ಏಕದೇವ ವಿಶ್ವಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಏಕದೇವ ವಿಶ್ವಾಸ ಏಕದೇವ ವಿಶ್ವಾಸವು ಇಸ್ಲಾಮಿನ ಮೂಲಭೂತ ವಿಶ್ವಾಸಗಳ ಪೈಕಿ ಮೊದಲನೆ ಯದಾಗಿದೆ.ಈ ಜಗತ್ತು ಮತ್ತದರಲ್ಲಿರುವ ಸಕಲ ವಸ್ತುಗಳೂ ಏಕ ಸ್ರಷ್ಟಿಕರ್ತನ ಸ್ರಷ್ಟಿಗಳಾಗಿವೆ, ಸಮಸ್ತ ವಿಶ್ವದ ಪರಿಪಾಲಕನೂ, ಒಡೆಯನೂ, ಅಧಿಪತಿಯೂ ಅವನೇ ಆಗಿರುತ್ತಾನೆ. ಆದುದರಿಂದ ಅವನೊಬ್ಬನೇ ಎಲ್ಲ ವಿಧ ಆರಾಧನೆ ಮತ್ತು ಅರ್ಪಣೆಗಳಿಗೆ ಅರ್ಹನಾದವನು, ಅವನ ಹೊರತು ಪೂಜೆ ಮತ್ತು ಆರಾಧನೆಗೆ ಅರ್ಹನಾದವನು ಯಾರೂ ಇಲ್ಲ.ಅವನಲ್ಲದೆ ದಾಸ್ಯ ಮತ್ತು ಅನುಸರಣೆಗೆ ಯೋಗ್ಯ ಯಾರೂ ಇಲ್ಲ. ಅವನೊಂದಿಗೆ ಭಾಗೀ ದಾರನಾಗಿ ಯಾರೂ ಇಲ್ಲ. ಎಲ್ಲರೂ ಆತನ ಆಶ್ರಿತರು,ಅವನಿಂದ ಸಹಾಯ ಯಾಚಿಸಲು ನಿರ್ಬಂಧಿತರು. ಅವನು ಭೌತಿಕವಾದ ಒಂದು ವಸ್ತು ಅಲ್ಲದಿರುವುದರಿಂದ ಅವನಿಗೆ ನಿರ್ದಿಷ್ಟ ಬಣ್ಣ,ರೂಪ ಮತ್ತು ಸ್ಥಳ ಎಂಬ ಬಂಧನಗಳಿಲ್ಲ.ಆದ್ದರಿಂದ ಮಾನವ ಕಣ್ಣಿಗೆ ಆತನನ್ನು ನೋಡಲು ಸಾಧ್ಯವಿಲ್ಲ . ಪ್ರವಾದಿ ಇಬ್ರಾಹೀಮ್(ಅ)ರ ಘಟನೆಯನ್ನು ಲ್ಲೇಖಿಸಿ ಪವಿತ್ರ ಕುರಾನ್ ಹೇಳುತ್ತದೆ:

"ನಾವು ಇಬ್ರಾಹೀಮರಿಗೆ ಇದೇ ರೀತಿಯಲ್ಲಿ ಭೂಮಿ-ಆಕಾಶಗಳ ಸಾಮ್ರಾಜ್ಯ ವ್ಯವಸ್ಥೆಯನ್ನು ತೋರಿಸಿ ಕೊಡುತ್ತಿದ್ದೆವು.ಅವರು ದೃಢ ವಿಶ್ವಾಸವುಳ್ಳವರಾಗಬೇಕೆಂದು. ಒಮ್ಮೆ ರಾತ್ರಿಕಾಲವು ಅವರನ್ನಾವರಿಸಿದಾಗ ಅವರೊಂದು ನಕ್ಷತ್ರವನ್ನು ಕಂಡರು.'ಇದು ನನ್ನ ಪ್ರಭು 'ಎಂದರು. ಆದರೆ ಅದು ಅಸ್ತಮಿಸಿದಾಗ 'ನಾನು ಅಸ್ತಮಿಸುವವರಿಗೆ ಮಾರು ಹೋಗುವುದಿಲ್ಲ ' ಎಂದರು. ಅನಂತರ ಚಂದ್ರವು ಪ್ರಕಾಶಿಸುತ್ತಿರುವುದನ್ನು ಕಂಡಾಗ'ಇದು ನನ್ನ ಪ್ರಭು'ಎಂದರು.