತಾವಾದಿ ಲಾಭೋದ್ದೇಶ ಇಟ್ಟುಕೊಂಡಿರುವ ಬೊಲಿವಿಯಾದ ಬಾನ್‌ಕೊಸಾಲ್‌ನಿಂದ ಹಿಡಿದು ಬಾಂಗ್ಲಾದೇಶದ ಸುಸಂಘಟಿತವಾದ ಲಾಭೋದ್ದೇಶರಹಿತ BRACನವರೆಗೆ ಕಾರ್ಯನೀತಿಗಳು ಹಲವಿವೆ. ಇದು ಕೇವಲ ನಿರ್ದಿಷ್ಟ ರೀತಿಯ ಸಂಸ್ಥೆಗಳಿಗಷ್ಟೇ ಅಲ್ಲ, ಬದಲಿಗೆ ರಾಷ್ಟ್ರೀಯ ಕಿರುಬಂಡವಾಳ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ತೊಡಗಿದ ಸರ್ಕಾರಗಳಿಗೂ ಅನ್ವಯಿಸುತ್ತದೆ.

ಕಿರುಬಂಡವಾಳ ತಜ್ಞರ ಸಾಮಾನ್ಯ ಅಭಿಪ್ರಾಯದ ಪ್ರಕಾರ ಸೇವೆಯು ಪ್ರಮುಖವಾಗಿ ಮಹಿಳೆಯರನ್ನು ಕೇಂದ್ರೀಕರಿಸಿರಬೇಕು. ಪುರಾವೆಗಳ ಪ್ರಕಾರ ಅವರು ಬಾಕಿದಾರರಾಗುವ ಸಾಧ್ಯತೆ ಪುರುಷರಿಗಿಂತ ಕಡಿಮೆ. ೨೦೦೬ರ ಉದ್ಯಮದ ಮಾಹಿತಿ ಪ್ರಕಾರ ೫೨ ದಶಲಕ್ಷ ಸಾಲಗಾರರನ್ನು ಮುಟ್ಟಿರುವ ೭೦೪ MFIಗಳಲ್ಲಿ ಒಕ್ಕೂಟದ ಮೂಲಕ ಸಾಲ ಪಡೆಯುವರನ್ನು (೯೯.೩% ಮಹಿಳಾ ಗ್ರಾಹಕರು) ಹೊಂದಿದ್ದ MFIಗಳು ಹಾಗೂ ವೈಯಕ್ತಿಕ(೫೧% ಮಹಿಳಾ ಗ್ರಾಹಕರು) ಸಾಲ ಪಡೆಯುವವರನ್ನು ಹೊಂದಿದ್ದ MFIಗಳೂ ಸೇರಿದ್ದವು. ಒಕ್ಕೂಟ ಸಾಲಗಳಲ್ಲಿ ಬಾಕಿದಾರ ದರವು ೩೦ ದಿನಗಳ ನಂತರ ೦.೯%ರಷ್ಟಿದ್ದರೆ (ವೈಯಕ್ತಿಕ ಸಾಲ—೩.೧%), ೦.೩%ರಷ್ಟು ಸಾಲಗಳನ್ನು ತೆಗೆದೊಗೆಯಲಾಗಿತ್ತು (ವೈಯಕ್ತಿಕ ಸಾಲ—೦.೯%).[೧೨] ಸಾಲದ ಮೊತ್ತ ಕಡಿಮೆಯಾದಷ್ಟೂ ನಿರ್ವಹಣಾ ವೆಚ್ಚದ ಅಂತರಗಳು ಅಲ್ಪವಾಗುತ್ತಿದ್ದು, ಅನೇಕ MFIಗಳು ಪುರುಷರಿಗೆ ಸಾಲ ಕೊಡುವುದರಿಂದಾಗುವ ನಷ್ಟದ ಸಾಧ್ಯತೆ ವಿಪರೀತ ಹೆಚ್ಚು ಎಂಬ ಅಭಿಪ್ರಾಯ ಹೊಂದಿವೆ. ಆದಾಗ್ಯೂ ಈ ಮಹಿಳೆಯರ ಮೇಲಿನ ಕೇಂದ್ರೀಕರಣವನ್ನು ಪ್ರಶ್ನಿಸಲಾಗಿದೆ. ವಿಶ್ವಬ್ಯಾಂಕ್‌ ಪ್ರಕಟಿಸಿದ ಶ್ರೀಲಂಕಾದ ಕಿರುಉದ್ಯಮಿಗಳ ಮೇಲಿನ ಅಧ್ಯಯನದ ಪ್ರಕಾರ ಪುರುಷ-ಮಾಲೀಕತ್ವದ ಉದ್ಯ್ಯಮಗಳ (ಮಾದರಿಗಳ ಅರ್ಧದಷ್ಟು) ಬಂಡವಾಳದ ಮೇಲಿನ ಹುಟ್ಟುವಳಿಗಳು ಸರಾಸರಿ ೧೧%ರಷ್ಟಿದ್ದರೆ ಮಹಿಳಾ-ಮಾಲೀಕತ್ವದ ಉದ್ಯಮಗಳದ್ದು, ೦% ಅಥವಾ ಸ್ವಲ್ಪ ಮಟ್ಟಿಗೆ ಋಣಾತ್ಮಕವಾಗಿತ್ತು.[೧೩]

ಕಿರು ಬಂಡವಾಳ ಸೇವೆಗಳು ಅಭಿವೃದ್ಧಿ ಹೊಂದಿದ ದೇಶಗಳೂ ಸೇರಿದಂತೆ ಎಲ್ಲಾ ಕಡೆ ಅಗತ್ಯವಾಗಿವೆ. ಆದಾಗ್ಯೂ, ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿ ಹಣಕಾಸು ಕ್ಷೇತ್ರದಲ್ಲಿನ ಅತೀವ ಸ್ಪರ್ಧೆ,ವಿವಿಧ ಉದ್ದೇಶಗಳ ವಿವಿಧ ರೀತಿಯ ಹಣಕಾಸು ಸಂಸ್ಥೆಗಳ ನಾನಾ ವಿಧದ ಮಿಶ್ರಣವು, ಅಧಿಕ ಸಂಖ್ಯೆಯ ಜನರು ಯಾವುದಾದರೊಂದು ಹಣಕಾಸು ಸೇವೆಯನ್ನು ಪಡೆಯಲು ಸಾಧ್ಯವಾಗುವಂತೆ ಎಚ್ಚರವಹಿಸಿರುತ್ತವೆ. ಒಕ್ಕೂಟ ಸಾಲದಂತಹಾ ಕಿರುಬಂಡವಾಳ ವ್ಯವಸ್ಥೆಯ ಮಾರ್ಪಾಟುಗಳನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸ್ಥಳಾಂತರಗೊಳಿಸಲು ಮಾಡಿದ ಪ್ರಯತ್ನಗಳು ಅಲ್ಪ ಯಶಸ್ಸು ಮಾತ್ರ ಕಂಡವು.[೧೪]

ಬಡವರ ಹಣಕಾಸಿನ ಅಗತ್ಯಗಳು[ಬದಲಾಯಿಸಿ]

ಚಿತ್ರ:Needs and Services.jpg
ಆರ್ಥಿಕ ಅಗತ್ಯಗಳು ಮತ್ತು ಆರ್ಥಿಕ ಸೇವೆಗಳು.

ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿ, ನಿರ್ದಿಷ್ಟವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಆರ್ಥಿಕ ಎನಿಸಿಕೊಂಡ ಚಟುವಟಿಕೆಗಳನ್ನು ನಾಣ್ಯೀಕರಿಸಲಾಗಿಲ್ಲ: ಅಂದರೆ ಅವುಗಳನ್ನು ನಡೆಸಲು ಹಣದ ಬಳಕೆ ಆಗುವುದಿಲ್ಲ. ಲಕ್ಷಣಕ್ಕನುಗುಣವಾಗಿ ಬಡವರ/ಬಡವರೆಂದ ಮೇಲೆ ಅವರ ಬಳಿ ಬಹಳ ಕಡಿಮೆ ಹಣವಿರುತ್ತದೆ. ಆದರೆ ಅವರ ಜೀವನದಲ್ಲಿ ಅವರಿಗೆ ಹಣ ಬೇಕಾಗುವಂತಹಾ ಇಲ್ಲವೇ ಹಣದಿಂದ ಕೊಳ್ಳಲಾಗುವಂತಹಾ ವಸ್ತುಗಳು ಬೇಕಾದ ಸನ್ನಿವೇಶಗಳು ನಿರ್ಮಾಣವಾಗಿರುತ್ತವೆ.

ಸ್ಟುವರ್ಟ್‌ ರುದರ್‌ಫೋರ್ಡ್‌ರ ಇತ್ತೀಚಿನ ದ ಪೂರ್‌ ಅಂಡ್‌ ದೇರ್‌ ಮನಿ ಪುಸ್ತಕದಲ್ಲಿ, ಆತ ಅನೇಕ ರೀತಿಯ ಅಗತ್ಯಗಳನ್ನು ಉದಾಹರಿಸಿದ್ದಾರೆ:[೧೫]

  • ಜೀವನಚಕ್ರದ ಅಗತ್ಯಗಳು : ಮದುವೆಗಳು, ಶವಸಂಸ್ಕಾರಗಳು, ಮಗುವಿನ ಜನನ, ಶಿಕ್ಷಣ, ಮನೆಕಟ್ಟುವಿಕೆ, ವಿಧವೆತನ ಮತ್ತು ವೃದ್ಧಾಪ್ಯದಂತವು.
  • ವೈಯಕ್ತಿಕ ತುರ್ತುಗಳು : ಅನಾರೋಗ್ಯ, ಗಾಯಗೊಳ್ಳುವಿಕೆ, ನಿರುದ್ಯೋಗ, ಕಳ್ಳತನ, ಕಿರುಕುಳ ಅಥವಾ ಮರಣದಂತವು.
  • ಅನಾಹುತಗಳು : ಅಗ್ನಿ ಅನಾಹುತ, ಪ್ರವಾಹ, ಚಂಡಮಾರುತಗಳು ಮತ್ತು ಮಾನವಕೃತ ಪ್ರಸಂಗಗಳಾದ ಯುದ್ಧ ಅಥವಾ ಮನೆಗಳ ಕೆಡವುವಿಕೆ ಇತ್ಯಾದಿ.
  • ಹೂಡಿಕೆ ಅವಕಾಶಗಳು : ವ್ಯವಹಾರದ ವಿಸ್ತರಣೆ, ಜಮೀನು ಅಥವಾ ಉಪಕರಣ ಖರೀದಿ, ಮನೆಯ ಸುಧಾರಣೆ, ಉದ್ಯೋಗ ಸುರಕ್ಷತೆ (ಕೆಲವೊಮ್ಮೆ ದೊಡ್ಡ ಪ್ರಮಾಣದ ಲಂಚವನ್ನು ಕೊಡಬೇಕಾಗಿರುತ್ತದೆ) ಇತ್ಯಾದಿ.

ಬಡಜನರು ಈ ಅಗತ್ಯಗಳನ್ನು ಪೂರೈಸಿಕೊಳ್ಳಲು ರಚನಾತ್ಮಕ ಮತ್ತು ಪ್ರಮುಖವಾಗಿ ಸಹಯೋಗಗಳೊಂದಿಗೆ ಹಣಕ್ಕೆ ಬದಲಾಗಿ ವಿವಿಧ ವಸ್ತುಗಳ ರಚನೆ ಹಾಗೂ ವಿನಿಮಯ ಮಾಡಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳುತ್ತಾರೆ. ನಗದು ಹಣಕ್ಕೆ ಪರ್ಯಾಯವಾಗಿ ಬಳಸುವ ವಸ್ತುಗಳು ರಾಷ್ಟ್ರದಿಂದ ರಾಷ್ಟ್ರಕ್ಕೆ ವ್ಯತ್ಯಾಸವಾಗಬಹುದಾಗಿದ್ದರೂ ಸಾಮಾನ್ಯವಾದುವೆಂದರೆ ಜಾನುವಾರುಗಳು, ಧಾನ್ಯ, ಆಭರಣ ಮತ್ತು ಅಮೂಲ್ಯ ಲೋಹಗಳು.

ಮಾರ್ಗ್ಯುರೈಟ್‌ ರಾಬಿನ್ಸನ್‌ರವರು ದ ಮೈಕ್ರೋಫೈನಾನ್ಸ್‌ ರೆವೊಲ್ಯೂಷನ್‌ನಲ್ಲಿ ವಿವರಿಸುವ ಪ್ರಕಾರ ೧೯೮೦ರ ದಶಕವು “ಕಿರುಬಂಡವಾಳವು ದೊಡ್ಡ ಪ್ರಮಾಣದ ಚಾಚುದೂರವನ್ನು ಲಾಭದಾಯಕವಾಗಿ ನೀಡಬಲ್ಲದು,” ಎಂಬುದನ್ನು ಸಮರ್ಥಿಸಿತು ಮತ್ತು ೧೯೯೦ರ ದಶಕದಲ್ಲಿ “ಕಿರುಬಂಡವಾಳವು ಒಂದು ಉದ್ಯಮವಾಗಿ ಬೆಳೆಯಲು ಆರಂಭಿಸಿತು” (೨೦೦೧, p. ೫೪). ೨೦೦೦ರ ದಶಕದಲ್ಲಿ, ಕಿರುಬಂಡವಾಳ ಉದ್ಯಮದ ಧ್ಯೇಯವೆಂದರೆ ಪೂರೈಸಿರದ ಬೇಡಿಕೆಯನ್ನು ಮತ್ತೂ ಹೆಚ್ಚಿನ ಪ್ರಮಾಣದಲ್ಲಿ ಪೂರೈಸುವುದು ಹಾಗೂ ಬಡತನ ನಿವಾರಣೆಯಲ್ಲಿ ಪಾತ್ರ ವಹಿಸುವುದು. ವಾಣಿಜ್ಯ ಕಿರುಬಂಡವಾಳ ಕ್ಷೇತ್ರವನ್ನು ಕಳೆದ ಕೆಲ ದಶಕಗಳಲ್ಲಿ ಅಭಿವೃದ್ಧಿಪಡಿಸುವುದರಲ್ಲಿ ಸಾಕಷ್ಟು ಪ್ರಗತಿಯಾಗಿದ್ದರೂ, ಉದ್ಯಮವು ಬೃಹತ್‌ ಪ್ರಮಾಣದ ವಿಶ್ವದಾದ್ಯಂತ ಬೇಡಿಕೆಯ ಪೂರೈಸಲು ಸಾಧ್ಯವಾಗುವ ಮುಂಚೆ ಅನೇಕ ಪರಿಹಾರವಾಗದ ಸಮಸ್ಯೆಗಳನ್ನು ಪರಿಹರಿಸಬೇಕಿದೆ. ದೃಢ ಕಿರುಬಂಡವಾಳ ವಾಣಿಜ್ಯ ಉದ್ಯಮವನ್ನು ಕಟ್ಟಬೇಕಾದಾಗ ಬರಬಹುದಾದ ಅಡ್ಡಿ ಅಥವಾ ಸವಾಲುಗಳೆಂದರೆ:

• ದಾನಿಗಳ ಅಸಮಂಜಸ ಅನುದಾನಗಳು

• ಠೇವಣಿ ಸ್ವೀಕರಿಸುವ MFIಗಳ ಅಸಮರ್ಪಕ ನಿಯಂತ್ರಣ ಮತ್ತು ಮೇಲ್ವಿಚಾರಣೆ

• ಕೆಲವೇ MFIಗಳು ಮಾತ್ರವೇ ಉಳಿತಾಯ, ಪಾವತಿ ಅಥವಾ ವಿಮೆಗಳಿಗೆ ಬೇಕಾದ ಅಗತ್ಯಗಳನ್ನು ಪೂರೈಸುತ್ತವೆ

• MFIಗಳ ನಿರ್ವಹಣಾ ಸಾಮರ್ಥ್ಯದ ಮಿತಿ

• ಸಾಂಸ್ಥಿಕ ನ್ಯೂನತೆಗಳು

• ಮತ್ತಷ್ಟು ಪ್ರಸರಣ ಮತ್ತು ಗ್ರಾಮೀಣ, ಕೃಷಿ ಕಿರುಬಂಡವಾಳ ವಿಧಿವಿಧಾನಗಳ ಅಳವಡಿಕೆಯ ಅಗತ್ಯಗಳು

ಬಡವರು ತಮ್ಮ ಹಣವನ್ನು ನಿರ್ವಹಿಸುವ ರೀತಿಗಳು[ಬದಲಾಯಿಸಿ]

ಏರಿಕೆಯ ಉಳಿಕೆ

ರುದರ್‌ಫೋರ್ಡ್‌ರ ವಾದದ ಪ್ರಕಾರ ಬಡವರಿಗೆ ಹಣಕಾಸು ನಿರ್ವಹಣೆಯಲ್ಲಿ ಕಾಡುವ ಪ್ರಮುಖ ತೊಂದರೆ ಎಂದರೆ 'ಪ್ರಯೋಜನವಾಗಬಲ್ಲಷ್ಟು ದೊಡ್ಡ' ಮೊತ್ತದ ಹಣವನ್ನು ಕ್ರೋಢೀಕರಿಸಲಾಗದಿರುವುದು. ಹೊಸ ಮನೆಯನ್ನು ಕಟ್ಟುವುದಕ್ಕೆ ಬೇಕಾಗುವ ವಿವಿಧ ನಿರ್ಮಾಣ ಸಾಮಗ್ರಿಗಳನ್ನು ಕಟ್ಟಲು ಬೇಕಾಗುವಷ್ಟು ವರ್ಷದವರೆಗೆ ಉಳಿಸುವಿಕೆ ಮತ್ತು ಕಾಪಾಡುವಿಕೆಯು ಅತ್ಯಗತ್ಯ. ಮಕ್ಕಳ ವಿದ್ಯಾಭ್ಯಾಸ ವ್ಯವಸ್ಥೆಯನ್ನು ಕೋಳಿಗಳನ್ನು ಕೊಂಡುಕೊಂಡು, ಸಮವಸ್ತ್ರ, ಲಂಚ ಇತ್ಯಾದಿ ಖರ್ಚುಗಳು ಬಂದಾಗ ಆಗಿಂದ್ದಾಗ್ಗೆ ಅವುಗಳನ್ನು ಮಾರಿ ಖರ್ಚನ್ನು ನೀಗಿಸಬಹುದು. ಅಗತ್ಯ ಬರುವುದಕ್ಕಿಂತ ಮುಂಚೆಯೇ ಹಣ ಸಂಗ್ರಹವಾಗಿರುವುದರಿಂದ, ಈ ಧನನಿರ್ವಹಣಾ ವ್ಯವಸ್ಥೆಯನ್ನು 'ಏರಿಕೆಯ ಉಳಿಕೆ' ಎನ್ನುತ್ತಾರೆ.

ಬಹಳಷ್ಟು ಬಾರಿ ಜನರಲ್ಲಿ ತಮಗೆ ಅಗತ್ಯ ಬಂದಾಗ ಬೇಕಾದಷ್ಟು ಹಣ ಇರುವುದಿಲ್ಲ, ಆದ್ದರಿಂದ ಅವರು ಸಾಲ ಮಾಡುತ್ತಾರೆ. ಬಡ ಕುಟುಂಬವೊಂದು ಜಮೀನು ಖರೀದಿಸಲು ಸಂಬಂಧಿಕರಿಂದ, ಅಕ್ಕಿ/ಧಾನ್ಯಸಾಮಗ್ರಿಗಳನ್ನು ಖರೀದಿಸಲು ಸಾಲದಾತರಿಂದ ಅಥವಾ ಹೊಲಿಗೆಯಂತ್ರ ಕೊಳ್ಳಲು ಕಿರುಬಂಡವಾಳ ಸಂಸ್ಥೆಯಿಂದ ಸಾಲ ಪಡೆಯಬಹುದು. ಈ ಸಾಲಗಳನ್ನು ವೆಚ್ಚ ಮಾಡಿದ ನಂತರ ಉಳಿಕೆಯಲ್ಲಿ ಮರುಪಾವತಿ ಮಾಡಬೇಕಾದುದದರಿಂದ, ರುದರ್‌ಫೋರ್ಡ್‌ ಇದನ್ನು 'ಇಳಿಕೆಯ ಉಳಿಕೆ' ಎನ್ನುತ್ತಾರೆ. ಅವರ ಅಭಿಪ್ರಾಯದ ಪ್ರಕಾರ ಕಿರುಸಾಲವು ಅವರ ಸಮಸ್ಯೆಯ ಅರ್ಧವನ್ನು ಮಾತ್ರವೇ ಪರಿಹರಿಸುತ್ತಿದೆ, ಅದರಲ್ಲೂ ಅಪ್ರಮುಖವಾದುದನ್ನು ಮಾತ್ರವೇ ಪರಿಹರಿಸುತ್ತಿದೆ; ಬಡವರು ಉಳಿಕೆಗಾಗಿ ಹಾಗೂ ಆಸ್ತಿಯನ್ನು ಸಂಗ್ರಹಿಸುವುದಕ್ಕಾಗಿ ಸಾಲ ಮಾಡುತ್ತಾರೆ. ಕಿರುಸಾಲ ಸಂಸ್ಥೆಗಳು ಅವರ ಸಾಲಗಳನ್ನು ಉಳಿತಾಯ ಖಾತೆಗಳ ಮುಖಾಂತರ ಸಾಲ ಒದಗಿಸಿದರೆ, ಅದು ಬಡವರಿಗೆ ಅವರ ಅಸಂಖ್ಯಾತ ವೆಚ್ಚಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಇಳಿಕೆಯ ಉಳಿಕೆ

ಬಹಳಷ್ಟು ಅಗತ್ಯಗಳನ್ನು ಉಳಿಕೆ ಮತ್ತು ಸಾಲಗಳ ಸಂಯೋಜನೆ ಮೂಲಕ ನಿರ್ವಹಿಸಲಾಗುತ್ತದೆ. ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕ್‌ ಮತ್ತು ಇನ್ನಿತರ ಎರಡು ದೊಡ್ಡ ಕಿರುಬಂಡವಾಳ ಸಂಸ್ಥೆಗಳ ಮೇಲಿನ ಪ್ರಭಾವದ ಮಾನಕ ಮಾಪನೆಯ ಪ್ರಕಾರ ಅವು ಕೃಷಿಯೇತರ ಕಿರುಉದ್ಯಮಕ್ಕೆ ಬಂಡವಾಳ ಹೂಡಲು ಗ್ರಾಹಕರಿಗೆ ನೀಡುತ್ತಿದ್ದ ಪ್ರತಿ $೧ಕ್ಕೆ, ಸುಮಾರು $೨.೫೦ರಷ್ಟು ಇತರೆ ಮೂಲಗಳಿಂದ, ಬಹುಪಾಲು ಗ್ರಾಹಕರ ಉಳಿಕೆಯಿಂದ ಬರುತ್ತಿತ್ತು.[೧೬] ಇದು ಕೌಟುಂಬಿಕ ಉದ್ಯಮಗಳು ಬಹಳಷ್ಟು ಮಟ್ಟಿಗೆ ಉಳಿಕೆಯಿಂದ ಹೂಡುವ ಅದರಲ್ಲೂ ಪ್ರಾರಂಭಿಕ ಹಂತದಲ್ಲಿ ಬಂಡವಾಳ ಹಾಕುವ ಪಾಶ್ಚಿಮಾತ್ಯ ವ್ಯವಸ್ಥೆಗೆ ಸಮಾನವಾಗಿದೆ.

ಇತ್ತೀಚಿನ ಅಧ್ಯಯನಗಳು ಸಾಂಪ್ರದಾಯಿಕವಲ್ಲದ ರೀತಿಯ ಉಳಿಕೆಯ ವಿಧಾನಗಳು ವಿಪರೀತ ಅಸುರಕ್ಷಿತ ಎನ್ನುತ್ತವೆ. ಉದಾಹರಣೆಗೆ ಉಗಾಂಡದ ರೈಟ್‌ ಮತ್ತು ಮುಟೆಸಸಿರಾರವರು ನಡೆಸಿದ ಅಧ್ಯಯನಗಳ ಫಲಿತಾಂಶವೆಂದರೆ "ಸಾಂಪ್ರದಾಯಿಕ ರೀತಿಯ ಉಳಿಕೆಗೆ ಸಾಧ್ಯವಿರದೇ, ಬೇರೆ ದಾರಿಯಿಲ್ಲದೇ ಅಸಾಂಪ್ರದಾಯಿಕ ರೀತಿಯಲ್ಲಿ ಹಣ ಉಳಿಕೆಗೆ ಮಾಡುವವರು ಸ್ವಲ್ಪ ಮಟ್ಟಿನ ಹಣವನ್ನು ಅಂದರೆ ಸರಿ ಸುಮಾರು ತಾವು ಉಳಿಸಿದ ಕಾಲುಭಾಗದಷ್ಟು ಹಣವನ್ನು ಬಹುಮಟ್ಟಿಗೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ."[೧೭]

ರುದರ್‌ಫರ್ಡ್‌, ರೈಟ್‌ ಹಾಗೂ ಇನ್ನಿತರರು ನಡೆಸಿದ ಅಧ್ಯಯನಗಳು ವೃತ್ತಿಪರರಿಗೆ ಕಿರುಸಾಲ ನಿದರ್ಶನದ ಪ್ರಮುಖ ಮಗ್ಗುಲೊಂದನ್ನು ಮರುಪರಿಶೀಲಿಸುವ ಹಾಗೆ ಮಾಡಿದೆ: ಎಂದರೆ ಬಡವರು ಸಾಲ ಪಡೆದು ಕಿರು ಉದ್ಯಮಗಳನ್ನು ಸ್ಥಾಪಿಸಿ, ತಮ್ಮ ಆದಾಯವನ್ನು ಹೆಚ್ಚಿಸಿಕೊಂಡು ಬಡತನದಿಂದ ಹೊರಬರುವರು. ನವೀನ ನಿದರ್ಶನದಲ್ಲಿ ಬಡಜನರು ತಾವು ದುಡಿದಿದ್ದ ಬಹುಪಾಲು ಹಣವನ್ನು ತಾವೇ ಇಟ್ಟುಕೊಳ್ಳುವುದರಿಂದ ಇರುವ ಅಪಾಯಗಳನ್ನು ಕಡಿಮೆ ಮಾಡಿ, ಆಸ್ತಿಗಳನ್ನು ವೃದ್ಧಿಸುವುದರ ಬಗೆಗೆ ಹೆಚ್ಚಿನ ಗಮನ ಸೆಳೆಯುವುದಕ್ಕೆ ಹೆಚ್ಚು ಒತ್ತು ನೀಡುತ್ತದೆ. ಅವರಿಗೆ ಅಗತ್ಯವಾದಾಗ ಕಿರು ಉದ್ಯಮದ ಬಳಕೆಗೆಂದು ಸಾಲ ಪಡೆಯುವುದು ಉಪಯುಕ್ತವೆಂದು ಭಾವಿಸಬಹುದು. ಹಣ ಉಳಿಕೆಗೆ ಹಾಗೂ ಹಿಂಪಡೆಯಲು ಸುರಕ್ಷಿತ, ಹೊಂದಾಣಿಕೆಯಾಗಬಲ್ಲ ವ್ಯವಸ್ಥೆಯು ಕೌಟುಂಬಿಕ ಹಾಗೂ ಗೃಹ ವೆಚ್ಚಗಳನ್ನು ನಿರ್ವಹಿಸಲು ಅಗತ್ಯ.

