ಕಡಲುಕೋಳಿ ಆಲ್ಬಟ್ರಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Albatross
Temporal range: Oligocene–recent Oligocene–recent
Short-tailed Albatross (Phoebastria albatrus)
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
Subclass:
ಕೆಳವರ್ಗ:
ಗಣ:
ಕುಟುಂಬ:
Diomedeidae

Genera

Diomedea
Thalassarche
Phoebastria
Phoebetria

Global range (In blue)

ಕಡಲುಕೋಳಿ ಗಳು, ಡಿಯೊಮೆಡೈಡೆ ಜೀವಶಾಸ್ತ್ರೀಯ ಕುಟುಂಬಕ್ಕೆ ಸೇರಿವೆ. ದೊಡ್ಡ , ಕಡಲುಹಕ್ಕಿಗಳಾದ ಇವು ಪ್ರೊಸೆಲ್ಲರಿಫಾರ್ಮ್‌ಸ್(ಟ್ಯೂಬ್‌ನೋಸ್‌ಸ್‌)ಗಳ ಶ್ರೇಣಿಯಲ್ಲಿರುವ ಪ್ರೊಸೆಲ್ಲರಿಡ್ಸ್ , ಸ್ಟಾರ್ಮ್‌-ಪೆಟ್ರಲ್(ಬಿರುಗಾಳಿ ಹಕ್ಕಿ) ಗಳು ಮತ್ತು ಡೈವಿಂಗ್-ಪೆಟ್ರಲ್‌ ಗಳ ಗುಂಪಿಗೆ ಸೇರಿವೆ. ಅವು ದಕ್ಷಿಣ ಸಮುದ್ರ ಮತ್ತು ಉತ್ತರ ಪೆಸಿಫಿಕ್ ದಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ. ಉತ್ತರ ಅಟ್ಲಾಂಟಿಕ್ನಲ್ಲಿ ಅವು ಇಲ್ಲ, ಆದರೆ ಅಲ್ಲಿ ಸಿಕ್ಕಿರುವ ಪಳೆಯುಳಿಕೆ ಅವಶೇಷಗಳು ಅವು ಒಮ್ಮೆ ಅಲ್ಲಿದ್ದವು ಮತ್ತು ಈಗ ಆಗೀಗ ಬರುವ ಸಂಚಾರಿ ಜೀವಿಗಳಾಗಿವೆ ಎಂಬುದನ್ನು ತೋರಿಸುತ್ತವೆ.

ಡಿಯೊಮೆಡಿಯ ಕುಲಕ್ಕೆ ಸೇರಿದ ಕಡಲುಕೋಳಿಗಳು ಅತ್ಯಂತ ದೊಡ್ಡ ಹಾರುವ ಹಕ್ಕಿಗಳು, ಮತ್ತು ಬೃಹತ್ ಕಡಲುಕೋಳಿ ಗಳಾಗಿದ್ದು, ಇಂದು ಭೂಮಿಯ ಮೇಲೆ ಬದುಕಿರುವ ಪಕ್ಷಿಪ್ರಬೇಧಗಳಲ್ಲಿ ಅತ್ಯಂತ ದೊಡ್ಡ ರೆಕ್ಕೆಗಳನ್ನು ಹೊಂದಿರುವ ಹಕ್ಕಿಗಳು. ಕಡಲುಕೋಳಿಗಳನ್ನು ಸಾಮಾನ್ಯವಾಗಿ ನಾಲ್ಕು ಕುಲಗಳಲ್ಲಿ ಪರಿಗಣಿಸಲಾಗುತ್ತದೆ, ಆದರೆ ಒಟ್ಟೂ ಎಷ್ಟು ಜಾತಿಗಳಿವೆ ಎಂಬ ಕುರಿತು ಭಿನ್ನಾಭಿಪ್ರಾಯಗಳಿವೆ.

ಕಡಲುಕೋಳಿಗಳು ಗಾಳಿಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಹಾರಬಲ್ಲವು. ಅವು ಡೈನಮಿಕ್(ಗತಿಶೀಲ) ಆಗಿ ಮೇಲಕ್ಕೇರುವಿಕೆ ಮತ್ತು ಇಳಿಜಾರಾಗಿ ಏರುವಿಕೆ(ಸ್ಲೋಪ್ ಸೋರಿಂಗ್) ಮೂಲಕ ಬಹುದೂರವನ್ನು ಕಡಿಮೆ ಶ್ರಮದಲ್ಲಿ ಕ್ರಮಿಸುತ್ತವೆ. ಅವು ಸ್ಕ್ವಿಡ್‌ಗಳು, ಮೀನು ಮತ್ತು ಕ್ರಿಲ್‌ಗಳ ಕೊಳೆತಮಾಂಸವನ್ನು ತಿನ್ನುತ್ತವೆ ಅಥವಾ ಮೇಲಿನಿಂದ ಡೈವ್‌‌ ಮಾಡಿ, ಅವುಗಳನ್ನು ಹಿಡಿದು ತಿನ್ನುತ್ತವೆ. ಕಡಲುಕೋಳಿಗಳು ಕಾಲೋನಿಗಳಲ್ಲಿ ಇರುತ್ತವೆ, ದೂರದ ಸಮುದ್ರದ ದ್ವೀಪಗಳಲ್ಲಿ ಗೂಡುಮಾಡಿಕೊಂಡು ಇರುತ್ತವೆ. ಹೆಚ್ಚಿನ ವೇಳೆ ಹಲವಾರು ಹಕ್ಕಿಗಳು ಒಟ್ಟಾಗಿ ಗೂಡು ಮಾಡಿಕೊಂಡಿರುತ್ತವೆ. ಗಂಡು ಮತ್ತು ಹೆಣ್ಣು ಹಕ್ಕಿಗಳ ಮಧ್ಯೆ ಜೊತೆ ಸಂಬಂಧವು ಹಲವಾರು ವರ್ಷಗಳವರೆಗೆ ಇರುತ್ತವೆ. ಅವು 'ಆಚರಣಾತ್ಮಕ ಕುಣಿತ(ರಿಚುವಲೈಸ್ಡ್ ಡಾನ್ಸ್‌)'ದ ಮೂಲಕ ಸಂಗಾತಿಯನ್ನು ಆರಿಸಿಕೊಂಡು, ಬದುಕಿನುದ್ದಕ್ಕೂ ಸಂಗಾತಿಗಳಾಗಿ ಇರುತ್ತವೆ. ಮರಿಹಾಕುವ ಋತು ಒಂದು ವರ್ಷ ತೆಗೆದುಕೊಳ್ಳಬಹುದು. ಈ ಅವಧಿ ಒಂದು ಮೊಟ್ಟೆ ಇಟ್ಟು, ಮರಿಹಾಕುವುದರಿಂದ ಹಿಡಿದು ರೆಕ್ಕೆ ಬಲಿಯುವವರೆಗೆ ಪೋಷಣೆ ಮಾಡುವುದನ್ನು ಒಳಗೊಂಡಿರುತ್ತದೆ.

ಕಡಲುಕೋಳಿಗಳ 21 ಜಾತಿಗಳನ್ನು IUCN ಗುರುತಿಸಿದ್ದು, ಅವುಗಳಲ್ಲಿ 19 ಜಾತಿಗಳು ಅಳಿವಿನ ಅಂಚಿನಲ್ಲಿ ಇವೆ ಎನ್ನಲಾಗಿದೆ. ಹಿಂದೆಲ್ಲ ರೆಕ್ಕೆಗಳಿಗಾಗಿ ಅವುಗಳನ್ನು ಹಿಡಿಯುತ್ತಿದ್ದರಿಂದ ಕಡಲುಕೋಳಿಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಇಂದು ಮೊಲಗಳು ಮತ್ತು ಕಾಡುಬೆಕ್ಕುಗಳಂತಹ ಪ್ರಾಣಿಗಳು ಕಡಲುಕೋಳಿಗಳ ಮೊಟ್ಟೆಗಳನ್ನು, ಮರಿಗಳನ್ನು ಮತ್ತು ಗೂಡುಕಟ್ಟುವ ವಯಸ್ಕ ಹಕ್ಕಿಗಳ ಮೇಲೆ ದಾಳಿ ಮಾಡುವುದರಿಂದ; ಮಾಲಿನ್ಯದಿಂದ; ಅತಿಯಾದ ಮೀನುಗಾರಿಕೆ; ಮತ್ತು ದೂರದವರೆಗೆ ಮೀನುಗಾರಿಕೆ ಮಾಡುವುದರಿಂದ ಹಲವಾರು ಪ್ರದೇಶಗಳಲ್ಲಿ ಮೀನಿನ ಸಂಗ್ರಹ ಗಣನೀಯವಾಗಿ ಕಡಿಮೆಯಾಗುತ್ತಿರುವುದರಿಂದ; ವಿವಿಧ ಕಾರಣಗಳಿಂದ ಕಡಲುಕೋಳಿಗಳಿಗೆ ಅಪಾಯ ಎದುರಾಗಿದೆ. ದೀರ್ಘದೂರದವರೆಗೆ ಮೀನುಗಾರಿಕೆ ಮಾಡುವುದು ಅತಿಹೆಚ್ಚಿನ ಅಪಾಯವೊಡ್ಡುತ್ತಿದೆ, ಏಕೆಂದರೆ ಮರಿಗಳ ಪೋಷಣೆ ಮಾಡುವ ಹಕ್ಕಿಗಳು ಗಾಳಕ್ಕೆ ಸಿಕ್ಕಿಸಿದ ಆಹಾರಕ್ಕೆ ಆಕರ್ಷಿತವಾಗುವುದರಿಂದ, ಹುಕ್‌ಗಳಿಗೆ ಸಿಕ್ಕಿಕೊಂಡು, ಮುಳುಗುತ್ತವೆ. ಸರ್ಕಾರಗಳು, ಸಂರಕ್ಷಣಾ ಸಂಸ್ಥೆಗಳು, ಮತ್ತು ಮೀನುಗಾರಿಕೆ ಉದ್ಯಮದಲ್ಲಿರುವ ಜನರು ಹೀಗೆ ಎಲ್ಲ ಗುರುತಿಸಿದ ಭಾಗೀದಾರರು ಸೇರಿ ಈ ರೀತಿಯಾಗಿ ಬೈಕ್ಯಾಚ್‌ ಅಂದರೆ ಹಿಡಿಯಬೇಕಾದ ಮೀನನ್ನು ಬಿಟ್ಟು ಬೇರೆ ಜೀವಿಗಳನ್ನು ನಿರುದ್ದೇಶವಾಗಿ ಹಿಡಿಯುವುದನ್ನು ತಪ್ಪಿಸುವ ದಿಕ್ಕಿನಲ್ಲಿ ಕೆಲಸ ಮಾಡಬೇಕಿದೆ.

ಜೀವಶಾಸ್ತ್ರ[ಬದಲಾಯಿಸಿ]

ಜೀವಿವರ್ಗೀಕರಣ ಶಾಸ್ತ್ರ ಮತ್ತು ವಿಕಸನ[ಬದಲಾಯಿಸಿ]

ಕಡಲುಕೋಳಿಗಳು ೪ ಕುಲಗಳಲ್ಲಿ 13ರಿಂದ 24 ಜಾತಿಗಳನ್ನು ಒಳಗೊಂಡಿವೆ.(ಜಾತಿಗಳ ಸಂಖ್ಯೆಯು ಇನ್ನೂ ಚರ್ಚಾಸ್ಪದ ವಿಚಾರವಾಗಿದೆ. 21 ಹೆಚ್ಚು ಸ್ವೀಕೃತವಾದ ಸಂಖ್ಯೆಯಾಗಿದೆ). ನಾಲ್ಕು ಕುಲಗಳೆಂದರೆ,

  1. ಗ್ರೇಟ್ ಕಡಲುಕೋಳಿಗಳು(ಡಿಯೊಮೆಡಿಯ)
  2. ಮೊಲ್ಲಿಮಾಕ್‌ಗಳು(ಥ್ಯಾಲಸ್ಸರ್ಕೆ)
  3. ದಕ್ಷಿಣ ಪೆಸಿಫಿಕ್ ಕಡಲುಕೋಳಿಗಳು(ಫೊಬಸ್ಟ್ರಿಯ)
  4. ಕಂದುಬಣ್ಣದ(ಸೂಟಿ) ಕಡಲುಕೋಳಿಗಳು ಅಥವಾ ಸೂಟೀಸ್‌ಗಳು(ಫೊಯೆಬೆಟ್ರಿಯ).

ಈ ನಾಲ್ಕು ಕುಲಗಳಲ್ಲಿ ದಕ್ಷಿಣ ಪೆಸಿಫಿಕ್ ಕಡಲುಕೋಳಿಗಳನ್ನು ಗ್ರೇಟ್ ಕಡಲುಕೋಳಿಗಳ ಸಹೋದರಿ ವರ್ಗ ಎಂದು ಪರಿಗಣಿಸಲಾಗುತ್ತದೆ. ಕಂದುಬಣ್ಣದ ಕಡಲುಕೋಳಿಗಳನ್ನು ಮೊಲ್ಲಿಮಾಕ್‌ಗಳಿಗೆ ಸಮೀಪದವು ಎಂದು ಪರಿಗಣಿಸಲಾಗುತ್ತದೆ.

ಕಡಲುಕೋಳಿ ಗುಂಪಿನ ಜೀವಿವರ್ಗೀಕರಣವು ತುಂಬ ಚರ್ಚಾಸ್ಪದವಾಗಿದೆ. ಸಿಬ್ಲೆ-ಅಲ್‌ಕ್ವಿಸ್ಟ್ ಜೀವಿವರ್ಗೀಕರಣವು ಕಡಲುಹಕ್ಕಿಗಳನ್ನು ರೆಕ್ಕೆಯಿಂದ ಬೇಟೆಯಾಡುವ ಹಕ್ಕಿಗಳ ವರ್ಗಕ್ಕೆ ಸೇರಿಸಿದೆ ಮತ್ತು ಇನ್ನೂ ಅನೇಕರು ಅವುಗಳನ್ನು ಇನ್ನಷ್ಟು ವಿಸ್ತರಿಸಿ, ಸಿಕೊನಿಫಾರ್ಮ್ಸ್ ಶ್ರೇಣಿಗೆ ಸೇರಿಸಿದ್ದಾರೆ. ಉತ್ತರ ಅಮೆರಿಕಾ, ಯೂರೋಪ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗಳ ಪಕ್ಷಿ ವಿಜ್ಞಾನಿಗಳ ಸಂಘವು ಹೆಚ್ಚು ಸಾಂಪ್ರದಾಯಿಕವಾದ ಪ್ರೊಸೆಲ್ಲರಿಫಾರ್ಮ್ಸ್‌ಗೆ ಸೇರಿಸಿದೆ. ಕಡಲುಕೋಳಿಗಳನ್ನು ಬೇರೆ ಪ್ರೊಸೆಲ್ಲರಿಫಾರ್ಮ್ಸ್‌ಗಳಿಂದ ವಂಶವಾಹಿಕವಾಗಿ ಮತ್ತು ಆಕೃತಿವಿಜ್ಞಾನದ ಲಕ್ಷಣಗಳ ಆಧಾರದ ಮೇಲೆ ಅಂದರೆ ಅವುಗಳ ಗಾತ್ರ, ಕಾಲುಗಳು, ಮೂಗಿನ ಹೊಳ್ಳೆಗಳ ಸಂಯೋಜನೆಯ ಆಧಾರದ ಮೇಲೆ ಪ್ರತ್ಯೇಕಿಸಬಹುದು.

ನಿರ್ದಿಷ್ಟ ಕುಟುಂಬದೊಳಗೆ ಯಾವ ಕುಲಕ್ಕೆ ಸೇರಿಸುವುದು ಎನ್ನುವುದು ಸುಮಾರು ನೂರು ವರ್ಷಗಳವರೆಗೆ ಚರ್ಚೆಯ ವಿಷಯವಾಗಿತ್ತು. ಮೂಲದಲ್ಲಿ ಒಂದೇ ಕುಲ ಡಿಯೊಮೆಡಿಯ ದಲ್ಲಿ ಇದ್ದ ಅವನ್ನು ರೈಚೆನ್‌ಬಕ್‌ ನಾಲ್ಕು ಭಿನ್ನ ಕುಲಗಳಲ್ಲಿ 1852ರಲ್ಲಿ ವರ್ಗೀಕರಿಸಿದನು. ನಂತರ ಅನೇಕ ಬಾರಿ ವರ್ಗಗಳನ್ನು ಒಟ್ಟುಗೂಡಿಸಿ ಮತ್ತು ಪುನಹ ವಿಭಜಿಸುವ ಮೂಲಕ, 1965ರ ವೇಳೆಗೆ ಒಟ್ಟು 12 ಬೇರೆಬೇರೆ ಕುಲಗಳ ಹೆಸರನ್ನು ಇಡಲಾಗಿತ್ತು(ಪ್ರತಿಯೊಂದು ಸಲವೂ ಎಂಟಕ್ಕಿಂತ ಹೆಚ್ಚು ಇರಲಿಲ್ಲ). ಅವೆಂದರೆ(ಡಿಯೊಮೆಡಿಯ , ಫೋಬಸ್ಟ್ರಿಯ , ಥ್ಯಾಲಸ್ಸರ್ಕೆ , ಪೋಬೆಟ್ರಿಯ , ತ್ಯಾಲಸ್ಸಗೆರನ್ , ಡಿಯೊಮೆಡೆಲ್ಲ, ನೀಲ್‌ಬಟ್ರಸ್, ರೊಥೊನಿಯ, ಜ್ಯುಲಿಯೆಟಟ, ಗ್ಯಾಲಪಗೊರ್ನಿಸ್, ಲೇಸನೊರ್ನಿಸ್, ಮತ್ತು ಪೆಂಥಿರೆನಿಯ).

1965ರ ವೇಳೆಗೆ, ಕಡಲುಕೋಳಿಗಳ ವರ್ಗೀಕರಣದಲ್ಲಿ ಕೆಲವು ಪ್ರಕಾರಗಳನ್ನು ಪುನಾ ತರಲು ಪ್ರಯತ್ನವೊಂದನ್ನು ಮಾಡಲಾಯಿತು. ಆಗ ಇವನ್ನು ಎರಡು ಕುಲಗಳಲ್ಲಿ ವರ್ಗೀಕರಿಸಲಾಯಿತು. ಅವೆಂದರೆ ಪೊಬೆಟ್ರಿಯ(ಪ್ರೊಸೆಲ್ಲರೈಡ್ಸ್‌ಗಳಿಗೆ ಹೆಚ್ಚುಸಮೀಪದ ಹೋಲಿಕೆ ಹೊಂದಿರುವ ಕಂದುಬಣ್ಣದ ಕಡಲುಕೋಳಿಗಳನ್ನು ಆ ಸಮಯದಲ್ಲಿ 'ಪ್ರಿಮಿಟಿವ್ ಅಥವಾ ಆದಿರೂಪದವು' ಎಂದು ಪರಿಗಣಿಸಲಾಗಿತ್ತು) ಮತ್ತು ಡಿಯೊಮೆಡಿಯ(ಇನ್ನುಳಿದ ಕಡಲುಕೋಳಿಗಳು).[೨] ಕುಟುಂಬವನ್ನು ಸರಳೀಕರಿಸುವ ಅಗತ್ಯವಿದ್ದರೂ,(ವಿಶೇಷವಾಗಿ ನಾಮಕರಣ/ಹೆಸರಿಡುವಿಕೆ) ವರ್ಗೀಕರಣವು 1866ರ ಎಲ್ಲಿಯಟ್ ಕೌಸ್‌ನ ಆಕೃತಿ ವಿಜ್ಞಾನದ ವಿಶ್ಲೇಷಣೆಯನ್ನು ಆಧರಿಸಿತ್ತು ಮತ್ತು ಹೆಚ್ಚು ಪ್ರಸ್ತುತದ ಅದ್ಯಯನಗಳಿಗೆ ಗಮನವನ್ನೇ ನೀಡಲಿಲ್ಲ. ಅಷ್ಟೇ ಅಲ್ಲದೇ ಕೌಸ್‌ನ ಕೆಲವು ಸಲಹೆಗಳನ್ನೇ ನಿರ್ಲಕ್ಷಿಸಲಾಗಿತ್ತು.

4 ಕಡಲುಕೋಳಿ ಕುಲದ ಪೈಲೋಜೆನೆಟಿಕ್ ಸಂಬಂಧಗಳು ನನ್‌ ಇತರರನ್ನು ಆಧರಿಸಿ. 1996.

ಅಮೆರಿಕನ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯ(1996) ಗ್ಯಾರಿ ನನ್ ಅವರ ಇತ್ತೀಚಿನ ಸಂಶೋಧನೆಯು ಮತ್ತು ವಿಶ್ವಾದ್ಯಂತದ ಬೇರೆ ಸಂಶೋಧಕರು ಎಲ್ಲ 14 ಸ್ವೀಕೃತ ಜಾತಿಗಳ ಮೈಟೋಕಾಂಡ್ರಿಯಲ್ ಡಿಎನ್‌ಎ ಅಧ್ಯಯನ ಮಾಡಿದ್ದು, ಕಡಲುಕೋಳಿಗಳಲ್ಲಿ ಎರಡಲ್ಲ, ಬದಲಿಗೆ ನಾಲ್ಕು ಮಾನೋಪೈಲೆಟಿಕ್ ಗುಂಪುಗಳಿವೆ ಎಂದು ಕಂಡುಕೊಂಡಿದ್ದಾರೆ.[೩] ಅವೆರು ಎರಡು ಹಳೆಯ ಕುಲಗಳ ಹೆಸರುಗಳನ್ನು ಪುನಾಉಳಿಸಿಕೊಳ್ಳುವುದನ್ನು ಪ್ರಸ್ತಾಪಿಸಿದ್ದಾರೆ. ದಕ್ಷಿಣ ಪೆಸಿಫಿಕ್ ಕಡಲುಕೋಳಿಗಳಿಗೆ ಪೊಬಸ್ಟ್ರಿಯ ಮತ್ತು ಮೊಲ್ಲಿವಾಕ್‌ಗಳಿಗೆ ಥ್ಯಾಲಸ್ಸರ್ಕೆ ಎಂಬ ಹೆಸರು, ಗ್ರೇಟ್ ಕಡಲುಕೋಳಿಗಳಿಗೆ ಡಿಯೊಮೆಡಿಯ ಹೆಸರನ್ನೇ ಉಳಿಸಿಕೊಂಡಿದ್ದಾರೆ ಮತ್ತು ಕಂದುಬಣ್ಣದ ಕಡಲುಕೋಳಿಗಳು ಫೊಬೆಟ್ರಿಯ ಕುಲದಲ್ಲಿಯೇ ಉಳಿದಿವೆ. ಬ್ರಿಟಿಷ್ ಪಕ್ಷಿ ವಿಜ್ಞಾನಿಗಳ ಸಂಘ ಮತ್ತು ದಕ್ಷಿಣ ಆಫ್ರಿಕಾದ ಸಂಘಗಳು ಕಡಲುಕೋಳಿಗಳನ್ನು ನನ್‌ ಸಲಹೆ ಮಾಡಿದಂತೆ ನಾಲ್ಕು ಕುಲಗಳಾಗಿ ವಿಭಜಿಸಿದ್ದಾರೆ ಮತ್ತು ಈ ಬದಲಾವಣೆಯನ್ನು ಬಹಳಷ್ಟು ಸಂಶೋಧಕರು ಸ್ವೀಕರಿಸಿದ್ದಾರೆ.

