ಕರ್ನಾಟಕ ಸರ್ಕಾರದ ಮುಂಗಡ ಪತ್ರ-2015-2016

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ರಾಜ್ಯ ಸರ್ಕಾರದ ಬಜೆಟ್ ಮಂಡನೆಗೆ ಮುಖ್ಯಮಂತ್ರಿಯಾದ ಹಣಕಾಸು ಸಚಿವ, ಸಿಎಂ ಸಿದ್ದರಾಮಯ್ಯ ಮಂಡಿಸಿದ ಕರ್ನಾಟಕ ಬಜೆಟ್ 2015-16ರಲ್ಲಿ ಈ ಅವಧಿಯ ಮೂರನೇ ಹಾಗೂ ಒಟ್ಟಾರೆಯಾಗಿ ಹತ್ತನೆ ಬಜೆಟ್‌ಅನ್ನು 2015 ಮಾರ್ಚ್ 13ರಂದು ಮಂಡಿಸಿದ್ದಾರೆ.

ಕರ್ನಾಟಕದ ಬಜೆಟ್ 2015-16 ರ ಬಜೆಟ್‌ ಗಾತ್ರ ₹ 1,42,534 ಕೋಟಿ ರೂಪಾಯಿ.

ಮುಖ್ಯಾಂಶ[ಬದಲಾಯಿಸಿ]

ಬಜೆಟ್ 2015-16
ವಲಯವಾರು ಹಂಚಿಕೆ
  1. ಶಿಕ್ಷಣ 13%
  2. ಸಾಲ ತೀರುವಳಿ 11%
  3. ಹಣಕಾಸು 9%
  4. ನೀರಾವರಿ 8%
  5. ಇಂಧನ 8%
  6. ನಗರಾಭಿವೃದ್ಧಿ 7%
  7. ಇತರೆ 44%ರೂ
  • ಬೆಂಗಳೂರು: ಬಜೆಟ್‌ನಲ್ಲಿ ವಲಯವಾರು ಹಂಚಿಕೆಯಲ್ಲಿ ಶಿಕ್ಷಣ ಸಿಂಹಪಾಲು ಪಡೆದಿದೆ.
ಮುಖ್ಯ ವಾದವು
  • ವಾಣಿಜ್ಯ ಮತ್ತು ಕೈಗಾರಿಕೆಗೆ ರೂ1,111 ಕೋಟಿ
  • ರಾಜ್ಯದ ಕೈಗಾರೀಕರಣ ಉತ್ತೇಜನಕ್ಕೆ ಅಗತ್ಯ ಯೋಜನೆ ರೂಪಿಸಲು ‘ಮುನ್ನೋಟ ತಂಡ’ ರಚನೆ. ಬೆಂಗಳೂರು - ಮುಂಬಯಿ ಆರ್ಥಿಕ ಕಾರಿಡಾರ್‌ ‍ನ ಅಭಿವೃದ್ಧಿಗೆ ಯೋಜನೆ. ರಾಷ್ಟ್ರೀಯ ಹೆದ್ದಾರಿ 4ರ ಸಮೀಪ ಮುಂದಿನ 5 ವರ್ಷಗಳಲ್ಲಿ 10,000 ಎಕರೆ ಪ್ರದೇಶದ ಅಭಿವೃದ್ಧಿಗೆ ಗುರಿ. ಕೆ.ಐ.ಎ.ಡಿ.ಬಿ/ಕೆ.ಎಸ್.ಎಸ್.ಐ.ಡಿ.ಸಿ/ಸಹಕಾರ ಸಂಘಗಳು ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ ₨100 ಕೋಟಿ. ಸೂಕ್ಷ್ಮ, ಸಣ್ಣ , ಮಧ್ಯಮ, ಬೃಹತ್ ಕೈಗಾರಿಕೆಗಳ ಪ್ರಾರಂಭ ದಿಂದ 2 ಲಕ್ಷ ಜನರಿಗೆ ಉದ್ಯೋಗಾವಕಾಶ ಗುರಿ
  • ಕಂದಾಯ ರೂ 4,827 ಕೋಟಿ ::ಕಂದಾಯ ಮೇಲ್ಮನವಿ ಪ್ರಕರಣಗಳ ನಿರ್ವಹಣೆಗೆ ವಿಶೇಷ ತಂತ್ರಾಂಶ ಅಭಿವೃದ್ಧಿ. ಜಿಲ್ಲಾಧಿಕಾರಿಗಳು. 15 ಜಿಲ್ಲಾಧಿಕಾರಿಗಳ, 26
  • ಉಪವಿಭಾಗಾಧಿಕಾರಿಗಳ ಮತ್ತು 25 ತಹಶೀಲ್ದಾರ್ ಕಛೇರಿಗಳಲ್ಲಿ ಕಾಗದ ರಹಿತ ಕಚೇರಿ ವ್ಯವಸ್ಸ್ಥೆ. ‘ಅಂತ್ಯ ಸಂಸ್ಕಾರ ಸಹಾಯ ನಿಧಿ’ ಯೋಜನೆಯ ಸಹಾಯಧನ ₨5000ಕ್ಕೆ ಹೆಚ್ಚಳ. ಧಾರ್ಮಿಕ ಸಂಸ್ಥೆಗಳಿಗೆ ನೀಡುವ ತಸ್ತೀಕ್ ಮೊತ್ತ ₨ 36 ಸಾವಿರಕ್ಕೆ ಹೆಚ್ಚಳ.

ಇ–ಆಡಳಿತ ರೂ 51 ಕೋಟಿ ಕನ್ನಡ ಯೂನಿಕೋಡ್ ಬಳಕೆ ಉತ್ತೇಜನಕ್ಕೆ ಕನ್ನಡ ದತ್ತಾಂಶ/ಕನ್ನಡ ಗಣಕ ಯೋಜನೆ ಜಾರಿ. ರಾಜ್ಯ ದತ್ತ ಕೇಂದ್ರದಲ್ಲಿನ ತಂತ್ರಾಂಶಗಳ, ನೆಟ್‌ವರ್ಕ್‌ಗಳ ರಕ್ಷಣೆಗಾಗಿ ಸೆಕ್ಯೂರಿಟಿ ಆಪರೇಷನಲ್ ಸೆಂಟರ್ ಸ್ಥಾಪನೆ. ನಾಗರಿಕರಿಗೆ ಪರಿಣಾಮಕಾರಿ ಸೇವೆಗಳನ್ನು ಒದಗಿಸಲು ಬೃಹತ್ ದತ್ತಾಂಶ ವೇದಿಕೆ (Big Data P*atform) ಸ್ಥಾಪನೆ.

ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ರೂ202 ಕೋಟಿ

ಪ್ರತಿ ಕಂದಾಯ ವಿಭಾಗದಲ್ಲಿ ಸಂಚಾರಿ ತಾರಾಲಯ ಸ್ಥಾಪನೆಗೆ ₨ 5 ಕೋಟಿ. ಬಾಗಲಕೋಟೆಯಲ್ಲಿ ಐಟಿ ಪಾರ್ಕ್ ಸ್ಥಾಪನೆ. ಧಾರವಾಡದಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಆರಂಭಿಸಲು ರಾಜ್ಯದ ಪಾಲು ₨12.10

ಮುಖ್ಯಮಂತ್ರಿ ಸಿದ್ದರಾಮಯ್ಯ
ಆಹಾರ ಮತ್ತು ನಾಗರಿಕ ಪೂರೈಕೆ ರೂ2,120 ಕೋಟಿ

ಎಪಿಎಲ್‌ ಕುಟುಂಬಗಳಿಗೂ ಅನ್ನ ಭಾಗ್ಯ. ಎ.ಎ.ವೈ., ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯನಿಗೆ ತಲಾ 5 ಕೆಜಿ ಉಚಿತ ಆಹಾರ ಧಾನ್ಯ ನೀಡಿಕೆ. ರಿಯಾಯಿತಿ ದರದಲ್ಲಿ ₨ 25ಕ್ಕೆ 1 ಲೀಟರ್ ತಾಳೆ ಎಣ್ಣೆ ಮತ್ತು ₨2ಕ್ಕೆ 1 ಕೆಜಿಯಂತೆ ಅಯೋಡಿನಯುಕ್ತ ಉಪ್ಪು ವಿತರಣೆ. ಮೇ ತಿಂಗಳ 1ನೇ ತಾರೀಕಿನಿಂದ ಹೊಸ ಪಡಿತರ ಚೀಟಿಗಳಿಗಾಗಿ ಅರ್ಜಿ ಸ್ವೀಕಾರ.

ಪ್ರವಾಸೋದ್ಯಮ ರೂ406 ಕೋಟಿ

ಗಿರಿಧಾಮಗಳಲ್ಲಿ ಕೇಬಲ್ ಕಾರ್ ಯೋಜನೆ. ಕರ್ನಾಟಕ ಪ್ರವಾಸೋದ್ಯಮ ‘ಮುನ್ನೋಟ ತಂಡ’ದ ಶಿಫಾರಸ್ಸುಗಳ ಅನುಷ್ಠಾನಕ್ಕೆ ₨50 ಕೋಟಿ. ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರದಲ್ಲಿ 20 ಪ್ರವಾಸಿ ಟ್ರೆಕ್ಕಿಂಗ್ ಪಥಗಳನ್ನು ಜನಪ್ರಿಯಗೊಳಿಸಲು ಕ್ರಮ.

ಕೃಷಿಗೆ ಮೀಸಲು ₨3,883 ಕೋಟಿ

ಕೃಷಿ ಕ್ಷೇತ್ರದ ಬಗ್ಗೆ ಸಮಗ್ರ ದೂರದೃಷ್ಟಿ ರೂಪಿಸಲು ತಜ್ಞರ ಅಧ್ಯಕ್ಷತೆಯಲ್ಲಿ ‘ಮುನ್ನೋಟ ತಂಡ’.

ತೋಟಗಾರಿಕೆಗೆ ಅನುದಾನ ₨760 ಕೋಟಿ

ಕೃಷಿ ಉತ್ಪನ್ನಗಳ ಸಂಗ್ರಹಣಾ ಕೇಂದ್ರ, ಶೈತ್ಯಾಗಾರ, ಯಾಂತ್ರೀಕರಣ ಸಲಕರಣೆ ಮತ್ತು ಸಂಸ್ಕರಣಾ ಘಟಕಗಳಿಗೆ ಶೇ 90 ಸಹಾಯಧನ.

