ಕರ್ಬಿ, ವಿಲಿಯಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಲಿಯಂ ಕರ್ಬಿ
ಜನನ13 ಅಕ್ಟೋಬರ್ 1817
ಯಾರ್ಕ್‍ಶೈರ್,ಇಂಗ್ಲೆಂಡ್
ಮರಣ23 ಜೂನ್ 1906
ನಯಾಗಾರ
ವೃತ್ತಿಬರಹಗಾರ
ರಾಷ್ಟ್ರೀಯತೆಕೆನಡಾ ದೇಶದ ಪ್ರಜೆ
ಪ್ರಮುಖ ಕೆಲಸ(ಗಳು)ದಿ ಗೋಲ್ಡನ್ ಡಾಗ್
ಬಾಳ ಸಂಗಾತಿಎಲಿಜಾ ಮೆಡಲೈನ್ ವಿಟ್‍ಮೋರ್
ಮಕ್ಕಳು3

ಪ್ರಭಾವಗಳು
  • James LeMoine

ಕರ್ಬಿ, ವಿಲಿಯಂ(13 ಒಕ್ಟೋಬರ್ 1817 – 23 ಜೂನ್ 1906) ಕೆನಡದ ಕಾದಂಬರಿಕಾರ. ಫ್ರೆಂಚರ ಆಳ್ವಿಕೆಯ ಕಾಲದ ಕ್ವಿಬೆಕಿನಲ್ಲಿನ ಐತಿಹಾಸಿಕ ಸಾಹಸಮಯ ಜನಜೀವನವನ್ನು ಚಿತ್ರಿಸುವ ದಿ ಗೋಲ್ಡನ್ ಡಾಗ್ (೧೮೭೭) ಎಂಬ ಕಾದಂಬರಿಯನ್ನು ರಚಿಸಿ ಖ್ಯಾತಿಗಳಿಸಿದ.

ಪರಿಚಯ[ಬದಲಾಯಿಸಿ]

  • ಈತ ಜನಿಸಿದ್ದು ಇಂಗ್ಲೆಂಡಿನ ಕಿಂಗ್ಸ್ಟನ್-ಅಪಾನ್-ಹಿಲ್ ಎಂಬಲ್ಲಿ. ಚಿಕ್ಕವನಿದ್ದಾಗಲೇ ತನ್ನ ತಾಯಿತಂದೆಯರೊಂದಿಗೆ ಸಂಯುಕ್ತ ಸಂಸ್ಥಾನಕ್ಕೆ ಬಂದು ಆಂಟೇರಿಯೋವಿನ ನಯಾಗರಾದಲ್ಲಿ ನೆಲೆಸಿದ (೧೮೩೯). ಅಲ್ಲಿ ಪತ್ರಿಕೋದ್ಯಮವನ್ನು ಕೈಗೊಂಡು ೨೦ ವರ್ಷಕ್ಕೂ ಹೆಚ್ಚು ಕಾಲ ನಯಾಗರಾ ಮೇಲ್ ಎಂಬ ಪತ್ರಿಕೆಯ ಸಂಪಾದಕನಾಗಿದ್ದ. ಸುಂಕದ ಅಧಿಕಾರಿಯಾಗೂ ಸೇವೆ ಸಲ್ಲಿಸಿದ್ದುಂಟು (೧೮೭೧-೯೫). ೧೮೮೩ರಲ್ಲಿ ಈತ ಕೆನಡದ ರಾಯಲ್ ಸೊಸೈಟಿಯ ಚಾರ್ಟರ್ ಫೆಲೋ ಆಗಿ ಆಯ್ಕೆ ಹೊಂದಿದ.

ಈತನ ಕೃತಿಗಳು[ಬದಲಾಯಿಸಿ]

ಒಟ್ಟಾರೆ ಈತ ಐದು ಪುಸ್ತಕಗಳನ್ನು ಬರೆದಿದ್ದಾನೆ.

  1. ಸಂಯುಕ್ತ ಸಾಮ್ರಾಜ್ಯದ ನಿಷ್ಠಾವಂತರ (ಯುನೈಟೆಡ್ ಎಂಪೈರ್ ಲಾಯಲಿಸ್ಟ್‌ಂ) ವಲಸೆಯನ್ನು ಚಿತ್ರಿಸುವ, ಸ್ಪೆನ್ಸರನ ಕಾವ್ಯ ಮಾದರಿಯ ಕಾವ್ಯ ದಿ ಯು. ಇ. (೧೮೫೯);
  2. ದಿ ಗೋಲ್ಡನ್ ಡಾಗ್; ಮೆಮೊಯರ್ಸ್ ಆಫ್ ಸರ್ವೋಸ್ ಫ್ಯಾಮಿಲಿ (೧೮೮೪);
  3. ಕೆನಡದ ಪ್ರಾಕೃತಿಕ ದೃಶ್ಯಾವಳಿ, ಅಲ್ಲಿನ ಜನರ ಸಂಪ್ರದಾಯ ಮತ್ತು ಚರಿತ್ರೆಗಳನ್ನು ವರ್ಣಿಸುವ ಕವನಮಾಲೆ ಕೆನಡಿಯನ್ ಇಡಿಲ್ಸ್‌ (೧೮೯೪);
  4. ನಯಾಗರಾ ಜಿಲ್ಲೆಯ ಇತಿಹಾಸವನ್ನು ಕುರಿತ ಆನಲ್ಸ್‌ ಆಫ್ ನಯಾಗರಾ (೧೮೯೬) ಎಂಬ ಗದ್ಯಕೃತಿ-ಇವೇ ಆ ಐದು ಪುಸ್ತಕಗಳು.
  • ದಿ ಗೋಲ್ಡನ್ ಡಾಗ್ ಇವನ ಮೇರುಕೃತಿ. ನ್ಯೂ ಫ್ರಾನ್ಸಿನ ಮೇಲ್ವಿಚಾರಕನಾದ ಫ್ರಾನ್ಕಾಯ್ಸ್‌ ಬಿಗಾಟನ ಜೀವನದ ಘಟನಾವಳಿಗಳನ್ನು ರೂಪಿಸುವ ಪ್ರಣಯ-ಸಾಹಸ-ರಮ್ಯಮಯ ಕಥೆಯನ್ನು ಚಿತ್ರಿಸುವಲ್ಲಿ, ಶ್ರೀಮಂತಿಕೆಯ ಮತ್ತು ಪುರ್ವಾಚಾರದ ಮೌಲ್ಯಗಳಲ್ಲಿ, ಶೌರ್ಯದಲ್ಲಿ, ಅಧಿಕಾರ ದಲ್ಲಿ ಪ್ರಭು ಮತ್ತು ರಾಜ್ಯನಿಷ್ಠೆಯಲ್ಲಿ, ಸಂಪ್ರದಾಯ ಮತ್ತು ಧರ್ಮನಿಷ್ಠೆಗಳಲ್ಲಿ ತನಗಿದ್ದ ನಂಬಿಕೆಗಳನ್ನು ರಸವತ್ತಾಗಿ ಈತ ಚಿತ್ರಿಸಿದ್ದಾನೆ. ಈ ಕೃತಿ ಕೆನಡದ ಅಭಿಜಾತ ಸಾಹಿತ್ಯದ ಶ್ರೇಣಿಗೆ ಸೇರಿಹೋಗಿದೆ. ನಯಾಗರಾದಲ್ಲೇ ಈತ ನಿಧನನಾದ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]