ಕನ್ಯಾಣ ಕೋಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮವಾಸೆ ಸ್ನಾನ

ಕೋಡಿ ಕನ್ಯಾಣ ಉಡುಪಿ ಯಿಂದ ಸುಮಾರು 26 ಕಿಮೀ ದೂರಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲಿಗ್ರಾಮ ಸಿಗುತ್ತದೆ ಸಾಲಿಗ್ರಾಮದಿಂದ ಎಡ ಭಾಗಕ್ಕೆ ಕನ್ಯಾಣಕ್ಕೆ ಹೊಗುವ ರಸ್ತೆ ಸಿಗುತ್ತದೆ ಅಲ್ಲಿಂದ ಸಾಗಿದರೆ 3.5ಕಿಮೀ ದೂರಕ್ಕೆ ಸೀತಾನದಿ ಹರಿಯುತ್ತದೆ ಕನ್ಯಾಣಕ್ಕೆ ಹೊಗಬೇಕಾದರೆ ಸೇತುವೆ ದಾಟಿ ಹೋಗಬೇಕು ಅದೇ ಕನ್ಯಾಣ ಸೇತುವೆ ಅಲ್ಲಿಂದ ಅರ್ದ ಕಿಲೋಮೀಟರ್ ಸಾಗಿದರೆ ಕನ್ಯಾಣ ಮುಖ್ಯ ರಸ್ತೆ ಸಿಗುತ್ತದೆ ಬಲಭಾಗಕ್ಕೆ ತಿರುಗಿದರೆ ಪಾರಂಪಳ್ಳಿ ಗ್ರಾಮ ಸಿಗುತ್ತದೆ ಎಡಕ್ಕೆ ಸಾಗಿದರೆ ಕನ್ಯಾಣ ಕೋಡಿಗೆ ದಾರಿ ಪಶ್ಚಿಮಕ್ಕೆ ಸಾಗಿದರೆ ಕಡಲ ಕಿನಾರೆ ಅದುವೆ ಅಮವಾಸೆ ಕಡು (ಕಡುಅಂದರೆ ದಾರಿ) ಅಮವಾಸೆ ಕಡು

ಅಲ್ಲಿನ ವಿಶೇಷವೆನೆಂದರೆ ಪ್ರತೀ ವರ್ಷ ಆಷಾಡ ಮಾಸದಲ್ಲಿ ಕರ್ಕಾಟಕ ಅಮವಾಸೆ ಬರುತ್ತದೆ ಆ ದಿನ ಕಡಲ ಸ್ನಾನ ಮಾಡುವುದು ವಾಡಿಕೆ ಆ ದಿನ ಸಾವಿರಾರು ಜನರು ಬಂದು ಸ್ನಾನ ಮಾಡಿಕೊಂಡು ಹೊಗುತ್ತಾರೆ ಅಂತೆಯೆ ಮನುಷ್ಯರಿಗಿಂತ ಮೊದಲು ಕೋತಿಗಳು ಸ್ನಾನ ಮಾಡಿಕೊಂಡು ಹೊಗುತ್ತವೆ ಅದೇ ವಿಶೇಷತೆ ತುಳುನಾಡಿನಲ್ಲಿ ಆಟಿ ಅಮವ್ಯಾಸೆಗೆ ವಿಶೇಷ ಸ್ಥಾನಮಾನವಿದೆ. ಕರಾವಳಿ ಭಾಗದಲ್ಲಿ ಹೆಚ್ಚಾಗಿ ಈ ಸಮಯದಲ್ಲಿ ಹಾಲೇ ಮರದ ತೊಗಟೆ ಕಷಾಯವನ್ನು ಸೇವಿಸುತ್ತಾರೆ. ಆಟಿ ಅಮವ್ಯಾಸೆ ದಿನವಾದ ಅಂದು ಅನೇಕ ಜನರು ಈ ಕಷಾಯವನ್ನು ಸಿದ್ಧಪಡಿಸಿ ಸೇವಿಸಿ ಸಂಭ್ರಮಿಸಿವರು. ತುಳುವರ ಪ್ರಕಾರ ಆಟಿ ತಿಂಗಳಲ್ಲಿ ಬರುವ ಈ ಅಮವ್ಯಾಸೆಗೆ ಬಹಳಷ್ಟು ಪ್ರಾಮುಖ್ಯತೆ ಇರುತ್ತದೆ. ಅಮವ್ಯಾಸೆ ದಿನದಂದು ನಸುಕಿನಲ್ಲಿ ಎದ್ದು ಹಾಲೆ ಮರದ ತೊಗಟೆಯನ್ನು ಕಲ್ಲಿನಲ್ಲಿ ಜಜ್ಜಿ ತೆಗೆದು ಕಲ್ಲಿನಿಂದಲೇ ತೊಗಟೆ ಸ್ವಚ್ಛಗೊಳಿಸಿ ಗುದ್ದಿ ರಸ ತೆಗೆಯಲಾಗುತ್ತದೆ. ನಂತರ ಈ ರಸದೊಂದಿಗೆ ಬೆಳ್ಳುಳ್ಳಿ, ವಾಮ, ಕರಿಮೆಣಸನ್ನು ಕಡೆದು ಸೇರಿಸಿ ಕಷಾಯವನ್ನು ತಯಾರಿಸಲಾಗುತ್ತದೆ. ನಂತರ ಖಾಲಿ ಹೊಟ್ಟೆಯಲ್ಲಿಯೇ ಕಷಾಯವನ್ನು ಸೇವಿಸಿ ನಂತರ ಇದಕ್ಕೆ ಪೂರಕವಾಗಿ ಮೆಂತೆ ಗಂಜಿಯನ್ನು ಸೇವಿಸಲಾಗುತ್ತದೆ. ಕರಾವಳಿಯಲ್ಲಿ ಅಂದು ಲಕ್ಷಾಂತರ ಮಂದಿ ಮುಂಜಾನೆ ಎದ್ದು ಸಮುದ್ರ ಸ್ನಾನ ಮಾಡಿದ ನಂತರ ಈ ಕಷಾಯವನ್ನು ಸೇವಿಸಿ ಸಂಭ್ರಮಿಸಿವರು. ಈ ಕಷಾಯವು ಆಯುರ್ವೇದ ಔಷಧ ಗುಣವನ್ನು ಹೊಂದಿದ್ದು ಅತಿ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಈ ಕಷಾಯವನ್ನು ಸೇವಿಸಿದರೆ ಅತೀಸಾರ, ಅಜೀರ್ಣ, ಜಠರ ಸಂಬಂಧಿ ಕಾಯಿಲೆಗೆ ರಾಮಬಾಣವಾಗಿದೆ. ಅಲ್ಲದೇ ಗರ್ಭೀಣಿ ಮಹಿಳೆಯರು ಈ ಕಷಾಯವನ್ನು ಸೇವಿಸದರೆ ಈ ಕಷಾಯವನ್ನು ಸೇವಿಸಿದರೆ ಬಲವರ್ಧಕರಾಗುತ್ತಾರೆ ಎಂಬ ನಂಬಿಕೆ ಕೂಡಾ ತುಳುವರಲ್ಲಿದೆ.ತುಳುನಾಡಿನ ಈ ಆಟಿ ವಿಶೇಷ ಆಚರಣೆ ಇಂದಿಗೂ ನಂಬಿಕೆ ನೆಲೆಗಟ್ಟಿನ ಮೇಲೆ ನಡೆದುಕೊಂಡು ಬರುತ್ತಿದೆ. ಇದರಲ್ಲಿಯೂ ಹಾಲೆ ಮರದ ಕಷಾಯ ಸೇವನೆಯ ಆಚರಣೆಯು ಯುವಜನಾಂಗದಲ್ಲಿಯೂ ವಿಶಿಷ್ಟ ರೋಮಾಂಚನವನ್ನು ಹುಟ್ಟಿಸುತ್ತಿದೆ ಎಂಬುದವುದು ಗಮನಾರ್ಹ ಸಂಗತಿ. ಕನ್ಯಾಣದ ಜನರ ಕಸಬು ಮೀನುಗಾರಿಕೆ ಮತ್ತು ಕೃಷಿಗಾರಿಕೆ ಕನ್ಯಾಣದಲ್ಲಿ ೫೦೦ ಮನೆಗಳಿದ್ದು ಎಲ್ಲಾ ಸಮುದಾಯದ ಜನರು ವಾಸಿಸುತ್ತಾರೆ ಕನ್ಯಾಣದ ಮದ್ಯ ಭಾಗದಲ್ಲಿ ಮಹಾಸತೀಶ್ವರಿ ದೇವಸ್ತಾನವಿದೆ ಮತ್ತು ಮಲಸಾವರಿ ದೇವಸ್ತಾನವಿದ್ದು ಪ್ರತೀ ವರ್ಷವು ಜಾತ್ರೆ ನೆಡೆಯುತ್ತದೆ ಜಾತ್ರೆಯು ಜನವರಿ ತಿಂಗಳಿನ 18 ರಂದು ಜಾತ್ರೆ ನೆಡೆಯುತ್ತದೆ ಅಂದು ರಾತ್ರಿ ಕೆಂಡಸೇವೆ ನೆಡೆಯುತ್ತದೆ ಮಾರನೇ ದಿನ ತುಲಾಭಾರ ನೆಡೆಯುತ್ತದೆ ಮತ್ತು ದಕ್ಕೆ ಬಲಿ ಇತ್ಯಾದಿ ನೆಡೆಯುತ್ತದೆ ಮಾರನೇಯ ದಿನ ಮಲಸಾವರಿ ಕೋಲ ನೆಡೆಯುತ್ತದೆ ಕೋಲದ ನಂತರ ಬೆಳಿಗ್ಗೆ ಮಹಾ ಪೂಜೆ ಮದ್ಯಾಹ್ನ ಕುರಿ ಕೋಳಿ ಬಲಿ ಕೋಡುವ ಕಾರ್ಯಕ್ರಮ ಅಲ್ಲಿ ಮಲಸಾವರಿಗೆ ಬಲಿ ಕೊಟ್ಟ ಕುರಿ ಕೋಳಿಯನ್ನು ಪ್ರಾಸಾದವನ್ನಾಗಿ ಊರಿನ ಜನರಿಗೆ ಹಂಚುತ್ತಾರೆ ನಂತರ ಸಂಜೆ ಕೋಳಿ ಪಂದ್ಯಾವಳಿ ನೆಡೆಯುತ್ತದೆ ಅದೇ ದಿನ ರಾತ್ರಿ ಕಮಲಶಿಲೆ ಯಕ್ಷಗಾನ ಮಂಡಳಿಯಿಂದ ಹರಕೆ ಬಯಲಾಟ ನೆಡೆಯುತ್ತದೆ ಇದೆಲ್ಲವನ್ನು ಊರಿನ ಮುಖಂಡರು ಮತ್ತು ಪುಜಾರಿಮನೆಯವರು ನೆಡೆಸಿಕೊಂಡು ಹೋಗುತ್ತಾರೆ ನಂತರ ಕನ್ಯಾಣದಲ್ಲಿ ಶನೀಶ್ವರ ದೇವಸ್ತಾನವಿದ್ದು ವರ್ಷ ವರ್ಷವು ವಾರ್ಷೀಕೋತ್ಸವ ನೆಡೆಯುತ್ತದೆ ಕನ್ಯಾಣದ ಕೊನೆಯ ಭಾಗದಲ್ಲಿ ಮುಸ್ಲಿಮ್ ಸಮುದಾಯದ ಮಸೀದಿಯಿದ್ದು ನಂತರ ಕೋಡಿ ಸಿಗುತ್ತದೆ ಮೋದಲು ಕೋಡಿ ಹೈಸ್ಕೂಲ್ ಸಿಗುತ್ತದೆ ಆನಂತರ ಶ್ರೀ ರಾಮಮಂದಿರವಿದ್ದು ಅಲ್ಲಿಯು ಕೂಡ ವರ್ಷ ವರ್ಷವು ವಾರ್ಷೀಕೋತ್ಸವ ನೆಡೆಯುತ್ತದೆ ಎಲ್ಲಾ ಭಕ್ತಾದಿಗಳು ಬಂದು ಶ್ರೀರಾಮನ ಕ್ರಪೆಗೆ ಪಾತ್ರರಾಗುತ್ತಾರೆ ಇದನ್ನು ರಾಷ್ಟ್ರೀಯ ಸ್ವಯಂಸೇವಕ ಸಘದ ಕಾರ್ಯಕರ್ತರು ಹಾಗು ಊರಿನ ಮುಖಂಡರು ನೆಡೆಸಿಕೊಂಡು ಹೋಗುತ್ತಾರೆ ನಂತರ ಸಿಗುವುದೆ ಕೋಡಿ ಹಿರಿಯ ಪ್ರಾಥಮಿಕ ಪಾಠಶಾಲೆಯಿದ್ದು ಅಲ್ಲಿಯೇ ಕೋಡಿ ಗ್ರಾಮ ಪಂಚಾಯತ್ ಕೂಡ ಇರುತ್ತದೆ

ಕೋಡಿಯಲ್ಲಿ ಸುಮಾರು 2000 ಮನೆಗಳಿದ್ದು ಅಲ್ಲಿಯ ಜನರ ಕಸಬು ಮೀನುಗಾರಿಕೆ ಮತ್ತು ಕ್ರಷಿಯನ್ನು ಅವಲಂಬಿಸಿಕೊಂಡಿದ್ದಾರೆ