ಪಶುಸಂಗೋಪನೆಗೆ ₨1,882 ಕೋಟಿ

ದೇಸಿ ತಳಿಯಾದ ದೇವಣಿ ಮತ್ತು ಮಲೆನಾಡು ಗಿಡ್ಡ ತಳಿ ಸಂರಕ್ಷಣೆಗೆ 10 ಕೋಟಿ. ಉತ್ತರ ಕರ್ನಾಟಕದಲ್ಲಿ 750 ಹಾಲು ಉತ್ಪಾದಕರ ಸಂಘ ಸ್ಥಾಪನೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ರೂ16,204 ಕೋಟಿ

ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಮೂಲ ಸೌಕರ್ಯಕ್ಕೆ ₨110 ಕೋಟಿ. ಟೆಲಿ ಶಿಕ್ಷಣ ಕಾರ್ಯಕ್ರಮ ಇನ್ನೂ 1,000 ಶಾಲೆಗಳಿಗೆ ವಿಸ್ತರಣೆ. 1ರಿಂದ 10ನೇ ತರಗತಿಯ ಮಕ್ಕಳಿಗೆ ಒಂದು ಜೊತೆ ಶೂ, ಎರಡು ಜೊತೆ ಕಾಲು ಚೀಲಗಳ ವಿತರಣೆಗೆ ₨120 ಕೋಟಿ.

ಉನ್ನತ ಶಿಕ್ಷಣ ರೂ3,896 ಕೋಟಿ

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಡಿ ಸಾಗರೋತ್ತರ ಶಿಕ್ಷಣ ಕೇಂದ್ರ ಸ್ಥಾಪನೆ.ರೂಹಿರಿಮೆ-ಗರಿಮೆ' ಯೋಜನೆ ಅಡಿಯಲ್ಲಿ 100, 75 ಮತ್ತು 50 ವರ್ಷಗಳನ್ನು ಪೂರ್ಣ­ಗೊಳಿಸಿದ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲ ಸೌಕರ್ಯ ವೃದ್ಧಗೆ ₨10 ಕೋಟಿ. ರಾಜ್ಯದ ವಿವಿಗಳಲ್ಲಿ ಹೊರ ವಿವಿ ವಿದ್ಯಾರ್ಥಿಗಳಿಗೆ ಸೀಟು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರೂ6,107 ಕೋಟಿ
  • ಎಲ್ಲಾ ಆಸ್ಪತ್ರೆಗಳಲ್ಲಿ ಇ-ಆಸ್ಪತ್ರೆ ತಂತ್ರಾಂಶ ಅನುಷ್ಠಾನ. ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಕೆಲವು ತಾಲ್ಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಹಿತ ತೀವ್ರ ನಿಗಾ ಘಟಕ (ಐ.ಸಿ.ಯು) ಸ್ಥಾಪನೆ. 5 ಕಡೆಗಳಲ್ಲಿ ಸಾಂಕ್ರಾಮಿಕ ರೋಗ ಪ್ರಯೋಗಾಲಯ ಸ್ಥಾಪನೆ. ಪ್ರತಿ ಜಿಲ್ಲೆಯಲ್ಲಿ ದಂತ ಪ್ರಯೋಗಾಲಯ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ರೂ4,232 ಕೋಟಿ

ಅಂಗನವಾಡಿ ಕಾರ್ಯಕರ್ತೆಯರಿಗೆ ₨ 500 ಮತ್ತು ಸಹಾಯಕಿಯರಿಗೆ ₨ 250 ಗೌರವಧನ ಹೆಚ್ಚಳ. ಆಸಿಡ್ ದಾಳಿಗೊಳಗಾದ ಮಹಿಳೆಯರಿಗಾಗಿ ನಿಧಿ ಸ್ಥಾಪನೆಗೆ 5 ಕೋಟಿ. ಅಂಗನವಾಡಿ ಕೇಂದ್ರಗಳಲ್ಲಿ ಸೌರಶಕ್ತಿ ದೀಪಗಳು, ಫ್ಯಾನ್‌ ಅಳವಡಿಕೆಗೆ ₨ 5 ಕೋಟಿ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ₨68.22 ಕೋಟಿ. ನಿವೇಶನ ಹೊಂದಿರುವ 11,818 ವಸತಿ ರಹಿತ ಮಾಜಿ ದೇವದಾಸಿಯರಿಗೆ ವಸತಿ. ಸ್ತ್ರೀಶಕ್ತಿ ಸಂಘಗಳಿಗೆ ನೀಡುತ್ತಿರುವ ಬಡ್ಡಿರಹಿತ ಸಾಲ 2 ಲಕ್ಷ ಕ್ಕೆ ಹೆಚ್ಚಳ. ಲೈಂಗಿಕ ಅಲ್ಪ ಸಂಖ್ಯಾತರಿಗಾಗಿ ರೂಚೇತನ' ಯೋಜನೆ.

  • ರೂ 60 ಕೋಟಿ: ಶಾದಿಮಹಲ್‌, ಸಮುದಾಯ ಭವನಗಳಿಗೆ ಕೊಡುಗೆ
  • ರೂ2.15 ಕೋಟಿ: ಎಲ್ಲ ಜಿಲ್ಲೆಗಳಲ್ಲಿ ವಿಕಲಾಂಗರ ಸಹಾಯಕೇಂದ್ರ ಆರಂಭಿಸಲು
  • ರೂ 3.63 ಕೋಟಿ: 46 ಶ್ರವಣದೋಷ ಮಕ್ಕಳ ಶಾಲೆಗಳಲ್ಲಿ ಉಪಗ್ರಹ ಆಧಾರಿತ ಶಿಕ್ಷಣ ಯೋಜನೆ ಜಾರಿಗೊಳಿಸಲು
  • ರೂ 5 ಕೋಟಿ: ಆಸಿಡ್‌ ದಾಳಿಗೊಳಗಾದ ಮಹಿಳೆಯರಿಗೆ ಆರ್ಥಿಕ ಪರಿಹಾರ ನೀಡಲು
  • ರೂ 10 ಕೋಟಿ: ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ’ದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ
  • ರೂ 4,372 ಕೋಟಿ: ಗೃಹ ಇಲಾಖೆಗೆ ಈ ಬಾರಿ ನಿಗದಿ ಮಾಡಿದ ಮೊತ್ತ.

ಕರ್ನಾಟಕ ಬಜೆಟ್ 2015-16 ರ ವಿವರ[ಬದಲಾಯಿಸಿ]

ಕರ್ನಾಟಕದ ಬಜೆಟ್ 2015-16 ಬಜೆಟ್‌ ಗಾತ್ರ ₹ 1,42,534 ಕೋಟಿ

ವಿವರ

ಅನಂತಮೂರ್ತಿ, ರಾಣಿ ಅಬ್ಬಕ್ಕ ಅಧ್ಯಯನ ಪೀಠಗಳ ಸ್ಥಾಪನೆ: ಅಲ್ಪ ಸಂಖ್ಯಾತರ ಶಿಕ್ಷಣಕ್ಕೆ ಪ್ರಾಧಾನ್ಯ, ಏಳಿಗೆಗೆ 1000 ಕೋಟಿ ರೂ.; ಕನ್ನಡಕ್ಕೂ ಭಾಗ್ಯ: ಕನ್ನಡದ ವರ್ಚುವಲ್ ತರಗತಿಗಳು, ಬೆಂಗಳೂರಿನಲ್ಲಿ ಕಲಿಕಾ ಕೇಂದ್ರಗಳು, ಮತ್ತು ಇದು ಕನ್ನಡ ವರ್ಷ; ಮದ್ಯ ಸೇವನೆಯೂ ದುಬಾರಿಯಾಗಲಿದೆ; ಅಬಕಾರಿ ಸುಂಕದಲ್ಲಿ ಏರಿಕೆ; ಎಪಿಎಲ್ ಕಾರ್ಡುದಾರರಿಗೂ ಬಂದಿದೆ ಕೊಂಚ ಭಾಗ್ಯ: ರಿಯಾಯಿತಿ ದರದಲ್ಲಿ ಆಹಾರ ಧಾನ್ಯ; ಸಮ ಸಮ ಪಾಲು, ಸಮ ಸಮ ಬಾಳು: ಸಿದ್ದು ಬಜೆಟ್ ಸ್ಥೂಲ ನೋಟ; ಅಸ್ಪೃಶ್ಯತೆ ನಿವಾರಣೆ ಯೋಜನೆ: ಅಂತರ್ಜಾತಿ ವಿವಾಹಕ್ಕೆ 2-3 ಲಕ್ಷ ರೂ. ಕೊಡುಗೆ;

