ಕದ್ರಿ ಗೋಪಾಲನಾಥ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಕದ್ರಿ ಗೋಪಾಲನಾಥ್'

ಕದ್ರಿ ಗೋಪಾಲನಾಥ್ ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ಸ್ಯಾಕ್ಸೊಫೋನ್ ವಾದಕರು. 'ಕದ್ರಿ ಗೋಪಾಲನಾಥ್' ದಕ್ಷಿಣ ಕನ್ನಡ ಜಿಲ್ಲೆಯ, 'ಪಾಣೆಮಂಗಳೂರಿ'ನಲ್ಲಿ ೧೯೫೦ ರಲ್ಲಿ ಜನಿಸಿದರು. ಅವರ ತಂದೆ ಶ್ರೀ 'ತನಿಯಪ್ಪ'ನವರು ನಾದಸ್ವರ ವಾದಕರು. ಅವರಿ೦ದ ನಾದಸ್ವರವನ್ನು ನುಡಿಸಲು ಕಲಿತ, 'ಕದ್ರಿ ಗೋಪಾಲನಾಥ್' ನಂತರ 'ಸ್ಯಾಕ್ಸೊಫೋನ್' ನತ್ತ ತಿರುಗಿದರು. 'ಕರ್ನಾಟಕ ಸಂಗೀತ'ದಲ್ಲಿ ಕಂಡುಬರುವ ಗಮಕ ಮೊದಲಾದ ಅಲಂಕಾರಗಳಿಗೆ 'ಸ್ಯಾಕ್ಸೊಫೋನ್' ತಕ್ಷಣ ಒಗ್ಗುವ ವಾದ್ಯವಲ್ಲದಿದ್ದರೂ ಅದಕ್ಕೆ ಸೂಕ್ತ ಬದಲಾವಣೆಗಳನ್ನು ತಂದು 'ಸ್ಯಾಕ್ಸೊಫೋನ್' ನಲ್ಲಿ 'ಕರ್ನಾಟಕ ಸಂಗೀತ'ವನ್ನು ಸ್ಫುಟವಾಗಿ ನುಡಿಸುವ ವಿಧಾನವನ್ನು 'ಕದ್ರಿ ಗೋಪಾಲನಾಥ್' ಕಂಡುಹಿಡಿದರು. 'ಟಿ ವಿ ಗೋಪಾಲಕೃಷ್ಣನ್' ಇವರ ಮುಖ್ಯ ಗುರುಗಳು.

'ಸ್ಯಾಕ್ಸೋಫೋನನ್ನು', 'ಕರ್ನಾಟಕ ಸಂಗೀತ'ಕ್ಕೆ ಅಳವಡಿಸಿ, ಪ್ರಸಿದ್ಧಿಪಡಿಸಿದರು[ಬದಲಾಯಿಸಿ]

'ಡಾ.ಬಾಲಮುರಳಿಕೃಷ್ಣರವರ ಜೊತೆ'

ಭಾರತದಲ್ಲಿ ಮತ್ತು ಹೊರಗೆ ಅನೇಕ 'ಸಂಗೀತ-ಕಛೇರಿ'ಗಳನ್ನು ನಡೆಸುತ್ತಾ ಬ೦ದಿರುವ 'ಕದ್ರಿ ಗೋಪಾಲನಾಥ್' ಸ್ಯಾಕ್ಸೊಫೋನ್ ಚಕ್ರವರ್ತಿ ಎ೦ದೇ ಹೆಸರಾಗಿದ್ದಾರೆ. ಇವರಿಗೆ ಸ೦ದಿರುವ ಗೌರವಗಳಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಮತ್ತು ಕಲಾಕಾರರಿಗೆ ಕೊಡಲ್ಪಡುವ ಪ್ರತಿಷ್ಠಿತ ಕಲೈಮಾಮಣಿ ಗೌರವಗಳನ್ನು ಹೆಸರಿಸಬಹುದು.

ಬಾಹ್ಯ ಸ೦ಪರ್ಕಗಳು[ಬದಲಾಯಿಸಿ]