ಎಸ್.ಸಿ.ನಂದೀಮಠ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ|ಎಸ್.ಸಿ.ನಂದೀಮಠ ( ಶಿವಲಿಂಗಯ್ಯ ಚನ್ನಬಸವಯ್ಯ ನಂದೀಮಠ) ಶಿಕ್ಷಣತಜ್ಞ, ವಿದ್ವಾಂಸರಾಗಿದ್ದರು.[೧]

ಬಾಲ್ಯ ಮತ್ತು ಜೀವನ[ಬದಲಾಯಿಸಿ]

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ ೧೯೦೦ ಡಿಸೆಂಬರ್ ೧೨ರಂದು ಜನಿಸಿದರು.ಇವರ ತಂದೆ ಚೆನ್ನಬಸ್ಸಯ್ಯ ನಂದೀಮಠ.ಇವರ ಧರ್ಮಪತ್ನಿ ಕಲ್ಯಾಣಿದೇವಿ ಶಿವ್‍ಲಿಂಗಯ್ಯ ನಂದೀಮಠ.

ಕನ್ನಡ ಮತ್ತು ಸಂಸ್ಕೃತದಲ್ಲಿ ಎಂ.ಎ. ಪದವೀಧರರಾದ ಇವರು ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿ, ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ನಿವೃತ್ತರಾದರು.

ಕೃತಿಗಳು[ಬದಲಾಯಿಸಿ]

  • ಕರ್ನಾಟಕ ಧರ್ಮಗಳು
  • ಕವಿಕರ್ಣ ರಸಾಯನ
  • ಕುವಲಯಾನಂದ
  • ಗಿರಿಜಾ ಕಲ್ಯಾಣ
  • ಶೂನ್ಯ ಸಂಪಾದನೆ
  • ಶೈವ ಸಿದ್ಧಾಂತ
  • ಹ್ಯಾಂಡ್ಬೂಕ್ ಆಫ್ ವೀರಶೈವಮ್

ಇವರು ೧೯೫೨ರಲ್ಲಿ ಬೇಲೂರಿನಲ್ಲಿ ಜರುಗಿದ ೩೫ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಎಸ್.ಸಿ. ನಂದೀಮಠರವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಚಿಕ್ಕನಂದಿ ಎಂಬ ಹಳ್ಳಿ. ತಂದೆ ಚೆನ್ನಬಸವಯ್ಯ.

ಶಿಕ್ಷಣ ಮತ್ತು ವೃತ್ತಿ[ಬದಲಾಯಿಸಿ]

ಪ್ರಾರಂಭಿಕ ಶಿಕ್ಷಣ ಧಾರವಾಡ. ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ೧೯೩೦ರಲ್ಲಿ ಲಂಡನ್ನಿಗೆ ಹೋಗಿ ಪ್ರೊ. ಬಾರ್ನೆಟ್ ಮಾರ್ಗದರ್ಶನದಲ್ಲಿ “ವೀರಶೈವ ಧರ್ಮ ಮತ್ತು ತತ್ತ್ವಜ್ಞಾನಗಳ ಕೈಪಿಡಿ” (ಹ್ಯಾಂಡ್‌ಬುಕ್ ಆಫ್ ವೀರಶೈವಿಸಂ) ಮಹಾಪ್ರಬಂಧ ಮಂಡಿಸಿ ಲಂಡನ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು.

  • ಉದ್ಯೋಗಕ್ಕಾಗಿ ಸೇರಿದ್ದು ಬೆಳಗಾವಿಯ ಆರ್ಟಾಳ-ಗಿಲಗಂಜಿ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿ. ನಂತರ ಲಿಂಗಾಯತ ಎಜುಕೇಷನ್ ಸೊಸೈಟಿಯವರು ಸ್ಥಾಪಿಸ ಬಯಸಿದ್ದ ಲಿಂಗರಾಜ ಕಾಲೇಜಿನ ಸ್ಥಾಪನೆಗಾಗಿ ಶ್ರಮ. ಅದೇ ಕಾಲೇಜಿನ ಪ್ರಥಮ ಪ್ರಿನ್ಸಿಪಾಲರಾದರು.
  • ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ಬೇಕೆಂದು ನಡೆಸಿದ ಹೋರಾಟ. ಕರ್ನಾಟಕ ವಿಶ್ವವಿದ್ಯಾಲಯ ಕಾರ‍್ಯಾರಂಭ ಮಾಡುವಲ್ಲಿ ರೂಪಿಸಿದ ಕಾಯಿದೆ ಕಾನೂನುಗಳು.
  • ವಿಶ್ವವಿದ್ಯಾಲಯ ಸೆನೆಟ್, ಸಿಂಡಿಕೇಟ್, ಅಕ್ಯಾಡಮಿಕ್ ಕೌನ್ಸಿಲ್ ಸದಸ್ಯರಾಗಿ ಸಲ್ಲಿಸಿದ ಸೇವೆ. ಪ್ರಾಧ್ಯಾಪಕರಾಗಿ, ಕುಲಸಚಿವರಾಗಿ, ಕುಲಪತಿಗಳಾಗಿ ಮಾಡಿದ ಕಾರ‍್ಯಗಳು. *ಬಾಗಲಕೋಟೆಯ ಬಸವೇಶ್ವರ ಕಾಲೇಜನ್ನು ಕಟ್ಟಿ ಬೆಳೆಸಿದ ಕೀರ್ತಿ.
  • ಕನ್ನಡ, ಸಂಸ್ಕೃತ, ಪಾಲಿ, ಪ್ರಾಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪಡೆದ ಪ್ರಭುತ್ವ. ಸಂಸ್ಕೃತ ಹಾಗೂ ಹಳಗನ್ನಡದ ಹಲವಾರು ಗ್ರಂಥಗಳನ್ನು ಸಂಪಾದಿಸಿ, ಪರಿಷ್ಕರಿಸಿ ಬರೆದ ವಿದ್ವತ್‌ಪೂರ್ಣ ಮುನ್ನುಡಿಗಳು.
  • ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟವಾದ ಕನ್ನಡ ನಾಡಿನ ಚರಿತ್ರೆ ಭಾಗ-೨, ಪ್ರಮುಖ ಆಕರ ಗ್ರಂಥ.
  • ೧೯೪೧ರಲ್ಲಿ ಸಂಪಾದಿಸಿದ ಗ್ರಂಥ ಹರಿಹರನ ಗಿರಿಜಾ ಕಲ್ಯಾಣ.
  • ವೀರಶೈವ ತತ್ತ್ವ ಪ್ರಕಾಶ, ಕುವಲಯಾನಂದ == ಪದವಿ==
  • ೧೯೫೨ರಲ್ಲಿ ಬೇಲೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. *೧೯೭೫ರಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ.  
  • ಇವರು ‘ವೀರಶೈವ’ , ‘ಜ್ಞಾನಪ್ರಸಾರ’ ಪತ್ರಿಕೆಗಳ ಸಂಪಾದಕರಾಗಿಯೂ ದುಡಿದಿದ್ದಾರೆ.

ನಿಧನ[ಬದಲಾಯಿಸಿ]

ಡಾ| ಎಸ್.ಸಿ.ನಂದೀಮಠರು ೧೯೭೫ ನವಂಬರ ೨೧ರಂದು ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]

  1. "ಎಸ್.ಸಿ. ನಂದೀಮಠ December 12". kanaja.in. kanaja. Archived from the original on 18 ಸೆಪ್ಟೆಂಬರ್ 2020. Retrieved 9 October 2017.