ಆದರೆ ಅದೂ ಮುಳುಗಿ ದಾಗ'ನನ್ನ ಪ್ರಭು ನನಗೆ ಮಾರ್ಗದರ್ಶನ ವನ್ನೀಯದಿರುತ್ತಿದ್ದರೆ ನಾನೂ ಪಥಭ್ರಷ್ಟರಲ್ಲಾಗುತ್ತಿದ್ದೆ ಎಂದರು' ತರುವಾಯ ಸೂರ್ಯನನ್ನು ಪ್ರಕಾಶಮಯವಾಗಿ ಕಂಡಾಗ 'ಇದು ನನ್ನ ಪ್ರಭು, ಇದು ಎಲ್ಲಕ್ಕಿಂತ ದೊಡ್ಡ ದಾಗಿದೆ' ಎಂದರು. ಆದರೆ ಅದೂ ಅಸ್ತಮಿಸಿದಾಗ ಇಬ್ರಾಹೀಮರು ಉದ್ಗರಿಸಿದರು:

"ಓ, ನನ್ನ ಜನಾಂಗ ಬಾಂಧವರೆ ನೀವು ಯಾವುದನ್ನೆಲ್ಲಾ ದೇವನೊಂದಿಗೆ ಸಹಭಾಗಿಗಳನ್ನಾಗಿಸುತ್ತೀರಿ ಅವುಗಳಿಂದ ನಾನು ವಿರಕ್ತನಾಗುವೆನು.(ನಂತರ ಹೇಳಿದರು) ನಾನು ಏಕನಿಷ್ಥೆಯಿಂದ ನನ್ನ ಮುಖವನ್ನು ಭೂಮಿ-ಆಕಾಶಗಳನ್ನು ಸ್ರಷ್ಟಿಸಿದವನ ಕಡೆಗೆ ತಿರುಗಿಸಿದೆನು.ನಾನು ಎಷ್ಟುಮಾತ್ರಕ್ಕೂ ಅಲ್ಲಾಹನೊಂದಿಗೆ ಸಹಭಾಗಿಗಳನ್ನಾಗಿ ಮಾಡುವವರಲ್ಲಿ ಸೇರಿದವನಲ್ಲ" (ಪವಿತ್ರ ಕುರ್ಆನ್ : ಅಧ್ಯಾಯ 66, ಸೂಕ್ತ 25-29) ಪವಿತ್ರ ಕುರ್ಆನ್ ನೈಜ ಆರಾಧ್ಯನ ವಿವರಣೆ ನೀಡುತ್ತಾ ಹೇಳುತ್ತದೆ."ಅವನೇ ಅಲ್ಲಾಹ್ ಅವನ ಹೊರತು ಬೇರಾವ ಆರಾಧ್ಯನೂ ಇಲ್ಲ. ಗೋಚರವಾಗಿರುವ ಮತ್ತು ಅಗೋಚರವಾಗಿರುವ ಎಲ್ಲವನ್ನೂ ಬಲ್ಲವನು. ಅವನು ಪರಮದಯಾಮಯನೂ ಕರುಣಾನಿಧಿಯೂ ಆಗಿರುತ್ತಾನೆ. ಅವನೇ ಅಲ್ಲಾಹ್ ಅವನ ಹೊರತು ಬೇರಾವ ಆರಾಧ್ಯನೂ ಇಲ್ಲ. ಅವನು ಸಾಮ್ರಾಟನು, ಪರಮ ಪಾವನನು. ಸಾಧ್ಯಂತ ಮಂಗಲಮಯನು. ಶಾಂತಿದಾತನು, ಸಂರಕ್ಷಕನು, ಪ್ರಬಲನು, ತನ್ನ ಆಜ್ಞೆಯನ್ನು ಶಕ್ತಿಯಿಂದ ಅನುಷ್ಥಾನಿಸಿ ಬಿಡುವವನು, ಸದಾ ಸರ್ವೊನ್ನತನಾಗಿಯೇ ಇರುವವನು,ಜನರು ಮಾಡುವ ಸಹಭಾಗಿತ್ವದಿಂದ ಅಲ್ಲಾಹನು ಪರಿಶುದ್ಧನು ಸ್ರಷ್ಟಿಯ ಯೋಜನೆ ಮಾಡುವವನೂ ಅದನ್ನು ಜಾರಿ ಗೊಳಿಸುವವನೂ ಅದರಂತೆ ರೂಪ ಕೊಡುವವನೂ ಅಲ್ಲಾಹನೇ.