ಪರಿಶಿಷ್ಟರ ಕಲ್ಯಾಣಕ್ಕೆ ಹಲವು ಭಾಗ್ಯಗಳು

ಪಶು ಭಾಗ್ಯ, ಶೂ ಭಾಗ್ಯ; ಏರಲಿದೆ ಪೆಟ್ರೋಲ್, ಡೀಸೆಲ್ ಬೆಲೆ; ಧೂಮಪಾನ ಮತ್ತಷ್ಟು ಕಷ್ಟ, ಸೀಮೆಣ್ಣೆ ದರ ಇಳಿಕೆ; ಅಂಗನವಾಡಿ ಕಾರ್ಯಕರ್ತರಿಗೆ 500, ಸಹಾಯಕರಿಗೆ 250 ರೂ. ಗೌರವ ಧನ ಏರಿಕೆ; ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಶೇ.1 ಏರಿಕೆ; ವೃತ್ತಿ ತೆರಿಗೆ ವಿನಾಯಿತಿ ಸೌಲಭ್ಯವದ ಮಿತಿಯನ್ನು 10 ಸಾವಿರ ರೂ. ಮಾಸಿಕ ವೇತನದಿಂದ 15 ಸಾವಿರಕ್ಕೆ.; ಹಿರಿಯ ನಾಗರಿಕರೆಂದು ಪರಿಗಣಿಸಲು ಇರಬೇಕಾದ ಅರ್ಹತೆಯ ವಯಸ್ಸನ್ನು 65ರಿಂದ 60ಕ್ಕೆ ಇಳಿಸಿ, ವೃತ್ತಿ ತೆರಿಗೆ ವಿನಾಯಿತಿ; ಡೀಸೆಲ್, ಪೆಟ್ರೋಲ್ ಮೇಲಿನ ತೆರಿಗೆಯಲ್ಲಿ ಶೇ.1ರಷ್ಟು ಏರಿಕೆ; ಸಿಗರೇಟು ಗುಟ್ಕಾ ಮುಂತಾದ ತಂಬಾಕು ಉತ್ಪನ್ನಗಳ ಮೇಲಿನ ಮೌಲ್ಯವರ್ಧಿತ ತೆರಿಗೆ ಶೇ.17ರಿಂದ ಶೇ.20ಕ್ಕೆ ಏರಿಕೆ; ಸೌರಶಕ್ತಿ ಬಳಕೆ ಉತ್ತೇಜನ ನಿಟ್ಟಿನಲ್ಲಿ ಸೋಲಾರ್ ಪಿವಿ ಪ್ಯಾನೆಲ್‌ಗಳು ಹಾಗೂ ಸೋಲಾರ್ ಇನ್ವರ್ಟರುಗಳ ತೆರಿಗೆ ವಿನಾಯಿತಿ; ಪ್ಯಾಕ್ ಆಗಿರುವ ಮೊಬೈಲ್ ಫೋನ್ ಚಾರ್ಜರುಗಳ ಮೇಲಿನ ತೆರಿಗೆಯನ್ನು ಶೇ.5.5ಕ್ಕೆ ಇಳಿಸಲಾಗಿದೆ; ಮುದ್ರಣಕ್ಕೆ ಸಂಬಂಧಿಸಿದ ಪ್ಲೇಟ್‌ಗಳು, ಪ್ಯಾಕಿಂಗ್ ವಸ್ತುಗಳ ಮತ್ತಿತರ ಕಚ್ಚಾವಸ್ತುಗಳ ತೆರಿಗೆ ಶೇ.5.5ಕ್ಕೆ ಇಳಿಕೆಗೆ ಕ್ರಮ; ವಿಭಿನ್ನ ಮಾದರಿಯ ವಿದ್ಯುತ್ ಕೇಬಲ್‌ಗಳ ಮೇಲಿನ ತೆರಿಗೆ ಶೇ.5.5 ಕ್ಕೆ ಇಳಿಕೆ; ಸೀಮೆಣ್ಣೆ ಮತ್ತು ಸ್ಟವ್ ಮೇಲಿನ ತೆರಿಗೆ ಶೇ.14.5 ಇದ್ದದ್ದು ಶೇ.5.5ಕ್ಕೆ ಇಳಿಕೆ; ಗ್ರಾಮೀಣ ಮಹಿಳೆಯರು ಕೈಯಿಂದ ತಯಾರಿಸಿದ ಫ್ಲೋರ್ ಮ್ಯಾಟ್, ಟೇಬಲ್ ಮ್ಯಾಟ್, ಕೈಚೀಲಗಳು, ಅಲಂಕಾರಿಕ ವಸ್ತುಗಳನ್ನು ಹೊರತುಪಡಿಸಿ ತೆರಿಗೆ ವಿನಾಯಿತಿ; 500 ರೂ. ಒಳಗಿನ ಪಾದರಕ್ಷೆಗಳಿಗೆ ತೆರಿಗೆ ವಿನಾಯಿತಿ; ಅಕ್ಕಿ, ಗೋಧಿ, ಬೇಳೆ ಕಾಳು ತೆರಿಗೆ ವಿನಾಯಿತಿ ಮುಂದುವರಿಕೆ; ನಕ್ಸಲ್ ಚಟುವಟಿಕೆ ನಿಯಂತ್ರಣಕ್ಕೆ ಕರ್ನಾಟಕ-ಕೇರಳ, ತಮಿಳುನಾಡು ಗಡಿ ಭಾಗದಲ್ಲಿ 3 ಹೊಸ ನಕ್ಸಲ್ ನಿಗ್ರಹ ಪಡೆಗಳನ್ನು ಸ್ಥಾಪಿಸಲಾಗುತ್ತದೆ; ಮಹಿಳೆಯವರ ವಿರುದ್ಧ ಅಪರಾಧಗಳ ತನಿಖೆ ಸುಧಾರಣೆಗೆ, 15 ಸಿಬ್ಬಂದಿಗಳನ್ನೊಳಗೊಂಡ 6 ವಿಶೇಷ ಘಟಕಗಳ ಸ್ಥಾಪನೆ; ಭಯೋತ್ಪಾದನೆ ಚಟುವಟಿಕೆ ನಿಯಂತ್ರಣಕ್ಕೆ ಬೆಂಗಳೂರಿನಲ್ಲಿ ಕೇಂದ್ರೀಯ ಕಮಾಂಡ್ ಸೆಂಟರ್ ಸ್ಥಾಪನೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಲು 3 ವರ್ಷಗಳಿಗಾಗಿ 50 ಕೋಟಿ ರೂ.; ಇತರ ರಾಜ್ಯಗಳ ಪ್ರಮುಖ ಕೇಂದ್ರದಲ್ಲಿಯೂ ಕರ್ನಾಟಕ ಉತ್ಸವ ಆಯೋಜಿಸಲು ನಿರ್ಧಾರ; ವಿಜಯಪುರ ಹಾಗೂ ಮೈಸೂರುಗಳಿಗೆ ತಲಾ 10 ಕೋಟಿ ರೂ. ಅನುದಾನದಲ್ಲಿ ಮಾದರಿ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ; ನಂದಿ ಬೆಟ್ಟ, ಚಾಮುಂಡಿ ಬೆಟ್ಟ, ಮಧುಗಿರಿ ಏಕಶಿಲಾ ಬೆಟ್ಟ ಹಾಗೂ ಕೆಮ್ಮಣ್ಣು ಗುಂಡಿ ಗಿರಿಧಾರಮದಲ್ಲಿ ಕೇಬಲ್ ಕಾರ್ ಯೋಜನೆ; ಸಾಲಿನಲ್ಲಿ ಎಲೆಕ್ಟ್ರಾನಿಕ್-ಆಡಳಿತಕ್ಕಾಗಿ 51 ಕೋಟಿ ರೂ. ಮೀಸಲಿರಿಸಲಾಗಿದೆ.; ಸರಕಾರಿ ಕಚೇರಿಗಳು ಮತ್ತು ವ್ಯಕ್ತಿಗಳು ಯುನಿಕೋಡ್ ಅನ್ನು ಸಮರ್ಥವಾಗಿ ಬಳಸುವಂತೆ ಉತ್ತೇಜಿಸಲು, ಕನ್ನಡ ತಂತ್ರಾಂಶದ ಕನ್ನಡ ಗಣಕ ಯೋಜನೆಯನ್ನು 2 ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳಿಸಲಾಗುವುದು; ರಾಜ್ಯದಲ್ಲಿ ಆಕರ್ಷಕ ಸ್ಟಾರ್ಟಪ್ ಪರಿಸರ ವ್ಯವಸ್ಥೆಗೆ ಉತ್ತೇಜನಕ್ಕಾಗಿ ಸ್ಟಾರ್ಟಪ್ ನೀತಿ ಜಾರಿ. ಬಾಗಲಕೋಟೆಯಲ್ಲೊಂದು ಐಟಿ ಪಾರ್ಕ್ ಸ್ಥಾಪನೆ;

ಬೀದರ್-ಕಲಬುರಗಿ, ಬೆಂಗಳೂರು-ಹಾಸನ ಹೊಸ ರೈಲು ಮಾರ್ಗ ಯೋಜನೆಗಳು ಪ್ರಗತಿಯಲ್ಲಿ; ರೈಲ್ವೇ: ರಾಮನಗರ-ಮೈಸೂರು ಜೋಡಿ ಮಾರ್ಗ ಈ ವರ್ಷ ಪೂರ್ಣವಾಗಲಿದ್ದು, ಸಂಚಾರ ಆರಂಭವಾಗಲಿದೆ; ಕೊಲ್ಲೂರು, ಕುಕ್ಕೆ ಸುಬ್ರಹ್ಮಣ್ಯ, ಚಾಮುಂಡೇಶ್ವರಿ ದೇವಸ್ಥಾನ, ನಂಜನಗೂಡು, ಗಾಣಗಾಪುರ, ಸವದತ್ತಿ ದೇವಸ್ಥಾನಗಳ ಪೂರ್ಣ ಅಭಿವೃದ್ಧಿಗೆ ಬೃಹತ್ ದೇವಾಲಯ;ಪೂರ್ಣಾಭಿವೃದ್ಧಿ ಯೋಜನೆ. ಇದಕ್ಕಾಗಿ 400 ಕೋಟಿ. ರೂ.; ಹೊಸದಿಲ್ಲಿಯ ಅಕ್ಷರಧಾಮ ಮಾದರಿಯಲ್ಲಿ ಬಾಗಲಕೋಟೆಯ ಕೂಡಲ ಸಂಗಮದಲ್ಲಿ ಬಸವ ಅಂತಾರಾಷ್ಟ್ರೀಯ ಕೇಂದ್ರ ಸ್ಥಾಪನೆ; ಎಪಿಎಲ್ ಕುಟುಂಬದವರಿಗೆ, ಒಬ್ಬ ಸದಸ್ಯರಿದ್ದಲ್ಲಿ 5 ಕೆಜಿ ಆಹಾರ ಧಾನ್ಯ (3 ಕೆಜಿ ಅಕ್ಕಿ ಮತ್ತು 2 ಕೆಜಿ ಗೋಧಿ); ಜಾಸ್ತಿ ಸದಸ್ಯರಿದ್ದಲ್ಲಿ 10 ಕೆಜಿ ಆಹಾರ ಧಾನ್ಯವನ್ನು ಕೇಜಿ ಅಕ್ಕಿಗೆ 15 ರೂ. ಹಾಗೂ ಕೆಜಿ ಗೋಧಿಗೆ 10 ರೂ. ದರದಲ್ಲಿ ನೀಡಲಾಗುತ್ತದೆ.; ರಿಯಾಯಿತಿ ದರದಲ್ಲಿ 25 ರೂ.ಗೆ 1 ಲೀಟರ್ ತಾಳೆ ಎಣ್ಣೆ, 2 ರೂ.ಗೆ ಅಯೋಡಿನ್ ಯುಕ್ತ ಉಪ್ಪು ನೀಡಲಾಗುತ್ತದೆ; ಬಿಪಿಎಲ್ ಕುಟುಂಬಿಕರಿಗೆ ಯಾವುದೇ ಮಿತಿಯಿಲ್ಲದೆ, ತಲಾ ಸದಸ್ಯನಿಗೆ 5 ಕೆಜಿಯಂತೆ ಉಚಿತ ಆಹಾರ ಧಾನ್ಯ;

ರಾಜ್ಯದ ದೊಡ್ಡ ದೇವಸ್ಥಾನಗಳ ಅಭಿವೃದ್ಧಿಗೆ ₨ 400 ಕೋಟಿ ಅನುದಾನದ ಯೋಜನೆ ಘೋಷಿಸಲಾಗಿದೆ.

ಇದರಡಿ ಮುಂದಿನ ಎರಡು ವರ್ಷಗಳಲ್ಲಿ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸುವ ಗುರಿ ಸರ್ಕಾರದ್ದು. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಅಂದಾಜು 27,700 ದೇವಾಲಯಗಳಿಗೆ ಪಾವತಿಸುವ ಕನಿಷ್ಠ ವಾರ್ಷಿಕ ತಸ್ತೀಕ್ ಮೊತ್ತ ₨ 36 ಸಾವಿರಕ್ಕೆ ಹೆಚ್ಚಳ. ಇಲಾಖೆ ವ್ಯಾಪ್ತಿಯ ಎಲ್ಲ ದೇವಸ್ಥಾನಗಳ ಸ್ವಚ್ಛತೆಗೆ ‘ಸ್ವಚ್ಛ ಮಂದಿರ ಅಭಿಯಾನ’. ಹಸಿ ತ್ಯಾಜ್ಯದಿಂದ ಅಡುಗೆ ಅನಿಲ, ಬಯೋಗ್ಯಾಸ್, ಕಾಂಪೋಸ್ಟ್ ಗೊಬ್ಬರ ತಯಾರಿಸಿ ದೇವಸ್ಥಾನಗಳಲ್ಲಿ ಉಪಯೋಗಿಸುವುದು.

