ಕಾಳೇಗೌಡ ನಾಗವಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಳೇಗೌಡ ನಾಗವಾರ , ಕನ್ನಡ ಸಾಹಿತಿ ಮತ್ತು ವಿಶ್ರಾಂತ ಪ್ರಾಧ್ಯಾಪಕ ‌. ಇವರು ಪ್ರಾಥಮಿಕ ಶಾಲಾ ದಾಖಲೆಗಳಲ್ಲಿ ಇರುವಂತೆ ೦೨.೦೨.೧೯೪೭ರಂದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ನಾಗವಾರ ಗ್ರಾಮದಲ್ಲಿ ಜನಿಸಿದರು. ತಂದೆ ಸಿದ್ದೇಗೌಡ ಮತ್ತು ತಾಯಿ ಲಿಂಗಮ್ಮ.

ವಿದ್ಯಾಭ್ಯಾಸ[ಬದಲಾಯಿಸಿ]

ಅವರು ಪ್ರಾಥಮಿಕ, ಪ್ರೌಢ ಹಾಗೂ ಪದವಿ ಶಿಕ್ಷಣಗಳನ್ನು ನಾಗವಾರ, ಚನ್ನಪಟ್ಟಣ, ಮಂಡ್ಯ ಮತ್ತು ಮೈಸೂರಿನಲ್ಲಿ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಿಂದ 1971 ರಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ನಂತರ 1985 ರಲ್ಲಿ "ಕಾಡುಗೊಲ್ಲರ ಒಂದು ಹಟ್ಟಿಯ ಅಧ್ಯಯನ" ಎಂಬ ಸಂಶೋಧನ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪಡೆದಿದ್ದಾರೆ.

ಕೃತಿಗಳು[ಬದಲಾಯಿಸಿ]

ಕಥಾಸಂಕಲನ:[ಬದಲಾಯಿಸಿ]

  • ಅಲೆಗಳು
  • ಬೆಟ್ಟಸಾಲು ಮಳೆ
  • ಈ ಮಂಜಿನೊಳಗೆ
  • ಕಣ್ಣಾಚೆಗೆ
  • ಆಯ್ದ ಬರಹಗಳು

ಕಾವ್ಯ:[ಬದಲಾಯಿಸಿ]

  • ಕರಾವಳಿಯಲ್ಲಿ ಗಂಗಾಲಗ್ನ
  • ಕನ್ನೆಯ ಸ್ನೇಹ
  • ಗಾಳಿ ಬೆಳಕಿನ ಪಯಣ

ಜಾನಪದ:[ಬದಲಾಯಿಸಿ]

  • ಬಯಲು ಸೀಮೆಯ ಲಾವಣಿಗಳು.
  • ಬೀದಿ ಮಕ್ಕಳು ಬೆಳೆದೊ
  • ಬೇಕಾದ ಸಂಗಾತಿ
  • ಹಲವು ತೊಟದ ಹೂಗಳು
  • ಜಾನಪದ ತುಂಬುಹೊಳೆ
  • ಸಾಲುಸಂಪಿಗೆ ನೆರಳು
  • ಗರಿಗೆದರಿದ ನವಿಲು
  • ಮನದಾಳದ ಕನಸುಗಳು
  • ಗಿರಿಜನ ಕಾವ್ಯ
  • ಗಿರಿಜನ ಸಂಸ್ಕೃತಿ

ವಿಚಾರ-ವಿಮರ್ಶೆ:[ಬದಲಾಯಿಸಿ]

  • ತ್ರಿಪದಿ ರಗಳೆ ಮತ್ತು ಜನಪದ ಸಾಹಿತ್ಯ
  • ಪ್ರೀತಿ ಮತ್ತು ನಿರ್ಭೀತಿ
  • ಸರ್ವಜ್ಞ ಮತ್ತು ಹರಿಹರ
  • ಸೃಜನಶೀಲ ವೈಚಾರಿಕತೆ
  • ಭಿನ್ನಮತದ ಸೊಗಸು

ಸಂಪಾದನೆ:[ಬದಲಾಯಿಸಿ]

  • ಶಾಂತವೇರಿ ಗೋಪಲಗೌಡ ನೆನಪಿನ ಸಂಪುಟ
  • ಜೀವನಪ್ರೀತಿ
  • ಜೀಶಂಪ ಅವರ ಜನಪದ ಬರಹಗಳು
  • ರಾಮಮನೋಹರ ಲೋಹಿಯಾ ಅವರ ಬರಹಗಳ ಸಂಪುಟಗಳು
  • ಜೀವನಪ್ರೇಮ - ಮುಂತಾದವುಗಳು

ಇತರ ಗ್ರಂಥಗಳು[ಬದಲಾಯಿಸಿ]

  • ಮಡುಗಟ್ಟಿ ಅಕ್ಕರೆ ಜೀವನಪ್ರೇಮದ ಅಚ್ಚರಿ
  • ಸಂತನ ಧ್ಯಾನ
  • ಇಂಥ ಪ್ರೀತಿಯ ನಾವೆ

ಪುರಸ್ಕಾರ[ಬದಲಾಯಿಸಿ]