ಕುಲಗಳ ಸಂಖ್ಯೆಯಲ್ಲಿ ಸ್ವಲ್ಪ ಸಹಮತವಿದ್ದರೂ, ಕಡಲಕೋಳಿಗಳ ಜಾತಿಗಳ ವಿಷಯದಲ್ಲಿ ಇನ್ನೂ ಹೆಚ್ಚಿನ ಸಹಮತವಿಲ್ಲ. ಐತಿಹಾಸಿಕವಾಗಿ, ಸುಮಾರು 80 ಭಿನ್ನ ವರ್ಗಗಳನ್ನು ವಿವಿಧ ಸಂಶೋದಕರು ವಿವರಿಸಿದ್ದಾರೆ; ಇವುಗಳಲ್ಲಿ ಹೆಚ್ಚಿನವುಗಳು ಮರಿ ಹಕ್ಕಿಗಳನ್ನು ಸರಿಯಾಗಿ ಗುರುತಿಸಿಲ್ಲ.[೪]

ಕಡಲುಕೋಳಿ ಕುಲಗಳ ಕುರಿತು ಅಧ್ಯಯನವನ್ನು ಆಧರಿಸಿ, ರಾಬರ್ಟ್‌‌ಸನ್ ಮತ್ತು ನನ್ 1998ರಲ್ಲಿ ಪರಿಷ್ಕೃತ ಜೀವಿವರ್ಗೀಕರಣವನ್ನು ಪ್ರಸ್ತಾಪಿಸಿದರು. ಇದರಲ್ಲಿ ಅವರು ಸ್ವೀಕೃತವಾಗಿದ್ದ 14 ಜಾತಿಗಳ ಬದಲಿಗೆ 24 ಭಿನ್ನ ಜಾತಿಗಳನ್ನು ,[೫] ಪ್ರಸ್ತಾಪಿಸಿದ್ದಾರೆ. ಈ ಮಧ್ಯಂತರ ಜೀವಿವರ್ಗೀಕರಣವು ಅನೇಕ ಸ್ಥಾಪಿತಗೊಂಡ ಉಪಜಾತಿಗಳನ್ನು ಸಂಪೂರ್ಣ ಜಾತಿಗಳಾಗಿ ಮೇಲ್ದರ್ಜೆಗೇರಿಸಿದೆ. ಈ ವಿಭಜನೆಯನ್ನು ಸಮರ್ಥಿಸಲು, ಪ್ರತಿ ಉದಾಹರಣೆಯಲ್ಲಿಯೂ, ಸಹ ಸಂಶೋಧಕರ ವಿಶ್ಲೇಷಣೆಗಳ(ಪೀರ್‌ ರಿವ್ಯೂ) ಮಾಹಿತಿಗಳನ್ನು ಬಳಸಿಕೊಂಡಿಲ್ಲ ಎಂದು ಈ ವರ್ಗೀಕರಣವು ಟೀಕೆಗೊಳಗಾಗಿದೆ. ಆಗಿನಿಂದ ಹೆಚ್ಚಿನ ಸಂಶೋಧನೆಗಳು ಈ ವಿಭಜನೆಯನ್ನು ಬೆಂಬಲಿಸಿವೆ ಅಥವಾ ಅಲ್ಲಗೆಳೆದಿವೆ; 2004ರಲ್ಲಿ ಪ್ರಕಟವಾದ ಲೇಖನವೊಂದು ಮೈಟೋಕಾಂಡ್ರಿಯಲ್ ಡಿಎನ್‌ಎ ಮತ್ತು ಮೈಕ್ರೋಸ್ಯಾಟಲೈಟ್ ಗಳು ಆಂಟಿಪೋಡೆನ್ ಕಡಲುಕೋಳಿ ಮತ್ತು ಟ್ರಿಸ್ಟನ್ ಕಡಲುಕೋಳಿ ಗಳು ವಾಂಡರಿಂಗ್ ಕಡಲುಕೋಳಿ ಗಳಿಗಿಂತ ಭಿನ್ನವೆಂಬ ರಾಬರ್ಟಸನ್ ಮತ್ತು ನನ್‌ ನಿರ್ಣಯವನ್ನು ಸಮರ್ಥಿಸುತ್ತವೆ ಎಂದಿದೆ. ಆದರೆ ಗಿಬ್ಸನ್‌‌ನ ಕಡಲುಕೋಳಿ, ಡಿಯೊಮೆಡಿಯ ಗಿಬ್ಸೊನಿ ಯು, ಅದು ಆಂಟಿಪೋಡೆನ್ ಕಡಲುಕೋಳಿಗಿಂತ ಭಿನ್ನವಲ್ಲ ಎಂಬುದನ್ನು ಕಂಡುಕೊಳ್ಳಲಾಗಿದೆ.[೬] ಹೆಚ್ಚಿನ ಭಾಗಗಳಲ್ಲಿ, 21 ಜಾತಿಗಳ ಮದ್ಯಂತರ ಜೀವಿವರ್ಗೀಕರಣವನ್ನು IUCNದಿಂದ ಮತ್ತು ಅನೇಕ ಸಂಶೋಧಕರು ಸ್ವೀಕರಿಸಿದ್ದಾರೆ. 2004ರಲ್ಲಿ ಪೆನ್ಹಲ್ಲುರಿಕ್ ಮತ್ತು ವಿಂಕ್ ಅವರು ಜಾತಿಗಳ ಸಂಖ್ಯೆಯನ್ನು 13ಕ್ಕೆ ಇಳಿಸಬಹುದು ಎಂದು ಸಲಹೆ ಮಾಡಿದ್ದಾರೆ. ಆಂಸ್ಟರ್ಡ್ಯಾಮ್ ಕಡಲುಕೋಳಿಯನ್ನು ವಾಂಡರಿಂಗ್ ಕಡಲುಕೋಳಿಗೆ ಸೇರಿಸುವಂತೆಯೂ ಸಲಹೆ ಮಾಡಿದ್ದಾರೆ.[೭] ಈ ಲೇಖನವು ಇನ್ನೂ ವಿವಾದಾತ್ಮಕವಾಗಿಯೇ ಇದೆ.[೪][೮] ಎಲ್ಲ ರೀತಿಯಲ್ಲಿಯೂ, ಈ ವಿಚಾರವನ್ನು ಸ್ಪಷ್ಟಪಡಿಸಿಕೊಳ್ಳಲು ಹೆಚ್ಚಿನ ಸಂಶೋಧನೆಗಳಾಗುವ ಅಗತ್ಯವಿದೆ ಎಂಬ ಕುರಿತು ವ್ಯಾಪಕ ಸಹಮತವಿದೆ.

ಮಿಡ್‌ವೇ ಅಟಾಲ್‌ನಲ್ಲಿ ಮೂರು ಹಕ್ಕಿಗಳು, 1958

ಸಿಬ್ಲಿ ಮತ್ತು ಅಲ್‌ಕ್ವಿಸ್ಟ್ ಅವರ ಹಕ್ಕಿಗಳ ಕುಟುಂಬದ ವಿಕಾಸದ ಮಾಲಿಕ್ಯುಲರ್ ಅಧ್ಯಯನವು ಒಲಿಗೊಸೀನ್ ಅವಧಿಯಲ್ಲಿ(35–30 ದಶಲಕ್ಷ ವರ್ಷಗಳ ಹಿಂದೆ) ಪ್ರೊಸೆಲ್ಲರಿಫಾರ್ಮ್ಸ್ಗಳ ರೇಡಿಯೇಶನ್‌ ಅನ್ನು ಅಂದರೆ ವಂಶಾವಳಿಯಲ್ಲಿ ತ್ವರಿತಗತಿಯಲ್ಲಿ ಪಾರಿಸರಿಕ ಹಾಗೂ ಫೀನೋಟೈಪಿಕ್ ವಿಕಾಸವಾಗುವುದನ್ನು , ಈ ಗುಂಪಿನಲ್ಲಿ ಸೇರಿಸಿದೆ. ಈ ಗುಂಪು ಮೊದಲೇ ಹುಟ್ಟಿರಬಹುದಾದರೂ, ಕೆಲವೊಮ್ಮೆ ಪಳೆಯುಳಿಕೆಯು ಪ್ರಕಾರಕ್ಕೆ ಸಂಬಂಧಿಸಿರುತ್ತದೆ. ಟಿಟ್ಟೊಸ್ಟೋನಿಕ್ಸ್ ಎಂದು ಕರೆಯಲಾಗುವ ಕಡಲುಹಕ್ಕಿಯು ನಂತರದ ಕ್ರಟೇಶಿಯಸ್ ಬಂಡೆಗಳಲ್ಲಿ ಕಂಡುಬಂದಿವೆ.(70 mya). ಸ್ಟಾರ್ಮ್‌ ಪೆಟ್ರಲ್‌ಗಳು ಬಿರುಗಾಳಿ--ಪೆಟ್ರಲ್‌ಗಳು ಮೊದಲು ಪುರಾತನ ವಂಶದಿಂದ ಶಾಖೆಯೊಡೆದಿವೆ ಮತ್ತು ಕಡಲುಕೋಳಿಗಳು ನಂತರದಲ್ಲಿ ಪ್ರೊಸೆಲ್ಲರಿಡ್ಸ್‌ನೊಂದಿಗೆ ಮತ್ತು ಡೈವಿಂಗ್ ಪೆಟ್ರಲ್‌ಗಳು ತದನಂತರದಲ್ಲಿ ಪ್ರತ್ಯೇಕಗೊಂಡಿವೆ ಎಂದು ಮಾಲಿಕ್ಯುಲರ್ ಪುರಾವೆಗಳು ಸೂಚಿಸುತ್ತವೆ. ಕಡಲುಕೋಳಿಗಳ ಅತ್ಯಂತ ಮೊದಲಿನ ಪಳೆಯುಳಿಕೆಯು ಇಯೋಸೀನ್‌ ನಿಂದ ಒಲಿಗೋಸೀನ್‌ ಬಂಡೆಗಳವರೆಗೆ ಕಂಡುಬಂದಿದ್ದು, ಇವುಗಳಲ್ಲಿ ಕೆಲವನ್ನು ಮಾತ್ರವೇ ತಾತ್ಕಾಲಿಕವಾಗಿ ಕುಟುಂಬಕ್ಕೆ ಸೇರಿಸಲಾಗಿದೆ. ಇನ್ನುಳಿದ ಯಾವುವೂ ಬದುಕಿರುವ ಪ್ರಕಾರಗಳಿಗೆ ನಿರ್ದಿಷ್ಟವಾಗಿ ಹತ್ತಿರವಿಲ್ಲ. ಮುರುನ್‌ಕಸ್(ಉಜ್ಬೆಕಿಸ್ತಾನದ )ಮಧ್ಯ ಇಯೋಸೀನ್, ಮನು(ನ್ಯೂಜಿಲ್ಯಾಂಡ್ ನ) ಆರಂಭಿಕ ಒಲಿಗೋಸೀನ್, ಮತ್ತು ದಕ್ಷಿಣ ಕೆರೊಲಿನಾದ ನಂತರದ ವಿವವರಿಸಲಾಗದ ಒಲಿಗೋಸೀನ್‌ ಅವಧಿಯ ಒಂದು ಪ್ರಕಾರ ಇವೆ. ಕೊನೆಯದಕ್ಕೆ ಹೋಲಿಕೆ ಇರುವ ಹಕ್ಕಿ ಎಂದರೆ ಪ್ಲೊಟೊರ್ನಿಸ್ , ಇದನ್ನು ಮೊದಲು ಪೆಟ್ರಲ್ ಎಂದು ಪರಿಗಣಿಸಲಾಗಿತ್ತು. ಆದರೆ ಈಗ ಕಡಲುಕೋಳಿ ಎಂದು ಸ್ವೀಕೃತವಾಗಿದೆ. ಫ್ರಾನ್ಸ್‌ ನ ಮಧ್ಯ ಮಯೋಸೀನ್ ಸಮಯದಲ್ಲಿಯೇ, ಈಗಿನಂತೆ ನಾಲ್ಕು ಆಧುನಿಕ ಕುಲಗಳಲ್ಲಿ ವಿಭಜನೆ ಆಗುವ ಮಾರ್ಗದಲ್ಲಿತ್ತು ಎನ್ನಲಾಗಿದೆ. ಇದು ಫೊಬಸ್ಟ್ರಿಯ ಕ್ಯಾಲಿಫೊರ್ನಿಕಾ ಮತ್ತು ಡಿಯೊಮೆಡಿಯ ಮಿಲ್ಲೆರಿ ಗಳಿಂದ ರುಜುವಾತಾಗುತ್ತದೆ. ಈ ಎರಡೂ ಕ್ಯಾಲಿಫೋರ್ನಿಯಾದ ಶಾರ್ಕ್‌ಟೂತ್ ಹಿಲ್‌ ನಲ್ಲಿ ಕಂಡುಬಂದ ಮದ್ಯ-ಮಯೋಸೀನ್ ಕಾಲದ ಜಾತಿಗಳಾಗಿವೆ. ಕ್ಯಾಲಿಫೊರ್ನಿಯ ಗ್ರೇಟ್ ಕಡಲುಕೋಳಿಗಳು ಮತ್ತು ದಕ್ಷಿಣ ಪೆಸಿಫಿಕ್ ಕಡಲುಕೋಳಿಗಳ ಮದ್ಯದ ವಿಭಜನೆಯು 15mya ಗಳಷ್ಟು ಹಿಂದೆಯೇ ಆಗಿತ್ತು ಎಂಬುದನ್ನು ತೋರಿಸುತ್ತವೆ. ಇದೇ ರೀತಿಯ ಪಳೆಯುಳಿಕೆಗಳು ದಕ್ಷಿಣಾರ್ಧ ಗೋಳದಲ್ಲಿಯೂ ಕಂಡುಬಂದಿವೆ. ಇವು ಕಂದುಬಣ್ಣದ ಕಡಲಕೋಳಿಗಳು ಮತ್ತು ಮೊಲ್ಲಿವಾಕ್‌ಗಳ ಮಧ್ಯದ ವಿಭಜನೆಯು 10 myaಗಳಷ್ಟು ಹಿಂದೆ ಆಗಿದೆ ಎಂಬುದನ್ನು ತೋರಿಸುತ್ತವೆ.[೯]

ಉತ್ತರಾರ್ಧ ಗೋಳದಲ್ಲಿ ಕಡಲುಕೋಳಿಗಳ ಪಳೆಯುಳಿಕೆಗಳ ದಾಖಲೆಗಳು ದಕ್ಷಿಣದಕ್ಕಿಂತ ಹೆಚ್ಚು ಪೂರ್ಣವಾಗಿವೆ. ಜೊತೆಗೆ ಕಡಲುಕೋಳಿಗಳ ವಿವಿಧ ರೀತಿಯ ಪಳೆಯುಳಿಕೆಗಳು ಉತ್ತರ ಅಟ್ಲಾಂಟಿಕ್‌ನಲ್ಲಿಯೂ ಕಂಡುಬಂದಿವೆ. ಆದರೆ ಅಲ್ಲಿ ಇಂದು ಕಡಲುಕೋಳಿಗಳೇ ಇಲ್ಲ. ಕಿರುಬಾಲದ ಕಡಲುಕೋಳಿಗಳ ಕಾಲನಿಯ ಅವಶೇಷಗಳು ಬರ್ಮುಡಾ ಐಲ್ಯಾಂಡ್‌ನಲ್ಲಿ ಕಂಡುಬಂದಿದೆ.[೧೦] ಮತ್ತು ಉತ್ತರ ಅಟ್ಲಾಂಟಿಕ್‌ನ ಕಡಲುಕೋಳಿಗಳ ಬಹುತೇಕ ಪಳೆಯುಳಿಕೆಗಳು ಫೊಬಸ್ಟ್ರಿಯ ಕುಲಕ್ಕೆ ಸೇರಿವೆ(ದಕ್ಷಿಣ ಪೆಸಿಫಿಕ್ ಕಡಲುಕೋಳಿಗಳು); ಒಂದು, ಫೊಬೆಸ್ಟ್ರಿಯ ಆಂಗ್ಲಿಕವು ಉತ್ತರ ಕೆರೊಲಿನಾ ಮತ್ತು ಇಂಗ್ಲೆಂಡ್ ಎರಡೂ ಕಡೆ ಕಂಡುಬಂದಿವೆ. ಒಮ್ಮುಖ ವಿಕಾಸ ದಿಂದಾಗಿ, ವಿಶೇಷವಾಗಿ ಕಾಲು ಮತ್ತು ಪಾದದ ಮೂಳೆಗಳ ವಿಕಾಸದಲ್ಲಿ, ಪೂರ್ವೇತಿಹಾಸದ ಅವಶೇಷಗಳನ್ನು ಸ್ಯುಡೊಟೂತ್ ಹಕ್ಕಿ(ಪೆಲಗೊರ್ನಿತಿಡೆಯಿ)ಗಳನ್ನು ನಿರ್ನಾಮಗೊಂಡ ಕಡಲುಕೋಳಿಗಳು ಎಂದು ತಪ್ಪಾಗಿ ತಿಳಿಯವು ಸಾಧ್ಯತೆ ಇದೆ. ಮನು ಇಂತಹದೊಂದು ಉದಾಹರಣೆಯಾಗಬಹುದು. ಫೆಮುರ್ ಎಂಬ ಬೃಹತ್ ಕಡಲುಕೋಳಿಯು ಆರಂಭಿಕ ಪ್ಲೆಸ್ಟೋಸೀನ್ ಕಾಲಕ್ಕೆ ಸೇರಿದೆ ಎಂದು ನಿಶ್ಚಿತವಾಗಿ ಹೇಳಬಹುದು.[೧೧] ಕಕೆಗವ್‌ದಲ್ಲಿರುವ(ಜಪಾನ್‌) ಡೈನಿಚಿ ಫಾರ್ಮೇಶನ್ ಕೂಡ ಕೊನೆಯ ಸ್ಯೂಡೋಟೂತ್ ಹಕ್ಕಿಗಳಲ್ಲಿ ಒಂದರದ್ದು ಎನ್ನಲಾಗಿದೆ. ಬದುಕಿರುವ ಕಡಲುಕೋಳಿ ಕುಲದ ಪಳೆಯುಳಿಕೆ ಜಾತಿಗಳ ಕುರಿತ ಹೆಚ್ಚಿನ ಮಾಹಿತಿಗೆ, ದತ್ತಾಂಶಗಳಿಗೆ ಕುಲ(ಜಿನಸ್) ಲೇಖನಗಳನ್ನು ನೋಡಬಹುದು.

ಆಕೃತಿವಿಜ್ಞಾನ ಮತ್ತು ಹಾರಾಟ[ಬದಲಾಯಿಸಿ]

ಪ್ರೊಸೆಲ್ಲರಿಫಾರ್ಮ್ಸ್, ಕಡಲುಕೋಳಿಗಳಂತೆ ಅಲ್ಲದೆ, ಈ ಕಪ್ಪು-ಪಾದದ ಕಡಲುಕೋಳಿಗಳು ನೆಲದ ಮೇಲೆ ಚೆನ್ನಾಗಿಯೇ ನಡೆಯಬಲ್ಲವು.

ಕಡಲುಕೋಳಿಗಳು ದೊಡ್ಡದರಿಂದ ಅತಿದೊಡ್ಡ ಹಕ್ಕಿಗಳ ಒಂದು ಗುಂಪಾಗಿದೆ. ಅವು ಪ್ರೊಸೆಲ್ಲರಿಫಾರ್ಮ್ಸ್‌ಗಳಲ್ಲಿ ಅತ್ಯಂತ ದೊಡ್ಡ ಗುಂಪುಗಳಾಗಿವೆ. ಇವುಗಳ ಕೊಕ್ಕು ಅತ್ಯಂತ ದೊಡ್ಡದು, ಶಕ್ತಿಶಾಲಿ ಮತ್ತು ಚೂಪಾದ ಅಂಚನ್ನು ಹೊಂದಿವೆ ಹಾಗೂ ಮೇಲಿನ ದವಡೆಯ ಮೂಳೆಯು ದೊಡ್ಡ ಹುಕ್‌ ಆಕಾರಕ್ಕೆ ತಿರುಗಿದೆ. ಈ ಕೊಕ್ಕು ಅನೇಕ ಕೊಂಬಿನಾಕಾರದ ತಟ್ಟೆಗಳನ್ನು ಹೊಂದಿದೆ ಮತ್ತು ಪಾರ್ಶ್ವಗಳಲ್ಲಿ ಎರಡು 'ಕೊಳವೆ(ಟ್ಯೂಬ್‌)'ಗಳು, ಮೂಗಿನ ಉದ್ದಕ್ಕೂ ಇದ್ದು, ವರ್ಗೀಕರಣದ ಶ್ರೇಣಿಯಲ್ಲಿ ಮೊದಲಿನ ಹೆಸರು ಬರಲು ಇದೇ ಕಾರಣ. ಎಲ್ಲ ಕಡಲುಕೋಳಿ ಟ್ಯೂಬ್‌ಗಳು ಕೊಕ್ಕಿನ ಪಾರ್ಶ್ವದುದ್ದಕ್ಕೂ ಇವೆ, ಇನ್ನುಳಿದ ಪ್ರೊಸೆಲ್ಲರಿಫಾರ್ಮ್ಸ್ ಗಳಲ್ಲಿ ಟ್ಯೂಬ್‌ಗಳು ಕೊಕ್ಕಿನ ಮೇಲ್ಭಾಗದಲ್ಲಿ ಇವೆ. ಈ ಟ್ಯೂಬ್‌ಗಳು ಕಡಲುಕೋಳಿಗಳಿಗೆ ವಾಸನೆಯನ್ನು ಗ್ರಹಿಸುವ ತೀಕ್ಷ್ಣ ಶಕ್ತಿಯನ್ನು ನೀಡಿದ್ದು, ಇದು ಎಲ್ಲ ಹಕ್ಕಿಗಳ ಒಂದು ಅಸಾಮಾನ್ಯ ಸಾಮರ್ಥ್ಯವಾಗಿದೆ. ಬೇರೆ ಪ್ರೊಸೆಲ್ಲರಿಫಾರ್ಮ್ಸ್ ಗಳ ಹಾಗೆ ಅವು ಈ ಘ್ರಾಣಸಂಬಂಧಿ ಸಾಮರ್ಥ್ಯವನ್ನು ಸಂಭಾವ್ಯ ಆಹಾರ ಮೂಲಗಳನ್ನು ಹುಡುಕಲು ಬಳಸುತ್ತವೆ.[೧೨] ಕಾಲಿಗೆ ಹಿಂದಿನ ಬೆರಳಿಲ್ಲ ಮತ್ತು ಮೂರು ಮುಂಭಾಗದ ಕಾಲು ಬೆರಳುಗಳು ಸಂಪೂರ್ಣವಾಗಿ ಜಾಲಪೊರೆಯನ್ನು ಹೊಂದಿವೆ. ಪ್ರೊಸೆಲ್ಲರಿಫಾರ್ಮ್ಸ್ ಗಳಿಗೆ ಕಾಲುಗಳು ತುಂಬ ಶಕ್ತಿಯುತವಾಗಿವೆ. ಹೀಗಾಗಿ ಅವು ಮತ್ತು ಬೃಹತ್-ಪೆಟ್ರಲ್‌ ಗಳು ನೆಲದ ಮೇಲೂ ನಡೆಯುವ ಸಾಮರ್ಥ್ಯ ಹೊಂದಿವೆ.[೧೩]

ಕಡಲುಕೋಳಿಗಳು, ಜೊತೆಗೆ ಎಲ್ಲ ಪ್ರೊಸೆಲ್ಲರಿಫಾರ್ಮ್ಸ್ ಗಳು ಸಮುದ್ರದ ನೀರನ್ನು ಕುಡಿಯುವುದರಿಂದ, ತಮ್ಮ ಲವಣದ ಅಂಶವನ್ನು ಕಡಿಮೆ ಮಾಡಿಕೊಳ್ಳುವ ಅಗತ್ಯವಿದೆ. ಎಲ್ಲ ಹಕ್ಕಿಗಳು ಒಂದು ದೊಡ್ಡದಾದ ಕೊಕ್ಕಿನ ತಳದಲ್ಲಿ ಮತ್ತು ಕಣ್ಣುಗಳ ಮೇಲ್ಭಾಗದಲ್ಲಿ ಮೂಗಿನ ಗ್ರಂಥಿಯನ್ನು ಹೊಂದಿವೆ. ಈ ಗ್ರಂಥಿಯ ಅಗತ್ಯವಿಲ್ಲದ ಜಾತಿಗಳಲ್ಲಿ ಅದು ನಿಷ್ಕ್ರಿಯವಾಗಿರುತ್ತದೆ; ಆದರೆ ಪ್ರೊಸೆಲ್ಲರಿಫಾರ್ಮ್ಸ್‌‌ಗಳಿಗೆ ಅದನ್ನು ಬಳಸುವ ಅಗತ್ಯವಿದೆ. ಸಾಮಾನ್ಯವಾಗಿ ಈ ಹಕ್ಕಿಗಳು ಶೇ.5ರಷ್ಟು ಲವಣ ಅಥವಾ ಸಲೈನ್ ದ್ರಾವಣವನ್ನು ಮೂಗಿನಿಂದ ಒಸರಿಸುವ ಮೂಲಕ ಅಥವಾ ಕೆಲವು ಹಕ್ಕಿಗಳಲ್ಲಿ ಬಲವಂತವಾಗಿ ಹೊರಹಾಕುವ ಮೂಲಕ ಲವಣವನ್ನು ಹೊರಹಾಕುತ್ತವೆ ಎಂದು ತಿಳಿದುಬಂದಿದೆ. ಆದರೆ ವಿಜ್ಞಾನಿಗಳಿಗೆ ಇದರ ನಿಶ್ಚಿತ ಪ್ರಕ್ರಿಯೆ ಏನು ಎಂಬುದು ಇನ್ನೂ ತಿಳಿದಿಲ್ಲ.[೧೪]

ಹೆಚ್ಚಿನ ಕಡಲುಕೋಳಿಗಳ ವಯಸ್ಕ ಗರಿಗಳಲ್ಲಿ, ಮೇಲಿನ ಮತ್ತು ಹಿಂದಿನ ರೆಕ್ಕೆಗಳು ಗಾಢವರ್ಣವನ್ನು ಹೊಂದಿದ್ದರೆ, ಒಳಗೆ ಬಿಳಿಯ ರೆಕ್ಕೆಗಳಿರುತ್ತವೆ. ಕೆಲವೊಮ್ಮೆ ಗಲ್‌ ಹಕ್ಕಿಗಳಿಗೆ ಹೋಲಿಸುವಂತಿರುತ್ತವೆ.[೧೩] ಇವುಗಳಲ್ಲಿ, ಹಲವಾರು ವಿಧದ ಜಾತಿಗಳಿವೆ. ವಯಸ್ಕ ಗಂಡು ಹಕ್ಕಿಗಳ ತುದಿ ಮತ್ತು ರೆಕ್ಕೆಗಳ ಕೊನೆಯಲ್ಲಿ ಹೊರತುಪಡಿಸಿದರೆ ಸಂಪೂರ್ಣವಾಗಿ ಬೆಳ್ಳಗೆ ಇರುವ ದಕ್ಷಿಣದ ರಾಯಲ್ ಕಡಲುಕೋಳಿ ಗಳಿಂದ ಹಿಡಿದು ಕಂಡು ಬಣ್ಣ ಮತ್ತು ಎದೆಯ ಬಳಿ ಗಾಢ ಕಂದುಬಣ್ಣವಿರುವ ಆಂಸ್ಟರ್ಡ್ಯಾಮ್ ಕಡಲುಕೋಳಿ ಗಳ ವರೆಗೆ ಹಲವು ಜಾತಿಗಳಿವೆ. ಮೊಲ್ಲಿಮಾಕ್ ಗಳ ಹಲವಾರು ಜಾತಿಗಳು ಮತ್ತು ದಕ್ಷಿಣ ಪೆಸಿಫಿಕ್ ಕಡಲುಕೋಳಿ ಗಳು ಕಣ್ಣಿನ ಬಳಿ ಕಲೆಗಳು ಅಥವಾ ತಲೆ ಮತ್ತು ಕತ್ತಿನ ಹಿಂಭಾಗದಲ್ಲಿ ಕಂದು ಅಥವಾ ಹಳದಿ ಬಣ್ಣ, ಹೀಗೆ ಮುಖದ ಮೇಲೆ ಕೆಲವು ಗುರುತುಗಳನ್ನು ಹೊಂದಿರುತ್ತವೆ. ಮೂರು ಕಡಲುಕೋಳಿ ಜಾತಿಗಳು, ಕಪ್ಪು-ಕಾಲಿನ ಕಡಲುಕೋಳಿ ಮತ್ತು ಎರಡುಕಂದುಬಣ್ಣದ ಕಡಲುಕೋಳಿ ಗಳು, ಸಾಮಾನ್ಯ ವಿನ್ಯಾಸಗಳಿಗಿಂತ ಸಂಪೂರ್ಣವಾಗಿ ಬದಲಾಗಿರುತ್ತದೆ ಮತ್ತು ಸಂಪೂರ್ಣ ಗಾಢ ಕಂದುಬಣ್ಣವಿರುತ್ತವೆ(ಅಥವಾ ಹಗುರು ಬೆನ್ನಿನ ಕಡಲುಕೋಳಿಯ ಉದಾಹರಣೆಯಂತೆ ಗಾಢ ಬೂದು ಬಣ್ಣವಿರುತ್ತವೆ). ವಯಸ್ಕ ಹಕ್ಕಿಗಳ ರೆಕ್ಕೆಗಳು ಬಲಿಯಲು ಕಡಲುಕೋಳಿಗಳಿಗೆ ಹಲವಾರು ವರ್ಷಗಳು ಬೇಕಾಗುತ್ತವೆ.[೯]

