ಕಾರ್ತಿಕ ಪೂರ್ಣಿಮಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Kartik Poornima
ಪರ್ಯಾಯ ಹೆಸರುಗಳುತ್ರಿಪುರಿ ಪೂರ್ಣಿಮಾ,ತ್ರಿಪುರಾರಿ ಪೂರ್ಣಿಮಾ, ದೇವಾ-ದಿವಾಲಿ, ದೇವಾ-ದೆಪ್ಪವಳಿ
ಆಚರಿಸಲಾಗುತ್ತದೆಹಿಂದೂಗಳು ಮತ್ತು ಜೈನ ರು
ರೀತಿHindu
ಆಚರಣೆಗಳುಪ್ರಾರ್ಥನೆಗಳು, ವಿಷ್ಣುಮತ್ತು ಹರಿಹರ ರ ಪೂಜೆ
ದಿನಾಂಕಚಂದ್ರನ ಅನುಸಾರವಾಗಿ
೨೦೨೪ datedate missing (please add)

ಕಾರ್ತಿಕ ಪೂರ್ಣಿಮಾ (ಕಾರ್ತಿಕ ಪೂರ್ಣಿಮೆ ) ಎನ್ನುವುದು ಹುಣ್ಣಿಮೆ ಯ ದಿನ ಅಥವಾ ಕಾರ್ತಿಕ ಮಾಸದ 15 ನೇ ದಿನದಂದು (ನವೆಂಬರ್–ಡಿಸೆಂಬರ್) ಆಚರಿಸುವ ಹಿಂದೂಗಳ ಪವಿತ್ರ ದಿನವಾಗಿದೆ. ಇದು ತ್ರಿಪುರಿ ಹುಣ್ಣಿಮೆ ಮತ್ತು ತ್ರಿಪುರರಿ ಹುಣ್ಣಿಮೆ ಎಂದು ಕೂಡಾ ಪ್ರಖ್ಯಾತವಾಗಿದೆ. ಇದನ್ನು ಕೆಲವೊಮ್ಮೆ ದೇವ-ದಿವಾಲಿ ಅಥವಾ ದೇವ-ದೀಪಾವಳಿ -ದೇವರ ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ.[೧] ಕಾರ್ತಿಕ ಹುಣ್ಣಿಮೆ ಹಬ್ಬವು ಸಿಖ್ಖರ ಹಬ್ಬವಾದ ಗುರುನಾನಕ್ ಜಯಂತಿಯೊಂದಿಗೆ ಏಕಕಾಲಕ್ಕೆ ನಡೆಯುತ್ತದೆ.

ಹಿಂದೂ ಧರ್ಮದಲ್ಲಿ ಈ ಹಬ್ಬದ ಪ್ರಾಮುಖ್ಯತೆ[ಬದಲಾಯಿಸಿ]

ಇಲ್ಲಿ, ಐದು ತಲೆಯ ತ್ರಿಪುರಾಂತಕನು ಮೇರು ಪರ್ವತದಿಂದ ಮಾಡಲಾದ ಬಿಲ್ಲಿನಿಂದ ತ್ರಿಪುರನತ್ತ (ಬಲಮೂಲೆಯ ಮೇಲ್ಭಾಗದ ತುದಿ) ಬಾಣವೊಂದನ್ನು ಗುರಿಯಿಡುವುದನ್ನು ನೋಡಬಹುದು, ಸರ್ಪ ವಾಸುಕಿಯು ಅದರ ಹೆದೆಯಾಗಿ ನೋಡಬಹುದು. ನಾಲ್ಕು ತಲೆಯ ಬ್ರಹ್ಮ ದೇವನನ್ನು ನೋಡಬಹುದು. ಸೂರ್ಯ ಮತ್ತು ಚಂದ್ರನನ್ನು ರಥದ ಚಕ್ರಗಳಾಗಿ ಚಿತ್ರಿಸಲಾಗಿದೆ.

