ಐ.ಎನ್.ಎಸ್ ವಿರಾಟ್ (ಆರ್೨೨)
ವಿಕಿಪೀಡಿಯ ಇಂದ
(ಐ.ಎನ್.ಎಸ್ ವಿರಾಟ್ ಇಂದ ಪುನರ್ನಿರ್ದೇಶಿತ)
| ವೃತ್ತಿಜೀವನ | |
|---|---|
| ಹೆಸರು: | ಐ.ಎನ್.ಎಸ್ ವಿರಾಟ್ |
| ನಿರ್ಮಾತೃ: | ವಿಕ್ಕರ್ಸ್ ನೌಕಾ ನಿರ್ಮಾಣ ಮತ್ತು ಇಂಜಿನಿಯರಿಂಗ್ |
| ಬಿಡುಗಡೆ: | ೧೬ ಫೆಬ್ರವರಿ, ೧೯೫೬ |
| ಕಾರ್ಯಾರಂಭ: | ೧೮ ನವಂಬರ್, ೧೯೫೯ |
| ಪುನರ್-ಕಾರ್ಯಾರಂಭ: | ಮೇ ೧೯೮೭ (ಯು.ಕೆ.ಯಿಂದ ಖರೀದಿಸಿದ್ದು) |
| ಕಾರ್ಯಸಮಾಪ್ತಿ: | ೨೦೧೨ (ಅಪೇಕ್ಷೆ)[೧] |
| ಧ್ಯೇಯ: | ಜಯಮಾ ಸಂ ಯುದ್ಧಿ ಸ್ಪರ್ಧಃ (ಸಂಸ್ಕೃತ: "ನನ್ನ ಸಂಗ ಯುದ್ಧಕ್ಕೆ ಸ್ಪರ್ಧಿಸುವವರನ್ನು ನಾನು ಸಂಪೂರ್ಣವಾಗಿ ಪರಾಜಯಗೊಳಿಸುವೆ") |
| ಸ್ಥಿತಿ: | ಜುಲೈ ೨೦೦೯ರಿಂದ ಮರುಜೋಡಣೆಗೆ ಒಳಪಟ್ಟಿದೆ |
| ಸಾಮಾನ್ಯ ವಿವರಗಳು | |
| ವರ್ಗ ಮತ್ತು ನಮೂನೆ: | ಸೆಂಟಾರ್ ವರ್ಗದ ವಿಮಾನಧಾರಕ ನೌಕೆ |
| ನೋದನ: | 2 x Parsons geared steam turbines; 4 boilers with 400 psi, 76,000 shp |
| ಪೂರಕ: | ಗರಿಷ್ಟ ೨,೧೦೦; ೧೨೦೬ ನೌಕಾ ಸಿಬ್ಬಂದಿಗಳು, ೧೪೩ ವಾಯುಸೇನೆ ಸಿಬ್ಬಂದಿಗಳು |
| ಹೊತ್ತೊಯ್ಯುವ ವಿಮಾನಗಳು: |
ಗರಿಷ್ಟ ೩೦
|
ಐ.ಎನ್.ಎಸ್ ವಿರಾಟ್ (ಆರ್೨೨) (ಸಂಸ್ಕೃತ: विराट, Virāṭ. "ದೈತ್ಯ" ) ಯುದ್ಧವಿಮಾನಗಳನ್ನು ಹೊತ್ತೊಯ್ಯುವ ಸೆಂಟಾರ್ ವರ್ಗದ ನೌಕೆಯಾಗಿದೆ. ಪ್ರಸ್ತುತ ಭಾರತೀಯ ನೌಕಾ ಸೇನೆಯಲ್ಲಿ ಕಾರ್ಯನಿರತವಾಗಿರುವ ಇದು ಭಾರತೀಯ ನೌಕಾ ಪಡೆಯ ಅಗ್ರನೌಕೆಯಾಗಿದೆ. ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿನ ೨ ವಿಮಾನಧಾರಕ ನೌಕೆಗಳಲ್ಲಿ ಒಂದಾಗಿದ್ದು, ಭಾರತದ ಹಳೆಯ ಧಾರಕ ನೌಕೆಯಾಗಿದೆ.