ದೊಡ್ಡ ಗ್ರೇಟ್ ಕಡಲುಕೋಳಿಗಳ(ಡಿಯೊಮೆಡಿಯ ಕುಲ) ಎರಡು ರೆಕ್ಕೆಗಳ ಮಧ್ಯದ ಅಂತರ(ವಿಂಗ್‌ಸ್ಪ್ಯಾನ್) ಬೇರಾವುದೇ ಹಕ್ಕಿಗಿಂತ ಬಹಳ ಅಧಿಕವಿದೆ. 340 cm (11.2 ft), ಬೇರೆ ಜಾತಿ ಕಡಲುಹಕ್ಕಿಗಳ ಎರಡು ರೆಕ್ಕೆಗಳ ಮಧ್ಯದ ಅಂತರ ಸಾಕಷ್ಟು ಕಡಿಮೆ ಇದೆ(1.75 m (5.7 ft)).[೧೫] ರೆಕ್ಕೆಗಳು ಗಡುಸಾಗಿದ್ದು, ಉಬ್ಬಿಕೊಂಡಿರುತ್ತವೆ ಹಾಗೂ ತುದಿಗಳು ಒಂದೇಸಮನಾಗಿ ದಪ್ಪಗಿರುತ್ತವೆ. ಅನೇಕ ಉದ್ದ ರೆಕ್ಕೆಯ ಕಡಲುಹಕ್ಕಿಗಳು ಬಳಸುವ ಎರಡು ತಂತ್ರಗಳು, ಡೈನಮಿಕ್ ಮೇಲೇರುವಿಕೆ ಮತ್ತು ಇಳಿಜಾರು ಹಾರುವಿಕೆ , ಈ ತಂತ್ರಗಳನ್ನು ಬಳಸಿಕೊಂಡು ಕಡಲುಕೋಳಿಗಳು ಅಗಾಧ ದೂರವನ್ನು ಚಲಿಸುತ್ತವೆ. ಡೈನಮಿಕ್ ಮೇಲೇರುವಿಕೆಯು ಪುನವಾರವರ್ತಿತ ರೀತಿಯಲ್ಲಿ ಗಾಳಿಯಲ್ಲಿ ಮೇಲೇರುವುದು ಮತ್ತು ಸ್ವಲ್ಪ ಕೆಳಗಿಳಿಯುವುದನ್ನು ಒಳಗೊಂಡಿದ್ದು, ಈ ರೀತಿಯಾಗಿ ಊರ್ಧ್ವಧರ ದಿಕ್ಕಿನ ಗಾಳಿಯ ಪ್ರವಣತೆ(ವಿಂಡ್ ಗ್ರೇಡಿಯೆಂಟ್)ಯಿಂದ ಶಕ್ತಿಯನ್ನು ಗಳಿಸಿಕೊಳ್ಳುತ್ತವೆ. ಇಳಿಜಾರು ಹಾರುವಿಕೆಯು ದೊಡ್ಡ ಅಲೆಗಳ ಗಾಳಿಬೀಸುವ ದಿಕ್ಕಿನಲ್ಲಿ ಗಾಳಿಯಲ್ಲಿ ಮೇಲೇರುವುದನ್ನು ಒಳಗೊಂಡಿದೆ. ಕಡಲುಕೋಳಿಗಳು ಅತ್ಯಧಿಕ ಗ್ಲೈಡ್ ಅನುಪಾತ ವನ್ನು ಹೊಂದಿವೆ. ಇದು ಸುಮಾರು 22:1 ರಿಂದ 23:1 ಆಗಿರುತ್ತದೆ. ಅಂದರೆ ಪ್ರತಿ ಮೀಟರ್‌ ಕೆಳಗಿಳಿದಾಗಲೂ ಅವು ಮುಂದೆ ಸಾಗಬಲ್ಲವು. 22 metres (72 ft)[೯] ಅವುಗಳಿಗೆ ಹಾರಲು ಕುತ್ತಿಗೆಯಲ್ಲಿರುವ ಒಂದು ಬಗೆಯ ಕುಚ್ಚು(ಶೋಲ್ಡರ್-ಲಾಕ್ ಸಹಾಯ ಮಾಡುತ್ತದೆ. ಇದು ಟೆಂಡನ್ ಅಂಗಾಶದ ಒಂದು ಪದರವಾಗಿದ್ದು, ರೆಕ್ಕೆಗಳು ಸಂಪೂರ್ಣವಾಗಿ ಅಗಲಗೊಂಡಾಗ ಅದನ್ನು ಬಂಧಿಸುತ್ತದೆ ಅಂದರೆ ಲಾಕ್ ಮಾಡುತ್ತದೆ. ಆಗ ರೆಕ್ಕೆಗಳು ಹೊರಚಾಚಿಕೊಂಡೇ ಇರುತ್ತವೆ ಹಾಗೂ ಸ್ನಾಯುಗಳಿಗೆ ಯಾವುದೇ ಹೊರೆಯಾಗುವುದಿಲ್ಲ. ಇದೊಂದು ರೀತಿಯ ಆಕೃತಿವಿಜ್ಞಾನದ ಮಾರ್ಪಾಡಾಗಿದ್ದು, ಬೃಹತ್ ಪೆಟ್ರಲ್‌ಗಳೊಂದಿಗೆ ಈ ಲಕ್ಷಣವನ್ನು ಹಂಚಿಕೊಂಡಿವೆ.[೧೬]

ಮೇಲೇರಲು ಆರಂಭಿಸುವಾಗ ಕಡಲುಕೋಳಿಗಳು ರೆಕ್ಕೆಗಳನ್ನು ಪಟಪಟನೆ ಬಡಿಯುವ ರೀತಿಯನ್ನು ಮುಖ್ಯವಾಗಿ ಬಳಸುತ್ತದೆ. ಜೊತೆಗೆ ಅದು ಪ್ರಯಾಣದಲ್ಲಿ ಅಧಿಕ ಶಕ್ತಿಯನ್ನು ಬೇಡುವ ಕ್ರಿಯೆಯಾಗಿದೆ.

ಕಡಲುಕೋಳಿಗಳು ಈ ಮೇಲೆ ಹಾರುವ ತಂತ್ರದೊಂದಿಗೆ ಊಹೆ ಮಾಡುವ ಹವಾಮಾನ ವ್ಯವಸ್ಥೆಗಳನ್ನು ಬಳಸುತ್ತವೆ; ದಕ್ಷಿಣ ಗೋಳಾರ್ಧ ದಲ್ಲಿರುವ ಕಡಲುಕೋಳಿ ದಕ್ಷಿಣದ ತಮ್ಮ ಕಾಲನಿಗಳಿಂದ ಉತ್ತರಕ್ಕೆ ಹಾರುವಾಗ ದಕ್ಷಿಣಾವರ್ತ(ಪ್ರದಕ್ಷಿಣೆಯ) ಮಾರ್ಗವನ್ನು ತೆಗೆದುಕೊಳ್ಳುತ್ತವೆ ಮತ್ತು ದಕ್ಷಿಣಕ್ಕೆ ಹಾರುವ ಹಕ್ಕಿಗಳು ವಾಮಾವರ್ತವಾಗಿ(ಅಪ್ರದಕ್ಷಿಣೆಯಾಗಿ) ಹಾರುತ್ತವೆ.[೧೩] ಕಡಲುಕೋಳಿಗಳು ಈ ಬಗೆಯ ಬದುಕಿನ ಶೈಲಿಗೆ ಬಹಳ ಚೆನ್ನಾಗಿ ಹೊಂದಿಕೊಂಡಿವೆ ಮತ್ತು ಹಾರುವಾಗ ಅವುಗಳ ಹೃದಯಬಡಿತದ ದರವು ಅವುಗಳು ವಿರಮಿಸುವಾಗ ಇರುವ ಮೂಲ ಅಥವಾ ಬೇಸಲ್ ಹೃದಯಬಡಿತದ ದರಕ್ಕೆ ಸಾಕಷ್ಟು ಸಮೀಪವಿರುತ್ತದೆ. ಈ ದಕ್ಷತೆಯು ಹೇಗಿರುತ್ತದೆ ಎಂದರೆ ದೂರ ಸಾಗುವಾಗ ತುಂಬ ಶಕ್ತಿಯ ಬೇಡಿಕೆಯ ಅಂಶವು ದೂರವನ್ನು ಕ್ರಮಿಸುವುದು ಅಲ್ಲ, ಬದಲಿಗೆ ಅವು ಆಹಾರದ ಮೂಲವನ್ನು ಕಾಣುತ್ತಿದ್ದಂತೆ ಕೆಳಗಿಳಿಯುವುದು, ಮೇಲೇರುವುದು ಮತ್ತು ಬೇಟೆಯಾಡುವುದು, ಇದನ್ನು ಒಳಗೊಂಡಿರುತ್ತದೆ.[೧೭] ಈ ಬಗೆಯ ಪರಿಣಾಮಕಾರಿ ದೂರ-ಪ್ರಯಾಣವು ಕಡಲುಕೋಳಿಗಳು ಯಶಸ್ವೀ ದೂರ ಸಾಗುವ ಮತ್ತು ಕಡಿಮೆ ಶಕ್ತಿಯನ್ನು ಖರ್ಚು ಮಾಡಿಕೊಂಡು ಅಲ್ಲಿ ಇಲ್ಲಿ ಹರಡಿರುವ ಆಹಾರಮೂಲವನ್ನು ಹುಡುಕುವ ಶೋಧಕಹಕ್ಕಿಯನ್ನಾಗಿ ಮಾಡಿದೆ. ಹಾರಾಟಕ್ಕೆ ಹೊಂದಿಕೊಂಡಿರುವುದು ಅವುಗಳಿಗೆ ಗಾಳಿ ಮತ್ತು ಅಲೆಗಳನ್ನು ಅವಲಂಬಿಸುವಂತೆ ಮಾಡಿದೆ. ಆದರೆ ಅವುಗಳ ಉದ್ದ ರೆಕ್ಕೆಗಳು ಶಕ್ತಿಯುತ ಹಾರಾಟಕ್ಕೆ ಅಷ್ಟು ಸೂಕ್ತವಾಗಿಲ್ಲ ಮತ್ತು ಕಡಲಕೋಳಿಗಳ ಜಾತಿಗಳಿಗೆ ನಿರಂತರ ಮೇಲೆ ಕೆಳಗೆ ರೆಕ್ಕೆಯಾಡಿಸುತ್ತ ಹಾರಲು ಸ್ನಾಯುಗಳು ಮತ್ತು ಶಕ್ತಿಯ ಕೊರತೆ ಇದೆ. ಶಾಂತ ಸಮುದ್ರಗಳಲ್ಲಿ ಕಡಲುಕೋಳಿಗಳು ಬಲವಂತವಾಗಿ ವಿರಮಿಸುತ್ತವೆ ಮತ್ತು ನಂತರ ಗಾಳಿ ಜೋರಾಗುತ್ತಿದ್ದಂತೆ ಹಾರುತ್ತವೆ. ದಕ್ಷಿಣ ಪೆಸಿಫಿಕ್ ಕಡಲುಕೋಳಿಗಳು ಫ್ಲಾಪ್-ಗ್ಲೈಡಿಂಗ್ ಎಂದು ಕರೆಯಲಾಗುವ ಹಾರಾಟದ ಶೈಲಿಯನ್ನು ಬಳಸಿಕೊಳ್ಳಬಲ್ಲವು. ಈ ಶೈಲಿಯಲ್ಲಿ ರೆಕ್ಕೆಗಳನ್ನು ಮೇಲೆಕೆಳಗೆ ಬಡಿಯುತ್ತ ಮೇಲೆ ಏರಬಲ್ಲವು.[೧೮] ಕಡಲುಕೋಳಿಗಳು ಹೀಗೆ ಮೇಲೆ ಏರಲು ಆರಂಭಿಸುವಾಗ, ರೆಕ್ಕೆಗಳ ಕೆಳಗೆ ಸಾಕಷ್ಟು ಗಾಳಿಯಾಡುವಂತೆ ಮಾಡಿ, ಮೇಲಕ್ಕೆತ್ತಲು ಮೊದಲು ಸ್ವಲ್ಪ ಓಡುತ್ತವೆ.[೧೩]

ಹಂಚಿಕೆ ಮತ್ತು ಸಮುದ್ರದಲ್ಲಿ ವ್ಯಾಪ್ತಿ[ಬದಲಾಯಿಸಿ]

ವಿಶ್ವಾದ್ಯಂತ ಕಡಲುಕೋಳಿಗಳ ಹಂಚಿಕೆ.

ಹೆಚ್ಚಿನ ಕಡಲುಕೋಳಿಗಳು ದಕ್ಷಿಣ ಗೋಳಾರ್ಧದಲ್ಲಿ ಅಂಟಾರ್ಕ್ಟಿಕದಿಂದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾವರೆಗೆ ವ್ಯಾಪಿಸಿವೆ. ಇದಕ್ಕೆ ಹೊರತಾಗಿರುವುದು ಎಂದರೆ ನಾಲ್ಕು ದಕ್ಷಿಣ ಪೆಸಿಫಿಕ್ ಕಡಲುಕೋಳಿಗಳು, ಅವು ದಕ್ಷಿಣ ಪೆಸಿಫಿಕ್‌ನಲ್ಲಿಯೇ ವ್ಯಾಪಕವಾಗಿ ಕಂಡುಬರುತ್ತವೆ. ಹವಾಯ್‌ನಿಂದ ಜಪಾನ್‌ವರೆಗೆ, ಕ್ಯಾಲಿಫೊರ್ನಿಯಾ ಮತ್ತು ಅಲಾಸ್ಕಾದಲ್ಲಿ ಮೂರು ಕಂಡುಬರುತ್ತವೆ. ಮತ್ತು ಒಂದು ಬಗೆಯ ಅಲೆಯಾಕಾರದ(ವೇವ್ಡ್) ಕಡಲುಕೋಳಿ ಗಳು ಗ್ಯಾಲಪಗೊಸ್ ಐಲ್ಯಾಂಡ್‌ ಗಳಲ್ಲಿ ಮರಿಮಾಡಿ, ದಕ್ಷಿಣ ಅಮೆರಿಕಾದ ಕರಾವಳಿಯಲ್ಲಿ ಆಹಾರ ಹುಡುಕಿಕೊಳ್ಳುತ್ತವೆ. ಕಡಲುಕೋಳಿಗಳು ಎತ್ತರದ ಪ್ರದೇಶಗಳಲ್ಲಿರುವುದಕ್ಕೆ ಮುಖ್ಯ ಕಾರಣ ಎಂದರೆ ಅವುಗಳಿಗೆ ಹಾರಲಿಕ್ಕೆ ಅಧಿಕ ಗಾಳಿಯ ಅಗತ್ಯವಿರುವುದು; ಹೀಗಾಗಿ ನಿರಂತರ ರೆಕ್ಕೆಬಡಿಯುತ್ತ ಹಾರಾಟಕ್ಕೆ ಅವು ಅಷ್ಟು ಸೂಕ್ತವಿಲ್ಲದ್ದರಿಂದ ಅವುಗಳಿಗೆ ಗಾಳಿಯಿಲ್ಲದ ಪ್ರಶಾಂತ ಸ್ಥಿತಿಯನ್ನು ದಾಟಿಕೊಂಡು ಹಾರುವುದು ಬಹಳ ಕಷ್ಟವಾಗುತ್ತದೆ. ಇದಕ್ಕೆ ಹೊರತಾಗಿರುವುದು ಎಂದರೆ , ಅಲೆಗಳ(ವೇವ್ಡ್) ಕಡಲುಕೋಳಿ, ಇದು ಸಮಭಾಜಕದ ಬಳಿಯ ನೀರಿನಲ್ಲಿ ಅಂದರೆ ಗ್ಯಾಲಪಗೊಸ್ ದ್ವೀಪಗಳಲ್ಲಿ ವಾಸಿಸುತ್ತವೆ. ಅಲ್ಲಿ ಹಮ್‌ಬೋಲ್ಟ್ ಕರೆಂಟ್‌ನ ಶಾಂತ ನೀರಿರುವುದರಿಂದ ಮತ್ತು ಅದರಿಂದ ಗಾಳಿಯಿರುವುದರಿಂದ ಅವುಗಳಿಗೆ ಅಲ್ಲರಿಲು ಸಾಧ್ಯವಾಗಿದೆ.[೯]

ಕಡಲುಕೋಳಿಗಳು ಸಮುದ್ರದ ಅಪಾರ ವ್ಯಾಪ್ತಿಯಲ್ಲಿವೆ ಮತ್ತು ನಿಯಮಿತವಾಗಿ ಭೂಮಿಯನ್ನು ಸುತ್ತುತ್ತವೆ.

ಉತ್ತರ ಅಟ್ಲಾಂಟಿಕ್ಲ್‌ನಲ್ಲಿ ಕಡಲುಕೋಳಿಗಳು ಏಕೆ ನಿರ್ನಾಮಗೊಂಡಿವೆ ಎಂಬುದು ಇನ್ನೂ ಖಚಿತವಾಗಿ ತಿಳಿದಿಲ್ಲ. ಪ್ರಾಯಶಃ ಇಂಟರ್‌ಗ್ಲೇಸಿಯಲ್ ಬೆಚ್ಚನೆಯ ಅವಧಿಯಲ್ಲಿ ಏರಿದ ಸಮುದ್ರ ಮಟ್ಟದಿಂದಾಗಿ ಕಿರು ಬಾಲದ ಕಡಲುಕೋಳಿಗಳ ಕಾಲನಿಯನ್ನು ಮುಳುಗಿಸಿರಬಹುದು ಎಂದು ಬರ್ಮುಡಾದಲ್ಲಿ ಮಾಡಿದ ಉತ್ಖನನದಿಂದ ಹೇಳಲಾಗಿದೆ.[೧೦] ಕೆಲವು ಉತ್ತರದ ಜಾತಿಗಳು ಆಗೀಗ ಉತ್ತರ ಅಟ್ಲಾಂಟಿಕ್‌ನಲ್ಲಿ ಅಲೆಮಾರಿಗಳಾಗಿ ಪರಿವರ್ತಿತವಾಗಿ, ಅಲ್ಲಿಂದ ದಶಕಗಳ ಕಾಲ ಇದ್ದು, ಹೊರಹೋಗಿರಬಹುದು. ಹೀಗೆ ಹೊರಗೆಹೋದ ಕಪ್ಪು-ಹಣೆಯ ಕಡಲುಕೋಳಿಯು, ಸ್ಕಾಟ್‌ಲ್ಯಾಂಡ್‌ ನ ಗನ್ನೆಟ್ ಕಾಲನಿಗಳಿಗೆ ಮರಿಹಾಕುವ ಏಕೈಕ ಪ್ರಯತ್ನದಿಂದ ಮರಳಿಬಂದಿವೆ.[೧೯]

ಉಪಗ್ರಹ ಟ್ರ್ಯಾಕಿಂಗ್ ಬಳಕೆಯು ವಿಜ್ಞಾನಿಗಳಿಗೆ ಕಡಲುಕೋಳಿಗಳು ಆಹಾರವನ್ನು ಹುಡುಕುತ್ತ ಸಮುದ್ರಗಳಲ್ಲಿ ಸಾಗುವ ರೀತಿಯ ಕುರಿತು ಸಾಕಷ್ಟು ಮಾಹಿತಿ ನೀಡಿವೆ. ಅವು ವಾರ್ಷಿಕವಲಸೆಯನ್ನು ಮಾಡುತ್ತವೆ, ಆದರೆ ಮರಿಹಾಕಿದ ನಂತರ ವ್ಯಾಪಕವಾಗಿ ಚದುರುತ್ತವೆ. ದಕ್ಷಿಣ ಗೋಳಾರ್ಧ ಜಾತಿಗಳಲ್ಲಿ ಹೆಚ್ಚಿನ ವೇಳೆ , ಪರಿಧ್ರುವ ಅಥವಾ ಧ್ರುವ ಸಮೀಪದ ಪ್ರಯಾಣವನ್ನು ಕೈಗೊಳ್ಳುತ್ತವೆ.[೨೦] ಸಮುದ್ರದಲ್ಲಿ ವಿವಿಧ ಭಿನ್ನ ಜಾತಿಗಳ ಪ್ರತ್ಯೇಕತೆ ಇದೆ ಎನ್ನುವುದಕ್ಕೆ ಕೂಡ ಸಾಕ್ಷ್ಯಗಳಿವೆ. ಎರಡು ಸಂಬಂಧಿತ ಜಾತಿಗಳಾದ ಕ್ಯಾಂಪ್‌ಬೆಲ್ ಐಲ್ಯಾಂಡ್‌ ಗಳಲ್ಲಿರುವ ಕ್ಯಾಂಪ್‌ಬೆಲ್ ಕಡಲುಕೋಳಿಗಳು ಮತ್ತು ಬೂದುತಲೆಯ ಕಡಲುಕೋಳಿಗಳ ನೆಲೆದಾಣ ಶೋಧದ ಹೋಲಿಕೆಯು ಕಡಲುಕೋಳಿಗಳು ಮುಖ್ಯವಾಗಿ ಕ್ಯಾಂಪ್‌ಬೆಲ್ ಪ್ರಸ್ಥಭೂಮಿ ಯಲ್ಲಿದ್ದವು ಮತ್ತು ಬೂದುತಲೆಯ ಕಡಲುಕೋಳಿ ಪೆಲಗಿಕ್ ಸಮುದ್ರದ ನೀರಿನಲ್ಲಿದ್ದವು ಎಂಬುದನ್ನು ತೋರಿಸಿದೆ. ಅಲೆಮಾರಿ ಕಡಲುಕೋಳಿಗಳು ಕೂಡ ಬೇತಿಮೆಟ್ರಿ ಅಂದರೆ ಸಮುದ್ರದ ತಳಭಾಗದ ನೀರಿನಾಳವನ್ನು ಅಳೆಯುವುದಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿವೆ. ಅವು 1000 ಮೀಟರ್‌ಗಿಂತ(3281 ಅಡಿ)ಆಳವಾಗಿರುವ ನೀರಿನಲ್ಲಿ ಮಾತ್ರವೇ ಆಹಾರ ಹುಡುಕಿಕೊಳ್ಳುತ್ತವೆ; ಉಪಗ್ರಹ ನಕ್ಷೆಗಳು ಕೂಡ ಇದನ್ನೇ ತೋರಿಸಿವೆ. ಇದನ್ನು ಗಮನಿಸಿ ಒಬ್ಬರು ವಿಜ್ಞಾನಿ ಹೀಗೆ ಹೇಳಿದ್ದಾರೆ, "ಕಡಲಕೋಳಿಗಳು 'ಇಲ್ಲಿ ಪ್ರವೇಶವಿಲ್ಲ' ಎಂಬ ಫಲಕವನ್ನು ನೋಡಿ, ಅದನ್ನು ಪಾಲಿಸುವಂತೆ 1000 ಮೀಟರ್‌ ಕಡಿಮೆ ಆಳದ ನೀರಿಗೆ ಇಳಿಯುವಂತೆ ಕಾಣುತ್ತದೆ' [೯] ಒಂದೇ ಜಾತಿಯ ಎರಡು ಲಿಂಗದ ಹಕ್ಕಿಗಳು ಭಿನ್ನ ವ್ಯಾಪ್ತಿಯಲ್ಲಿರಲು ಸಾಧ್ಯವಿದೆ ಎಂಬುದಕ್ಕೆ ಕೂಡ ಸಾಕ್ಷ್ಯಗಳಿವೆ. ಗಫ್ ಐಲ್ಯಾಂಡ್‌ಗಳಲ್ಲಿ ಮರಿಹಾಕುವ ಟ್ರಿಸ್ಟನ್ ಕಡಲುಕೋಳಿಗಳ ಒಂದು ಅಧ್ಯಯನವು ಗಂಡು ಹಕ್ಕಿಗಳು ಗಫ್‌‌ನ ಪಶ್ಚಿಮದಲ್ಲಿ ಶೋಧ ನಡೆಸಿದರೆ ಹೆಣ್ಣು ಹಕ್ಕಿಗಳು ಪೂರ್ವದಲ್ಲಿ ಶೋಧ ನಡೆಸುವುದನ್ನು ತೋರಿಸಿದೆ.[೯]

ಆಹಾರ ಕ್ರಮ[ಬದಲಾಯಿಸಿ]

ಕಡಲುಕೋಳಿಗಳ ಆಹಾರಕ್ರಮವು ಮುಖ್ಯವಾಗಿ ಸೆಫಲೊಪಾಡ್‌‌‌ಗಳು, ಮೀನು, ಕ್ರಸ್ಟಸೀನ್‌‌ಗಳು ಮತ್ತು ಓಫಲ್‌[೧೩] ಗಳು. ಅವು ಸತ್ತಿರುವ ಕ್ಯಾರಿಯನ್ ಗಳು ಮತ್ತು ಬೇರೆ ಜೂಪ್ಲಾಂಕ್‌ಟನ್‌ ಗಳನ್ನು ತಿನ್ನುವುದನ್ನು ಒಳಗೊಂಡಿದೆ.[೧೩] ಹೆಚ್ಚಿನ ಜಾತಿಗಳ ಆಹಾರ ಕ್ರಮದ ವಿಚಾರದಲ್ಲಿ, ಅವುಗಳ ಮರಿಹಾಕುವ ಸಮಯದ ಆಹಾರ ಕ್ರಮದ ಕುರಿತು ಮಾತ್ರ ಒಂದು ಸಮಗ್ರ ಅರಿವು ಇದೆ ಎಂಬುದನ್ನು ಗಮನಿಸಬೇಕಿದೆ. ಏಕೆಂದರೆ ಆಗ ಕಡಲುಕೋಳಿಗಳು ನಿಯಮಿತವಾಗಿ ಭೂಮಿಗೆ ಮರಳುತ್ತವೆ ಮತ್ತು ಅದ್ಯಯನ ಮಾಡಲು ಸಾಧ್ಯವಾಗುತ್ತದೆ. ಈ ಪ್ರತಿಯೊಂದೂ ಆಹಾರ ಮೂಲಗಳ ಪ್ರಾಮುಖ್ಯತೆಯು ಕಡಲಕೋಳಿಗಳ ಜಾತಿಗಳಿಂದ ಜಾತಿಗಳಿಗೆ ಭಿನ್ನವಾಗುತ್ತವೆ. ಗುಂಪಿನಿಂದ ಗುಂಪಿಗೂ ಭಿನ್ನವಾಗುತ್ತವೆ. ಕೆಲವು ಕೇವಲ ಸ್ಕ್ವಿಡ್‌‌ಗಳನ್ನು ಮಾತ್ರ ತಿಂದರೆ ಮತ್ತೆ ಕೆಲವು ಹೆಚ್ಚು ಕ್ರಿಲ್ ಅಥವಾ ಮೀನುಗಳನ್ನು ತಿನ್ನುತ್ತವೆ. ಹವಾಯ್‌‌‌ನಲ್ಲಿ ಕಂಡುಬಂದ ಎರಡು ಕಡಲುಕೋಳಿ ಜಾತಿಗಳಲ್ಲಿ, ಒಂದು ಕಪ್ಪು-ಕಾಲುಗಳ ಕಡಲುಕೋಳಿ ಗಳು ಹೆಚ್ಚಾಗಿ ಮೀನನ್ನು ತಿಂದರೆ, ಇನ್ನೊಂದು ಲೇಸನ್ ಜಾತಿಯು ಸ್ಕ್ವಿಡ್‌‌ಗಳನ್ನು ತಿನ್ನುತ್ತವೆ.[೧೩]

ಹಗುರು-ಬೆನ್ನಿನ ಕಡಲುಕೋಳಿಗಳು ನಿಯಮಿತವಾಗಿ ಆಹಾರಕ್ಕಾಗಿ ಡೈವ್ ಮಾಡುತ್ತವೆ ಮತ್ತು 12 ಮೀಟರ್‌ಗೂ ಆಳಕ್ಕೆ ಡೈವ್ ಮಾಡಬಲ್ಲದು.