ತ್ರಿಪುರಿ ಹುಣ್ಣಿಮೆ ಅಥವಾ ತ್ರಿಪುರರಿ ಹುಣ್ಣಿಮೆ ಎಂಬ ಹೆಸರು ತ್ರಿಪುರಾಸುರನೆಂಬ ರಾಕ್ಷಸನ ಶತ್ರುವಾದ ತ್ರಿಪುರರಿ ಯಿಂದ ಬಂದಿದೆ. ತ್ರಿಪುರರಿ ಎಂಬುದು ಶಿವನ ಉಪನಾಮವಾಗಿದೆ. ಶಿವನು ತನ್ನ ತ್ರಿಪುರಾಂತಕನ ರೂಪದಲ್ಲಿ (“ತ್ರಿಪುರಾಸುರನನ್ನು ವಧಿಸಿದವ”) ಈ ದಿನದಂದು ರಾಕ್ಷಸನನ್ನು ಕೊಂದನು.[೨] ತ್ರಿಪುರಾಸುರನು ಇಡೀ ವಿಶ್ವವನ್ನೇ ಆಕ್ರಮಣ ಮಾಡಿದನು ಮತ್ತು ದೇವಾನುದೇವತೆಗಳನ್ನು ಸೋಲಿಸಿದನು. ಅವನು ಆಕಾಶದಲ್ಲಿ ಮೂರು ನಗರಗಳನ್ನು ಕೂಡಾ ನಿರ್ಮಿಸಿದನು, ಅವುಗಳನ್ನು ಒಟ್ಟಾಗಿ "ತ್ರಿಪುರ" ಎಂದು ಕರೆಯಲಾಗುತ್ತದೆ. ಶಿವನು ತನ್ನ ಒಂದೇ ಬಾಣದಿಂದ ರಾಕ್ಷಸನನ್ನು ಕೊಂದು ಅವನ ನಗರಗಳನ್ನು ನಾಶ ಮಾಡಿದನು-ಇದರಿಂದ ದೇವತೆಗಳು ಬಹಳವಾಗಿ ಹರ್ಷಿತರಾದರು ಮತ್ತು ಆ ದಿನವನ್ನು ಬೆಳಕಿನ ಹಬ್ಬ ಎಂದು ಘೋಷಿಸಿದರು. ಈ ದಿನವನ್ನು ದೇವತೆಗಳ ದೀಪಾವಳಿ -“ದೇವ-ದೀಪಾವಳಿ” ಎಂದೂ ಕರೆಯಲಾಗುತ್ತದೆ. ದೀಪಾವಳಿಯು ಹಿಂದೂಗಳ ಬೆಳಕಿನ ಹಬ್ಬವಾಗಿದೆ.[೩]

ಕಾರ್ತಿಕ ಹುಣ್ಣಿಮೆಯು ವಿಷ್ಣುವಿನ ಮೀನಿನ ಮೂರ್ತರೂಪ (ಅವತಾರ) ವಾದ ಮತ್ಸ್ಯನ ಜನ್ಮದಿನವೂ ಆಗಿದೆ. ತುಳಸಿ ಗಿಡದ ಮತ್ತು ಮತ್ತು ಯುದ್ದದ ದೇವರು ಮತ್ತು ಶಿವನ ಪುತ್ರನಾದ ಕಾರ್ತಿಕೇಯನ ಮೂರ್ತರೂಪವಾದ ವೃಂದರ ಜನ್ಮದಿನವೂ ಸಹ ಆಗಿದೆ. ಈ ದಿನವನ್ನು ವಿಷ್ಣುವಿನ ಅವತಾರವಾದ ಕೃಷ್ಣನ ಪ್ರಿಯತಮೆಯಾದ ರಾಧಾಳಿಗೆ ಆತ್ಮೀಯವೆಂದೂ ಪರಿಗಣಿಸಲಾಗಿದೆ. ಈ ದಿನದಂದು ರಾಧಾ ಮತ್ತು ಕೃಷ್ಣರು ರಾಸ ನೃತ್ಯವನ್ನು ಮಾಡಿದರೆಂದು ಮತ್ತು ಕೃಷ್ಣನು ರಾಧೆಯನ್ನು ವರಿಸಿದನೆಂದು ನಂಬಲಾಗಿದೆ. ಈ ದಿನವನ್ನು ಮೃತ ಪೂರ್ವಜರಾದ ಪಿತೃಗಳಿಗೆ ಕೂಡ ಸಮರ್ಪಿಸಲಾಗುತ್ತದೆ.[೩][೪]