ಈ ದೇವಸ್ಥಾನಗಳಿಗೆ ಅನುದಾನ
  • ಕೊಲ್ಲೂರಿನ ಮೂಕಾಂಬಿಕಾ
  • ಕುಕ್ಕೆ ಸುಬ್ರಹ್ಮಣ್ಯದ ಸುಬ್ರಹ್ಮಣ್ಯಸ್ವಾಮಿ
  • ಮೈಸೂರಿನ ಚಾಮುಂಡೇಶ್ವರಿ
  • ನಂಜನಗೂಡಿನ ಶ್ರೀಕಂಠೇಶ್ವರ
  • ಗಾಣಗಾಪುರದ ದತ್ತಾತ್ರೇಯ ಪೀಠ
  • ಸವದತ್ತಿಯ ರೇಣುಕಾ ಯಲ್ಲಮ್ಮ

ವಲಯವಾರು ಹಂಚಿಕೆ /ಶೇಕಡಾ[ಬದಲಾಯಿಸಿ]

ಕ್ರಮಸಂಖ್ಯೆ ಹಂಚಿಕೆ ವಲಯ ಶೇಕಡಾವಾರು
1 ಶಿಕ್ಷಣ 13
2 ಋಣ ಮೇಲುಸ್ತವಾರಿ 11
3 ಆರ್ಥಿಕ +ಪಿಂಚಣಿ 9
4 ಜಲ ಸಂಪನ್ಮೂಲ 8
5 ಇಂಧನ 8
6 ನಗರಾಭಿವೃದ್ಧಿ 7
7 ಗ್ರಾಮೀಣ ಆಭಿವೃದ್ಧಿ ಮಯ್ಯು ಪಂಚಾಯತ್ ರಾಜ್ 6
8 ಲೋಕೋಪಯೋಗಿ 5
9 ಸಮಾಜ ಕಲ್ಯಾಣ 5
10 ಆರೋಗ್ಯ ಮತ್ತು ಕುಟುಂಬ ಕಲ್ಯಾಣ 4
11 ಓಲಾಡಳಿತ ಮತ್ತು ಸಾರಿಗೆ 4
12 ಕೃಷಿ ಮತ್ತು ತೋಟಗಾರಿಕೆ 3
13 ಕಂದಾಯ 3
14 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ 3
15 ಇತರೆ 12

ಬಜೆಟ್ ಕೊರತೆ ಮತ್ತು ತೆರಿಗೆ+ವಿನಾಯತಿ[ಬದಲಾಯಿಸಿ]

ಇದು ಸಿದ್ದರಾಮಯ್ಯ ಅವರ 10ನೇ ಬಜೆಟ್‌, ಮುಖ್ಯಮಂತ್ರಿಯಾಗಿ 3ನೇ ಬಜೆಟ್‌. ಕಳೆದ ಎರಡು ಬಜೆಟ್‌ಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನಪ್ರಿಯ ಯೋಜನೆಗಳನ್ನು ಪ್ರಕಟಿಸಿದ್ದ ಮುಖ್ಯಮಂತ್ರಿಯವರು ಈ ಬಾರಿ ಅಂತಹ ಸಾಹಸಕ್ಕೆ ಕೈಹಾಕಿಲ್ಲ. ಆದರೆ ಕೆಲವು ‘ಭಾಗ್ಯ’ಗಳ ಘೋಷಣೆ ಮುಂದುವರಿಸಿದ್ದಾರೆ.
::ಅಭಿಪ್ರಾಯ
ನಮ್ಮನ್ನು ಮರೆತಿದ್ದಾರೆ!
  • ಅರಣ್ಯ ಮೂಲ ನಿವಾಸಿಗರಿಗೆ ಈ ಬಜೆಟ್‌ನಲ್ಲಿ ಏನೂ ಇಲ್ಲ. ಅರಣ್ಯದಿಂದ ಹೊರ ಹಾಕಿದ 3418 ಕುಟುಂಬಗಳಿಗೆ ಮೂಲಭೂತ ಸೌಲಭ್ಯ ಒದಗಿಸುವ ಬಗ್ಗೆ ಏನನ್ನೂ ಹೇಳಿಲ್ಲ. ಆದಿವಾಸಿ ಅಭಿವೃದ್ಧಿ ಮಂಡಳಿ ಸ್ಥಾಪಿಸಿಲ್ಲ. ಗಿರಿಜನರ ಸೌಲಭ್ಯಗಳನ್ನು ಬೇರೆಯವರು ಪಡೆದುಕೊಳ್ಳುತ್ತಾರೆ. ಅದನ್ನು ತಪ್ಪಿಸಲು ಏನೂ ಕ್ರಮವಿಲ್ಲ.
  • ಪಿ.ಕೆ.ರಾಮು, ನಾಗರಹೊಳೆ ಬುಡಕಟ್ಟು ಹಕ್ಕು ಸ್ಥಾಪನಾ ಸಮಿತಿ ಸಂಚಾಲಕ.
ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನದಲ್ಲಿನ ಕೊರತೆಯನ್ನು ತುಂಬಿಕೊಳ್ಳಲು ರಾಜ್ಯದ ಜನರ ಮೇಲೆ ₨ 600 ಕೋಟಿ ಹೆಚ್ಚುವರಿ ತೆರಿಗೆ ಭಾರ ಹೊರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2015–16ನೇ ಹಣಕಾಸು ವರ್ಷಕ್ಕೆ ₨20,220 ಕೋಟಿ ಕೊರತೆಯ ಬಜೆಟ್‌ ಅನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದರು.
ಈ ಕೊರತೆ ತುಂಬಲು ಪ್ರೆಟೋಲ್‌, ಡೀಸೆಲ್‌, ಮದ್ಯ, ಸಿಗರೇಟ್‌ ಸೇರಿದಂತೆ ಇತರ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸುವುದರ ಮೂಲಕ ಹೆಚ್ಚುವರಿ ಸಂಪನ್ಮೂಲ ಕ್ರೋಡೀಕರಣಕ್ಕೆ ಆದ್ಯತೆ ಕೊಟ್ಟಿದ್ದಾರೆ. ವಿವಿಧ ಬಗೆಯ ಕ್ರಯಪತ್ರ ಮತ್ತು ಕರಾರುಗಳ ನೋಂದಣಿಗಳ ಮೇಲೂ ಶುಲ್ಕ ವಿಧಿಸುವ ಕುರಿತಂತೆ ಪ್ರಸ್ತಾಪಿಸಿದ್ದಾರೆ.
ದಲಿತ, ಹಿಂದುಳಿದ ವರ್ಗಗಳ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ. ವಿದ್ಯಾರ್ಥಿವೇತನ, ಹಾಸ್ಟೆಲ್‌ ಭೋಜನ ವೆಚ್ಚವನ್ನು ಹೆಚ್ಚಿಸಿದ್ದಾರೆ. ಅಂತರ್ಜಾತಿ ವಿವಾಹಕ್ಕೆ ನೀಡುವ ಪ್ರೋತ್ಸಾಹ ಧನದಲ್ಲಿ ಗಣನೀಯ ಏರಿಕೆ ಮಾಡಿದ್ದಾರೆ.
ಅಲ್ಪಸಂಖ್ಯಾತ ಸಮುದಾಯಕ್ಕೆ ಕಳೆದ ಬಾರಿಗಿಂತ ₨200 ಕೋಟಿಯಷ್ಟು ಹೆಚ್ಚು ಅಂದರೆ ₨ ಒಂದು ಸಾವಿರ ಕೋಟಿ ಒದಗಿಸಿದ್ದಾರೆ.
ಅನ್ನಭಾಗ್ಯ ‘ಉಚಿತ’: ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಇನ್ನು ಮುಂದೆ ಘಟಕ ಪದ್ಧತಿಯಡಿ ಉಚಿತವಾಗಿಯೇ ಅಕ್ಕಿ ನೀಡಲಾಗುತ್ತದೆ. ಇದುವರೆಗೂ ಕುಟುಂಬವೊಂದಕ್ಕೆ ಸಿಗುತ್ತಿದ್ದ 30 ಕೆ.ಜಿ ಬದಲಿಗೆ, ಕುಟುಂಬದಲ್ಲಿನ ಜನಸಂಖ್ಯೆ ಆಧಾರದ ಮೇಲೆ ತಲಾ ಒಬ್ಬರಿಗೆ ಐದು ಕೆ.ಜಿ ಲೆಕ್ಕದಲ್ಲಿ ಪಡಿತರ ಸಿಗಲಿದೆ. ಇದರಿಂದ ಅನ್ನಭಾಗ್ಯದಿಂದ ಆಗುತ್ತಿದ್ದ ಆರ್ಥಿಕ ಹೊರೆ ಕಡಿಮೆ ಆಗಲಿದೆ ಎಂಬುದು ಮುಖ್ಯಮಂತ್ರಿಗಳ ನಿರೀಕ್ಷೆ.
ಶೂ ಭಾಗ್ಯ
ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದ ಮಕ್ಕಳಿಗೆ ಇದುವರೆಗೂ ಸಮವಸ್ತ್ರ ನೀಡಲಾಗುತ್ತಿತ್ತು. ಈಗ ಅದರ ಜತೆಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲುಚೀಲ ನೀಡುವ ವಿಷಯ ಪ್ರಸ್ತಾಪಿಸಿದ್ದಾರೆ.
‘ಮುನ್ನೋಟ ತಂಡ’: ಕೃಷಿ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ಕೊಟ್ಟಿರುವ ಮುಖ್ಯಮಂತ್ರಿ ಆ ವಲಯದ ಸಮಗ್ರ ಅಭಿವೃದ್ಧಿಗಾಗಿ ತಜ್ಞರ ನೇತೃತ್ವದಲ್ಲಿ ‘ಮುನ್ನೋಟ ತಂಡ’ ರಚಿಸುವುದಾಗಿ ಪ್ರಕಟಿಸಿದ್ದಾರೆ.
ಒಣಭೂಮಿ ಬೇಸಾಯದಲ್ಲಿ ಬೆಳೆ ಪದ್ಧತಿಗಳ ಸುಧಾರಣೆ, ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಇತ್ಯಾದಿ ಸುಧಾರಿತ ಕ್ರಮಗಳಿಗೆ ಸಲಹೆ ನೀಡಲು ತಜ್ಞರ ನೆರವು ಪಡೆದು ಉತ್ಕೃಷ್ಟ ಜ್ಞಾನ ಕೇಂದ್ರ ಸ್ಥಾಪಿಸುವುದಾಗಿ ವಿವರಿಸಿದ್ದಾರೆ. ಕೃಷಿಗೆ ಸ್ವಲ್ಪ ಹೆಚ್ಚು ಹಣ ಕೊಟ್ಟಿದ್ದಾರೆ. ಆದರೆ ತೋಟಗಾರಿಕೆ ಅನುದಾನವನ್ನು ಅರ್ಧಕ್ಕರ್ಧ ಇಳಿಸಿದ್ದಾರೆ.