ಸಮುದ್ರದಲ್ಲಿ ಸಮಯಕ್ಕೆ ಪ್ರತಿಯಾಗಿ ನೀರಿನ ಒಳತೆಗೆದುಕೊಳ್ಳುವಿಕೆಯನ್ನು ದಾಖಲಿಸುವ ಡಾಟಾಲಾಗರ್ಸ್‌‌ಗಳ ಬಳಕೆಯು(ಇದು ಫೀಡಿಂಗ್‌ನ ಸಮಯವನ್ನು ಒದಗಿಸುವ ಸಾಧ್ಯತೆ ಇದೆ) ಕಡಲುಕೋಳಿಯು ಹೆಚ್ಚಾಗಿ ಹಗಲಿನ ವೇಳೆಯಲ್ಲಿ ತಿನ್ನುತ್ತವೆ ಎಂಬುದನ್ನು ಸೂಚಿಸುತ್ತವೆ. ಕಡಲುಕೋಳಿಗಳು ವಾಂತಿಮಾಡಿದ ಸ್ಕ್ವಿಡ್‌ ಕೊಕ್ಕುಗಳ ವಿಶ್ಲೇಷಣೆಯು ಅವು ತಿಂದಿರುವ ಸ್ಕ್ವಿಡ್‌ ಗಳು ಜೀವಂತ ತಿನ್ನಲು ಬಹಳ ದೊಡ್ಡವು ಮತ್ತು ಕಡಲಕೋಳಿಗಳಿಗೆ ತಲುಪಲಾರದ ಹಾಗೆ ಮಧ್ಯ-ನೀರಿನಲ್ಲಿರುವ ಜಾತಿಯವು, ಅಂದರೆ,ವಾಂಡರಿಂಗ್/ಅಲೆಮಾರಿ ಕಡಲುಕೋಳಿ )ಗಳಂತಹ ಕೆಲವು ಜಾತಿಗಳಳಿಗೆ ಸತ್ತು, ಕೊಳೆತ ಸ್ಕ್ವಿಡ್‌‌ಗಳು ಆಹಾರದ ಪ್ರಮುಖ ಭಾಗ ಎಂಬುದನ್ನು ಸೂಚಿಸುತ್ತದೆ. ಈ ಸತ್ತ ಸ್ಕ್ವಿಡ್‌ಗಳ ಮೂಲವು ಒಂದು ಚರ್ಚೆಯ ವಿಷಯವಾಗಿದೆ; ಕೆಲವು ನಿಶ್ಚಿತವಾಗಿಯೂ ಸ್ಕ್ವಿಡ್‌ ಮೀನುಗಾರಿಕೆಯಿಂದ ಬರುತ್ತವೆ. ಆದರೆ ನಿಸರ್ಗದಲ್ಲಿ ಅದು ಮುಖ್ಯವಾಗಿ, ಸ್ಕ್ವಿಡ್‌ಗಳು ದೊಡ್ಡ ಪ್ರಮಾಣದಲ್ಲಿ ಮರಿಹಾಕಿದಾಗ ಮತ್ತು ಸ್ಕ್ವಿಡ್‌-ತಿನ್ನುವ ವೇಲ್‌‌ಗಳು,(ಸ್ಪರ್ಮ್‌ ವೇಲ್‌‌ಗಳು, ಪೈಲಟ್ ವೇಲ್‌‌ ಗಳು ಮತ್ತು ದಕ್ಷಿಣ ಬಾಟಲ್‌ನೋಸ್ ವೇಲ್‌‌ ಗಳು) ನಂತರ ವಾಂತಿ ಮಾಡಿದಾಗ ಇವುಗಳಿಗೆ ಸ್ಕ್ವಿಡ್‌ಗಳು ದೊರೆಯುತ್ತವೆ.[೨೧] ಬೇರೆ ಜಾತಿಗಳ ಆಹಾರಕ್ರಮದಲ್ಲಿ ಕಪ್ಪು-ಕಂದು ಕಡಲುಕೋಳಿ ಗಳು ಅಥವಾ ಬೂದು-ತಲೆಯ ಕಡಲುಕೋಳಿ , ಸಣ್ಣ ಜಾತಿಗಳ ಸ್ಕ್ವಿಡ್‌ಗಳು ಹೆಚ್ಚಿರುತ್ತವೆ. ಈ ಸ್ಕ್ವಿಡ್‌ಗಳು ಸತ್ತ ನಂತರ ಮುಳುಗುವ ಲಕ್ಷಣ ಹೊಂದಿವೆ, ಮತ್ತು ಕೊಳೆತ ಮಾಂಸ ಬಳಸುವುದು ಇವುಗಳ ಆಹಾರ ಕ್ರಮದಲ್ಲಿ ಮುಖ್ಯ ಪಾತ್ರವನ್ನು ವಹಿಸುವುದಿಲ್ಲ.[೯] ಜೊತೆಗೆ ಅಲೆಯ(ವೇವ್ಡ್) ಕಡಲುಕೋಳಿಯು ಕ್ಲೆಪ್ಟೊಪ್ಯಾರಸೈಟಿಸಮ್‌ ಅಂದರೆ ಬೇರೆ ಪ್ರಾಣಿ ಸಿದ್ಧಪಡಿಸಿಕೊಂಡ ಅಥವಾ ಬೇಟೆಯಾಡಿದ ಆಹಾರವನ್ನು ಹೊಂಚುಹಾಕಿ ಕಬಳಿಸುವುದನ್ನು ರೂಢಿಮಾಡಿಕೊಂಡಿದೆ. ಇವುಗಳು ಬೂಬಿ ಹಕ್ಕಿಗಳಿಗೆ ಕಿರುಕುಳ ನೀಡಿ, ಅವುಗಳ ಆಹಾರವನ್ನು ಕದಿಯುತ್ತವೆ. ಕಡಲುಕೋಳಿಗಳ ಜಾತಿಯಲ್ಲಿ ಇದೊಂದೇ ನಿಯಮಿತವಾಗಿ ಹೀಗೆ ಮಾಡುತ್ತದೆ.[೨೨]

ಇತ್ತೀಚಿನವರೆಗೂ ಕಡಲುಕೋಳಿಗಳು ಮುಖ್ಯವಾಗಿ ಮೇಲ್ಮೈನಲ್ಲಿ ಆಹಾರ ಹುಡುಕುತ್ತವೆ ಎಂದು ಯೋಚಿಸಲಾಗಿತ್ತು. ಅಂದರೆ ಸಮುದ್ರದ ಮೇಲ್ಮೈನಲ್ಲಿ ಈಜಿ, ಸಮುದ್ರದ ಅಲೆಗಳಿಂದ ಮೇಲೆ ಬರುವ ಸ್ಕ್ವಿಡ್‌ ಮತ್ತು ಮೀನುಗಳನ್ನು ಬಾಚಿಕೊಂಡು, ಅವುಗಳನ್ನು ಸಾಯಿಸುತ್ತವೆ ಎಂದು ಯೋಚಿಸಲಾಗಿತ್ತು. ಈಗ ಹಕ್ಕಿಯೊಂದು ಡೈವ್‌ ಮಾಡುವ ಗರಿಷ್ಠ ಆಳವನ್ನು ದಾಖಲಿಸಲು ಕ್ಯಾಪಿಲರಿ ಡೆಪ್ತ್‌ ರೆಕಾರ್ಡರ್ ಎಂಬ ಸಾಧನವನ್ನು ಬಳಸಲಾಗುತ್ತಿದೆ.(ಈ ಸಾಧನವನ್ನು ಹಕ್ಕಿಗಳಿಗೆ ಮೊದಲೇ ಕಟ್ಟಲಾಗುತ್ತದೆ, ಅವು ಭೂಮಿಗೆ ಮರಳಿ ಬಂದಾಗ ಪುನಾ ತೆಗೆದುಕೊಳ್ಳಲಾಗುತ್ತದೆ). ಈ ಸಾಧನವು ತೋರಿಸಿರುವಂತೆ ವಾಂಡರಿಂಗ್/ಅಲೆಮಾರಿ ಕಡಲುಕೋಳಿಯಂತಹ ಕೆಲವು ಜಾತಿಗಳು ಹೆಚ್ಚು ಆಳಕ್ಕೆ ಡೈವ್ ಮಾಡುವುದಿಲ್ಲ, ಒಂದು ಮೀಟರ್‌ಗಿಂತ ಹೆಚ್ಚು ಆಳಕ್ಕೆ ಡೈವ್ ಮಾಡುವುದಿಲ್ಲ. ಆದರೆ ಹಗುರು-ಬೆನ್ನಿನ ಕಡಲುಕೋಳಿ ಗಳಂತಹ ಕೆಲವು ಜಾತಿಗಳು , ಸರಾಸರಿ 5ಮೀ.ನಷ್ಟು ಆಳಕ್ಕೆ ಡೈವ್ ಮಾಡುತ್ತವೆ ಮತ್ತು ಸುಮಾರು 12.5 ಮೀ. ಆಳಕ್ಕೂ ಡೈವ್ ಮಾಡಬಲ್ಲವು.[೨೩] ಸಮುದ್ರದ ಮೇಲುಭಾಗದಲ್ಲಿ ಹಿಡಿದು ತಿನ್ನುವುದು ಮತ್ತು ಡೈವ್ ಮಾಡುವ ಜೊತೆಗೆ, ತಮ್ಮ ಬೇಟೆಯನ್ನು ಹಿಡಿಯಲು ಗಾಳಿಯಿಂದ ರಭಸದಲ್ಲಿ ನೀರಿನಲ್ಲಿ ಮುಳುಗುವಂತೆ ಡೈವಿಂಗ್ ಮಾಡುವುದೂ ಕಂಡುಬಂದಿದೆ.[೨೪]

ಮರಿಹಾಕುವಿಕೆ ಮತ್ತು ನರ್ತಿಸುವುದು[ಬದಲಾಯಿಸಿ]

306.989x306.989px

ಕಡಲುಕೋಳಿಗಳು ಗುಂಪಾಗಿ(ಕಾಲೋನಿ) ಇರುತ್ತವೆ, ಸಾಮಾನ್ಯವಾಗಿ ದೂರದ ಐಲ್ಯಾಂಡ್‌ಗಳಲ್ಲಿ ಗೂಡು ಮಾಡುತ್ತವೆ; ದೊಡ್ಡ ಐಲ್ಯಾಂಡ್ ಭೂಪ್ರದೇಶದಲ್ಲಿರುವ ಕಾಲನಿಗಳು ಭೂಚಾಚುಗಳಿಂದ(ಹೆಡ್‌ಲ್ಯಾಂಡ್‌ ) ಆವೃತವಾಗಿದ್ದು, ಸಮುದ್ರದಿಂದ ಹಲವಾರು ದಿಕ್ಕಿನಲ್ಲಿ ತಲುಪಬಹುದಾಗಿದೆ. ಉದಾ: , ಡನ್‌ಡೈನ್, ನ್ಯೂಜಿಲ್ಯಾಂಡ್‌ ಒಟಗೊ ಪ್ರಸ್ಥಭೂಮಿ ಯಲ್ಲಿರುವ ಕಾಲನಿಗಳು. ಅನೇಕ ಬುಲ್ಲರ್‌ ಕಡಲುಕೋಳಿ ಗಳು ಮತ್ತು ಕಪ್ಪು-ಕಾಲಿನ ಕಡಲುಕೋಳಿ ಗಳು ತೆರೆದ ಕಾಡಿನಲ್ಲಿ ಮರಗಳ ಕೆಳಗೆ ಗೂಡುಕಟ್ಟುತ್ತವೆ.[೨೫] ಕೆಲವೆಡೆ ಕಾಲನಿಗಳು ತುಂಬ ಒತ್ತೊತ್ತಾಗಿ ಇದ್ದರೆ ಇನ್ನು ಕೆಲವೆಡೆ ದೂರದೂರಕ್ಕೆ, ಅಂತರ ಬಹಳವಿರುವ ವೈಯಕ್ತಿಕ ಗೂಡುಗಳ ರೀತಿಯಲ್ಲಿಯೂ ಇರುತ್ತವೆ. ಉದಾಹರಣೆಗೆ ಮೊಲ್ಲಿವಾಕ್‌ಗಳ(ಫಾಕಲ್ಯಾಂಡ್ ದ್ವೀಪ ಗಳ ಕಪ್ಪು-ಹಣೆಯ ಕಡಲುಕೋಳಿ ಕಾಲನಿಗಳು ಪ್ರತಿ 100 m²ಗೆ ಸುಮಾರು 70 ಗೂಡುಗಳಿರುತ್ತವೆ) ಕಾಲನಿಗಳು ಒತ್ತೊತ್ತಾಗಿರುತ್ತವೆ ಮತ್ತು ಕಂದುಬಣ್ಣದ ಮತ್ತು ಗ್ರೇಟ್ ಕಡಲುಕೋಳಿಗಳು ದೂರದದಲ್ಲಿ ವಿರಳವಾದ ಗೂಡುಕಟ್ಟುವ ಪ್ರವೃತ್ತಿ ಹೊಂದಿವೆ. ಎಲ್ಲ ಕಡಲುಕೋಳಿ ಕಾಲನಿಗಳು ದ್ವೀಪದಲ್ಲಿರುತ್ತವೆ ಮತ್ತು ಐತಿಹಾಸಿಕವಾಗಿ ಭೂಮಿಯ ಸಸ್ತನಿ ಗಳಿಂದ ಮುಕ್ತವಾಗಿರುತ್ತವೆ. ಕಡಲುಕೋಳಿಗಳು ತುಂಬ ಫಿಲೊಪ್ಯಾಟ್ರಿಕ್ ಲಕ್ಷಣದವು, ಅಂದರೆ ಅವು ಮರಿಹಾಕಲು ತಮ್ಮ ಮೂಲ ಕಾಲನಿಗೆ ಮರಳಿ ಬರುತ್ತವೆ. ಹೀಗೆ ಮರಿಹಾಕಲು ತಮ್ಮಮೂಲಸ್ಥಳಕ್ಕೆ ಬರುವ ಪ್ರವೃತ್ತಿಯು ಎಷ್ಟು ಗಾಢವಾಗಿದೆ ಎಂದರೆ ಲೇಸನ್ ಕಡಲುಕೋಳಿ ಗಳು ತಮ್ಮ ಸ್ವಂತ ವಾಸದ ನೆಲೆ ಸ್ಥಾಪಿಸುವ ಸ್ಥಳಕ್ಕೆ ಮತ್ತು ಅವು ಮರಿಹಾಕಲು ಬರುವ ಮೂಲ ಸ್ಥಳಕ್ಕೆ ಇರುವ ದೂರ 22 ಮೀಟರ್(22 m (72 ft)) ಎಂಬುದನ್ನು ಅಧ್ಯಯನವೊಂದು ತೋರಿಸಿದೆ.[೨೬]

ಅನೇಕ ಕಡಲುಹಕ್ಕಿಗಳ ಹಾಗೆಯೇ, ಕಡಲುಕೋಳಿಗಳು ತಮ್ಮ ಬದುಕಿನ ಇತಿಹಾಸಕ್ಕೆ ಸಂಬಂಧಿಸಿದಂತೆ ಕೆ-ಆಯ್ಕೆಯವು(ಕೆ-ಸೆಲೆಕ್ಟೆಡ್) , ಅಂದರೆ ಅವು ಬೇರೆ ಹಕ್ಕಿಗಳಿಗಿಂತ ಹೆಚ್ಚು ದೀರ್ಘ ಕಾಲ ಬದುಕುತ್ತವೆ, ಅವು ಮರಿಹಾಕುವುದನ್ನು ದೀರ್ಘಕಾಲ ವಿಳಂಬ ಮಾಡುತ್ತವೆ ಮತ್ತು ಇರುವ ಕೆಲವೇ ಎಳೆ ಹಕ್ಕಿಗಳ ಪಾಲನೆಗೆ ಹೆಚ್ಚು ಪ್ರಯತ್ನ ಹಾಕುತ್ತವೆ. ಕಡಲುಕೋಳಿಗಳು ದೀರ್ಘ ಕಾಲ ಬದುಕುತ್ತವೆ; ಇವುಗಳ ಅನೇಕ ಜಾತಿಗಳು 50 ವರ್ಷಕ್ಕೂ ಮೇಲ್ಪಟ್ಟು ಬದುಕುತ್ತವೆ. ಅತ್ಯಂತ ಹಳೆಯ ದಾಖಲೆ ಎಂದರೆ ಒಂದು ದಕ್ಷಿಣದ ರಾಯಲ್ ಕಡಲುಕೋಳಿಯದು. ಅದು ವಯಸ್ಕವಾಗಿದ್ದಾಗ ಅದಕ್ಕೆ ಗುರುತಿನ ರಿಂಗ್ ಹಾಕಲಾಗಿತ್ತು ಮತ್ತು ನಂತರ ಅದು 51 ವರ್ಷ ಬದುಕಿತ್ತು, ಅಂದರೆ ಒಟ್ಟು ಅಂದಾಜು 61 ವರ್ಷ ಅದು ಬದುಕಿತ್ತು.[೨೭] ಹೆಚ್ಚಿನ ಕಡಲುಕೋಳಿಗಳಿಗೆ ರಿಂಗ್ ಹಾಕುವ ಯೋಜನೆಗಳು ಅದಕ್ಕಿಂತ ಹೆಚ್ಚು ಎಳೆಯದಾಗಿದ್ದಾಗ ಕೈಗೊಂಡಿದ್ದಾಗಿದ್ದು, ಬೇರೆ ಜಾತಿಗಳು ಕೂಡ ದೀರ್ಘ ಕಾಲ ಮತ್ತು ಇನ್ನೂ ಅಧಿಕ ಕಾಲ ಬದುಕಬಹುದು ಎಂಬುದು ಸಾಬೀತಾಗುವ ಸಾಧ್ಯತೆಗಳಿವೆ.

ಲೇಸನ್ ಕಡಲುಕೋಳಿಗಳ ಬ್ರೀಡಿಂಗ್ ಡಾನ್ಸ್‌ನಲ್ಲಿ ಆಕಾಶದತ್ತ-ನೋಡುವುದು(ಸ್ಕೈ-ಪಾಯಿಟಿಂಗ್) ಒಂದು ರೂಢಮಾದರಿಯ ಕ್ರಿಯೆಯಾಗಿದೆ.

ಕಡಲುಕೋಳಿ ಲೈಂಗಿಕ ಪ್ರೌಢತೆಯನ್ನು ಸುಮಾರು ಹುಟ್ಟಿದ ಐದು ವರ್ಷಗಳ ನಂತರ ನಿಧಾನವಾಗಿ ಗಳಿಸುತ್ತವೆ. ಆದರೆ ಒಮ್ಮೆ ಪ್ರೌಢತೆ ಗಳಿಸಿದ ನಂತರವೂ, ಅವು ಮತ್ತೆ ಕೆಲವು ವರ್ಷಗಳವರೆಗೆ ಮರಿಹಾಕಲು ಆರಂಭಿಸುವುದಿಲ್ಲ.(ಕೆಲವು ಜಾತಿಗಳು 10 ವರ್ಷಗಳವರೆಗೂ ಮರಿಹಾಕುವುದಿಲ್ಲ). ಮರಿಹಾಕದ ಎಳೆ ಹಕ್ಕಿಗಳು, ಮರಿಹಾಕುವುದನ್ನು ಆರಂಭಿಸುವ ಮೊದಲು ಒಂದು ಕಾಲನಿಗೆ ಭೇಟಿ ನೀಡುತ್ತವೆ, ಅಲ್ಲಿ ಮರಿಹಾಕುವುದು, ಸಲಹುವ ಪದ್ಧತಿಗಳನ್ನು ಮತ್ಠು 'ನೃತ್ಯ' ಮಾಡುವುದನ್ನು ರೂಢಿ ಮಾಡಿಕೊಳ್ಳುತ್ತವೆ. ಕಡಲಕೋಳಿಗಳ ಕುಟುಂಬಗಳು ನೃತ್ಯಕ್ಕೆ ಪ್ರಸಿದ್ಧವಾಗಿವೆ.[೨೮] ಕಾಲನಿಗೆ ಮರಳಿ ಬರುವ ಹಕ್ಕಿಗಳು ಮೊದಲ ಬಾರಿಗೆ ಕಡಲುಕೋಳಿ ಭಾಷೆಯನ್ನು ಹೊಂದಿರುವ ರೂಢಮಾದರಿಯ ವರ್ತನೆಗಳನ್ನು ರೂಢಿಮಾಡಿಕೊಂಡಿರುತ್ತದೆ, ಆದರೆ ಬೇರೆ ಹಕ್ಕಿಗಳು ವ್ಯಕ್ತಪಡಿಸುವ ಆ ವರ್ತನೆಗಳನ್ನು "ಓದಲು" ಅದಕ್ಕೆ ಸಾಧ್ಯವಾಗುವುದಿಲ್ಲ ಅಥವಾ ಸೂಕ್ತವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗದು.[೧೩] ತಪ್ಪು ಮಾಡಿ,ಪ್ರಯತ್ನಿಸಿ ಸರಿಪಡಿಸಿಕೊಳ್ಳುವ ಟ್ರಯಲ್ ಮತ್ತು ಎರರ್ ವಿಧಾನದ ಕಲಿಕೆಯ ಒಂದು ಅವಧಿಯ ನಂತರ, ಎಳೆ ಹಕ್ಕಿಗಳು ವಾಕ್ಯರಚನೆಯನ್ನು ಮತ್ತು ಪರಿಪೂರ್ಣ ನೃತ್ಯವನ್ನು ಕಲಿತುಕೊಳ್ಳುತ್ತವೆ. ಎಳೆ ಹಕ್ಕಿಗಳು ವಯಸ್ಸಾದ ಹಕ್ಕಿಗಳ ಜೊತೆಯಲ್ಲಿದ್ದರೆ ಈ ಭಾಷೆಯನ್ನು ಬಹುಬೇಗನೆ ಕರಗತ ಮಾಡಿಕೊಳ್ಳಬಲ್ಲವು.