ಶತ್ರುಗಳ ಮೇಲೆ ವಿಜಯವನ್ನು ಸಂಪಾದನೆ ಮಾಡಲು ಶಾಕಮೇಧವೆಂಬ ತ್ಯಾಗವನ್ನು ಮಾಡಿದಾಗ ಪುರಾತನ ಕಾಲಕ್ಕೆ ಈ ಹಬ್ಬದ ಮೂಲವು ನೆಲೆಯಾಗಿದೆಯೆಂದು ಆಂಡರ್‌ಹಿಲ್ ನಂಬುತ್ತಾನೆ.[೫]

ಹಿಂದೂ ಸಂಪ್ರದಾಯಗಳು[ಬದಲಾಯಿಸಿ]

ಕಾರ್ತಿಕ ಹುಣ್ಣಿಮೆಯು ವಿಷ್ಣುವು ನಿದ್ರಿಸುವನೆಂದು ನಂಬಲಾದ ನಾಲ್ಕು ತಿಂಗಳ ಅವಧಿಯಾದ ಚಾತುರ್ಮಾಸದ ಮುಕ್ತಾಯವನ್ನು ಸೂಚಿಸುವ ಪ್ರಬೋಧಿನಿ ಏಕಾದಶಿಯೊಂದಿಗೆ ನಿಕಟವಾಗಿ ಸಂಬಂಧಿಸಿದೆ. ಪ್ರಬೋಧಿನಿ ಏಕಾದಶಿಯು ದೇವರು ನಿದ್ರೆಯಿಂದ ಎಚ್ಚರವಾಗುವುದನ್ನು ಸೂಚಿಸುತ್ತದೆ. ಚಾತುರ್ಮಾಸಪ್ರಾಯಶ್ಚಿತ್ತವು ಈ ದಿನದಂದು ಮುಕ್ತಾಯಗೊಳ್ಳುತ್ತದೆ. ಪ್ರಬೋಧಿನಿ ಏಕಾದಶಿಯಂದು ಪ್ರಾರಂಭವಾಗುವ ಬಹಳಷ್ಟು ಜಾತ್ರೆಗಳು ಕಾರ್ತಿಕ ಹುಣ್ಣಿಮೆಯಂದು ಮುಕ್ತಾಯಗೊಳ್ಳುತ್ತವೆ, ಕಾರ್ತಿಕ ಹುಣ್ಣಿಮೆಯು ಸಾಮಾನ್ಯವಾಗಿ ಜಾತ್ರೆಯ ಪ್ರಮುಖ ದಿನವಾಗಿರುತ್ತದೆ.[೩] ಈ ದಿನದಂದು ಮುಕ್ತಾಯಗೊಳ್ಳುವ ಜಾತ್ರೆಗಳಲ್ಲಿ ಪಂಢರಾಪುರದಲ್ಲಿನ ಪ್ರಬೋಧಿನಿ ಏಕಾದಶಿ ಆಚರಣೆ ಮತ್ತು ಪುಷ್ಕರ ಮೇಳ ಒಳಗೊಂಡಿದೆ. ಪ್ರಬೋಧಿನಿ ಏಕಾದಶಿಯಿಂದ ಆಚರಣೆ ಮಾಡಬಹುದಾದ ತುಳಸಿ ವಿವಾಹವನ್ನು ಆಚರಿಸಲು ಕಾರ್ತಿಕ ಪೂರ್ಣಿಮೆಯ ಕೊನೆಯ ದಿನವಾಗಿದೆ.

ಪುಷ್ಕರ್ ರಾಜಸ್ಥಾನದಲ್ಲಿ, ಪುಷ್ಕರ ಜಾತ್ರೆ ಅಥವಾ ಪುಷ್ಕರ ಮೇಳ ವು ಪ್ರಬೋಧಿನಿ ಏಕಾದಶಿಯಂದು ಪ್ರಾರಂಭವಾಗುತ್ತದೆ ಮತ್ತು ಕಾರ್ತಿಕ ಪೂರ್ಣಿಮೆಯ ತನಕ ಮುಂದುವರಿಯುತ್ತದೆ, ಮತ್ತು ಇಲ್ಲಿ ಕಾರ್ತಿಕ ಪೂರ್ಣಿಮೆಯು ಅತೀ ಪ್ರಮುಖವಾಗಿರುತ್ತದೆ. ಈ ಮೇಳವು ಬ್ರಹ್ಮ ದೇವನ ಸ್ಮರಣಾರ್ಥ ನಡೆಯುತ್ತದೆ, ಅವನ ದೇವಸ್ಥಾನವು ಪುಷ್ಕರ್‌ನಲ್ಲಿದೆ. ಕಾರ್ತಿಕ ಹುಣ್ಣಿಮೆಯಂದು ಪುಷ್ಕರ್ ಸರೋವರದಲ್ಲಿ ಪುಣ್ಯ ಸ್ನಾನ ಮಾಡಿದರೆ ಅದು ಮೋಕ್ಷಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಕಾರ್ತಿಕ ಹುಣ್ಣಿಮೆಯಂದು ಮೂರು ಪುಷ್ಕರಗಳಿಗೆ ಪ್ರದಕ್ಷಿಣೆಯನ್ನು ಮಾಡಿದರೆ ಬಹಳ ಪುಣ್ಯಪ್ರದವೆಂದು ನಂಬಲಾಗಿದೆ. ಸಾಧುಗಳು ಇಲ್ಲಿ ಸೇರುತ್ತಾರೆ ಮತ್ತು ಏಕಾದಶಿಯಿಂದ ಹುಣ್ಣಿಮೆಯವರೆಗೆ ಗುಹೆಗಳಲ್ಲಿ ಉಳಿಯುತ್ತಾರೆ. ಪುಷ್ಕರ್‌ನಲ್ಲಿ ಜಾತ್ರೆಗಾಗಿ ಸುಮಾರು 200,000 ಜನರು ಸೇರುತ್ತಾರೆ ಮತ್ತು 25,000 ಒಂಟೆಗಳು ಸಹ ಹಾಜರಿರುತ್ತವೆ. ಪುಷ್ಕರ್‌ ಮೇಳವು ಏಷ್ಯಾದ ಅತೀ ದೊಡ್ಡ ಒಂಟೆಗಳ ಮೇಳವಾಗಿದೆ.[೬][೭][೮][೯][೧೦]

ಕಾರ್ತಿಕ ಪೂರ್ಣಿಮೆಯಂದು ಪುಣ್ಯಕ್ಷೇತ್ರದಲ್ಲಿನ ತೀರ್ಥ (ಸರೋವರ ಅಥವಾ ನದಿಯಂತಹ ಪವಿತ್ರ ನೀರಿನ ಸ್ಥಳ) ದಲ್ಲಿ ಪುಣ್ಯಸ್ನಾನವನ್ನು ಮಾಡಲು ಸೂಚಿಸಲಾಗುತ್ತದೆ. ಈ ಪವಿತ್ರ ಸ್ನಾನವನ್ನು “ಕಾರ್ತಿಕ ಸ್ನಾನ” ಎನ್ನಲಾಗುತ್ತದೆ.[೩][೧೧] ಪುಷ್ಕರ್‌ನಲ್ಲಿ ಅಥವಾ ಗಂಗಾನದಿಯಲ್ಲಿ, ಅದರಲ್ಲೂ ವಿಶೇಷವಾಗಿ ವಾರಣಾಸಿಯಲ್ಲಿ ಪವಿತ್ರ ಸ್ನಾನವನ್ನು ಮಾಡಿದರೆ ತುಂಬಾ ಶ್ರೇಯಸ್ಕರವೆಂದು ಪರಿಗಣಿಸಲಾಗಿದೆ. ವಾರಣಾಸಿಯ ಗಂಗಾನದಿಯಲ್ಲಿ ಸ್ನಾನ ಮಾಡಲು ಕಾರ್ತಿಕ ಪೂರ್ಣಿಮೆಯು ಅತ್ಯಂತ ಜನಪ್ರಿಯ ದಿನವಾಗಿದೆ.[೪]