ಕಿರುಬಂಡವಾಳ ಚಟುವಟಿಕೆಯ ಪ್ರಸಕ್ತ ಪರಿಮಾಣ[ಬದಲಾಯಿಸಿ]

ಇದುವರೆಗೂ ಕಿರುಬಂಡವಾಳದ ವಿತರಣೆಯನ್ನು ನಿರೂಪಿಸಬಲ್ಲ ವ್ಯವಸ್ಥಿತ ಪ್ರಯತ್ನವನ್ನು ಮಾಡಲಾಗಿಲ್ಲ. ಇತ್ತೀಚಿನ ೨೦೦೪ರಲ್ಲಿ ಅಭಿವೃದ್ಧಿ ಹೊಂದುತ್ತಿರುವ ವಿಶ್ವದಲ್ಲಿನ ‘ಪರ್ಯಾಯ ಹಣಕಾಸು ಸಂಸ್ಥೆಗಳ’ ಬಗ್ಗೆ ನಡೆಸಿದ ವಿಶ್ಲೇಷಣೆಯಲ್ಲಿ ಉಪಯುಕ್ತ ಮಾಪನವೊಂದನ್ನು ರಚಿಸಲಾಯಿತು.[೧೮] ಅದರ ಲೇಖಕರು ವಾಣಿಜ್ಯ ಬ್ಯಾಂಕುಗಳ ಗ್ರಾಹಕರಿಗಿಂತ ಬಡವರಿಗೆ ಸೇವೆ ನೀಡುವ ೩,೦೦೦ ಸಂಸ್ಥೆಗಳಲ್ಲಿ ಸರಿಸುಮಾರು ೬೬೫ ದಶಲಕ್ಷ ಗ್ರಾಹಕ ಖಾತೆಗಳನ್ನು ಗಣಿಸಿದ್ದರು. ಈ ಖಾತೆಗಳಲ್ಲಿ,೧೨೦ ದಶಲಕ್ಷ ಖಾತೆಗಳು ಕಿರುಬಂಡವಾಳ ಸಂಸ್ಥೆಗಳಲ್ಲಿದ್ದವು. ಬಹುವಿಧದ ಚಾರಿತ್ರಿಕ ಮೂಲವನ್ನು ಧ್ವನಿಸುವಂತೆ ಅವರು ಅಂಚೆ ಉಳಿತಾಯ ಖಾತೆ/ಬ್ಯಾಂಕ್‌ಗಳು (೩೧೮ ದಶಲಕ್ಷ ಖಾತೆಗಳು), ಸರ್ಕಾರೀ ಕೃಷಿ ಮತ್ತು ಅಭಿವೃದ್ಧಿ ಬ್ಯಾಂಕ್‌ಗಳು (೧೭೨ ದಶಲಕ್ಷ ಖಾತೆಗಳು), ಆರ್ಥಿಕ ಸಹಕಾರಿ ಸಂಸ್ಥೆಗಳು ಮತ್ತು ಸಾಲ ಒಕ್ಕೂಟಗಳು (೩೫ ದಶಲಕ್ಷ ಖಾತೆಗಳು) ಹಾಗೂ ವಿಶೇಷ ಗ್ರಾಮೀಣ ವಲಯದ ಬ್ಯಾಂಕುಗಳನ್ನು (೧೯ ದಶಲಕ್ಷ ಖಾತೆಗಳು) ಸಹಾ ಸೇರಿಸಿಕೊಂಡಿದ್ದರು.

ಪ್ರಾದೇಶಿಕವಾಗಿ ಈ ಖಾತೆಗಳ ಕೇಂದ್ರವು ಭಾರತದಲ್ಲಿತ್ತು (ರಾಷ್ಟ್ರದ ಒಟ್ಟು ಜನಸಂಖ್ಯೆಯ ೧೮%ರಷ್ಟನ್ನು ಪ್ರತಿನಿಧಿಸುವ ೧೮೮ ದಶಲಕ್ಷ ಖಾತೆಗಳಿದ್ದವು). ಕನಿಷ್ಟ ಕೇಂದ್ರೀಕರಣವು ಲ್ಯಾಟಿನ್‌ ಅಮೇರಿಕ ಮತ್ತು ಕೆರಿಬಿಯನ್‌ (ಒಟ್ಟು ಜನಸಂಖ್ಯೆಯ ೩%ರಷ್ಟನ್ನು ಪ್ರತಿನಿಧಿಸುವ ೧೪ ದಶಲಕ್ಷ ಖಾತೆಗಳಿದ್ದವು) ಹಾಗೂ ಆಫ್ರಿಕಾದಲ್ಲಿತ್ತು (ಒಟ್ಟು ಜನಸಂಖ್ಯೆಯ ೪%ರಷ್ಟನ್ನು ಪ್ರತಿನಿಧಿಸುವ ೨೭ ದಶಲಕ್ಷ ಖಾತೆಗಳಿದ್ದವು). ಅಭಿವೃದ್ಧಿ ಹೊಂದಿದ ದೇಶಗಳ ಬ್ಯಾಂಕ್ ಗ್ರಾಹಕರು ತಮ್ಮ ವ್ಯವಹಾರವನ್ನು ಉತ್ತಮ ಸ್ಥಿತಿಯಲ್ಲಿಡಲು ಅನೇಕ ಸಕ್ರಿಯ ಖಾತೆಗಳನ್ನು ಇಟ್ಟುಕೊಂಡಿರುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡರೆ, ಈ ಅಂಕಿಅಂಶಗಳು ಕಿರುಬಂಡವಾಳ ಚಳುವಳಿಯ ಗುರಿಯನ್ನು ತಲುಪಲು ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಿದೆ.

ಸೇವೆಯ ರೀತಿಯಿಂದ "ಪರ್ಯಾಯ ಹಣಕಾಸು ಸಂಸ್ಥೆಗಳಲ್ಲಿನ ಉಳಿತಾಯ ಖಾತೆಗಳು ಸಾಲ ಪಡೆಯುವಿಕೆಯ ನಾಲ್ಕು ಪಟ್ಟು ಹೆಚ್ಚು ಸಂಖ್ಯೆಯಲ್ಲಿವೆ. ಈ ಮಾದರಿಯು ವಿಶ್ವದಾದ್ಯಂತ ಇದ್ದು ಪ್ರಾದೇಶಿಕವಾಗಿ ಹೆಚ್ಚೇನೂ ಬದಲಾಗುವುದಿಲ್ಲ.”[೧೯]

ಆಯ್ದ ಕಿರುಬಂಡವಾಳ ಸಂಸ್ಥೆಗಳ ಬಗೆಗಿನ ಪ್ರಮುಖ ವಿವರವಾದ ಮಾಹಿತಿಯ ಸ್ರೋತವೆಂದರೆ ಕಿರುಬ್ಯಾಂಕಿಂಗ್‌ ಪ್ರಕಟಣೆ/ಬುಲೆಟಿನ್ ‌. ೨೦೦೬ರ ಕೊನೆಯ ಹೊತ್ತಿಗೆ ಇದು ೫೨ ದಶಲಕ್ಷ ಸಾಲಗಾರರು ($೨೩.೩ ಶತಕೋಟಿಗಳ ಬಾಕಿ ಸಾಲದೊಂದಿಗೆ) ಮತ್ತು ೫೬ ದಶಲಕ್ಷ ಉಳಿಕೆದಾರರಿಗೆ ($೧೫.೪ ಶತಕೋಟಿ ಠೇವಣಿಯೊಂದಿಗೆ) ಸೇವೆ ಸಲ್ಲಿಸುತ್ತಿರುವ ೭೦೪ MFIಗಳ ಬೆಳವಣಿಗೆಯನ್ನು ಪರಿಶೀಲಿಸುತ್ತಿತ್ತು. ಈ ಗ್ರಾಹಕರಲ್ಲಿ ೭೦%ರಷ್ಟು ಜನ ಏಷ್ಯಾದಲ್ಲಿದ್ದರೆ, ಲ್ಯಾಟಿನ್‌ ಅಮೇರಿಕಾದಲ್ಲಿ ೨೦%ರಷ್ಟು ಜನ ಹಾಗೂ ವಿಶ್ವದ ಉಳಿದ ಭಾಗಗಳಲ್ಲಿ ಉಳಿದವರಿದ್ದರು.[೨೦] ‘ಅಸಾಂಪ್ರದಾಯಿಕ’ ಕಿರುಬಂಡವಾಳ ಸಂಸ್ಥೆಗಳಾದ ROSCAಗಳು ಮತ್ತು ಮದುವೆಗಳು, ಶವಸಂಸ್ಕಾರ ಮತ್ತು ಅನಾರೋಗ್ಯದಂತಹಾ ವೆಚ್ಚಗಳನ್ನು ಭರಿಸಲು ಸಹಾಯ ಮಾಡುವಂತಹಾ ಅಸಾಂಪ್ರದಾಯಿಕ ಸಂಘಸಂಸ್ಥೆಗಳ ಪ್ರಮಾಣ ಅಥವಾ ವಿತರಣೆಯನ್ನು ಪರಿಶೀಲಿಸುವ ಯಾವುದೇ ಅಧ್ಯಯನಗಳು ಇದುವರೆಗೂ ನಡೆದಿಲ್ಲ. ಆದಾಗ್ಯೂ ಅನೇಕ ವಿಶ್ಲೇಷಣೆಗಳು ಪ್ರಕಟವಾಗಿದ್ದು, ಸಾಮಾನ್ಯವಾಗಿ ಅಲ್ಪ ಪ್ರಮಾಣದ ಬಾಹ್ಯ ಸಹಾಯದಿಂದ ರೂಪಿಸಿ ನಿರ್ವಹಿಸುವಂತಹಾ, ಈ ಸಂಸ್ಥೆಗಳು ಅಭಿವೃದ್ಧಿ ಹೊಂದುತ್ತಿರುವ ವಿಶ್ವದ ಬಹುಪಾಲು ರಾಷ್ಟ್ರಗಳಲ್ಲಿವೆ.[೨೧]

"ಅಂತರ್ಗತ ಹಣಕಾಸು ವ್ಯವಸ್ಥೆಗಳು"[ಬದಲಾಯಿಸಿ]

೧೯೭೦ರ ದಶಕದಲ್ಲಿ ಆರಂಭವಾದ ಕಿರುಸಾಲ ಯುಗವು, ತನ್ನ ತೀವ್ರತೆಯನ್ನು ಕಳೆದುಕೊಂಡು, ‘ಹಣಕಾಸು ವ್ಯವಸ್ಥೆಗಳ’ ಅನುಸಂಧಾನಕ್ಕೆ ತನ್ನ ಸ್ಥಳ ಬಿಟ್ಟುಕೊಡಬೇಕಾಗಿದೆ. ಕಿರುಸಾಲ ವ್ಯವಸ್ಥೆಯು ವಿಶೇಷವಾಗಿ ನಗರಪ್ರದೇಶದ ಹಾಗೂ ನಗರಪ್ರದೇಶಕ್ಕೆ ಹತ್ತಿರವಿರುವ ಪ್ರದೇಶಗಳಲ್ಲಿ ಹಾಗೂ ವಾಣಿಜ್ಯೋದ್ಯಮದ ಕುಟುಂಬಗಳಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಿದರೂ, ಕಡಿಮೆ ಜನಸಾಂದ್ರತೆಯ ಗ್ರಾಮೀಣ ಪ್ರದೇಶಗಳಲ್ಲಿ ಹಣಕಾಸು ಸೇವೆಗಳನ್ನು ನೀಡುವುದರಲ್ಲಿನ ಬೆಳವಣಿಗೆ ತುಂಬ ನಿಧಾನವಾಗಿತ್ತು.

ನವೀನ ಹಣಕಾಸು ವ್ಯವಸ್ಥೆಯು ಕಿರುಬಂಡವಾಳ ಇತಿಹಾಸದ ಶತಮಾನಗಳ ಶ್ರೀಮಂತಿಕೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ವಿಶ್ವದ ಬಡಜನರಿಗೆ ಸೇವೆ ನೀಡುವ ಸಂಸ್ಥೆಗಳ ವೈವಿಧ್ಯತೆಗಳನ್ನು ಸಕ್ರಿಯವಾಗಿ ಗುರುತಿಸಿದೆ. ವಿಶ್ವದ ಅತ್ಯಂತ ಬಡಜನರ ವಿವಿಧ ಹಣಕಾಸು ಸೇವಾ ಅಗತ್ಯಗಳ ಮತ್ತು ಅವರು ಬದುಕುವ ಹಾಗೂ ಕಾರ್ಯನಿರ್ವಹಿಸುವ ವಿವಿಧ ಪರಿಸರಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ಬ್ರಿಗಿಟ್‌ ಹೆಲ್ಮ್ಸ್‌ ತನ್ನ 'ಆಕ್ಸೆಸ್‌ ಫಾರ್‌ ಆಲ್ : ಅಂತರ್ಗತ ಹಣಕಾಸು ವ್ಯವಸ್ಥೆಗಳ ನಿರ್ಮಾಣ', ಪುಸ್ತಕದಲ್ಲಿ ಕಿರುಬಂಡವಾಳ ಸೇವಾಪೂರೈಕೆದಾರರಲ್ಲಿ ನಾಲ್ಕು ಸಾಮಾನ್ಯ ವಿಧಗಳನ್ನು ಗುರುತಿಸಿದ್ದಾರೆ ಹಾಗೂ ಈ ಎಲ್ಲಾ ಪೂರೈಕೆದಾರರೊಡನೆ ಪೂರ್ವ ನಿಯಾಮಕ ಕಾರ್ಯನೀತಿಯನ್ನು ಅನುಸರಿಸಿ ಕಿರುಬಂಡವಾಳ ಚಳುವಳಿಯ ಗುರಿಗಳನ್ನು ಸಾಧಿಸಲು ಅವರಿಗೆ ಸಹಾಯ ಮಾಡಬೇಕೆಂದು ವಾದಿಸುತ್ತಾರೆ.[೨೨]