ನೀರಾ ಭಾಗ್ಯ: ತೆಂಗು ಬೆಳೆಗಾರರ ಬೇಡಿಕೆಗೆ ಸ್ಪಂದಿಸಿರುವ ಮುಖ್ಯಮಂತ್ರಿ, ನೀರಾ ಇಳಿಸಲು ಅನುಮತಿ ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಅಬಕಾರಿ ಕಾಯ್ದೆಗೆ ತಿದ್ದುಪಡಿ ತರುವುದಾಗಿಯೂ ವಿವರಿಸಿದ್ದಾರೆ.

ಈ ವರ್ಷದ ಬಜೆಟ್‌ನಲ್ಲಿ ಮತ್ತೊಂದು ‘ಭಾಗ್ಯ’ ಯೋಜನೆ ಸೇರಿಕೊಂಡಿದೆ. ‘ಪಶು ಭಾಗ್ಯ’ ಎನ್ನುವ ಈ ಕಾರ್ಯಕ್ರಮದಡಿ ಹಸು, ಕುರಿ, ಆಡು, ಹಂದಿ, ಕೋಳಿ ಸಾಕಣೆ ಘಟಕಗಳನ್ನು ಸ್ಥಾಪಿಸುವುದಕ್ಕೆ ವಾಣಿಜ್ಯ ಬ್ಯಾಂಕುಗಳಲ್ಲಿ ಗರಿಷ್ಠ ₨ 1.2 ಲಕ್ಷವರೆಗೆ ಸಾಲ ಪಡೆಯಬಹುದು. ಇದಕ್ಕೆ ಸರ್ಕಾರದಿಂದ ರಿಯಾಯಿತಿ ಕೂಡ ಇದೆ. ಇದೇ ಮೊದಲ ಸಲ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ರಾಜ್ಯದ 7 ಪ್ರಮುಖ ದೇವಸ್ಥಾನಗಳ ಅಭಿವೃದ್ಧಿಗೆ ₨400 ಕೋಟಿ ಮೀಸಲಿಟ್ಟಿದ್ದಾರೆ. ಬಿಬಿಎಂಪಿ ಚುನಾವಣೆ ಬಂದಿರವುದರೀಂದ ಬಜೆಟ್‌ನಲ್ಲಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ₨4,770 ಕೋಟಿ ನಿಗದಿಪಡಿಸಿದ್ದಾರೆ.

ರಾಮನಗರಕ್ಕೆ ಕೊಡಿಗೆ[ಬದಲಾಯಿಸಿ]

ಜಿಲ್ಲೆಯ ಜನರು ಅಪೇಕ್ಷಿಸಿದ್ದ ಕೆಲ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಪರ್‌ ಕೊಡುಗೆಯನ್ನೇ ನೀಡಿದ್ದಾರೆ. ಆದರೆ ಜನರ ಇನ್ನೂ ಕೆಲ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ.
ಪ್ರಮುಖವಾಗಿ ಮಹತ್ವಾಕಾಂಕ್ಷೆಯ ಮೇಕೆದಾಟು ಜಲಾಶಯ ನಿರ್ಮಾಣದ ಯೋಜನಾ ವರದಿ ತಯಾರಿಕೆಗೆ ಒಪ್ಪಿಗೆ ನೀಡಿರುವ ಮುಖ್ಯಮಂತ್ರಿ ಅವರು ಅದಕ್ಕಾಗಿ ₨ 25 ಕೋಟಿ ಮೀಸಲಿಟ್ಟಿದ್ದಾರೆ.ಮೇಕೆದಾಟು ಮೇಲ್ಭಾಗದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸಮತೋಲನಾ ಜಲಾಶಯಗಳ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಯೋಜನಾ ವರದಿ ಸಿದ್ಧಪಡಿಸಲು ಅವರು ಸೂಚಿಸಿದ್ದಾರೆ.
ಈ ಮೂಲಕ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ ಎನ್ನಲಾಗಿದೆ. ರಾಮನಗರ ತಾಲ್ಲೂಕಿನ ಬಿಡದಿ, ಕಸಬಾ ಹೋಬಳಿ ಹಾಗೂ ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮವನ್ನೂ ಅವರು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಇತ್ತೀಚೆಗೆ ನಡೆದಿದ್ದ ಸಂಪುಟ ಸಭೆಯಲ್ಲಿ ₨ 155 ಕೋಟಿ ವೆಚ್ಚದಲ್ಲಿ ಶಿಂಷಾದಿಂದ ಕನಕಪುರ ಮತ್ತು ರಾಮನಗರ ತಾಲ್ಲೂಕಿನ 92 ಹಳ್ಳಿಗಳ ಕೆರೆಗಳಿಗೆ ನೀರು ತುಂಬಿಸಿ, ಆ ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸುವುದಕ್ಕೆ ಒಪ್ಪಿಗೆ ನೀಡಲಾಗಿತ್ತು.
ಸರಣಿ ಪಿಕಪ್‌ಗಳ ನಿರ್ಮಾಣ: ರಾಮನಗರ ಸೇರಿದಂತೆ ಒಟ್ಟು ಐದು ಜಿಲ್ಲೆಗಳಲ್ಲಿ ಅಂದಾಜು ₨ 100 ಕೋಟಿ ವೆಚ್ಚದಲ್ಲಿ ಸರಣಿ ಪಿಕಪ್‌ಗಳ ನಿರ್ಮಾ­ಣಕ್ಕೂ ಮುಖ್ಯಮಂತ್ರಿ ಅಸ್ತು ನೀಡಿದ್ದಾರೆ. ಇದು ಜಿಲ್ಲೆಯಲ್ಲಿ ಪಾತಾಳಕ್ಕೆ ಹೋಗಿರುವ ಅಂತರ್ಜಲ ವೃದ್ಧಿಗೆ ನೆರವಾಗಲಿದೆ ಎನ್ನಲಾಗಿದೆ.
ಜೋಡಿ ರೈಲು ಮಾರ್ಗಕ್ಕೆ ಗುರಿ ನಿಗದಿ
ಅಲ್ಲದೆ ಹಲವು ವರ್ಷಗಳಿಂದ ಕುಂಟುತ್ತಾ ಸಾಗಿರುವ ರಾಮನಗರ– ಮೈಸೂರು ಜೋಡಿ ರೈಲು ಮಾರ್ಗಕ್ಕೆ ಗುರಿ ನಿಗದಿಪಡಿಸಿ, ರೈಲು ಸಂಚಾರ ಆರಂಭಿಸುವುದಾಗಿ ತಿಳಿಸಿದ್ದಾರೆ. ಬೆಂಗಳೂರು– ಮೈಸೂರು ನಡುವೆ ಜೋಡಿ ರೈಲು ಮಾರ್ಗ ಮತ್ತು ವಿದ್ಯುದೀಕರಣ ಕಾಮಗಾರಿಯನ್ನು 2007ರಲ್ಲಿ ಆರಂಭಿಸಲಾಗಿತ್ತು.
ಆದರೆ ಭೂಸ್ವಾಧೀನ ಸಮಸ್ಯೆ ಮತ್ತು ಶ್ರೀರಂಗಪಟ್ಟಣದಲ್ಲಿ ಇರುವ ಐತಿಹಾಸಿಕ ಟಿಪ್ಪು ಶಸ್ತ್ರಗಾರ ಸ್ಥಳಾಂತರ ಕಾರ್ಯದ ವಿಳಂಬದಿಂದಾಗಿ ಈ ಕಾಮಗಾರಿ ಇಲ್ಲಿಯವರೆಗೂ ಪೂರ್ಣಗೊಂಡಿಲ್ಲ. ಬೆಂಗಳೂರಿನಿಂದ ಚನ್ನಪಟ್ಟಣದವರೆಗಿನ ಜೋಡಿ ಹಳಿ ಮಾರ್ಗ 2011ರಲ್ಲಿಯೇ ಪೂರ್ಣವಾಗಿತ್ತು. 2013ರ ಅಂತ್ಯದ ವೇಳೆಗೆ ಬೆಂಗಳೂರು– ಚನ್ನಪಟ್ಟಣ ಮಾರ್ಗದಲ್ಲಿ ವಿದ್ಯುದೀಕರಣ ಕಾಮಗಾರಿಯೂ ಪೂರ್ಣಗೊಂಡಿತ್ತು.
ಒಟ್ಟು 138 ಕಿ.ಮೀ ಉದ್ದದ ಈ ಜೋಡಿ ರೈಲು ಮಾರ್ಗದ ಕಾಮಗಾರಿ ಪೈಕಿ 28 ಕಿ.ಮೀ ಬಾಕಿ ಇದ್ದು, ಅದನ್ನು ಇನ್ನೊಂದು ವರ್ಷದಲ್ಲಿ ಪೂರ್ಣಗೊಳಿಸಿ, ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಇತ್ತೀಚೆಗೆ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪ್ರದೀಪ್‌ ಕುಮಾರ್‌ ಸಕ್ಸೇನಾ ಅವರು ಮೈಸೂರಿನಲ್ಲಿ ಹೇಳಿದ್ದರು.
ತಿಮ್ಮಕ್ಕನ ನೆರಳು
ಮಾಗಡಿಯ ಸಾಲುಮರದ ತಿಮ್ಮಕ್ಕನ ನೆರಳು ಯೋಜನೆಯಡಿ 3 ಕಿ.ಮೀ ರಸ್ತೆಯ ಅಕ್ಕಪಕ್ಕ ಗಿಡ ನೆಡುವ ಹಾಗೂ ಅದನ್ನು ಐದು ವರ್ಷ ನಿರ್ವಹಿಸುವ ಯೋಜನೆ ಪ್ರಕಟಿಸಿದ್ದಾರೆ. ಕಳೆದ ಸಾಲಿನ ಬಜೆಟ್‌ನಲ್ಲಿಯೂ ಸಾಲು ಮರದ ತಿಮ್ಮಕ್ಕನ ನೆರಳು ಹೆಸರಿನಲ್ಲಿ ಘೋಷಿಸಿದ್ದ ಮೂರು ಸಾವಿರ ಕಿ.ಮೀ ರಸ್ತೆ ಅಕ್ಕಪಕ್ಕ ಗಿಡ ನೆಡುವ ಕಾರ್ಯಕ್ರಮವನ್ನು ಈ ಬಾರಿಯೂ ಮುಂದುವರೆಸಿದ್ದಾರೆ.
ರೇಷ್ಮೆಗೆ ಒತ್ತು
ಈ ಬಾರಿಯ ಬಜೆಟ್‌ ಅನ್ನು ರೇಷ್ಮೆ ಬಜೆಟ್‌ ಅನ್ನಾಗಿ ರೂಪಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಕಪುರದ ಕಬ್ಬಾಳ್‌ ದೇವಾಲಯದ ಕಾರ್ಯಕ್ರಮದಲ್ಲಿ ಘೋಷಿಸಿದ್ದರು. ಅದರಂತೆ ಅವರು ಬಜೆಟ್‌ನಲ್ಲಿ ರೇಷ್ಮೆಗೆ ಒತ್ತು ನೀಡಿರುವುದು ಕಂಡ ಬರುತ್ತದೆ.
ಅದರಲ್ಲೂ ರಾಮನಗರ, ಶಿಡ್ಲಘಟ್ಟ, ಕೊಳ್ಳೆಗಾಲದಲ್ಲಿ ರೀಲಿಂಗ್‌ ಪಾರ್ಕ್‌ ಸ್ಥಾಪನೆಗಾಗಿ ₨ 10 ಕೋಟಿಯನ್ನು ಅವರು ಬಜೆಟ್‌ನಲ್ಲಿ ಒದಗಿಸಿದ್ದಾರೆ. ಇದರಿಂದ ರೀಲರ್‌್ಸಗಳಿಗೆ ಉತ್ತೇಜನ ನೀಡಿದಂತಾಗಿದೆ. ಅಧಿಕ ಇಳುವರಿ ನೀಡುವ ಹಿಪ್ಪುನೇರಳೆ ತಳಿಗಳನ್ನು ಜನಪ್ರಿಯಗೊಳಿಸಲು ಕ್ರಮ, ಘಟಕ ವೆಚ್ಚದ ಶೇಕಡ 75ರಷ್ಟು ಪ್ರೋತ್ಸಾಹ ಧನ, ಖಾಸಗಿ ವಲಯದಲ್ಲಿ 10 ಆರ್.ಎಸ್.ಪಿ.ಗಳ ಮೂಲಕ 50 ಲಕ್ಷ ಬೈವೋಲ್ಟಿನ್‌ ಮೊಟ್ಟೆ ಉತ್ಪಾದನೆಯ ಗುರಿ- ನಿಗದಿ ಪಡಿಸಿ ₨ 4.86 ಕೋಟಿ ಸಹಾಯಧನ ಮೀಸಲಿರಿಸಿದ್ದಾರೆ. ರೇಷ್ಮೆ ಕಚ್ಚಾ ಸಾಮಗ್ರಿಗಳ ವೆಚ್ಚಕ್ಕಾಗಿ ಆವರ್ತಕ ನಿಧಿಯನ್ನು ಒದಗಿಸುವುದಾಗಿ ಹೇಳಿದ್ದಾರೆ.
ಸ್ಪರ್ಧಾತ್ಮಕ ದರ ಮತ್ತು ರೇಷ್ಮೆ ವಹಿವಾಟಿನ ಉತ್ತೇಜನಕ್ಕೆ ಕೆಎಸ್‌ಎಂಬಿ ಬಲವರ್ದನೆಗೆ ಕ್ರಮ ಹಾಗೂ ರೇಷ್ಮೆ ಚಟುವಟಿಕೆಗಳ ಮತ್ತು ನೂಲು ಬಿಚ್ಚುವ ತಂತ್ರಜ್ಞಾನ ಪದ್ಧತಿಗೆ ಪ್ರೋತ್ಸಾಹ ಒದಗಿಸುವುದಾಗಿ ಸಿ.ಎಂ ಹೇಳಿರುವುದು ರೇಷ್ಮೆ ಬೆಳೆಗಾರರು, ರೀಲರ್‌್ಸಗಳಲ್ಲಿ ಉತ್ಸಾಹ ಮೂಡಿಸಿದೆ.
ತೆಂಗು ಬೆಳೆಗಾರರಲ್ಲಿ ಸಂತಸ
ತೆಂಗು ಉತ್ಪಾದಕರ ಸಂಘಗಳ ಸದಸ್ಯರು ತೆಂಗಿನ ಮರದಿಂದ ಕೆಲ ಪ್ರಮಾಣದಷ್ಟು ನೀರಾ ಉತ್ಪಾದಿಸಲು ಅನುವಾಗುವಂತೆ ಅಬಕಾರಿ ಅಧಿನಿ­ಯಮಕ್ಕೆ ತಿದ್ದುಪಡಿ ತರು­ವುದಾಗಿ ಮುಖ್ಯಮಂತ್ರಿ ಹೇಳಿರುವುದು ಈ ಭಾಗದ ತೆಂಗು ಬೆಳೆಗಾರರಲ್ಲಿ ಸಂತಸ ಹೆಚ್ಚಿಸಿದೆ. ನೀರಾ ಇಳಿಸುವುದಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಿ ಎಸ್‌.ಎಂ. ಕೃಷ್ಣ ಸರ್ಕಾರದ ಅವಧಿಯಲ್ಲಿ ಈ ಭಾಗದ ರೈತರು ಪ್ರತಿಭಟನೆ ಮಾಡಿ­ದ್ದರು. ಅದು ಅತಿರೇಕಕ್ಕೆ ಹೋದಾಗ ಚನ್ನಪಟ್ಟಣದ ವಿಠಲೇನ­ಹಳ್ಳಿ­ಯಲ್ಲಿ ಸರ್ಕಾರ ಗೋಲಿಬಾರ್ ಮಾಡಿತ್ತು. ಅದರಲ್ಲಿ ಇಬ್ಬರು ರೈತರು ಸಾವನ್ನಪ್ಪಿದ್ದರು.
ನನಸಾಗದ ವೈದ್ಯಕೀಯ ಕಾಲೇಜು
ಈ ಭಾಗದ ಜನರ ಬಹು ನಿರೀಕ್ಷಿತ ಯೋಜನೆಗಳಾದ ಕನಕಪುರ­ದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ಜಿಲ್ಲಾ ಕೇಂದ್ರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಯೋಜನೆಯ ಜೊತೆಗೆ ಹಲವು ಕಾರ್ಯಕ್ರಮಗಳು ಪ್ರಕಟವಾಗಿಲ್ಲ. ಇದರಿಂದ ಜನರಿಗೆ ನಿರಾಸೆ ಆಗಿದೆ.