ದೇವಸ್ಥಾನಗಳಲ್ಲಿ ದೇವತೆಗಳಿಗೆ ಅನ್ನವನ್ನು ಸಮರ್ಪಿಸುವ ಅನ್ನಕೂಟವು ನಡೆಯುತ್ತದೆ.[೩] ಹುಣ್ಣಿಮೆಯ ದಿನವಾದ ಅಶ್ವಿನದಂದು ವ್ರತ ಕೈಗೊಂಡ ಜನರು ಅದನ್ನು ಕಾರ್ತಿಕ ಹುಣ್ಣಿಮೆಯ ದಿನದಂದು ಕೊನೆಗೊಳಿಸುತ್ತಾರೆ. ಈ ದಿನದಂದು ವಿಷ್ಣು ದೇವನನ್ನು ಸಹ ಪೂಜಿಸಲಾಗುತ್ತದೆ. ಯಾವುದೇ ಪ್ರಕಾರದ ದೌರ್ಜನ್ಯ (ಹಿಂಸೆ ) ಯನ್ನು ಈ ದಿನದಂದು ನಿಷೇಧಿಸಲಾಗಿದೆ. ಕ್ಷೌರ ಮಾಡುವುದು, ತಲೆ ಕೂದಲು ಕತ್ತರಿಸುವುದು, ಮರಗಳನ್ನು ಕಡಿಯುವುದು,ಹಣ್ಣುಗಳನ್ನು ಮತ್ತು ಹೂಗಳನ್ನು ಕೀಳುವುದು, ಬೆಳೆಗಳ ಕಟಾವು ಮತ್ತು ಪ್ರತಿ ಸ್ತ್ರೀ ಅಥವಾ ಪುರುಷುರ ಮಿಲನವೂ ಕೂಡ ಇದರಲ್ಲಿ ಒಳಗೊಂಡಿದೆ.[೧೧] ದಾನಕಾರ್ಯಗಳು ಅದರಲ್ಲೂ ವಿಶೇಷವಾಗಿ ಗೋದಾನ, ಬ್ರಾಹ್ಮಣರಿಗೆ ಆಹಾರ ನೀಡುವುದು, ಉಪವಾಸಗಳಂತಹ ಧಾರ್ಮಿಕ ಕಾರ್ಯಗಳನ್ನು ಕಾರ್ತಿಕ ಹುಣ್ಣಿಮೆಯಂದು ಮಾಡಲು ಸೂಚಿಸಲಾಗುತ್ತದೆ.[೪]

ಶಿವನ ಆರಾಧನೆಗೆ ಮೀಸಲಾಗಿರುವ ಹಬ್ಬಗಳಲ್ಲಿ ಮಹಾಶಿವರಾತ್ರಿಯ ನಂತರದ ಏಕಮಾತ್ರ ಹಬ್ಬವು ತ್ರಿಪುರ ಪೂರ್ಣಿಮೆಯಾಗಿದೆ.[೫] ತ್ರಿಪುರಾಸುರನನ್ನು ಕೊಂದ ಜ್ಞಾಪಕಾರ್ಥವಾಗಿ, ಶಿವನ ಪ್ರತಿಮೆಯನ್ನು ಮೆರವಣಿಗೆ ಮಾಡಲಾಗುತ್ತದೆ. ದಕ್ಷಿಣ ಭಾರತದಲ್ಲಿನ ದೇವಸ್ಥಾನದ ಸಂಕೀರ್ಣಗಳನ್ನು ರಾತ್ರಿಯಾದ್ಯಂತ ಬೆಳಗಿಸಲಾಗುತ್ತದೆ. ದೇವಾಲಯಗಳಲ್ಲಿ ದೀಪಮಾಲೆಗಳು ಅಥವಾ ದೀಪಗಳ ಗೋಪುರಗಳನ್ನು ಬೆಳಗಿಸಲಾಗುತ್ತದೆ. ಜನರು ಸಾವಿನ ನಂತರ ನರಕದಿಂದ ಪಾರಾಗಲು 360 ಅಥವಾ 720 ದೀಪದ ಬತ್ತಿಗಳನ್ನು ದೇವಸ್ಥಾನದಲ್ಲಿ ಬೆಳಗುತ್ತಾರೆ.[೩] 720 ದೀಪದ ಬತ್ತಿಗಳು ಹಿಂದೂ ಪಂಚಾಂಗದ 360 ಹಗಲು ಮತ್ತು ರಾತ್ರಿಗಳ ಪ್ರತೀಕವಾಗಿದೆ.[೪] ವಾರಣಾಸಿ ಯಲ್ಲಿ, ನದಿ ತೀರದ ಸ್ನಾನ ಘಟ್ಟಗಳು ಸಾವಿರಾರು ದೀಪಗಳಿಂದ (ಪ್ರಕಾಶಮಾನವಾಗಿ ಹೊತ್ತಿಸಿದ ಮಣ್ಣಿನ ಹಣತೆಗಳು) ಜೀವಂತಿಕೆ ಪಡೆದುಕೊಳ್ಳುತ್ತದೆ.[೪] ಜನರು ಪುರೋಹಿತರುಗಳಿಗೆ ದೀಪಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ದೀಪಗಳನ್ನು ಮನೆಗಳಲ್ಲಿ ಮತ್ತು ಶಿವನ ದೇವಸ್ಥಾನಗಳಲ್ಲಿ ರಾತ್ರಿಯಿಡೀ ಇಡಲಾಗುತ್ತದೆ. ಈ ದಿನವನ್ನು “ಕಾರ್ತಿಕ ದೀಪರತ್ನ”- ಕಾರ್ತಿಕದಲ್ಲಿನ ದೀಪಗಳ ರತ್ನಾಭರಣವೆಂದು ಪ್ರಚಲಿತವಾಗಿದೆ.[೫] ದೀಪಗಳನ್ನು ನದಿಗಳಲ್ಲಿ ಸಣ್ಣದಾದ ದೋಣಿಗಳಲ್ಲಿ ತೇಲಿ ಬಿಡಲಾಗುತ್ತದೆ. ತುಳಸಿ, ಪವಿತ್ರವಾದ ಅಂಜೂರದ ಹಣ್ಣು ಮತ್ತು ನೆಲ್ಲಿ ಮರಗಳ ಕೆಳಗೆ ದೀಪಗಳನ್ನಿಡಲಾಗುತ್ತದೆ. ನೀರಿನಲ್ಲಿರುವ ಮತ್ತು ಮತ್ತು ಮರಗಳ ಕೇಳಗಿರುವ ದೀಪಗಳನ್ನು ಕಣ್ತುಂಬಿಕೊಳ್ಳುವ ಮೀನುಗಳು, ಕ್ರಿಮಿ-ಕೀಟಗಳು ಮತ್ತು ಪಕ್ಷಿಯಾದಿಗಳು ಅಂತಿಮವಾಗಿ ಮೋಕ್ಷ ಪಡೆಯುತ್ತವೆ ಎಂದು ನಂಬಲಾಗುತ್ತದೆ.[೧೧]

