ಒಗಟು
ವಿಕಿಪೀಡಿಯ ಇಂದ
(ಒಗಟುಗಳು ಇಂದ ಪುನರ್ನಿರ್ದೇಶಿತ)
ಮನರಂಜನೆಗಾಗಿ ಅಥವ ಬುದ್ಧಿಬೆಳವಣಿಗೆಗಾಗಿ ರಚಿಸಲ್ಪಟ್ಟ ಭಾಷಾಪ್ರಶ್ನೆಗಳ ಒಂದು ವಿಧ ಒಗಟು. ಸಾಮಾನ್ಯವಾಗಿ ಒಂದು ಪದ ಅಥವ ಪದಸಮುಚ್ಚಯವನ್ನು ಚತುರವಾಗಿ ಸೂಚಿಸುವಂತಹ ವಾಕ್ಯ ಅಥವ ವಾಕ್ಯಸಂಕುಲವಾಗಿ ಒಗಟನ್ನು ಪ್ರಸ್ತಾಪಿಸಲಾಗುತ್ತದೆ.
ಕೆಲವು ಉದಾಹರಣೆಗಳು[ಬದಲಾಯಿಸಿ]
- ಊರೆಲ್ಲ ತಿರುಗ್ತತಿ ಮನೆ ಮೂಲ್ಯಾಗ್ ಬಿದ್ದಿರ್ತತಿ - - ಉ: ಚಪ್ಪಲಿ ಅಥವ ಎಕ್ಕಡ
- ಮುಳುಗ್ತತಿ, ತೇಲ್ತತಿ, ಕರ್ಗತತಿ – ಉ: ಅಡಿಕೆ ,ಎಲೆ, ಸುಣ್ಣ.
- ಅಂಗಣ್ಣ ,ಮಂಗಣ್ಣ ,ಅಂಗಿ ಬಿಚ್ಕೊಂಡು ನುಂಗಣ್ಣ . - ಉ: ಬಾಳೆಹಣ್ಣು.
- ಉದ್ದುದ್ದವನೆ ,ಉರಿ ಮುಖದವನೆ ,ಸುದ್ದಿ ಹೇಳೋ ಸೂ..ಮಗನೇ . - ಉ: ಮೆಣಸಿನಕಾಯಿ.
- ಅಂಕ ಡೊಂಕ ’ಅ’; ಅದರ ತಮ್ಮ ’ಸಾ’; ಕರಿಯದೊಂದು ’ಮೆ’; ನಾಲ್ಕು ಚೌಕ ’ಬೆ’. - ಉ:ಅಡಿಕೆ ,ಸಾಸಿವೆ ,ಮೆಣಸು , ಬೆಲ್ಲ.
ಹೋಲಿಕೆಗಳ ಮೂಲಕ ರಚಿತವಾದ ಒಗಟುಗಳು[ಬದಲಾಯಿಸಿ]
ದಿನನಿತ್ಯದ ಬದುಕಿನಿಂದಲೇ ಎತ್ತಿಕೊಂಡ ಸಂಗತಿಗಳನ್ನು ಉಪಮಾನ-ಉಪಮೇಯಗಳ ಮೂಲಕ ಬಣ್ಣಬಣ್ಣವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಇಲ್ಲಿ ಕಾಣಬಹುದು.ಉದಾಹರಣೆಗೆ :-
- ಅಮ್ಮನ ಸೀರೆ ಮಡಿಸೋಕಾಗಲ್ಲ ; ಅಪ್ಪನ ದುಡ್ಡು ಎಣಿಸೋಕಾಗಲ್ಲ -- ಉ: ಆಕಾಶ, ನಕ್ಷತ್ರ
- ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ -- ಉ: ಹಣೆ, ಕುಂಕುಮ
- ಚಿಕ್ಕ ಮನೆ ತುಂಬಾ ಚಕ್ಕೆ ತುಂಬಿದೆ-- ಉ: ಬಾಯಿ, ಹಲ್ಲು
- ಅಟ್ಟದ ಮೇಲಿರೋ ಗಿಡ್ಡ ಗೋಪಾಲ, ನಿನಗ್ಯಾರಿಟ್ಟರೋ ಸಾದಿನ ಬೊಟ್ಟು? -- ಉ: ಗುಲಗಂಜಿ
- ಬಾವೀಲಿ ಬೆಳ್ಳಿ ಬಟ್ಟಲು ಬಿದ್ದಿದೆ. - ಉ: ಚಂದ್ರ
- ಹಸುರು ಗಿಡದ ಮೇಲೆ ಮೊಸರು ಚೆಲ್ಲಿದೆ. - ಉ: ಮಲ್ಲಿಗೆ ಹೂ.
- ಅಂಕು ಡೊಂಕಾದ ಬಾವಿ ,ಬಗ್ಗಿ ನೋಡಿದರೆ ಗುಬ್ಬಿ ಕುಡಿಯುವಷ್ಟು ನೀರಿಲ್ಲ. - ಉ: ಕಿವಿ.
- ಬರೆಯುವುದಕ್ಕಾಗದೆ ಇರೊ ನುಡಿ ಯಾವುದು ? -- "ಮುನ್ನುಡಿ"