ಆದಾಯ ಹೆಚ್ಚಿಸಲು ಮಾರ್ಗಗಳು[ಬದಲಾಯಿಸಿ]

ವಿವಿಧ ಇಲಾಖೆಗಳಿಗೆ ಕೇಂದ್ರದ ಅನುದಾನ ಕಡಿತಗೊಳಿ ಸಿರುವುದರ ಹೊರತಾಗಿಯೂ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಅಹಿಂದ ಸಮುದಾಯಕ್ಕೆ ಒತ್ತು ಮತ್ತು ಭಾಗ್ಯ ಯೋಜನೆಗಳನ್ನು ಮುಂದುವರಿಸಿರುವ ಸಿಎಂ ಸಿದ್ದರಾಮಯ್ಯ, ಅದಕ್ಕೆ ಬೇಕಾದ ಸಂಪನ್ಮೂಲ ಕ್ರೋಡೀಕರಿಸಲು ಶ್ರೀಸಾಮಾನ್ಯರ ಮೇಲೆ ಹೊರೆಹಾಕಿದ್ದಾರೆ.
ಪೆಟ್ರೋಲ್‌, ಡೀಸೆಲ್‌, ಮದ್ಯ, ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸುವ ಮೂಲಕ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸುವ ಪ್ರಯತ್ನ ಮಾಡಿರುವುದರ ಜತೆಗೆ ಮುಂದಿನ ವರ್ಷದಿಂದ ದೇಶಾದ್ಯಂತ ಜಾರಿಗೆ ಬರಲಿರುವ ಜಿಎಸ್‌ಟಿ ವ್ಯವಸ್ಥೆಗೆ ವಾಣಿಜ್ಯೋದ್ಯಮಿಗಳನ್ನು ಸಿದ್ಧಗೊಳಿಸಲು ಎಲ್ಲಾ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಮೂಲಕ ಸರಕು ಮತ್ತು ಸೇವಾ ತೆರಿಗೆಯಲ್ಲಿ ಪರಿಷ್ಕರಣೆಯ ಮುನ್ಸೂಚನೆ ನೀಡಿದ್ದಾರೆ.
ಒಟ್ಟು 1,42,534 ಕೋಟಿ ರೂ. ವೆಚ್ಚದ ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ, ಒಟ್ಟು 1,39,476 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದಾರೆ. ಇದರಲ್ಲಿ 46,245 ಕೋಟಿ ರೂ. ವಾಣಿಜ್ಯ ತೆರಿಗೆ, 15,200 ಕೋಟಿ ರೂ. ಅಬಕಾರಿ ತೆರಿಗೆ, 8,200 ಕೋಟಿ ರೂ. ಮುದ್ರಾಂಕ ಮತ್ತು ನೋಂದಣಿ ಶುಲ್ಕ ಹಾಗೂ 4,800 ಕೋಟಿ ರೂ. ಮೋಟಾರು ವಾಹನ ತೆರಿಗೆ ಸೇರಿದಂತೆ 1,01,235 ಕೋಟಿ ರೂ. ತೆರಿಗೆ ಮೂಲಕ ಸಂಗ್ರಹಿಸುವುದಾಗಿ ಹೇಳಿದ್ದಾರೆ. ತೆರಿಗೆಯೇತರ ರಾಜಸ್ವದಿಂದ 5,206 ಕೋಟಿ ರೂ. ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದಾರೆ. ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು 24,790 ಕೋಟಿ ರೂ. ಹಾಗೂ ಸಹಾಯಧನ ರೂಪದಲ್ಲಿ 9,919 ಕೋಟಿ ನಿರೀಕ್ಷಿಸಲಾಗಿದೆ.
2014-15ನೇ ಸಾಲಿನಲ್ಲಿ ನಿರೀಕ್ಷಿತ ತೆರಿಗೆ ಸಂಗ್ರಹ ಆಗದೇ ಇದ್ದರೂ 2015-16ನೇ ಸಾಲಿಗೆ ಹಿಂದಿನ ವರ್ಷದ ಪರಿಷ್ಕೃತ ಅಂದಾಜಿಗಿಂತ ಶೇ. 20.57ರಷ್ಟು ಹೆಚ್ಚುವರಿ ತೆರಿಗೆ ಸಂಗ್ರಹಿಸುವುದಾಗಿ ಹೇಳಿಕೊಂಡಿದ್ದಾರೆ. ಅದಕ್ಕಾಗಿಯೇ ಪೆಟ್ರೋಲ್‌, ಡೀಸೆಲ್‌, ತಂಬಾಕು ಉತ್ಪನ್ನಗಳು, ಮದ್ಯದ ಮೇಲಿನ ತೆರಿಗೆ ಹೆಚ್ಚಳ ಮಾಡಿದ್ದಾರೆ.
ಕಳೆದ ಐದಾರು ತಿಂಗಳಿನಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಗಣನೀಯವಾಗಿ ಕುಸಿದಿದ್ದರಿಂದ 2014-15ನೇ ಸಾಲಿನಲ್ಲಿ ಉದ್ದೇಶಿತ ವಾಣಿಜ್ಯ ತೆರಿಗೆ ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಹೀಗಾಗಿ 2015-16ನೇ ಸಾಲಿಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ಶೇ. 1ರಷ್ಟು ಹೆಚ್ಚಿಸಿದ್ದು, ಇದರಿಂದ ಸುಮಾರು 1,600 ಕೋಟಿ ರೂ. ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ. ಅದೇ ರೀತಿ ಎಲ್ಲಾ 17 ಸ್ಲಾಬ್‌ಗಳ ಮೇಲಿನ ಅಬಕಾರಿ ಸುಂಕದ ದರವನ್ನು ಶೇ.6ರಿಂದ 20ರಷ್ಟು ಹೆಚ್ಚಿಸಲಾಗಿದೆ. ಇದರಿಂದ 1200 ಕೋಟಿ ರೂ. ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ. ಅಲ್ಲದೆ, ಅಬಕಾರಿ ಬಾಕಿ ವಸೂಲಾತಿಗೆ ಅಸಲು ಪಾವತಿಸುವ ಅಬಕಾರಿ ಗುತ್ತಿಗೆದಾರರಿಗೆ ಕರ ಸಮಾಧಾನ ಯೋಜನೆ ಜಾರಿಗೊಳಿಸಿ 200 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದ್ದಾರೆ. ಜೊತೆಗೆ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ.17ರಿಂದ ಶೇ. 20ಕ್ಕೆ (ಶೇ.3ರಷ್ಟು) ಏರಿಸಿದ್ದು, ಇದರಿಂದ ಸುಮಾರು 1,300 ಕೋಟಿ ರೂ. ಹೆಚ್ಚುವರಿ ಆದಾಯ ನಿರೀಕ್ಷಿಸಿದ್ದಾರೆ.
ಹೆಚ್ಚಿದ ಸಾಲದ ಹೊರೆ
ಪ್ರತಿಪಕ್ಷ ನಾಯಕರಾಗಿದ್ದಾಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ದ್ದಾಗ ಹೆಚ್ಚು ಸಾಲ ಮಾಡಿ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿತ್ತು ಎಂದು ಆರೋಪಿಸಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ತಾವೂ ಅದನ್ನೇ ಮುಂದುವರಿಸಿದ್ದಾರೆ.
2014-15ನೇ ಸಾಲಿನ ಬಜೆಟ್‌ನಲ್ಲಿ 25,042 ಕೋಟಿ ರೂ. ಸಾಲ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದ ಸಿದ್ದರಾಮಯ್ಯ ಅವರು 2015-16ನೇ ಸಾಲಿನಲ್ಲಿ 25,042 ಕೋಟಿ ರೂ. ಹೊಸ ಸಾಲ ಮಾಡುವುದಾಗಿ ಹೇಳಿದ್ದು, 2016ರ ಮಾರ್ಚ್‌ ಅಂತ್ಯದ ವೇಳೆಗೆ ರಾಜ್ಯದ ಮೇಲೆ 1,80,815 ಕೋಟಿ ರೂ. ಸಾಲ ಇರುತ್ತದೆ ಎಂದು ತಿಳಿಸಿದ್ದಾರೆ.
ಈ ಸಾಲದ ಮೊತ್ತ ರಾಜ್ಯದ ಒಟ್ಟು ಆತಂರಿಕ ಉತ್ಪನ್ನದ ಶೇ.24.56ರಷ್ಟಾಗುತ್ತಿದೆಯಾದರೂ ಇದು ವಿತ್ತೀಯ ಹೊಣೆಗಾರಿಕೆ ಅಧಿನಿಯಮದಡಿ ನಿಗದಿಪಡಿಸಿರುವ ಶೇ.25ರ ಮಿತಿಯೊಳಗೆ ಇರುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.
2014-15ನೇ ಸಾಲಿನ ಕೊನೆಯಲ್ಲಿ (ಮಾರ್ಚ್‌ ಅಂತ್ಯಕ್ಕೆ) ರಾಜ್ಯದ ಮೇಲೆ 1.6 ಲಕ್ಷ ಕೋಟಿ ಕೋಟಿ ರೂ. ಸಾಲದ ಹೊರೆ ಇರುತ್ತದೆ.
ಚಿಟ್‌ಫ‌ಂಡ್‌ಗೂ ಮುದ್ರಾಂಕ ಶುಲ