ಜೈನಧರ್ಮ[ಬದಲಾಯಿಸಿ]

ಪಾಲಿಟಾಣಾ ದೇವಾಲಯಗಳು

ಕಾರ್ತಿಕ ಪೂರ್ಣಿಮಾ ಎನ್ನುವುದು ಜೈನರಿಗೆ ಪ್ರಮುಖ ಧಾರ್ಮಿಕ ದಿನವಾಗಿದ್ದು, ಅವರು ಅದನ್ನು ಅತ್ಯಂತ ಪ್ರಸಿದ್ಧ ಜೈನ ಯಾತ್ರಾ ಕೇಂದ್ರವಾದ ಪಾಲಿಟಾಣಾಗೆ ಭೇಟಿ ನೀಡುವ ಮೂಲಕ ಆಚರಿಸುತ್ತಾರೆ.[೧೨] ಪವಿತ್ರ ಯಾತ್ರೆ (ಪ್ರಯಾಣ)ವನ್ನು ಕೈಗೊಳ್ಳಲು ಸಾವಿರಾರು ಜನರು ಕಾರ್ತಿಕ ಪೂರ್ಣಿಮಾ ದಿನದಂದು ಪಾಲಿಟಾಣಾ ತಾಲೂಕಿನ ಶತ್ರುಂಜನ ಬೆಟ್ಟಗಳ ತಪ್ಪಲಿಗೆ ಬಂದು ಸೇರುತ್ತಾರೆ. ಶ್ರೀ ಶತ್ರುಂಜಯ ತೀರ್ಥ ಯಾತ್ರೆ ಎಂದು ಕರೆಯಲಾಗುವ ಈ ನಡಿಗೆಯು ಜೈನ ಭಕ್ತಾದಿಯ ಜೀವನದಲ್ಲಿ ಪ್ರಮುಖ ಧಾರ್ಮಿಕ ಘಟನೆಯಾಗಿದೆ, ಅವರು ಬೆಟ್ಟದ ಮೇಲಿರುವ ಆದಿನಾಥ ಭಗವಾನರನ್ನು ಪೂಜಿಸಲು ಕಾಲ್ನಡಿಗೆಯಲ್ಲಿ 216 ಕಿಮೀ ದೂರದ ಕಠಿಣ ಬೆಟ್ಟ ಪ್ರದೇಶವನ್ನು ಕ್ರಮಿಸುತ್ತಾರೆ.