ಅವನಿಗೆ ಅತ್ಯುತ್ತಮವಾದ ನಾಮಗಳಿವೆ. ಭೂಮಿ ಆಕಾಶಗಳಲ್ಲಿರುವ ಪ್ರತಿಯೊಂದು ವಸ್ತುವೂ ಅವನನ್ನು ಜಪಿಸುತ್ತದೆ. ಮತ್ತು ಅವನು ಪ್ರಬಲನೂ ಯುಕ್ತಿಪೂರ್ಣನೂ ಆಗಿರುತ್ತಾನೆ. (ಪವಿತ್ರ ಕುರ್ಆನ್ :ಅಧ್ಯಾಯ ೫೯, ಸೂಕ್ತ ೨೨-೨೪) ಅಣ್ಣಾದೊರೈಯವರು ತನ್ನ ಭಾಷಣದಲ್ಲಿ ಅವರು ಇಸ್ಲಾಮಿನ ಏಕ ದೇವತ್ವವನ್ನು ವಿವರಿಸುತ್ತಾ ಹೇಳಿದ್ದರು

"ದೇವನೊಂದಿಗೆ ಯಾರನ್ನೂ ಸಹಭಾಗಿಗಳಾಗಿ ಮಾಡಬಾರದು" ಎಂಬುದು ಪ್ರವಾದಿವರ್ಯರ ಶಿಕ್ಷಣ ಗಳಲ್ಲಿ ಅತಿ ಪ್ರಾಮುಖ್ಯವಾದುದು.ಈ ಶಿಕ್ಷಣವನ್ನು ನಾನು ಮನಸಾರೆ ಗೌರವಿಸುತ್ತೇನೆ ಮತ್ತು ಅದನ್ನು ಮೆಚ್ಚುತ್ತೇನೆ. ಈ ಶಿಕ್ಷಣವನ್ನು ಏಕೆ ಇಷ್ಟೊಂದು ಗೌರವಿಸಬೇಕು? ಏಕೆಂದರೆ ಈ ಶಿಕ್ಷಣವು ಮನುಷ್ಯನನ್ನು ವಿಚಾರ ಮಾಡಲು ಪ್ರಚೋದಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ. ಮುಂದೆ ಹೇಳುತ್ತಾರೆ:ದೇವನೊಂದಿಗೆ ಇತರರನ್ನು ಸಹಭಾಗಿಗಳಾಗಿಸುವು ದೆಂದರೆ ಅವರನ್ನು ದೇವನಿಗೆ ಸಮಾನರೆಂದು ಪರಿಗಣಿಸಿದಂತಾಗುವುದು. ದೇವನ ಸಹಭಾಗಿ ಯಾರು ತಾನೇ ಆಗಲು ಸಾಧ್ಯ? ಆದುದರಿಂದಲೇ ಪ್ರವಾದಿವರ್ಯರು ಬಹುದೇವಾರಾಧನೆಯಿಂದ ಜನರನ್ನು ತಡೆದರು. ಇತರ ಧರ್ಮಗಳಲ್ಲಿ ಬಹುದೇವಾರಾಧನೆಯ ಶಿಕ್ಷಣ ಮತ್ತು ಅನುಮತಿಯಿರುವು ದರಿಂದ ನಮ್ಮಂಥವರು ಅನೇಕ ತರದ ನಷ್ಟಗಳಿಗೆ ಗುರಿಯಾಗಿದ್ದಾರೆ. ಬಹುದೇವಾರಾಧನೆಯ ಎಲ್ಲ ದಾರಿಗಳನ್ನು ಮುಚ್ಚುವ ಮೂಲಕ ಅಲ್ಲಾಹ್ ಮನುಷ್ಯನಿಗೆ ಹಿರಿಮೆ ಮತ್ತು ಔನ್ನತ್ಯವನ್ನು ನೀಡಿದೆಯಲ್ಲದೆ ನೀಚತೆ ಮತ್ತದರ ಪರಿಣಾಮಗಳಿಂದ ಅವನನ್ನು ರಕ್ಷಿಸಿದೆ."