ಈ ವರ್ತನೆಗಳ ಸಂಚಯವು ವಿವಿಧ ಕ್ರಿಯೆಗಳ ಸಮನ್ವಯಗೊಂಡ ಪ್ರಸ್ತುತಿಯಂತೆ ಇರುತ್ತದೆ, ಇವು ಗರಿಗಳನ್ನು ಕೊಕ್ಕಿನಿಂದ ಅಂದಗೊಳಿಸಿಕೊಳ್ಳುವುದು , ತೋರಿಸುವುದು, ಕರೆಯುವುದು, ಕೊಕ್ಕಿನಿಂದ ಕ್ಲಕ್‌ ಕ್ಲಕ್ ಎನ್ನುವುದು, ದಿಟ್ಟಿಸುವುದು ಮತ್ತು ಇಂತಹ ಎಲ್ಲ ವರ್ತನೆಗಳ(ಸ್ಕೈ-ಕಾಲ್‌ ಹಾಗೆ)ಸಂಯೋಜನೆಯನ್ನು ಒಳಗೊಂಡಿರುತ್ತದೆ.[೨೯] ಹಕ್ಕಿಯೊಂದು ಮೊದಲು ಕಾಲನಿಗಳಿಗೆ ಮರಳಿ ಬಂದಾಗ ಅದು ಅನೇಕ ಸಂಗಾತಿಗಳೊಡನೆ ನೃತ್ಯ ಮಾಡುತ್ತದೆ. ಆದರೆ ಹಲವು ವರ್ಷಗಳ ಕಾಲ ಹಕ್ಕಿಯೊಂದು ಹೀಗೆ ಒಡನಾಡುವ ಬೇರೆ ಹಕ್ಕಿಗಳ ಸಂಖ್ಯೆ ಕಡಿಮೆಯಾಗುತ್ತ, ಕೊನೆ ಒಂದು ಸಂಗಾತಿಯನ್ನು ಆಯ್ಕೆ ಮಾಡಿಕೊಂಡು, ಜೊತೆಯಾಗುತ್ತವೆ. ಅವು ವ್ಯಕ್ತಿಗತ ಭಾಷೆಯಲ್ಲಿ ಪರಿಪೂರ್ಣವಾಗುವುದನ್ನು ಮುಂದುವರೆಸುತ್ತವೆ ಮತ್ತು ಅದು ಆ ಒಂದು ಜೊತೆಗೇ ಅನನ್ಯವಾಗಿರುತ್ತದೆ. ಸಂಗಾತಿ ಬಂಧ ರೂಪುಗೊಂಡ ನಂತರ, ಅದು ಬದುಕಿನುದ್ದಕ್ಕೂ ಇರುತ್ತದೆ. ಆ ಮೊದಲು ಮಾಡಿದ ಹಲವು ಬಗೆಯ ನರ್ತನಗಳನ್ನು ಅವು ಮತ್ತೆಂದೂ ಬಳಸುವುದಿಲ್ಲ.

ಕಡಲುಕೋಳಿಗಳು ಹೀಗೆ ವಿಸ್ತೃತ ಮತ್ತು ಶ್ರಮದಾಯಕ ಪದ್ಧತಿಗಳನ್ನು ಕೈಗೊಳ್ಳುವುದು ತಮಗೆ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲೆಂದು ಮತ್ತು ಸಂಗಾತಿಯ ಗುರುತಿಸುವಿಕೆ ಪರಿಪೂರ್ಣವಾಗಿರಲೆಂದು. ಏಕೆಂದರೆ ಮೊಟ್ಟೆ ಇಡುವುದು ಮತ್ತು ಮರಿಗಳನ್ನು ಪಾಲಿಸುವುದು ಅವಕ್ಕೆ ಬಹಳ ದೊಡ್ಡ ವಿನಿಯೋಜನೆಯಾಗಿರುತ್ತದೆ. ಒಂದು ವರ್ಷದಲ್ಲಿ ಮೊಟ್ಟೆಯಿಡುವ ಜಾತಿಗಳು ಕೂಡ ಅಪರೂಪಕ್ಕೊಮ್ಮೆ ವರ್ಷ ಬಿಟ್ಟು ವರ್ಷಕ್ಕೆ ಮೊಟ್ಟೆಯಿಡುತ್ತವೆ.[೯] ಗ್ರೇಟ್ ಕಡಲುಕೋಳಿಗಳು(ಅಲೆಮಾರಿ(ವಾಂಡರಿಂಗ್) ಕಡಲುಕೋಳಿ ಗಳಂತೆ) ಮೊಟ್ಟೆಯಿಟ್ಟು ಹಾರುವವರೆಗೆ ಪೋಷಿಸಲು ಒಂದು ವರ್ಷದವರೆಗೆ ಸಮಯ ತೆಗೆದುಕೊಳ್ಳುತ್ತವೆ. ಕಡಲುಕೋಳಿಗಳು ಮರಿಮಾಡುವ ಒಂದು ಋತುವಿನಲ್ಲಿ ಒಂದೇ ಒಂದು ಅರೆದೀರ್ಘವೃತ್ತಾಕಾರದ(ಸಬ್‌ಎಲೆಪ್ಟಿಕಲ್) [೧೫] ಕೆಂಪು ಕಂದು ಚುಕ್ಕೆಗಳಿರುವ ಬೆಳ್ಳಗಿರುವ ಮೊಟ್ಟೆ ಇಡುತ್ತವೆ.[೨೫] ಮೊಟ್ಟೆಯನ್ನು ಪರಭಕ್ಷಕ ಪ್ರಾಣಿಗಳು ತಿಂದರೆ ಅಥವಾ ಆಕಸ್ಮಿಕವಾಗಿ ಒಡೆದುಹೋದರೆ, ಆ ವರ್ಷ ಮರಿಮಾಡುವ ಪ್ರಯತ್ನವನ್ನು ಮಾಡುವುದಿಲ್ಲ. ದೊಡ್ಡ ಮೊಟ್ಟೆಗಳು 200–510 ಗ್ರಾಂ. ತೂಕ ಇರುತ್ತವೆ(7.1–18 ಔನ್ಸ್)200 to 510 g (7.1–18.0 oz).[೨೫] ಒಂದು ಜೋಡಿ ಕಡಲುಹಕ್ಕಿಗಳು "ವಿಚ್ಛೇದನ"ಗೊಳ್ಳುವುದು ಬಹಳ ಅಪರೂಪ. ಸಾಮಾನ್ಯವಾಗಿ ಅನೇಕ ವರ್ಷಗಳ ವರೆಗೆ ಮರಿಮಾಡುವ ಪ್ರಯತ್ನ ವಿಫಲಗೊಂಡಾಗ ಮಾತ್ರ ಸಂಗಾತಿಗಳು ಬೇರೆಯಾಗುತ್ತವೆ.

ವಾಯವ್ಯ ಹವಾಯ್ ದ್ವೀಪದಲ್ಲಿರುವ ನ್ಯಾಶನಲ್ ಮಾನ್ಯುಮೆಂಟ್‌ನಲ್ಲಿರುವ ಕಡಲುಕೋಳಿ ಮರಿ, ಮಿಡ್‌ವೇ ಅಟಾಲ್.

ಎಲ್ಲ ದಕ್ಷಿಣದ ಕಡಲುಕೋಳಿಗಳು ತಮ್ಮ ಮೊಟ್ಟೆಗಳಿಗೆ ಹುಲ್ಲು, ಪೊದೆಗಳು, ಮಣ್ಣು ಮತ್ತು ಸಸ್ಯದ ಇದ್ದಿಲು, ಮಾತ್ರವಲ್ಲ, ಕೆಲವು ಪೆಂಗ್ವಿನ್ ಗರಿಗಳನ್ನೂ ಬಳಸಿಕೊಂಡು[೨೫],ದೊಡ್ಡ ಗೂಡುಗಳನ್ನು ಕಟ್ಟುತ್ತವೆ. ದಕ್ಷಿಣ ಪೆಸಿಫಿಕ್‌ನಲ್ಲಿರುವ ಮೂರು ಜಾತಿಗಳು ಹೆಚ್ಚು ಅಪೂರ್ಣಗೊಂಡ ಗೂಡುಗಳನ್ನು ಕಟ್ಟುತ್ತವೆ. ವೇವ್‌ಡ್ ಕಡಲುಕೋಳಿ ಗಳು ಗೂಡುಗಳನ್ನೇ ಕಟ್ಟುವುದಿಲ್ಲ ಮತ್ತು ತನ್ನ ಮೊಟ್ಟೆಗಳನ್ನು ಸಂಗಾತಿಜೋಡಿಯ ಪ್ರದೇಶದ ಸುತ್ತ ಕೊಂಡೊಯ್ಯುತ್ತದೆ ಕೂಡ. ಕೆಲವೊಮ್ಮೆ 50 ಮೀಟರ್‌ಗಳಷ್ಟು ದೂರ ಕೂಡ,(160 ಅಡಿ ಅಥವಾ 50 m (160 ft))ಹೀಗಾಗಿ ಹೆಚ್ಚಿನ ವೇಳೆ, ಮೊಟ್ಟೆಯನ್ನು ಕಳೆದುಕೊಳ್ಳುತ್ತವೆ.[೩೦] ಎಲ್ಲ ಕಡಲುಕೋಳಿ ಜಾತಿಗಳಲ್ಲಿ, ಪೋಷಕರಿಬ್ಬರೂ ಮೊಟ್ಟೆಗಳಿಗೆ ನಿಗದಿಯಾದ ಪ್ರಮಾಣದ ಕೆಲಸದ ರೀತಿಯಲ್ಲಿ ಕಾವುಕೊಡುತ್ತವೆ ಮತ್ತು ಹೆಚ್ಚಿನ ವೇಳೆ ಒಂದು ಹಕ್ಕಿ ಒಂದು ದಿನದಿಂದ ಮೂರು ವಾರಗಳವರೆಗೆ, ನಂತರ ಮತ್ತೊಂದು ಹಕ್ಕಿಯ ಕೆಲಸ ಎಂಬಂತೆ ಕಾವು ಕೊಡುತ್ತದೆ. ಹೀಗೆ ಸುಮಾರು 70ರಿಂದ 80 ದಿನಗಳವರೆಗೆ ಕಾವು ಕೊಡುತ್ತವೆ.(ದೊಡ್ಡ ಕಡಲುಕೋಳಿಗಳಿಗೆ ಇನ್ನೂ ದೀರ್ಘವಾಗಿರುತ್ತದೆ) ಮತ್ತು ಇದು ಹಕ್ಕಿಗಳಲ್ಲಿಯೇ ಅತಿ ಹೆಚ್ಚು ಕಾವು ಕೊಡುವ ದಿನಗಳಾಗಿವೆ. ಅದು ಶಕ್ತಿಯನ್ನು ಬೇಡುವ ಪ್ರಕ್ರಿಯೆಯಾಗಿರಬಹುದು. ಏಕೆಂದರೆ ಕಾವು ಕೊಡುವಾಗ ಕಡಲಕೋಳಿಗಳು ದಿನವೊಂದಕ್ಕೆ ದೇಹತೂಕದ ಸುಮಾರು 83 ಗ್ರಾಂ.ನಷ್ಟು(2.9 ಔನ್ಸ್)83 g (2.9 oz) ತೂಕವನ್ನು ಕಳೆದುಕೊಳ್ಳುತ್ತದೆ.[೩೧]

ಮೊಟ್ಟೆಯೊಡೆದು ಹೊರಬಂದ ನಂತರ, ಮರಿಯನ್ನು ಮೂರು ವಾರಗಳವರೆಗೆ ಪೋಷಕ ಹಕ್ಕಿಗಳು ಅರೆ-ಪೋಷಣೆ ಮಾಡುತ್ತ,[೧೫] ಪಾಲಿಸುತ್ತ, ರಕ್ಷಿಸುತ್ತವೆ. ಅದು ಸ್ವ ರಕ್ಷಣೆ ಮಾಡಿಕೊಳ್ಳಬಲ್ಲಷ್ಟು ಮತ್ತು ಸ್ವಯಂ ಶಾಖನಿಯಂತ್ರಣ ಮಾಡಿಕೊಳ್ಳುವಷ್ಟು ದೊಡ್ಡದಾಗುವವರೆಗೆ ಪೋಷಕ ಹಕ್ಕಿಗಳು ಪೋಷಿಸುತ್ತವೆ. ಈ ಅವಧಿಯಲ್ಲಿ ಪೋಷಕ ಹಕ್ಕಿಗಳು ಒಬ್ಬರಾದ ನಂತರ ಇಬ್ಬೊಬ್ಬರಂತೆ ನೋಡಿಕೊಳ್ಳುತ್ತ, ಮರಿಗೆ ಆಗಾಗ ಸ್ವಲ್ಪ ಸ್ವಲ್ಪ ತಿನ್ನಿಸುತ್ತವೆ. ಪೋಷಿಸುವ ಅವಧಿ ಮುಗಿದ ನಂತರ, ಮರಿಗೆ ನಿಯಮಿತ ಅವಧಿಯಲ್ಲಿ ಇಬ್ಬರೂ ಪೋಷಕರು ಆಹಾರ ಕೊಡುತ್ತವೆ. ಪೋಷಕರು ಆಹಾರಕ್ಕಾಗಿ ಒಮ್ಮೆ ಕಿರು ಶೋಧ ಮತ್ತು ಇನ್ನೊಮ್ಮೆ ದೀರ್ಘ ಶೋಧ ಕೈಗೊಳ್ಳುತ್ತವೆ ಮತ್ತು ತಮ್ಮ ದೇಹತೂಕದ ಶೇ, 12ರಷ್ಟು ಆಹಾರವನ್ನು(ಅಂದರೆ ಸುಮಾರು 600 ಗ್ರಾಂ.(21 ಔನ್ಸ್‌)600 g (21 oz) ಕೊಡುತ್ತವೆ. ಆಹಾರವು ತಾಜಾ ಸ್ಕ್ವಿಡ್‌, ಮೀನು ಮತ್ತು ಕ್ರಿಲ್‌ ಗಳನ್ನು ಒಳಗೊಂಡಿರುತ್ತದೆ, ಜೊತೆಗೆ ಜೀರ್ಣವಾಗದ ಬೇಟೆಯ ಜೀವಿಗಳನ್ನು ತೆಗೆದುಕೊಂಡು ಹೋಗುವದಕ್ಕಿಂತ ಸುಲಭವಾಗುವ ಹಾಗೆ ಹಗುರವಾದ, ಶಕ್ತಿ-ಭರಿತವಾದ ಲಿಪಿಡ್‌ಗಳಿರುವ ಸ್ಟಮಕ್ ಎಣ್ಣೆಯನ್ನೂ ಕೊಡುತ್ತವೆ [೩೨] ಹೆಚ್ಚಿನ ಕೊಳವೆಯಾಕಾರದ ಮೂಗಿನ ಪ್ರಾಣಿಗಳು ತಾವು ಬೇಟೆಯಾಡಿದ ಜೀವಿಯ ಜೀರ್ಣವಾಗುವ ಅಂಶಗಳಿಂದ, ಪ್ರೊವೆಟ್ರಿಕ್ಯುಲಸ್ ಎಂದು ಕರೆಯಲಾಗುವ ಹೊಟ್ಟೆಯ ಭಾಗದಲ್ಲಿ ಈ ಎಣ್ಣೆಯನ್ನು ಉತ್ಪತ್ತಿ ಮಾಡುತ್ತವೆ. ಇದೇ ಅವುಗಳಿಗೆ ವಿಶಿಷ್ಟವಾದ ಬೂಷ್ಟು ಹತ್ತಿದಂತಹ ವಾಸನೆಯನ್ನು ನೀಡುತ್ತದೆ.

ಮರಿಗಳು ಶಾಖನಿಯಂತ್ರಣ ಮಾಡಿಕೊಳ್ಳುವಷ್ಟು ದೊಡ್ಡದಾಗುವವರೆಗೆ ಕಡಲುಕೋಳಿಗಳು ಅವುಗಳನ್ನು ಪೋಷಿಸುತ್ತವೆ.

ಕಡಲುಕೋಳಿ ಮರಿಗಳು ರೆಕ್ಕೆ ಬಲಿತು ಹಾರುವಂತಾಗಲು ಬಹಳ ದೀರ್ಘ ಕಾಲ ತೆಗೆದುಕೊಳ್ಳುತ್ತವೆ. ಗ್ರೇಟ್ ಕಡಲುಕೋಳಿಗಳುಗಳು 280 ದಿನಗಳನ್ನೂ ತೆಗೆದುಕೊಳ್ಳಬಹುದು; ಸಣ್ಣ ಕಡಲುಕೋಳಿಗಳೂ ಕೂಡ ಸುಮಾರು 140ರಿಂದ 170 ದಿನಗಳನ್ನು ತೆಗೆದುಕೊಳ್ಳುತ್ತವೆ.[೩೩] ಅನೇಕ ಕಡಲುಹಕ್ಕಿಗಳಂತೆ, ಕಡಲುಕೋಳಿ ಮರಿಗಳು ತಮ್ಮ ಪೋಷಕರಿಗಿಂತ ಅಧಿಕ ತೂಕವನ್ನು ಗಳಿಸಬಹುದು. ರೆಕ್ಕೆಗಳು ಪೂರ್ಣ ಬಲಿಯುವಾಗ ಈ ಸಂಚಿತ ತೂಕವನ್ನು ದೇಹ ಬೆಳವಣಿಗೆಗೆ ಬಳಸಿಕೊಳ್ಳುತ್ತವೆ(ವಿಶೇಷವಾಗಿ ಹಾರಾಟಕ್ಕೆ ಬಳಸುವ ಎಲ್ಲ ರೆಕ್ಕೆಗಳನ್ನು ಶಕ್ತಿಯುವಾಗಿ ಬೆಳೆಸಿಕೊಳ್ಳಲು). ಪೋಷಣೆಯ ಅವಧಿಯಲ್ಲಿ ಪೋಷಕರಷ್ಟೇ ದೇಹತೂಕವನ್ನು ಸಾಮಾನ್ಯವಾಗಿ ಹೊಂದಿರುತ್ತವೆ. ಹೀಗೆ ಪೋಷಣೆಗೊಂಡ ಶೇ. 15ರಿಂದ ಶೇ. 65ರಷ್ಟು ಮರಿಗಳು ನಂತರ ಸಂತಾನೋತ್ಪತ್ತಿಗೆ ಬದುಕುಳಿಯುತ್ತವೆ.[೨೫] ತಾವೇ ಪೋಷಣೆ ಮಾಡಿಕೊಳ್ಳುವ ಮತ್ತು ತಮ್ಮ ಪೋಷಕರಿಂದ ನಂತರ ಸಹಾಯವನ್ನು ಪಡೆಯದ ಕೋಳಿಮರಿಗಳು, ಗೂಡಿಗೆ ಮರಳಿದಾಗ, ಈ ಮರಿಗಳು ಬಿಟ್ಟುಹೋಗಿದ್ದವು ಎಂಬ ಅರಿವು ಪೋಷಕರಿಗೆ ಇರುವುದಿಲ್ಲ. ಸಮುದ್ರದಲ್ಲಿ ಚದುರಿದ ಚಿಕ್ಕಮರಿಗಳ ಕುರಿತ ಅಧ್ಯಯನವು ಎಳೆಯ ಹಕ್ಕಿಗಳಿಗೆ ಒಂದು ಜನ್ಮಜಾತ ವಲಸೆ ಗುಣ, ವಂಶವಾಹಿ ಸಂಕೇತವಿರುವ ನೇವಿಗೇಶನ್ ಮಾರ್ಗವು ಮೊದಲ ಬಾರಿ ಸಮುದ್ರದಲ್ಲಿ ಹೊರಟಾಗ ಸಹಾಯ ಮಾಡುತ್ತದೆ ಎಂಬುದನ್ನು ತೋರಿಸಿದೆ.[೩೪]

ಕಡಲುಕೋಳಿಗಳು ಮತ್ತು ಮಾನವರು[ಬದಲಾಯಿಸಿ]

ವ್ಯುತ್ಪತ್ತಿ[ಬದಲಾಯಿಸಿ]

ಆಲ್ಬಟ್ರಾಸ್(ಕಡಲುಕೋಳಿ ) ಎಂಬ ಹೆಸರು ಅರೇಬಿಕ್‌ನಿಂದ ಬಂದಿದೆ. ಅಲ್-ಕಾಡಸ್ ಅಥವಾ ಅಲ್-ಗಟ್ಟಾಸ್(ಅಂದರೆ ಪೆಲಿಕನ್; ಅಕ್ಷರಶಃ ಹೇಳಬೇಕೆಂದರೆ, "ಡೈವ್ ಮಾಡುವ ಜೀವಿ" ಎಂದು), ಅಲ್‌ಕಟ್ರಜ್ ನಿಂದ("ಉಕ್ಕಿನ ಕೈಕವಚ")ಪೋರ್ಚುಗೀಸ್ ಮಾರ್ಗವಾಗಿ ಅದು ಇಂಗ್ಲಿಷ್‌ಗೆ ಸಾಗಿದೆ. ಅದು ಜೈಲಿನ ಮೊದಲಿನ ಹೆಸರಿನ ಅಲ್‌ಕಟ್ರಜ್ ಮೂಲವೂ ಹೌದು. ಅಲ್‌ಕಟ್ರಜ್ ಎಂಬ ಪದವು ಮೂಲಭೂತವಾಗಿ ಉಷ್ಣವಲಯದ ದೊಡ್ಡ ಕಡಲಹಕ್ಕಿ, ಫ್ರಿಗೇಟ್‌ಬರ್ಡ್‌ಗೆ ಅನ್ವಯಿಸುತ್ತದೆ ಎಂಬುದನ್ನು ಒಇಡಿ ಗಮನಿಸಿದೆ; }ಆಲ್ಬಟ್ರಾಸ್(ಕಡಲುಕೋಳಿ) ಎಂಬ ಪದವು ಪ್ರಾಯಶಃ ಲ್ಯಾಟಿನ್‌‌ ನಿಂದ ಪ್ರಭಾವಿತಗೊಂಡಿರಬಹುದು; ಅಲ್ಬಸ್ ಎಂದರೆ "ಬಿಳಿ" ಎಂದು, ಇದಕ್ಕೆ ಪ್ರತಿಯಾಗಿ ಫ್ರಗೇಟ್‌ಬರ್ಡ್‌ಗಳು ಕಪ್ಪಗಿರುತ್ತವೆ.[೧೩] ಆಧುನಿಕ ಪೋರ್ಚುಗೀಸ್‌ನಲ್ಲಿ, ಈ ಹಕ್ಕಿಗೆ ಬಳಸುವ ಪದ,ಅಲ್‌ಬಟ್ರಾಜ್ , ಇದು ಇಂಗ್ಲಿಷ್‌ }ಆಲ್ಬಟ್ರಾಸ್‌‌ನಿಂದ ವ್ಯುತ್ಪನ್ನಗೊಂಡಿದೆ.

ಅವುಗಳನ್ನು ಹಿಂದೆ ಸಾಮಾನ್ಯವಾಗಿ ಗೂನಿ ಹಕ್ಕಿಗಳು ಅಥವಾ ಗೂನೆ ಹಕ್ಕಿಗಳು , ಅದರಲ್ಲಿಯೂ ವಿಶೇಷವಾಗಿ ದಕ್ಷಿಣ ಪೆಸಿಫಿಕ್‌‌ ನಲ್ಲಿರುವುದನ್ನು ಹೀಗೆ ಕರೆಯುತ್ತಿದ್ದರು. ದಕ್ಷಿಣ ಗೋಳಾರ್ಧದಲ್ಲಿ ಮೊಲ್ಲಿವಾಕ್‌ ಎಂಬ ಹೆಸರು ಸಾಕಷ್ಟು ಪ್ರಚಲಿತದಲ್ಲಿದೆ. ಅದು ಮಲ್ಲೆ-ಮಗ್ಗೆ , ಎನ್ನುವುದರ ತಪ್ಪು ರೂಪ, ಮಲ್ಲೆ-ಮಗ್ಗೆ ಎನ್ನುವುದು ದಕ್ಷಿಣದ ಫುಲ್ಮರ್ ಗೆ ಹಳೆಯ ಡಚ್‌ ಹೆಸರಾಗಿದೆ. ಕಡಲುಕೋಳಿಗಳಿಗೆ ಡಿಯೊಮೆಡಿಯ ಎಂಬ , ಹೆಸರನ್ನು ಇಟ್ಟಿದ್ದು, ಲಿನ್ನೆಯಸ್ , ಇದಕ್ಕೆ ಆತ ಗ್ರೀಕ್‌ ಯೋಧ ಡಿಯೋಮೆಡಸ್ ಹಕ್ಕಿಯಾಗಿ ರೂಪಾಂತರ ಹೊಂದಿದ ಪುರಾಣದ ಉಲ್ಲೇಖವನ್ನು ತೆಗೆದುಕೊಂಡಿದ್ದನು. ಅಂತಿಮವಾಗಿ, ಪ್ರೊಸೆಲ್ಲರಿಫಾರ್ಮ್ಸ್ ಪ್ರಕಾರಗಳಿಗೆ ಲ್ಯಾಟಿನ್ ಭಾಷೆಯಿಂದ ಆ ಹೆಸರು ಬಂದಿದೆ. ಲ್ಯಾಟಿನ್ನಿನಲ್ಲಿಪ್ರೊಸೆಲ್ಲ ಎಂದರೆ ನೇರಳೆ ಗಾಳಿ ಅಥವಾ ಬಿರುಗಾಳಿ ಎಂದು.[೩೫]

ಸಂಸ್ಕೃತಿಯಲ್ಲಿ[ಬದಲಾಯಿಸಿ]

1837,l "ಒ ಪನೋರಮಾ' ನಿಯತಕಾಲಿಕದ ಒಂದು ವುಡ್‌ಕಟ್

ಕಡಲುಕೋಳಿಗಳನ್ನು "ಎಲ್ಲ ಹಕ್ಕಿಗಳಲ್ಲಿ ಅತ್ಯಂತ ದಂತಕಥೆಯಾದ ಹಕ್ಕಿಗಳು" ಎಂದು ವರ್ಣಿಸಲಾಗಿದೆ.[೩೩] ಸಾಮ್ಯುಯೆಲ್ ಟೇಲರ್ ಕೋಲ್‌ರಿಜ್‌ ನ ಸುದೀರ್ಘ ಕವನ ದಿ ರೈಮ್ ಆಫ್ ದಿ ಏನ್ಷಂಟ್ ಮರೀನರ್ ನಲ್ಲಿ ಕಡಲುಕೋಳಿಯು ಕೇಂದ್ರ ಲಾಂಛನವಾಗಿದೆ. ಚಾರ್ಲ್ಸ್ ಬೋದಿಲೇರ್ ನ ಪೊಯೆಟೆ ಮಾಡಿಟ್ ಕವನದಲ್ಲಿಯೂ ಬಂದಿಯಾಗಿರುವ ಕಡಲುಕೋಳಿಯು ರೂಪಕವಾಗಿದೆ. . ಕೋಲ್‌ರಿಜ್‌ನ ಕವನದ ನಂತರ ಕಡಲುಕೋಳಿಯನ್ನು ರೂಪಕವಾಗಿ ಬಳಸುವುದು ಆರಂಭವಾಯಿತು. ಏನೋ ಹೊರೆ ಅಥವಾ ಅಡೆತಡೆಯಲ್ಲಿರುವ ವ್ಯಕ್ತಿಯನ್ನು 'ಅವರ ಕುತ್ತಿಗೆ ಸುತ್ತ ಇರುವ ಕಡಲುಕೋಳಿ" ಹೊಂದಿರುವಂತೆ ಎನ್ನಲಾಗುತ್ತದೆ. ಕಡಲುಕೋಳಿಗಳನ್ನು ಕೊಂದ ಸಮುದ್ರಯಾನಿಗೆ ಕವನದಲ್ಲಿ ಶಿಕ್ಷೆ ನೀಡಲಾಗಿದೆ. ಈ ಕವನದಿಂದಾಗಿ, ಕಡಲುಕೋಳಿಯನ್ನು ಶೂಟ್ ಮಾಡುವುದು ಅಥವಾ ಅದಕ್ಕೆ ಧಕ್ಕೆ ಮಾಡುವುದು ಹಾನಿಕರ ಎಂದು ನಾವಿಕರು ನಂಬುವಂತೆ ಮಿಥ್ಯೆ ಪ್ರಚಲಿತವಾಯಿತು. ನಿಜವೆಂದರೆ, ಇಷ್ಟಾಗಿಯೂ ನಾವಿಕರು ಆಗಾಗ ಅವುಗಳನ್ನು ಕೊಂದು, ತಿನ್ನುತ್ತಲೇ ಇದ್ದರು.[೧೯] ಆದರೆ ಅವುಗಳನ್ನು ಕಳೆದುಹೋದ ನಾವಿಕರ ಆತ್ಮ ಎಂದು ಪರಿಗಣಿಸಲಾಗುತ್ತಿತ್ತು. ಮಾವೋರಿಗಳು ಕಡಲುಕೋಳಿಗಳ ರೆಕ್ಕೆಯ ಮೂಳೆಗಳನ್ನು ತಮ್ಮ ಚರ್ಮದ ಮೇಲೆ ಹಬ್ಬದ ಹಚ್ಚೆ/ಟ್ಯಾಟೂ ಹಾಕಿಸಿಕೊಳ್ಳಲು ಬಳಸುತ್ತಿದ್ದರು.