ಜೈನರಿಗೆ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗಿರುವ ಈ ದಿನವು ಬೆಟ್ಟದಲ್ಲಿನ ನಡಿಗೆಗೂ ಪ್ರಾಧಾನ್ಯತೆ ಪಡೆದಿದೆ, ಏಕೆಂದರೆ ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮುಚ್ಚಿಲಾಗಿರುವ ಅದನ್ನು ಕಾರ್ತಿಕ ಪೂರ್ಣಿಮೆಯಂದು ಭಕ್ತಾದಿಗಳಿಗೆ ತೆರೆಯಲಾಗುತ್ತದೆ. ಕಾರ್ತಿಕ ಪೂರ್ಣಿಮೆಯ ದಿನವು ಜೈನ ಧರ್ಮದಲ್ಲಿ ಪ್ರಾಧಾನ್ಯತೆ ಪಡೆದಿದೆ ಮತ್ತು ಮಳೆಗಾಲದ ನಾಲ್ಕು ತಿಂಗಳುಗಳ ಕಾಲ ಭಕ್ತಾದಿಗಳು ತಮ್ಮ ಭಗವಂತರನ್ನು ಪೂಜಿಸುವುದರಿಂದ ದೂರವುಳಿಯುತ್ತಾರೆ ಮತ್ತು ನಂತರದ ಪ್ರಥಮ ದಿನವು ಅತ್ಯಧಿಕ ಸಂಖ್ಯೆಯ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಜೈನ ಧರ್ಮದ ಪ್ರಕಾರ, ಮೊದಲ ತೀರ್ಥಂಕರರಾದ ಆದಿನಾಥರು ತಮ್ಮ ಮೊದಲ ಧರ್ಮೋಪದೇಶವನ್ನು ನೀಡಲು ಭೇಟಿ ನೀಡುವ ಮೂಲಕ ಬೆಟ್ಟವನ್ನು ಪಾವನಗೊಳಿಸಿದರು. ಜೈನ ಪುರಾಣಗಳ ಪ್ರಕಾರ, ಲಕ್ಷಾಂತರ ಸಾಧುಗಳು ಮತ್ತು ಸಾಧ್ವಿಗಳು ಈ ಬೆಟ್ಟಗಳಲ್ಲಿ ಮುಕ್ತಿಯನ್ನು ಪಡೆದರು.[೧೨]

ಇವನ್ನೂ ಗಮನಿಸಿ[ಬದಲಾಯಿಸಿ]

  • ಹಿಂದೂ ಹಬ್ಬಗಳ ಪಟ್ಟಿ

ಉಲ್ಲೇಖಗಳು[ಬದಲಾಯಿಸಿ]