ಅಸಾಂಪ್ರದಾಯಿಕ ಹಣಕಾಸು ಸೇವಾ ಪೂರೈಕೆದಾರರು
ಅಸಾಂಪ್ರದಾಯಿಕ ಪೂರೈಕೆದಾರರೆಂದರೆ ಸಾಲದಾತರು, ಗಿರವಿ ಅಂಗಡಿಯವರು, ಉಳಿತಾಯ ಸಂಗ್ರಹಕಾರರು, ಮನಿಗಾರ್ಡ್‌ಗಳು, ROSCAಗಳು, ASCAಗಳು ಮತ್ತು ಆದಾನ ಸರಬರಾಜು ಅಂಗಡಿಯವರು. ಅವರು ಪರಸ್ಪರ ಪರಿಚಿತರಾದುದರಿಂದ ಹಾಗೂ ಒಂದೇ ಸಮುದಾಯದಲ್ಲಿ ವಾಸಿಸುವುದರಿಂದ, ಪರಸ್ಪರ ಆರ್ಥಿಕ ಪರಿಸ್ಥಿತಿಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಬಹಳಮಟ್ಟಿಗೆ ಹೊಂದಾಣಿಕೆಯಾಗಬಲ್ಲ, ಅನುಕೂಲಕರ ಹಾಗೂ ವೇಗದ ಸೇವೆಗಳನ್ನು ನೀಡಲು ಸಾಧ್ಯ. ಈ ಸೇವೆಗಳು ತುಟ್ಟಿಯಾಗಿರಲೂ ಸಾಧ್ಯ ಮತ್ತು ಹಣಕಾಸು ಸೌಲಭ್ಯಗಳ ಆಯ್ಕೆಯೂ ಮಿತವಾಗಿರುತ್ತದೆ ಹಾಗೂ ಅಲ್ಪಾವಧಿಯದಾಗಿರುತ್ತದೆ. ಅಸಾಂಪ್ರದಾಯಿಕ ಉಳಿಕೆಯ ಸೇವೆಗಳೂ ಸಹಾ ಅಷ್ಟು ಸುರಕ್ಷಿತವಲ್ಲ; ಅನೇಕರು ತಮ್ಮ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ.
ಸದಸ್ಯ-ಮಾಲೀಕತ್ವದ ಸಂಸ್ಥೆಗಳು
ಸದಸ್ಯ-ಮಾಲೀಕತ್ವದ ಸಂಸ್ಥೆಗಳೆಂದರೆ ಸ್ವಸಹಾಯ ಗುಂಪುಗಳು, ಸಾಲ ಒಕ್ಕೂಟಗಳು ಮತ್ತು ‘ಹಣಕಾಸು ಸೇವಾ ಸಂಘಗಳು’ ಮತ್ತು CVECAಗಳಂತಹಾ ಅನೇಕ ವಿಧದ ಮಿಶ್ರ ಸಂಸ್ಥೆಗಳು. ತಮ್ಮ ಅಸಾಂಪ್ರದಾಯಿಕ ಬಂಧುಗಳಂತೆ, ಇವೂ ಸಹಾ ಸಣ್ಣವು ಹಾಗೂ ಸ್ಥಳೀಯ, ಎಂದರೆ ಅವರಿಗೆ ಪರಸ್ಪರರ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಚೆನ್ನಾಗಿ ಅರಿವಿದ್ದು ಉತ್ತಮ ಅನುಕೂಲ ಹಾಗೂ ಹೊಂದಾಣಿಕೆಗಳನ್ನು ಮಾಡಿಕೊಳ್ಳಬಹುದು. ಅವು ಬಡಜನರಿಂದಲೇ ನಿರ್ವಹಣೆಯಾಗುವುದರಿಂದ ಅವುಗಳ ಕಾರ್ಯವೆಚ್ಚವೂ ಸಹಾ ಕಡಿಮೆ. ಆದಾಗ್ಯೂ ಈ ಪೂರೈಕೆದಾರರ ಆರ್ಥಿಕ ಚಾಕಚಕ್ಯತೆ ಕಡಿಮೆಯಾದುದರಿಂದ ಆರ್ಥಿಕತೆ ಕುಸಿದಾಗ ಅಥವಾ ಅವರ ಕಾರ್ಯಾಚರಣೆಗಳು ವಿಪರೀತ ಸಂಕೀರ್ಣಗೊಂಡಾಗ ತೊಂದರೆಗೊಳಗಾಗಬಹುದು. ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿಲ್ಲದೇ ಹೋದರೆ ಹಾಗೂ ಮೇಲ್ವಿಚಾರಣೆ ಇಲ್ಲದೇ ಹೋದರೆ, ಇವನ್ನು ಒಬ್ಬಿಬ್ಬರು ಪ್ರಭಾವೀ ನಾಯಕರುಗಳು ಕೊಂಡುಕೊಳ್ಳುವ ಸಾಧ್ಯತೆ ಇರುತ್ತದೆ. ಆಗ ಸದಸ್ಯರು ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.
NGOಗಳು
ಕಿರುಸಾಲ ಶೃಂಗಸಭೆಯು ೩,೩೧೬ MFIಗಳು ಮತ್ತು NGOಗಳಲ್ಲಿ ೨೦೦೬ನೇ ಸಾಲಿನ ಅಂತ್ಯದೊಳಗೆ ೧೩೩ ದಶಲಕ್ಷ ಗ್ರಾಹಕರಿಗೆ ಸಾಲ ನೀಡಿದ್ದನ್ನು ಗಣನೆಗೆ ತೆಗೆದುಕೊಂಡಿತು.[೨೩] ಬಾಂಗ್ಲಾದೇಶದಲ್ಲಿ ಗ್ರಾಮೀಣ ಬ್ಯಾಂಕ್‌ ಮತ್ತು BRACನ ನಾಯಕತ್ವ, ಬೊಲಿವಿಯಾದಲ್ಲಿ ಪ್ರೋಡೆಮ್‌, ಮತ್ತು FINCA ಇಂಟರ್‌ನ್ಯಾಷನಲ್, ವಾಷಿಂಗ್ಟನ್‌, DCಯಲ್ಲಿ ಕೇಂದ್ರಕಛೇರಿ ಹೊಂದಿರುವ, ಈ NGOಗಳು ಕಳೆದ ಮೂರು ದಶಕಗಳಲ್ಲಿ ಅಭಿವೃದ್ಧಿಯಾಗುತ್ತಿರುವ ವಿಶ್ವದಲ್ಲಿ ಹರಡುತ್ತಿವೆ, ಇತರೆ ಗ್ಯಾಮೆಲನ್‌ ಕೌನ್ಸಿಲ್‌ನಂತಹವು ವಿಶಾಲ ಪ್ರದೇಶಗಳನ್ನು ಆವರಿಸಿವೆ. ಅವು ಒಕ್ಕೂಟ ಸಾಲ,ಗ್ರಾಮೀಣ ಬ್ಯಾಂಕಿಂಗ್‌ ಮತ್ತು ಅದುವರೆಗಿದ್ದ ಅಡ್ಡಿಗಳನ್ನು ದಾಟಿ ಮೊಬೈಲ್‌ ಬ್ಯಾಂಕಿಂಗ್‌ನಂತಹಾ ಸೌಲಭ್ಯಗಳಂತಹಾ ಪ್ರವರ್ತಕ ಬ್ಯಾಂಕಿಂಗ್‌ ತಂತ್ರಗಳನ್ನು ಬಳಸಿ ತಮ್ಮ ನಾವೀನ್ಯತೆಯನ್ನು, ಸಾಬೀತುಪಡಿಸಿವೆ. ಆದಾಗ್ಯೂ ತಮ್ಮ ಬಂಡವಾಳವನ್ನು ಅಥವಾ ತಮ್ಮ ಗ್ರಾಹಕರನ್ನು ಪ್ರತಿನಿಧಿಸಲೇಬೇಕೆಂಬ ಅಗತ್ಯವಿಲ್ಲದ ಮಂಡಳಿಗಳ ನಿರ್ವಹಣೆಯಲ್ಲಿ ಆಡಳಿತ ವಿಧಾನಗಳು ದುರ್ಬಲವಾಗಿರಬಹುದಾಗಿದ್ದು ಅವು ಬಾಹ್ಯ ದಾನಿಗಳ ಮೇಲೆ ವಿಪರೀತ ಅವಲಂಬಿತವಾಗಬಹುದು.
ಔಪಚಾರಿಕ ಹಣಕಾಸು ಸಂಸ್ಥೆಗಳು
ಇವು ವಾಣಿಜ್ಯ ಬ್ಯಾಂಕ್‌ಗಳ ಜೊತೆಗೆ, ಸರ್ಕಾರಿ ಬ್ಯಾಂಕ್‌ಗಳು, ಕೃಷಿ ಅಭಿವೃದ್ಧಿ ಬ್ಯಾಂಕ್‌ಗಳು, ಉಳಿಕೆ ಬ್ಯಾಂಕ್‌ಗಳು, ಗ್ರಾಮೀಣ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ಒಳಗೊಂಡಿವೆ. ಅವನ್ನು ನಿಯಂತ್ರಣ ಹಾಗೂ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತಿದ್ದು, ಅನೇಕ ರೀತಿಯ ಹಣಕಾಸು ಸೇವೆಗಳನ್ನು ನೀಡಲಾಗುತ್ತಿದ್ದು ರಾಷ್ಟ್ರೀಯವಾಗಿ ಹಾಗೂ ಅಂತರರಾಷ್ಟ್ರೀಯವಾಗಿ ಶಾಖೆಗಳ ಜಾಲವನ್ನು ನಿಯಂತ್ರಿಸಲಾಗುತ್ತದೆ. ಆದಾಗ್ಯೂ, ಅವು ಸಾಮಾಜಿಕ ಉದ್ದೇಶಗಳಲ್ಲಿ ತಮ್ಮ ಅನಾಸಕ್ತಿಯನ್ನು ತೋರ್ಪಡಿಸಿದ್ದು, ತಮ್ಮ ಸೇವಾವೆಚ್ಚದ ಅಧಿಕ್ಯತೆಯಿಂದಾಗಿ ಬಡವರಿಗೆ ಹಾಗೂ ದೂರದ ಜನತೆಗೆ ಸೇವೆಗಳನ್ನು ನೀಡುತ್ತಿಲ್ಲ. ಸಾಲದ ಎಣಿಕೆಯಲ್ಲಿ ಪರ್ಯಾಯ ದತ್ತದ ಬಳಕೆ ಹೆಚ್ಚಾದುದರಿಂದ ಉದಾಹರಣೆಗೆ ವಾಣಿಜ್ಯ ಸಾಲವು ಕಿರುಬಂಡವಾಳ ವ್ಯವಸ್ಥೆಯಲ್ಲಿ ವಾಣಿಜ್ಯ ಬ್ಯಾಂಕುಗಳ ಆಸಕ್ತಿಯನ್ನು ಹೆಚ್ಚಿಸಿದೆ[೨೪].

ಸೂಕ್ತ ನಿಯಂತ್ರಣ ಹಾಗೂ ಮೇಲ್ವಿಚಾರಣೆಯಿಂದ ಮೇಲ್ಕಂಡ ಪ್ರತಿಯೊಂದು ವಿಧದ ಸಂಸ್ಥೆಗಳನ್ನು ಬಳಸಿ ಕಿರುಬಂಡವಾಳ ವ್ಯವಸ್ಥೆಯ ಸಮಸ್ಯೆಯನ್ನು ಪರಿಹರಿಸಬಹುದು. ಉದಾಹರಣೆಗೆ ಸ್ವಸಹಾಯ ಗುಂಪುಗಳನ್ನು ವಾಣಿಜ್ಯ ಬ್ಯಾಂಕ್‌ಗಳೊಂದಿಗೆ ಜೋಡಿಸಲು, ದೊಡ್ಡ ಪ್ರಮಾಣದ ಆರ್ಥಿಕ ಸಾಮರ್ಥ್ಯ ಹಾಗೂ ವ್ಯಾಪ್ತಿ ಸಾಧಿಸಲು ಸದಸ್ಯ-ಮಾಲೀಕತ್ವದ ಸಂಸ್ಥೆಗಳ ಜಾಲ ರಚಿಸಲು ಮತ್ತು ವಾಣಿಜ್ಯ ಬ್ಯಾಂಕ್‌ಗಳ ವ್ಯಾಪ್ತಿ ಕುಗ್ಗಿಸುವ ಪ್ರಯತ್ನಕ್ಕೆ ಬೆಂಬಲವಾಗಿ ಲಭ್ಯವಿರುವ ಶಾಖೆಗಳ ಜಾಲದಲ್ಲಿ ಮೊಬೈಲ್‌ ಬ್ಯಾಂಕಿಂಗ್‌ ಮತ್ತು ಇ-ಪೇಮೆಂಟ್‌/ಆನ್‌ಲೈನ್‌ ಪಾವತಿ/ಅಂತರ್ಜಾಲ ಪಾವತಿ ತಂತ್ರಜ್ಞಾನಗಳನ್ನು ಅಳವಡಿಸಲು ಪ್ರಯತ್ನಗಳು ನಡೆದಿವೆ.

ಕಿರುಸಾಲ ಮತ್ತು ವೆಬ್‌[ಬದಲಾಯಿಸಿ]

ಗುಣಮಟ್ಟದ ಉಳಿಕೆ ಸೇವೆಗಳನ್ನು ಬಡವರಿಗೆ ನೀಡುವುದರಲ್ಲಿ ಆದ ವಿಳಂಬಿತ ಬೆಳವಣಿಗೆಯಿಂದಾಗಿ, ಅಭಿವೃದ್ಧಿ ಹೊಂದಿದ ವಿಶ್ವದಲ್ಲಿ ಕಿರುಸಾಲ ವ್ಯವಸ್ಥೆಯನ್ನು ವಿಸ್ತರಿಸಲು ವೈಯಕ್ತಿಕ ಸಾಲದಾತರ ಮೂಲಕ ಸಮಾನರ ವೇದಿಕೆಯನ್ನು ಅಭಿವೃದ್ಧಿಪಡಿಸಲಾಯಿತು. Kivaದ ಸಮಾನಸ್ಕಂಧರ ವೇದಿಕೆಯ ಮೂಲಕ ಪ್ರವಹಿಸಿದ ಮೊತ್ತವು ಆಗಸ್ಟ್‌ ೨೦೦೯ರ ಹಾಗೆ ~೮೭ M USD ಆಗಿತ್ತು (Kiva ಸರಿಸುಮಾರು $೫M ಮೊತ್ತವನ್ನು ಪ್ರತಿ ತಿಂಗಳು ಸಾಲಗಳಲ್ಲಿ ನೀಡುತ್ತದೆ). ಹೋಲಿಕೆ ಮಾಡುವುದಾದರೆ ಕಿರುಸಾಲದ ಅಗತ್ಯವು ೨೦೦೬ರ ಕೊನೆಯ ಹೊತ್ತಿಗೆ ೨೫೦ bn USD ಇರಬಹುದು ಎಂದು ಅಂದಾಜಿಸಲಾಗಿದೆ.[೨೫]

ಬಹಳಷ್ಟು ವ್ಯವಹಾರ ವೆಚ್ಚ ಹಾಗೂ ವಿನಿಮಯ ದರದ ನಷ್ಟಗಳನ್ನು ಕಡಿಮೆ ಮಾಡಲು ತಜ್ಞರ ಪ್ರಕಾರ ಈ ಬಂಡವಾಳವನ್ನು ಕಿರುಸಾಲವನ್ನು ನೀಡುತ್ತಿರುವ ರಾಷ್ಟ್ರಗಳಲ್ಲಿ ಸ್ಥಳೀಯವಾಗಿ ಪಡೆದುಕೊಳ್ಳಬೇಕು.

