ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
ವಿಕಿಪೀಡಿಯ ಇಂದ
(ಕಾಂಗೊ ಪ್ರಜಾತಂತ್ರಾತ್ಮಕ ಗಣರಾಜ್ಯ ಇಂದ ಪುನರ್ನಿರ್ದೇಶಿತ)
| ಧ್ಯೇಯ: Justice – Paix – Travail(ಫ್ರೆಂಚ್) "ನ್ಯಾಯ-ಶಾಂತಿ-ದುಡಿಮೆ" |
|
| ರಾಷ್ಟ್ರಗೀತೆ: ದಿಬೌತ್ ಕಾಂಗೊಲೈಸ್ | |
| ರಾಜಧಾನಿ | ಕಿನ್ಶಾಸಾ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಫ್ರೆಂಚ್ |
| ಸರಕಾರ | ಅರೆ ಅಧ್ಯಕ್ಷೀಯ ಗಣರಾಜ್ಯ |
| - ರಾಷ್ಟ್ರಾಧ್ಯಕ್ಷ | ಜೋಸೆಫ್ ಕಬೀಲ |
| - ಪ್ರಧಾನಿ | ಆಂಟೋಯ್ನ್ ಗಿಝೆಂಗಾ |
| ಸ್ವಾತಂತ್ರ್ಯ | |
| - ಬೆಲ್ಜಿಯಂನಿಂದ | ಜೂನ್ 30 1960 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 2,344,858 ಚದರ ಕಿಮಿ ; (12ನೆಯದು) |
| 905,351 ಚದರ ಮೈಲಿ | |
| - ನೀರು (%) | 3.3 |
| ಜನಸಂಖ್ಯೆ | |
| - 2007ರ ಅಂದಾಜು | 63,655,000 (20ನೆಯದು) |
| - 1984ರ ಜನಗಣತಿ | 29,916,800 |
| - ಸಾಂದ್ರತೆ | 25 /ಚದರ ಕಿಮಿ ; (179ನೆಯದು) 65 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
| - ಒಟ್ಟು | $46.491 ಬಿಲಿಯನ್ (78ನೆಯದು) |
| - ತಲಾ | $774 (174ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2004) |
|
| ಕರೆನ್ಸಿ | ಕಾಂಗೊಲೀಸ್ ಫ್ರಾಂಕ್ (CDF) |
| ಕಾಲಮಾನ | WAT, CAT (UTC+1 to +2) |
| - ಬೇಸಿಗೆ (DST) | ಪರಿಗಣನೆಯಲ್ಲಿಲ್ಲ (UTC+1 to +2) |
| ಅಂತರ್ಜಾಲ TLD | .cd |
| ದೂರವಾಣಿ ಕೋಡ್ | +243 |
ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಆಫ್ರಿಕಾ ಖಂಡದ ಮಧ್ಯಭಾಗದಲ್ಲಿ ವಿಷುವದ್ರೇಖೆಯ ಮೇಲಿನ ಒಂದು ಸಾರ್ವಭೌಮ ರಾಷ್ಟ್ರ. ಹಿಂದೆ ಇದು ಬೆಲ್ಜಿಯಂ ನ ಒಂದು ವಸಾಹತಾಗಿದ್ದಿತು. ಈ ದೇಶವು ಡಿ.ಆರ್. ಕಾಂಗೋ, ಕಾಂಗೋ ಕಿನ್ಶಾಸಾ, ಜಾಯಿರ್ ಎಂಬ ಇತರ ಹೆಸರುಗಳಿಂದಲೂ ಸಹ ಗುರುತಿಸಲ್ಪಡುತ್ತದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯವು ಆಫ್ರಿಕಾದ ಮೂರನೆಯ ಅತಿ ದೊಡ್ಡ ರಾಷ್ಟ್ರವಾಗಿದೆ. ಇದರ ಉತ್ತರಕ್ಕೆ ಮಧ್ಯ ಆಫ್ರಿಕಾದ ಗಣರಾಜ್ಯ ಮತ್ತು ಸುಡಾನ್ ಗಳು; ದಕ್ಷಿಣದಲ್ಲಿ ಉಗಾಂಡಾ, ರುವಾಂಡಾ, ಬುರುಂಡಿ, ಜಾಂಬಿಯಾ ಮತ್ತು ಅಂಗೋಲಾ ಗಳು; ಪ್ಪಶ್ಚಿಮಕ್ಕೆ ಕಾಂಗೋ ಗಣರಾಜ್ಯಗಳಿವೆ. ಪೂರ್ವದಲ್ಲಿ ಈ ದೇಶ ಮತ್ತು ಟಾಂಜಾನಿಯಾಗಳ ನಡುವೆ ಟಾಂಗನ್ಯೀಕಾ ಸರೋವರವಿರುವುದು. ಪಶ್ಚಿಮದಲ್ಲಿ ಸುಮಾರು ೪೦ ಕಿ.ಮೀ. ಗಳಷ್ಟು ಅಟ್ಲಾಂಟಿಕ್ ಮಹಾಸಾಗರದ ಕಿನಾರೆ ಪ್ರದೇಶವಿರುವುದು. ಕಾಂಗೋ ನದಿಯ ಕೊಳ್ಳವು ಸಂಪೂರ್ಣವಾಗಿ ಈ ರಾಷ್ಟ್ರದಲ್ಲಿಯೇ ಇದೆ. ಅಲ್ಲದೇ ನಾಡಿನ ಗಣನೀಯ ಭಾಗವು ಗೊಂಡಾರಣ್ಯವಾಗಿದೆ.