ಮುದ್ರಾಂಕ ಮತ್ತು ನೋಂದಣಿ ಶುಲ್ಕ ಸಂಗ್ರಹಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಬದಲಾವಣೆಗಳನ್ನು ಮಾಡುವ ಮೂಲಕ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಸಿದ್ದರಾಮಯ್ಯ ಪ್ರಯತ್ನಿಸಿದ್ದಾರೆ. ಈ ಬಾರಿ ಚಿಟ್‌ಫ‌ಂಡ್‌ಗಳಿಗೆ ಮುದ್ರಾಂಕ ಶುಲ್ಕ ವಿಧಿಸಲಾಗಿದೆ. ಜತೆಗೆ ನೋಂದಣಿ ಶುಲ್ಕದಲ್ಲಿ ಪರಿಷ್ಕರಣೆ ಮಾಡಲಾಗಿದ್ದು, ಇದರಿಂದ ಹೆಚ್ಚುವರಿಯಾಗಿ 125 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಒಟ್ಟಾರೆ ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ 8,200 ಕೋಟಿ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಸುಧಾರಣೆಗಳು
ದಸ್ತಾವೇಜುಗಳ ನೋಂದಣಿಗೆ ಆಯಾ ಜಿಲ್ಲೆಯೊಳಗೆ ಅನುಕೂಲವಾಗುವ ಉಪನೋಂದಣಿ ಕಚೇರಿ ಆಯ್ಕೆ ಮಾಡಿ ಮುಂಗಡ ಸಮಯ ಕಾಯ್ದಿರಿಸಲು ಆನ್‌ಲೈನ್‌ ಮೂಲಕ ಅವಕಾಶ ಮಾಡಿಕೊಡುವುದು, ಸಾರ್ವಜನಿಕರು ತಾವೇ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಲೆಕ್ಕ ಹಾಕಿ ಪಾವತಿಸುವುದು, ಕ್ರಯಪತ್ರ ಮುಂತಾದ ವರ್ಗಾವಣೆ ದಸ್ತಾವೇಜು ನಮೂನೆಗಳನ್ನು ಆನ್‌ಲೈನ್‌ ಮೂಲಕ ದೊರೆಯುವಂತೆ ಮಾಡುವುದು, ದಸ್ತಾವೇಜುಗಳ ದೃಢೀಕೃತ ನಕಲು ಮತ್ತು ಋಣಭಾರ ಪತ್ರಗಳನ್ನು ಸುಲಭ್‌ ನೋಂದಣಿ ತಂತ್ರಾಂಶದಡಿ ಸಾರ್ವಜನಿಕರು ಪಡೆಯಲು ಅವಕಾಶ ಕಲ್ಪಿಸುವುದು. ಅಲ್ಲದೆ, ಕ್ರಯದ ಕರಾರು, ಲೀಸ್‌ ಪತ್ರಗಳು, ಲೀವ್‌ ಅಂಡ್‌ ಲೈಸನ್ಸ್‌ ದಸ್ತಾವೇಜುಗಳನ್ನು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಕೃಷಿ ಸಾಲಕ್ಕಾಗಿ ರೈತರು ಆಧಾರ ಪತ್ರ, ತೀರುವಳಿ ಪತ್ರ ಮತ್ತು ಋಣಭಾರಪತ್ರಗಳನ್ನು ಪಡೆಯಲು ಉಪನೋಂದಣಿ ಕಚೇರಿಗೆ ಹೋಗುವುದನ್ನು ತಪ್ಪಿಸಲು ಕಾವೇರಿ ತಂತ್ರಾಂಶ ಮತ್ತು ಬ್ಯಾಂಕ್‌ ತಂತ್ರಾಂಶಗಳನ್ನು ಸಂಯೋಜನೆಗೊಳಿಸಿ ಈ ಪತ್ರಗಳು ಆನ್‌ಲೈನ್‌ ಮೂಲಕವೇ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು. ಇದಲ್ಲದೆ, ಅಡಮಾನ, ಗಿರವಿ, ಒತ್ತೆ ಇತ್ಯಾದಿ ವಸ್ತುಗಳ ಮೇಲೆ ಪಾವತಿಸಬೇಕಾದ ಮುದ್ರಾಂಕ ಶುಲ್ಕ ಸಂಗ್ರಹಿಸಲು ಮತ್ತು ರಿಟರ್ನ್ಗಳನ್ನು ಆನ್‌ಲೈನ್‌ ಮೂಲಕ ಪಾವತಿಸಲು ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳನ್ನು ಜವಾಬ್ದಾರಿ ಮಾಡಲು, ಕೆಲವು ದಸ್ತಾವೇಜುಗಳ ಮೇಲೆ ಪಾವತಿಸಬೇಕಾದ ಪ್ರತ್ಯೇಕ ಮುದ್ರಾಂಕ ಶುಲ್ಕವನ್ನು ಒಟ್ಟುಗೂಡಿಸಲುಮುದ್ರಾಂಕ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಹೇಳಿದ್ದಾರೆ.
ತೆರಿಗೆ ಸಂಗ್ರಹಕ್ಕೆ ಸುಧಾರಣಾ ಕ್ರಮಗಳು
  • ಇದಲ್ಲದೆ ವಿವಿಧ ತೆರಿಗೆ ಸಂಗ್ರಹ ಹೆಚ್ಚಿಸಲು ಹಲವು ಸುಧಾರಣಾ ಕ್ರಮಗಳನ್ನೂ ಅನುಸರಿಸುವುದಾಗಿ ಹೇಳಿದ್ದಾರೆ. ಆ ನಿಟ್ಟಿನಲ್ಲಿ ಕರನಿರ್ಧರಣೆ ಕುರಿತ ಮೇಲ್ಮನವಿಗಳನ್ನು ಇತ್ಯರ್ಥಗೊಳಿಸಲು ಕಾಲಮಿತಿ ನಿಗದಿಪಡಿಸುವುದಾಗಿ ಹೇಳಿದ್ದಾರೆ. ಮೌಲ್ಯವರ್ಧಿತ ತೆರಿಗೆ ಪದ್ಧತಿಯಲ್ಲೂ ಸುಧಾರಣೆ ತರುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ತೆರಿಗೆ ಸಂಗ್ರಹ ಗುರಿ -> 2014-15<->2015-16
ತೆರಿಗೆ ಗುರಿ 2014-15 ಗುರಿ 2015-16
ವಾಣಿಜ್ಯ ತೆರಿಗೆ 42,200 ಕೋಟಿ ರೂ. 46,250 ಕೋಟಿ ರೂ.
ಅಬಕಾರಿ ತೆರಿಗೆ 14,400 ಕೋಟಿ ರೂ 15,200 ಕೋಟಿ ರೂ
ಮುದ್ರಾಂಕ- ನೋಂದಣಿ 7,450 ಕೋಟಿ ರೂ . 8,200 ಕೋಟಿ ರೂ
ಮೋಟಾರು ವಾಹನ 4,350 ಕೋಟಿ ರೂ. 4,800 ಕೋಟಿ ರೂ
ಹಲವು ಉತ್ಪನ್ನಗಳ ತೆರಿಗೆ ಇಳಿಕೆ
ಮೌಲ್ಯವರ್ಧಿತ ತೆರಿಗೆ ಅಡಿಯಲ್ಲಿ ಹಲವು ಉತ್ಪನ್ನಗಳ ತೆರಿಗೆ ಇಳಿಸಲಾಗಿದೆ. ಅಲ್ಲದೆ ಸಣ್ಣ ವ್ಯಾಪಾರಿಗಳಿಗೆ ಪರವಾನಗಿ ನೋಂದಣಿ ಮಿತಿಯನ್ನು 7.5 ಲಕ್ಷದಿಂದ 10 ಲಕ್ಷ ರೂ.ಗೆ ಏರಿಸಲಾಗಿದೆ. ಭತ್ತ, ಅಕ್ಕಿ, ಗೋಧಿ, ಬೇಳೆಕಾಳುಗಳು ಹಾಗೂ ಅಕ್ಕಿ ಮತ್ತು ಗೋಧಿಯಿಂದ ತಯಾರಿಸುವ ವಸ್ತುಗಳ ಮೇಲೆ ತೆರಿಗೆ ವಿನಾಯಿತಿಯನ್ನು ಮುಂದುವರಿಸಲಾಗಿದೆ.
500 ರೂ.ಗಿಂತ ಕಡಿಮೆ ಬೆಲೆಯ ಪಾದರಕ್ಷೆಗಳು, ಗ್ರಾಮೀಣ ಪ್ರದೇಶದ ಮಹಿಳಾ ಸಂಘನೆಗಳು ಬಾಳೆನಾರು ಮತ್ತಿತರೆ ಕೃಷಿ ತ್ಯಾಜ್ಯ ಬಳಸಿ ಕೈಯಿಂದ ತಯಾರಿಸಿದ ಫ್ಲೋರ್‌ಮ್ಯಾಟ್‌, ಟೇಬಲ್‌ ಮ್ಯಾಟ್‌, ರನ್ನರ್‌ ಯುಟಿಲಿಟಿ ಕೈಚೀಲಗಳು, ಅಲಂಕಾರಿಕ ವಸ್ತುಗಳನ್ನು ಹೊರತುಪಡಿಸಿ ಇತರೆ ಉತ್ಪನ್ನಗಳು ಹಾಗೂ ಸೋಲಾರ್‌ ಪಿ.ವಿ.ಪ್ಯಾನಲ್‌ ಮತ್ತು ಸೋಲಾರ್‌ ಇನ್‌ವರ್ಟರ್‌ಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.
ಸೀಮೆಎಣ್ಣೆ ಬತ್ತಿ ಸ್ಟೌ ಮೇಲಿನ ತೆರಿಗೆಯ°ನು ಶೇ.14.5ರಿಂದ 5.5ಕ್ಕೆ, ಮರಳಿಗೆ ಪರ್ಯಾಯವಾಗಿ ಬಳಸುವ ಎಂ.ಸ್ಯಾಂಡ್‌, ಇಡಸ್ಟ್ರಿಯಲ್‌ ಕೇಬಲ್‌ಗ‌ಳು, ಪ್ರಿಂಟಿಂಗ್‌ ಉದ್ಯಮದಲ್ಲಿ ಬಳಸುವ ಪ್ರಿ-ಸೆನ್ಸಿಟೈಸ್ಡ್ ಲಿಥೋಗ್ರಾಫಿಕ್‌ ಪ್ಲೇಟ್‌ಗಳು ಮತ್ತು ಪ್ಯಾಕಿಂಗ್‌ ವಸ್ತುಗಳು, ಮೊಬೈಲ್‌ ಚಾರ್ಜರ್‌ಗಳ ಮೇಲಿನ ತೆರಿಗೆಯನ್ನು ಶೇ.5.5ಕ್ಕೆ ಇಳಿಸಲಾಗಿದೆ.
60 ವರ್ಷಕ್ಕೇ ಹಿರಿಯ ನಾಗರಿಕ
ಹಿರಿಯ ನಾಗರಿಕರ ಪಾಲಿಗೆ ಸಿದ್ದರಾಮಯ್ಯ ಅವರ ಬಜೆಟ್‌ ಲಾಭ ತಂದುಕೊಟ್ಟಿದೆ. ಹಿರಿಯ ನಾಗರಿಕರು ಎಂದು ಪರಿಗಣಿಸಲು ಇದ್ದ ವಯೋಮಿತಿಯನ್ನು 65ರಿಂದ 60ಕ್ಕೆ ಇಳಿಸಿರುವ ಮುಖ್ಯಮಂತ್ರಿ, 60 ವರ್ಷಕ್ಕಿಂತ ಹೆಚ್ಚಿನವರಿಗೆ ವೃತ್ತಿ ತೆರಿಗೆ ವಿನಾಯಿತಿ ಸಿಗುವಂತೆ ಮಾಡಿದ್ದಾರೆ. ಈ ಮಧ್ಯೆ ವೃತ್ತಿ ತೆರಿಗೆ ವಿನಾಯಿತಿ ಸೌಲಭ್ಯವನ್ನು 10 ಸಾವಿರದಿಂದ 15 ಸಾವಿರಕ್ಕೆ ಹೆಚ್ಚಿಸಿದ್ದಾರೆ.
ಅಂದರೆ, ಇದುವರೆಗೆ 10 ಸಾವಿರಕ್ಕಿಂತ ಕಡಿಮೆ ಮಾಸಿಕ ಸಂಬಳ ಪಡೆಯುತ್ತಿದ್ದವರು ಮಾತ್ರ ಪಾವತಿಸಬೇಕಾಗಿದ್ದ ವೃತ್ತಿ ತೆರಿಗೆಯನ್ನು ಇನ್ನು ಮುಂದೆ 15 ಸಾವಿರ ರೂ.ಗಿಂತ ಕಡಿಮೆ ಸಂಬಳ ಪಡೆಯುತ್ತಿರುವವರೂ ಪಾವತಿಸಬೇಕು.