ಪಕ್ಷಿವೀಕ್ಷಣೆ[ಬದಲಾಯಿಸಿ]

ಕಡಲುಕೋಳಿಗಳು ಪಕ್ಷಿವೀಕ್ಷಕರಿಗೆ ಬಹಳ ಇಷ್ಟವಾದ ಪಕ್ಷಿಗಳು ಮತ್ತು ಅವುಗಳ ಕಾಲನಿಗಳು ಪರಿಸರ ಪ್ರವಾಸಿಗಳಿಗೆ ಜನಪ್ರಿಯ ತಾಣಗಳಾಗಿವೆ. ನಿಯಮಿತ ಪಕ್ಷಿವೀಕ್ಷಣೆ ಪ್ರವಾಸಗಳನ್ನು ಅನೇಕ ಕರಾವಳಿ ಪಟ್ಟಣಗಳಲ್ಲಿ ಮತ್ತು ನಗರಗಳಲ್ಲಿ ನಡೆಸಲಾಗುತ್ತದೆ. ಉದಾಹರಣೆಗೆ ಮಾಂಟ್ರಾಯ್ , ಕೈಕೌರ , ವೊಲೊಗಾಂಗ್ , ಸಿಡ್ನಿ , ಪೋರ್ಟ್‌ ಫೈರಿ , ಹೊಬರ್ಟ್‌ ಮತ್ತು ಕೇಪ್‌ಟೌನ್ ಇನ್ನಿತರ ಕಡೆ ಪೆಲಗಿಕ್ ಕಡಲುಹಕ್ಕಿಗಳನ್ನು ನೋಡಲು ಕರೆದೊಯ್ಯುತ್ತಾರೆ. ಮೀನಿನೆಣ್ಣೆ(ಫಿಶ್ ಆಯಿಲ್) ಮತ್ತು ಬುರ್ಲೆಯನ್ನು ಸಮುದ್ರದ ನೀರಿಗೆ ಹಾಕುವುದರಿಂದ ಕಡಲುಕೋಳಿಗಳು ಈ ರೀತಿಯ ಪರಿಸರವೀಕ್ಷಣೆ ದೋಣಿಗಳತ್ತ ಆಕರ್ಷಿತವಾಗುತ್ತವೆ. ಜನರು ಇವುಗಳ ಕಾಲನಿಗೆ ಭೇಟಿ ನೀಢುವುದು ಬಹಳ ಜನಪ್ರಿಯವಾಗಿದೆ; ನ್ಯೂಜಿಲ್ಯಾಂಡ್‌‌ನ ತಾಯ್‌ರೊವ ಹೆಡ್‌ನಲ್ಲಿರುವ ದಕ್ಷಿಣದ ರಾಯಲ್ ಕಡಲುಕೋಳಿ ಕಾಲನಿಗೆ ಪ್ರತಿವರ್ಷ ಸುಮಾರು 40,000 ಪ್ರವಾಸಿಗಳು ಭೇಟಿ ನೀಡುತ್ತಾರೆ.[೯] ಸಬ್‌-ಅಟ್ಲಾಂಟಿಕ್ ದ್ವೀಪಗಳಲ್ಲಿ ಸಮುದ್ರಯಾನ ಹೋಗುವವರಿಗೆ ಪ್ರತ್ಯೇಕವಾಗಿರುವ ಕಾಲನಿಗಳು ಸದಾ ಆಕರ್ಷಣೆ ಹುಟ್ಟಿಸುತ್ತವೆ.

ಬೆದರಿಕೆ ಅಥವಾ ಅಪಾಯಗಳು ಮತ್ತು ಸಂರಕ್ಷಣೆ[ಬದಲಾಯಿಸಿ]

ಸಾಕಷ್ಟು ದಂತಕಥೆಯ ಸ್ಥಾನಮಾನ ಕೊಟ್ಟಿದ್ದರೂ, ಕಡಲುಕೋಳಿಗಳು ಮನುಷ್ಯರ ನೇರ ಅಥವಾ ಪರೋಕ್ಷ ಅಪಾಯದಿಂದ ತಪ್ಪಿಸಿಕೊಳ್ಳಲಾಗಿಲ್ಲ. ಪಾಲಿನೇಷ್ಯಾದವರು ಮತ್ತು ಅಲ್ಯೆಟ್ ಇಂಡಿಯನ್‌‌ ಜನರು ಮೊದಲು ಕಡಲಕೋಳಗಳ ಬೇಟೆಯಲ್ಲಿ ತೊಡಗಿದರು ಮತ್ತು ಕೆಲವು ಸಂದರ್ಭದಲ್ಲಿ ಹಲವು ದ್ವೀಪಗಳಿಂದ ಕಡಲುಕೋಳಿಗಳು ನಿರ್ಮೂಲನೆಗೊಳ್ಳುವಂತೆ ಮಾಡಿದರು(ಈಸ್ಟರ್ ದ್ವೀಪಗಳು). ಐರೋಪ್ಯರು ವಿಶ್ವಾದ್ಯಂತ ಸಮುದ್ರಯಾನದಲ್ಲಿ ತೊಡಗಿದಂತೆ, ಅವರೂ ಕಡಲುಕೋಳಿಗಳ ಬೇಟೆಯಾಡಲಾರಂಭಿಸಿದರು. ಅವರಿಗೆ ದೋಣಿಗಳಲ್ಲಿ "ಮೀನುಗಾರಿಕೆ" ಮಾಡುವುದು ತಾಜಾ ಮೀನಿನ ಅಡುಗೆ ಮಾಡಿ ತಿನ್ನಲು ಅಥವಾ ಅದೊಂದು ಮೋಜಿನ ಕ್ರೀಡೆಯಾಗಿತ್ತು.[೩೬] ಆಸ್ಟ್ರೇಲಿಯಾದ ಗಡಿಭಾಗದಲ್ಲಿ ಇವರ ಕ್ರೀಡೆ ಅತ್ಯಧಿಕವಾಗಿತ್ತು, ಮತ್ತು ಹಡಗುಗಳು ಬಹಳ ವೇಗವಾಗಿ ಸಾಗುತ್ತಿದ್ದು, ಮೀನು ಹಿಡಿಯಲು ಸಾಧ್ಯವಾಗದಿದ್ದಾಗ ಮತ್ತು ಸುರಕ್ಷತೆಯ ಕಾರಣದಿಂದ ಆಯುಧಗಳನ್ನು ಬಳಸುವುದನ್ನು ನಿಲ್ಲಿಸಲು ನಿಯಮಾವಳಿಗಳನ್ನು ಮಾಡಿದಾಗ ಮಾತ್ರ ಈ ಕ್ರೀಡೆ ಕಡಿಮೆಯಾಯಿತು. 19ನೇ ಶತಮಾನದಲ್ಲಿ, ಕಡಲುಕೋಳಿ ಕಾಲನಿಗಳು, ವಿಶೇಷವಾಗಿ ದಕ್ಷಿಣ ಪೆಸಿಫಿಕ್‌‌ನಲ್ಲಿರುವ ಕಾಲನಿಗಳನ್ನು ರೆಕ್ಕೆಗಳ ವ್ಯಾಪಾರಕ್ಕಾಗಿ ಬೇಟೆಯಾಡಲಾರಂಭಿಸಿದರು. ಇದರಿಂದಾಗಿ, ಗಿಡ್ಡ-ಬಾಲದ ಕಡಲುಕೋಳಿ ಹೆಚ್ಚುಕಡಿಮೆ ನಿರ್ನಾಮದ ಅಂಚಿಗೆ ತಲುಪಿದವು.[೧೩]

ಈ ಕಪ್ಪು - ಕಂದು ಕಡಲುಕೋಳಿಯು ಉದ್ದಗಾಳಕ್ಕೆ ಸಿಕ್ಕಿಕೊಂಡಿದೆ.

21 ಕಡಲುಕೋಳಿಗಳ ಜಾತಿಗಳನ್ನು IUCN ತನ್ನ ಕೆಂಪುಪಟ್ಟಿಯಲ್ಲಿ ಗುರುತಿಸಿದೆ, 19 ಜಾತಿಗಳಿಗೆ ಅಪಾಯವಿದೆ ಮತ್ತು ಇನ್ನುಳಿದ ಎರಡು ಜಾತಿಗಳು ಅಪಾಯದ ಹತ್ತಿರದಲ್ಲಿವೆ .[೩೭] ಎಂದು ಗುರುತಿಸಿದೆ. ಎರಡು ಜಾತಿಗಳನ್ನು(IUCNದಿಂದ ಗುರುತಿಸಲಾಗಿರುವಂತೆ) ಮುಖ್ಯವಾಗಿ ಅಪಾಯಕ್ಕೆ ಸಿಕ್ಕಿದ ಜಾತಿಗಳೆಂದು ಪರಿಗಣಿಸಲಾಗಿದೆ: ಆಂಸ್ಟರ್ಡ್ಯಾಮ್ ಕಡಲುಕೋಳಿ ಮತ್ತು ಚಥಮ್ ಕಡಲುಕೋಳಿಗಳು. ಒಂದು ಪ್ರಮುಖ ಅಪಾಯವೆಂದರೆ ವಾಣಿಜ್ಯಕ ದೀರ್ಘ-ದೂರದ ಮೀನುಗಾರಿಕೆ . ಕಡಲುಕೋಳಿಗಳು ಮತ್ತು ಇತರೆ ಕಡಲುಹಕ್ಕಿಗಳು ಗಾಳಕ್ಕೆ ಸಿಕ್ಕಿಸಿದ ಒಫಲ್ ಅಥವಾ ಪ್ರಾಣಿಗಳ ಕತ್ತರಿಸಿದ ಒಳಅಂಗಗಳ ಮಾಂಸಕ್ಕೆ ಆಕರ್ಷಿತವಾಗುವುದರಿಂದ ಅವು ದಾರಕ್ಕೆ ಸಿಕ್ಕಿಕೊಂಡು, ಮುಳುಗಿ, ಸಾಯುತ್ತವೆ. ಪ್ರತಿವರ್ಷ ಸುಮಾರು ಕಡಲುಕೋಳಿಗಳು ಈ ರೀತಿಯಲ್ಲಿಯೇ ಸಾವನ್ನಪ್ಪುತ್ತವೆ. ಅನಿಯಂತ್ರಿಂತ ಕಡಲುಗಳ್ಳರ ಮೀನುಗಾರಿಕೆಯು ಈ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತವೆ.[೯][೩೮]

ಮಿಡ್‌ವೇ ಅಟಾಲ್‌‌ ನಲ್ಲಿ, ಲೇಸನ್ ಕಡಲುಕೋಳಿ ಮತ್ತು ವಿಮಾನದ ಮಧ್ಯೆ ಸಂಭವಿಸುವ ಡಿಕ್ಕಿಯಿಂದಾಗಿ ಮನುಷ್ಯರು ಮತ್ತು ಹಕ್ಕಿಗಳ ಮರಣಕ್ಕೆ ಕಾರಣವಾಗಿದೆ, ಜೊತೆಗೆ ಸೇನಾ ಹಾರಾಟದ ಕಾರ್ಯಾಚರಣೆಗೆ ತೀವ್ರ ತೊಡಕನ್ನೂ ಉಂಟುಮಾಡಿರುತ್ತದೆ. 1950ರ ಕೊನೆಯ ಭಾಗದಲ್ಲಿ ಮತ್ತು 1960ರ ಆರಂಭಿಕ ಭಾಗದಲ್ಲಿ ನಡೆಸಿದ ಅಧ್ಯಯನದಲ್ಲಿ ಹಕ್ಕಿಗಳನ್ನು ಕೊಲ್ಲುವುದು, ಲೆವೆಲ್ಲಿಂಗ್ ಮತ್ತು ದಿಣ್ಣೆಯನ್ನು ತೆಗೆದುಹಾಕಿ ಸಮತಟ್ಟುಗೊಳಿಸುವುದು ಮತ್ತು ವಾರ್ಷಿಕವಾಗಿ ಗೂಡುಕಟ್ಟುವ ಜಾಗಗಳನ್ನು ನಾಶಪಡಿಸುವುದು, ಇತ್ಯಾದಿ ನಿಯಂತ್ರಣಾ ವಿಧಾನಗಳನ್ನು ಪರೀಕ್ಷಿಸಿದೆ.[೩೯] ಸಂಚಾರಿ ನಿಯಂತ್ರಣ(ಟ್ರಾಫಿಕ್ ಕಂಟ್ರೋಲ್) ಮತ್ತು ರೇಡಿಯೋ ಗೋಪುರಗಳಂತಹ ಎತ್ತರದ ನಿರ್ಮಿತಿಗಳು, ಸುಮಾರು ೩೦೦೦ ಹಕ್ಕಿಗಳನ್ನು ವಿಮಾನದ ಡಿಕ್ಕಿಯಲ್ಲಿ ಕೊಂದಿವೆ. ಇದು 1964-1965ರಲ್ಲಿ ಗೋಪುರಗಳನ್ನು ತೆಗೆಯುವ ಮೊದಲು ನಡೆದಿರುವುದು. ನೌಕಾ ವಾಯುದಳ ಸೌಲಭ್ಯವನ್ನು(ನೇವಲ್ ಏರ್ ಫೆಸಿಲಿಟಿ) ಮಿಡ್‌ವೇ ದ್ವೀಪಗಳಲ್ಲಿ 1993ರಲ್ಲಿ ಕೊನೆಗೊಳಿಸಿರುವುದು ಸೇನಾ ವಿಮಾನಗಳೊಂದಿಗೆ ಹಕ್ಕಿಗಳು ಡಿಕ್ಕಿ ಹೊಡೆಯುವ ಸಮಸ್ಯೆಯನ್ನು ನಿವಾರಿಸಿದೆ. ಇತ್ತೀಚಿನ ದಿನಗಳಲ್ಲಿ ದ್ವೀಪಗಳಲ್ಲಿ ಮನುಷ್ಯರ ಚಟುವಟಿಕೆಗಳನ್ನು ಕಡಿಮೆಗೊಳಿಸಿರುವುದು ಹಕ್ಕಿಗಳ ಸಾವನ್ನು ಕಡಿಮೆ ಮಾಡಲು ಸಹಕಾರಿಯಾಗಿವೆ. ಆದರೂ ಸೇನಾ ಕಟ್ಟಡಗಳ ಬಳಿ ಇರುವ ಸೀಸದ ಬಣ್ಣದ ಮಾಲಿನ್ಯದಿಂದ ಹಕ್ಕಿಗಳಿಗೆ ಅಜೀರ್ಣವಾಗಿ ವಿಷವಾಗುವ ಸಮಸ್ಯೆ ಮುಂದುವರಿದೇ ಇದೆ.[೪೦] ಕಡಲುಕೋಳಿಗಳ ಗರಿಗಳು 20ನೇ ಶತಮಾನದಲ್ಲಿ ಜನಪ್ರಿಯವಾಗಿದ್ದವು. 1909ರ ಒಂದೇ ವರ್ಷದಲ್ಲಿಯೇ, ಸುಮಾರು 300,000 ಕಡಲುಕೋಳಿಗಳನ್ನು ಮಿಡ್‌ವೇ ದ್ವೀಪ ಮತ್ತು ಲೇಸನ್ ದ್ವೀಪಗಳಲ್ಲಿ ಅವುಗಳ ಗರಿಗಳಿಗಾಗಿ [೧೫] ಕೊಲೆಗೈಯಲಾಯಿತು.

ಕಡಲುಕೋಳಿಗಳಿಗೆ ಇನ್ನೊಂದು ಅಪಾಯವೆಂದರೆ ಇಲಿಗಳು ಅಥವಾ ಫೆರಲ್ ಬೆಕ್ಕುಗಳಂತಹ , ಯಾವುದೋ ಚಟುವಟಿಕೆಯಿಂದಾಗಿ ಬೇರೆ ನೆಲೆಗಳಿಂದ ಇಲ್ಲಿಗೆ ಬಂದ ಜಾತಿಗಳು(ಇಂಟ್ರೊಡ್ಯೂಸ್‌ಡ್ ಸ್ಪೀಶೀಸ್), ಕಡಲುಕೋಳಿಗಳ ಮೇಲೆ ಅಥವಾ ಅವುಗಳ ಮರಿಗಳು ಮತ್ತು ಮೊಟ್ಟೆಗಳ ಮೇಲೆ ನೇರವಾಗಿ ದಾಳಿ ಮಾಡುವುದು. ಭೂ ಸಸ್ತನಿಗಳು ಇಲ್ಲದ ದ್ವೀಪಗಳಲ್ಲಿ ಕಡಲುಕೋಳಿಗಳು ಮರಿಹಾಕುವ ರೀತಿಯಲ್ಲಿ ವಿಕಾಸಗೊಂಡಿವೆ. ಆದರೆ ಈ ಭೂಸಸ್ತನಿಗಳ ವಿರುದ್ಧ ಯಾವುದೇ ರೀತಿಯ ರಕ್ಷಣೆಯನ್ನು ಅಭಿವೃದ್ಧಿಪಡಿಸಿಕೊಂಡಿಲ್ಲ. ಇಲಿಯಷ್ಟು ಚಿಕ್ಕ ಜಾತಿಗಳ ಪ್ರಾಣಿಗಳು ಕೂಡ ಇವಕ್ಕೆ ಮಾರಣಾಂತಿಕವಾಗಬಲ್ಲವು; ಗಫ್ ದ್ವೀಪಗಳಲ್ಲಿ ಟ್ರಿಸ್ಟನ್ ಕಡಲುಕೋಳಿ ಗಳ ಮರಿಗಳ ಮೇಲೆ ಅಲ್ಲಿಗೆ ಬಂದ ಮನೆಯಲ್ಲಿರುವಂತಹ ಚಿಕ್ಕ ಇಲಿಗಳು ದಾಳಿ ನಡೆಸಿ, ಚಿಕ್ಕ ಮರಿಗಳನ್ನು ಜೀವಂತ ಹಿಡಿದು ತಿಂದಿವೆ.[೪೧] ಹೀಗೆ ಬೇರೆಡೆಯಿಂದ ಬಂದ ಜಾತಿಯ ಪ್ರಾಣಿಗಳು ಬೇರೆ ಪರೋಕ್ಷ ಪರಿಣಾಮಗಳನ್ನೂ ಹೊಂದಿವೆ: ಅಮ್ಸ್‌ಟರ್‌ಡ್ಯಾಮ್‌ ದ್ವೀಪದಲ್ಲಿ ಆವರಿಸಿರುವ ಹುಲ್ಲುಗಾವಲನ್ನು ದನಗಳು ಅಧಿಕವಾಗಿ ಮೇಯುವುದರಿಂದ ಅಮ್ಸ್‌ಟರ್‌ಡ್ಯಾಮ್‌ ಕಡಲುಕೋಳಿಗಳಿಗೆ ಅಪಾಯವಿದೆ; ಜೊತೆಗೆ ಬೇರೆ ದ್ವೀಪಗಳಲ್ಲಿ ಮತ್ತೊಂದು ಕಡೆಯಿಂದ ತಂದು ನೆಟ್ಟ ಮರಗಿಡಗಳಿಂದಾಗಿ ಗೂಡು ಕಟ್ಟುವ ನೆಲೆಯ ಜಾಗವನ್ನು ಕಡಿಮೆಯಾಗುತ್ತಿದೆ.[೯]

ಲೇಸನ್ ಕಡಲುಕೋಳಿ ಮರಿಯ ಈ ಅವಶೇಷಗಳು ಸಾಯುವ ಮೊದಲು ಪ್ಲಾಸ್ಟಿಕ್ ಅಜೀರ್ಣವಾಗಿದ್ದನ್ನು ತೋರಿಸುತ್ತದೆ, ಅದರಲ್ಲಿ ಒಂದು ಬಾಟಲಿಯ ಮುಚ್ಚಳ ಮತ್ತು ಲೈಟರ್ ಕೂಡ ಇದೆ.