ಸಮಾನಸ್ಕಂಧರ ಕ್ಷೇತ್ರಗಳಲ್ಲಿ/ಸೈಟ್‌ಗಳಲ್ಲಿ/ಕಾರ್ಯ ಕ್ಷೇತ್ರಗಳಲ್ಲಿನ ಪ್ರಕಟಣೆಗಳ ಬಗ್ಗೆ ತೊಂದರೆಗಳಿದ್ದವು. ಕೆಲವರು ಸಾಲಗಾರರ ಬಡ್ಡಿದರಗಳನ್ನು ಬ್ಯಾಂಕುಗಳ ಪರಿಚಿತ ವಾರ್ಷಿಕ ಶೇಕಡಾವಾರು ದರದ ಬದಲಿಗೆ ಸಗಟು ದರದಲ್ಲಿ ವರದಿ ಮಾಡುತ್ತಿದ್ದರು.[೨೬] . ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿನ ನಿಯಂತ್ರಿತ ಹಣಕಾಸು ಸಂಸ್ಥೆಗಳಲ್ಲಿ ನಿಷೇಧಿಸಲಾದ ಸಗಟುದರಗಳ ಬಳಕೆಯು ವ್ಯಕ್ತಿಗತ ಸಾಲಗಾರರಿಗೆ ತಮ್ಮ ಸಾಲದಾತ ತಮಗಿಂತ ಕಡಿಮೆ ಬಡ್ಡಿಯನ್ನು ಪಾವತಿಸುತ್ತಿದ್ದಾನೆ ಎಂಬುದು ಗೊಂದಲ ಉಂಟುಮಾಡಬಹುದು.[ಸೂಕ್ತ ಉಲ್ಲೇಖನ ಬೇಕು]

ಬಡತನವನ್ನು ಕಡಿಮೆ ಮಾಡಲು ಆಧಾರ ಸೂಚನೆಗಳು[ಬದಲಾಯಿಸಿ]

ಕಿರುಬಂಡವಾಳ ವ್ಯವಸ್ಥೆಯ ಕೆಲ ಪ್ರತಿಪಾದಕರು ನಂಬಲಾರ್ಹ ಪುರಾವೆಗಳಿಲ್ಲದೇ ಕಿರುಬಂಡವಾಳವು ಏಕಾಂಗಿಯಾಗಿ ಬಡತನವನ್ನು ನಿವಾರಿಸಬಲ್ಲದು ಎಂದು ಖಚಿತವಾಗಿ ಹೇಳುತ್ತಾರೆ. ಈ ಖಚಿತತೆಯು ವ್ಯಾಪಕವಾದ ಟೀಕೆಗೊಳಗಾಗಿದೆ.[೨೭] ಇದರೊಂದಿಗೆ ಆರ್ಥಿಕ ಬೆಳವಣಿಗೆಗೆ ಒಂದು ಸಾಧನವಾಗಿ ಕಿರುಬಂಡವಾಳದ ಪ್ರತ್ಯಕ್ಷ ಪ್ರಭಾವದ ಮೇಲೆ ನಡೆಸಿದ ಸಂಶೋಧನೆಗಳು ಅತ್ಯಲ್ಪ, ಇದಕ್ಕೆ ಪ್ರಮುಖ ಕಾರಣ ಈ ಪ್ರಭಾವವನ್ನು ಗಮನಿಸುವುದು ಹಾಗೂ ಅಳೆಯುವುದರಲ್ಲಿನ ಎಡರು ತೊಡರುಗಳು.[೨೮] ೨೦೦೮ರ ಇನ್ನೋವೇಷನ್ಸ್‌ ಫಾರ್‌ ಪಾವರ್ಟಿ ಆಕ್ಷನ್‌/ಫೈನಾನ್ಷಿಯಲ್‌ ಆಕ್ಸೆಸ್‌ ಇನಿಷಿಯೇಟಿವ್‌ ಮೈಕ್ರೋಫೈನಾನ್ಸ್ ರಿಸರ್ಚ್‌ ಸಮ್ಮೇಳನದಲ್ಲಿ ನ್ಯೂಯಾರ್ಕ್‌ ವಿಶ್ವವಿದ್ಯಾಲಯದ ಆರ್ಥಿಕ ತಜ್ಞ ಜೋನಾಥನ್‌ ಮೊರ್‌ಡುಕ್‌‌ ಹೇಳಿದ ಪ್ರಕಾರ ಕಿರುಬಂಡವಾಳದ ಪ್ರಭಾವದ ಮೇಲೆ ಕೇವಲ ಒಂದೇ ಒಂದು ಅಥವಾ ಎರಡು ಕ್ರಮಬದ್ಧ ಅಧ್ಯಯನಗಳು ನಡೆದಿವೆ.[೨೯]

ಸಮಾಜಶಾಸ್ತ್ರಜ್ಞ ಜಾನ್‌ ವೆಸ್ಟೋವರ್‌ ಬಡತನವನ್ನು ಕಿತ್ತೊಗೆಯುವಲ್ಲಿ ಕಿರುಬಂಡವಾಳದ ಪ್ರಭಾವದ ಪುರಾವೆಗಳು ಚರಿತ್ರಾಂಶ ವರದಿಗಳು ಅಥವಾ ವಿಶ್ಲೇಷಣೆಗಳ ಮೇಲೆ ಆಧಾರಿತವಾಗಿವೆ. ಆತ ಮೊದಲಿಗೆ ಈ ವಿಷಯದ ಮೇಲೆ ೧೦೦ ಲೇಖನಗಳನ್ನು ವಿಶ್ಲೇಷಿಸಿದರೂ, ಕೇವಲ ಪರಿಮಾಣಾತ್ಮಕ ಮಾದರಿ ದತ್ತಗಳನ್ನು ಹೊಂದಿದ್ದ ಕೇವಲ ೬ನ್ನು ಮಾತ್ರ ಸೇರಿಸಿಕೊಂಡರು. ಇವುಗಳಲ್ಲಿ ಒಂದು ಅಧ್ಯಯನ ಕಿರುಬಂಡವಾಳ ಬಡತನವನ್ನು ಕಡಿಮೆ ಮಾಡುತ್ತದೆ ಎಂಬ ನಿರ್ಣಯಕ್ಕೆ ಬಂದಿತ್ತು. ಇನ್ನೆರಡು ಕಿರುಬಂಡವಾಳವು ಬಡತನ ನಿವಾರಣೆಗೆ ಕಾರಣ ಎಂಬ ನಿರ್ಣಯಕ್ಕೆ ಬರಲಿಲ್ಲವಾದರೂ, ಆ ಕಾರ್ಯಕ್ರಮಕ್ಕೆ ಗುಣಾತ್ಮಕ ಪರಿಣಾಮಗಳನ್ನು ಕಂಡುಕೊಂಡವು. ಸಮೀಕ್ಷೆಗಳಲ್ಲಿ ಭಾಗವಹಿಸಿದರಲ್ಲಿ ಹೆಚ್ಚು ಜನ ಹಣಕಾಸು ವ್ಯವಸ್ಥೆಗಳ ಮೇಲೆ ಉತ್ತಮ ಅಭಿಪ್ರಾಯ ಹೊಂದಿದ್ದರೆ, ಕೆಲವರು ಕನಿಷ್ಟ ಅಭಿಪ್ರಾಯ ಹೊಂದಿದ್ದರಿಂದ ಇನ್ನಿತರ ಅಧ್ಯಯನಗಳು ಇದೇ ರೀತಿಯ ನಿರ್ಣಯಕ್ಕೆ ಬಂದವು.[೩೦]

ಮೇ ೨೦೦೯ರಲ್ಲಿ ಇನ್ನೋವೇಷನ್ಸ್‌ ಫಾರ್‌ ಪಾವರ್ಟಿ ಆಕ್ಷನ್‌ನ ನ್ಯೂ ಹೇವನ್‌ ಕಛೇರಿಯ ಪ್ರಕಟಿಸಿದ ಒಂದು ನಿಬಂಧದಲ್ಲಿ ಅನಿಶ್ಚಿತ ಆಯ್ಕೆಯ ಮೂಲಕ ಆರ್ಥಿಕ ತರಬೇತಿ ಪಡೆದ ಸಂಸ್ಥೆಗಳು ಹೆಚ್ಚಿನ ಲಾಭವನ್ನು ಪಡೆದವು, ಅದರ ಇನ್ನಿತರ ಪ್ರಭಾವಗಳಾದ "ತಮ್ಮ ವ್ಯವಹಾರದಲ್ಲಿ ತೊಂದರೆ ಇದೆ " ಎಂಬ ದೂರಿನ ಪ್ರಮಾಣದಲ್ಲಿ ಆಗಬೇಕಾಗಿದ್ದ ವ್ಯತ್ಯಾಸವು ಯಾವ ಪ್ರಭಾವಕ್ಕೂ ಒಳಗಾಗಲಿಲ್ಲ.[೩೧]

ಕಿರುಬಂಡವಾಳ ಮತ್ತು ಸಾಮಾಜಿಕ ಹಸ್ತಕ್ಷೇಪ/ಮಧ್ಯಸ್ಥಿಕೆಗಳು[ಬದಲಾಯಿಸಿ]

ಕಿರುಬಂಡವಾಳ ವ್ಯವಸ್ಥೆಯೊಂದಿಗೆ ಸೇರಿ HIV/AIDSನ ಬಗೆಗಿನ ಜಾಗೃತಿಯನ್ನು ಹೆಚ್ಚಿಸುವ ಚಟುವಟಿಕೆಗಳ ಮೂಲಕ ಪ್ರಸಕ್ತ ಅನೇಕ ಸಾಮಾಜಿಕ ಮಧ್ಯಸ್ಥಿಕೆಗಳು ನಡೆಯುತ್ತಿವೆ. “ಇಂಟರ್‌ವೆನ್ಷನ್‌ ವಿತ್‌ ಮೈಕ್ರೋಫೈನಾನ್ಸ್‌ ಫಾರ್‌ AIDS ಅಂಡ್‌ ಜೆಂಡರ್‌ ಈಕ್ವಾಲಿಟಿ” (IMAGE)ಗಳಂತಹಾ ಸಾಮಾಜಿಕ ಮಧ್ಯಸ್ಥಿಕೆಯ ಚಟುವಟಿಕೆಗಳು ಕಿರುಬಂಡವಾಳ ವ್ಯವಸ್ಥೆಯನ್ನು “ದ ಸಿಸ್ಟರ್ಸ್‌-ಫಾರ್‌-ಲೈಫ್‌” ಕಾರ್ಯಕ್ರಮದೊಂದಿಗೆ ಜೊತೆಗೂಡಿಸಿ ವಿವಿಧ ಲಿಂಗಗಳ ಪಾತ್ರಗಳು, ಲಿಂಗಾಧಾರಿತ ಹಿಂಸೆ ಮತ್ತು HIV/AIDS ಸೋಂಕಿನ ಬಗ್ಗೆ ಹಾಗೂ ಮಹಿಳೆಯರ ಸಂವಹನಾ ಸಾಮರ್ಥ್ಯ [೩೨] ಹಾಗೂ ನಾಯಕತ್ವಗಳ ಬಗೆಗೆ ತಿಳುವಳಿಕೆ ಕೊಡುವ ಸಹಯೋಗಿ ಕಾರ್ಯಕ್ರಮವನ್ನು ನಡೆಸುವಂತಹಾ ಚಟುವಟಿಕೆಗಳು ನಡೆದಿವೆ. "ದ ಸಿಸ್ಟರ್ಸ್‌-ಫಾರ್‌-ಲೈಫ್‌" ಕಾರ್ಯಕ್ರಮವು ಎರಡು ಮಜಲುಗಳನ್ನು ಹೊಂದಿದ್ದು ಮೊದಲನೇ ಮಜಲಿನಲ್ಲಿ ಸಹಯೋಜಕರೊಂದಿಗೆ ಒಂದು-ಗಂಟೆ ಕಾಲದ ಹತ್ತು ತರಬೇತಿ ಕಾರ್ಯಕ್ರಮಗಳನ್ನು ಹೊಂದಿದ್ದರೆ, ಎರಡನೇ ಮಜಲಿನಲ್ಲಿ ತಂಡದಲ್ಲಿ ಓರ್ವ ನಾಯಕರನ್ನು ಗುರುತಿಸಿ ಅವರಿಗೆ ಮತ್ತಷ್ಟು ತರಬೇತಿ ನೀಡಿ, ಅವರವರ ಕೇಂದ್ರಗಳ ಕಾರ್ಯ ಯೀಜನೆಯನ್ನು ಸಿದ್ಧಪಡಿಸಿ ನಡೆಸುವುದಕ್ಕೆ ಅನುವು ಮಾಡುವುದು.

ಕಿರುಬಂಡವಾಳವನ್ನು ವ್ಯಾವಹಾರಿಕ ಶಿಕ್ಷಣದ ಜೊತೆಗೆ [೩೩],ಮತ್ತು ಇತರೆ ಸಮಗ್ರ ಆರೋಗ್ಯ ಚಟುವಟಿಕೆಗಳೊಂದಿಗೂ ಸೇರಿಸಲಾಗಿರುತ್ತದೆ[೩೪]. BRACನ (NGO) ಗ್ರಾಮೀಣ ಸಂಸ್ಥೆಗಳೂ ಸಹಾ ಕಿರುಬಂಡವಾಳ ವ್ಯವಸ್ಥೆಯನ್ನು ಇತರೆ ಸಾಮಾಜಿಕ ಚಟುವಟಿಕೆಗಳ ಜೊತೆ ಸೇರಿಸಿಕೊಂಡಿವೆ.

ಇತರೆ ಟೀಕೆಗಳು[ಬದಲಾಯಿಸಿ]

ಸಾಲಗಾರರಿಗೆ ಹೆಚ್ಚಿನ ಬಡ್ಡಿದರ ವಿಧಿಸುವ ಬಗ್ಗೆ ವಿಪರೀತ ಟೀಕೆಗಳಿವೆ. ೭೦೪ ಕಿರುಬಂಡವಾಳ ಸಂಸ್ಥೆಗಳ ವರದಿಯ ಮಾದರಿಯಲ್ಲಿ ಮೈಕ್ರೋಬ್ಯಾಂಕಿಂಗ್‌ ಬುಲೆಟಿನ್‌ಗೆ ಸ್ವಯಂಪ್ರೇರಿತವಾಗಿ ಕಳಿಸಿದ್ದ ವಾಸ್ತವ ಸರಾಸರಿ ಬಂಡವಾಳ ಪಟ್ಟಿಯ ಉತ್ಪನ್ನವು ೨೦೦೬ರಲ್ಲಿ ವಾರ್ಷಿಕವಾಗಿ ೨೨.೩% ಇತ್ತು. ಆದಾಗ್ಯೂ, ಕಿರುಬಂಡವಾಳ ಸಂಸ್ಥೆಯ ಸ್ಥಳೀಯ ಹಣದುಬ್ಬರ ಹಾಗೂ ಹಿಂತಿರುಗಿಸದ ಸಾಲದ ವೆಚ್ಚಗಳೆರಡೂ ಸೇರಿರುವುದರಿಂದ ಗ್ರಾಹಕರಿಗೆ ವಿಧಿಸುವ ವಾರ್ಷಿಕ ದರಗಳೂ ಸಹಾ ಹೆಚ್ಚಿವೆ.[೩೫] ಮುಹಮ್ಮದ್‌ ಯೂನಸ್‌ ಈ ವಿಷಯವನ್ನು ಇತ್ತೀಚೆಗೆ ಮತ್ತಷ್ಟು ಒತ್ತಿ ಹೇಳಿದ್ದು ತನ್ನ ಇತ್ತೀಚಿನ ಪುಸ್ತಕ [೩೬] ದಲ್ಲಿ ೧೫%ಕ್ಕಿಂತ ಹೆಚ್ಚಿನ ದರದಲ್ಲಿ ದೀರ್ಘಾವಧಿಯ ಸೇವಾವೆಚ್ಚಗಳನ್ನು ವಿಧಿಸುವ ಕಿರುಬಂಡವಾಳ ಸಂಸ್ಥೆಗಳಿಗೆ ದಂಡ ವಿಧಿಸಬೇಕು ಎನ್ನುತ್ತಾರೆ.

