ಕಾಳ್ಗಿಚ್ಚು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ಕಾಡ್ಗಿಚ್ಚು
ಕಾಡ್ಗಿಚ್ಚು

ಕಾಡು ಅಥವಾ ಅರಣ್ಯಗಳಲ್ಲಿ ಯಾವುದೇ ಉದ್ದೇಶಪೂರ್ವಕವಿಲ್ಲದೇ ಹೊತ್ತುರಿಯುವ ಬೆಂಕಿಯನ್ನು ಕಾಳ್ಗಿಚ್ಚು ಅಥವಾ ಕಾಡ್ಗಿಚ್ಚು ಅಂತ ಕರೆಯಬಹುದು.

ಅರಣ್ಯದಲ್ಲಿ ಬೀಸುವ ಗಾಳಿಯಿಂದಾಗಿ ಅಲ್ಲಿರಬಹುದಾದ ಒಣಗಿದ ಮರದ ಕಾಂಡಗಳು ಅಥವಾ ಪೊದೆಗಳು ಒಂದಕ್ಕೊಂದು ಘರ್ಷಣೆಗೊಳಗಾಗಿ ಹತ್ತಿಕೊಳ್ಳುವ ಬೆಂಕಿ ಇಡೀ ಕಾಡನ್ನೇ ನಾಶ ಮಾಡುತ್ತದೆ. ಗಾಳಿ ಬೀಸುವ ದಿಕ್ಕಿನಲ್ಲೆಡೆ ತನ್ನ ಅಗ್ನಿಯ ಕೆನ್ನಾಲಿಗೆಯನ್ನು ಚಾಚುವ ಈ ಕಾಳ್ಗಿಚ್ಚಿಗೆ ಯಾವುದೇ ನಿಶ್ಚಿತ ಗುರಿಯಿರುವದಿಲ್ಲ. ಈ ಕಾಡ್ಗಿಚ್ಚು ಹಾಲವಾರು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಅದು ಪೊದೆ ಬೆಂಕಿ, ಮರುಭೂಮಿ ಬೆಂಕಿ, ಸಸ್ಯ ವರ್ಗದ ಬೆಂಕಿ, ಹುಲ್ಲುಗಾಡು ಬೆಂಕಿ, ಬೆಟ್ಟದ ಬೆಂಕಿ ಮುಂತದವುಗಳು. ಕಾಡ್ಗಿಚ್ಚು ಆಗಲು ಮೂಲ ಕಾರಣ ಮನುಷ್ಯರು. ಅರ್ಧ ಉರಿಯುವ ಸೌದೆಗಳನ್ನು, ಬೀಡಿ, ಸಿಗರೆಟ್ ಮತ್ತು ಬೆಂಕಿ ಪೊಟ್ಟಣ ಕಡ್ಡಿಗಳನ್ನು ಒಣಗಿದ ಮರ, ಪೊದೆ, ಬಳ್ಳಿ, ಗಿಡಗಳ ಮೇಲೆ ಹೆಸೆಯುವುದರಿಂದ ಕಾಡ್ಗಿಚ್ಚು ಆಗುವ ಸಾಧ್ಯಗಳು ಹೆಚ್ಚಿರುತ್ತದೆ.

ಆದರೆ ಅರಣ್ಯದ ಜೀವ-ಜಲ ಸಂಕುಲವನ್ನು ಸಮತೋಲನದಲ್ಲಿಡಲು ನಿಸರ್ಗವೇ ಕಂಡುಕೊಂಡ ಮಾರ್ಗವಿದು ಎಂದು ಅಭಿಪ್ರಾಯಪಡುವವರೂ ಇದ್ದಾರೆ.