ಪ್ಲಾಸ್ಟಿಕ್‌ ಫ್ಲಾಟ್‌ಸಾಮ್‌(ನಿರುದ್ದಿಶ್ಯವಾಗಿ ಸಮುದ್ರಕ್ಕೆ ಬಿಟ್ಟ ವಸ್ತುಗಳು, ಉದಾಹರಣೆಗೆ ಹಡಗುಗಳು ಮುಳುಗಿದಾಗ ಸಮುದ್ರಕ್ಕೆ ಸೇರುವ ಭಾಗಗಳು) ನ ವಸ್ತುಗಳ ಅಜೀರ್ಣವು ಅನೇಕ ಕಡಲುಹಕ್ಕಿಗಳಿಗೆ ಅತ್ಯಂತ ಸಮಸ್ಯೆಯುಂಟು ಮಾಡುತ್ತವೆ. ಸಮುದ್ರದಲ್ಲಿ ಪ್ಲಾಸ್ಟಿಕ್ ಹಾವಳಿಯನ್ನು 1960ರಲ್ಲಿ ಮೊದಲು ದಾಖಲಿಸಿದ್ದು, ತದನಂತರದ ವರ್ಷಗಳಲ್ಲಿ ತೀವ್ರವಾಗಿ ಹೆಚ್ಚಿದೆ. ಹಡಗುಗಳು, ಸಮುದ್ರ ದಡದಲ್ಲಿ ಕಸ ಎಸೆಯುವುದು, ಬೀಚ್‌ಗಳಲ್ಲಿ ಗಲೀಜು ಮಾಡುವುದು ಮತ್ತು ನದಿಗಳಿಂದ ಬಂದು ಸೇರುವ ತ್ಯಾಜ್ಯಗಳು, ಈ ಎಲ್ಲದರಿಂದ ಸಮುದ್ರದಲ್ಲಿ ಪ್ಲಾಸ್ಟಿಕ್ ಪ್ರಮಾಣ ಅತ್ಯಧಿಕವಾಗಿದೆ. ಕಡಲುಕೋಳಿಗಳಿಗೆ ಪ್ಲಾಸ್ಟಿಕ್‌ ಜೀರ್ಣಿಸಿಕೊಳ್ಳುವುದು ಅಸಾಧ್ಯ ಮತ್ತು ಅದು ಅವುಗಳ ಹೊಟ್ಟೆ ಅಥವಾ ಗಿಜರ್ಡ್‌ನಲ್ಲಿ ಆಹಾರಕ್ಕೆ ಬಳಸುವ ಜಾಗದಲ್ಲಿ ಸಂಗ್ರಹಗೊಳ್ಳುತ್ತದೆ ಅಥವಾ ಅದು ನೇರವಾಗಿಯೇ ಪರಿಣಾಮವುಂಟುಮಾಡಿ, ಹಕ್ಕಿ ಹೊಟ್ಟೆಗಿಲ್ಲದೇ ಸಾಯುವಂತೆ ಮಾಡುತ್ತದೆ. ದಕ್ಷಿಣ ಪೆಸಿಫಿಕ್‌ನಲ್ಲಿರುವ ಹಕ್ಕಿಗಳ ಅಧ್ಯಯನವು ಪ್ಲಾಸ್ಟಿಕ್‌ ಅಜೀರ್ಣವು ದೇಹ ತೂಕ ಮತ್ತು ದೇಹ ಸ್ಥಿತಿ ಕುಸಿಯುವಂತೆ ಮಾಡಿದೆ ಎಂಬುದನ್ನು ತೋರಿಸಿದೆ.[೪೨] ಕೆಲವೊಮ್ಮೆ ಈ ಪ್ಲಾಸ್ಟಿಕ್‌ಗಳನ್ನುಪೋಷಕ ಹಕ್ಕಿಗಳು ಕಾರಿಕೊಳ್ಳುತ್ತವೆ ಮತ್ತು ಮರಿಗಳಿಗೆ ಉಣಿಸಲಾಗುತ್ತದೆ; ಮಿಡ್‌ವೇ ಅಟಾಲ್‌ ನಲ್ಲಿರುವ ಲೇಸನ್ ಕಡಲುಕೋಳಿ ಮರಿಗಳ ಅಧ್ಯಯನವನ್ನು ಮಾಡಿಲಾಗಿದೆ. ಈ ಅಧ್ಯಯನವು ಸ್ವಾಭಾವಿಕವಾಗಿ ಸತ್ತ ಮರಿಗಳಲ್ಲಿ ಅಜೀರ್ಣವಾದ ಪ್ಲಾಸ್ಟಿಕ್‌ನ ಅತ್ಯಧಿಕ ಸಂಗ್ರಹ ಕಂಡುಬಂದಿದ್ದು, ಆಕಸ್ಮಿಕವಾಗಿ ಅಥವಾ ಅಪಘಾತಗಳ್ಲಲಿ ಸತ್ತ ಆರೋಗ್ಯವಂತ ಮರಿಗಳ ದೇಹದಲ್ಲಿ ಕಂಡು ಬಂದ ಪ್ಲಾಸ್ಟಿಕ್‌ನ ಪ್ರಮಾಣಕ್ಕಿಂತ ಅತ್ಯಧಿಕವಾಗಿದೆ ಎಂದು ತೋರಿಸಿದೆ. ಪ್ಲಾಸ್ಟಿಕ್ ನೇರವಾಗಿ ಸಾವಿಗೆ ಕಾರಣವಲ್ಲದಿದ್ದರೂ, ಇವು ಮರಿಗಳಿಗೆ ಆಹಾರ ತೆಗೆದುಕೊಳ್ಳುವಾಗ ದೈಹಿಕ ಒತ್ತಡವುಂಟು ಮಾಡುತ್ತದೆ ಮತ್ತು ಸ್ವಲ್ಪ ತಿನ್ನುತ್ತಿರುವಂತೆ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಹೀಗಾಗಿ ಮರಿಗಳು ಆಹಾರ ಸೇವಿಸುವುದು ಕಡಿಮೆಯಾಗುತ್ತದೆ ಮತ್ತು ಬದುಕುಳಿಯುವ ಸಾಧ್ಯತೆ ಕಡಿಮೆ ಯಾಗುತ್ತದೆ.[೪೩]

ವಿಜ್ಞಾನಿಗಳು ಮತ್ತು ಸಂರಕ್ಷಣಾಕಾರರು,(ಸೇವ್‌ ದಿ ಆಲ್ಬಟ್ರಾಸ್(ಕಡಲುಕೋಳಿಗಳನ್ನು ರಕ್ಷಿಸಿ) ಆಂದೋಲನವನ್ನು ನಡೆಸುತ್ತಿರುವ, ಮುಖ್ಯವಾಗಿ ಬರ್ಡ್‌ಲೈಫ್‌ ಇಂಟರ್‌ನ್ಯಾಶನಲ್ ಮತ್ತು ಅವುಗಳ ಸಹಸಂಸ್ಥೆಗಳು) ಸರ್ಕಾರಗಳು ಮತ್ತು ಮೀನುಗಾರ ರೊಡನೆ ಕೆಲಸ ಮಾಡುತ್ತಿದ್ದು, ಕಡಲುಕೋಳಿಗಳು ಎದುರಿಸುತ್ತಿರುವ ಅಪಾಯಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ರಾತ್ರಿಗಳಲ್ಲಿ ಉದ್ದ ದಾರದ ಗಾಳವನ್ನು ಸಮುದ್ರದಲ್ಲಿ ಇಡುವುದು, ಗಾಳಕ್ಕೆ ನೀಲಿ ಬಣ್ಣ ಹಾಕುವುದು, ಗಾಳವನ್ನು ಆಳನೀರಿನಲ್ಲಿ ಇಳಿಬಿಡುವುದು, ಗಾಳದ ದಾರದ ತೂಕವನ್ನು ಹೆಚ್ಚಿಸುವುದು ಮತ್ತು ಹಕ್ಕಿ ಹೆದರಿಸುವವರನ್ನು ಬಳಸುವುದು, ಹೀಗೆ ವಿವಿಧ ತಂತ್ರಗಳನ್ನು ಬಳಸಿ, ಕಡಲುಹಕ್ಕಿಗಳು ಬಲಿಯಾಗುವುದನ್ನು ತಡೆಯಲು ಯತ್ನಿಸಲಾಗುತ್ತಿದೆ.[೪೪] ಉದಾಹರಣೆಗೆ, ವಿಜ್ಞಾನಿಗಳು ಮತ್ತು ಮೀನುಗಾರರ ಮಧ್ಯೆ ಒಂದು ಸಹಭಾಗಿತ್ವದ ಅಧ್ಯಯನವನ್ನು ನ್ಯೂಜಿಲ್ಯಾಂಡ್ ನಲ್ಲಿ ಯಶಸ್ವಿಯಾಗಿ ನಡೆಸಲಾಗಿದ್ದು, ಆಳನೀರಿನಲ್ಲಿ ಅಂದರೆ ಕಡಲುಕೋಳಿಗಳ ಜಾತಿಗಳು ತಲುಪಲಾರದಷ್ಟು ಆಳದಲ್ಲಿ ಉದ್ದದಾರದ ಗಾಳವನ್ನು ಇಡುವುದನ್ನು ಪರೀಕ್ಷೆ ಮಾಡಲಾಯಿತು.[೪೫] ಈ ಕೆಲವು ತಂತ್ರಗಳನ್ನು ಫಾಕ್‌ಲ್ಯಾಂಡ್ ದ್ವೀಪಗಳಲ್ಲಿರುವ ಪಂಟಗೋನಿಯನ್ ಟೂತ್‌ಫಿಶ್ ಮೀನುಗಾರಿಕೆ ಸ್ಥಳಗಳಲ್ಲಿ ಬಳಸಲಾಗಿದ್ದು, ಅವು ಕಳೆದ ಹತ್ತು ವರ್ಷಗಳಲ್ಲಿ ಹಡಗುಪಡೆಗಳಿಗೆ ಕಪ್ಪು-ಕಂದು ಕಡಲುಕೋಳಿ ಬಲಿಯಾಗುವುದನ್ನು ಕಡಿಮೆಗೊಳಿಸಿವೆ ಎನ್ನಲಾಗಿದೆ.[೪೬] ಸಂರಕ್ಷಣಾಕಾರರು ದ್ವೀಪಗಳನ್ನು ಪುನಃಸ್ಥಾಪನೆ , ಮೂಲ ವನ್ಯಜೀವಿಗಳಿಗೆ ಅಪಾಯವೊಡ್ಡುವ ಬೇರೆಡೆಯಿಂದ ಬಂದ ಪ್ರಾಣಿಗಳ ಜಾತಿಗಳನ್ನು ಅಲ್ಲಿಂದ ಓಡಿಸುವುದು ಇತ್ಯಾದಿ ಕ್ರಮಗಳನ್ನೂ ಕೈಗೊಂಡಿದ್ದಾರೆ. ಇವು ಬೇರೆಡೆಯಿಂದ ಬಂದ ಪ್ರಾಣಿಭಕ್ಷಕಗಳಿಂದ ಕಡಲುಕೋಳಿಗಳನ್ನು ರಕ್ಷಿಸುತ್ತದೆ.

ಕಡಲುಕೋಳಿಗಳನ್ನು ಮತ್ತು ಇತರೆ ಕಡಲುಹಕ್ಕಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಒಂದು ಬಹುಮುಖ್ಯ ಹೆಜ್ಜೆಯೆಂದರೆ 2001ರಲ್ಲಿ ಆಗಿರುವ ಒಡಂಬಡಿಕೆ , ಕಡಲುಕೋಳಿಗಳು ಮತ್ತು ಪೆಟ್ರಲ್‌‌ಗಳ ಸಂರಕ್ಷಣೆಯ ಕುರಿತ ಒಪ್ಪಂದ. ಇದು 2004ರಿಂದ ಜಾರಿಗೊಂಡಿದೆ ಮತ್ತು ಎಂಟು ದೇಶಗಳು ಇದನ್ನು ಅನುಮೋದಿಸಿವೆ. ಅವೆಂದರೆ ಆಸ್ಟ್ರೇಲಿಯಾ, ಈಕ್ವೆಡಾರ್, ನ್ಯೂಜೆಲ್ಯಾಂಡ್ , ಸ್ಪೈನ್ , ದಕ್ಷಿಣ ಆಫ್ರಿಕಾ , ಫ್ರಾನ್ಸ್‌ , ಪೆರು ಮತ್ತು ಯುಕೆ(ಬ್ರಿಟನ್) . ಒಡಂಬಡಿಕೆಯ ಅಡಿಯಲ್ಲಿ ಈ ಎಲ್ಲ ದೇಶಗಳು ಕಡಲುಕೋಳಿಗಳನ್ನು ಹಿಡಿಯುವುದು, ಮಾಲಿನ್ಯ ಮತ್ತು ಬೇರೆಡೆಯಿಂದ ಬಂದು ನೆಲೆಯೂರಿದ ಪ್ರಾಣಿಗಳನ್ನು ಕಡಲುಕೋಳಿಗಳು ಗೂಡುಕಟ್ಟುವ ದ್ವೀಪಗಳಿಂದ ನಿವಾರಿಸುವುದು, ಇನ್ನಿತರ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಒಡಂಬಡಿಕೆಗೆ ಇನ್ನೂ ಮೂರು ದೇಶಗಳು ಸಹಿ ಹಾಕಿವೆ, ಆದರೆ ಇನ್ನೂ ಅನುಮೋದಿಸಿಲ್ಲ, ಅವೆಂದರೆ ಅಂರ್ಜೆಂಟೈನಾ , ಬ್ರೆಜಿಲ್ ಮತ್ತು ಚಿಲಿ .

ಜಾತಿಗಳು[ಬದಲಾಯಿಸಿ]

ಸದ್ಯದ ಚಿಂತನೆಯ ಪ್ರಕಾರ ಕಡಲುಕೋಳಿಗಳನ್ನು ನಾಲ್ಕು ಕುಲಗಳಲ್ಲಿ ವಿಂಗಡಿಸಲಾಗಿದೆ. ಜಾತಿಗಳ ಸಂಖ್ಯೆಯೇ ಸ್ವಲ್ಪ ಚರ್ಚಾಸ್ಪದವಾಗಿದೆ. IUCN ಮತ್ತು ಬರ್ಡ್‌ಲೈಫ್ ಇಂಟರ್‌ನ್ಯಾಶನಲ್ ಹಾಲಿ 2 ಜಾತಿಗಳ ಮಧ್ಯಂತರ ಜೀವಿವರ್ಗೀಕರಣಕ್ಕೆ ಮಾನ್ಯತೆ ನೀಡಿವೆ. ಬೇರೆ ಸಂಸ್ಥೆಗಳು ಹೆಚ್ಚು ಸಾಂಪ್ರದಾಯಿಕ ರೀತಿಯ 14 ಜಾತಿಗಳನ್ನೇ ಉಳಿಸಿಕೊಂಡಿವೆ ಮತ್ತು ಒಂದು ಇತ್ತೀಚಿನ ಲೇಖನದಲ್ಲಿ ಜಾತಿಗಳ ಸಂಖ್ಯೆಯನ್ನು 13ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ.

  • ಗ್ರೇಟ್ ಕಡಲುಕೋಳಿ(ಡಿಯೊಮೆಡಿಯ )
    • ವಾಂಡರಿಂಗ್ ಕಡಲುಕೋಳಿ ಡಿ. ಎಕ್ಸುಲನ್ಸ್
    • ಆಂಟಿಪೋಡನ್ ಕಡಲುಕೋಳಿ ಡಿ.(ಎಕ್ಸುಲನ್ಸ್ ) ಅಂಟಿಪೊಡೆನ್ಸಿಸ್
    • ಆಂಸ್ಟರ್ಡ್ಯಾಮ್‌ ಕಡಲುಕೋಳಿ ಡಿ.(ಎಕ್ಸುಲನ್ಸ್ ) ಅಮ್ಸ್‌ಟರ್‌ಡಮೆನ್ಸಿಸ್
    • ಟ್ರಿಸ್ಟನ್ ಕಡಲುಕೋಳಿ ಡಿ.(ಎಕ್ಸುಲನ್ಸ್ ) ಡಬ್ಬೆನೆನಾ
    • ದಕ್ಷಿಣದ ರಾಯಲ್ ಕಡಲುಕೋಳಿ ಡಿ.(ಎಪೊಮಾರ್ಫಾ ಸಾನ್‌ಫೋರ್ಡಿ)
    • ದಕ್ಷಿಣದ ರಾಯಲ್ ಕಡಲುಕೋಳಿ ಡಿ. ಎಪೊಮಾರ್ಫಾ
  • ದಕ್ಷಿಣ ಪೆಸಿಫಿಕ್ ಕಡಲುಕೋಳಿ ಗಳು(ಫೊಬೆಸ್ಟ್ರಿಯಾ )
    • ವೇವ್ಡ್ ಕಡಲುಕೋಳಿ ಪಿ. ಇರ್ರೊರಟ
    • ಗಿಡ್ಡ-ಬಾಲದ ಕಡಲುಕೋಳಿ ಪಿ. ಅಲ್ಬಟ್ರಸ್
    • ಕಪ್ಪು-ಕಾಲಿನ ಕಡಲುಕೋಳಿ ಪಿ. ನಿಗ್ರಿಪೆಸ್
    • ಲೇಸನ್ ಕಡಲುಕೋಳಿ ಪಿ. ಇಮ್ಮುಟಬಿಲಿಸ್
  • ಮೊಲ್ಲಿಮಾಕ್ ಗಳು(ಥ್ಯಾಲಸ್ಸರ್ಕೆ )
    • ಕಪ್ಪು-ಕಂದು ಕಡಲುಕೋಳಿ ಟಿ. ಮೆಲನೊಫ್ರಿಸ್
    • ಕ್ಯಾಂಪ್‌ಬೆಲ್ ಕಡಲುಕೋಳಿ ಟಿ.(ಮೆಲನೊಪ್ರಿಸ್) ಇಂಪವಿಡ
    • ನಾಚಿಕೆಯ ಕಡಲುಕೋಳಿ ಟಿ. ಕೌಟ
    • ಬಿಳಿ-ತಲೆ ಕಡಲುಕೋಳಿ ಟಿ. ಸ್ಟೆಡಿ
    • ಚಾತಮ್ ಕಡಲುಕೋಳಿ ಟಿ.(ಕೌಟ) ಎರೆಮಿಟ
    • ಸಲ್ವಿನ್ಸ್ ಕಡಲುಕೋಳಿ ಟಿ.(ಕೌಟ) ) ಸಲ್ವಿನಿ
    • ಬೂದು ತಲೆಯ ಕಡಲುಕೋಳಿ ಟಿ. ಕ್ರಿಸೊಸ್ಟೊಮ
    • ಅಟ್ಲಾಂಟಿಕ್ ಹಳದಿ ಮೂಗಿನ ಕಡಲುಕೋಳಿ ಟಿ. ಕ್ಲೋರೊರಿಂಕೋಸ್
    • ಇಂಡಿಯನ್ ಹಳದಿ ಮೂಗಿನ ಕಡಲುಕೋಳಿ ಟಿ.(ಕ್ಲೋರೊರಿಂಕೋಸ್ ) ಕಾರ್ಟೆರಿ
    • ಬುಲ್ಲರ್ಸ್ ಕಡಲುಕೋಳಿ ಟಿ. ಬುಲ್ಲೆರಿ
  • ಕಂದುಬಣ್ಣದ ಕಡಲುಕೋಳಿ ಗಳು(ಪೊಯೆಬೆಟ್ರಿಯ )
    • ಕಂದುಬಣ್ಣದ ಕಡಲುಕೋಳಿ ಪಿ. ಫಸ್ಕ
    • ಹಗುರು ಬೆನ್ನಿನ ಕಡಲುಕೋಳಿ ಪಿ. ಪಲ್ಪೆಬ್ರಟ .

ಉಲ್ಲೇಖಗಳು[ಬದಲಾಯಿಸಿ]