ದಾತರ ಪಾತ್ರವನ್ನೂ ಸಹಾ ಪ್ರಶ್ನಿಸಲಾಗಿದೆ. ಕನ್ಸಲ್ಟೇಟಿವ್‌ ಗ್ರೂಪ್‌ ಟು ಅಸಿಸ್ಟ್‌ ದ ಪೂರ್‌ (CGAP) ಸಂಸ್ಥೆಯು ಇತ್ತೀಚೆಗೆ "ಅವರು ವಿನಿಯೋಗಿಸಿದ ದೊಡ್ಡ ಪ್ರಮಾಣದ ಹಣವು ಪ್ರಯೋಜನೀಯವಲ್ಲ, ಅಯಶಸ್ವಿಯಾದ ಮತ್ತು ಬಹುಪಾಲು ಜಟಿಲ ಬಂಡವಾಳ ವ್ಯವಸ್ಥೆಯಲ್ಲಿ (ಉದಾಹರಣೆಗೆ, ಸರ್ಕಾರಿ ಅಪೆಕ್ಸ್‌ ಸೌಲಭ್ಯ) ಸಾವಕಾಶವಾಗಿ ಸಾಗುತ್ತದೆ ಅಥವಾ ಸಾಧನೆಗೆ ಜವಾಬ್ದಾರರಲ್ಲದಂತಹಾ ಪಾಲುದಾರರಿಗೆ ಹೋಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ, ತಪ್ಪಾಗಿ ರೂಪಿಸಿದ ಕಾರ್ಯಕ್ರಮಗಳು ಮಾರುಕಟ್ಟೆಯನ್ನು ಗೊಂದಲಗೊಳಿಸಿ ಮತ್ತು ಸ್ಥಳೀಯ ವಾಣಿಜ್ಯ ಉಪಕ್ರಮಗಳನ್ನು ಅಗ್ಗದ ದರದ ಇಲ್ಲವೇ ಉಚಿತ ಹಣದೊಂದಿಗೆ ಬದಲಿಸಿ ಅಂತರ್ಗತ ಹಣಕಾಸು ವ್ಯವಸ್ಥೆಗಳ ಅಭಿವೃದ್ಧಿಯನ್ನು ಕುಂಠಿತಗೊಳಿಸಿವೆ." ಎಂದು ಟೀಕೆ ಮಾಡಿದೆ.[೩೭]

ಕಿರುಸಾಲದಾತರು ಬಡಜನರ ಕಾರ್ಯಸ್ಥಳದ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳದಿರುವುದರ ಬಗ್ಗೆ, ಅದರಲ್ಲೂ ನಿರ್ದಿಷ್ಟವಾಗಿ ಸಾಲಗಾರರು MFIನಿಂದ ನಿಯಂತ್ರಿತವಾದ ಸಂಸ್ಥೆಯ ಕಲಾಕೃತಿಗಳನ್ನು ಮಾರುವ ಅಥವಾ ಕೃಷಿಉತ್ಪನ್ನಗಳನ್ನು ಮಾರುವ ನಾಮಕಾವಸ್ತೆ/ಅಲ್ಪಸಂಬಳದ ಕಾರ್ಮಿಕರ ಸ್ಥಿತಿಯ ಬಗ್ಗೆ ಕಾಳಜಿ ವಹಿಸದಿರುವ ಬಗ್ಗೆ ಟೀಕೆಗಳಿವೆ. ತಮ್ಮ ಸಾಲಗಾರರಿಗೆ ವಿವಿಧ ಕಸುಬನ್ನು ಕಲ್ಪಿಸಿ ಅವರ ಆದಾಯವನ್ನು ಹೆಚ್ಚಿಸುವ MFIಗಳ ಉದ್ದೇಶ ಅನೇಕ ರಾಷ್ಟ್ರಗಳಲ್ಲಿ ಈ ತರಹದ ಸಂಬಂಧಗಳನ್ನುಂಟುಮಾಡಿದೆ, ಪ್ರಮುಖವಾಗಿ ಬಾಂಗ್ಲಾ ದೇಶದಲ್ಲಿ ನೂರಾರು ಸಾವಿರಾರು ಸಾಲಗಾರರು ಕಾರ್ಯತಃ ಕೂಲಿ ಕಾರ್ಮಿಕರಾಗಿ ಗ್ರಾಮೀಣ ಬ್ಯಾಂಕ್‌ ಅಥವಾ BRACನ ಮಾರಾಟ ಉಪಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಟೀಕಾಕಾರರು ಮುಂದುವರೆದು ಕೆಲಸದ ಸಮಯ, ರಜೆಗಳು, ಕೆಲಸದ ವಾತಾವರಣ, ಸುರಕ್ಷೆ ಅಥವಾ ಬಾಲಕಾರ್ಮಿಕ ಪದ್ಧತಿ ಮುಂತಾದುವುಗಳನ್ನು ಪತ್ತೆ ಹಚ್ಚಲು ತಪಾಸಣಾಕಾರರು ಸೇರಿದಂತೆ ದುರ್ಬಳಕೆಯನ್ನು ತಪ್ಪಿಸಲು ಏನಾದರೂ ಸೌಲಭ್ಯಗಳು ಇದ್ದರೆ ಅದು ಅತ್ಯಲ್ಪ ಎಂದಿದ್ದಾರೆ.[೩೮] ಇವುಗಳಲ್ಲಿ ಕೆಲ ಸಮಸ್ಯೆಗಳನ್ನು ಒಕ್ಕೂಟಗಳು ಮತ್ತು ಸಾಮಾಜಿಕ ಬಾದ್ಯಸ್ಥರಾದ ಹೂಡಿಕೆ ಪ್ರತಿಪಾದಕರು/ವಕೀಲರುಗಳು ಕೈಗೆತ್ತಿಕೊಂಡಿದ್ದಾರೆ.

ಗ್ರಂಥಸೂಚಿ/ಕೃತಿಗಳು[ಬದಲಾಯಿಸಿ]

  • ಆಡಮ್ಸ್‌‌, ಡೇಲ್‌ W., ಡಗ್ಲಾಸ್‌ H. ಗ್ರಹಾಂ & J. D. ವಾನ್‌ ಪಿಷ್ಕೆ (eds./ಸಂಪಾದಕರು). ಅಂಡರ್‌ಮೈನಿಂಗ್‌ ರೂರಲ್‌ ಡೆವಲಪ್‌ಮೆಂಟ್‌ ವಿತ್‌ ಚೀಪ್‌ ಕ್ರೆಡಿಟ್‌ . ವೆಸ್ಟ್‌ವ್ಯೂ ಪ್ರೆಸ್‌, ಬೌಲ್ಡರ್‌ & ಲಂಡನ್‌, ೧೯೮೪.
  • ಡೆ ಆಗ್‌ಹಿಯಾನ್‌, ಬೀಟ್ರಿಜ್‌ ಅರ್ಮೆಂಡರಿಜ್‌ & ಜೋನಾಥನ್‌ ಮೊರ್ಡುಕ್. ದ ಇಕನಾಮಿಕ್ಸ್‌ ಆಫ್‌ ಮೈಕ್ರೋಫೈನಾನ್ಸ್ , ದ MIT ಪ್ರೆಸ್‌, ಕೇಂಬ್ರಿಡ್ಜ್‌, ಮಸಾಚುಸೆಟ್ಸ್, ೨೦೦೫.
  • ಬ್ರಾಂಚ್‌, ಬ್ರಿಯಾನ್‌ & ಜ್ಯಾನೆಟ್‌ ಕ್ಲೇಹ್ನ್. ಸ್ಟ್ರೈಕಿಂಗ್‌ ದ ಬ್ಯಾಲನ್ಸ್‌ ಇನ್‌ ಮೈಕ್ರೋಫೈನಾನ್ಸ್‌: ಎ ಪ್ರಾಕ್ಟಿಕಲ್‌ ಗೈಡ್‌ ಟು ಮೊಬಿಲೈಸಿಂಗ್‌ ಸೇವಿಂಗ್ಸ್‌ . PACT ಪಬ್ಲಿಕೇಷನ್ಸ್‌, ವಾಷಿಂಗ್ಟನ್, ೨೦೦೨.
  • ಕ್ರಿಸ್ಟನ್‌, ರಾಬರ್ಟ್‌ ಪೆಕ್‌, ಜಯದೇವ, ವೀಣಾ & ರಿಚರ್ಡ್‌ ರೋಸೆನ್‌ಬರ್ಗ್‌. ಫೈನಾನ್ಷಿಯಲ್‌ ಇನ್‌ಸ್ಟಿಟ್ಯೂಷನ್ಸ್‌ ವಿತ್‌ ಎ ಡಬಲ್‌ ಬಾಟಮ್‌ ಲೈನ್ . ಕನ್ಸಲ್ಟೇಟಿವ್‌ ಗ್ರೂಪ್‌ ಟು ಅಸಿಸ್ಟ್‌ ದ ಪೂರ್, ವಾಷಿಂಗ್ಟನ್‌ ೨೦೦೪.
  • ಡಿಕ್ಟರ್‌, ಥಾಮಸ್‌ ಮತ್ತು ಮಾಲ್ಕಂ ಹಾರ್ಪರ್‌ (eds/ಸಂಪಾದಕರು). ವಾಟ್ಸ್‌ ರಾಂಗ್‌ ವಿತ್‌ ಮೈಕ್ರೋಫೈನಾನ್ಸ್‌? ಪ್ರಾಕ್ಟಿಕಲ್‌ ಆಕ್ಷನ್‌, ೨೦೦೭.
  • ಡೌಲಾ, ಅಸಿಫ್‌ & ದೀಪಲ್‌ ಬರುವಾ. ದ ಪೂರ್‌ ಆಲ್ವೇಸ್‌ ಪೇ ಬ್ಯಾಕ್‌: ದ ಗ್ರಾಮೀಣ್‌ II ಸ್ಟೋರಿ ಕುಮಾರಿಯನ್‌ ಪ್ರೆಸ್‌ Inc., ಬ್ಲೂಂಫೀಲ್ಡ್‌, ಕನೆಕ್ಟಿಕಟ್, ೨೦೦೬.
  • ಗಿಬ್ಬನ್ಸ್‌, ಡೇವಿಡ್‌. ದ ಗ್ರಾಮೀಣ್‌ ರೀಡರ್ . ಗ್ರಾಮೀಣ್‌ ಬ್ಯಾಂಕ್‌‌, ಢಾಕಾ, ೧೯೯೨.
  • ಹೆಲ್ಮ್ಸ್‌, ಬ್ರಿಗಿಟ್. ಆಕ್ಸೆಸ್‌ ಫಾರ್‌ ಆಲ್‌ : ಬಿಲ್ಟಿಂಗ್‌ ಇನ್‌ಕ್ಲೂಸಿವ್‌ ಫೈನಾನ್ಷಿಯಲ್‌ ಸಿಸ್ಟಂಸ್ . ಕನ್ಸಲ್ಟೇಟಿವ್‌ ಗ್ರೂಪ್‌ ಟು ಅಸಿಸ್ಟ್‌ ದ ಪೂರ್‌, ವಾಷಿಂಗ್ಟನ್, ೨೦೦೬.
  • ಹಿರ್ಷ್‌ಲ್ಯಾಂಡ್‌, ಮೇಡ್‌ಲೈನ್‌ (ed./ಸಂಪಾದಕ) ಸೇವಿಂಗ್ಸ್‌ ಸರ್ವಿಸಸ್‌ ಫಾರ್‌ ದ ಪೂರ್‌: ಆನ್‌ ಆಪರೇಷನಲ್‌ ಗೈಡ್ . ಕುಮಾರಿಯನ್‌ ಪ್ರೆಸ್‌ Inc., ಬ್ಲೂಂಫೀಲ್ಡ್ CT, ೨೦೦೫.
  • ಖಾಂಡ್‌ಕರ್‌, ಷಾಹಿದುರ್‌ R. ಫೈಟಿಂಗ್‌ ಪಾವರ್ಟಿ ವಿತ್‌ ಮೈಕ್ರೋಕ್ರೆಡಿಟ್ , ಬಾಂಗ್ಲಾದೇಶದ ಆವೃತ್ತಿ, ದ ಯೂನಿವರ್ಸಿಟಿ ಪ್ರೆಸ್‌ Ltd, ಢಾಕಾ, ೧೯೯೯.
  • ಲೆಡ್ಜರ್‌ವುಡ್‌, ಜೊವಾನ್ನಾ ಮತ್ತು ವಿಕ್ಟೋರಿಯಾ ವೈಟ್‌. ಟ್ರಾನ್ಸ್‌ಫಾರ್ಮಿಂಗ್‌ ಮೈಕ್ರೋಫೈನಾನ್ಸ್‌ ಇನ್‌ಸ್ಟಿಟ್ಯೂಷನ್ಸ್‌ : ಪ್ರಾವೈಡಿಂಗ್‌ ಫುಲ್‌ ಫೈನಾನ್ಷಿಯಲ್‌ ಸರ್ವಿಸಸ್‌ ಟು ದ ಪೂರ್‌. ವಿಶ್ವಬ್ಯಾಂಕ್‌, ೨೦೦೬.
  • ಮಾಸ್‌, ಇಗ್ನಾಷಿಯೋ ಮತ್ತು ಕಬೀರ್‌ ಕುಮಾರ್. ಬ್ಯಾಂಕಿಂಗ್‌ ಆನ್‌ ಮೊಬೈಲ್ಸ್‌: ವೈ,ಹೌ ಅಂಡ್‌ ಫಾರ್‌ ಹೂಮ್‌ ? CGAP ಪ್ರಮುಖ ಟಿಪ್ಪಣಿ #೪೮, ಜುಲೈ, ೨೦೦೮.
  • ರೈಫೀನ್‌ಸನ್, FW (ಕೊನ್ರಾಡ್‌ ಎಂಗೆಲ್‌ಮನ್‌ರಿಂದ ಜರ್ಮನ್‌ ಭಾಷೆಯಿಂದ ತರ್ಜುಮೆಗೊಂಡದ್ದು). ದ ಕ್ರೆಡಿಟ್‌ ಯೂನಿಯನ್ಸ್‌ . ದ ರೈಫೀನ್‌ಸನ್‌ ಪ್ರಿಂಟಿಂಗ್‌ & ಪಬ್ಲಿಷಿಂಗ್‌ ಕಂಪೆನಿ, ನ್ಯುವೈಡ್‌ ಆನ್‌ ದ ರೈನ್‌ , ಜರ್ಮನಿ, ೧೯೭೦.
  • ರುದರ್‌ಫೋರ್ಡ್‌‌, ಸ್ಟುವರ್ಟ್‌. ದ ಪೂರ್‌ ಅಂಡ್‌ ದೇರ್‌ ಮನಿ . ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌, ದೆಹಲಿ, ೨೦೦೦.
  • ವಾಲ್ಫ್‌, ಹೆನ್ರಿ W. ಪೀಪಲ್ಸ್‌ ಬ್ಯಾಂಕ್ಸ್‌: ಎ ರೆಕಾರ್ಡ್‌ ಆಫ್‌ ಸೋಷಿಯಲ್‌ ಅಂಡ್‌ ಇಕನಾಮಿಕ್‌ ಸಕ್ಸೆಸ್‌ . P.S. ಕಿಂಗ್‌ & ಸನ್‌, ಲಂಡನ್, ೧೯೧೦.
  • ಮೈಂಬೊ, ಸ್ಯಾಮ್ಯುಯೆಲ್‌ ಮುನ್‌ಜೆಲೆ & ದಿಲಿಪ್‌ ರಾಥಾ (eds./ಸಂಪಾದಕರು) ರೆಮಿಟ್ಟೆನ್ಸಸ್‌: ಡೆವಲಪ್‌ಮೆಂಟ್‌ ಇಂಪ್ಯಾಕ್ಟ್‌ ಅಂಡ್‌ ಫ್ಯೂಚರ್‌ ಪ್ರಾಸ್ಪೆಕ್ಟಸ್ . ವಿಶ್ವಬ್ಯಾಂಕ್, ೨೦೦೫.
  • ರೈಟ್‌, ಗ್ರಹಾಂ A.N. ಮೈಕ್ರೋಫೈನಾನ್ಸ್‌‌ ಸಿಸ್ಟಂಸ್‌ : ಡಿಸೈನಿಂಗ್‌ ಕ್ವಾಲಿಟಿ ಫೈನಾನ್ಷಿಯಲ್‌ ಸರ್ವಿಸಸ್‌ ಫಾರ್‌ ದ ಪೂರ್‌ . ದ ಯೂನಿವರ್ಸಿಟಿ ಪ್ರೆಸ್‌, ಢಾಕಾ ೨೦೦೦.
  • ಯುನೈಟೆಡ್‌ ನೇಷನ್ಸ್‌ ಡಿಪಾರ್ಟ್‌ಮೆಂಟ್‌ ಆಫ್‌ ಇಕನಾಮಿಕ್‌ ಅಫೇರ್ಸ್‌ ಅಂಡ್‌ ಯುನೈಟೆಡ್‌ ನೇಷನ್ಸ್‌ ಕ್ಯಾಪಿಟಲ್‌ ಡೆವಲಪ್‌ಮೆಂಟ್‌ ಫಂಡ್‌. ಬಿಲ್ಡಿಂಗ್‌ ಇನ್‌ಕ್ಲೂಸಿವ್‌ ಫೈನಾನ್ಷಿಯಲ್‌ ಸೆಕ್ಟರ್ಸ್‌ ಫಾರ್‌ ಡೆವಲಪ್‌ಮೆಂಟ್‌ . ಸಂಯುಕ್ತರಾಷ್ಟ್ರ ಸಂಘ, ನ್ಯೂಯಾರ್ಕ್, ೨೦೦೬.
  • ಯೂನಸ್‌, ಮುಹಮ್ಮದ್‌. ಕ್ರಿಯೇಟಿಂಗ್‌ ಎ ವರ್ಲ್ಡ್‌ ವಿದೌಟ್‌ ಪಾವರ್ಟಿ : ಸೋಷಿಯಲ್‌ ಬಿಸಿನೆಸ್‌ ಅಂಡ್‌ ದ ಫ್ಯೂಚರ್‌ ಆಫ್‌ ಕ್ಯಾಪಿಟಲಿಸಂ. ಪಬ್ಲಿಕ್‌ ಅಫೇರ್ಸ್‌, ನ್ಯೂಯಾರ್ಕ್, ೨೦೦೮.