ಅಭಿಪ್ರಾಯಗಳು[ಬದಲಾಯಿಸಿ]

ಸಣ್ಣ ಮತ್ತು ಅತಿ ಸಣ್ಣ ಉದ್ಯಮದಾರರನ್ನು ತಲುಪಲು ಪ್ರಾಮಾಣಿಕ ಪ್ರಯತ್ನ ನಡೆದಿದೆ. ಕೌಶಲ್ಯ ಅಭಿವೃದ್ಧಿಗೆ ಪ್ರೋತ್ಸಾಹ ಸಿಕ್ಕಿದೆ.
  • ಚಿದಾನಂದ ರಾಜಮಾನೆ, ಅಧ್ಯಕ್ಷರು, (ಕಾಸಿಯಾ)
ಇದೊಂದು ಶಿಕ್ಷಣ ವಿರೋಧಿಧಿ ಬಜೆಟ್‌. ಕಳೆದ ವರ್ಷ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ 17,425 ಕೋಟಿ ಒದಗಿಸಲಾಗಿದ್ದನ್ನು ಕಡಿತಗೊಳಿಸಿ 16,204 ಕೋಟಿಗೆ ಇಳಿಸೊರುವುದು ಶಿಕ್ಷಣ ವಿರೋಧಿಧಿ ಬಜೆಟ್‌ ಆಗಿದೆ.
  • ಅರುಣ ಶಹಾಪುರ, ವಿಧಾನಪರಿಷತ್‌ ಸದಸ್ಯ
ಬರುವ ಗ್ರಾಪಂ ಚುನಾವಣೆಯನ್ನೇ ಉದ್ದೇಶವನ್ನಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಹೊಸತನವಿಲ್ಲದ ಹಾಗೂ ನಿರಾಶಾದಾಯಕ ಬಜೆಟ್‌ ಮಂಡಿಸಿದ್ದಾರೆ.
  • ಪ್ರೊ|ಎಸ್‌.ವಿ.ಸಂಕನೂರ, ವಿಧಾನ ಪರಿಷತ್‌ ಸದಸ್ಯ
ಜ್ವಲಂತ ಸಮಸ್ಯೆ ನಿವಾರಣೆ, ಅಂತರ್ಜಲ ಅಭಿವೃದ್ಧಿ ಗುರಿಯನ್ನು ಹೊಂದಿಲ್ಲ. ಆದರೂ, ಸಿದ್ದು ಸಾಮಾಜಿಕ ನ್ಯಾಯ ಕಾಪಾಡಿದ್ದಾರೆ. ಇದು ಫಿಫ್ಟಿ-ಫಿಫ್ಟಿ ಬಜೆಟ್‌.
  • ಪುಟ್ಟಣ್ಣಯ್ಯ, ಶಾಸಕ
ಆಯವ್ಯಯವು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ. ಕೈಗಾರಿಕೆ, ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ, ಮಾಹಿತಿ ಮತ್ತು ಜೈವಿಕ ತಂತ್ರಜಾnನ ಕ್ಷೇತ್ರಗಳ
  • ಛೇರ್ಮನ್‌, ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ),ಅಧ್ಯಕ್ಷ, ನವೀಕರಿಸಬಹುದಾದ ಇಂಧನ ತಯಾರಕರ ಸಂಘ

ಇವುಗಳನ್ನೂ ನೋಡಿ[ಬದಲಾಯಿಸಿ]


ಉಲ್ಲೇಖಗಳು[ಬದಲಾಯಿಸಿ]

ಹೊರಕೊಂಡಿಗಳು[ಬದಲಾಯಿಸಿ]