  1. Brands, Sheila (Aug 14 2008). "Systema Naturae 2000 / Classification - Family Diomedeidae -". Project: The Taxonomicon. Archived from the original on 2 ಮಾರ್ಚ್ 2010. Retrieved 17 Feb 2009. {{cite web}}: Check date values in: |date= (help)
  2. ಅಲೆಕ್ಸಾಂಡರ್, ಡಬ್ಲ್ಯು. ಬಿ., ಫ್ಲೆಮಿಂಗ್ ಸಿ. ಎ., ಫಾಲ್ಲ ಆರ್‌. ಎ., ಕುರೋಡ ಎನ್‌. ಎಚ್‌., ಜೌನಿಯನ್ ಸಿ., ಮರ್ಫಿ,ಆರ್‌. ಸಿ., ರೋವನ್ ಎಂ.ಕೆ., ಸರ್ವೆಂಟಿ ಡಿ. ಎಲ್., ಸಾಲೋಮನ್ಸನ್ ಎಫ್‌., ಟಿಕ್ಎಲ್ ಡಬ್ಲ್ಯು., ಎಲ್‌.ಎನ್‌. ವೂಸ್ ಕೆ., ವರ್ಹಾಮ್ ಜೆ., ವ್ಯಾಟ್ಸನ್ ಜಿ.ಇ., ಮತ್ತು ಬೌರ್ನೆ ಡಬ್ಲ್ಯು ಆರ್‌. ಪಿ. 1965. "ಕರೆಸ್ಪಾಂಡನ್ಸ್ : ದಿ ಫ್ಯಾಮಿಲೀಸ್ ಆಂಡ್ ಜನೆರ ಆಫ್ ದಿ ಪೆಟ್ರಲ್ ಆಂಡ್ ದೆಯರ್ ನೇಮ್ಸ್." ಇಬಿಸ್'107 : 401–5.
  3. ನನ್‌ ಜಿ.ಬಿ., ಕೂಪರ್ ಜೆ., ಜಾವೆಂಟಿನ್ ಪಿ., ರಾಬರ್ಟ್‌ಸನ್ ಸಿ.ಜೆ.ಆರ್., ಮತ್ತು ರಾಬರ್ಟ್‌ಸನ್ ಜಿ.ಜಿ. (1996) "ಎವಲ್ಯೂಶನರಿ ರಿಲೇಶನ್‌ಶಿಪ್ ಅಮಂಗ್ ಎಕ್ಸಟಂಟ್ ಆಲ್ಬಟ್ರಾಸಸ್ (ಪ್ರೊಸೆಲ್ಲರಿಫಾರ್ಮ್ಸ್: ಡಿಯೊಮೆಡೈಡೆ) ಎಸ್ಟಾಬ್ಲಿಶ್ಡ್ ರ್ಫರಮ್ ಕಂಪ್ಲೀಟ್ ಸೈಟೋಕ್ರೋಮ್-ಬಿ ಜೀನ್ ಸೀಕ್ವೆನ್ಸ್‌ಸ್‌ ". ಆಕ್ 113 : 784–801. [೧] Archived 2008-12-17 ವೇಬ್ಯಾಕ್ ಮೆಷಿನ್ ನಲ್ಲಿ.
  4. ೪.೦ ೪.೧ ಡಬಲ್, ಎಂ.ಸಿ. & ಚೇಂಬರ್ಸ್, ಜಿ.ಕೆ., (2004). "ಕಡಲುಕೋಳಿಗಳು ಮತ್ತು ಪೆಟ್ರಲ್‌ಗಳನ್ನು ಕುರಿತ ಒಪ್ಪಂದದ (ACAP)ಪ್ರಕಾರ ಈ ಜಾತಿಯ ಹಕ್ಕಿಗಳ ಪಟ್ಟಿಯನ್ನು ರೂಪಿಸಿ, ನಿರ್ವಹಣೆ ಮಾಡಲು ಪಕ್ಷಗಳಿಗೆ ಒಂದು ದೃಢವಾದ, ಸಮರ್ಥನೀಯ ಮತ್ತು ಪಾರದರ್ಶಕವಾದ ನಿರ್ಧಾರ ರೂಪಿಸುವ ಪ್ರಕ್ರಿಯೆಯ ಅಗತ್ಯವಿದೆ ". ಕಡಲುಕೋಳಿಗಳು ಮತ್ತು ಪೆಟ್ರಲ್‌ಗಳ ಕುರಿತ ಒಪ್ಪಂದದ (ACAP)ವೈಜ್ಞಾನಿಕ ಸಭೆಯ ನಡಾವಳಿಗಳು , ಹೊಬರ್ಟ್‌, ಆಸ್ಟ್ರೇಲಿಯಾ, 8–9 ನವೆಂಬರ್ 2004
  5. ರಾಬರ್ಟ್‌ಸನ್‌, ಸಿ. ಜೆ., ಆರ್‌. ಮತ್ತು ನನ್‌ ಜಿ.ಬಿ.(1998) "ಕಡಲುಕೋಳಿಗಳ ಒಂದು ಹೊಸ ಜೀವಿವರ್ಗೀಕರಣದ ನಿಟ್ಟಿನಲ್ಲಿ" : ಕಡಲುಕೋಳಿಗಳ ಜೀವವಿಜ್ಞಾನ ಮತ್ತು ಸಂರಕ್ಷಣೆಯ ಕುರಿತ ಮೊದಲ ಅಂತಾರಾಷ್ಟ್ರೀಯ ವಿಚಾರಸಂಕಿರಣದ ನಡಾವಳಿಗಳು , ಜಿ.ರಾಬರ್ಟ್‌ಸನ್‌ & ಆರ್‌.ಗೇಲ್ಸ್‌ (ಇಡಿಎಸ್‌), ಚಿಪ್ಪಿಂಗ್ ನಾರ್ಟನ್‌ : ಸರ್ವೆ ಬೀಟಿ & ಸನ್ಸ್, 13–19,
  6. ಬರ್ಗ್‌, ಟಿ.ಎಂ., & ಕ್ರೊಕ್ಸಾಲ್, ಜೆ.ಪಿ., (2004) "ಗ್ಲೋಬಲ್ ಪಾಪ್ಯುಲೇಶನ್ ಸ್ಟ್ರಕ್ಚರ್ ಆಂಡ್ ಟ್ಯಾಕ್ಸಾನಮಿ ವಾಂಡರಿಂಗ೉ ಸ್ಪೀಶೀಸ್ ಕಾಂಪ್ಲೆಕ್ಸ್ ". ಮಾಲಿಕ್ಯುಲರ್ ಎಕಾಲಜಿ 13 : 2345–2355.
  7. ಪೆನ್ಹಲ್ಲುರಿಕ್ , ಜೆ. ಮತ್ತು ವಿಂಕ್ ಎಂ. ((2004) "ಅನಾಲಿಸಿಸ್ ಆಫ್ ದಿ ಟ್ಯಾಕ್ಸಾನಮಿ ಆಂಡ್ ದಿ ನಾಮೆಕ್ಲೇಚರ್ ಆಪ್ ದಿ ಪ್ರೊಸೆಲ್ಲರಿಫಾರ್ಮ್ಸ್ ಬೇಸ್ಡ್ ಆನ್ ಕಂಪ್ಲೀಟ್ ನ್ಯೂಕ್ಲಿಯೋಟೈಡ್ ಸೀಕ್ವೆನ್ಸ್‌ ಆಪ್‌ ದಿ ಮೈಟೋಕಾಂಡ್ರಿಯಲ್ ಸೈಟೋಕ್ರೋಮ್ ಜೀನ್." ಎಮು 104 : 125–147.
  8. ರೀಂಡ್ಟ್, ಎಫ್‌. ಇ., & ಆಸ್ಟಿನ್, ಜೆ., (2005) "ಮೇಜರ್ ಅನಾಲಿಟಿಕಲ್ ಆಂಡ್ ಕನ್ಚೆಪ್ಚುವಲ್ ಶಾರ್ಟ್‌ಕಮಿಂಗ್ಸ್ ಇನ್‌ ಎ ರೀಸೆಂಟ್ ಟ್ಯಾಕ್ಸಾನಾಮಿಕ್ ರಿವಿಶನ್ ಆಪ್ ದಿ ಪ್ರೊಸೆಲ್ಲರಿಫಾರ್ಮ್ಸ್ - ಎ ರಿಪ್ಲೈ ಟು ಪೆನ್ಹಲ್ಲುರಿಕ್ ಆಂಡ್ ವಿಂಕ್ (2004), ಎಮು 105 : 181–186 [೨]
  9. ೯.೦೦ ೯.೦೧ ೯.೦೨ ೯.೦೩ ೯.೦೪ ೯.೦೫ ೯.೦೬ ೯.೦೭ ೯.೦೮ ೯.೦೯ ೯.೧೦ ಬ್ರೂಕ್, ಎಂ. ((2004) ಆಲ್ಬಟ್ರಾಸ್ ಆಂಡ್ ಪೆಟ್ರಲ್ಸ್ ಅಕ್ರಾಸ್ ದಿ ವರ್ಲ್ಡ್ ಆಕ್ಸ್‌ಫರ್ಡ್‌ ಯುನಿವರ್ಸಿಟಿ ಪ್ರೆಸ್, ಯುಕೆ, ಐಎಸ್‌ಬಿಎನ್ 0-19-850125-0
  10. ೧೦.೦ ೧೦.೧ ಒಲ್ಸನ್, ಎಸ್‌.ಎಲ್‌., ಹಾರ್ಟಿ, ಪಿ.ಜೆ. (2003) "ಪ್ರೊಬಾಬಲ್ ಎಕ್ಸ್‌ಟರ್ಪೇಶನ್ ಆಫ್ ಅ ಬ್ರೀಡಿಂಗ್ ಕಾಲನಿ ಆಫ್ ಶಾರ್ಟ್‌ ಟೈಲ್ಡ್ ಆಲ್ಬಟ್ರಾಸ್ (ಫೊಯೆಬಸ್ಟ್ರಿಯಾ ಆಲ್ಬಟ್ರಾಸ್ ) ಆನ್ ಬರ್ಮುಡಾ ಪ್ಲೆಸ್ಟೋಸೀನ್ ಸೀ ಲೆವೆಲ್ ರೈಸ್." ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸ್‌ನ ನಡಾವಳಿಗಳು 100 : (22) 12825–12829.
  11. ಜೆಲಸಿಯನ್ , ಮೊದಲು ಲೇಟ್ ಪ್ಲಿಯೊಸೀನ್
  12. ಲೆಕ್ವೆಟ್, ಬಿ.ವರ್ಹೆಡೆನ್, ಸಿ. ಜೊವೆಂಟಿನ್ ಪಿ. (1989) "ಒಲ್‌ಫ್ಯಾಕ್ಷನ್ ಇನ್ ಸಬ್ಅಂಟಾರ್ಕ್ಟಿಕ್ ಸೀಬರ್ಡ್ಸ್ ; ಇಟ್ಸ್ ಪೈಲೊಗೆನೆಟಿಕ್ ಆಂಡ್ ಎಕಾಲಾಜಿಕಲ್ ಸಿಗ್ನಿಫಿಕ್ಎನ್ಸ್ : ದಿ ಕೊಂಡೊರ್ 91 : 732-135. [೩][ಶಾಶ್ವತವಾಗಿ ಮಡಿದ ಕೊಂಡಿ]
  13. ೧೩.೦೦ ೧೩.೦೧ ೧೩.೦೨ ೧೩.೦೩ ೧೩.೦೪ ೧೩.೦೫ ೧೩.೦೬ ೧೩.೦೭ ೧೩.೦೮ ೧೩.೦೯ ಟಿಕೆಲ್, ಡಬ್ಲ್ಯು. ಎಲ್‌. ಎನ್‌. (2000). ಕಡಲುಕೋಳಿಗಳು . ಸಸೆಕ್ಸ್ : ಪಿಕಾ ಪ್ರೆಸ್, ಐಎಸ್‌ಬಿಎನ್ 1-873403-94-1
  14. Ehrlich, Paul R.; Dobkin, David, S.; Wheye, Darryl (1988). The Birders Handbook (First ed.). New York, NY: Simon & Schuster. pp. 29–31. ISBN 0 671 65989 8.{{cite book}}: CS1 maint: multiple names: authors list (link)
  15. ೧೫.೦ ೧೫.೧ ೧೫.೨ ೧೫.೩ Sibley, David Allen; Elphick, Chris; Dunning Jr., John B.; Armistead, George L.; Badyaev, Alex; Barker, F. Keith; Behrstock, Robert A.; Brinkley, Edward S.; Cech, Rick; Clark Jr., George A.; Collins, Charles T.; Davis Jr., William E.; Delehanty, David J.; Garrett, Kimball L.; Geupel, Geoffrey R.; Groschupf, Kathleen; Groth, Jeff; Grzybowski, Joseph A.; Hendricks, Paul; Humann, Alec; Jaramillo, Alvaro; Jones, Ian L.; Knight, Thomas; Kricher, John; Kruper, David J.; Laymon, Stephen A.; McGowan, Kevin J.; Nur, Nadav; Petersen, Wayne R.; Reed, J. Michael; Rising, James D.; Rosenberg, Gary H.; Rubega, Margaret; Sargent, Robert; Sargent, Martha; Seng, William J.; Sheldon, Frederick H.; Snyder, Helen; Thompson, Christopher W.; Trost, Charles H.; Warnock, Nils; Warnock, Sarah; Weller, Milton W.; Wells, Allison Childs; Wells, Jeffrey V.; Williamson, Sheri L.; Winkler, David W.; Witmer, Mark (2001). "Albatrosses". In Elphick, Chris; Dunning Jr., John B.; Sibley, David Allen (eds.). The Sibley Guide to Bird Life and Behavior. Illustrated by David Allen Sibley (First ed.). New York, NY: Alfred A. Knopf. pp. 132–135. ISBN 0 679 45123 4.
  16. ಪೆನ್ನಿಕ್ವಿಕ್, ಸಿ. ಜೆ. (1982). "ದಕ್ಷಿಣ ಜಾರ್ಜಿಯಾ ಮತ್ತು ಅದರ ಹತ್ತಿರದಲ್ಲಿ ಗಮನಿಸಿದಂತೆ ಪೆಟ್ರಲ್ಸ್‌ ಮತ್ತು ಕಡಲುಕೋಳಿಗಳ (ಪ್ರೊಸೆಲ್ಲರಿಫಾರ್ಮ್ಸ್)ಹೋರಾಟ ". ಫಿಲಸಾಫಿಕಲ್ ಟ್ರಾನ್ಸಾಕ್ಷನ್ಸ್ ಆಪ್ ದಿ ರಾಯಲ್ ಸೊಸೈಟಿ ಆಫ್ ದಿ ಲಂಡನ್ ಬಿ 300 : 75–106.
  17. ವೀಮೆರ್‌‌ಸ್ಕಿರ್ಕ್‌ ಎಚ್‌., ಗ್ಯುನ್ನೆಟ್ ಟಿ, ಮಾರ್ಟಿನ್ ಜೆ, ಶಾಫರ್ ಎಸ್‌ಎ, ಕೋಸ್ಟ ಡಿಪಿ. 2000) "ಫಾಸ್ಟ್ ಆಂಡ್ ಫ್ಯುಯೆಲ್ ಎಫಿಶಿಯೆಂಟ್? ಆಪ್ಟಿಮಲ್ ಯೂಸ್ ಆಫ್ ವಿಂಡ್ ಬೈ ಫ್ಲೈಯಿಂಗ್ ಆಲ್ಬಟ್ರಾಸ್." ಪ್ರೊಕ್ ಬಯಾಲಾಜಿಕಲ್ ಸೈನ್ಸ್ 267 : (1455) 1869–74.
  18. ವರ್ಹಾಮ್, (1996). ದಿ ಬಿಹೇವಿಯರ್ ಪಾಪ್ಯುಲೇಶನ್, ಬಯಾಲಜಿ ಆಂಡ್ ಫಿಸಿಯಾಲಜಿ ಆಫ್‌ ದಿ ಪೆಟ್ರಲ್ಸ್‌ . ಲಂಡನ್ : ಅಕಾಡೆಮಿಕ್ ಪ್ರೆಸ್, ಐಎಸ್‌ಬಿಎನ್ 0-12-735415-8
  19. ೧೯.೦ ೧೯.೧ ಕಾಕರ್‌, ಎಂ., & ಮಾಬೆ , ಆರ್‌., (2005) ಬರ್ಡ್ಸ್ ಬ್ರಿಟಾನಿಕಾ ಲಂಡನ್ : ಚಟ್ಟೂ & ವಿಂಡಸ್, ಐಎಸ್‌ಬಿಎನ್ 0-7011-6907-9
  20. ಕ್ರೊಕ್ಸಾಲ್, ಜೆ. ಪಿ., ಸಿಲ್ಕ್‌, ಜೆ. ಆರ್‌. ಡಿ., ಫಿಲಿಪ್ಸ್, ಆರ್‌. ಎ., ಅಫಾನ್ಸ್ಯೆವ್, ವಿ., ಬ್ರಿಗ್ಸ್‌, ಡಿ.ಆರ್‌., (2005) "ಗ್ಲೋಬಲ್ ಸರ್ಕಮ್‌‌ನೇವಿಗೇಶನ್ಸ್: ಟ್ರಾಕಿಂಗ್ ಈಯರ್-ರೌಂಡ್ ರೇಂಜ್ಸ್ ಆಫ್‌ ನಾನ್‌ಬ್ರೀಡಿಂಗ್ ಆಲ್ಬಟ್ರಾಸ್" ಸೈನ್ಸ್ 307 : 249–250.
  21. ಕ್ರಾಕ್ಸಾಲ್ ಜೆ.ಪಿ. & ಪ್ರಿನ್ಸ್, ಪಿ.ಎ. (1994). "ಡೆಡ್ ಆರ್ ಅಲೈವ್, ನೈಟ್ ಆರ್ ಡೇ ; ಹೌ ಡು ಆಲ್ಬಟ್ರಾಸ್ ಕ್ಯಾಚ್ ಸ್ಕ್ವಿಡ್‌?" ಅಂಟಾರ್ಕ್ಟಿಕ್ ಸೈನ್ಸ್ 6 : 155–162.
  22. Spear, Larry (1993). "Kleptoparasitism by Kermadec Petrels, Jaegers, and Skuas in the Eastern Tropical Pacific: Evidence of Mimicry by Two Species of Pterodroma". The Auk. The Auk, Vol. 110, No. 2. 110 (2): 222–233. {{cite journal}}: Unknown parameter |coauthors= ignored (|author= suggested) (help)
  23. ಪ್ರಿನ್ಸ್, ಪಿ.ಎ., ಹ್ಯುನ್, ಎನ್., ವೈಮೆರ್‌ಸ್ಕಿರ್ಕ್‌‌, ಎಚ್‌. , (1994) "ಡೈವಿಂಗ್ ಡೆಪ್ತ್‌ಸ್ ಆಫ್ ಆಲ್ಬಟ್ರಾಸ್‌" ಅಂಟಾರ್ಕ್ಟಿಕ್ ಸೈನ್ಸ್ ಸೈನ್ಸ್ 6 : (3 ) 353–354.
  24. ಕೊಬ್ಲೆ, ಎನ್‌.ಡಿ., (1996) "ಆನ್ ಅಬ್ಸರ್ವೇಶನ್ ಆಫ್ ದಿ ಲಿವ್ ಪ್ರೇ ಕ್ಯಾಪ್ಚರ್ ಬೈ ಬ್ಲ್ಯಾಕ್‌-ಬ್ರೋವ್‌ಡ್ ಆಲ್ಬಟ್ರಾಸ್‌ಸ್‌ ಡಿಯೊಮೆಡಿಯ ಮೆಲನೊಫ್ರಿಸ್ " ಮರೀನ್ ಆರ್ನಿಟಾಲಜಿ 24 : 45–46.[೪]
  25. ೨೫.೦ ೨೫.೧ ೨೫.೨ ೨೫.೩ ೨೫.೪ Robertson, C. J. R. (2003). "Albatrosses (Diomedeidae)". In Hutchins, Michael (ed.). Grzimek's Animal Life Encyclopedia. Vol. 8 Birds I Tinamous and Ratites to Hoatzins (2 ed.). Farmington Hills, MI: Gale Group. pp. 113–116. ISBN 0 7876 5784 0.
  26. ಫಿಶರ್, ಎಚ್‌. ಐ., (1976) "ಸಮ್ ಡೈನಮಿಕಸ್ ಆಫ್‌ ಎ ಬ್ರೀಡಿಂಗ್ ಕಾಲನಿ ಆಫ್ ಲೇಸನ್ ಆಲ್ಬಟ್ರಾಸ್. ವಿಲ್ಸನ್ ಬುಲೆಟಿನ್ 88 : 121–142.
  27. ರಾಬರ್ಟ್‌ಸನ್‌, ಸಿ.ಜೆ.ಆರ್. (1993). "ಸರ್ವೈವಲ್ ಆಂಡ್ ಲಾಂಗೆವಿಟಿ ಆಫ್ ದಿ ನಾರ್ದರ್ನ್ ರಾಯಲ್ ಆಲ್ಬಟ್ರಾಸ್ ಡಿಯೊಮೆಡಿಯ ಎಪೊಮೊಪೊರ ಸ್ಯಾನ್‌ಫೊರ್ಡಿ ಅಟ್ ಟಯಿರೊವ ಹೆಡ್" 1937–93. ಎಮು 93 : 269–276.
  28. ಜೊವೆಂಟಿನ್, ಪಿ., ಮೊನಿಕಲ್ಟ್, ಜಿ. ಡೆ & ಬ್ಲಾಸ್ಸೆವಿಲ್ಲೆ ಜೆ.ಎಂ. (1981) "ಲಾ ಡಾನ್ಸೆ ಸೆ ಎಲ್‌' , ಫೊಯೆಬೆಟ್ರಿಯ ಫಸ್ಕ ". ಬಿಹೇವಿಯರ್ 78 : 43–80.
  29. ಪಿಕ್‌ರಿಂಗ್, ಎಸ್ .ಪಿ.ಸಿ., & ಬೆರ್ರೊ, ಎಸ್. .ಡಿ., (2001) "ಕೋರ್ಟ್‌ಶಿಪ್ ಬಿಹೇವಿಯರ್ ಆಫ್‌ ದಿ ವಾಮಡರಿಂಗ್ ಆಲ್ಬಟ್ರಾಸ್ ಡಿಯೊಮೆಡಿಯ ಎಕ್ಸುಲನ್ಸ್ ಅಟ್ ಬರ್ಡ್‌ ಐಲ್ಯಾಂಡ್, ಸೌತ್ ಜಾರ್ಜಿಯಾ" ಮರೀನ್ ಆರ್ನಿಟಾಲಜಿ 29 : 29–37 [೫]
  30. ಆಂಡರ್ಸನ್ ಡಿ.ಜೆ. & ಕ್ರುಜ್ ಎಫ್. (1998) "ಬಯಾಲಜಿ ಆಂಡ್ ಮ್ಯಾನೇಜ್‌ಮೆಂಟ್ ವೇವ್ಡ್ ಆಲ್ಬಟ್ರಾಸ್ ಅಟ್ ದಿ ಗ್ಯಾಲಪಗಸ್ ಐಲ್ಯಾಂಡ್ಸ್. ಆಲ್ಬಟ್ರಾಸ್ ಬಯಾಲಜಿ ಆಂಡ್ ಕನ್ಸರ್ವೇಶನ್ ಪುಸ್ತಕದಲ್ಲಿ ಪುಟಗಳು.105–109 (ರಾಬರ್ಟ್‌ಸನ್, ಜಿ. & ಗೇಲ್ಸ್, ಆರ್‌. ಇಡಿಎಸ್.) ಚಿಪ್ಪಿಂಗ್ ನಾರ್ಟನ್ : ಸರ್ವೇ ಬೀಟ್ಟಿ ಆಂಡ್ ಸನ್ಸ್ ಐಎಸ್‌ಬಿಎನ್ 0-949324-82-5
  31. ವರ್ಹಾಮ್‌, ಜೆ. (1990) ದಿ ಪೆಟ್ರಲ್ಸ್ - ದೆಯರ್ ಎಕಾಲಜಿ ಆಂಡ್ ಬ್ರೀಡಿಂಗ್ ಸಿಸ್ಟಮ್ಸ್ ಲಂಡನ್ : ಅಕಾಡೆಮಿಕ್ ಪ್ರೆಸ್.
  32. ವರ್ಹಾಮ್, ಜೆ. (1976) "ದಿ ಇನ್ಸಿಡೆನ್ಸ್‌, ಫಂಕ್ಷನ್ ಆಂಡ್ ಎಕಾಲಾಜಿಕಲ್ ಸಿಗ್ನಿಫಿಕೆನ್ಸ್ ಆಫ್ ಪೆಟ್ರಲ್ ಸ್ಟಮಕ್ ಆಯಿಲ್ಸ್." ಪ್ರೊಸೀಡಿಂಗ್ಸ್ ಆಫ್ ದಿ ನ್ಯೂಜಿಲ್ಯಾಂಡ್ ಆಂಡ್ ಎಕಾಲಾಜಿಕಲ್ ಸೊಸೈಟಿ 24 : 84–93 [೬] Archived 2006-07-24 ವೇಬ್ಯಾಕ್ ಮೆಷಿನ್ ನಲ್ಲಿ.
  33. ೩೩.೦ ೩೩.೧ ಕಾರ್ಬೊನೇರಸ್, ಸಿ.(1992) "ಫ್ಯಾಮಿಲಿ ಡಿಯೊಮೆಡೈಡೆ (ಕಡಲುಕೋಳಿ )" ಇನ್ ಹ್ಯಾಂಡ್‌ಬುಕ್ ಆಫ್ ದಿ ಬರ್ಡ್ಸ್ ಆಫ್‌ ದಿ ವರ್ಲ್ಡ್ ಸಂಚಿಕೆ 1. ಬಾರ್ಸೆಲೋನ :ಲಿಂಕ್ಸ್ ಎಡಿಸಿನ್ಸ್ , ಐಎಸ್‌ಬಿಎನ್ 84-87334-10-5
  34. ಆಕೆಸ್ಸನ್, ಎಸ್., & ವೈಮೆರ್‌ಸ್ಕಿರ್ಕ್‌‌ , ಎಚ್‌., (2005) "ಕಡಲುಕೋಳಿ ಲಾಂಗ್-ಡಿಸ್ಟನ್ಸ್ ನೇವಿಗೇಶನ್ : ಕಂಪ್ಯಾರಿಂಗ್ ಅಡಲ್ಟ್ಸ್ ಆಂಡ್ ಜುವೆನಿಲ್ಸ್" ಜರ್ನಲ್ ಆಫ್ ನೇವಿಗೇಶನ್ 58 : 365–373.
  35. Gotch, A. F. (1995) [1979]. "Albatrosses, Fulmars, Shearwaters, and Petrels". Latin Names Explained. A Guide to the Scientific Classifications of Reptiles, Birds & Mammals. New York, NY: Facts on File. p. 190. ISBN 0 8160 3377 3.
  36. ಸಫೀನಾ, ಸಿ. (2002) ಐ ಆಫ್‌ ದಿ ಆಲ್ಬಟ್ರಾಸ್ : ವಿಶನ್ಸ್ ಆಫ್‌ ಹೋಪ್ ಆಂಡ್ ಸರ್ವೈವಲ್ ನ್ಯೂಯಾರ್ಕ್‌ : ಹೆನ್ರಿ ಹೋಲ್ಟ್ & ಕಂಪನಿ ಐಎಸ್‌ಬಿಎನ್ 0-8050-6229-7
  37. IUCN, 2004. ಕೆಂಪು ಪಟ್ಟಿ: ಕಡಲುಕೋಳಿ ಜಾತಿಗಳು Archived 2006-04-27 ವೇಬ್ಯಾಕ್ ಮೆಷಿನ್ ನಲ್ಲಿ.. 2010ರ ಜುಲೈ 27ರಂದು ಮರುಸಂಪಾದಿಸಲಾಗಿದೆ.
  38. ಬ್ರದರ್ಸ್ ಎನ್‌. ಪಿ. (1991). "ದಕ್ಷಿಣ ಸಮುದ್ರದಲ್ಲಿ ದೀರ್ಘದೂರದ ಜಪಾನೀ ಮೀನುಗಾರಿಕೆಯಲ್ಲಿ ಕಡಲುಕೋಳಿಗಳ ಮರಣದರ ಮತ್ತು ಸಂಬಂಧಿತ ಗಾಳಗಳ ನಷ್ಟ." ಬಯಾಲಾಜಿಕಲ್ ಕನ್ಸ್‌ರ್ವೇಶನ್ 55 : 255–268.
  39. Fisher, Harvey I. (1966). "Airplane-Albatross Collisions on Midway Atoll". The Condor. The Condor, Vol. 68, No. 3. 68 (3): 229–242. doi:10.2307/1365556. Retrieved 2007-12-16. {{cite journal}}: Unknown parameter |month= ignored (help)
  40. ಆಡುಬನ್ ವಾಚ್‌ಲಿಸ್ಟ್ . ಲೇಸನ್ ಕಡಲುಕೋಳಿ (ಪೊಯೆಬಸ್ಟ್ರಿಯ ಇಮ್ಯುಟಬಿಲಿಸ್ )
  41. ಬಿಬಿಸಿ ನ್ಯೂಸ್ (2005). ಆಲ್ಬಟ್ರಾಸ್ ಚಿಕ್ಸ್ ಅಟ್ಯಾಕ್ಡ್ ಬೈ ಮೈಸ್. 2008ರ ಮಾರ್ಚ್‌ 23ರಂದು ಮರುಸಂಪಾದಿಸಲಾಗಿದೆ.
  42. ಸ್ಪಿಯರ್, ಎಲ್‌. ಬಿ., ಐನ್ಲೆ, ಡಿ.ಜಿ. & ರಿಬಿಕ್, ಸಿ. ಎ. (1995). "ಇನ್ಸಿಡೆನ್ಸ್ ಆಫ್ ಪ್ಲಾಸ್ಟಿಕ್ ಇನ್ ಆಲ್ಬಟ್ರಾಸ್ ಫ್ರಮ್ ದಿ ಟ್ರಾಫಿಕಲ್ ಪೆಸಿಫಿಕ್, 1984–91: ರಿಲೇಶನ್ ವಿತ್ ಡಿಸ್ಟ್ರಿಬ್ಯುಶನ್ ಆಫ್ ಸ್ಪೀಶೀಸ್, ಸೆಕ್ಸ್, ಏಜ್, ಸೀಸನ್, ಆಂಡ್ ಬಾಡಿ ವೈಟ್ ." ಮೆರೀನ್‌ ಎನ್‌ವಿರಾನ್‌ಮೆಂಟಲ್‌ ರೀಸರ್ಚ್‌ '
  43. ಆಮನ್, ಎಸ್‌.ಜೆ. ಲ್ಯುಡ್ವಿಗ್, ಜೆ.ಪಿ., ಗೀಸಿ, ಜೆ.ಪಿ., ಕಾಲ್‌ಬೋರ್ನ್‌, ಟಿ., (1997) "ಪ್ಲಾಸ್ಟಿಕ್ ಇಂಜೆಶನ್ ಬೈ ಲೇಸನ್ ಆಲ್ಬಟ್ರಾಸ್ ಚಿಕ್ಸ್ ಆನ್ ಸ್ಯಾಂಡ್ ಐಲ್ಯಾಂಡ್, ಮಿಡ್‌ವೇ ಅಟಾಲ್, 1994 ಆಂಡ್ 1995." ಆಲ್ಬಟ್ರಾಸ್ ಬಯಾಲಜಿ ಆಂಡ್ ಕನ್ಸರ್ವೇಶನ್ ನಲ್ಲಿ, (ರಾಬಿನ್‌ಸನ್ ಮತ್ತು ಆರ್. ಗೇಲ್ಸ್ ಅವರಿಂದ ಸಂಪಾದಿತ). ಸರ್ರೆ ಬೀಟ್ಟಿ & ಸನ್ಸ್ : ಚಿಪ್ಪಿಂಗ್ ನಾರ್ಟನ್. ಪುಟಗಳು. 239-44 [೭] Archived 2005-10-30 ವೇಬ್ಯಾಕ್ ಮೆಷಿನ್ ನಲ್ಲಿ.
  44. ಫುಡ್ ಆಡ್ ಅಗ್ರಿಕಲ್ಚರ್ ಆರ್ಗನೈಸೇಶನ್ (1999) "ದಿ ಇನ್ಸಿಡೆಂಟಲ್ ಕ್ಯಾಚ್ ಆಫ್ ದಿ ಆಲ್ಬಟ್ರಾಸ್ ಬೈ ಲಾಂಗ್‌ಲೈನ್ ಫಿಶರೀಸ್ : ನಿವಾರಣೆಗೆ ವಿಶ್ವವ್ಯಾಪಿ ಪರಿಶೀಲನೆಗಳು ಮತ್ತು ತಾಂತ್ರಿಕ ಮಾರ್ಗದರ್ಶನಗಳು. ಎಫ್‌ಎಒ ಫಿಶರೀಸ್ ಆದೇಶ ಸಂಖ್ಯೆ.937. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಮಿತಿ (FAO). [೮] Archived 2006-06-29 ವೇಬ್ಯಾಕ್ ಮೆಷಿನ್ ನಲ್ಲಿ.
  45. ಒ'ಟೂಲೆ. ಡೆಕ್ಲೆಂಡ್ ಆಂಡ್ ಮೊಲ್ಲೊಯ್, ಜಾನಿಸೆ (2000) "ಪ್ರಿಲಿಮಿನರಿ ಪರ್‌ಫಾರ್ಮನ್ಸ್ ಅಸೆಸ್‌ಮೆಂಟ್ ಆಪ್ ಆನ್ ಅಂಡರ್‌ವಾಟರ್ ಲೈನ್‌ ಸೆಟ್ಟಿಂಗ್ ಡಿವೈಸ್ ಫಾರ್ ಪೆಲಗಿಕ್ ಲಾಂಗ್‌ಲೈನ್ ಫಿಶಿಂಗ್" ನ್ಯೂಜಿಲ್ಯಾಂಡ್ ಜರ್ನಲ್ ಆಫ್ ಮರೀನ್ ಆಂಡ್ ಫ್ರೆಶ್‌ವಾಟರ್ ರಿಸರ್ಚ್‌ 34 : 455–461. [೯] Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ.
  46. ರೀಡ್ ಎ.ಟಿ., ಸಲ್ಲಿವಾನ್, ಬಿ.ಜೆ., ಪಾಂಪರ್ಟ್‌, ಜೆ. ಎಂಟಿಕಾಟ್‌, ಜೆ.ಡಬ್ಲ್ಯು, ಬ್ಲಾಕ್‌ ಎ. ಡಿ. (2004) "ಸೀಬರ್ಡ್‌ ಮಾರ್ಟಾಲಿಟಿ ಅಸೋಸಿಯೇಟೆಡ್ ವಿತ್‌ ಪಟಗೋನಿಯನ್ ಟೂತ್‌ಫಿಶ್ (ಡಿಸೊಸ್ಟಿಚಸ್ ಎಲಿಜಿನಾಯಿಡ್ಸ್ ) ಲಾಂಗ್‌ಲೈನರ್ಸ್ ಇನ್‌ ಫಾಕ್‌ಲ್ಯಾಂಡ್ ಐಲ್ಯಾಂಡ್ ವಾಟರ್ಸ್." ಎಮು 104 : (4) 317–325.

ಬಾಹ್ಯ ಕೊಂಡಿಗಳು[ಬದಲಾಯಿಸಿ]