ಇದನ್ನೂ ನೋಡಿರಿ[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

  1. ರಾಬರ್ಟ್‌‌ ಪೆಕ್‌ ಕ್ರಿಸ್ಟನ್‌, ರಿಚರ್ಡ್‌ ರೋಸೆನ್‌ಬರ್ಗ್ & ವೀಣಾ ಜಯದೇವ. ಫೈನಾನ್ಷಿಯಲ್‌ ಇನ್‌ಸ್ಟಿಟ್ಯೂಷನ್ಸ್‌ ವಿತ್‌ ಎ ಡಬಲ್‌ ಬಾಟಮ್‌ ಲೈನ್: ಇಂಪ್ಲಿಕೇಷನ್ಸ್‌ ಫಾರ್‌ ದ ಫ್ಯೂಚರ್‌ ಆಫ್‌ ಮೈಕ್ರೋಫೈನಾನ್ಸ್‌ . CGAP ಅನಿಯಮಿತ ಲೇಖನ, ಜುಲೈ ೨೦೦೪, pp. ೨-೩.
  2. ಹರ್ನ್ಯಾಂಡೋ ಡೆ ಸೊಟೊ. ದ ಅದರ್‌ ಪಾತ್‌: ದ ಇನ್‌ವಿಸಿಬಲ್‌ ರೆವಲ್ಯೂಷನ್‌ ಇನ್‌ ದ ಥರ್ಡ್‌ ವರ್ಲ್ಡ್‌. ಹಾರ್ಪರ್‌ & ರೋ ಪಬ್ಲಿಷರ್ಸ್‌, ನ್ಯೂಯಾರ್ಕ್, ೧೯೮೯, p. ೧೬೨.
  3. ೩.೦ ೩.೧ ಆಡಮ್ಸ್‌‌, ಡೇಲ್‌ W., ಡಗ್ಲಾಸ್‌ H. ಗ್ರಹಾಂ & J. D. ವಾನ್‌ ಪಿಷ್ಕೆ (eds./ಸಂಪಾದಕರು). ಅಂಡರ್‌ಮೈನಿಂಗ್‌ ರೂರಲ್‌ ಡೆವಲಪ್‌ಮೆಂಟ್‌ ವಿತ್‌ ಚೀಪ್‌ ಕ್ರೆಡಿಟ್‌. ವೆಸ್ಟ್‌ವ್ಯೂ ಪ್ರೆಸ್,ಬೌಲ್ಡರ್‌ & ಲಂಡನ್, ೧೯೮೪.
  4. ಮಾರ್ಗ್ಯುರೈಟ್‌ ರಾಬಿನ್ಸನ್. ದ ಮೈಕ್ರೋಫೈನಾನ್ಸ್‌ ರೆವೊಲ್ಯೂಷನ್‌: ಸಸ್ಟೇನೆಬಲ್‌ ಫೈನಾನ್ಸ್‌ ಫಾರ್‌ ದ ಪೂರ್‌‌ ವರ್ಲ್ಡ್‌ ಬ್ಯಾಂಕ್, ವಾಷಿಂಗ್ಟನ್‌ , ೨೦೦೧, pp. ೧೯೯-೨೧೫.
  5. ೫.೦ ೫.೧ Helms, Brigit (2006). Access for All: Building Inclusive Financial Systems. Washington, D.C.: The World Bank. ISBN 0821363603.
  6. ೬.೦ ೬.೧ ಮೈಕ್ರೋಫೈನಾನ್ಸ್‌: ಆನ್‌ ಎಮರ್ಜಿಂಗ್‌ ಇನ್‌ವೆಸ್ಟ್‌ಮೆಂಟ್‌ ಆಪರ್ಚುನಿಟಿ. ಡಾಯಿಚ್‌ ಬ್ಯಾಂಕ್‌ Dec/ಡಿಸೆಂಬರ್‌ ೨೦೦೭
  7. http://www.citigroup.com/citigroup/microfinance/data/news೦೮೦೩೦೩b.pdf
  8. ಹೆಲ್ಮ್ಸ್‌ (೨೦೦೬), p. xi
  9. ೯.೦ ೯.೧ ೯.೨ ಹೆಲ್ಮ್ಸ್‌ (೨೦೦೬), p. xii
  10. ರಾಬರ್ಟ್‌‌ ಪೆಕ್‌ ಕ್ರಿಸ್ಟನ್. ವಾಟ್‌ ಮೈಕ್ರೋಎಂಟರ್‌ಪ್ರೈಸ್‌ ಕ್ರೆಡಿಟ್‌ ಪ್ರೋಗ್ರಾಂಸ್‌ ಕ್ಯಾನ್‌ ಲರ್ನ್‌ ದ ಮನಿಲೆಂಡರ್ಸ್‌ , ಆಕಿಯಾನ್‌/ಆಸಿಯಾನ್‌ ಇಂಟರ್‌ನ್ಯಾಷನಲ್, ೧೯೮೯
  11. ಉದಾಹರಣೆಗೆ ನೋಡಿ ಆಡ್ರಿಯಾನ್‌ ಗೊನ್ಜಾಲೆಜ್‌ & ರಿಚರ್ಡ್‌ ರೋಸೆನ್‌ಬರ್ಗ್. ದ ಸ್ಟೇಟ್‌ ಆಫ್‌ ಮೈಕ್ರೋಫೈನಾನ್ಸ್ : ಔಟ್‌ರೀಚ್‌, ಪ್ರಾಫಿಟಬಿಲಿಟಿ ಅಂಡ್‌ ಪಾವರ್ಟಿ , ಕನ್ಸಲ್ಟೇಟಿವ್‌ ಗ್ರೂಪ್‌ ಟು ಅಸಿಸ್ಟ್‌ ದ ಪೂರ್‌, ೨೦೦೬.
  12. ದ ಮೈಕ್ರೋಫೈನಾನ್ಸ್ ಇನ್‌ಫರ್ಮೇಷನ್‌ ಎಕ್ಸ್‌ಚೇಂಜ್. ಮೈಕ್ರೋಬ್ಯಾಂಕಿಂಗ್‌ ಬುಲೆಟಿನ್‌ ಸಂಚಿಕೆ #೧೫,ಶರತ್ಕಾಲ, ೨೦೦೭, pp. ೪೬,೪೯
  13. McKenzie, David (2008-10-17). "Comments Made at IPA/FAI Microfinance Conference Oct. 17 2008". Philanthropy Action. Archived from the original on 2009-01-05. Retrieved 2008-10-17.
  14. ಉದಾಹರಣೆಗೆ ನೋಡಿ ಷೆರಿಲ್‌/ಚೆರಿಲ್‌ ಫ್ರಾಂಕೀವಿಕ್ಜ್‌ ಕಾಲ್ಮಿಡೊ ಮೆಟ್ರೊಫಂಡ್‌: ಎ ಕೆನಡಿಯನ್‌ ಎಕ್ಸ್‌ಪೆರಿಮೆಂಟ್‌ ಇನ್‌ ಸಸ್ಟೇನೆಬಲ್‌ ಮೈಕ್ರೋಫೈನಾನ್ಸ್ , ಕಾಲ್ಮಿಡೊ ಫೌಂಡೇಷನ್, ೨೦೦೧.
  15. ಸ್ಟುವರ್ಟ್ ರುದರ್‌ಫೋರ್ಡ್. ದ ಪೂರ್‌ ಅಂಡ್‌ ದೇರ್‌ ಮನಿ . ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್, ನವದೆಹಲಿ, ೨೦೦೦, p. ೪. isbn =೦೧೯೫೬೫೭೯೦X
  16. ಖಾಂಡ್‌ಕರ್‌, ಷಾಹಿದುರ್‌ R. ಫೈಟಿಂಗ್‌ ಪಾವರ್ಟಿ ವಿತ್‌ ಮೈಕ್ರೋಕ್ರೆಡಿಟ್ , ಬಾಂಗ್ಲಾದೇಶದ ಆವೃತ್ತಿ, ದ ಯೂನಿವರ್ಸಿಟಿ ಪ್ರೆಸ್‌ Ltd, ಢಾಕಾ, ೧೯೯೯, p. ೭೮.
  17. ಗ್ರಹಾಂ A.N. ರೈಟ್‌ ಮತ್ತು ಲಿಯೊನಾರ್ಡ್‌ ಮುಟೆಸಸಿರಾ. ದ ರಿಲೇಟಿವ್‌ ರಿಸ್ಕ್ಸ್‌ಟು ದ ಸೇವಿಂಗ್ಸ್‌ ಆಫ್‌ ಪೂರ್‌ ಪೀಪಲ್‌ , ಮೈಕ್ರೋ-ಸೇವ್‌ ಆಫ್ರಿಕಾ, ಜನವರಿ, ೨೦೦೧.
  18. ರಾಬರ್ಟ್‌ ಪೆಕ್ ಕ್ರಿಸ್ಟನ್, ರಿಚರ್ಡ್‌ ರೋಸೆನ್‌ಬರ್ಗ್ & ವೀಣಾ ಜಯದೇವ. ಫೈನಾನ್ಷಿಯಲ್‌ ಇನ್‌ಸ್ಟಿಟ್ಯೂಷನ್ಸ್‌ ವಿತ್‌ ಎ ಡಬಲ್‌ ಬಾಟಮ್‌ ಲೈನ್: ಇಂಪ್ಲಿಕೇಷನ್ಸ್‌ ಫಾರ್‌ ದ ಫ್ಯೂಚರ್‌ ಆಫ್‌ ಮೈಕ್ರೋಫೈನಾನ್ಸ್‌ . CGAP ಅನಿಯಮಿತ ಲೇಖನ, ಜುಲೈ ೨೦೦೪.
  19. ಕ್ರಿಸ್ಟನ್, ರೋಸೆನ್‌ಬರ್ಗ್ & ಜಯದೇವ. ಫೈನಾನ್ಷಿಯಲ್‌ ಇನ್‌ಸ್ಟಿಟ್ಯೂಷನ್ಸ್‌ ವಿತ್‌ ಎ ಡಬಲ್‌ ಬಾಟಮ್‌ ಲೈನ್ , pp. ೫-೬
  20. ದ ಮೈಕ್ರೋಬ್ಯಾಂಕಿಂಗ್‌ ಬುಲೆಟಿನ್‌ #೧೫, ಮೈಕ್ರೋಫೈನಾನ್ಸ್‌ ಇನ್‌ಫರ್ಮೇಷನ್‌ ಎಕ್ಸ್‌ಚೇಂಜ್, ೨೦೦೭, pp. ೩೦-೩೧.
  21. ಉದಾಹರಣೆಗೆ ನೋಡಿ ಜೋವಾಚಿಮ್‌ ಡೆ ವೀರ್‌ಡ್ಟ್‌, ಸ್ಟೀಫನ್‌ ಡೆರ್ಕಾನ್‌, ಟೆಸ್ಸಾ ಬೋಲ್ಡ್‌ ಅಂಡ್‌ ಅಲುಲಾ ಪ್ಯಾನ್‌ಖರ್ಸ್ಟ್‌‌, ಮೆಂಬರ್‌ಷಿಪ್‌-ಬೇಸ್ಡ್‌ ಇಂಡಿಜೀನಸ್‌ ಇನ್‌ಷೂರೆನ್ಸ್‌ ಅಸೋಸಿಯೇಷನ್ಸ್‌ ಇನ್‌ ಇಥಿಯೋಪಿಯಾ ಅಂಡ್‌ ಟಾನ್‌ಝೇನಿಯಾ Archived 2010-07-10 ವೇಬ್ಯಾಕ್ ಮೆಷಿನ್ ನಲ್ಲಿ. ಉಳಿದ ಸಂದರ್ಭಗಳಿಗೆ ನೋಡಿ ROSCA.
  22. ಬ್ರಿಗಿಟ್ ಹೆಲ್ಮ್ಸ್. ಆಕ್ಸೆಸ್‌ ಫಾರ್‌ ಆಲ್‌ : ಬಿಲ್ಟಿಂಗ್‌ ಇನ್‌ಕ್ಲೂಸಿವ್‌ ಫೈನಾನ್ಷಿಯಲ್‌ ಸಿಸ್ಟಂಸ್. CGAP/ವಿಶ್ವಬ್ಯಾಂಕ್‌, ವಾಷಿಂಗ್ಟನ್‌, ೨೦೦೬, pp. ೩೫-೫೭.