  1. ಪ್ರಭೋದಿನಿ ಏಕಾದಶಿ ಯನ್ನು ಕೆಲವು ಧರ್ಮಗಳಲ್ಲಿ ದ್ವಾ-ದೀವಾಳಿ ಎಂದು ಕರೆಯಲಾಗುತ್ತದೆ.
  2. ಲ್ಯಾಂಡ್ ಎಂಡ್ ಪ್ಯೂಪಲ್ ಆಫ್ ಇಂಡಿಯನ್ ಸ್ಟೇಟ್ಸ್ ಎಂಡ್ ಯೂನಿಯನ್ ಟೆರ್ರಿಟರೀಸ್: 36 ಸಂಪುಟಗಳಲ್ಲಿ, ಎಸ್. ಸಿ. ಭಟ್, ಗೋಪಾಲ ಕೆ. ಭಾರ್ಗವ ಅವರಿಂದ ಸಂಪುಟ 8 ಪು.513
  3. ೩.೦ ೩.೧ ೩.೨ ೩.೩ ೩.೪ ೩.೫ ಲ್ಯಾಂಡ್ ಎಂಡ್ ಪ್ಯೂಪಲ್ ಆಫ್ ಇಂಡಿಯನ್ ಸ್ಟೇಟ್ಸ್ ಎಂಡ್ ಯೂನಿಯನ್ ಟೆರ್ರಿಟರೀಸ್. Date of Karhik poornima in 2019 is November/12- Tuesday 6zDe8C&pg=PA176&dq=Tripurari+Purnima&as_brr=3&client=firefox-a#v=onepage&q=Tripurari%20Purnima&f=false 33. [ಶಾಶ್ವತವಾಗಿ ಮಡಿದ ಕೊಂಡಿ]ದಮನ್ & ದಿಯು, ಶಂಕರಲಾಲ್ ಸಿ ಭಟ್ ಅವರಿಂದ ಪು.175-6
  4. ೪.೦ ೪.೧ ೪.೨ ೪.೩ ೪.೪ [ಗೆಸ್ಟ್ಸ್ ಆಟ್ ಗಾಡ್ಸ್ ವೆಡ್ಡಿಂಗ್: ಸೆಲೆಬ್ರೇಟಿಂಗ್ ಕಾರ್ತಿಕ್ ಅಮಾಂಗ್ ದಿ ವುಮನ್ ಆಫ್ ಬನಾರಸ್, ಟ್ರೇಸಿ ಪಿಂಚಮ್ಯಾನ್ ಅವರಿಂದ ಪು. 83-7]
  5. ೫.೦ ೫.೧ ೫.೨ ದಿ ಹಿಂದೂ ರಿಲೀಜಿಯಸ್ ಇಯರ್, ಎಮ್.ಎಮ್. ಅಂಡರ್‌ಹಿಲ್ ಅವರಿಂದ ಪು.95-96
  6. ಫೇರ್ಸ್ ಎಂಡ್ ಫೆಸ್ಟಿವಲ್ಸ್ ಆಫ್ ಇಂಡಿಯಾ ಎಸ್.ಪಿ. ಶರ್ಮಾ, ಸೀಮಾ ಗುಪ್ತಾ ಇವರಿಂದ ಪು 133-34
  7. ನಾಗ್ ಹಿಲ್ ಆಟ್ ಪುಷ್ಕರ್ ಬ್ರಿಮ್ಸ್ ವಿಥ್ ಸಾಧೂಸ್, 27 ಅಕ್ಟೋಬರ್ 2009, ಟೈಮ್ಸ್ ಆಫ್ ಇಂಡಿಯಾ
  8. ಲ್ಯಾಂಡ್ ಎಂಡ್ ಪ್ಯೂಪಲ್ ಆಫ್ ಇಂಡಿಯನ್ ಸ್ಟೇಟ್ಸ್ ಎಂಡ್ ಯೂನಿಯನ್ ಟೆರ್ರಿಟರೀಸ್: 36 ಸಂಪುಟಗಳಲ್ಲಿ, ಎಸ್. ಸಿ. ಭಟ್, ಗೋಪಾಲ ಕೆ. ಭಾರ್ಗವ ಅವರಿಂದ ಸಂಪುಟ 1 ಪು.347
  9. ವ್ಯೂಫೈಂಡರ್: 100 ಟಾಪ್ ಲೊಕೇಶನ್ಸ್ ಫಾರ್ ಗ್ರೇಟ್ ಟ್ರಾವೆಲ್ ಫೋಟೋಗ್ರಾಫಿ, ಕೀತ್ ವಿಲ್ಸನ್ ಅವರಿಂದ ಪು.18-9
  10. ಫ್ರೋಮರ್ಸ್ ಇಂಡಿಯಾ, ಪಿಪ್ಪಾ ಡೆ ಬ್ರಯಾನ್, ಕೀತ್ ಬೇನ್, ನೀಲೋಫರ್ ವೆಂಕಟ್ರಾಮನ್, ಶೋನಾರ್ ಜೋಶಿ ಅವರಿಂದ ಪು. 440
  11. ೧೧.೦ ೧೧.೧ ೧೧.೨ ಕೀಸ್ ಆಫ್ ಪವರ್: ಎ ಸ್ಟಡಿ ಆಫ್ ಇಂಡಿಯನ್ ರಿಚುವಲ್ ಎಂಡ್ ಬಿಲೀಫ್, ಜೆ. ಅಬೋಟ್ ಅವರಿಂದ ಪು.203-4
  12. ೧೨.೦ ೧೨.೧ "Pilgrims flock Palitana for Kartik Poornima yatra". ದಿ ಟೈಮ್ಸ್ ಆಫ್‌ ಇಂಡಿಯಾ. 2009-11-02. Retrieved 2009-11-03.

ಬಾಹ್ಯ ಕೊಂಡಿಗಳು[ಬದಲಾಯಿಸಿ]