ಕಿಣ್ವ ಕ್ರಿಯಾಕಾರಕ ವ್ಯವಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಾಲಿನ ಸಮೃದ್ಧ ದೊರೆಯುವಿಕೆ ಮತ್ತು ಅದರ ಉತ್ಪಾದನೆ ನಮ್ಮದೇಶದ ಮಕ್ಕಳು ಹಾಗೂ ವೃದ್ಧರಿಗಾಗಿ ಅನೇಕ ಉಪಯುಕ್ತ ಉತ್ಪನ್ನಗಳು ಮತ್ತು ಸಹ-ಉತ್ಪನ್ನಗಳೆಡೆಗೆ ಕೊಂಡೊಯ್ಯಬಹುದು. ಲ್ಯಾಕ್ಟೋಸ್ ಎಂಬ ರಾಸಾಯನಿಕದ ಜಲವಿಭಜನೆಯು ಸಾರೀಕೃತ ಹಾಲು ಉತ್ಪನ್ನಗಳಲ್ಲಿ ಅದರ ಸಾಧಾರಣ ದ್ರವ್ಯತೆಯ ಸಮಸ್ಯೆಯನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೆ ಲ್ಯಾಕ್ಟೋಸ್ ರಾಸಾಯನಿಕವನ್ನು ಭರಿಸಲಾಗದ ಮಕ್ಕಳು ಮತ್ತು ವೃದ್ಧರಲ್ಲಿ ಸುಲಭ ಜೀರ್ಣ ಕ್ರಿಯೆಯನ್ನು ಇದು ಅನುವಾಗಿಸುತ್ತದೆ.

ನಿಶ್ಚಲೀಕೃತ ಕಿಣ್ವ ಕ್ರಿಯಾಕಾರಕ ವ್ಯವಸ್ಥೆ(Immobilized Enzyme Reactor System)[ಬದಲಾಯಿಸಿ]

ಲ್ಯಾಕ್ಟೋಸನ್ನು ಜಲವಿಭಜನೆ ಗೊಳಿಸಲು DRDO/DFRL(ರಕ್ಷಣಾ ಆಹಾರ ಸಂಶೋಧನಾಲಯ, ಮೈಸೂರು) ಸಂಸ್ಥೆಯವರು ಒಂದು ಸುಲಭ ವೆಚ್ಚದ ಜೈವಿಕ ಕ್ರಿಯಾಕಾರಕವನ್ನು ಅಭಿವೃದ್ಧಿಗೊಳಿಸಿದ್ದಾರೆ. ಇದೊಂದು ವಿನೂತನ ಮತ್ತು ಸರಳ ವಿಧಾನವಾಗಿದ್ದು ಹಂತಹಂತವಾಗಿ ಅಥವಾ ನಿರಂತರವಾಗಿ ಇದನ್ನು ನಿರ್ವಹಿಸಬಹುದು. ಜೈವಿಕ ಉತ್ಪ್ರೇರಕವನ್ನು ಪದೇಪದೇ ಹಲವಾರು ಬಾರಿ ಬಳಕೆ ಮಾಡಿದಲ್ಲಿ ವೆಚ್ಚ-ಲಾಭದ ಪ್ರಮಾಣದಲ್ಲಿ ಗಣನೀಯ ಸುಧಾರಣೆಯನ್ನು ಕಾಣಬಹುದು. ಲ್ಯಾಕ್ಟೋಸ್ ಜಲವಿಭಜನೆಯನ್ನು ೫-೧೫ ಡಿ.ಸೆಂ ಅಥವಾ >೩೫ ಡಿ. ಸೆಂ.ನಷ್ಟು ತಾಪದಲ್ಲಿ ನಡೆಸಲಾಗುವುದು ಹೀಗಾಗಿ ಈಗ ಅಭಿವೃದ್ಧಿ ಪಡಿಸಲಾಗಿರುವ ಜೈವಿಕ ಕ್ರಿಯಾಕಾರಕದಲ್ಲಿ ಸೂಕ್ಷ್ಮಾಣು ಪ್ರದೂಷಣವನ್ನು ಗಣನೀಯವಾಗಿ ಕಡಿಮೆಗೊಳಿಸಬಹುದು.

ಈ ಕ್ರಿಯಾಕಾರಕವು ನಿಶ್ಚಲೀಕರಣಗೊಂಡ ಕಿಣ್ವ/ಪೂರ್ಣ ಕೋಶ ಉತ್ಪ್ರೇರಕಗಳನ್ನು ತೀವ್ರ ಸಾಂದ್ರತೆ ಮತ್ತು ಅನುಪಾತೀಯ ನಿರ್ವಹಣಾ ತಾಪಗಳಲ್ಲಿಯೂ ಸಹ ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ. ಕಾಳು, ಅಚ್ಚು ಅಥವಾ ನಾರಿನ ರೂಪದಲ್ಲಿ ಸಿದ್ಧಪಡಿಸಿರುವ ಉತ್ಪ್ರೇರಕಗಳನ್ನೂ ಸಹ ಹಿಡಿದಿಟ್ಟುಕೊಳ್ಳಬಲ್ಲ ಸಾಮರ್ಥ್ಯವನ್ನು ಈ ಕ್ರಿಯಾಕಾರಕಗಳು ಪಡೆದಿವೆ. ಈ ಉಪಕರಣವು ನಿಶ್ಚಲೀಕೃತ ಕಿಣ್ವ ತಯಾರಿಕೆಗಳಿಗೆ ಮತ್ತು ಆವೃತ ಕುಣಿಕೆಯಲ್ಲಿನ ಲ್ಯಾಕ್ಟೋಸಿನ ಪರಿಣಾಮಕಾರಿ ಜಲವಿಭಜನೆಗಳಿಗೆ ದೀರ್ಘಕಾಲೀನ ತಾಂತ್ರಿಕ ಹಾಗೂ ಜೀವ-ರಾಸಾಯನಿಕ ಸ್ಥಿರತೆಯನ್ನು ಒದಗಿಸಬಲ್ಲದು. ಈ ವ್ಯವಸ್ಥೆಯು ಹಾಲಿನಲ್ಲಿ ೯೮% ಶುದ್ಧತೆಯ ಜಲವಿಭಜನೆಯನ್ನು ಸಾಧಿಸಿತು. ಈ ನಿರಂತರ ಪ್ರವಹನ ಜೈವಿಕ ಕ್ರಿಯಾಕಾರಕವನ್ನು ಬಳಸಿದಾಗ ಹಾಲಿನಲ್ಲಿನ ಲ್ಯಾಕ್ಟೋಸ್ ಜಲವಿಭಜನೆಯ ಆರ್ಥಿಕ ಮತ್ತು ಸಂಸ್ಕರಣ ದಕ್ಷತೆಯಲ್ಲಿ ಸುಧಾರಣೆ ಕಂಡುಬಂದಿತು. ಈ ತಂತ್ರಜ್ಞಾನವು ಆರ್ಥಿಕವಾಗಿ ಉತ್ತಮವಾಗಿದ್ದು, ಸೂಕ್ಷ್ಮಜೀವವೈಜ್ಞಾನಿಕವಾಗಿಯೂ ಸುರಕ್ಷಿತವಾಗಿದೆ.