ಐ.ಎನ್.ಎಸ್ ವಿಕ್ರಮಾದಿತ್ಯ
ವಿಕಿಪೀಡಿಯ ಇಂದ
ವಿಕ್ರಮಾದಿತ್ಯ ನೌಕೆಯು ಅಡ್ಮಿರಲ್ ಗೋರ್ಶ್'ಕೋವ್ ಆಗಿದ್ದಾಗ |
|
| ವೃತ್ತಿಜೀವನ | |
|---|---|
| ನಿರ್ಮಾತೃ: | ಚೆರ್ನೊಮೊರ್ಸ್ಕಿಯ್ ನೌಕಾನಿಲ್ದಾಣ, ನಿಕೊಲಾಯೆವ್ |
| ನಿರ್ಮಾಣಾರಂಭ: | ಡಿಸಂಬರ್ ೧೯೭೮ (ಅಡ್ಮಿರಲ್ ಗೋರ್ಶ್'ಕೋವ್ ಆಗಿ) |
| ಬಿಡುಗಡೆ: | ಎಪ್ರಿಲ್ ೧೭, ೧೯೮೨ (ಅಡ್ಮಿರಲ್ ಗೋರ್ಶ್'ಕೋವ್ ಆಗಿ) ಡಿಸಂಬರ್ ೪ ,೨೦೦೮ (ವಿಕ್ರಮಾದಿತ್ಯ ಆಗಿ) |
| ಕಾರ್ಯಾರಂಭ: | ೨೦೧೨ (೨೦೧೧ರಲ್ಲಿ ಸಾಗರ ಪರೀಕ್ಷಣೆ ಹಾಗೂ ಪ್ರಯೋಗಗಳು)[೧] |
| ವಿಧಿ: | ಮರೂಜೋಡಣೆಗೆ ಒಳಪಟ್ಟಿದೆ |
| ಸಾಮಾನ್ಯ ವಿವರಗಳು | |
| ಉದ್ದ: | 273.1 m overall |
| ಬೀಮ್: | 31.0 m |
| ನೋದನ: | 4 shaft geared steam turbines, 140,000 hp |
| ಹಿಡಿತ: | 13500 miles at 18 knots |
| ಹೊತ್ತೊಯ್ಯುವ ವಿಮಾನಗಳು: | ೧೬ ಮಿಕೊಯಾನ್ ಮಿಗ್-೨೯ಕೆ ಅಥವಾ ಹೆಚ್.ಎ.ಎಲ್ ತೇಜಸ್ ಅಥವಾ ಸೀ ಹ್ಯಾರಿಯರ್ ೬ ಕೆ.ಎ-೩೧ ಹೆಲಿಕ್ಸ್ ಹೆಚ್.ಎ.ಎಲ್ ಧ್ರುವ್ |
ಐ.ಎನ್.ಎಸ್ ವಿಕ್ರಮಾದಿತ್ಯ (ಸಂಸ್ಕೃತ: विक्रमादित्य, Vikramāditya) ಎನ್ನುವುದು ಸೋವಿಯೆಟ್ ರಷ್ಯಾದ ಹಳೆಯ ವಿಮಾನ ಧಾರಕ ನೌಕೆಯಾದ ಅಡ್ಮಿರಲ್ ಗೋರ್ಶ್'ಕೋವ್ನ ಹೊಸ ನಾಮಧೇಯವಾಗಿದೆ. ಇದನ್ನು ಭಾರತವು ರಷ್ಯಾದಿಂದ ಖರೀದಿಸಿದ್ದು ೨೦೧೨ ರ ವೇಳೆಗೆ ಇದು ಭಾರತೀಯ ನೌಕಾಸೇನೆಯಲ್ಲಿ ಸೇವಾನಿರತವಾಗುವ ಅಪೇಕ್ಷೆಯಿದೆ.[೨]
ವಿಕ್ರಮಾದಿತ್ಯ ನೌಕೆಯು ೧೯೭೮-೧೯೮೨ರಲ್ಲಿ ನಿರ್ಮಿತ ಕೀವ್ ವರ್ಗದ ನಮೂನೆ ೧೧೪೩ ವಿಮಾನ ಧಾರಕ ನೌಕೆಯ ಬದಲಿತ ಆವೃತ್ತಿಯಾಗಿದೆ. ಪ್ರಸ್ತುತವಾಗಿ ಇದು ರಷ್ಯಾದ ಸೆವ್ಮಾಶ್ ನೌಕಾ ನಿರ್ಮಾಣ ಕೇಂದ್ರದಲ್ಲಿ ವಿಸ್ತೃತವಾದ ಮರುಜೋಡಣೆಗೆ ಒಳಪಡುತ್ತಿದೆ.