  23. http://www.microcreditsummit.org/pubs/reports/socr/೨೦೦೭.html[ಶಾಶ್ವತವಾಗಿ ಮಡಿದ ಕೊಂಡಿ] ಕಿರುಸಾಲ ಶೃಂಗಸಭೆ ಆಂದೋಲನದ ವರದಿಯ ಸ್ಥಿತಿ ೨೦೦೭ , ಕಿರುಸಾಲ ಶೃಂಗಸಭೆ ಆಂದೋಲನ, ವಾಷಿಂಗ್ಟನ್, ೨೦೦೭.
  24. "ಟರ್ನರ್‌, ಮೈಕೆಲ್‌, ರಾಬಿನ್‌ ವರ್ಗೀಸ್‌, et al. ದಕ್ಷಿಣ ಆಫ್ರಿಕಾದಲ್ಲಿ ಮಾಹಿತಿ ಹಂಚುವಿಕೆ ಹಾಗೂ SMME ಬಂಡವಾಳ ಹೂಡುವಿಕೆ , [[ರಾಜಕೀಯ ಮತ್ತು ಆರ್ಥಿಕ ಸಂಶೋಧನಾ ಸಮಿತಿ]] (PERC), p೫೮" (PDF). Archived from the original (PDF) on 2008-10-01. Retrieved 2009-12-07.
  25. ಡಾಯಿಚ್‌ ಬ್ಯಾಂಕ್‌ ಸಂಶೋಧನೆ, ಮೈಕ್ರೋಫೈನಾನ್ಸ್‌: ಆನ್‌ ಎಮರ್ಜಿಂಗ್‌ ಇನ್‌ವೆಸ್ಟ್‌ಮೆಂಟ್‌ ಆಪರ್ಚುನಿಟಿ , ಡಿಸೆಂಬರ್‌ ೦೨೦೭, http://www.dbresearch.com/PROD/DBR_INTERNET_EN-PROD/PROD೦೦೦೦೦೦೦೦೦೦೨೧೯೧೭೪.pdf Archived 2015-10-25 ವೇಬ್ಯಾಕ್ ಮೆಷಿನ್ ನಲ್ಲಿ.
  26. ಸಗಟುದರದ ಬಹಿರಂಗದಿಂದಾಗುವ ತೊಂದರೆಗಳ ಬಗ್ಗೆ ಇತ್ತೀಚಿನ ತಾಂತ್ರಿಕ ಲೇಖನ ನೋಡಿ "ವೈ ವಿ ನೀಡ್‌ ಟ್ರಾನ್ಸ್‌ಪರೆಂಟ್‌ ಪ್ರೈಸಿಂಗ್‌ ಇನ್‌ ಮೈಕ್ರೋಫೈನಾನ್ಸ್" Archived 2009-03-25 ವೇಬ್ಯಾಕ್ ಮೆಷಿನ್ ನಲ್ಲಿ.
  27. Dichter, T. "Hype and Hope: The Worrisome State of the Microcredit Movement". Consultative Group to Assist the Poor (CGAP).
  28. Littlefield, Elizabeth (2003-01-01). "Is Microfinance an Effective Strategy to Reach the Millennium Development Goals?" (PDF). FocusNote. Consultative Group to Assist the Poor (24). Archived from the original (pdf) on 2007-02-03. Retrieved 2007-03-27. {{cite journal}}: Unknown parameter |coauthors= ignored (|author= suggested) (help)
  29. Morduch, Jonathan (2008-10-17). "Comments Made at IPA/FAI Microfinance Conference Oct. 17 2008". Philanthropy Action. Archived from the original on 2008-10-22. Retrieved 2008-10-17.
  30. ವೆಸ್ಟ್‌ಓವರ್‌ J. (೨೦೦೮). ದ ರೆಕಾರ್ಡ್‌ ಆಫ್‌ ಮೈಕ್ರೋಫೈನಾನ್ಸ್‌: ದ ಎಫೆಕ್ಟಿವ್‌ನೆಸ್‌/ಇನ್‌ಎಫೆಕ್ಟಿವ್‌ನೆಸ್‌ ಆಫ್‌ ಮೈಕ್ರೋಫೈನಾನ್ಸ್‌ ಪ್ರೋಗ್ರಾಂಸ್‌ ಆಸ್‌ ಎ ಮೀನ್ಸ್‌ ಆಫ್‌ ಅಲೀವಿಯೇಟಿಂಗ್‌ ಪಾವರ್ಟಿ Archived 2008-10-01 ವೇಬ್ಯಾಕ್ ಮೆಷಿನ್ ನಲ್ಲಿ.. ಸಮಾಜವಿಜ್ಞಾನದ ವಿದ್ಯುನ್ಮಾನ ಜರ್ನಲ್ .
  31. ಕರ್ಲಾನ್‌ D, ವಾಲ್ಡಿವಿಯಾ M. (೨೦೦೯). ಟೀಚಿಂಗ್‌ ಎಂಟರ್‌ಪ್ರಿನ್ಯೂರ್‌ಷಿಪ್‌: ಇಂಪಾಕ್ಟ್‌ ಆಫ್‌ ಬಿಸಿನೆಸ್‌ ಟ್ರೈನಿಂಗ್‌ ಆನ್‌ ಮೈಕ್ರೋಫೈನಾನ್ಸ್‌ ಕ್ಲೈಂಟ್ಸ್‌ ಅಂಡ್‌ ಇನ್‌ಸ್ಟಿಟ್ಯೂಷನ್ಸ್[ಶಾಶ್ವತವಾಗಿ ಮಡಿದ ಕೊಂಡಿ]. ಇನ್ನೋವೇಷನ್ಸ್‌ ಫಾರ್‌ ಪಾವರ್ಟಿ ಆಕ್ಷನ್‌.
  32. ಕಿಂ, J.C., ವಾಟ್ಸ್‌, C. H., ಹರ್‌ಗ್ರೀವ್ಸ್‌, J. R.,ಎನ್‌ಧ್ಲೋವು, L. X., ಫೇಟ್ಲಾ, G., ಮಾರಿಸನ್‌, L. A., et al. (೨೦೦೭). ಅಂಡರ್‌ಸ್ಟ್ಯಾಂಡಿಂಗ್‌ ದ ಇಂಪಾಕ್ಟ್‌ ಆಫ್‌ ಎ ಮೈಕ್ರೋಫೈನಾನ್ಸ್‌-ಬೇಸ್‌ಡ್‌ ಇಂಟರ್‌ವೆನ್ಷನ್‌ ಆಫ್‌ ವಿಮೆನ್ಸ್‌ ಎಂಪವರ್‌ಮೆಂಟ್‌ ಅಂಡ್‌ ದ ರಿಡಕ್ಷನ್‌ ಆಫ್‌ಇಂಟಿಮೇಟ್‌ ಪಾರ್ಟ್ನರ್‌ ವಯೊಲೆನ್ಸ್‌ ಇನ್‌ ಸೌತ್‌ ಆಫ್ರಿಕಾ. ಸಾರ್ವಜನಿಕ ಆರೋಗ್ಯಕಾಗಿನ ಅಮೆರಿಕದ ನಿಯತಾಲಿಕ
  33. ಡೀನ್‌ ಕರ್ಲಾನ್‌ ಮತ್ತು ಮಾರ್ಟಿನ್‌ ವಾಲ್‌ಡಿವಿಯಾ, ಟೀಚಿಂಗ್‌ ಎಂಟರ್‌ಪ್ರಿನ್ಯೂರ್‌ಷಿಪ್‌: ಇಂಪಾಕ್ಟ್‌ ಆಫ್‌ ಬಿಸಿನೆಸ್‌ ಟ್ರೈನಿಂಗ್‌ ಆನ್‌ ಮೈಕ್ರೋಫೈನಾನ್ಸ್‌ ಕ್ಲೈಂಟ್ಸ್‌ ಅಂಡ್‌ ಇನ್‌ಸ್ಟಿಟ್ಯೂಷನ್ಸ್ (ಯೇಲ್‌ ವಿಶ್ವವಿದ್ಯಾಲಯ, ಮೇ ೨೦೦೯).
  34. ಸ್ಟೀಫನ್‌ C. ಸ್ಮಿತ್‌, "ವಿಲೇಜ್‌ ಬ್ಯಾಂಕಿಂಗ್ ಅಂಡ್‌ ಮೆಟರ್ನಲ್‌ ಅಂಡ್‌ ಚೈಲ್ಡ್‌ ಹೆಲ್ತ್‌‌ : ಎವಿಡೆನ್ಸ್‌ ಫ್ರಂ ಈಕ್ವೆಡಾರ್‌ ಅಂಡ್‌ ಹೊಂಡುರಾಸ್‌," ವರ್ಲ್ಡ್‌ ಡೆವಲಪ್‌ಮೆಂಟ್, ೩೦, ೪, ೭೦೭ ೭೨೩, April ೨೦೦೨
  35. ಮೈಕ್ರೋಫೈನಾನ್ಸ್‌ ಇನ್‌ಫರ್ಮೇಷನ್‌ ಎಕ್ಸ್‌ಚೇಂಜ್‌, Inc. ಮೈಕ್ರೋಬ್ಯಾಂಕಿಂಗ್‌ ಬುಲೆಟಿನ್ , ಸಂಚಿಕೆ #೧೫, ಶರತ್ಕಾಲ, ೨೦೦೭, p. ೪೮.
  36. ಮುಹಮ್ಮದ್ ಯೂನಸ್ ಮತ್ತು ಕಾರ್ಲ್‌ ವೆಬರ್‌. ಕ್ರಿಯೇಟಿಂಗ್‌ ಎ ವರ್ಲ್ಡ್‌ ವಿದೌಟ್‌ ಪಾವರ್ಟಿ : ಸೋಷಿಯಲ್‌ ಬಿಸಿನೆಸ್‌ ಅಂಡ್‌ ದ ಫ್ಯೂಚರ್‌ ಆಫ್‌ ಕ್ಯಾಪಿಟಲಿಸಂ . ಪಬ್ಲಿಕ್‌ ಅಫೇರ್ಸ್, ನ್ಯೂಯಾರ್ಕ್, ೨೦೦೭
  37. ಬ್ರಿಗಿಟ್ ಹೆಲ್ಮ್ಸ್‌. ಆಕ್ಸೆಸ್‌ ಫಾರ್‌ ಆಲ್‌ : ಬಿಲ್ಟಿಂಗ್‌ ಇನ್‌ಕ್ಲೂಸಿವ್‌ ಫೈನಾನ್ಷಿಯಲ್‌ ಸಿಸ್ಟಂಸ್‌. CGAP/ವಿಶ್ವಬ್ಯಾಂಕ್‌, ವಾಷಿಂಗ್ಟನ್‌ , ೨೦೦೬, p. ೯೭.
  38. ಫಾರೂಕ್‌ ಚೌಧರಿ. ದ ಮೆಟಾಮಾರ್ಫಾಸಿಸ್‌ ಆಫ್‌ ದ ಮೈಕ್ರೋ-ಕ್ರೆಡಿಟ್‌ ಡೆಟರ್‌ Archived 2008-04-10 ವೇಬ್ಯಾಕ್ ಮೆಷಿನ್ ನಲ್ಲಿ. ನ್ಯೂ ಏಜ್‌, ಜೂನ್‌ ೨೪, ೨೦೦೭.

ಹೊರಗಿನ ಕೊಂಡಿಗಳು[ಬದಲಾಯಿಸಿ]

Microfinance ಓಪನ್ ಡೈರೆಕ್ಟರಿ ಪ್ರಾಜೆಕ್ಟ್